ದಿನದ ಸುದ್ದಿ
ಜಗತ್ತಿನಲ್ಲಿ ಯಾವ ದೇವರ ಪವಾಡವು ನಡೆಯುವುದಿಲ್ಲ..!

ಜಗತ್ತಿನಲ್ಲಿ ಯಾವ ದೇವರ ಪವಾಡವುನಡೆಯುವುದಿಲ್ಲ, ಒಂದುವೇಳೆ ಅಂತಹ ಪವಾಡಗಳು ನಡೆದಿದ್ದರೆ ಅದರಲ್ಲಿ ಅಡಗಿರುವುದು ವೈಜ್ಞಾನಿಕ ತಂತ್ರಜ್ಞಾನ, ನಾವು ಇದನ್ನೆಲ್ಲ ನಂಭಿ ಮೂರ್ಖರಾಗುವ ಬದಲಿಗೆ ವೈಜ್ಞಾನಿಕ ಸತ್ಯವನ್ನು ಅರಿಯೋಣ, ದೇವರು ಎಂಬುದು ಕೇವಲ ಮನುವಾದಿ ಸೃಷ್ಟಿ, ಜಗತ್ತನ್ನು ಸೃಷ್ಟಿಸಿದ ದೇವರು ಭಾರತವನ್ನು ಹೊರತುಪಡಿಸಿ ಬೇರೆ ಯಾವ ದೇಶದಲ್ಲೂ ಇಲ್ಲ, ಭಾರತದ ಹಿಂದೂಗಳನ್ನು ಮುಕ್ಕೋಟಿ ದೇವತೆಗಳು ರಕ್ಷಿಸಿದರೆ ಇನ್ನಿತರೆ ಧರ್ಮಿಯರನ್ನ, ಜಗತ್ತಿನ ಇತರೆ ದೇಶವಾಸಿಗಳನ್ನ ರಕ್ಷಿಸುವವರು ಯಾರು? ಅಲ್ಲಿ ಮಳೆಸುರಿಸುವವರು ಯಾರು? ಪ್ರಳಯ ಸೃಷ್ಟಿಸುವವರು ಯಾರು?
ಸೂರ್ಯ,ಚಂದ್ರ,ಗಾಳಿ,ನೀರು,ನಕ್ಷತ್ರ,ಸೃಷ್ಟಿಲಯವನ್ನ ನಿಯಂತ್ರಿಸುವವರಾರು ಯಾರು? ಹಿಂದೂಗಳಿಗೆ ಭವಿಷ್ಯ ಹೇಳಲು, ವಾಸ್ತು ಸರಿಮಾಡಲು ಸಂಖ್ಯಾಶಾಸ್ತ್ರ, ವಾಸ್ತುಶಾಸ್ತ್ರಹೇಳುವವರು,ಜ್ಯೋತಿಷಿಗಳು,ಪೂಜಾರಿಗಳಿದ್ದಾರೆ ಇಂತವರ್ಯರು ಬೇರೆ ದೇಶಗಳಲ್ಲಿಲ್ಲ ಯಾಕೆ? ಅವರು ಕಾಯಿಲೆ ಬಂದಾಗ ಮೊದಲು ವೈದ್ಯರಬಳಿ ಹೋಗುತ್ತಾರೆ ನಾವು ದೇವರಬಳಿ ಹೋಗುತ್ತೇವೆ, ಕಾಲರ,ಪ್ಲೇಗು ಬಂದರೆ ಅವರು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದರೆ ನಾವು ಅವುಗಳನ್ನೇ ದೇವರೆಂದು ಪೂಜಿಸುತ್ತೇವೆ, ಅವರು ಮಳೆಗಾಗಿ ಕಾಡನ್ನು ಬೆಳೆಸಿದರೆ ನಾವು ಕಪ್ಪೆ,ಕತ್ತೆಗಳು ಮದುವೆ ಮಾಡುತ್ತೇವೆ, ಎಲ್ಲೋ ನಮ್ಮ ನಿಮ್ಮಂತೆ ಜೀವನೋಪಾಯಕ್ಕೆ ಕೆಲಸ ಮಾಡುವವನಿಗೆ ಅವಕಾಶ ಸಿಕ್ಕು ನಟನಾಗುತ್ತಾನೆ ಅವನಲ್ಲಿರುವ ಕಲೆಯನ್ನು ಗೌರವಿಸಬೇಕು, ಪ್ರೋತ್ಸಾಹಿಸಬೇಕು ಅದನ್ನು ಬಿಟ್ಟು ನಾವು ಪೂಜಿಸುತ್ತೇವೆ ನಮ್ಮ ಶ್ರಮದಹಣನೀಡಿ ನಾವೇ ಬೆಳಸಿದವನನ್ನ ನೋಡಲು ಕ್ಯೊ ನಿಲ್ಲುತ್ತೇವೆ , ದೇವರು ಅಷ್ಟೇ,ಎಲ್ಲಿಯೋ ಇದ್ದ ಕಲ್ಲನ್ನು ತಂದು ಗುಡಿಕಟ್ಟಿ ಪೂಜಿಸುತ್ತೇವೆ ನಾವೇ ಕಟ್ಟಿದ ಗುಡಿಗಳು ನಾವೇ ಸೃಷ್ಟಿಸಿದ ದೇವರುಗಳನ್ನು ಕಂಡು ಭಯಬೀಳುತ್ತೇವೆ ಯಾಕೆ?
ಸೂರ್ಯ ಚಂದ್ರ ಗ್ರಹಗಳು ಎಂದು ದೃಢಪಟ್ಟಿದ್ದರೂ ನಮ್ಮಲ್ಲಿರುವ ಮೂಢನಂಬಿಕೆ ನಮ್ಮಿಂದ ಹೋಗಲಿಲ್ಲ ಸಮಾಜಕ್ಕೆ ವೈಜ್ಞಾನಿಕ ಸತ್ಯವನ್ನು ತಿಳಿಸಬೇಕಿದ್ದ ವಿದ್ಯಾವಂತರು ಇಂಜಿನಿಯರ್ , ಡಾಕ್ಟರ್, ವಿಜ್ಞಾನಿಗಳು, ನ್ಯಾಯಾಧೀಶರು ಪರೋಕ್ಷವಾಗಿ ಪ್ರತ್ಯಕ್ಷವಾಗಿ ಈ ಸಮಾಜವನ್ನು ಮೌಢ್ಯಕ್ಕೆ ತಳ್ಳುವ ತಂತ್ರಗಾರಿಕೆ ನಡೆಸುತಿದ್ದಾರೆ ಯಾಕೆ? ಇದರಿಂದ ದೇಶಕ್ಕಾಗಲಿ, ದೇಶವಾಸಿಗಳಿಗಾಗಲಿ ಯಾವಲಾಭವಿದೆ, ಯಾತಕ್ಕಾಗಿ ಈ ಸಮಾಜವನ್ನು ಮನುವಾದಿಗಳು ದೇವರುಗಳ ಹೆಸರಿನಲ್ಲಿ ನಿಯಂತ್ರಣ ಮಾಡುತ್ತಾರೆ? ದೆವ್ವಗಳ ಹೆಸರಿನಲ್ಲಿ ಭಯಪಡಿಸುತ್ತಾರೆ? ಇದರಿಂದ ಪೂಜಾರಿಗಳಿಗೆ ಲಾಭವಿದೆ, ಜ್ಯೋತಿಷಿಗಳಿಗೆ ಲಾಭವಿದೆ, ಯಜ್ಞಯಾಗಮಾಡುವ ಜನಗಳಿಗೆ ಲಾಭವಿದೆ ಇವರೆಲ್ಲಾ ಶೇಕಡಾ 99,9% ಬ್ರಾಹ್ಮಣ ಸಮುದಾಯದಲ್ಲಿ ಸಿಗುತ್ತಾರೆ ಸಮಾಜವನ್ನು ಮೌಢ್ಯಕ್ಕೆ ತಳ್ಳಿ ದರೆ, ಅಜ್ಞಾನದಲ್ಲಿರಿಸಿದರೆ ಲಾಭವಾಗುವುದು ಯಾವಸಮುದಾಯಕ್ಕೆ ಎಂದು ಹೇಳಲು ಇದಕ್ಕಿಂತಲೂ ಹೆಚ್ಚಿನ ಮಾಹಿತಿ ಬೇಕಿಲ್ಲ.
(-ಲೇಖನ : ಹೆಚ್.ಕೆ.ಕೃಷ್ಣಅರಕೆರೆ
ಸಾಮಾಜಿಕ ಕಾರ್ಯಕರ್ತ
ಹೊನ್ನಾಳಿ)

ದಿನದ ಸುದ್ದಿ
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಇವರ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಬಹುದು. ಅರ್ಜಿ ನಮೂನೆಯನ್ನು ಸಂಬಂಧಿಸಿದ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ನಿರೀಕ್ಷಕರಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 11 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಚೇರಿ ದೂ ಸಂ:08192-237332 ಸಂಪರ್ಕಿಸಲು ಕಾರ್ಮಿಕ ಅಧಿಕಾರಿ ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ

ಸುದ್ದಿದಿನ ಡೆಸ್ಕ್ : ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ಸಮಿತಿ ತೀರ್ಪಿನ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಿನ್ನೆ ಹೇಳಿದ್ದಾರೆ.
ತಮಿಳುನಾಡಿಗೆ ನಾಳೆಯಿಂದ (ಸೆಪ್ಟಂಬರ್28) ಅಕ್ಟೋಬರ್ 15ರ ತನಕ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ನಂತೆ ನೀರು ಹರಿಸುವಂತೆ, ಕಾವೇರಿ ನದಿ ನೀರು ಸಮಿತಿ ನಿನ್ನೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಕಾವೇರಿ ನದಿ ನೀರು ಸಮಿತಿ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಈ ನಿರ್ದೇಶನ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ

ಸುದ್ದಿದಿನ, ಬಳ್ಳಾರಿ : ಸಿರಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಸವನಪೇಟೆ) ಮುಖ್ಯ ಗುರುಗಳಾದ ಶ್ರೀಮತಿ ಸುಮಂಗಳಾ ಮೇಟಿಯವರು 2023-24 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ವೃತ್ತಿ ಧರ್ಮ ನೇ ತನ್ನ ಸರ್ವಸ್ವ ಎಂದು ತಿಳಿದುಕೊಂಡಂತಹ ಶ್ರೀಮತಿ ಸುಮಂಗಳಾ ಮೇಟಿಯವರು, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಕರ್ತವ್ಯ ಹಾಗೂ ಸೇವೆಯನ್ನು ಸಲ್ಲಿಸಿದನ್ನು ಪರಿಗಣಿಸಿ ಈ ಹಿಂದೆಯೇ 2022-23 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಇವರ ಶಿಕ್ಷಣ ಕ್ಷೇತ್ರದಲ್ಲಿನ ಅಗಾಧವಾದ ಕರ್ತವ್ಯ ಮತ್ತು ಸೇವೆ ನಿಷ್ಠೆಯನ್ನು ಗುರುತಿಸಿದ ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ವತಿಯಿಂದ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಇದೇ ಸಂದರ್ಭದಲ್ಲಿ ಗ್ರಾಮಸ್ಥರು, ಸಮಸ್ತ ಶಿಕ್ಷಕರ ವರ್ಗದವರು, ಅತಿಥಿ ಶಿಕ್ಷಕರು, ಹಿತೈಷಿಗಳು, ಹಳೆಯ ವಿದ್ಯಾರ್ಥಿ ಬಳಗ, ಶಿಕ್ಷಣ ಪ್ರೇಮಿಗಳು, ಅಭಿಮಾನಿ ಬಳಗ,
ಮುಂತಾದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ5 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ4 days ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ