ರಾಜಕೀಯ
ಹುತ್ತವ ಬಡಿದರೆ ಹಾವು ಸಾಯಬಲ್ಲುದೇ..!?
- ಹ.ರಾ.ಮಹಿಶ ಬೌದ್ಧ
ನಿರಂಕುಶಾಡಳಿತ ಚುನಾಯಿತವಾದ ಮಾತ್ರಕ್ಕೆ ನಿರಂಕುಶಾಧಿಕಾರವಾಗದಿರಲಾರದು. ನಿರಂಕುಶ ಪ್ರಭುವು ನಮ್ಮವನೇ ಆದ ಮಾತ್ರಕ್ಕೆ ಅವನ ನಿರಂಕುಶಾಡಳಿತಮಾನ್ಯವಾಗಲಾರದು.ನಿರಂಕುಶಾಡಳಿತವನ್ನು ಕಿತ್ತೊಗೆಯುವ ಅಥವಾ ಕೆಳಗಿಳಿಸುವ ಸಾಧ್ಯತೆಯಿಂದ ಅದನ್ನು ಎದುರಿಸುವುದೇ ಮತ್ತು ಇನ್ನೊಂದು ಬಲವಾದ ವಿರೋಧಪಕ್ಷ ಅದರ ಸ್ಥಾನವನ್ನು ಆಕ್ರಮಿಸುವುದೇ ನಿರಂಕುಶಾಡಳಿತದ ವಿರುದ್ಧ ಇರುವ ನಿಜವಾದ ರಕ್ಷಣೆ.
ಬಂಧುಗಳೇ, ಎದೆಷ್ಟೋ ವರ್ಷಗಳ ಹಿಂದೆ ಹೇಳಿರುವ ಬಾಬಾಸಾಹೇಬರ ಈ ಮೇಲಿನ ಮಾತುಗಳು ಇಂದಿನ ದಿನಗಳಲ್ಲಿ ಈ ದೇಶದ ಸ್ಥಿತಿಯನ್ನು ಕಂಡು ನಮ್ಮೆದುರು ನಿಂತು ಇಂದು ಹೇಳುತ್ತಿರುವಂತಿದೆ.. ಗಮನಿಸಿ..!
ಒಂದು ಆಡಳಿತ ಪಕ್ಷವಿದ್ದು ಅದರ ಕಾರ್ಯವೈಖರಿಯನ್ನು ನಿತ್ಯವೂ ಗಮನಿಸುತ್ತಾ ಎಚ್ಚರಿಸಲು ಒಂದು ಸಮರ್ಥ ವಿರೋಧಪಕ್ಷವಿರಬೇಕಾದದ್ದು ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ನಿಜರೀತಿ. ಆದರೆ ನಮ್ಮ ದೇಶದ ಬಹುಜನರು ರಾಜಕೀಯವಾಗಿ ಅದೆಷ್ಟು ಅಜ್ಞಾನಿಗಳು ಎಂದರೆ ಸ್ವತಂತ್ರ ಭಾರತದ ಆರಂಭದ ವರ್ಷಗಳಿಂದ ನೆನ್ನೆಮೊನ್ನೆಯವರೆಗೂ “ಕಾಂಗ್ರೆಸ್ ಕಾಂಗ್ರೆಸ್” ಎಂದು ಜಪಮಾಡುತ್ತಾ ಕಾಂಗ್ರೆಸ್ ಎಂಬ ಮಾಯಾಜಾಲದಲ್ಲಿ ದೇಶವನ್ನು ಸಿಲುಕಿಸಿ ತಾವೂ ಸಿಕ್ಕಿಕೊಂಡು ನೇತಾಡಿ ಮೌನವಾಗಿ ಸತ್ತರು..! ಅದರ ವಿರುದ್ಧ ಒಂದು ಸಮರ್ಥ ಆಡಳಿತ ಪಕ್ಷವು ತಲೆಯೆತ್ತದಂಥ ಪರಿಸ್ಥಿತಿಯನ್ನು ಕಾಂಗ್ರೆಸ್ನೊಳಗಿನ ಮೆದುಮನುವಾದಿಗಳು ನಯವಾಗಿ ನೋಡಿಕೊಂಡರು..!
ಬಹುಜನರಿಗೆ ಸ್ವತಂತ್ರರಾಜಕೀಯ ಪ್ರಜ್ಞೆಯಿರದೆ ಬರಿ ಓಟ್ ಬ್ಯಾಂಕಾಗಿದ್ದ ಕಾಲದವರೆಗೂ ಇದು ಮುಂದುವರಿಯಿತು. ಬಹುಜನಚಿಂತಕ ದಾದಾಸಾಹೇಬ್ ಕಾನ್ಷಿರಾಂಜಿಯವರು ಬಹುಜನರ ಎದೆಯೊಳಗೆ ಸ್ವತಂತ್ರ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸಿ ಬಹುಜನರೆಂದರೆ ಕೇವಲ ಮತಹಾಕುವ ಕುರಿಗಳಲ್ಲ ಆಳುವವರ್ಗದ ಹುಲಿಗಳು ಎಂಬುದನ್ನು ಸಾಬೀತುಪಡಿಸುತ್ತಿದ್ದಂತೆಯೇ ಎಚ್ಚರಗೊಂಡ ಮೆದುಮನುವಾದಿ(ಕೇಂದ್ರ)ಕಾಂಗ್ರೆಸ್ ತನ್ನ ಗರ್ಭದಿಂದ ರಕ್ತಕಾರಿಕೊಂಡು ಹುಟ್ಟಿದ ಬಿಜೆಪಿ ಎಂಬ ಕೂಸನ್ನು ಬುದ್ಧ-ಫುಲೆ-ಅಂಬೇಡ್ಕರ್ವಾದೀ ಸಿದ್ಧಾಂತಕ್ಕೆ ವಿರುದ್ದವಾಗಿ ಒಳಗೊಳಗೆ ಬೆಳೆಸಲು ಮೌನವಾಗಿಯೇ ಪುಷ್ಟಿನೀಡಿತು..!
ಅದು ಬೆಳೆದು ದೊಡ್ಡದಾಗಿ ಅದರ ಕೊಂಬು ಕೋರೆಹಲ್ಲುಗಳು ಬಲಿತು ಅದು ರಾಷ್ಟ್ರವನ್ನು ಅರ್ಥಾತ್ ರಾಷ್ಟ್ರದ ಬಹುಜನರನ್ನು ಬಲಿತೆಗೆದುಕೊಳ್ಳುವಷ್ಟು ದಷ್ಟಪುಷ್ಟವಾಗಿ ಬೆಳೆಯುತ್ತಿದ್ದಂತೆಯೇ ಕಾಂಗ್ರೆಸ್ ಉಸಿರೆಳೆದು ಇಚ್ಛಾಮರಣಿಯಂತೆ ಆತ್ಮಹತ್ಯೆ ಮಾಡಿಕೊಂಡಿತು..! ಇದರಿಂದಾಗಿ ಈಗ ಈ ಬಿಜೆಪಿ ಎಂಬ ಮುಕ್ತಮನುವಾದಿ ಪಕ್ಷದ ಮುಂದೆಯೂ ಒಂದು ಸಮರ್ಥ ವಿರೋಧಪಕ್ಷವಿಲ್ಲದಂಥಾ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ..!
ಬಿಜೆಪಿಯ ದಿನದಿನದ ಸ್ವೇಚ್ಛಾಚಾರೀ ಸರ್ವಾಧಿಕಾರಿ ನಿರಂಕುಶಾಡಳಿದ ಆಟಾಟೋಪಗಳಿಗೆ ಬೆದರಿ ಅಸಹಾಯಕರಾಗಿ ಹತಾಷರಾಗಿ ದೇಶದ ಪ್ರಜ್ಞಾವಂತ ಜನರು ಇಂದು ಕೈಕೈಹೊಸಕಿಕೊಳ್ಳುತ್ತಾ ಶಾಪಹಾಕುತ್ತಿದ್ದಾರೆ..! ಹಲವು ಅಂಧಭಕ್ತರು ಜೈಕಾರ ಹಾಕುತ್ತಿದ್ದಾರೆ..! ಕೆಲವರು ದೇಶವೆಂಬ ಮನೆಗೆ ಬಿಜೆಪಿ ಹೊತ್ತಿಸಿರುವ ಬೆಂಕಿಯಲ್ಲಿ ಮೈಕೈ ಕಾಯಿಸಿಕೊಂಡು ಬೆಚ್ಚಗಿದ್ದರೆ ಇನ್ನೂ ಕೆಲವರು ಆ ಬೆಂಕಿಯಿಂದ ಬೀಡಿ ಹಚ್ಚಿಕೊಂಡು ಧಮ್ಮು ಎಳೆದು ಭ್ರಮಾನಿಶೆಲ್ಲಿ ತೇಲುತ್ತಿದ್ದಾರೆ..!
ಬಂಧುಗಳೇ, ದಿನದಿಂದ ದಿನಕ್ಕೆ ಕಾಡ್ಗಿಚ್ಚಿನಂತೆ ಹಬ್ಬುತ್ತಾ ಸುಡುತ್ತಿರುವ ಸಮಸ್ಯೆಗಳು ಎಲ್ಲರಿಗೂ ಗೊತ್ತಿರುವಂಥದ್ದೇ ಮೊನ್ನೆ Article 370, ಇಂದು Article 14,15 ನಾಳೆ 15/4, 16/4, ನಾಳಿದ್ದು article 17 ಆಮೇಲೆ article 25..! ಮುಂದೆ article 330, 340…!! ಒಟ್ಟಾರೆ ಈ ದೇಶದ ಧಾರ್ಮಿಕ ಅಲ್ಪಸಂಖ್ಯಾತರು, ದಲಿತರು ಹಿಂದುಳಿದ ವರ್ಗಗಳು, ಮಹಿಳೆಯರು ಅರ್ಥಾತ್ ಅಬ್ರಾಹ್ಮಣರ ಸರ್ವತೋಮುಖ ಸರ್ವನಾಶವೇ ಮನುವಾದಿಗಳ ಹಿಡನ್ ಮತ್ತು ಓಪನ್ ಅಜೆಂಡಾ..!! ಇವೆಲ್ಲಾ ಎಲ್ಲರಿಗೂ ಗೊತ್ತಿರುವಂಥದ್ದೇ. ಇನ್ನಾದರೂ ಹುತ್ತವ ಬಡಿಯುವುದನ್ನು ನಿಲ್ಲಿಸಿ ಬಾಬಾಸಾಹೇಬರ ಮಾತುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಇವೆಲ್ಲಾ ಸಮಸ್ಯೆಗಳಿಗೂ ಬಾಬಾಸಾಹೇಬರು ಹೇಳಿದ ತೋರಿದ ಶಾಶ್ವತ ಪರಿಹಾರಗಳ ಕಡೆ ಚಿಂತಿಸೋಣವೇ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರೈತರಿಗೆ ಉಚಿತ ವಿದ್ಯುತ್ ನೀಡಲು ರಾಜ್ಯಾದ್ಯಂತ ಸೋಲಾರ್ ಘಟಕಗಳ ಸ್ಥಾಪನೆ : ಸಚಿವ ಕೆ.ಜೆ.ಜಾರ್ಜ್
ಸುದ್ದಿದಿನ,ಚಿತ್ರದುರ್ಗ:ರೈತರಿಗೆ ಹಗಲು ಹೊತ್ತು ಏಳು ಘಂಟೆ ಉಚಿತ ಕರೆಂಟ್ ನೀಡಲು ರಾಜ್ಯಾದ್ಯಂತ ಸೋಲಾರ್ ಘಟಕಗಳಿಗೆ ಚಾಲನೆ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನೀರಗುಂದ ಗ್ರಾಮದ ಬಳಿ ನೂತನವಾಗಿ ನಿರ್ಮಾಣವಾಗಿರುವ ಸೋಲಾರ್ ಘಟಕದ ಕಾಮಗಾರಿ ಪರಿಶೀಲಿಸಿದ ಅವರು, ಜಿಲ್ಲೆಯ ಆರೂ ತಾಲೂಕುಗಳಲ್ಲಿ ಒಂಬತ್ತು ಸೋಲಾರ್ ಘಟಕಗಳು ಸ್ಥಾಪನೆಯಾಗಲಿದ್ದು ಇದರಿಂದ ಅರವತ್ತೆರಡು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ಹೇಳಿದರು.
ಇಂಧನ ಇಲಾಖೆಯು ರಾಜ್ಯಾದ್ಯಂತ 154 ಸೋಲಾರ್ ಘಟಕಗಳನ್ನು ಸ್ಥಾಪಿಸಿ 1 ಸಾವಿರದ 81 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಸ್ವಾವಲಂಬನೆ ಸಾಧಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಇನ್ನೊಂದೆಡೆ ತುಮಕೂರಿನ ಸಿರಾ ತಾಲ್ಲೂಕಿನ ಚೆಂಗಾವರದಲ್ಲಿ ಪಿ.ಎಂ.ಕುಸುಮ್ ಯೋಜನೆಯಡಿ ನಿರ್ಮಿಸಿರುವ ಸೋಲಾರ್ ಪಾರ್ಕ್ ವೀಕ್ಷಿಸಿ ಮಾತನಾಡಿದ ಅವರು, ರಾಜ್ಯದಾದ್ಯಂತ ಸೋಲಾರ್ ಘಟಕಗಳನ್ನು ನಿರ್ಮಿಸಿ 3 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನ ; ನಾಳೆ ಸರ್ಕಾರಿ ರಜೆ ಘೋಷಣೆ
ಸುದ್ದಿದಿನಡೆಸ್ಕ್:ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿದೆ. ನಾಳೆ ಅವರ ಹುಟ್ಟೂರಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಒಂದು ದಿನ ಸರ್ಕಾರಿ ರಜೆಯನ್ನು ಘೋಷಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.
ಕರ್ನಾಟಕ ರಾಜಕಾರಣದ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು ನಸುಕಿನ ಜಾವ 2:30ರ ಸುಮಾರಿಗೆ ನಿಧನರಾಗಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ನಾಳೆ ಬೆಳಗಾವಿ ಸೌಧದಲ್ಲಿ ನಡೆಯ ಬೇಕಾಗಿದ್ದ ಕಲಾಪಗಳನ್ನು ಗುರುವಾರಕ್ಕೆ ಮುಂದೂಡಲಾಗಿದೆ.
ವಯೋಸಹಜ ಅನಾರೋಗ್ಯದ ಕಾರಣ ಅವರು ಇತ್ತೀಚೆಗಷ್ಟೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದರು. ಆದಾಗ್ಯೂ ನಂತರ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು.
ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಮೃತರ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2009 ರಿಂದ 2012ರ ಅಕ್ಟೋಬರ್ 28ರವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಸ್. ಎಂ. ಕೃಷ್ಣ ಅವರು, 2004ರಿಂದ 2008ರವರೆಗೆ ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
1999ರ ಅಕ್ಟೋಬರ್ 11ರಿಂದ 2004ರ ಮೇ 28ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಎಸ್. ಕೃಷ್ಣ ಅವರು, ಉಪಮುಖ್ಯಮಂತ್ರಿಯಾಗಿ, ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಹಿರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು, ರಾಜಕೀಯ ನಿವೃತ್ತಿಯ ಅಂಚಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ತುಮಕೂರು:ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದ್ದು ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತುಮಕೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆದಷ್ಟು ಶೀಘ್ರವೇ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಲಾಗುವುದು ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದ್ದು ಮೈಸೂರಿನಲ್ಲೂ ಜಾಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಚೆನ್ನೈ-ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಗಾಗಿ ಆರು ಹಂತದಲ್ಲಿ 20 ಸಾವಿರ ಎಕರೆ ಸ್ವಾಧೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಸಂತನರಸಾಪುರದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಟೌನ್ ಶಿಪ್ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೆಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243