Connect with us

ದಿನದ ಸುದ್ದಿ

ಹಣವಿಲ್ಲದ ಮಾಜಿ ಜಿಲ್ಲಾಧಿಕಾರಿ ಎಂ.ಪಿ. ಆಗಿದ್ದು..!

Published

on

  • ಈ. ಬಸವರಾಜು

ಹುಟ್ಟಿದ್ದು ತಮಿಳನಾಡಿನ ದಲಿತ ಕುಟುಂಬದಲ್ಲಿ. ಪ್ರತಿಭಾಶಾಲಿ. ಶಾಲೆಯಲ್ಲಿ ಕಾಲೇಜಿನಲ್ಲಿ ಯಾವಾಗಲೂ ಮೊದಲಿಗ. ಏನಾದರೂ ಸಾದಿಸಬೇಕೆಂದು ಐ. ಎ. ಎಸ್. ಬರೆದು ಜನರಲ್ ಮೆರಿಟ್ಟು 9ನೆಯ ರ್ಯಾಂಕ ಪಡೆದ ದಲಿತ ಯುವಕ.
ಕರ್ನಾಟಕ ಕೆಡರ್ ಆಯ್ಕೆ ಮಾಡಿಕೊಂಡು ಉಡಪಿಯ ಜಿಲ್ಲಾಧಿಕಾರಿಯಾಗಿ ಬಂದವರೇ ಸಸಿಕಾಂತ ಸೆಂತಿಲ್ ಎಂಬ ಐದುವರೆ ಅಡಿಯ, ಕಪ್ಪು ಬಣ್ಣದ, ಬಟ್ಟಲುಗಣ್ಣುಗಳ, ದೊಗಲೆ ಪ್ಯಾಂಟಿನ ತರುಣ ಜಿಲ್ಲಾಧಿಕಾರಿ .

ತನ್ನಂತೆ ಕನಸಿರುವವಳೊಂದಿಗೆ ಸ್ನೆಹ, ಮದುವೆ. ದೊಡ್ಡ ದೊಡ್ಡ ಕಣ್ಣುಗಳಲ್ಲಿರುವ ಕನಸಿಗೆ ರೆಕ್ಕೆ ಪುಕ್ಕ ಕಟ್ಟಲಾಗದು ಇಂತಹ ವ್ಯವಸ್ಥೆಯಲ್ಲಿ ಎಂಬ ಯೋಚನೆ ಬಲವಾಗಲಾರಂಭಿಸಿತು. “ಯಾಕೋ ಮಿಸ್ ಹೋಡಿತಿದೆ. ನಾನೆಂದುಕೊಂಡಂತೆ ಡಿ. ಸಿ. ಆಗಿರಲಾರೆ, ನನಗೆ ಅಸಹಾಯಕತೆ ಅನುಭವ ಆಗುತ್ತಿದೆ. ಇಡೀ ವ್ಯವಸ್ಥೆಯ ಹಿಂದಿರುವುದೇ ರಾಜಕಾರಣ. ಅದನ್ನೇ ಸರಿಪಡಿಸಬೇಕು”.

ಹೇಗೆ? ಹೇಗೆ ??

“ಮಕ್ಕಳಿದ್ದರೆ ನಮ್ಮ ಕನಸಿಗೆ ತೊಡಕಾಗುವರು. ಮಕ್ಕಳು ಬೇಡ. ನಾನು ರಾಜೀನಾಮೆ ಸಲ್ಲಿಸುತ್ತೇನೆ. ನೀನು ಕೆಲಸ ಮಾಡು ನಿನ್ನ ಸಂಬಳದಲ್ಲಿ ನನ್ನನ್ನು ಸಾಕು. ನಾನು ಡಿ.ಸಿ.ಯಾಗಿ ಗಳಿಸಿದ್ದು ಇದೊಂದು ಬುಲೆಟ್. ಇದನ್ನು ಯಾರಿಗಾದರು ಕೊಟ್ಟು ಬಿಡು. ಡಿ. ಸಿ. ಕೆಲಸವೇ ಬೇಡವೆನ್ನುವುದಾದರೆ ಅದರ ಸಂಬಳದಿಂದ ಕೊಂಡ ಈ ವಾಹನವು ಬೇಡ, ಅದನ್ನೂ ಕೊಟ್ಟು ಬಿಡು” ಎಂದು ಸೂಟಕೇಸ ಹಿಡಿದು ಡಿ. ಸಿ. ಬಂಗ್ಲೆಯಿಂದ ಹೊರಬಿದ್ದರು ಕಲೆಕ್ಟರ್ ಸಾಹೇಬರು.

ಹೊರಬಂದ ಡಿ. ಸಿ. ಗೆ ಬಲೆ ಬೀಸಲಾರಂಭಿಸಿದವು ರಾಜಕೀಯ ಪಕ್ಷಗಳು. ‘ಜಾತಿ ಧರ್ಮಗಳ ಆಧಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳು ಬೇಡ’. ನೆಲಕಚ್ಚಿದ ಪಕ್ಷವನ್ನು ಮೆಲೆತ್ತುವುದೆ ಚಾಲೇಂಜ. ತಮೀಳನಾಡಿನಲ್ಲಿ ಕಾಂಗ್ರೆಸ್ ನೆಲ ಕಚ್ಚಿದ ಪಕ್ಷ, ದೇಶಕ್ಕೆ ಸ್ವಾತಂತ್ರ್ಯ ನೀಡಿದ ಪಕ್ಷ, ಕೆಳಗೆ ಬಿದ್ದವರನ್ನು ಎತ್ತಿಕೊಳ್ಳುವುದೇ ಚಾಲೇಂಜ್ ಎಂದು ಕಾಂಗ್ರೆಸ್ ಸೇರಿದರು.

ತಮೀಳನಾಡಿನ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಂಬಲಅಸಾಧ್ಯವಾದ ಸ್ಥಾನವನ್ನು ದೂರಕಿಸಿಕೊಟ್ಟು ರಾಹುಲ್ ಗಾಂಧಿಯವರ ಕಣ್ಣಿಗೆ ಬಿದ್ದರು. ಅವರ ನೆಚ್ಚಿನವರಾಗಿ ಬಿಟ್ಟರು. “ಕರ್ನಾಟಕದಲ್ಲಿ ನಿಮ್ಮ ಚಾಣಾಕ್ಷತನವನ್ನು ತೋರಿಸಿರಿ, ವಾರ್ ರೂಮ ಹೆಡ್ ಆಗಿರಿ.” ಎಂದರು ರಾಹುಲ್ ಗಾಂಧಿ. ತಮ್ಮ ಕೈ ಚಳಕ ತೋರಿಸಿದರು ಕರ್ನಾಟಕದಲ್ಲಿ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಲೋಕಸಭೆಯ ಚುನಾವಣೆ ಬಂತು “ದೆಹಲಿಗೆ ಬಂದು ವಾರ್ ರೂಂ ನೋಡಿ ಕೊಳ್ಳಿ”. ಎಂದಿತು ಪಕ್ಷ. “ಆಯಿತು” ಎಂದರು.

ಚುನಾವಣೆಗೆ ನಾಲ್ಕು ದಿನ ಇರುವಾಗ “ತಿರುವಳ್ಳುರು ಕ್ಷೇತ್ರದಲ್ಲಿ ನೀವು ಅಭ್ಯರ್ಥಿ, ನೆಕ್ಸ್ಟ ಫ್ಲೈಟ ಹತ್ತಿ ತಿರುವಳ್ಳುರಿಗೆ ಹೋಗಿ” ಎಂದಿತು ಹೈ ಕಮಾಂಡ. “ವಿಮಾನ ಟಿಕಿಟ್ ಬುಕ್ ಮಾಡಿಸು” ಎಂದರು ಹೆಂಡತಿಗೆ ಸಸಿಕಾಂತ.

ಕೈಯಲ್ಲಿ ಕಾಸಿಲ್ಲ. ‘ಕಾಸಿಲ್ಲದೆ ಕೈಲಾಸ ಇಲ್ಲ’. ದೇವರು ಮಾಡಿದ ಹಾಗೆ ಎಂದು ಹೆಂಡತಿಯ ಉಳಿತಾಯದ ಹಣದಲ್ಲಿ ಚುನಾವಣಾ ಅರ್ಜಿ ಸಲ್ಲಿಸಿದರು. ಅಲ್ಪ ಸ್ವಲ್ಪ ಹಣವಿದ್ದರೂ ಅದು ಹೆಂಡತಿಯ ಸಂಬಳದ ಹಣ. ತಿಂಗಳು ತಿಂಗಳ ತಮಗೆ ಬರುವ ಪಿಂಚಣಿ ಹಣ. ಮಕ್ಕಳಿಲ್ಲ ಮರಿಯಿಲ್ಲ, ಆಧಾಯಕ್ಕೆ ಮತ್ತೊಂದು ದಾರಿಯಿಲ್ಲ. ‘ಮುಪ್ಪಿನಲ್ಲಿ ಆಸರೆಯಾಗಲಿ’ ಎಂದು ಸಂಬಳದಲ್ಲಿ ಉಳಿತಾಯ ಮಾಡಿದ ಹಣ ‘ಮ್ಯೂಚುವಲ್ ಫಂಡ’ ನಲ್ಲಿದೆ. ಇಂದಿನ ಕಾಲದಲ್ಲಿ ಉಳಿತಾಯದ ಹಣದಲ್ಲಿ ಚುನಾವಣೆ ಮಾಡುಲಾದೀತೆ?

ಕಾಂಗ್ರೆಸ್ ಪಕ್ಷದ ಬ್ಯಾಂಕ ಖಾತೆಗಳನ್ನು ಮೋದಿ ಮುಟ್ಟುಗೋಲು ಹಾಕಿದ್ದರು. ‘ನೀವೆ ಹಣ ಹೊಂದಿಸಿಕೊಂಡು ಗೆದ್ದು ಬನ್ನಿ ಎಂದಿತ್ತು’ ಕಾಂಗ್ರೆಸ್ ಪಕ್ಷ. “ಜೀವನದಲ್ಲಿ ಯಾರೆದರೂ ಕೈ ಚಾಚಿಲ್ಲ, ಚಾಚುವುದು ಇಲ್ಲ” ಎಂದು ಬಿಟ್ಟರು ಮಾಜಿ ಜಿಲ್ಲಾಧಿಕಾರಿ. ನಾವು ಗೆಳೆಯರೊಂದಿಗೆ ‘ನೋಡೋಣ’ ಎಂದು ಚುನಾವಣಾ ಪ್ರಚಾರಕ್ಕೆ ಹೋದೆವು. ಅಲ್ಲಿ ಕಂಡದ್ದು ಅದ್ಭುತ ಉತ್ಸಾಹ. “ಕಲೆಕ್ಟರ ಗೆದ್ದಂತೆ ಆದರೆ ನಾವು ಚಿಂತಿಸುತ್ತಿರುವುದು ೫ ಲಕ್ಷದ ಅಂತರವನ್ನು” ಎಂದಿದ್ದರು ಮಿತ್ರ ಪಕ್ಷವಾದ ಡಿ. ಎಮ್. ಕೆ. ಯ ಜಿಲ್ಲಾ ಅಧ್ಯಕ್ಷರು.

“ಕರ್ಚಿಗೇನು ಮಾಡತೀರಿ” ಎಂದೆ. “ಎನು ಮಾಡುವುದು ಮಾರಲು ಉರಲ್ಲೊಂದು ಮನೆಯಿದೆ ಯಾರು ತಗೆದುಕೊಳ್ಳುತ್ತಿಲ್ಲ.” ಎಂದರು. ಕಣ್ಣೀರು ಬಂತು. ಬೆಂಗಳೂರಿಗೆ ಹಿಂದಿರುಗಿದೆವು.

ಇಂದು ಸಂತಿಲ್ ಗೆದ್ದಿದ್ದಾರೆ ಮತಗಳ ಅಂತರ 4.79.000

ಶುಭಾಶಯಗಳು ಕಲೆಕ್ಟರ ಸಾಹೇಬರೆ.

ಬಡವರೂ, ಹಿಂದುಳಿದವರೂ, ಧರ್ಮವಂತರೂ ಸಹ ರಾಜಕೀಯ ಮಾಡಬಹುದು ಎಂಬ ಭರವಸೆಯನ್ನು ಸಸಿಕಾಂತ ಸೆಂತಿಲ್ಲ ಸಿದ್ದಪಡಿಸಿದ್ದಾರೆ. ಕೃಪೆ : (ಈ. ಬಸವರಾಜು ಫೇಸ್ ಬುಕ್ ಪೇಜ್ ನಿಂದ )

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಡಾಕ್ಟರ್ ಓದಿದವರು ಕೂಡ ಮೌಡ್ಯಾಚರಣೆ ಬಿಟ್ಟಿಲ್ಲ : ಸಿಎಂ ಸಿದ್ದರಾಮಯ್ಯ ಅಸಮಾಧಾನ

Published

on

ಸುದ್ದಿದಿನ,ಬೆಂಗಳೂರು:ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ. ಡಾಕ್ಟರ್ ಓದಿದವರು ಇನ್ನೂ ಮೌಡ್ಯ ಬಿಟ್ಟಿಲ್ಲ. ಓದಿದವರೇ ಇನ್ನೂ ಹಣೆಬರಹದಲ್ಲಿ, ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಇಂಥಾ ಮೌಡ್ಯದಲ್ಲಿ ನಂಬಿಕೆ ಇಡಬಾರದು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ಇಂದು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು

ಸರ್ಕಾರಿ ವಸತಿ ಶಾಲೆಗಳ ಮಕ್ಕಳು ಈ ಬಾರಿ ಶೇ96 ರಷ್ಟು ಫಲಿತಾಂಶ ಪಡೆದಿದ್ದಾರೆ. ಮುಂದಿನ ಬಾರಿ ಶೇ100 ರಷ್ಟು ಅಂಕ ಪಡೆಯಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರಯತ್ನಗಳು ಸಾಗಲಿ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ನಡೆಸಿದ, “ನಮಗೆ ಸರಾಯಿ ಅಂಗಡಿ ಬೇಡ, ವಸತಿ ಶಾಲೆ ಬೇಕು” ಎನ್ನುವ ಹೋರಾಟದಿಂದ ಪ್ರೇರಿತನಾಗಿ ಮೊದಲ ಬಜೆಟ್ ಮಂಡಿಸುವ ವೇಳೆ ಗ್ರಾಮೀಣ ಭಾಗದಲ್ಲಿ ಮೊರಾರ್ಜಿ ಶಾಲೆಗಳನ್ನು ಆರಂಭಿಸಿದೆ. ಅವತ್ತಿನಿಂದ ನಿರಂತರವಾಗಿ ಮೊರಾರ್ಜಿ ವಸತಿ ಶಾಲೆಗಳನ್ನು ತೆರೆಯುತ್ತಲೇ ಇದ್ದೇನೆ. ಸದ್ಯ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 833 ವಸತಿ ಶಾಲೆಗಳಿವೆ. ಅಲ್ಪ ಸಂಖ್ಯಾತ ಇಲಾಖೆಯಡಿಯಲ್ಲಿರುವುದೂ ಸೇರಿ ಒಟ್ಟು 946 ವಸತಿ ಶಾಲೆಗಳಿವೆ.

ಕೆಲವು ಹೋಬಳಿಯಲ್ಲಿ ಒಂದಕ್ಕಿಂತ ಹೆಚ್ಚು ವಸತಿ ಶಾಲೆಗಳಿವೆ. ಆದ್ದರಿಂದ ಕೆಲವು ಹೋಬಳಿಗಳಲ್ಲಿ ಇಲ್ಲವಾಗಿತ್ತು. ಹೀಗಾಗಿ ಈ ವರ್ಷ 20 ವಸತಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿದ್ದೇನೆ. ಹೋಬಳಿಗೊಂದು ವಸತಿ ಶಾಲೆ ನನ್ನ ಗುರಿ ಮತ್ತು ಉದ್ದೇಶವಾಗಿದೆ.

ಗ್ರಾಮೀಣ ಭಾಗದಲ್ಲಿ ಸರ್ವರಿಗೂ ಗುಣಮಟ್ಟದ ವೈಚಾರಿಕತೆ, ವೈಜ್ಞಾನಿಕತೆಯಿಂದ ಕೂಡಿದ ಶಿಕ್ಷಣ ದೊರೆಯಬೇಕು. ಎಲ್ಲಾ ಜಾತಿ, ವರ್ಗದ ಮಕ್ಕಳಿಗೆ ಓದುವ ಅವಕಾಶ ಕಲ್ಪಿಸಿದ್ದು ನಮ್ಮ ಸಂವಿಧಾನ.

ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ.‌ ಇದನ್ನು ಹೋಗಲಾಡಿಸಬೇಕಾಗಿದೆ. ನನಗೆ ಶಿಕ್ಷಣ ಸಿಕ್ಕಿದ್ದರಿಂದಲೇ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯಿತು. ಇಲ್ಲದಿದ್ದರೆ ನಾನೂ ಎಮ್ಮೆ, ಹಸು ಮೇಯಿಸುತ್ತಾ ಅಷ್ಟಕ್ಕೇ ಸೀಮಿತ ಆಗಬೇಕಾಗಿತ್ತು.

ಬುದ್ದ, ಬಸವಣ್ಣ ಎಂಟು ಶತಮಾನಗಳ ಹಿಂದೆ ಜಾತಿ ವ್ಯವಸ್ಥೆ ಅಳಿಸಲು ಶ್ರಮಿಸಿದರು. ಆದರೆ ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ ಎಂಬುದು ವಿಪರ್ಯಾಸ. ಮಕ್ಕಳಿಗೆ ಜಾತಿ, ಧರ್ಮದ ತಾರತಮ್ಯ ಕಲಿಸುವವರೇ ನಾವು. ಆದ್ದರಿಂದ ಪೋಷಕರು, ಶಿಕ್ಷಕರು ಮೊದಲು ಕಂದಾಚಾರ,‌ ಮೌಡ್ಯದಿಂದ ಹೊರಗೆ ಬರಬೇಕು. ಆಗ ಮಕ್ಕಳೂ ವೈಜ್ಞಾನಿಕವಾಗಿ ಬೆಳೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ.

ಹುಟ್ಟುವಾಗ ಎಲ್ಲಾ ಮಕ್ಕಳೂ ವಿಶ್ವ ಮಾನವರಾಗಿ ಹುಟ್ಟಿ ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ ಎನ್ನುವ ಕುವೆಂಪು ಅವರ ಮಾತು ಇಂದಿಗೂ ಸತ್ಯವಾಗಿದೆ. ಮಕ್ಕಳು ಅಲ್ಪ ಮಾನವರಾಗದಂತೆ ಕಾಪಾಡುವ ಜವಾಬ್ದಾರಿ ಶಿಕ್ಷಕರು, ಪೋಷಕರ ಮೇಲಿದೆ.

ಬಸವಣ್ಣನವರು 12ನೇ ಶತಮಾನದಲ್ಲೇ ದಲಿತರು ಮತ್ತು ಬ್ರಾಹ್ಮಣರ ನಡುವೆ ಅಂತರ್ಜಾತಿ ವಿವಾಹ ಮಾಡಿಸಿ ಗೆದ್ದರು. ಜಾತಿ ವ್ಯವಸ್ಥೆ ಶಿಥಿಲವಾಗಬೇಕಾದರೆ ದಲಿತರು, ಹಿಂದುಳಿದವರಿಗೆ ಆರ್ಥಿಕ‌ ಶಕ್ತಿ ಬರಬೇಕು, ಸಾಮಾಜಿಕವಾಗಿಯೂ ಶಕ್ತಿ ಬರಬೇಕು. ಈ ಬಗ್ಗೆ ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಆಡಿದ ಮಾತುಗಳು ಇವತ್ತಿಗೂ ಬಹಳ ಪ್ರಸ್ತುತವಾಗಿದೆ.

ಹಿಂದೆ ಮುಂದುವರೆದ ಜಾತಿಯ ಹೆಣ್ಣು ಮಕ್ಕಳಿಗೂ ಶಿಕ್ಷಣ ಕಲಿಯುವ ಅವಕಾಶ ಇರಲಿಲ್ಲ. ಎಲ್ಲಾ ಜಾತಿಯ ಹೆಣ್ಣುಮಕ್ಕಳೂ ಶಿಕ್ಷಣದ ವಿಚಾರದಲ್ಲಿ ಶೋಷಿತರಾಗಿದ್ದವರೇ. ಈಗ ಹೆಣ್ಣು ಮಕ್ಕಳೇ ಶಿಕ್ಷಣದಲ್ಲಿ ಮುಂದಿರುವುದು ನೋಡಿದರೆ ಖುಷಿ ಆಗುತ್ತದೆ. ಇದಕ್ಕೆ ಕಾರಣವಾದ ನಮ್ಮ ಸಂವಿಧಾನಕ್ಕೆ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೋಟಿ ಪ್ರಣಾಮಗಳು ಎಂದು ಭಾವುಕರಾದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ರೀಡಾ ಇಲಾಖೆಯಲ್ಲಿ ಟೆಂಡರ್ ಇಲ್ಲದೇ ಕಾಮಗಾರಿ ಮಂಜೂರಾತಿ ಇಲ್ಲ

Published

on

ಸುದ್ದಿದಿನಡೆಸ್ಕ್:ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲಾ ಕಾಮಗಾರಿಗಳನ್ನು ಟೆಂಡರ್ ಆಹ್ವಾನಿಸಿಯೇ ಅನುಷ್ಠಾನಗೊಳಿಸುವಂತೆ ಅವರು ಸೂಚಿಸಿದರು.

174 ಕೋಚ್‌ಗಳ ನೇಮಕಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ವೃಂದ ಮತ್ತು ನೇಮಕಾತಿ ನಿಯಮ ಅಂತಿಮಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

1 ಸಾವಿರದ 486 ಕ್ರೀಡಾಪಟುಗಳಿಗೆ ಕ್ರೀಡಾ ಪ್ರೋತ್ಸಾಹಧನ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕಂಠೀರವ ಕ್ರೀಡಾಂಗಣದಲ್ಲಿ ವಸ್ತುಸಂಗ್ರಹಾಲಯ ನಿರ್ಮಾಣ ಕಾರ್ಯದಲ್ಲಿ ಯಾವುದೇ ಪ್ರಗತಿ ಇಲ್ಲದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸರ್ಕಾರಿ ನೌಕರರ ವಿವರ ಸಲ್ಲಿಸಲು ಸಂಘಕ್ಕೆ ಕರೆ

Published

on

ಸುದ್ದಿದಿನ,ದಾವಣಗೆರೆ : ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿ 2024ನೇ ಮಾಹೆಯಲ್ಲಿ ಎಲ್ಲಾ ಇಲಾಖಾ ನೌಕರರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ವಾರ್ಷಿಕ ಸದಸ್ಯತ್ವ ಶುಲ್ಕ ರೂ.200/- (ಎರಡು ನೂರು ರೂಪಾಯಿ) ಗಳನ್ನು ಕಟಾಯಿಸಿರುವ ನೌಕರರ ವಿವರವನ್ನು ನೀಡಲು ತಿಳಿಸಿರುತ್ತಾರೆ.

ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಚುನಾವಣೆ ನಡೆಸಲು ಅರ್ಹ ಮತದಾರರನ್ನು ನಿಗಧಿತ ನಮೂನೆಯಲ್ಲಿ ತಮ್ಮ ಇಲಾಖೆ ಹಾಗೂ ಆಧೀನ ಕಛೇರಿಗಳಲ್ಲಿ (ದಾವಣಗೆರೆ ತಾಲ್ಲೂಕು ವ್ಯಾಪ್ತಿಗೆ ಸಂಬಂಧಿಸಿದಂತೆ ಅರ್ಹ ಮತದಾರರ ಪಟ್ಟಿ ತಯಾರಿಸಲು ವಿವರವಾದ ಮಾಹಿತಿಯನ್ನು) ಭರ್ತಿ ಮಾಡಿ ಪ್ರತಿಯನ್ನು ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನ, ನಿಜಲಿಂಗಪ್ಪ ಬಡಾವಣೆ, ರಿಂಗ್ ರೋಡ್ ಸರ್ಕಲ್, ದಾವಣಗೆರೆ ಜೂನ್ 21 ರೊಳಗಾಗಿ ಕಳುಹಿಸಬೇಕೆಂದು ಕ.ರಾ.ಸ.ನೌ.ಸಂಘದ ಜಿಲ್ಲಾಧ್ಯಕ್ಷರದ ವಿರೇಶ್.ಎಸ್.ಒಡೆಯನಪುರ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending