Connect with us

ಲೈಫ್ ಸ್ಟೈಲ್

ಪ್ರವಾಸ ಕಥನ | ಗೋಕಾಕ್ ನಲ್ಲೊಂದು ಸುತ್ತು..!

Published

on

Õಪ್ರವಾಸ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಮಗುವಿನಿಂದ ಹಿಡಿದು ಮುದುಕರವರೆಗೆ ಎಲ್ಲರೂ ಪ್ರವಾಸವನ್ನು ಆನಂದಿಸುವವರೇ ಹೆಚ್ಚು. ಅದರಲ್ಲೂ ನಾನು ಒಬ್ಳು ಪ್ರವಾಸ ಪ್ರೇಮಿ. ಪ್ರವಾಸ ಕಥನಗಳೆಂದರೆ ಅಚ್ಚುಮೆಚ್ಚು. ಹಾಗಂತ ನಾ ಏನು ಹೆಚ್ಚು ಪ್ರವಾಸ ಮಾಡಿಲ್ಲ. ನನಗೆ ಪ್ರಕೃತಿಯ ಸೊಬಗು ಹಾಗೂ ಹಳ್ಳಿಯ ಸೊಬಗನ್ನು ಸಂಪೂರ್ಣವಾಗಿ ಅನುಭವಿಸ್ಬೇಕು ಎಂಬ ಮಹಾದಾಸೆ. ನಾ ಹೋಗುವ ಪ್ರವಾಸಕ್ಕೆ ಇಂಥದ್ದೇ ಜಾಗವಾಗಬೇಕು ಎಂಬ ಅಭಿಲಾಶೆ ಏನಿಲ್ಲ. ಬಂಧುಗಳ ಮನೆಗಳನ್ನ ಹೊರತು ಪಡಿಸಿ ಕಾಡಿನ ಬುಡಕಟ್ಟು ಜನಾಂಗ, ಶೋಷಿತರ, ದಲಿತರ ಮನೆಗಳಿಗೆ ಹೋಗಿ ಅವರ ಜೀವನವನ್ನು ಗಮನಿಸುವುದರಲ್ಲಿ ನನಗದು ಹೆಚ್ಚು ಖುಷಿ.

ಆದರೆ ನಗರ ವಾಸಿಯಾದ ನನಗೆ ಹಳ್ಳಿಯ ಸೊಬಗನಾಗಲಿ ಪ್ರಕೃತಿಯ ಸೊಬಗನ್ನಾಗಲಿ ಅನುಭವಿಸುವುದಕ್ಕೆ ಅವಕಾಶಗಳು ದೊರೆಯಲೇ ಇಲ್ಲ. ಪುಸ್ತಕ ಪ್ರೇಮಿಯಾದ ನನಗೆ ಹಳ್ಳಿಯ ವಾತಾವರಣ, ಬಡವರ ಬವಣೆ, ಶೋಷಿತರ ಜೀವನದ ಕುರಿತ ಕಲ್ಪನೆಗಳು ನನಗಿವೆ. ಹೀಗಿರುವಾಗ ನಾನು ವಿಮಾನದಲ್ಲಿ ಹಾರುವುದು ಬಿಡಿ ಅದನ್ನ ಹತ್ತಿರದಿಂದಲೂ ಒಮ್ಮೆಯೂ ನೋಡಿಲ್ಲ; ವೋಲ್ವೋ ಬಸ್ಸಲ್ಲೂ ಕೂತಿಲ್ಲ. ಸ್ಲೀಪಿಂಗ್ ಕೋಚ್ ಬಸ್ಸಿನ ಮೆತ್ತನೆ ಹಾಸಿಗೆಯಲ್ಲೂ ನಿದ್ರಾ ಸುಖ ಅನುಭವಿಸಿಲ್ಲ. ಆದರೆ ಸಾಕಷ್ಟು ಬಾರಿ ರೈಲು ಪ್ರಯಾಣ ಮಾಡಿದ್ದೇನೆ ಅಷ್ಟೇ.

ಅಂತದ್ದೇ ಒಂದು ರೈಲು ಪ್ರಯಾಣ ಮತ್ತೊಮ್ಮೆ ದೊರಕಿತು. ಇಲ್ಲಿಯವರೆಗೂ ಅಪ್ಪ ಅಮ್ಮನನ್ನು ಬಿಟ್ಟು ದೂರದೂರಿಗೆ ಎಲ್ಲಿಯೂ ಹೋಗದ ನಾನು ಮೊದಲ ಬಾರಿಗೆ ಸ್ನೇಹಿತರೊಡನೆ ಕೂಡಿ ಗೋಕಾಕ್ ಕಡೆ ಪ್ರವಾಸ ಹೋಗುತ್ತಿರುವುದು ಮನಸಿಗೆ ಹೆಚ್ಚು ಖುಷಿ ನೀಡಿತು. ಕಾಯುತ್ತಿದ್ದ ಆ ದಿನವೂ ಬಂತು. ಅಪ್ಪ ಅಮ್ಮನಿಗೆ ಟಾಟಾ ಹೇಳಿ ಆಶೀರ್ವಾದವನ್ನು ಪಡೆದುಕೊಂಡು ಮಧ್ಯರಾತ್ರಿ 1.30ಕ್ಕೆ 7 ಜನರ ತಂಡ ಮನೆ ಬಿಟ್ಟೆವೂ. ಅದರಲ್ಲಿ ಶರತ್,ಶಿವರಾಜ್, ಚಂದ್ರಶೇಖರ್ ದೊಡ್ಡಮನಿ, ಗುರುಸ್ವಾಮಿ, ಗೌತಮಿ ಸೇರಿದಂತೆ ಇವರೆಲ್ಲಾ ನನ್ನ ಸೀನಿಯರ್ಸ್ ಆಗಿದ್ದರು. ವಿಶೇಷ ಅಂದ್ರೆ ನಮ್ಮೊಂದಿಗೆ ನನ್ನ ತಂಗಿ ಯುಗಶ್ರೀಯು ಬಂದಿದ್ದಳು. ಟ್ರೈನ್ ತುಂಬಾ ರೆಷ್ ಆಗಿದ್ದರಿಂದ ನಮಗೆ ಕುಳಿತುಕೊಳ್ಳಲು ಸ್ಥಳ ಸಿಗಲಿಲ್ಲ. ಕೊನೆಯ ಭೋಗಿಯಲ್ಲಿ ಸ್ಥಳ ಸಿಕ್ಕಿತು. ಇನ್ನೆನ್ನೂ ನಿದ್ದೆ ಜೋಂಪಿಗೆ ಹೋದ ನಮಗೆ ಯಾರೋ ಬಂದು ಹೊಡೆದು ಎಬ್ಬಿಸಿದ ಹಾಗಾಯ್ತು. ಕಣ್ಣು ಬಿಟ್ಟು ನೋಡಿದರೆ ನಾವು ಹುಬ್ಬಳ್ಳಿಯಲ್ಲಿ ಇದ್ದೆವು.

ರೈಲು ತನ್ನ ಕೊನೆ ಭೋಗಿಯನ್ನ ಕಳಚುವುದರ ಪರಿಣಾಮ ಆ ಭೋಗಿಯನ್ನು ಬಿಟ್ಟು ಬೇರೆಯ ಕಡೆ ಹೋಗಬೇಕಾಯ್ತು ಆದರೆ ಕುಳಿತುಕೊಳ್ಳಲು ಸ್ಥಳ ಸಿಗದೆ ಹೇಗೋ ನಾವು ಮುಂಜಾನೆ 10 ಗಂಟೆಗೆ ಗೋಕಾಕ್ ಸ್ಥಳಕ್ಕೆ ಬಂದಿಳಿದ್ದೆವು. ಕರ್ನಾಟಕದ ಹಲವೆಡೆ ಓಡಾಡಿದ್ದರೂ ಬೆಳಗಾವಿ ಜಿಲ್ಲೆಗೆ ಬಂದದ್ದು ಇದೇ ಮೊದಲು. ಬೆಳಗಾವಿ ಜಿಲ್ಲೆಯಲ್ಲಿ ಎರಡನೇ ಅತೀ ದೊಡ್ಡ ನಗರವಾದ ಗೋಕಾಕ್ ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿದೆ. ಹಚ್ಚ ಹಸಿರು ವಾತಾವರಣ ಹಾಗೂ ಏಸಿಯ ಹಾಗೆ ಸದಾ ಕೂಲ್ ಅಗಿರುವಂತಹ ಸ್ಥಳಕ್ಕೆ ನಮ್ಮನ್ನ ನಾವು ಮೈಗೂಡಿಸಿಕೊಂಡು ನಡೆಯಲಾರಂಭಿಸಿದೇವು.ಗೋಕಾಕ್‍ದಲ್ಲಿಯೂ ಹಳದಿ ಕೆಂಪು ತೋರಣಗಳು, ಬಾವುಟಗಳು ನಮಗೆ ಸ್ವಾಗತ ಕೋರಿದವು.

ತುಂಬಾ ಹಸಿದಿದ್ದ ನಾವು ಅಲ್ಲೇ ಒಂದು ಅಂಗಡಿಯಲ್ಲಿ ಮೆಣಸಿನಕಾಯಿ ಬಜ್ಜಿ, ಪೂರಿ, ಪಲಾವ್ ತಿಂದು ಟೀ ಕುಡಿದು ಗೋಕಾಕ್ ಅರಬ್ಬಿಯ ಕಡೆಗೆ ನಡೆದೆವು. ನಮ್ಮ ರಾಜ್ಯ ಜಲಪಾತಗಳ ತವರೂರು. ಸಿರಿ ಸೌಂದರ್ಯದ ರುದ್ರರಮಣೀಯ ಖಣಜಗಳು ಎಂದರೆ ಇಲ್ಲಿನ ಫಾಲ್ಸ್. ನಿಸರ್ಗ ಪ್ರಿಯರ ಆಕರ್ಷಣಿಯ ಕೇಂದ್ರ ಬಿಂದುವೂ ಹೌದು. ಪ್ರಕೃತಿಯ ಸುಂದರ ತಾಣಗಳಲ್ಲಿ ಒಂದಾದ ಹಾಗೂ ಮಳೆಗಾಲದಲ್ಲಿ ಮೈದುಂಬಿ ಹರಿಯುವುದು ಗೋಕಾಕ್ ಜಲಪಾತದ ವಿಶೇಷ. ಮಳೆಗಾಲ ಇದೀಗ ಪ್ರಾರಂಭವಾದರಿಂದ ನೀರು ತೀರಾ ಕಡಿಮೆ ಇತ್ತು.

ಗೋಕಾಕ್ ಜಲಪಾತವನ್ನು ಪ್ರವೇಶಿಸುತ್ತಿದ್ದಾಗೆ ನಮ್ಮ ಕಣ್ಣಿಗೆ ಕಂಡದ್ದು ಹಳೆಕಾಲದ ಕಾಟನ್ ಮಿಲ್ ಅದು ನೋಡುವುದ್ದಕ್ಕೆ ಡಿಟೋ ಇಂಡಿಯನ್ ಆಕ್ಸ್‍ಫಾರ್ಡ್ ವಿಶ್ವವಿದ್ಯಾನಿಲಯದ ತರನೆ ಇತ್ತು. ಅಲ್ಲಿಂದ ಕೆಳಗಿಳಿದು ಹೋದರೆ ನಮ್ಮ ಕಣ್ಣಿಗೆ ಕಾಣಸಿಗುವುದು ತೂಗು ಸೇತುವೆ.

ಅಪರೂಪದ ತೂಗು ಸೇತುವೆ

ಪೂರ್ವಭಿಮುಖವಾಗಿ ಹರಿಯುವ ಘಟಪ್ರಭೆಗೆ, ದಕ್ಷಿಣೋತ್ತರವಾಗಿ ತಂತಿಯ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಅಪರೂಪದ ತೂಗುವ ತಂತಿಯ ಸೇತುವೆ ಕರ್ನಾಟಕದಲ್ಲಿ ಬೇರಾವ ನದಿಗೂ ನಿರ್ಮಿಸಿಲ್ಲ. ಇದರ ಮೇಲೆ ನಿಂತು ನದಿಯ ಅಂದವನ್ನು ವೀಕ್ಷಿಸುವುದೇ ಒಂದು ಭಾಗ್ಯ. ಈ ಸೇತುವೆಯ ಮೇಲೆ ನಡೆದಾಡುವುದರೊಂದಿಗೆ ಪುಳಕಗೊಳ್ಳುವ ಅವಕಾಶ ಇರುವುದು ಗೋಕಾಕ್ ಜಲಪಾತದಲ್ಲಿ ಮಾತ್ರ.

1 ಮೀ ಅಗಲ, 210ಮೀ (659 ಅಡಿ) ಉದ್ದವಿರುವ ಅಪರೂಪದ ಈ ತಂತಿ ಸೇತುವೆ ಅದ್ಭುತವಾಗಿದೆ. ನದಿಯ ಒಂದು ದಂಡೆಯಿಂದ ಇನ್ನೊಂದು ದಂಡೆಗೆ ಕಾಲ್ನಡಿಗೆಯಲ್ಲಿ ತಲುಪಲು ಈ ತೂಗುಸೇತುವೆ ಸರಳ ದಾರಿಯಾಗಿದೆ. ನದಿಯ ಕಲ್ಲುಬಂಡೆ ಹಾಸಿಗೆಯಿಂದ 14ಮೀ (46 ಅಡಿ) ಎತ್ತರದಲ್ಲಿ ಈ ತೂಗು ಸೇತುವೆ ನಿರ್ಮಿಸಲಾಗಿದ್ದು, ನದಿಯಲ್ಲಿ ಭರ್ತಿ ನೀರು ಬಂದಾಗ ಸೇತುವೆ ಮೇಲಿಂದ ಅಡ್ಡಾಡುವುದೇ ಒಂದು ರಸಘಳಿಗೆ. ಇದರ ಮೇಲೆ ಚಲಿಸುವಾಗ ಹೊಸಬರಾದ ನಮಗೆ ಭಯವಾದದ್ದು ಸಹಜ. ಕೆಳಗೆ ರಭಸದಿಂದ ಹರಿಯುವ ಕತ್ತಿ(ನೀರು ಅತ್ಯಂತ ರಭಸವಾಗಿ ಹರಿಯುವುದರಿಂದ ಕತ್ತಿ ನದಿಯೆಂಬ ಹೆಸರು ಬಂದಿದೆ) ನದಿಯ ಮೇಲಿನ ನಾವೆಯಲ್ಲಿ ಕುಳಿತು ಪ್ರಯಾಣಿಸಿದ ಅನುಭವವಾಗುತ್ತದೆ.

ಇಂತಹ ಸೇತುವೆ ಮೇಲೆ ನಡೆದಾಡುವುದೇ ಒಂದು ಥ್ರಿಲ್. ಇದರ ಮೇಲೆ ನಡೆದುಕೊಂಡು ಹೋಗುವಾಗ ವಾಯುದೇವನೂ ಕೂಡಾ ಒಂದು ಕ್ಷಣ ಎಂತಹ ಮನಸುಗಳಲ್ಲೂ ಭಯದ ವಾತವರಣವನ್ನು ಸೃಷ್ಟಿಸಿಬಿಡುತ್ತಾನೆ. ರಭಸವಾಗಿ ಗಾಳಿ ಬೀಸಿದರೆ ಸಾಕು ಆಯ ತಪ್ಪಿ ಎಲ್ಲಿ ನಾವೇ ಗಾಳಿಯೊಂದಿಗೆ ತೇಲಿಹೋಗುತ್ತೇವೆಯೋ ಎಂಬ ಭಯದಲ್ಲೊಮ್ಮೆ ಚಿಟಾರನೆ ಚಿರುವುಂತಹ ಘಳಿಗೆ ರಸದೌತಣವಾಗಿರುತ್ತದೆ. ಕತ್ತಿಹೊಳೆಯೆಂದೆ ಖ್ಯಾತಿಪಡೆದ ಘಟಪ್ರಭೆ ಬೆಳಗಾವಿ ಜಿಲ್ಲೆಯಲ್ಲಿ ಎರಡನೇ ಅತೀ ದೊಡ್ಡ ನಗರವಾಗಿದ್ದು ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿದೆ. ಘಟಪ್ರಭಾ ನದಿಗೆ ಕತ್ತಿಹೊಳೆ ಎಂದು ಕರೆಯುತ್ತಾರೆ. ತಾಮ್ರಪರ್ಣಿ ಮತ್ತು ಹಿರಣ್ಯಕೇಶಿ ನದಿಗಳು ಘಟಪ್ರಭೆಯನ್ನು ಸೇರುತ್ತವೆ. ಮಳೆಗಾಲದಲ್ಲಿ ಕಾಫಿ ಚಹಾ ವರ್ಣಕ್ಕೆ ತಿರುಗುತ್ತವೆ. ಶ್ವೇತವರ್ಣದಲ್ಲು ತಿಳಿಗೊಂಡು ಹಾಲಿನಂತೆ ನೊರೆ ನೊರೆಯಾಗಿ ಹರಿಯುತ್ತದೆ. ಇದರ ಸೊಬಗನ್ನು ನೋಡಲು ಕಣ್ಣೆರಡು ಸಾಲದು. ನೀರಿನ ರಭಸ, ಹಾಲ್ನೊರೆಯಂತಹ ಬಣ್ಣ, ಗಂಭೀರವಾದಂತಹ ಸದ್ದು, ಹತ್ತಿರದ ಸ್ಥಳಗಳಲ್ಲಿ ತಂಪಾದ ನೀರಿನ ಚಿಕ್ಕ ಚಿಕ್ಕ ಹನಿಗಳ ಸಿಂಚನ ಇವೆಲ್ಲವೂ ಸೇರಿ ನಮ್ಮ ಮನದಲ್ಲಿ ರೋಮಾಂಚನದೊಂದಿಗೆ ತಾಜತನದ ಅನುಭವವನ್ನು ನೀಡುತ್ತಿತ್ತು.

ಇದರ ಸುಂದರತೆ ಮತ್ತು ರಮಣೀಯತೆಯನ್ನು ಅತೀ ಸಮೀಪದಿಂದ ಸವಿಯುವಂತಹ ವಾತವರಣವಿದ್ದು, ಧಬಧಬ ಧರೆಗಿಳಿಯುವ ಭಯಂಕರ ಪ್ರವಾಹದಂತೆ ಘಟಪ್ರಭೆ 84 ಅಡಿ ಎತ್ತರದಿಂದ ಧುಮ್ಮಿಕ್ಕುವ ದೃಶ್ಯವನ್ನು ನೋಡಿಯೇ ಸವಿಯಬಹುದು. ಘಟಪ್ರಭೆ ಭಾರಿ ರಭಸದಿಂದ ಪ್ರಪಾತಕ್ಕೆ ಧುಮುಕುವಾಗ, ಸಿಡಿ ಮದ್ದು ಸಿಡಿದಂತೆ ನೀರು ಝಲ್ಲೆಂದು ಪುಟಿದೇಳುತ್ತದೆ. ಪ್ರಕೃತಿಯ ಆ ಅಗಾಧ ಸೌಂದರ್ಯವನ್ನು ಕಣ್ಣಿಂದ ಕಾಣಬೇಕು ಮತ್ತು ಇಂಪಾದ ಸದ್ದನ್ನು ಕಿವಿಂದ ಆಲಿಸಬೇಕು. ಪ್ರವಾಹದಂತೆ ಧುಮುಕುವ ಘಟಪ್ರಭೆ ನಂತರ ಮಂದಗಮನೆಯಾಗಿ ಮೆಲ್ಲನೆ ಚಲಿಸುವ ಈಕೆಯ ಸೌಂದರ್ಯ ನೋಡುವುದೇ ಸಂಭ್ರಮ.
ಭಾರತದ ನಯಾಗರ ಫಾಲ್ಸ್ ಎಂಬ ಹೆಗ್ಗಳಿಕೆ
ಘಟಪ್ರಭೆಯ ಸುತ್ತಲೂ ಎಲ್ಲಿ ನೋಡಿದರೂ ಹಚ್ಚ ಹಸಿರು. ಬೆಟ್ಟ ಗುಡ್ಡಗಳದ್ದೇ ಕಾರುಬಾರು.

ಇಲ್ಲಿಗೆ ಬರುವ ಪ್ರವಾಸಿಗರನ್ನು ಹಸಿರು ದೇವತೆ ಪ್ರೀತಿಸುವ ಬಗೆಯನ್ನು ಕಂಡು ಇಲ್ಲಿಂದ ಹೊರಡಲು ಮನಸ್ಸಾಗದಷ್ಟು ರಮಣೀಯತೆ ಇಲ್ಲಿದೆ. ನಿಸರ್ಗದ ಸಂಧರತೆಯನ್ನು ಸವಿಯುವುದರೊಂದಿಗೆ ಇಲ್ಲಿ ಐತಿಹಾಸಿಕ ಮಹಾಲಿಂಗೇಶ್ವರನ ದೇವಾಲಯವಿದೆ.
177 ಮೀಟರ್ (581 ಅಡಿ) ಅಗಲದ ಬಂಡೆಗಳಲ್ಲಿ ಮೇಲಿಂದ 52 ಮೀಟರ್ (171 ಅಡಿ) ಆಳದ ಕಂದಕಕ್ಕೆ ಘಟಪ್ರಭಾ ನದಿಯ ನೀರು ಧುಮ್ಮಿಕ್ಕುವುದು ಗೋಕಾಕ್ ಜಲಪಾತದ ವೈಶಿಷ್ಟ್ಯ. ವಿಶಾಲ ಬಂಡೆಗಲ್ಲಿನ ಮೇಲಿಂದ ನೀರು ಧುಮ್ಮಿಕ್ಕುವುದರಿಂದ ಈ ಜಲಪಾತವನ್ನು “ಮಿನಿ ನಯಾಗರಾ” ಎಂದು ಕರೆಯಲಾಗುತ್ತದೆ.

ಮೊದಲ ಬಾರಿಗೆ ವಿದ್ಯುತ್ ಉತ್ಪಾದಿಸಿದ ಕೇಂದ್ರ
ನೀರು ಧುಮ್ಮಿಕ್ಕುವ ಕಂದಕದ ಬಳಿ ಇರುವ ವಿದ್ಯುತ್ ಉತ್ಪಾದನೆ ಕೇಂದ್ರವನ್ನು ಬ್ರಿಟೀಷ್ ಕಾಲದಲ್ಲೇ ನಿರ್ಮಿಸಲಾಗಿದೆ. 1887ರಲ್ಲಿ ಕಾರ್ಯರಂಭ ಮಾಡಿದ್ದು, ರಾಜ್ಯದಲ್ಲೇ ಮೊದಲ ಬಾರಿ ವಿದ್ಯುತ್ ಉತ್ಪಾದಿಸಿದ ಕೇಂದ್ರ ಎಂಬ ಹೆಗ್ಗಳಿಕೆ ಪಡೆದಿದೆ. ತದನಂತರ ಬೆಂಗಳೂರಿನಲ್ಲಿ ಆರಂಭಿಸಲಾಯಿತು.ಮಹಾಲಿಂಗೇಶ್ವರ ದೇವಾಸ್ಥಾನ ಇನ್ನೂ ಈ ಸ್ಥಳದ ಕುತೂಹಲಕಾರಿ ಅಂಶವೆಂದರೆ ಚಾಲುಕ್ಯರ ಕಾಲಕ್ಕೆ ಸೇರಿದ ಸ್ಮಾರಕಗಳು ಇಲ್ಲಿನ ಕಲ್ಲಿನ ಕಣಿವೆಯ ಎರಡೂ ದಂಡೆಗಳಲ್ಲಿ ದೊರೆತಿರುವುದು. ಈ ಸ್ಥಳದ ಮತ್ತೊಂದು ಆಕರ್ಷಣೆ ಎಂದರೆ ಚಾಲುಕ್ಯ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಮಹಾಲಿಂಗೇಶ್ವರನ ದೇವಾಸ್ಥಾನ.

ಟ್ರೆಕ್ಕಿಂಗ್ ಗೆ ಹೇಳಿಮಾಡಿಸಿದ ಸ್ಥಳ

ಗೋಕಾಕ್ ಫಾಲ್ಸ್ ಧುಮ್ಮಿಕ್ಕುವುದ್ದನ್ನು ಕೆಳಗಿನಿಂದ ನೋಡಬೇಕೆಂದರೆ ಸುಮಾರು 2 ರಿಂದ 3 ಕಿ.ಮೀ ಕೆಳಗೆ ನಡೆದುಹೋಗಬೇಕು. ಕರ್ನಾಟಕದ ಕರಾವಳಿ ಮತ್ತು ಮಲೆನಾಡಲ್ಲಿ ಧೋ ಧೋ ಎಂದು ಮಳೆಯಾಗಿ ಒಂದು ಹಂತಕ್ಕೆ ಬಂದು ನಿಂತ ಮೇಲೆ ಟ್ರೆಕ್ಕಿಂಗ್‍ಗೆ ಅಣಿಯಾಗುವಂತಹ ಸಾಹಸಿಗರಿಗೆ ಗೋಕಾಕ್ ಜಲಪಾತ ಹೇಳಿಮಾಡಿಸಿದಂತಹ ಸ್ಥಳವಾಗಿದೆ. ಇಲ್ಲಿ ನಡೆಯುತ್ತ ಹೋದರೆ ಡಿಟೋ 6-5=2 ಮೂವೀಯಲ್ಲಿ ಇರುವಂತಹ ಟ್ರೆಕ್ಕಿಂಗ್‍ನ ಅನುಭವ ನೀಡುತ್ತದೆ. ಆದರೆ ಅಲ್ಲಿ ದೆವ್ವ ಇರುತ್ತೆ ಇಲ್ಲಿ ನಾವೇ ದೆವ್ವಗಳಾಗಿರುತ್ತವೆ. ದೊಡ್ಡ ದೊಡ್ಡ ಬಂಡೆಗಳು, ಜಾರುವಂತಹ ಕಲ್ಲುಗಳು, ತೊರೆಗಳು, ಗಿಡ ಮರಗಳು, ನಮ್ಮ ಧ್ವನಿ ನಮಗೆ ಪಿಸುಗುಡುವಂತಹ ನಿಶಬ್ಧ ವಾತವರಣ ಹೀಗೆ ಇವೆಲ್ಲಾ ಸೇರಿ ಎಂತಹವರಿಗೂ ಪ್ರಕೃತಿ ಮೇಲೆ ಲವ್ ಆಗಿಬಿಡುತ್ತದೆ.

ಗೋಕಾಕ್ ಸ್ಪೇಷಲ್ ಕರದಂಟು

ಗೋಕಾಕ್ ಬಗ್ಗೆ ಇಷ್ಟೇಲ್ಲಾ ಹೇಳಿ ಕರದಂಟನ್ನು ಮರೆಯಲು ಸಾಧ್ಯವೇ? ಬೆಳಗಾವಿಯತ್ತ ಪ್ರಯಾಣ ಬೆಳೆಸಿದರೆ ಅಲ್ಲಿಯ ಕುಂದ ಹಾಗೂ ಗೋಕಾಕ್‍ನ ಕರದಂಟು ಅಥವಾ ಅಂಟುಹುಂಡೆಯನ್ನು ಸವಿಯದೆ ಬಂದವರೆ ಇಲ್ಲ. ಅಂಟು ಹಾಕಿ ತಯಾರಿಸುವ ಈ ಉಂಡೆಯನ್ನು ಕರ(ಕೈ)ದಲ್ಲಿ ಉಂಡೆ ಕಟ್ಟುವುದರಿಂದ ಈ ಹೆಸರು ಬಂದಿರಲೂಬಹುದು ಅಲ್ವಾ? ಅದೇನೆ ಇರಲಿ, ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಕೊಬ್ಬರಿ ತುರಿ, ಗಸಗಸೆ, ಅಂಟು, ಬೆಲ್ಲ, ತುಪ್ಪ ಹೀಗೆ ಇವೆಲ್ಲವನ್ನು ಹಾಕಿ ಮಾಡಿದಂತಹ ಕರದಂಟು ಆರೋಗ್ಯಕರವಾದಂತಹ ತಿನಿಸಾಗಿದೆ. ಈ ಗಿರಮಿಟ್ ಜತೆ ಗೋಕಾಕ್‍ನ ಕರದಂಟನ್ನು ಮೆಲ್ಲುತ್ತ ಭೋರ್ಗರೆಯುವ ಜಲಪಾತ ನೋಡುತ್ತಿದ್ದಾರೆ ನಮ್ಮ ಕಣ್ಣಿಗೆ ಹಬ್ಬವಾಗುವುದರೊಂದಿಗೆ ಬಾಯಿಗೆ ಸಿಹಿಯೂ ಆಗುವುದರಲ್ಲಿ ಸಂಶಯವೇ ಇಲ್ಲ!

ಪ್ರವಾಸಿಗರ ತಾಣ

ನೋಡುಗರ ಆಕರ್ಷಣೀಯ ಕೇಂದ್ರ ಬಿಂದುವಾದ ಗೋಕಾಕ್ ಫಾಲ್ಸ್ ಅನ್ನು ನೋಡಲು ಪಕ್ಕದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ದೂರದೂರದ ಊರಿಂದ ಪ್ರವಾಸಿಗರು ಈ ಸೌಂದರ್ಯವನ್ನು ಸವಿಯಲು ಬರುತ್ತಾರೆ. ಸೆಲ್ಫೀ, ಫೋಟೋ ತೆಗೆಸಿಕೊಳ್ಳುವುದರೊಂದಿಗೆ ಬೆಟ್ಟದ ಇಕ್ಕೆಲ್ಲಗಳಲ್ಲಿ ಜೋಡಿಸಿರುವ ತೂಗು ಸೇತುವೆಯಲ್ಲಿ ಕೇಕೆ ಹೊಡೆದು ಕುಣಿದು ಕುಪ್ಪಳಿಸುತ್ತಾರೆ. ಒಟ್ಟಾರೆಯಾಗಿ ಈ ಸಮಯವೂ ಪ್ರವಾಸಿಗರಿಗೆ ಪ್ರವಾಸ ಮಾಡಲು ಹೇಳಿಮಾಡಿಸಿದಂತಹ ಸ್ಥಳವಾಗಿದೆ.

ಮಾರ್ಗ

ಗೋಕಾಕ್ ಜಲಪಾತ ಬೆಳಗಾವಿಯಿಂದ 58 ಕಿ.ಮೀ. ಹಾಗೂ ಗೋಕಾಕ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿದೆ. ಈ ಜಲಪಾತ ಕೊಲ್ಲಾಪುರದಿಂದ 100 ಕಿ.ಮೀ., ಸಾಂಗ್ಲಿಯಿಂದ 66 ಕಿ.ಮೀ ಪಣಜಿಯಿಂದ 140 ಕಿ.ಮೀ ದೂರದಲ್ಲಿದೆ. ಗೋಕಾಕ್ ರೋಡ್ ಮತ್ತು ಘಟಪ್ರಭಾ ರೈಲ್ವೆ ನಿಲ್ದಾಣಗಳು ಜಲಪಾತದಿಂದ 10 ಕಿ.ಮೀ ಅಂತರದಲ್ಲಿದೆ. ಬೆಳಗಾವಿ, ಗೋಕಾಕ್ ಮತ್ತು ನಗರ ಪ್ರದೇಶಗಳಿಂದ ಜಲಪಾತಕ್ಕೆ ಸಾರಿಗೆ ಸಂಸ್ಥೆಯ ಬಸ್ ಸೌಕರ್ಯ ಇದೆ. ಖಾಸಾಗಿ ವಾಹನಗಳ ಮೂಲಕವೂ ಗೋಕಾಕ್ ಜಲಪಾತದ ಸ್ಥಳ ತಲುಪಬಹುದು.

ಪ್ರೀತಿ.ಟಿ.ಎಸ್
ಪತ್ರಿಕೋದ್ಯಮ ವಿದ್ಯಾರ್ಥಿನಿ
3ನೇ ಸೆಮಿಸ್ಟರ್
ದಾವಣಗೆರೆ ವಿಶ್ವವಿದ್ಯಾನಿಲಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಕ್ರೀಡೆ

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

Published

on

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.

6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ಜಾತಿಗಣತಿ ಮರು ಸಮೀಕ್ಷೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಹೇಳಿದ್ದಾರೆ.

54 ಮಾನದಂಡಗಳನ್ನು ಇಟ್ಟುಕೊಂಡು ಹೋಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಚಾರದಲ್ಲಿ ಸರಿಯಾದ ಸ್ಪಷ್ಟತೆ ನೀಡಬೇಕು ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ ಜಾತಿ ಗಣತಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು161 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿ, ಇದೀಗ ಜಾತಿ ಜನಗಣತಿಯನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

RCB ಸಂಭ್ರಮಾಚರಣೆ : 18 ರೂಪಾಯಿಗೆ ಬಿರಿಯಾನಿ ಮಾರಾಟ

Published

on

ಸುದ್ದಿದಿನ,ಬೆಂಗಳೂರು:ಆರ್‌ಸಿಬಿ ವಿಜಯೋತ್ಸವದಲ್ಲಿ ಬೆಂಗಳೂರು ಮಿಂದೆದ್ದಿದೆ. ಜನ ವಿಭಿನ್ನ ರೀತಿಯಲ್ಲಿ ತಮ್ಮ ಸಂಭ್ರಮಾಚರಣೆ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ ರೆಸ್ಟೋರೆಂಟ್‌ಗಳೂ ಕೂಡ ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ವ್ಯಾಪಾರ ಮಾಡಿವೆ.

ಬೆಂಗಳೂರಿನ #NativeCooks ಫುಡ್‌ ಡೆಲಿವರಿ ಸಂಸ್ಥೆಯು ಕೇವಲ 18 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿದೆ.

ಹೌದು, ಹೆಬ್ಬಾಳ, ಆರ್‌ಟಿ ನಗರ, ಸದಾಶಿವನಗರದಲ್ಲಿ ಡೆಲಿವರಿ ಶುಲ್ಕವಿಲ್ಲದೆ ಅತಿ ಕಡಿಮೆ ದರದಲ್ಲಿ ಫುಡ್‌ ಡೆಲಿವರಿ ಮಾಡುತ್ತಿರುವ #NativeCooks ಸಂಸ್ಥೆಯು ಆರ್‌ಸಿಬಿ ಅಭಿಮಾನಿಗಳನ್ನು ಖುಷಿಪಡಿಸಲು ಈ ರೀತಿ ಹೊಸ ಆಫರ್‌ ಬಿಟ್ಟಿತ್ತು. ಮೂಲಗಳ ಪ್ರಕಾರ ಸುಮಾರು ಒಂದು ಸಾವಿರ ಬಿರಿಯಾನಿ ಲಂಚ್‌ಬಾಕ್ಸ್‌ಗಳನ್ನು ತಲಾ 18ರೂಪಾಯಿಯಂತೆ ಮಾರಾಟ ಮಾಡಿದೆ.

ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ನೇಟೀವ್‌ ಕುಕ್ಸ್‌ ಸಂಸ್ಥೆಯು ಹೆಣ್ಣುಮಕ್ಕಳೇ ಸೇರಿ ನಡೆಸುತ್ತಿರುವ ಪುಟ್ಟ ಕೇಟರಿಂಗ್‌ ಆಗಿದೆ. ವಾರದಲ್ಲಿ 6 ದಿನಗಳ ಕಾಲ ಕಾರ್ಯ ನಿರ್ವಹಿಸುವ ಈ ಕೇಟರಿಂಗ್.‌ ವೆಜ್‌ ಊಟವನ್ನು ಕೇವಲ 80 ರೂಪಾಯಿಗೆ ಹಾಗೂ ನಾನ್‌ವೆಜ್‌ ಊಟವನ್ನು 135 ರೂಪಾಯಿಗೆ ಹಾಗೂ ಎಕ್‌ ಮೀಲ್‌ಅನ್ನು ಕೇವಲ 110 ರೂಪಾಯಿಗೆ ಮಾರಾಟ ಮಾಡುತ್ತಿದೆ.

ಸದ್ಯಕ್ಕೆ ಹೆಬ್ಬಾಳ, ಆರ್‌ಟಿನಗರ ಹಾಗೂ ಸದಾಶಿವನಗರಕ್ಕೆ ಡೆಲಿವರಿ ಶುಲ್ಕ ಇಲ್ಲದೇ ಆಹಾರ ವಿತರಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 80 4853 6206 ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ24 hours ago

ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ವಿಶ್ವವಿದ್ಯಾನಿಲಯಗಳಲ್ಲಿ ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್ ಮಾದರಿಯಲ್ಲಿ ಫೇಲೋಶಿಪ್ ಅಥವಾ ವಿದ್ಯಾರ್ಥಿವೇತನಕ್ಕೆ ಅನ್‍ಲೈನ್ ಮೂಲಕ ಅರ್ಜಿ...

ದಿನದ ಸುದ್ದಿ24 hours ago

ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್

ಸುದ್ದಿದಿನ,ದಾವಣಗೆರೆ:ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಜುಲೈ 12 ರಂದು ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್...

ದಿನದ ಸುದ್ದಿ24 hours ago

ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ

ಸುದ್ದಿದಿನ,ದಾವಣಗೆರೆ:ಇದೇ 12 ರಂದು ಮಧ್ಯಾಹ್ನ 3 ಗಂಟೆಗೆ ನಗರದ ದೊಡ್ಡಬೂದಿಹಾಳ್ ರಸ್ತೆಯಲ್ಲಿರುವ ತಾಜ್ ಪ್ಯಾಲೇಸ್‍ನಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ...

ದಿನದ ಸುದ್ದಿ4 days ago

ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ

ಸುದ್ದಿದಿನ,ಬಳ್ಳಾರಿ:ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಹಿಳಾ ಆಯವ್ಯಯ ಹಾಗೂ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಸ್ನಾತಕೋತ್ತರ ಪದವೀಧರರಿಗೆ...

ದಿನದ ಸುದ್ದಿ7 days ago

ಕ್ರೀಡಾ ಸಾಮಾಗ್ರಿಗಳ ಸರಬರಾಜಿಗೆ ಯುವ ಸಂಘಗಳಿಂದ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಯುವ ಚೈತನ್ಯ ಕಾರ್ಯಕ್ರಮದಡಿ ಕ್ರೀಡಾ ಕಿಟ್‍ಗಳನ್ನು ಸರಬರಾಜು ಮಾಡಲು ಯುವಕ, ಯುವತಿಯರ ಸಂಘಗಳಿಂದ ಸೇವಾ ಸಿಂಧೂ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ ಲೈನ್...

ದಿನದ ಸುದ್ದಿ1 week ago

ಎಂಪೈರ್ ಟ್ರೇಡಿಂಗ್ ಕಂಪನಿಯಲ್ಲಿ ಹಣವನ್ನು ತೊಡಗಿಸಿ ಮೋಸ : ದೂರು ದಾಖಲು

ಸುದ್ದಿದಿನ,ದಾವಣಗೆರೆ:ದಾವಣಗೆರೆ ನಗರದ ಡಿಸಿಎಂ ಲೇಔಟಿನ ಎಂಎಸ್‍ಎಂ ಪ್ಲಾಜಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆನ್‍ಲೈನ್ ರಿಂಗ್ ವ್ಯವಹಾರ ನಡೆಸಲು ತೆರೆದಿರುವ ಎಂಪೈರ್ ಟ್ರೇಡಿಂಗ್ ಕಂಪನಿ ತೆರೆದುಕೊಂಡು ಸಾರ್ವಜನಿಕರಿಂದ ಹಣವನ್ನು ಆರೋಪಿತರಾದ...

ದಿನದ ಸುದ್ದಿ2 weeks ago

ಡ್ರಗ್ಸ್ ಕತ್ತಲೆ ಪ್ರಪಂಚ, ಈಗಿನ ಯುವ ಸಮೂಹ ಅರಿತು ದೂರವಿರಬೇಕು : ಐಜಿ ಡಾ: ರವಿಕಾಂತೇಗೌಡ

ಸುದ್ದಿದಿನ,ದಾವಣಗೆರೆ:ಡಗ್ಸ್ ಕತ್ತಲ ಪ್ರಪಂಚ, ಈ ಜಾಲದ ಬಗ್ಗೆ ಅರಿತು ಯುವ ಸಮೂಹ ದೂರವಿರಬೇಕೆಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಡಾ.ಬಿ.ಆರ್ ರವಿಕಾಂತೇಗೌಡ ವಿದ್ಯಾರ್ಥಿಗಳಿಗೆ ತಿಳಿಸಿದರು. ಗುರುವಾರ(ಜೂನ್.26) ರಂದು...

ದಿನದ ಸುದ್ದಿ2 weeks ago

ಮಾದಕ ವಸ್ತುಗಳ ಸಾಗಣೆ ತಡೆಗೆ ಸ್ಕ್ಯಾನರ್ ಅಳವಡಿಕೆಗೆ ಚಿಂತನೆ : ನ್ಯಾಯಾಧೀಶೆ ವೇಲಾ ಡಿ.ಕೆ

ಸುದ್ದಿದಿನ,ದಾವಣಗೆರೆ:ಜಾಗತಿಕವಾಗಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ನಮ್ಮದಾಗಿದ್ದು ಯುವ ಸಂಪತ್ತನ್ನು ಕಾಪಾಡಿಕೊಳ್ಳಲು ಮಾದಕ ವಸ್ತುಗಳಿಂದ ದೂರವಿರಲು ಇದರ ಸಾಗಾಟ ಮತ್ತು ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ...

ದಿನದ ಸುದ್ದಿ2 weeks ago

ಪೋನ್ – ಇನ್ ಕಾರ್ಯಕ್ರಮದಲ್ಲಿ‌ ಎಸ್ ಪಿ ಉಮಾ‌ ಪ್ರಶಾಂತ್ ; ನೇರ ಸಂವಾದಲ್ಲಿ ನೀವೂ ಪಾಲ್ಗೊಳ್ಳಿ

ಸುದ್ದಿದಿನ,ದಾವಣಗೆರೆ:ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಅವರು ನಾಳೆ ಪೋನ್ –ಇನ್ ಕಾರ್ಯಕ್ರಮದ ಮೂಲಕ ನೇರಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ದಾವಣಗೆರೆ ಜಿಲ್ಲೆಯನ್ನು...

ದಿನದ ಸುದ್ದಿ2 weeks ago

ಎಸ್.ಎಸ್.ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಶಾಮನೂರು ಶಿವಶಂಕರಪ್ಪ ಚಾಲನೆ

ಸುದ್ದಿದಿನ,ದಾವಣಗೆರೆ:ದಾವಣಗೆರೆಯ ಕೆ.ಆರ್. ರಸ್ತೆಯಲ್ಲಿರುವ ಎಸ್.ಎಸ್. ಜನರಲ್ ಆಸ್ಪತ್ರೆ, ದಾವಣಗೆರೆ ದಕ್ಷಿಣದ ಜನರಿಗೆ, ವಿಶೇಷವಾಗಿ ನಗರದ ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ಕೈಗೆಟುಕುವ, ಸುಲಭವಾಗಿ ಸಿಗುವ ಆರೋಗ್ಯ ಸೇವೆಯನ್ನು ಒದಗಿಸಲು...

Trending