ದಿನದ ಸುದ್ದಿ
ಯೋಗ ದಿನಕ್ಕೆ ಭರ್ಜರಿ ತಾಲೀಮು
ಸುದ್ದಿದಿನ ಡೆಸ್ಕ್: ಜೂ. 21ರಂದು ವಿಶ್ವ ಯೋಗದಿನದ ಅಂಗವಾಗಿ ನಡೆದ ತಾಲೀಮಿನಲ್ಲಿ ಹತ್ತು ಸಾವಿರ ಮಂದಿ ಪಾಲ್ಗೊಂಡು ಮತ್ತೊಂದು ವಿಶ್ವ ದಾಖಲೆಯಾಗುವ ಮುನ್ಸೂಚನೆ ನೀಡಿದರು.
ಮೈಸೂರಿನ ರೇಸ್ ಕೋರ್ಸ್ ನಲ್ಲಿ ಭಾನುವಾರ ನಡೆದ ತಾಲೀಮಿನಲ್ಲಿ ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಗಣ್ಯರು ಯೋಗ ಮಾಡಿದರು.
ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಯೋಗ ದಿನಕ್ಕಾಗಿ ನಡೆದ ಎರಡನೇ ಹಾಗೂ ಅಂತಿಮ ತಾಲೀಮು ಇದು. ಮೊದಲ ತಾಲೀಮಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ದಿನದ ಸುದ್ದಿ
ಡೀಲರ್ಶಿಪ್ಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ಮಂಗಳೂರು ರೆಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ಭಾರತ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ರಿಟೇಲ್ ಔಟ್ಲೆಟ್ಗಳನ್ನು ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ತಣಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಸ್ಹೆಚ್76 ರಸ್ತೆಯಲ್ಲಿ, ಜಗಳೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಚಳ್ಳಕೆರೆ ಗೇಟ್ ಬಸ್ ನಿಲ್ದಾಣದ 2 ಕಿ.ಮಿ ಒಳಗೆ ಜಗಳೂರು ದಾವಣಗೆರೆ ಮಾರ್ಗದ ಎಸ್ಹೆಚ್ 65 ರಸ್ತೆಯಲ್ಲಿ ಮತ್ತು ಜಗಳೂರು-ಕೊಟ್ಟೂರು ಮಾರ್ಗದಲ್ಲಿನ 02 ಕಿ.ಮಿ ಒಳಗೆ ನೆಹರು ರಸ್ತೆಯಲ್ಲಿ, ಚನ್ನಗಿರಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಎನ್ಹೆಚ್ 369 ರಸ್ತೆಯಲ್ಲಿ.
ಇದನ್ನೂ ಓದಿ | ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಹಳೇಬಾತಿಯ ತುಂಗಭದ್ರ ಬಡಾವಣೆ ಹತ್ತಿರದಲ್ಲಿ, ಸವಳಂಗ ಪಂಚಾಯತ್ ವ್ಯಾಪ್ತಿಯ ಸವಳಂಗ-ನ್ಯಾಮತಿ ಎಸ್ಹೆಚ್ 52 ರಸ್ತೆಯಲ್ಲಿ, ಮುದಹದಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಮನೂರು-ಮಲೆಬೆನ್ನೂರು ರಸ್ತೆಯಲ್ಲಿ ರಿಟೇಲ್ ಔಟ್ಲೆಟ್ಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಏಪ್ರಿಲ್ 23 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ www.mrpl.co.in ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಿಲ್ಲಾ ಕಚೇರಿ ವತಿಯಿಂದ 2019-20ನೇ ಸಾಲಿನ ವಿಶೇಷ ಕೇಂದ್ರಿಯ ನೆರವಿನಡಿ (ಎಸ್ಸಿಎ ಯಿಂದ ಎಸ್ಸಿಎಸ್ಪಿ) ಜಿಲ್ಲೆಯ ಪರಿಶಿಷ್ಟ ಜಾತಿಯ ನಿರುದ್ಯೋಗ ವಿದ್ಯಾವಂತ ಯುವಕ-ಯುವತಿಯರಿಗೆ ಉಚಿತವಾಗಿ ತರಬೇತಿ ಕಾರ್ಯಕ್ರಮವನ್ನು ದಾವಣಗೆರೆಯ ಕಿಯೋನಿಕ್ಸ್ ಸಂಸ್ಥೆ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ಅಕೌಂಟಿಂಗ್ ಮತ್ತು ಟ್ಯಾಲಿ, ಕಂಪ್ಯೂಟರ್ ಪ್ರೋಗ್ರಾಮರ್ ತರಬೇತಿ, ಕಾಲ್ಸೆಂಟರ್ ತರಬೇತಿ 50 ಅಭ್ಯರ್ಥಿಗಳಿಗೆ. ಕಂಪ್ಯೂಟರೈಸ್ಡ್ ಫ್ಯಾಷನ್ ಡಿಸೈನಿಂಗ್ ಹಾಗೂ ಟೈಲರಿಂಗ್ ತರಬೇತಿ 44 ಅಭ್ಯರ್ಥಿಗಳಿಗೆ. ಡಿಜಿಟಲ್ ಮಾರ್ಕೆಟಿಂಗ್ 110 ಜನ, ಸೈಬರ್ ಸೆಕ್ಯೂರಿಟಿ-100, ಹಾಗೂ 250 ಅಭ್ಯರ್ಥಿಗಳಿಗೆ ಆಂಡ್ರಾಯಿಡ್ ಟ್ರೈನಿಂಗ್ (ಸ್ಮಾರ್ಟ್ ಮೊಬೈಲ್ ಫೋನ್) ತರಬೇತಿ ಉಚಿತವಾಗಿ ಆಯೋಜಿಸಲಾಗಿದೆ.
ಇದನ್ನೂ ಓದಿ | ಸಾಮಾಜಿಕ ಸಂವರ್ಧನೆಗೆ ಸಾಹಿತ್ಯಿಕ ಚರ್ಚೆ ಅವಶ್ಯ : ಹಿರಿಯ ಸಾಹಿತಿ ಡಾ. ಎಂ. ಜಿ. ಈಶ್ವರಪ್ಪ
ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಏ.9 ರಂದು ಅಂಬೇಡ್ಕರ್ ನಿಗಮದ ಜಿಲ್ಲಾ ಕಚೇರಿಯಲ್ಲಿ ಉಚಿತವಾಗಿ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಯನ್ನು ಏ.30 ರೊಳಗೆ ಅಗತ್ಯ ಶೈಕ್ಷಣಿಕ ಅಂಕ ಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ನೊಂದಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ನಂ.337/16ಎ-16 ಗಣೇಶ್ ಲೇಔಟ್ 1ನೇ ಕ್ರಾಸ್, ಪಿ.ಬಿ.ರಸ್ತೆ, ದಾವಣಗೆರೆ. ದೂರವಾಣಿ ಸಂಖ್ಯೆ: 08192-258647 ಕ್ಕೆ ಸಂಪರ್ಕಿಸಬಹುದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಾಮಾಜಿಕ ಸಂವರ್ಧನೆಗೆ ಸಾಹಿತ್ಯಿಕ ಚರ್ಚೆ ಅವಶ್ಯ : ಹಿರಿಯ ಸಾಹಿತಿ ಡಾ. ಎಂ. ಜಿ. ಈಶ್ವರಪ್ಪ

ಸುದ್ದಿದಿನ,ದಾವಣಗೆರೆ : ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯದ ಕೊಡುಗೆ ಅಪಾರ. ಹಾಗಾಗಿ ಹೊಸತನದ ಹುಟ್ಟಿಗೆ ಮತ್ತು ಸಾಮಾಜಿಕ ಸಂವರ್ಧನೆಗೆ ಆಗಾಗ್ಗೆ ಆರೋಗ್ಯಕರ ಸಾಹಿತ್ಯಿಕ ಚರ್ಚೆ ನಡೆಯುತ್ತಿರಬೇಕು ಎಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸರಾದ ಡಾ. ಎಂ.ಜಿ ಈಶ್ವರಪ್ಪ ಅಭಿಪ್ರಾಯಿಸಿದರು.
ದಾವಣಗೆರೆ ತಿಂಗಳ ಅಂಗಳ ಸಾಹಿತ್ಯ – ಸಾಂಸ್ಕೃತಿಕ ಬಳಗದ ವತಿಯಿಂದ ಕವಯಿತ್ರಿ ಶ್ರೀಮತಿ ಚಂದ್ರಿಕಾ ಜಗನ್ನಾಥ್ ಅವರ ಹುಟ್ಟು ಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ನಗರದ ತರಳಬಾಳು ಬಡಾವಣೆಯ ಚಂದ್ರಿಕಾ ಅವರ ನಿವಾಸದಲ್ಲಿ ಏಪ್ರಿಲ್ 17 ರ ಶನಿವಾರ ಸಂಜೆ 4 ಗಂಟೆಗೆ ಆಯೋಜಿಸಲಾಗಿದ್ದ ಕವಿ ಕಾವ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯ ಸರ್ವರ ಹಿತವನ್ನು ಬಯಸುತ್ತದೆ. ಸರ್ವ ರಂಗಗಳ ಅಭಿವೃದ್ಧಿಯನ್ನು ಆಶಿಸುತ್ತದೆ. ಆ ದಿಸೆಯಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳ ಆಯೋಜನೆ ಮನುಕುಲದ ಮನಪರಿವರ್ತನೆಗೆ ಪುಷ್ಠಿ ನೀಡುತ್ತದೆ. ಸುಂದರ ವ್ಯಕ್ತಿತ್ವಗಳ ಉದಯಕ್ಕೆ ನಾಂದಿ ಹಾಡುತ್ತದೆ. ಇಂತಹ ಉತ್ಕೃಷ್ಟ ಆಶಯಕ್ಕೆ ಪೂರಕವಾಗಿ ತಿಂಗಳ ಅಂಗಳ ಬಳಗ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
” ಕನ್ನಡದ ಮಹಿಳಾ ಸಾಹಿತಿಗಳು ಮತ್ತು ಸ್ತ್ರೀ ಸಂವೇದನೆ ” ವಿಷಯ ಕುರಿತು ಮಾತನಾಡಿದ ಲೇಖಕಿ ಹಾಗೂ ವಾಗ್ಮಿ ಶ್ರೀಮತಿ ಸುಭಾಷಿಣಿ ಅವರು ಮಹಿಳಾ ಲೇಖಕಿಯರ ಸಾಹಿತ್ಯಿಕ ಒಳತೋಟಿಯನ್ನು ಸ್ವಾರಸ್ಯಕರವಾಗಿ ವಿವರಿಸಿದರು.
ಆಹ್ವಾನಿತ ಕವಿಮಿತ್ರರಾದ ರಾಜಶೇಖರ್ ಗುಂಡಗಟ್ಟಿ, ಮಹಾಂತೇಶ್ ಬಿ ನಿಟ್ಟೂರು, ಗಂಗಾಧರ ಬಿ ಎಲ್ ನಿಟ್ಟೂರ್, ತಾರೇಶ್ ಅಣಬೇರು, ಪಾಪುಗುರು, ಶ್ರೀ ವೀರೇಶ್ ಬಿ ಜಿ ಎಂ , ಅಂಜಿನಪ್ಪ, ಕೊಟ್ರೇಶ್ ಎನ್. ಕೆ, ಪ್ರಭು ಗೊಲ್ಲರಹಳ್ಳಿ, ಪರಮೇಶ್ ನೆಲ್ಲಿಕಟ್ಟೆ, ಶ್ರೀಮತಿ ಮಲ್ಲಮ್ಮ ನಾಗರಾಜ್ , ಶ್ರೀಮತಿ ಸಂಧ್ಯಾ ಸುರೇಶ್, ಶ್ರೀಮತಿ ಸುಕನ್ಯಾ ತ್ಯಾವಣಗಿ, ಶ್ರೀಮತಿ ಅನ್ನಪೂರ್ಣ ಪಾಟೀಲ್ , ಡಾ. ಅನಿತಾ ದೊಡ್ಡಗೌಡರ್, ಶ್ರೀಮತಿ ಬಿ. ಹೆಚ್. ಉಮಾ ಮಹೇಶ್ವರಿ, ಶ್ರೀಮತಿ ಶೋಭಾ ಮಂಜುನಾಥ್ , ಶ್ರೀಮತಿ ಉಮಾದೇವಿ ಹಿರೇಮಠ ಅವರು ಕನ್ನಡ ನಾಡಿನ ಹಿರಿಯ ಪ್ರಸಿದ್ಧ ಕವಿಗಳ ಕವನ ವಾಚನ ಮಾಡಿದರು.
ನಂತರ ಡಾ. ಎಂ. ಜಿ. ಈಶ್ವರಪ್ಪ ಹಾಗೂ ಆತಿಥ್ಯ ವಹಿಸಿದ್ದ ಶ್ರೀಮತಿ ಚಂದ್ರಿಕಾ ಜಗನ್ನಾಥ್ ಅವರಿಗೆ ತಿಂಗಳ ಅಂಗಳ ಬಳಗದಿಂದ ಗೌರವಿಸಿ ಸನ್ಮಾನಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಭಾವ ಭೈರಾಗಿ7 days ago
ಕವಿತೆ | ಅವಳು ಮಸಣ ಕಾಯುವ ಪಾರ್ವತಿ..!
-
ನೆಲದನಿ6 days ago
ನಮ್ಮ ಶಿವಮೊಗ್ಗ – ನಮ್ಮ ಹೆಮ್ಮೆ: ಕುವೆಂಪು
-
ದಿನದ ಸುದ್ದಿ6 days ago
ಕಾಡಿನಿಂದ ನಾಡಿಗೆ ಬಂದ ಲೋರಿಸ್ ‘ಪಾಪ’..!
-
ಬಹಿರಂಗ6 days ago
ಜ್ಯೋತಿರಾವ್ ಫುಲೆ : ವಸಾಹತು ಮತ್ತು ಮೇಲ್ವರ್ಗಗಳ ಪ್ರಾಬಲ್ಯವನ್ನು ಪ್ರಶ್ನಿಸಿಸುವ ನೆಲೆಗಳು
-
ನಿತ್ಯ ಭವಿಷ್ಯ6 days ago
ಈ ರಾಶಿಯವರಿಗೆ ಗುಡ್ ನ್ಯೂಸ್ ಬಯಸಿದ್ದೆಲ್ಲ ಸಿಗುವುದು ಮತ್ತು ಮುಟ್ಟಿದ್ದೆಲ್ಲ ಪ್ಲಾಟಿನಂ ಗೋಲ್ಡ್! ಸೋಮವಾರ ರಾಶಿ ಭವಿಷ್ಯ-ಏಪ್ರಿಲ್-12,2021
-
ರಾಜಕೀಯ6 days ago
ಮಸ್ಕಿ ಬಿಜೆಪಿ ಅಭ್ಯರ್ಥಿ ಪರ ಇಂದು ಸಿಂಗರ್ ಮಂಗ್ಲಿ ಪ್ರಚಾರ
-
ನಿತ್ಯ ಭವಿಷ್ಯ5 days ago
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?ಕಂಕಣಬಲ ಕೂಡಿ ಬರಲು ಏನು ಮಾಡಬೇಕು?
-
ಬಹಿರಂಗ5 days ago
ಜ್ಯೋತಿಬಾ ಎಂಬ ದೀವಿಗೆ ತೋರಿದ ದಾರಿ ನಮ್ಮದಾಗಲಿ