ಕ್ರೀಡೆ
ಬೆಣ್ಣೆನಗರಿಯ ಅಂತರಾಷ್ಟ್ರೀಯ ಕಬ್ಬಡ್ಡಿ ಪ್ರತಿಭೆ ಅನಿಲ್ ಮಲೇಷಿಯಾದಲ್ಲಿ ಆಡಲು ನಿಮ್ಮಿಂದ ಮಾತ್ರ ಸಾಧ್ಯ : ಸಹಕರಿಸಿ ; ಈ ಪ್ರತಿಭೆ ಬೆಳೆಸಿ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಕ್ಕನೂರು ನಿವಾಸಿ ಅನಿಲ್ ಈಗ ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ ಟೀಂಗೆ ಆಯ್ಕೆಯಾಗಿದ್ದಾರೆ.ಕೇವಲ ನಾಲ್ಕು ದಿನಗಳಲ್ಲಿ ಅನಿಲ್ ಮಲೇಷ್ಯಾಯಾದಲ್ಲಿ ನಡೆಯಲಿರು ಅಂತರಾಷ್ಟ್ರೀಯ ಕಬ್ಬಡಿ ಟೀಂನಲ್ಲಿ ಭಾರತವನ್ನು ಪ್ರತಿನಿಧಿಸಲು ಹೋಗಬೇಕಾಗಿದೆ.ಆದರೆ ಅವರಿಗೆ ಆರ್ಥಿಕ ಅಡಚಣೆಯಾಗಿದ್ದು ಆರ್ಥಿಕ ಸಹಾಯಕ್ಕೆ ಸಂಬಂಧಿಕರ ಮೊರೆ ಹೋಗಿದ್ದಾರೆ.
ಆದರೂ ಹಣ ಸಂಗ್ರಹವಾಗುತ್ತಿಲ್ಲ.ಮಲೇಷ್ಯಾಕ್ಕೆ ಹೋಗಲು 70 ಸಾವಿರ ಹಣ ಬೇಕಾಗಿದೆ.ಹೀಗಾಗಿ ದಾನಿಗಳ ಸಹಾಯ ಬೇಡುತ್ತಿದ್ದಾರೆ.ಮಗನಿಗೆ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಅನಿಲ್ ತಾಯಿ ಕೂಲಿ ನಾಲಿ ಮಾಡಿ ಮಗನನ್ನು ಮಲೇಷ್ಯಾಕ್ಕೆ ಹೋಗುವಂತೆ ಪ್ರೋತ್ಸಾಹಿಸುತ್ತಿದ್ದಾರೆ ಆದರೆ ಹಣದ ಸಂಗ್ರಹವಾಗುತ್ತಿಲ್ಲ. ಅನಿಲ್ ಈಗ ದಾನಿಗಳ ನೆರವಿಗಾಗಿ ಹಸ್ತ ಚಾಚಿದ್ದಾರೆ.
ಸಹಾಯ ಮಾಡಲಿಚ್ಚಿಸುವವರು, ಈ ಅಕೌಂಟ್ ನಂಬರ್ ಗೆ
Anil.A
STAT BANK OF INDIA
HARIHARA
A/C 38014193686
ifsc code-sbin0040466
ನಿಮ್ಮ ಹಣಸಂದಾಯ ಮಾಡಬಹುದು. ಹಾಗೇ ಈ ನಂಬರ್ ಗೆ ಕರೆಮಾಡಿ ಅವರ ಪರಿಸ್ಥಿತಿಯ ಬಗ್ಗೆ ಮೊ ನಂ : 9620007275 ತಿಳಿದುಕೊಳ್ಳಿ.

ಕ್ರೀಡೆ
ವಾಲಿಬಾಲ್ ಪಂದ್ಯಾವಳಿ | ಹೊಸದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ ಸ್ಥಾನ

ಸುದ್ದಿದಿನ, ಹೊನ್ನಾಳಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾಳಿ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜುಗಳ ಪುರುಷ ಮತ್ತು ಮಹಿಳೆಯರ ಪಂದ್ಯಾವಳಿಯನ್ನುಇದೇ 17-18 ರಂದು ಆಯೋಜಿಸಲಾಗಿತ್ತು.
ಈ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸದುರ್ಗ ಪ್ರಥಮ ಸ್ಥಾನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ ದ್ವಿತೀಯ ಸ್ಥಾನ, ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ ತೃತೀಯ ಸ್ಥಾನ, ಶ್ರೀ ಶಿವಲಿಂಗೇಶ್ವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಗಿರಿ ನಾಲ್ಕನೇ ಸ್ಥಾನವನ್ನು ಪಡೆದು ಕಾಲೇಜಿಗೆ ಮತ್ತು ವಿಶ್ವ ವಿದ್ಯಾನಿಲಯಕ್ಕೆ ಕೀರ್ತಿ ತಂದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಜಿ ಧನಂಜಯ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.
ಈ ಸಮಾರಂಭದಲ್ಲಿ ಪ್ರೊ. ಡಿ ಸಿ ಪಾಟೀಲ್, ಗ್ರಂಥಪಾಲಕರಾದ ಪ್ರೊ. ಎಂ ನಾಗರಾಜ ನಾಯ್ಕ ಕ್ರೀಡಾ ಆಯೋಜಕರಾದ ಡಾ. ಹರೀಶ ಪಿ ಎಸ್, ಬೆಳ್ಳುಳ್ಳಿ ಕೊಟ್ರೇಶ, ಹೆಚ್ ವಿ ಗೀತಾ, ಅಮೂಲ್ಯ ಆರ್ ಹೆಚ್, ಡಾ. ಮಂಜುನಾಥ ಗುರು ವಿ ಜಿ ದಾವಣಗೆರೆ ವಿಶ್ವವಿದ್ಯಾನಿಲಯ ಕ್ರೀಡಾಧಿಕಾರಿಗಳಾದ ಡಾ. ವೀರಪ್ಪ ಬಿ ಹೆಚ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಡಾ. ಚಂದ್ರಶೇಖರ್ ಸಿ, ಡಾ. ರೇಖಾ ಎಂ ಆರ್, ಗಿರೀಶ್ ಎಂ ಎಸ್, ಬಾಲಚಂದ್ರಣ್ಣ ಬಿ. ಆರ್. ಕಲ್ಲೇಶಪ್ಪ ಹರೀಶ್ ಕೆ ಎಂ , ತೀರ್ಪುಗಾರರಾದ ಆಶಿಕ್ ಮತ್ತು ಕಲೀಲ್, ಇಬ್ರಾಹಿಂ ಜಾಫರ್ ಮುಖ್ಯ ಮುಖ್ಯ ತೀರ್ಪುಗಾರರಾದ ಪರಮೇಶ್ವರಪ್ಪ ಮತ್ತು ನಮ್ಮ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಐಸಿಸಿ ವಿಶ್ವಕಪ್ ಕ್ರಿಕೆಟ್ | ಭಾರತ-ನ್ಯೂಜಿಲೆಂಡ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ

ಸುದ್ದಿದಿನ, ಡಿಸ್ಕ್ : ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್‌ನ ಮೊದಲ ಸೆಮಿಫೈನಲ್ ಪಂದ್ಯವು ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿದೆ.
ಪಂದ್ಯವು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಇದು ಎರಡನೇ ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ.
ಈ ಹಿಂದೆ 2019ರಲ್ಲಿ ಈ ತಂಡಗಳು ಎದುರಾಗಿದ್ದವು. ವಾಂಖೆಡೆ ಕ್ರೀಡಾಂಗಣವು ಹೆಚ್ಚು ಸ್ಕೋರ್ ದಾಖಲಿಸಲು ಹೆಸರುವಾಸಿಯಾಗಿದ್ದು, ಈ ಹಿಂದೆ ನಡೆದ ಪಂದ್ಯಾವಳಿಯಲ್ಲಿ ಶ್ರೀಲಂಕಾ ಎದುರು ಆಕರ್ಷಕ 302 ರನ್ ಗಳನ್ನು ಕಲೆ ಹಾಕಿತ್ತು. ಎರಡನೇ ಸೆಮಿಫೈನಲ್ ಪಂದ್ಯವು ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಾಡಿದ್ದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಎರಡು ಪಂದ್ಯ

ಸುದ್ದಿದಿನ ಡೆಸ್ಕ್ : ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿವೆ. ಧರ್ಮಶಾಲಾದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ.
ಎರಡನೇ ಪಂದ್ಯ ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ-ಶ್ರೀಲಂಕಾ ತಂಡಗಳು ಸೆಣೆಸಲಿವೆ. ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.
ಹೈದರಾಬಾದ್‌ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ, ನ್ಯೂಜಿಲೆಂಡ್ ತಂಡ ನೆದರ್ಲೆಂಡ್ ವಿರುದ್ದ 99 ರನ್‌ಗಳಿಂದ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿತು. ನ್ಯೂಜಿಲೆಂಡ್ ಪರ ವಿಲ್ ಯಂಗ್ 70 , ಟಾಮ್ ಲಾಥಮ್
53 ಹಾಗೂ ರಚಿನ್ ರವೀಂದ್ರ 51 ರನ್ ಗಳಿಸಿದರು.
ನೆದರ್ಲೆಂಡ್ ಪರ ರೋಲೋಫ್ ವಾಂಡೆರ್ ಮೆರ್ವೆ, ಪೌಲ್ ವ್ಯಾನ್ ಮೀಕರೆನ್, ಆರ್ಯನ್ ದತ್ ತಲಾ 2 ವಿಕೆಟ್ ಪಡೆದುಕೊಂಡರು. 323 ರನ್‌ಗಳ ಗುರಿ ಬೆನ್ನತ್ತಿದ ನೆದರ್ಲೆಂಡ್ 46.3 ಓವರ್‌ಗಳಲ್ಲಿ 223 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ನೆದರ್ಲೆಂಡ್ ಪರ ಕಾಲಿನ್ ಆಕರ್‍ಮನ್ 69, ಸ್ಕಾಟ್ ಎಡ್ವರ್ಡ್ 30 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಮಿಶೆಲ್ ಸ್ಯಾಂಟ್ನರ್ 5, ಮ್ಯಾಟ್ ಹೆನ್ರಿ 3 ವಿಕೆಟ್ ಪಡೆದುಕೊಂಡರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಯಾಂಟ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
