Connect with us

ದಿನದ ಸುದ್ದಿ

ಅಕ್ರಮ ಸಂಬಂಧ : ಪತ್ನಿ ರುಂಡ ಕತ್ತರಿಸಿ ಕೊಲೆಗೈದ ಪತಿ

Published

on

ಸುದ್ದಿದಿನ, ಚಿಕ್ಕಮಗಳೂರು : ಅಕ್ರಮ ಸಂಬಂಧದಲ್ಲಿ ತೊಡಗಿದ್ದ ಪತ್ನಿಯ ರುಂಡವನ್ನು ಕತ್ತರಿಸಿ ಪೊಲೀಸ್ ಠಾಣೆಗೆ ಪತಿ ತಾನೇ ತಂದು ಘಟನೆ ವಿವರಿಸಿದ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವನಿಯಲ್ಲಿ ನಡೆದಿದೆ.

ಪತ್ನಿಯ ತಲೆ ಕತ್ತರಿಸಿ ಅಮಾನುಷವಾಗಿ ಕೊಲೆ ಮಾಡಿದ ಪತಿ ಸತೀಶ್ ಶಿವನಿ ಪೊಲೀಸ್ ಠಾಣೆಗೆ ತಂದು ಆರೋಪಿ ಶರಣಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ ಆರ್ ಎಸ್ ಗ್ರಾಮದಲ್ಲಿ ವಾಸವಿದ್ದ ಸತೀಶ್ ತನ್ನ ಪತ್ನಿ ರೂಪಾ ಶಿವನಿ ರೈಲ್ವೆ ನಿಲ್ದಾಣದಲ್ಲಿ ಪ್ರಿಯಕರನ ಜೊತೆ ಇದ್ದ ವೇಳೆ ಮಚ್ಚಿನಿಂದ ಕೊಚ್ಚಿ ಪತ್ನಿ ರೂಪಾಳನ್ನು ಹತ್ಯೆ ಮಾಡಿದ್ದಾನೆ.

ಶಿವನಿ ರೈಲ್ವೆ ನಿಲ್ದಾಣದ ಬಳಿ
ರೂಪ(30) ಪ್ರಿಯಕರನ ಜೊತೆ ಇದ್ದದ್ದನ್ನು ಕಂಡು ಕೆಂಡಾಮಂಡಲನಾದ ಸತೀಶ್ ಆಕೆಯ ತಲೆ ಕತ್ತರಿಸಿದ್ದಾನೆ. ಕಳೆದ 8 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ರೂಪಾ ಹಾಗೂ ಸತೀಶ್ ಗೆ ಇಬ್ಬರು ಮಕ್ಕಳಿದ್ದು ಕಳೆದೆರಡು ವರ್ಷದಿಂದ ಅದೇ ಗ್ರಾಮದ ಚಾಲನೊಬ್ಬನ ಜೊತೆ ರೂಪಾ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ಈ ವಿಷಯ ಹಲವು ಬಾರಿ ಪಂಚಾಯ್ತಿ ನಡೆದು ರಾಜೀ ಸಹಾ ನಡೆದಿದೆ ಆದರೂ ತನ್ನ ಚಾಳಿ ಮುಂದುವರಿಸಿದ ರೂಪಾ ಕಳೆದ ರಾತ್ರಿ ಶಿವನಿ ರೈಲ್ವೆ ನಿಲ್ದಾಣದಲ್ಲಿ ಪ್ರಿಯಕರನೊಂದಿಗೆ ಕಾಣಿಸಿಕೊಳ್ಳುತ್ತಿದ್ದಂತೆ ಸತೀಶ್ ಆತನ ಮೇಲೆ ಮಚ್ಚು ಬೀಸಿದ್ದಾನೆ ಆತ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದಂತೆ ರೂಪಾಳನ್ನು ಕೊಚ್ಚಿ ಹತ್ಯೆ ಮಾಡಿದ್ದಾನೆ.

ನಂತರ ಪತ್ನಿ ರೂಪಾಳ ರುಂಡವನ್ನು ಚೀಲದಲ್ಲಿ ತುಂಬಿಕೊಂಡು ಶಿವನಿ ಪೊಲೀಸ್ ಠಾಣೆ ಬಂದ ಸತೀಶ್ ಪೊಲೀಸರ ಎದುರು ವಿಷಯವನ್ನು ಸಿನಿಮೀಯ ರೀತಿಯಲ್ಲಿ ವಿವರಿಸುತ್ತಾನೆ. ಅಜ್ಜಂಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ದಿನದ ಸುದ್ದಿ

ವಿಜಯನಗರ ಜಿಲ್ಲೆ ರಚನೆ; ಆಕ್ಷೇಪಣೆ ಪರಿಶೀಲಿಸಿ ಶೀಘ್ರ ನಿರ್ಣಯ: ಸಚಿವ ಆನಂದಸಿಂಗ್

Published

on

ಸುದ್ದಿದಿನ,ಬಳ್ಳಾರಿ: ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ 30ಸಾವಿರ ಆಕ್ಷೇಪಣೆಗಳು ಬಂದಿದ್ದು;ಅವುಗಳನ್ನು ಪರಿಶೀಲಿಸಿ ಜಿಲ್ಲೆ ರಚನೆ ಕುರಿತು ಶೀಘ್ರ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿಗಳು ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ಕೊಡುವುದು ಬೇಡ ಅಂದಿದ್ದಾರೆ;ಪ್ರತಿಕ್ರಿಯೆ ನೀಡಲ್ಲ. ಜ.28ರಿಂದ ಅಧಿವೇಶನ ಆರಂಭವಾಗಲಿದ್ದು,ಸಹಜವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದು ಹೇಳಿದ ಸಚಿವ ಆನಂದಸಿಂಗ್ ಅವರು ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಮಾಧ್ಯಮದವರು ಪದೇಪದೆ ಕೇಳಿದ ಪ್ರಶ್ನೆಗೆ ನೋ ರಿಯಾಕ್ಷನ್ ಒನ್ಲಿ ಆ್ಯಕ್ಷನ್ ಎಂದರು.

ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದೆ.ಸಂಕಷ್ಟದ ಸಂದರ್ಭದಲ್ಲಿ ಡಿಎಂಎಫ್ ಅನುದಾನ ನೆರವಾಗಿದೆ ಎಂದು ಹೇಳಿದ ಸಚಿವ ಆನಂದಸಿಂಗ್ ಅವರು ಡಿಎಂಎಫ್ ಅನುದಾನ ಬಳಸಿಕೊಂಡು ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಕಚೇರಿ ಬಳ್ಳಾರಿಯಲ್ಲಿ ಅರಂಭಿಸುವುದಕ್ಕೆ ಕ್ರಮವಹಿಸಲಾಗುವುದು ಎಂದು ಅವರು ವಿವರಿಸಿದರು.

ಮೊದಲ ಹಂತದಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆದವರಿಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳಾಗಿಲ್ಲ. ಜಿಲ್ಲೆಯಲ್ಲಿ ನೋಂದಣಿಯಾದ 20ಸಾವಿರ ಆರೋಗ್ಯ ಸಿಬ್ಬಂದಿಯಲ್ಲಿ ಅಂದಾಜು 7ಸಾವಿರ ಜನರು ಇದುವರೆಗೆ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂಳಿದವರು ಇನ್ನೂ ಕೆಲದಿನಗಳಲ್ಲಿ ಪಡೆದುಕೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಸದ ದೇವಿಂದ್ರಪ್ಪ, ಶಾಸಕ ನಾಗೇಂದ್ರ, ಡಿಸಿ ಪವನಕುಮಾರ್ ಮಾಲಪಾಟಿ,ಜಿಪಂ ಸಿಇಒ ಕೆ.ಆರ್.ನಂದಿನಿ,ಎಸ್ಪಿ ಸೈದುಲು ಅಡಾವತ್,ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಹನುಮಂತಪ್ಪ ಮತ್ತಿತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಮಗ್ರ ಅಭಿವೃದ್ಧಿಯ ಸದೃಢ ಕನ್ನಡ ನಾಡು ಕಟ್ಟುವ ಕೆಲಸ ಮಾಡುತ್ತೇವೆ : ಸಚಿವ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ,ಹಾವೇರಿ: ಹೊಸ ಚಿಂತನೆ, ಹೊಸ ಕಲ್ಪನೆ ಹೊಸ ಕಾರ್ಯಗಳ ಮೂಲಕ ಎಲ್ಲರನ್ನೂ ಒಳಗೊಂಡ ನಯಾ ಭಾರತ ನಿರ್ಮಾಣಕ್ಕೆ ಭಾರತದ ಪ್ರಧಾನಮಂತ್ರಿಗಳು ಸಂಕಲ್ಪಮಾಡಿದ್ದಾರೆ. ಕರ್ನಾಟಕದಲ್ಲೂ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಮಗ್ರ ಅಭಿವೃದ್ಧಿಯ ಸದೃಢ ಕನ್ನಡ ನಾಡು ಕಟ್ಟುವ ಕೆಲಸ ಮಾಡುತ್ತೇವೆ ಎಂದು ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

72ನೇ ಭಾರತ ಗಣರಾಜ್ಯೋತ್ಸವ ಅಂಗವಾಗಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಒಂದೂವರೆ ವರ್ಷ ಸಂಕಷ್ಟದ ವರ್ಷದವಾಗಿ ಆಡಳಿತಕ್ಕೆ ಪರೀಕ್ಷೆಯ ಕಾಲ. ಕೋವಿಡ್ ಹಾಗೂ ಪ್ರಾಕೃತಿಕ ವಿಕೋಪಗಳು ಕರ್ನಾಟಕದ ಆರ್ಥಿಕತೆಯನ್ನೇ ಅಲ್ಲಾಡಿಸಿದ ವರ್ಷವಾಗಿದೆ. ಕೋವಿಡ್ ಕಾರಣದಿಂದ ದೇಶ ಸೇರಿದಂತೆ ವಿಶ್ವದ ಆರ್ಥಿಕತೆಯೇ ಅಲ್ಲಾಡಿದೆ. ಈ ಸಂಕಷ್ಟಗಳ ದಾರಿಯಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ನಮ್ಮ ಸರ್ಕಾರಗಳು ಕಾರ್ಯನಿರ್ವಹಿಸಿವೆ ಎಂದು ಹೇಳಿದರು.

ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ರಾಷ್ಟ್ರೀಯತೆ, ಎಲ್ಲರ ಒಳಗೊಂಡಂತೆ ಅಭಿವೃದ್ಧಿ ಹಾಗೂ ಆಂತರಿಕ ಹಾಗೂ ಬಾಹ್ಯ ಸುರಕ್ಷತೆಯ ಮೂರು ಅಂಶಗಳ ಆಧಾರದ ಮೇಲೆ ನಯಾ ಭಾರತದ ನಿರ್ಮಾಣಕ್ಕೆ ಕರೆ ಕೊಟ್ಟಿದ್ದಾರೆ. ಈ ಮಾದರಿಯಲ್ಲಿ ರಾಜ್ಯದ ಅಭಿವೃದ್ಧಿಯ ಕಾರ್ಯಗಳು ಮುಂದುವರೆದಿವೆ ಎಂದು ಹೇಳಿದರು.

ಕೋವಿಡ್ ಸಂಕಷ್ಟವನ್ನು ಸೈದ್ಧಾಂತಿಕವಾಗಿ ಎದುರಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಐ.ಸಿ.ಯು. ಲ್ಯಾಬ್, ಆಕ್ಸಿಜನ್ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ ಸೇರಿದಂತೆ ಪ್ರಮುಖ ಸುಧಾರಣೆ ತರಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ 797 ಲಕ್ಷ ರೂ. ಅನುದಾನ ಬಳಸಿ 12,669 ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ. 364 ಲಕ್ಷ ರೂ. ವೆಚ್ಚದಲ್ಲಿ 1787 ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ.

ಇ ಸಂಜೀವಿನಿ ಟೆಲಿಮೆಡಿಷನ್ ಯೋಜನೆಯಡಿ 3184 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈವರೆಗೆ 11,250 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 11,046 ಜನ ಗುಣಮುಖರಾಗಿದ್ದಾರೆ. 8280 ಡೋಸ್ ಕೋವಿಡ್ ಲಸಿಕೆ ಜಿಲ್ಲೆಗೆ ಪೂರೈಕೆಯಾಗಿದ್ದು, ಈಗಾಗಲೇ 3387 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

ಮುಂದಿನ ಶೈಕ್ಷಣಿಕ ವರ್ಷಾರಂಭದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಬಳಸಿಕೊಂಡು ವೈದ್ಯಕೀಯ ತರಗತಿಗಳನ್ನು ಆರಂಭಿಸಲು ಪ್ರಯತ್ನಿಸಲಾಗುವುದು. ಈ ವರ್ಷಾಂತ್ಯಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುವುದು. ಶಿಗ್ಗಾಂವಿಯಲ್ಲಿ ಜವಳಿ ಪಾರ್ಕ್ ವರ್ಷಾಂತಕ್ಕೆ ಪೂರ್ಣಗೊಳಿಸಿ ಮೂರರಿಂದ ಐದುಸಾವಿರ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುವುದು.

ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬಂಕಾಪುರ ನವಿಲು ಧಾಮವನ್ನು ಉನ್ನತೀಕರಿಸಲಾಗುವುದು. ಉದ್ಯೋಗಖಾತ್ರಿ ಯೋಜನೆಯನ್ನು ಅರ್ಥಪೂರ್ಣವಾಗಿ ಹಾಗೂ ಜನೋಪಯೋಗಿ ಕಾರ್ಯಕ್ರಮವಾಗಿ ರೂಪಿಸಲು ಸೂಚನೆ ನೀಡಲಾಗಿದೆ. ಶೀಘ್ರವೇ ವಿಜನ್ 2021-2025 ಯೋಜನೆ ರೂಪಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ವಿಶ್ವ ಆರ್ಥಿಕ ಒಪ್ಪಂದ ಪ್ರಕಾರ ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ ಬೆಲೆದೊರಕಿಸಿಕೊಡಲು ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಒಟ್ಟಾಗಿ ಕೂತು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾಗಿದೆ. ರೈತರ ಅನುಕೂಲಕ್ಕಾಗಿ ಸಬ್ಸಿಡಿ ಸಾಲ, ಬಡ್ಡಿ ರಹಿತ ಸಾಲ, ಸಬ್ಸಿಡಿ ಯೋಜನೆಳನ್ನು ಜಾರಿಗೊಳಿಸಲಾಗಿದೆ. ರೈತಪರವಾದ ನಮ್ಮ ಸರ್ಕಾರ ಕಳೆದ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಪರಿಹಾರವಾಗಿ 76,000 ರೈತರಿಗೆ 179 ಕೋಟಿ ರೂ. ಹಾಗೂ ಹಿಂಗಾರು ಹಂಗಾಮಿನಲ್ಲಿ 30 ಕೋಟಿ ರೂ. ಅನುದಾನವನ್ನು 293 ರೈತರಿಗೆ ಪರಿಹಾರ ನೀಡಲಾಗಿದೆ.

ನೀರಾವರಿ ಕ್ಷೇತ್ರಕ್ಕೆ 7300 ಕೋಟಿ ರೂ.ಗಳನ್ನು ಜಿಲ್ಲೆಗೆ ನೀಡಲಾಗಿದೆ. 2021ರ ವರ್ಷಾಂತ್ಯಕ್ಕೆ ಜಿಲ್ಲೆಯ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಸ್ವಚ್ಛ ಭಾರತ, ಗ್ರಾಮೀಣ ಆವಾಸ್ ಯೋಜನೆ, ಗ್ರಾಮೀಣ ವಿದ್ಯುದ್ದೀಕರಣ ಯೋಜನೆ, ಗ್ರಾಮಸಡಕ್ ಯೋಜನೆ, ಉಜ್ವಲ್ ಯೋಜನೆ ಗಳು ನಿರ್ಲಕ್ಷಿತ ವಲಯದ ಏಳಿಗೆಗಾಗಿ ರೂಪಿಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಜನವರಿ 26 ಭಾರತಕ್ಕೆ ಸಂವಿಧಾನ ಸಿಕ್ಕ ದಿನ, ಆಡಳಿತ ವ್ಯವಸ್ಥೆ ಸಿಕ್ಕ ದಿನ, ವಿಶ್ವಕ್ಕೆ ಮಾದರಿಯಾದ ದೊಡ್ಡ ಲಿಖಿತ ಸಂವಿಧಾನವನ್ನು ಜಾರಿಗೆ ತಂದದಿನ. ಸ್ವತಂತ್ರ ಭಾರತಕ್ಕೊಂದು ಸದೃಢ ಸಂವಿಧಾನ ಕಟ್ಟಿಕೊಟ್ಟದ್ದು ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದ ಹಿರಿಯರ ತಂಡ. ಅವರ ಅವಿರತ ಪ್ರಯತ್ನ ಫಲವಾಗಿ ವಿಶ್ವಕ್ಕೆ ಮಾದರಿಯಾಗಿರುವ ನಮ್ಮ ಸಂವಿಧಾನ ರೂಪುಗೊಂಡಿದೆ. ಇವರನ್ನು ಹೃದಯಪೂರ್ವಕವಾಗಿ, ಚಿರಸ್ಮರಣೀಯವಾಗಿ ಅಭಿನಂದಿಸುತ್ತೇನೆ ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಪಡೆದವರನ್ನು ಅಭಿನಂದಿಸುತ್ತ ಕರ್ನಾಟಕದ ಚಂದ್ರಶೇಖರ ಕಂಬಾರ ಹಾಗೂ ವೈದ್ಯ ಬಿ.ಎಂ. ಹೆಗಡೆ ಅವರಿಗೆ ಅಭಿನಂದಿಸಿದರು.

ಸಮಾರಂಭದಲ್ಲಿ ಜನಪದ ಕಲಾವಿದ ಬಸವರಾಜ ಶಿಗ್ಗಾಂವ, ಉದಯವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ವಿರೇಶ ಮಡ್ಲೂರ ಹಾಗೂ ಟಿವಿ-9 ಮಾಧ್ಯಮದ ವಿಡಿಯೋ ಜರ್ನಲಿಸ್ಟ್ ರವಿ ಹೂಗಾರ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುಂಚೆ ಆಕರ್ಷಕ ಪಥಸಂಚಲನ ಹಾಗೂ ಧ್ವಜ ವಂದನೆ ಕಾರ್ಯಕ್ರಮದಲ್ಲಿ ಗೃಹ ಸಚಿವರು ಭಾಗವಹಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೆಂಪುಕೋಟೆ ತಲುಪಿದ ಗಾಝಿಪುರ ಗಡಿ ರೈತರು

Published

on

ಸುದ್ದಿದಿನ,(ಕೆಂಪುಕೋಟೆ), ನವದೆಹಲಿ: ಬೆಳಗ್ಗೆ ಗಾಝಿಪುರದಿಂದ ಟ್ರ್ಯಾಕ್ಟರ್‌ ಮೂಲಕ ಹೊರಟ ರೈತರು ಯಾವುದೇ ಅಡ್ಡಿಗಳಿಲ್ಲದೆ 12.15ಕ್ಕೆ ಕೆಂಪುಕೋಟೆ ತಲುಪಿದ್ದಾರೆ.

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆ ಅತಿ ಮುಖ್ಯ ಕೇಂದ್ರವಾಗಿದ್ದು, ಪ್ರಧಾನಿಗಳ ಗಣತಂತ್ರ ಪರೇಡ್‌ ಹಾಗೂ ದೇಶವನ್ನುದ್ದೇಶಿಸಿ ಇಲ್ಲಿಂದಲೇ ಭಾಷಣ ಮಾಡಿದ್ದಾರೆ.

ಈ ಸ್ಥಳವನ್ನು ರೈತರು 50ಕ್ಕೂ ಹೆಚ್ಚು ಟ್ರಾಕ್ಟರ್‌ಗಳಲ್ಲಿ ತಲುಪಿದ್ದಾರೆ. ಪರೇಡ್‌ತಡೆಯಲು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಕೆಂಪುಕೋಟೆ ಪ್ರದೇಶವನ್ನು ಪ್ರವೇಶಿಸಿದ್ದು, ಪೊಲೀಸರು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವ ಪ್ರಯತ್ನ ಮಾಡಿಲ್ಲ. ಇನ್ನು ಕೆಲವೇ ನಿಮಿಷಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಈ ಪ್ರದೇಶವನ್ನು ತಲಪುವ ನಿರೀಕ್ಷೆ ಇದೆ.

ಕೃಪೆ : mass media foundation, Delhi

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ6 hours ago

ವಿಜಯನಗರ ಜಿಲ್ಲೆ ರಚನೆ; ಆಕ್ಷೇಪಣೆ ಪರಿಶೀಲಿಸಿ ಶೀಘ್ರ ನಿರ್ಣಯ: ಸಚಿವ ಆನಂದಸಿಂಗ್

ಸುದ್ದಿದಿನ,ಬಳ್ಳಾರಿ: ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ 30ಸಾವಿರ ಆಕ್ಷೇಪಣೆಗಳು ಬಂದಿದ್ದು;ಅವುಗಳನ್ನು ಪರಿಶೀಲಿಸಿ ಜಿಲ್ಲೆ ರಚನೆ ಕುರಿತು ಶೀಘ್ರ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್...

ದಿನದ ಸುದ್ದಿ7 hours ago

ಸಮಗ್ರ ಅಭಿವೃದ್ಧಿಯ ಸದೃಢ ಕನ್ನಡ ನಾಡು ಕಟ್ಟುವ ಕೆಲಸ ಮಾಡುತ್ತೇವೆ : ಸಚಿವ ಬಸವರಾಜ ಬೊಮ್ಮಾಯಿ

ಸುದ್ದಿದಿನ,ಹಾವೇರಿ: ಹೊಸ ಚಿಂತನೆ, ಹೊಸ ಕಲ್ಪನೆ ಹೊಸ ಕಾರ್ಯಗಳ ಮೂಲಕ ಎಲ್ಲರನ್ನೂ ಒಳಗೊಂಡ ನಯಾ ಭಾರತ ನಿರ್ಮಾಣಕ್ಕೆ ಭಾರತದ ಪ್ರಧಾನಮಂತ್ರಿಗಳು ಸಂಕಲ್ಪಮಾಡಿದ್ದಾರೆ. ಕರ್ನಾಟಕದಲ್ಲೂ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ...

ದಿನದ ಸುದ್ದಿ9 hours ago

ಕೆಂಪುಕೋಟೆ ತಲುಪಿದ ಗಾಝಿಪುರ ಗಡಿ ರೈತರು

ಸುದ್ದಿದಿನ,(ಕೆಂಪುಕೋಟೆ), ನವದೆಹಲಿ: ಬೆಳಗ್ಗೆ ಗಾಝಿಪುರದಿಂದ ಟ್ರ್ಯಾಕ್ಟರ್‌ ಮೂಲಕ ಹೊರಟ ರೈತರು ಯಾವುದೇ ಅಡ್ಡಿಗಳಿಲ್ಲದೆ 12.15ಕ್ಕೆ ಕೆಂಪುಕೋಟೆ ತಲುಪಿದ್ದಾರೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆ ಅತಿ ಮುಖ್ಯ ಕೇಂದ್ರವಾಗಿದ್ದು, ಪ್ರಧಾನಿಗಳ...

ದಿನದ ಸುದ್ದಿ9 hours ago

ಹಸುರು ಹೋಗಿ ಕೆಂಪಾಗುವವರೆಗೆ ಕಾಯಬಾರದು ಬನ್ನಿ !

ನಾಗೇಶ್ ಹೆಗಡೆ ಐತಿಹಾಸಿಕ ರೈತ ಜಾಥಾಕ್ಕೆ ಇಲ್ಲಿವೆ ದೊಡ್ಡ ಕಾರಣಗಳು ಹಿಂದೆಂದೂ ಕಂಡಿರದಷ್ಟುದೊಡ್ಡ ಸಂಖ್ಯೆಯಲ್ಲಿ ನಾಳೆ ರೈತರು ಮುನ್ನೆಲೆಗೆ ಬರಲಿದ್ದಾರೆ. ಹೊಟ್ಟೆಗೆ ಹಿಟ್ಟು/ಅನ್ನ ತಿನ್ನುವವರೆಲ್ಲ ಜಾತಿ/ಧರ್ಮ/ರಾಜಕೀಯ ಪಕ್ಷಭೇದ...

ದಿನದ ಸುದ್ದಿ10 hours ago

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 190 ನೇ ಪುಣ್ಯ ಸ್ಮರಣೆಯ ಈ ಹೊತ್ತಿನಲ್ಲಿ..!

ದಿವ್ಯಶ್ರೀ. ವಿ, ಬೆಂಗಳೂರು ಇಂದು ಭಾರತದ ಧೀರ ಮತ್ತು ಅತ್ಯಂತ ಶ್ರೇಷ್ಠ ಸ್ವಾತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 190 ನೇ ಪುಣ್ಯ ಸ್ಮರಣೆ. ಇವರು...

ಅಂತರಂಗ10 hours ago

ಭಾರತದ ಸಂವಿಧಾನ : ಪ್ರಜೆಗಳ ಓದು

ಡಾ. ಬಿ.ಎಂ. ಪುಟ್ಟಯ್ಯ ಭಾರತದ ಸಂವಿಧಾನವನ್ನು ಯಾಕೆ ಓದಬೇಕು ಮತ್ತು ಅದನ್ನು ಕುರಿತು ಯಾಕೆ ಚರ್ಚೆ ಮಾಡಬೇಕು ಎಂಬುದು ಮೊದಲನೆಯ ಮುಖ್ಯ ಪ್ರಶ್ನೆ. ಅನೇಕರು ಹೇಳುತ್ತಾರೆ: ಇದು...

ದಿನದ ಸುದ್ದಿ10 hours ago

ಹೊಲಿಗೆ ಯಂತ್ರ ಸೌಲಭ್ಯ ನೀಡುವ ಅರ್ಜಿ ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಶ್ರವಣದೋಷವುಳ್ಳ ವಿಕಲಚೇತನರಿಗೆ ಸ್ವಯಂ ಉದ್ಯೋಗಕ್ಕಾಗಿ 15 ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ...

ದಿನದ ಸುದ್ದಿ10 hours ago

ರೈತ ಹೋರಾಟವೆಂಬ ಸಾಗರ ; ಇದು ಬರೀ ಪಂಜಾಬಿನದ್ದಲ್ಲ, ಇಡೀ ದೇಶದ ಹೋರಾಟ

ಸುದ್ದಿದಿನ,ಬೆಂಗಳೂರು: “ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ” ಎಂಬುದು ನಮ್ಮ ನಡುವಿನ ಖ್ಯಾತ ನಾಣ್ನುಡಿ. ಆದರೆ, ನಮ್ಮನ್ನು ಆಳುವ ಪ್ರಭುತ್ವ ಈ ನಾಣ್ನುಡಿಯನ್ನು ಮರೆತು ಇದೀಗ...

ಬಹಿರಂಗ11 hours ago

ಸಂವಿಧಾನ ದಿನಾಚರಣೆ ಹೇಗೆ ಗಣರಾಜ್ಯೋತ್ಸವವಾಯಿತು..?

ಪರಶುರಾಮ್. ಎ ಭಾರತದ ಪ್ರಜೆಗಳಾದ ನಮಗೆ ಜನವರಿ 26 ಹರ್ಷೋದ್ಘಾರದ ದಿನವೆಂದು ನೆನೆಯಲು ಖುಷಿ ಮತ್ತು ಸಂಕಟಗಳೆರಡನ್ನು ಹೊತ್ತು ಈ ಲೇಖನದಲ್ಲಿ ವಿಚಾರಗಳನ್ನು ಮಂಡಿಸುತ್ತೇನೆ. ಈ ಅವಕಾಶವನ್ನು...

ದಿನದ ಸುದ್ದಿ11 hours ago

ದಾವಣಗೆರೆ | ಅತ್ಯಾಚಾರ ಅಪರಾಧಿಗೆ 15 ವರ್ಷ ಸಜೆ, 26 ಸಾವಿರ ದಂಡ

ಸುದ್ದಿದಿನ,ದಾವಣಗೆರೆ : ದಾವಣಗೆರೆ ತಾಲ್ಲೂಕು ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ನರಗನಹಳ್ಳಿ ಗ್ರಾಮದ ವೀರೇಶ್ ಎಂಬಾತ ಯುವತಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆರೋಪಿಗೆ 5 ವರ್ಷ ಸಜೆ...

Trending