ದಿನದ ಸುದ್ದಿ
ಸಿಸಿಟಿವಿಯಲ್ಲಿ ಬಯಲಾಯ್ತು ನಾಗರತ್ನಾಳ ಅಸಲಿ ಬಣ್ಣ : ದುನಿಯಾ ವಿಜಯ್ ಅಭಿಮಾನಿಗಳಿಂದ ಛೀಮಾರಿ.. ವೀಡಿಯೋ ನೋಡಿ

ಸುದ್ದಿದಿನ, ಬೆಂಗಳೂರು : ದುನಿಯಾ ವಿಜಯ್ ಜೈಲಿಗೆ ಹೋಗಿದ್ದ ವೇಳೆ ನಿಜವಾಗಿಯೂ ನಡೆದಿದ್ದೇನು..? ಕೀರ್ತಿಗೌಡ ಮನೆಗೆ ಬಂದ ನಾಗರತ್ನ ವಿಜಯ್ ಮಗನನ್ನು ನೋಡಲು ಬಂದ ನಾಗರತ್ನ, ಚಪ್ಪಲಿ ತೆಗೆದುಕೊಂಡು ಕೀರ್ತಿಗೌಡ ಅವರಿಗೆ ಥಳಿಸಿ ನೇರ ಗಿರಿನಗರ ಪೊಲೀಸ್ ಠಾಣೆಗೆ ಹೋಗಿ ಸುಳ್ಳು ದೂರು ದಾಖಲಿಸಿದ್ದರು.
ನಾಗರತ್ನ ಆ ದಿನ ಹೈಡ್ರಾಮ ಮಾಡಿದ್ದ ನಾಗರತ್ನ
ಆದರೆ ರಿಯಾಲಿಟಿನೇ ಬೇರೆಯಾಗಿದೆ ಅಂದಿನ ಹೈಡ್ರಾಮದ ಇಂಚಿಂಚು ಮಾಹಿತಿ
ನಾಗರತ್ನ ಅವರ ಅಸಲಿ ಮುಖ ಬಯಲು
ದುನಿಯಾ ವಿಜಯ್ ಮಟ್ಟ ಹಾಕಲು ಮಾನಸಿಕ ಕಿರುಕುಳ ನೀಡಿದ್ದ ನಾಗರತ್ನ
ಇದಕ್ಕೆ ಮೊದಲ ಮಗಳು ಮೌನಿಕಾಳದ್ದೇ ಮಾಸ್ಟರ್ ಪ್ಲಾನ್.
ಇದು ಹಲವು ದೃಶ್ಯ ಮಾಧ್ಯಮಗಳಲ್ಲಿಎಕ್ಸ್ಕ್ಲೂಸಿವ್ ಸ್ಟೋರಿ ಆಗಿ ತೋರಿಸಲಾಗಿತ್ತು.ನಾಗರತ್ನ ಏನ್ ಅಮ್ಮಾ ನಿನ್ ಕಥೆ ಯಾಕೆ ಈ ರೀತಿ ನಾಟಕವಾಡುತ್ತೀಯಾ? ಮಾಧ್ಯಮಗಳ ಮುಂದೆ ದುನಿಯಾ ವಿಜಿ ಬೇಕು ಎಂದು ನಾಟವಾಡ್ತೀರಾ?ಆದ್ರೆ ಒಳ ಒಳಗೇ ದುನಿಯಾ ವಿಜಯ್ ಹೆಸರಿಗೆ ಕಳಂಕ ಮಾಡ್ತೀರಾ?ದುನಿಯಾ ವಿಜಯ್ ವೃದ್ಧ ದಂಪತಿ ಮೇಲೆ ಹಲ್ಲೆ ಮಾಡ್ತಿರಾ? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಇದು ನಾಗರತ್ನ ಅವರ ಅಸಲಿಯತ್ತು. ಸಿಸಿಟಿವಿಯಲ್ಲಿ ನಾಗರತ್ನಾಳ ನಿಜ ಬಣ್ಣ ಬಯಲಾಗಿದೆ.
ಪೊಲೀಸರಿಗು ವಂಚಿಸಿದ ದುನಿಯಾ ವಿಜಯ್ ಹೆಂಡತಿ, ಮಾಡಿದ್ದೆಲ್ಲಾ ಸಿಂಪತಿ ಸೃಷ್ಟಿಸಿ ದುನಿಯಾ ವಿಜಯ್ ವಿರುದ್ಧ ಸುಳ್ಳು ದೂರು ಕೊಟ್ಟಿದ್ದರು. ಪೊಲೀಸರ ಮುಂದೆ ನಾಟಕವಾಡಿ ಪೊಲೀಸರನ್ನು ದಾರಿ ತಪ್ಪಿಸುತ್ತಿದ್ದರು ನಾಗರತ್ನ.
ಸುದ್ದಿದಿನ.ಕಾಂ|ವಾಟ್ಸಾಪ್ |9986715401

ದಿನದ ಸುದ್ದಿ
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ; ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಉಚಿತ ಪ್ರಯಾಣ

ಸುದ್ದಿದಿನ ಡೆಸ್ಕ್ : ಇದೇ 12 ರಿಂದ 19 ರವರೆಗೆ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. “ಪ್ರವೇಶ ಪತ್ರ” ತೋರಿಸಿ, ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕನ್ನಡ ಸಾಹಿತ್ಯ ಪರಿಷತ್ | ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟ

ಸುದ್ದಿದಿನ, ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟವಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು 2022ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಪ್ರಶಸ್ತಿಯು 51 ಸಾವಿರ ರೂಪಾಯಿ ನಗದು, ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

ಸುದ್ದಿದಿನ ಡೆಸ್ಕ್ : 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಮಿತಿ ಅನುಮೋದಿಸಿದೆ.
ಸಾಮಾನ್ಯ ದರ್ಜೆ ಭತ್ತಕ್ಕೆ ಕ್ವಿಂಟಲ್ಗೆ 2 ಸಾವಿರದ 40 ರೂಪಾಯಿಯಿಂದ 2ಸಾವಿರದ 183 ರೂಪಾಯಿಗೆ ಹಾಗೂ ’ಎ’ ದರ್ಜೆ ಭತ್ತಕ್ಕೆ 2 ಸಾವಿರದ 60 ರಿಂದ 2 ಸಾವಿರದ 203 ರೂಪಾಯಿಗೆ ಹೆಚ್ಚಿಸಲಾಗಿದೆ.
ರಾಗಿಗೆ ಪ್ರತಿ ಕ್ವಿಂಟಲ್ಗೆ 3 ಸಾವಿರದ 578 ರೂಪಾಯಿಯಿಂದ 3 ಸಾವಿರದ 846 ರೂಪಾಯಿಗೆ ಹೆಚ್ಚಿಸಲಾಗಿದೆ. ತೊಗರಿಗೆ ಪ್ರತಿ ಕ್ವಿಂಟಲ್ಗೆ 6 ಸಾವಿರದ 600 ರಿಂದ 7 ಸಾವಿರ ರೂಪಾಯಿಗೆ, ಹೆಸರು ಕಾಳಿಗೆ ಪ್ರತಿ ಕ್ವಿಂಟಲ್ಗೆ 7 ಸಾವಿರದ 755 ರಿಂದ 8 ಸಾವಿರದ 558 ರೂಪಾಯಿಗೆ, ಪ್ರತಿ ಕ್ವಿಂಟಲ್ ಉದ್ದಿಗೆ 6 ಸಾವಿರದ 600 ರಿಂದ 6 ಸಾವಿರದ 950 ರೂಪಾಯಿಗೆ ಹೆಚ್ಚಿಸಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ 2022-23ನೇ ಸಾಲಿಗೆ 330.5 ದಶಲಕ್ಷ ಟನ್ನಷ್ಟು ಆಹಾರ ಧಾನ್ಯ ಉತ್ಪಾದನೆ ಅಂದಾಜಿಸಲಾಗದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಇಲ್ಲಿದೆ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕಂಪ್ಲೀಟ್ ಡೀಟೆಲ್ಸ್
-
ದಿನದ ಸುದ್ದಿ6 days ago
ಐದು ಗ್ಯಾರಂಟಿ | ಫಲಾನುಭವಿಗಳ ಆಯ್ಕೆ ಮಾನದಂಡ
-
ಲೈಫ್ ಸ್ಟೈಲ್4 days ago
ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!
-
ದಿನದ ಸುದ್ದಿ6 days ago
ಈ ವರ್ಷವೇ ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಚಿಂತನೆ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
-
ದಿನದ ಸುದ್ದಿ6 days ago
ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬಿತ್ತನೆ ಬೀಜ ಕೊರತೆಯಾಗದಂತೆ ರಾಜ್ಯಾದ್ಯಂತ ಕ್ರಮ
-
ದಿನದ ಸುದ್ದಿ6 days ago
ಡಿ.ಇ.ಎಲ್.ಇ.ಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ದಾವಣಗೆರೆ | ಶತಮಾನದ ಕೆ.ಆರ್.ಪೇಟೆ ಸರ್ಕಾರಿ ಶಾಲೆಗೆ ಡಿಸಿ ಶಿವಾನಂದ ಕಾಪಶಿ ಭೇಟಿ ; ಕಟ್ಟಡದ ಗುಣಮಟ್ಟದ ವರದಿ ನೀಡಲು ಇಂಜಿನಿಯರ್ಗೆ ಸೂಚನೆ