Connect with us

ದಿನದ ಸುದ್ದಿ

ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಕುಟುಂಬಕ್ಕೆ ಪೊಲೀಸರಿಂದ ಕಿರುಕುಳ ಆರೋಪ

Published

on

ಸುದ್ದಿದಿನ, ಬೆಂಗಳೂರು : ವೈಟ್‌ಫೀಲ್ಡ್ ಪೊಲೀಸರಿಂದ ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಸೊಸೆ ಲಕ್ಷ್ಮೀ ಜತ್ತಿ ನಮಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪ ವ್ಯಕ್ತ ಪಡಿಸಿದ್ದಾರೆ.

ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಎಸಿಪಿ ಸುಧಾಮನಾಯಕ್ ಹಾಗೂ ಸಬ್ ಇನ್ಸಪೆಕ್ಟರ್ ಸೋಮಶೇಖರ್ ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದು, ಈಗಾಗಲೇ ಎಸಿಪಿ ಮೂರನೆ ‌ವೈಕ್ತಿ ಇಂದ 5ಲಕ್ಷ ಹಾಗೂ ಸಬ್ ಇನ್ಸಪೆಕ್ಟರ್ ಗೆ 2ಲಕ್ಷ ನೀಡಿದರೂ ಮತ್ತೆ ದುಡ್ಡಿಗಾಗಿ ಕಿರುಕುಳ‌ ನೀಡುತ್ತಿರುವುದಾಗಿ ಲಕ್ಷ್ಮಿ ಜತ್ತಿ‌ ತಿಳಿಸಿದ್ದಾರೆ.

ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿಲ್ಲಾ ವಿಚಾರವಾಗಿ ಜತ್ತಿ ಕುಟುಂಬಕ್ಕೆ ಮತ್ತು ವಿಲ್ಲಾ ಓನರ್ ಗಳ ನಡುವೆ ಜಗಳ ನಡೆಯುತ್ತಿತ್ತು, ಇದೇ ವಿಚಾರದ ಜಗಳ‌ ಕೂಡ‌ ಕೋರ್ಟ್ ಮೆಟ್ಟಿಲಲ್ಲೂ ಇದೆ. ವಿಲ್ಲಾ ಓನರ್ ಗಳು ದೂರು ನೀಡಿದರೆ ಎಫ ಐ ಆರ್ ದಾಖಲಿಸಿ ನಮ್ಮನ್ನ ತನಿಖೆ ಮಾಡ್ತಾರೆ. ನಾವು ದೂರು ನೀಡಿದರೆ ಎನ್ ಸಿ ಆರ್ ಹಾಕಿ ಕಳಿಸುತ್ತಾರೆ. ಆದರೂ ವಿಲ್ಲಾ ಓನರ್ ಗಳಿಂದಾಗುವ ಕಿರುಕುಳದ ಕುರಿತು ಎಫ್ ಐ ಆರ್ ದಾಖಲಿಸಲು ಹಿಂದೇಟು ಹಾಕುತ್ತಿರುವ ಪೊಲೀಸರು, ಎಫ್ ಐ ಆರ್ ದಾಖಲಿಸಲು ದುಡ್ಡಿಗಾಗಿ ಎಸಿಪಿ ಹಣವನ್ನು ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿದ್ದಾರೆ.

ತಮ್ಮ ವಿಲ್ಲಾ ಗಳಲ್ಲಿ ಒಂದು ವಿಲ್ಲಾ ನೀಡುವಂತೆ ಎಸಿಪಿ ಸುಧಾಮನಾಯಕನಿಂದ ಕಿರುಕುಳ ಕೊಟ್ಟಿದ್ದು, ಸದ್ಯ ಈ ಕುರಿತು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ ಅವರಿಗೆ ಮಾಹಿತಿಯನ್ನು ಲಕ್ಷ್ಮೀ ಜತ್ತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಕೆಂಗಾಪುರ | ಮಾ.12 ರಂದು ಶ್ರೀ ರಾಮಲಿಂಗೇಶ್ವರ ಮಹಾ ಸ್ವಾಮಿಯವರ 45 ನೇ ಮುಳ್ಳುಗದ್ದಿಗೆ ; ಉಚಿತ ಸಾಮೂಹಿಕ ವಿವಾಹ ಮಹೋತ್ಸವ

Published

on

ಸುದ್ದಿದಿನ, ಚನ್ನಗಿರಿ : ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ರಾಮಲಿಂಗೇಶ್ವರ ಮಹಾ ಸ್ವಾಮಿಯವರ 45 ನೇ ಮುಳ್ಳು ಗದ್ದಿಗೆ ಮಹೋತ್ಸವವು ಸುಕ್ಷೇತ್ರ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ಮಾ.12 ರಂದು ನಡೆಯಲಿದೆ.

ಇದನ್ನೂ ಓದಿ | ದಾವಣಗೆರೆ | ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾಸಮಿತಿಯಿಂದ ಪಾದಯಾತ್ರೆ ಆರಂಭ

ಈ ಮಹೋತ್ಸವದಲ್ಲಿ ಕುಂಭಾಭಿಷೇಕ ಮತ್ತು 101 ಉಚಿತ ಸಾಮೂಹಿಕ ವಿವಾಹವು ಜರುಗಲಿದ್ದು ವಧು-ವರರಿಗೆ ತಾಳಿ-ಬಟ್ಟೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಶ್ರೀ ಮಠದ ಆಡಳಿತ ಮಂಡಳಿಯವರು ಹಾಗೂ ಶ್ರೀಮಠದ ವಿದ್ಯಾಸಂಸ್ಥೆಯ ಪಿಯು ವಿಭಾಗದ ಪ್ರಾಂಶುಪಾಲರಾದ ಟಿ.ಎಂ.ದಾದಾಪೀರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾಸಮಿತಿಯಿಂದ ಪಾದಯಾತ್ರೆ ಆರಂಭ

Published

on

ಸುದ್ದಿದಿನ,ದಾವಣಗೆರೆ: ನಗರದ ಮಟ್ಟಿಕಲ್ಲು ಬಸವೇಶ್ವರ ದೇವಸ್ಥಾನದಿಂದ ಮಂಗಳವಾರ ಬೆಳಗ್ಗೆ 7.30 ಕ್ಕೆ 80 ಭಕ್ತಾದಿಗಳು ಪಾದಯಾತ್ರೆ ಆರಂಭಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾ ಸಮಿತಿವತಿಯಿಂದ ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 9ನೇವರ್ಷದ ಪಾದಯಾತ್ರೆಯನ್ನು ಮಟ್ಟಿಕಲ್ಲು ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಾವಣಗೆರೆ ನಗರಪಾಲಿಕೆ ಮಾಜಿ ಸದಸ್ಯರಾದ ಶ್ರೀ ರಮೇಶ್ ನಾಯ್ಕರವರು ಚಾಲನೆ ನೀಡಿದರು.

ಚನ್ನಗಿರಿ | ಕುಡಿಯುವ ನೀರಿಗೆ ರೂ.5.47 ಕೋಟಿ ಹಣ ಮಂಜೂರು: ಸಚಿವ ಭೈರತಿ ಬಸವರಾಜ್

ಪಾದಯಾತ್ರಿಗಳು ಬಾಡ, ಸಂತೇಬೆನ್ನೂರು, ಚನ್ನಗಿರಿ, ಅಜ್ಜಂಪುರ, ಕಡೂರು, ಕೊಟ್ಟಿಗೆಹಾರ, ಉಜಿರೆ ಮಾರ್ಗವಾಗಿ ಮಾರ್ಚ್ 10ನೆ ತಾರೀಖಿನಂದು ಧರ್ಮಸ್ಥಳ ತಲುಪುವರು ಈ ಪಾದಯಾತ್ರೆಗೆ ದಾವಣಗೆರೆ ಮತ್ತು ಹರಿಹರದ ಸುಮಾರು 80 ಜನ ಭಕ್ತಾದಿಗಳು ಪಾದಯಾತ್ರಿ ಸೇವಾ ಸಮಿತಿಯ ರಾಜನಾಯ್ಕ, ಶಿವಾಜಿ, ಎ.ಬಿ.ಚಂದ್ರಪ್ಪ, ವೇಣುಗೋಪಾಲ್, ಕೃಷ್ಣ, ಅರುಣ್ ಹಿರೇಮಠ ಮುಂತಾದವರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಇಂದು ಬಿಐಎಸ್ ನಿಂದ ಕಾರ್ಯಾಗಾರ

Published

on

ಸುದ್ದಿದಿನ,ದಾವಣಗೆರೆ : ಮಾ.02 ರಂದು ಬೆಳಿಗ್ಗೆ 10.30 ಕ್ಕೆ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್, ಪಿ.ಬಿ.ರೋಡ್ ದಾವಣಗೆರೆ ಇಲ್ಲಿ ಭಾರತೀಯ ಗುಣಮಟ್ಟ ಮಾನದಂಡ ಸಂಸ್ಥೆ(ಬಿಐಎಸ್), ಕೇಂದ್ರ ಸರ್ಕಾರದ ಕಚೇರಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ ಇವರ ಸಂಯೋಜನೆಯೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ | ಚನ್ನಗಿರಿ | ಕುಡಿಯುವ ನೀರಿಗೆ ರೂ.5.47 ಕೋಟಿ ಹಣ ಮಂಜೂರು: ಸಚಿವ ಭೈರತಿ ಬಸವರಾಜ್

ಕಾರ್ಯಕ್ರಮದ ಉದ್ಘಾಟನೆಯನ್ನು ಲೋಕಸಭಾ ಸದಸ್ಯರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರುಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಜಯಪ್ರಕಾಶ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ4 hours ago

ಕೆಂಗಾಪುರ | ಮಾ.12 ರಂದು ಶ್ರೀ ರಾಮಲಿಂಗೇಶ್ವರ ಮಹಾ ಸ್ವಾಮಿಯವರ 45 ನೇ ಮುಳ್ಳುಗದ್ದಿಗೆ ; ಉಚಿತ ಸಾಮೂಹಿಕ ವಿವಾಹ ಮಹೋತ್ಸವ

ಸುದ್ದಿದಿನ, ಚನ್ನಗಿರಿ : ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ರಾಮಲಿಂಗೇಶ್ವರ ಮಹಾ ಸ್ವಾಮಿಯವರ 45 ನೇ ಮುಳ್ಳು ಗದ್ದಿಗೆ ಮಹೋತ್ಸವವು ಸುಕ್ಷೇತ್ರ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ...

ದಿನದ ಸುದ್ದಿ5 hours ago

ದಾವಣಗೆರೆ | ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾಸಮಿತಿಯಿಂದ ಪಾದಯಾತ್ರೆ ಆರಂಭ

ಸುದ್ದಿದಿನ,ದಾವಣಗೆರೆ: ನಗರದ ಮಟ್ಟಿಕಲ್ಲು ಬಸವೇಶ್ವರ ದೇವಸ್ಥಾನದಿಂದ ಮಂಗಳವಾರ ಬೆಳಗ್ಗೆ 7.30 ಕ್ಕೆ 80 ಭಕ್ತಾದಿಗಳು ಪಾದಯಾತ್ರೆ ಆರಂಭಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾ ಸಮಿತಿವತಿಯಿಂದ ಶಿವರಾತ್ರಿ...

ಕ್ರೀಡೆ15 hours ago

ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಮರಳಿ ತಂಡಕ್ಕೆ..!

ಸುದ್ದಿದಿನ ಡೆಸ್ಕ್: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಗುರುವಾರ ಮತ್ತೆ ಕ್ರಿಕೆಟ್‌ಗೆ ಮರಳಲಿದ್ದಾರೆ. ರಾಜ್ಯದ ನ್ಯೂ ಸೌತ್ ವೇಲ್ಸ್‌ನ ಏಕದಿನ ಪಂದ್ಯದಲ್ಲಿ ಅವರು ತೊಡೆಸಂದು ಒತ್ತಡದಿಂದ...

ಬಹಿರಂಗ16 hours ago

ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ

ನಾ ದಿವಾಕರ ಒಂದು ಸ್ವಸ್ಥ ಸಮಾಜ ತನ್ನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು, ಮುಂದಿನ ಪೀಳಿಗೆಗೆ ಆರೋಗ್ಯಕರ ನೆಲೆಗಳನ್ನು ಬಿಟ್ಟುಹೋಗಲು ಬಯಸುವುದು ಸಹಜ. ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ಈ...

ದಿನದ ಸುದ್ದಿ17 hours ago

ದಾವಣಗೆರೆ | ಇಂದು ಬಿಐಎಸ್ ನಿಂದ ಕಾರ್ಯಾಗಾರ

ಸುದ್ದಿದಿನ,ದಾವಣಗೆರೆ : ಮಾ.02 ರಂದು ಬೆಳಿಗ್ಗೆ 10.30 ಕ್ಕೆ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್, ಪಿ.ಬಿ.ರೋಡ್ ದಾವಣಗೆರೆ ಇಲ್ಲಿ ಭಾರತೀಯ ಗುಣಮಟ್ಟ ಮಾನದಂಡ ಸಂಸ್ಥೆ(ಬಿಐಎಸ್), ಕೇಂದ್ರ ಸರ್ಕಾರದ...

ದಿನದ ಸುದ್ದಿ17 hours ago

ಚನ್ನಗಿರಿ | ಕುಡಿಯುವ ನೀರಿಗೆ ರೂ.5.47 ಕೋಟಿ ಹಣ ಮಂಜೂರು: ಸಚಿವ ಭೈರತಿ ಬಸವರಾಜ್

ಸುದ್ದಿದಿನ,ದಾವಣಗೆರೆ : ಚನ್ನಗಿರಿ ಪಟ್ಟಣದ ಕುಡಿಯುವ ನೀರಿಗಾಗಿ ನಗರಾಭಿವೃದ್ದಿ ಇಲಾಖೆಯಿಂದ ರೂ.5.47 ಕೋಟಿ ಮಂಜೂರು ಮಾಡಲಾಗಿದೆ ಎಂದು ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ...

ನಿತ್ಯ ಭವಿಷ್ಯ18 hours ago

ಈ ಯೋಗ ಇದ್ದರೆ ಖಂಡಿತ ದೊಡ್ಡ ರಾಜಕಾರಣಿ, ಸಮಾಜ ಸೇವಕ, ಜಿಲ್ಲಾಧಿಕಾರಿ(IAS),IPS, ಸಾಹಿತಿಗಳು, ಗಾಯಕರು, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗುವ ಸಂಭವ

ನಿಮ್ಮ ಜನ್ಮ ಕುಂಡಲಿಯಲ್ಲಿ ರವಿ ಬುಧ ಗ್ರಹಗಳು ಒಂದೇ ರಾಶಿ ಮನೆಯಲ್ಲಿದ್ದರೆ ಇದನ್ನು “ಬುಧಾದಿತ್ಯ ಯೋಗ” ಅಥವಾ “ನಿಪುಣ ಯೋಗ” ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಈ...

ನಿತ್ಯ ಭವಿಷ್ಯ19 hours ago

ಮಂಗಳವಾರ ರಾಶಿ ಭವಿಷ್ಯ

ಸೂರ್ಯೋದಯ:06:34AM, ಸೂರ್ಯಸ್ತ:06:27PM ಶಾರ್ವರೀ ನಾಮ ಸಂವತ್ಸರ ಮಾಘ ಮಾಸ, ಉತ್ತರಾಯಣ, ಶಿಶಿರ ಋತು, ಕೃಷ್ಣ ಪಕ್ಷ, ತಿಥಿ: ಚೌತಿ ( 26:59 ) ನಕ್ಷತ್ರ: ಚಿತ್ರ (...

ದಿನದ ಸುದ್ದಿ1 day ago

ಚಿತ್ರದುರ್ಗ | ನೀರಾವರಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸರಿಯಿಲ್ಲ : ಸಮಿತಿ ಸಂಚಾಲಕರ ಅಭಿಮತ

ಸದಸ್ಯ ಸಂಘಟನೆಗಳಿಗೆ ಪದಾಧಿಕಾರಿಗಳ ನೇಮಕ ಅಧಿಕಾರ ಇಲ್ಲ ಸುದ್ದಿದಿನ,ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಭೆ ಕರೆಯುವ ಅಧಿಕಾರ ಸಮಿತಿ ಸಂಚಾಲಕರಿಗೆ ಸೇರಿದ್ದು, ಸದಸ್ಯ...

ದಿನದ ಸುದ್ದಿ1 day ago

‘ಅನುಗ್ರಹ’ ಯೋಜನೆ ರಾಜ್ಯದಲ್ಲಿ ಮರುಜಾರಿಗೊಳಿಸದಿದ್ದರೆ ವಿಧಾನಸಭೆಯಲ್ಲಿ ಹೋರಾಟ : ಸಿದ್ದರಾಮಯ್ಯ ಎಚ್ಚರಿಕೆ

ಸುದ್ದಿದಿನ ಡೆಸ್ಕ್ : ಕುರಿ, ಮೇಕೆಗಳು ಆಕಸ್ಮಿಕವಾಗಿ ಸತ್ತರೆ ಐದು ಸಾವಿರ ರೂ.ಗಳ ಪರಿಹಾರ ನೀಡುವ “ಅನುಗ್ರಹ” ಯೋಜನೆಯನ್ನು ರಾಜ್ಯ ಬಿಜೆಪಿ ಸರ್ಕಾರ ಮರು ಜಾರಿಗೊಳಿಸಿದ್ದರೆ ವಿಧಾನಸಭೆಯಲ್ಲಿ...

Trending