ದಿನದ ಸುದ್ದಿ
ಗುತ್ತಿಗೆ ನೌಕರರ ವೇತನ ಹಾಗೂ ಉದ್ಯೋಗ ಭದ್ರತೆಗಾಗಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ

ಸುದ್ದಿದಿನ ಡೆಸ್ಕ್ | ಸರ್ಕಾರವು ಈಗಾಗಲೇ ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಗೂಳಪಡುವ ಎಲ್ಲಾ ಸಂಸ್ಥೆಗಳ ಸಮೂಹ ಸಿ ವೃಂದದ ಗುತ್ತಿಗೆ ಆಧಾರದ ನೌಕರರನ್ನು ಒಂದು ಬಾರಿಯ ಕ್ರಮವಾಗಿ ಖಾಯಂಗೊಳಿಸಲು ಸರ್ಕಾರದ ಆದೇಶ ಸಂಖ್ಯೆ ಅಕುಕ 167 ಎಂಪಿಎಸ್ 2012 ದಿನಾಂಕ 14, 02, 2013 ರಲ್ಲಿ ಆದೇಶ ನೀಡಿತ್ತು. ಆದರೇ ಸದರಿ ಆದೇಶವನ್ನು ಸರ್ಕಾರದ ಸುತ್ತೂಲೆ ಸಂಖ್ಯೆ ಅಕುಕ 167 ಎಂಪಿಎಸ್ 2012 ದಿನಾಂಕ 3.9.2013 ರಲ್ಲಿ ಹಿಂಪಡೆಯಲಾಯಿತು ಪ್ರಸ್ತುತ ಸರ್ಕಾರ ಪತ್ರ ಸಂಖ್ಯೆ ಅಕುಕ 137 ಎಂಪಿಎಸ್ 2013 ದಿನಾಂಕ O6, ೦1.2014 ರಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಮೂಹ ಸಿ ವೃಂದದ ಬೋಧಕೇತರ ಸಿಬ್ಬಂದಿಗಳ ನೇಮಕಾತಿಯನ್ನು ಖಾಯಂಗೊಳಿಸಲು ಮೆರಿಟ್ ಮತ್ತು ರೋಸ್ಟರ್ ಹಾಗೂ ಮೀಸಲಾತಿಯನ್ನು ಪಾಲಿಸಾಲಾಗಿದೆಯೆ ಎಂಬ ಮಾಹಿತಿ ಯನ್ನು ನೀಡಲು ಕೋರಲಾಗಿತ್ತು. ಅದರಂತೆ ಈ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಮೂಹ ಸಿವೃಂದದ ಬೋದಕೇತರ ನೌಕರರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ಈ ಮೇಲ್ಕಂಡಎಲ್ಲಾ ಅಂಶಗಳನ್ನು ತಮ್ಮ ಅವಗಾಹನೆಗೆ ತರುತ್ತಾ ನಮ್ಮ ಪ್ರಮಾಣಿಕ ಸೇವೆಯನ್ನು ಗಣನೆಗೆ ತೆಗೆದುಕೊಂಡು. ಈ ಸಂಸ್ಥೆಯಲ್ಲಿಯೇ ಖಾಲಿ ಇರುವ. ಹುದ್ದೆಗಳಲ್ಲಿ ನಮ್ಮಆರ್ಹತೆ ಹಾಗೂ ನಿರತ ಸೇವೆಯನ್ನು ಪರಿಗಣಿಸಿ ನಮ್ಮನ್ನು ಒಂದು ಬಾರಿಯ ಕ್ರಮವಾಗಿ ಖಾಯಂ ಗೊಳಿಸಲು ಸರ್ಕಾರದಿಂದ ಸೂಕ್ತ ಆದೇಶ ವನ್ನು ಹೊರಡಿಸುವಂತೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸಮೂಹ ಸಿ ವೃಂದದವರು ಗುತ್ತಿಗೆ ನೌಕರರು ಮನವಿಯನ್ನು ಸಲ್ಲಿಸಿದ್ದಾರೆ.
ಹೋರಾಟಕ್ಕೆ ಕರೆ
ಉದ್ಯೋಗಕ್ಕಾಗಿ ಯುವಜನರು ಆಂದೋಲನದ ಭಾಗವಾಗಿರುವ’ಕರ್ನಾಟಕ ರಾಜ್ಯ ಸರ್ಕಾರೀ ಗುತ್ತಿಗೆ ನೌಕರರ ಒಕ್ಕೂಟ’ವು ಗುತ್ತಿಗೆ ನೌಕರರ ಸೇವಾ ಭದ್ರತೆ ಮತ್ತು ಸಮಾನ ವೇತನದ ಹಕ್ಕಿಗಾಗಿ ಹಂತ ಹಂತವಾಗಿ ಮತ್ತು ವ್ಯವಸ್ಥಿತವಾಗಿ ಹೋರಾಟವನ್ನು ವಿಸ್ತರಿಸುತ್ತಿರುವುದು ನಿಮಗೆ ತಿಳಿದೇ ಇದೆ.
ಕಳೆದ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಗಮನ ಸೆಳೆಯಲು ‘ಉದ್ಯೋಗ ಭದ್ರತೆಗೇ ಓಟು’ ಆಂದೋಲನ ರೂಪಿಸಿದುದರ ಫಲವಾಗಿ ಜೆಡಿಎಸ್ ಪಕ್ಷ ಹಾಗೂ ಕೆಲವು ಎಂ.ಎಲ್.ಎ ಅಭ್ಯರ್ಥಿಗಳು ಇದರ ಪರವಾಗಿ ನಿಲ್ಲುವುದಾಗಿ ಚುನಾವಣಾ ಪೂರ್ವದಲ್ಲಿ ಘೋಷಿಸಿದರು.
ಚುನಾವಣಾ ಪೂರ್ವ ಭರವಸೆಯಾದ ರೈತರ ಸಾಲಮನ್ನಾದ ಕುರಿತಾಗಿ ಗಮನ ಹರಿಸುತ್ತಿರುವ ರಾಜ್ಯ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿಗಳು ಇದರ ಬಗ್ಗೆ ಮಾತ್ರ *ಇನ್ನೂ ಸಮಯ ಕೊಡಿ* ಎನ್ನುತ್ತಿದ್ದಾರೆ. ಆದರೆ, ಕೆಲವು ಇಲಾಖೆಗಳಲ್ಲಿ ಗುತ್ತಿಗೆ ನೌಕರರನ್ನು ಕಿತ್ತು ಹಾಕುತ್ತಿರುವ ಮತ್ತು 4-5 ತಿಂಗಳ ವೇತನವನ್ನೇ ಬಿಡುಗಡೆ ಮಾಡದೇ ಇರುವುದನ್ನು ಗಮನಕ್ಕೆ ತಂದರೂ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ನಮಗೆ ವಿಶ್ವಾಸ ಹುಟ್ಟುತ್ತಿಲ್ಲ. ಹೀಗಾಗಿ 2ನೇ ಅಧಿವೇಶನದ ಹೊತ್ತಿಗೆ ಬೃಹತ್ ಸಂಖ್ಯೆಯಲ್ಲಿ ಮುತ್ತಿಗೆ ಹಾಕಲಾಗುವುದೆಂದು ಮಾರ್ಚ್ 25ರಂದೇ ನಾವು ಘೋಷಿಸಿದ್ದೆವು. ಅದಕ್ಕೆ ತಯಾರಿಯು ವ್ಯವಸ್ಥಿತವಾಗಿ ನಡೆದಿದೆ. ಎಲ್ಲಾ ಜಿಲ್ಲೆಗಳಲ್ಲಿ ಜವಾಬ್ದಾರಿ ವ್ಯಕ್ತಿಗಳು ನಿಯೋಜಿತರಾಗಿದ್ದಾರೆ, ಸದಸ್ಯತ್ವ ನೋಂದಣಿ ನಡೆಯುತ್ತಿದೆ.
ಆದರೆ, ಈ ಸದ್ಯ 5-6 ತಿಂಗಳು ವೇತನ ಸಿಗದೇ ಇರುವ ಹಾಗೂ ಈಗಲೇ ಕೆಲಸ ಕಳೆದುಕೊಳ್ಳುವ ಅಭದ್ರತೆಯಲ್ಲಿರುವ (ಈಗಾಗಲೇ ಕಳೆದುಕೊಂಡಿರುವ) ನೌಕರ ಬಂಧುಗಳ ಜೊತೆಗೆ ನಿಲ್ಲಬೇಕಾದ್ದು ನಮ್ಮ ಕರ್ತವ್ಯ. ಅಂತಹ ಗುತ್ತಿಗೆ ನೌಕರರು ಇದೇ ಆಗಸ್ಟ್ 20ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ಯೋಜಿಸಿದ್ದಾರೆ. ವೇತನವಿಲ್ಲದಿರುವುದರಿಂದ ‘ಊಟದ ವ್ಯವಸ್ಥೆ ಮಾಡಿಕೊಳ್ಳದೇ’ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದ್ದಾರೆ. ಅವರ ಪರವಾಗಿ ನಿಲ್ಲುವುದು ನಮ್ಮ ಕರ್ತವ್ಯ. ಯಾವ ಇಲಾಖೆಗಳವರು ವೇತನವಿಲ್ಲದೇ, ಕೆಲಸ ಕಳೆದುಕೊಳ್ಳುವ ಸಮಸ್ಯೆಯಲ್ಲಿದ್ದಾರೋ ಅವರು ಶಾಮಿಯಾನ, ಧ್ವನಿವರ್ಧಕ ಮತ್ತಿತರ ವ್ಯವಸ್ಥೆಗೆ (ಮಳೆ ಬರುವ ಸಾಧ್ಯತೆ ಇರುವುದರಿಂದ ಶೀಟ್ ಟೆಂಟೇ ಹಾಕಬೇಕು) ಇಲಾಖೆಯೊಂದಕ್ಕೆ 25,000 ರೂಅನ್ನು ಸಂಗ್ರಹ ಮಾಡಿಕೊಡುತ್ತಾರೆ. (ಆಯಾ ಇಲಾಖೆಯವರೂ ಇದನ್ನು ಗಮನಿಸಬೇಕು).
ಉಳಿದಂತೆ, ಮಿಕ್ಕ ಇಲಾಖೆಗಳ/ಜಿಲ್ಲೆಗಳ ಗುತ್ತಿಗೆ ನೌಕರರು ಒಂದೊಂದು ದಿನದ ಊಟದ ವ್ಯವಸ್ಥೆಯನ್ನು ಮಾಡಬೇಕೆಂದು ಕೋರುತ್ತೇವೆ. ಒಂದು ವೇಳೆ 4-5 ದಿನದಲ್ಲಿ ಇದು ಬಗೆಹರಿಯದೇ ಇದ್ದರೆ, ಸತ್ಯಾಗ್ರಹಿಗಳು ಉಪವಾಸ ಸತ್ಯಾಗ್ರಹವನ್ನೇ ಮಾಡಬೇಕಾಗುತ್ತದೆ; ಆಗ ಉಳಿದ ಇಲಾಖೆಗಳ ನೌಕರರು ಬೆಂಬಲಿಸಿ ಬೆಂಗಳೂರಿಗೆ ಬರಬೇಕಾಗುತ್ತದೆ.
ಬನ್ನಿ, 2ನೇ ಅಧಿವೇಶನದ ಬೃಹತ್ ಹೋರಾಟಕ್ಕೆ ಮುಂಚಿತವಾಗಿ ನಮ್ಮ ಗುತ್ತಿಗೆ ನೌಕರ ಬಂಧುಗಳ ತಕ್ಷಣದ ಸಮಸ್ಯೆಯ ಸಂದರ್ಭದಲ್ಲಿ ಜೊತೆಯಾಗೋಣ.
ಕರ್ನಾಟಕ ಸರ್ಕಾರೀ ಗುತ್ತಿಗೆ ನೌಕರರ ಒಕ್ಕೂಟ
ಸಂಪರ್ಕ: ಕಚೇರಿ ಉಸ್ತುವಾರಿ – ಚಂದನ್ ಕುಮಾರ್ : 9972756667

ದಿನದ ಸುದ್ದಿ
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್‍ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಇವರ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಬಹುದು. ಅರ್ಜಿ ನಮೂನೆಯನ್ನು ಸಂಬಂಧಿಸಿದ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ನಿರೀಕ್ಷಕರಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 11 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಚೇರಿ ದೂ ಸಂ:08192-237332 ಸಂಪರ್ಕಿಸಲು ಕಾರ್ಮಿಕ ಅಧಿಕಾರಿ ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ

ಸುದ್ದಿದಿನ ಡೆಸ್ಕ್ : ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ಸಮಿತಿ ತೀರ್ಪಿನ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಿನ್ನೆ ಹೇಳಿದ್ದಾರೆ.
ತಮಿಳುನಾಡಿಗೆ ನಾಳೆಯಿಂದ (ಸೆಪ್ಟಂಬರ್28) ಅಕ್ಟೋಬರ್ 15ರ ತನಕ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ನಂತೆ ನೀರು ಹರಿಸುವಂತೆ, ಕಾವೇರಿ ನದಿ ನೀರು ಸಮಿತಿ ನಿನ್ನೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಕಾವೇರಿ ನದಿ ನೀರು ಸಮಿತಿ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಈ ನಿರ್ದೇಶನ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ

ಸುದ್ದಿದಿನ, ಬಳ್ಳಾರಿ : ಸಿರಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಸವನಪೇಟೆ) ಮುಖ್ಯ ಗುರುಗಳಾದ ಶ್ರೀಮತಿ ಸುಮಂಗಳಾ ಮೇಟಿಯವರು 2023-24 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ವೃತ್ತಿ ಧರ್ಮ ನೇ ತನ್ನ ಸರ್ವಸ್ವ ಎಂದು ತಿಳಿದುಕೊಂಡಂತಹ ಶ್ರೀಮತಿ ಸುಮಂಗಳಾ ಮೇಟಿಯವರು, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಕರ್ತವ್ಯ ಹಾಗೂ ಸೇವೆಯನ್ನು ಸಲ್ಲಿಸಿದನ್ನು ಪರಿಗಣಿಸಿ ಈ ಹಿಂದೆಯೇ 2022-23 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಇವರ ಶಿಕ್ಷಣ ಕ್ಷೇತ್ರದಲ್ಲಿನ ಅಗಾಧವಾದ ಕರ್ತವ್ಯ ಮತ್ತು ಸೇವೆ ನಿಷ್ಠೆಯನ್ನು ಗುರುತಿಸಿದ ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ವತಿಯಿಂದ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಇದೇ ಸಂದರ್ಭದಲ್ಲಿ ಗ್ರಾಮಸ್ಥರು, ಸಮಸ್ತ ಶಿಕ್ಷಕರ ವರ್ಗದವರು, ಅತಿಥಿ ಶಿಕ್ಷಕರು, ಹಿತೈಷಿಗಳು, ಹಳೆಯ ವಿದ್ಯಾರ್ಥಿ ಬಳಗ, ಶಿಕ್ಷಣ ಪ್ರೇಮಿಗಳು, ಅಭಿಮಾನಿ ಬಳಗ,
ಮುಂತಾದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ4 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ3 days ago
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ