ಸಿನಿ ಸುದ್ದಿ
ಅತಿಲೋಕ ಸುಂದರಿ ಸಂದರ್ಶನ : ಸೆಲಬ್ರಿಟಿ ಲೋಕದ BG ಈಗ ಫುಲ್ ಬಿಝಿ..!

ಅಂತರಾಷ್ಟ್ರೀಯ ಸೆಲೆಬ್ರಿಟಿ ಲೋಕದಲ್ಲಿ BG ಎಂಬ ಹೆಸರು ಉಲ್ಲೇಖಿಸಿದರೆ ಜನ ನಿಬ್ಬೆರಗಾಗುತ್ತಾರೆ. ಆ ಎರಡಕ್ಷರದ ಹಿಂದಿರುವ ಮಹಾ ಶಕ್ತಿಯೇ ಭವ್ಯ ಗೌಡ. ಮಾಡೆಲಿಂಗ್, ಜಾಹೀರಾತು, ಬಣ್ಣದ ಜಗತ್ತಿನಲ್ಲಿ BG ಎಂದೇ ಖ್ಯಾತರಾಗಿರುವ ಭವ್ಯ ಅವರು ಅಕ್ಷರಶಃ ಈಗ ಬಿಝಿಯಾಗಿದ್ದಾರೆ.
ವಿಶ್ವ ಮಟ್ಟದ ಸೌಂದರ್ಯ ಸ್ಪರ್ಧೆಗಳಲ್ಲಿ ಭಾರತದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಹಿರಿಮೆ ಅವರದು. ಮೂಲತಃ ಮಂಡ್ಯದವರಾದ ಭವ್ಯ ಗೌಡ ಅವರು ತವರಿಗೆ ಮರಳಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ಅವರ ಕನಸು. ಈಗಾಗಲೇ 34 ಜಾಗತಿಕ ಬ್ರ್ಯಾಂಡ್ಗಳಿಗೆ ರಾಯಭಾರಿಯಾಗಿರುವ 30500 ಫೋಟೊಶೂಟ್ಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಪರಿಯ ಫೋಟೊ ಶೂಟ್ಗಳಲ್ಲಿ ಪಾಲ್ಗೊಂಡು ಹೆಸರು ಮಾಡಿದ ವಿಶ್ವದ ಏಕೈಕ ವ್ಯಕ್ತಿ ಎಂದರೆ ಅದು ಭವ್ಯ ಗೌಡ. 2010ರಲ್ಲಿ ಯುಕೆಯಲ್ಲಿ ನಡೆದ (ಮಿಡ್ಲ್ಯಾಂಡ್ಸ್) ಮಿಸ್ ಅರ್ಥ್ ಬ್ಯೂಟಿ ಪೆಜೆಂಟ್ನಲ್ಲಿ ವಿಜೇತೆಯಾಗಿ ಹೊರಹೊಮ್ಮಿದ ಅವರು, ಗ್ರೇಟ್ ಬ್ರಿಟನ್ನ ಇತಿಹಾಸದಲ್ಲಿ ಈ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತಳಾದ ಮೊತ್ತ ಮೊದಲ ಭಾರತೀಯರೆಂಬ ಕೀರ್ತಿಗೆ ಭವ್ಯ ಅವರು ಪಾತ್ರರಾದರು. ಇದರ ಬೆನ್ನಿಗೇ ಅವರು ಮಿಸ್ ಇಂಗ್ಲೆಡ್ ಸೌಂದರ್ಯ ಸ್ಪರ್ಧೆಯ ಫೈನಲಿಸ್ಟ್ ಆಗಿ ವಿಶ್ವದ ಗಮನ ಸೆಳೆದರು.
2013ರಲ್ಲಿ ಮಿಸ್ ಕೊಲಂಬೊ ಕ್ವೀನ್ ಪಟ್ಟ ಕೂಡ ಧಕ್ಕಿಸಿಕೊಂಡ ಅವರು ಮಧುಮಗಳ ಫೋಟೊಗ್ರಫಿ (ಬ್ರೈಡಲ್ ಫೋಟೊಗ್ರಫಿ) ಮಾಡುವರ ಪಾಲಿನ ಜೀವಂತ ಗೊಂಬೆ ಎಂಬ ಅನ್ವರ್ಥನಾಮವಾಗಿ ಉಳಿದಿದ್ದಾರೆ. 2010ರಲ್ಲೇ ಇವರು ಮಿಸ್ ಕಾಮನ್ವೆಲ್ತ್ ಫೈನಲಿಸ್ಟ್ ಆಗಿಯೂ ಗಮನ ಸೆಳೆದಿದ್ದರು. ಇಂಥ ಏಳು ಪಟ್ಟಗಲನ್ನು ಅಲಂಕರಿಸಿರುವ ಅಂತರಾಷ್ಟ್ರೀಯ ಸೆಲಬ್ರಿಟಿಯೊಬ್ಬರು ಸುದ್ದಿದಿನದೊಟ್ಟಿಗೆ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಆಂತರ್ಯದ ದನಿಯನ್ನು ಹಿಡಿದಿಡುವ ಪ್ರಯತ್ನ ನಮ್ಮದು.
• ಭಾರತದ ಬಗೆಗಿನ ನಿಮ್ಮ ಕನಸುಗಳೇನು?
ಭಾರತವು 2030ರ ಹೊತ್ತಿಗೆ ಪೆಟ್ರೋಲಿಯಂ ಮುಕ್ತ ದೇಶವಾಗಿ ಹೊರಬೇಕೆಂಬುದು ನನ್ನ ಕನಸುಗಳಲ್ಲೊಂದು. ಇದಕ್ಕಾಗಿ ಕೇಂದ್ರ ಸರಕಾರವು ಬ್ಯಾಟರಿ ಚಾಲಿತ ವಾಹನಗಳಿಗೆ ಹೆಚ್ಚು ಪುಷ್ಠಿ ನೀಡುತ್ತಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಬೆಟೆರಾ ಎಂಬ ಈ ಯೋಜನೆಗೆ ನಾನು ರಾಯಭಾರಿಯಾಗಿದ್ದೇನೆ. ಈ ಮೂಲಕ ದೇಶದ ಮಹೋನ್ನತ ಕನಸುಗಳಲ್ಲಿ ಒಂದು ಭಾಗವಾಗಿರುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ.
• ವಿದೇಶದಲ್ಲೇ ಹೆಚ್ಚು ಇದ್ದರೂ ಕನ್ನಡ ಪ್ರೀತಿ ಹಾಗೆ ಇದೆಯೇ?
ಕನ್ನಡ ನನ್ನ ಮನಸ್ಸಿಗೆ ಹತ್ತಿರವಾದ ಭಾಷೆ. ಏಕೆಂದರೆ ಅದು ನನ್ನ ತಾಯಿ ಸಮಾನ. ಪ್ರಪಂಚವೆಲ್ಲಾ ಗೆದ್ದು ಬರಬಹುದು ಆದರೆ, ನನ್ನ ತಾಯ್ನಾಡಿಗೆ ಏನೂ ಸಾಧನೆ ಮಾಡಲಿಲ್ಲ ಎಂದರೆ ಏನು ಪ್ರಯೋಜನ. ಕನ್ನಡದವರಾಗಿ ನಾವು ನಮ್ಮ ಮಾತೃ ಭಾಷೆ ಮಾತನಾಡಲು ಯಾವಾಗಲೂ ಹಿಂದೆ ಮುಂದೆ ನೋಡಬಾರದು. ನಾನು ಹುಟ್ಟಿದ ಈ ಮಣ್ಣಿನಲ್ಲೇ ಏನಾದರೂ ಸಾಧಿಸಿ ತೋರಿಸಬೇಕೆಂಬ ಹಂಬಲ ನನ್ನದು.
• ನೀವು ರಾಯಭಾರಿಯಾಗಿರುವ ಬ್ರ್ಯಾಂಡ್ ಉತ್ಪನ್ನಗಳ ಬಗ್ಗೆ ಹೇಳಿ
ಈವರೆಗೆ ನಾನು 34 ಬ್ರಾಂಡ್ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದೇನೆ. ಇಂಗ್ಲೆಂಡ್ನ ಹಲವು ಕಂಪನಿಗಳೂ ಕೂಡ ನನ್ನನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದವು. ಬಕ್, ಬ್ರೆಸ್ಟ್ ಕ್ಯಾನ್ಸರ್ ಯುನೈಟೆಡ್ ಕಿಂಗ್ಡಂ, ಕ್ರಿಶ್ಚಿಯನ್ ಆಡಿಗರ್, ಗೆಸ್, ಡಿ ಆ್ಯಡ್ ಜಿ, ಶೀಶಾ ಗಾರ್ಡನ್, ನಿಯೋನ್ ನಿಯತಕಾಲಿಕೆ, ಏಷ್ಯನ್ ಬ್ರೈಡಲ್ ಆ್ಯಂಡ್ ಟ್ರೇನಿಂಗ್ ಅಕಾಡೆಮಿ, ಸೈಮಾ ಹೇರ್ ಆ್ಯಂಡ್ ಬ್ಯೂಟಿ, ಬ್ರಿಟೀಶ್ ರೆಡ್ ಕ್ರಾಸ್ ಇನ್ನು ಹಲವು ವಿದೇಶಿ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದೇನೆ.
• ನಿಮಗೆ ಖುಷಿ ಕೊಡುವ ಫೋಟೊ ಶೂಟ್ ಯಾವುದು ?
ನಾನು ಮಾಡಿರುವ ಎಲ್ಲ ಫೋಟೊ ಶೂಟ್ಗಳೂ ಖುಷಿಕೊಟ್ಟಿವೆ. ನಾನು ಕ್ಯಾಮೆರಾ ಫ್ರೆಂಡ್ಲಿ. ಯಾವ್ಯಾವ ಫೋಟೊಗಳಿಗೆ ಹೇಗೆ ಫೋಸ್ ಕೊಡಬೇಕೆಂಬುದು ಕರಗತವಾಗಿದೆ. ಹಾಗಾಗಿಯೇ 30500 ಫೋಟೊಶೂಟ್ಗಳನ್ನು ಯಶಸ್ವಿಯಾಗಿ ಮುಗಿಸಿದ್ದೇನೆ. ಅಂದಹಾಗೆ ನನ್ನ ಬ್ರೈಡಲ್ ಫೋಟೊಗಳು (ಮಧುಮಗಳ ಲುಕ್ನ ಫೋಟೊಗಳು) ಜಗತ್ಪ್ರಸಿದ್ಧಿಗಳಿಸಿವೆ. ಬ್ರೈಡಲ್ ಫೋಟೊಗ್ರಫಿಯಲ್ಲಿ ನಾನೊಂದು ವಿಷಯ ವಸ್ತುವೇ ಆಗಿದ್ದು, ನನ್ನ ಕುರಿತು ಅಧ್ಯಯನವೇ ನಡೆಯುತ್ತಿದೆ. ಕೆಲವು ಕ್ಲೈಂಟ್ಗಳು 9 ಬಾರಿ ನನ್ನ ಬಳಿಯೇ ಫೋಟೊ ಶೂಟ್ ಮಾಡಿಸಿದ ಉದಾಹರಣೆಯೂ ಇದೆ. ಕಾರಣ ನನ್ನ ವೃತ್ತಿಪರತೆ ಹಾಗೂ ಕೌಶಲ್ಯ. ಎಷ್ಟೊ ಜನರಿಗೆ ವೆಂಬ್ಲಿ ಸ್ಟೇಡಿಯಂಗೆ ಹೋಗಬೇಕೆಂಬ ಕನಸಿರುತ್ತದೆ. ನನಗೆ ಆ ಸ್ಟೇಡಿಯಂಗೆ ಕರೆಸಿ ಸನ್ಮಾನಿಸಿದರು ಇದು ಮರೆಯಲಾಗದ ಕ್ಷಣ.
• ಮಾಡೆಲಿಂಗ್ ಕ್ಷೇತ್ರದ ಆಯ್ಕೆ ಹೇಗೆ?
ಮಾಡೆಲಿಂಗ್ ಎಂಬುದು ಈಚೆಗೆ ನನಗೆ ಬಂದ ಆಸಕ್ತಿಯಲ್ಲ. ನಾನು ಚಿಕ್ಕಂದಿನಿಂದಲೂ ಮಾಡೆಲಿಂಗ್ ಹಾಗೂ ಬಣ್ಣದ ಜಗತ್ತಿನ ಬಗ್ಗೆ ಆಕರ್ಷಿತಳಾಗಿದ್ದೆ. 9ನೇ ತರಗತಿಯಲ್ಲಿದ್ದಾಗಲೇ ರಾಂಪ್ ವಾಕ್ನ ಚಾತುರ್ಯತೆ ನನಗೆ ಲಭಿಸಿತ್ತು. ಬರುಬರುತ್ತಾ ಅದು ನನ್ನ ವೃತ್ತಿಯಾಯಿತು. ಅದು ಇನ್ನೂ ಮುಂದಕ್ಕೆ ಹೋಗಿ ಅಂತರಾಷ್ಟ್ರೀಯ ಸೆಲಬ್ರಿಟಿಯಾಗಿ ಹೊರಹೊಮ್ಮಿದ್ದೇನೆ. ನಾನು ಈ ಸ್ಥಾನಕ್ಕೇರಿದ್ದೇನೆ ಎನ್ನುವುದಕ್ಕಿಂತ ಕನ್ನಡದ ಗೌಡತಿಯೊಬ್ಬಳು ಈ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಬಗ್ಗೆ ನನಗೇ ಹೆಮ್ಮೆಯಾಗುತ್ತದೆ.
• ಶಿಕ್ಷಣ ಮತ್ತು ಫ್ಯಾಷನ್ ಲೋಕವನ್ನು ಸರಿದೂಗಿಸಿದ್ದು ಹೇಗೆ?
ನನಗೆ ಬಣ್ಣದ ಜಗತ್ತಿನ ಬಗ್ಗೆ ಎಷ್ಟು ವ್ಯಾಮೋಹವಿತ್ತೋ ಅದೇ ರೀತಿ ಶಿಕ್ಷಣದ ಬಗ್ಗೆಯೂ ಅಷ್ಟೇ ಆಕರ್ಷಣೆ ಇತ್ತು. ಬೆಂಗಳೂರು ವಿಶ್ವ ವಿದ್ಯಾಲಯದ ರ‌್ಯಾಂಕ್ ಹೋಲ್ಡರ್ ಆದ ನಾನು ಶಿಕ್ಷಣವನ್ನು ಎಂದಿಗೂ ನಿರ್ಲಕ್ಷಿಸಿಲ್ಲ. ಯುಕೆಯಲ್ಲಿ ಉನ್ನತ ಶಿಕ್ಷಣವನ್ನೂ ಪಡೆದೆ. ನಟನೆ ಕುರಿತು ಇನ್ನಷ್ಟು ಅಭ್ಯಾಸ ಮಾಡುವ ನಿಟ್ಟಿನಲ್ಲಿ ಕೋರ್ಸ್ ಕೂಡ ಮುಗಿಸಿದೆ. ನಾನು ಪರಿಣತಿ ಹೊಂದಿರುವ ನಟಿ, ರಂಗಭೂಮಿಯ ಎಲ್ಲಾ ಪಟ್ಟುಗಳು ಗೊತ್ತಿವೆ. ನಾನು ಯಾವುದೇ ಕ್ಷೇತ್ರದಲ್ಲಿ ಹೆಸರು ಮಾಡಿದರೂ ಶಿಕ್ಷಣವನ್ನು ನಿರ್ಲಕ್ಷಿಸಕೂಡದು ಎಂಬುದು ಅಪ್ಪ ಹೇಳಿದ ಮಾತು. ಅದನ್ನು ಚಾಚು ತಪ್ಪದೆ ಪಾಲಿಸಿದೆ. ಅವರ ಮಾತು ನನಗೆ ವೇದವಾಖ್ಯವಾಯಿತು.
• ಕಲಬೆರಕೆ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಿದ್ದು ಹೇಗೆ?
ನಾನು ಸಾಕಿದ್ದ ಮೀನೊಂದು ಸಾವಿಗೀಡಾಯಿತು. ನಾನು ಪ್ರೀತಿಯಿಂದ ಸಾಕಿದ್ದ ಮೀನದು. ಅದರ ಬೆಲೆ ಒಂದೂವರೆ ಲಕ್ಷ ರೂಪಾಯಿ. ಪ್ರೀತಿ ಮುಂದೆ ಹಣ ದೊಡ್ಡದಲ್ಲ. ಅದಕ್ಕೆ ನಿತ್ಯವೂ ಫೀಡ್ ಮಾಡುವ ಫುಡ್ ಖಾಲಿಯಾಗಿತ್ತು. ಅದರ ಬದಲಾಗಿ ಇನ್ನೊಂದು ಫುಡ್ ಪಾಕೆಟ್ ಅನ್ನು ನನ್ನ ಶಾಲೆಯ ಸಿಬ್ಬಂದಿಯೊಬ್ಬರು ಖರೀದಿಸಿ ತಂದು ಅದಕ್ಕೆ ತಿನ್ನಿಸಿದರು. ಅದಾದ ಕೆಲವೇ ದಿನಗಳಲ್ಲಿ ಮೀನು ಸಾವಿಗೀಡಾಯಿತು. ಅದಕ್ಕೆ ಕಾರಣ ಅದು ತಿಂದಿದ್ದ ಫುಡ್. ಅವಧಿ ಮುಗಿದ ಫುಡ್ ಪೊಟ್ಟಣದ ಮೇಲೆ ದಿನಾಂಕ ಬದಲಿಸಿ ಮಾರಾಟ ಮಾಡಲಾಗಿತ್ತು. ದೇಶದಲ್ಲಿ ಇಂಥ ಕಲಬೆರಕೆ ದಂದೆ ನಡೆಯುತ್ತಿರುವ ಬಗ್ಗೆ ಬೇಸರವಾಯಿತು. ಐ ಹೇಟ್ ಫೇಕ್ ಎಂಬ NGO ವೊಂದು ನಡೆಸಿದ ಕಲಬೆರಕೆ ಕುರಿತ ಜಾಗೃತಿಗೆ ನಾನು ರಾಯಭಾರಿಯಾದೆ. ಹೈದರಾಬಾದ್ನಲ್ಲಿ ಈ ಸಂಸ್ಥೆಯ ಕಾರ್ಯಕ್ರಮ ನಡೆಯಿತು. ನಟ ಮಹೇಶ್ ಬಾಬು ಅವರು ನನ್ನ ಜತೆ ಕಾರ‌್ಯಕ್ರಮದ ಮುಖ್ಯಸ್ಥರಾಗಿ ಪಾಲ್ಗೊಂಡಿದ್ದರು.
• ರಾಜಕಾರಣಿ ಮಗಳೆಂಬ ಪ್ರಭಾವ ನಿಮ್ಮ ಬೆಳವಣಿಗೆಗೆ ಸಹಕಾರಿಯಾಯಿತೇ?
ನಮ್ಮ ತಂದೆ ಪ್ರಭಾವಿ ರಾಜಕಾರಣಿ ಎಂಬ ಕಾರಣಕ್ಕೆ ನಾನು ರಾಜ್ಯದಲ್ಲಿ ಅಥವಾ ಈ ದೇಶದಲ್ಲಿ ಹೆಸರು ಮಾಡಬಹುದು. ವಿದೇಶದಲ್ಲಿ ಎಂಎನ್ಸಿ ಕಂಪನಿಗಳಿಗೆ ರಾಯಭಾರಿಯಾಗಬೇಕು ಎಂದರೆ ಅಲ್ಲಿ ನಮ್ಮಪ್ಪನ ಪ್ರಭಾವ ನಡೆಯುತ್ತಾ? ಖಂಡಿತ ಇಲ್ಲ. ನಾನು ಸ್ವಲ್ಪ ಸ್ವಾಭಿಮಾನಿ ನನ್ನದೇ ಸ್ವಂತ ಕಾಲಿನ ಮೇಲೆ ನಿಲ್ಲಬೇಕೆಂಬ ಹಂಬಲ ಇದೆ. ಹಾಗಾಗಿ ನನ್ನದಲ್ಲದ ಊರಿನಲ್ಲಿ ನಾನಾಗಿ ಬೆಳೆದೆ. ಅಪ್ಪನ ಬೆಂಬಲ ಇದೆಯೇ ಹೊರತು, ಪ್ರಭಾವ ಇಲ್ಲ.
• ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳದೆ ನೀವು ಆ ಕ್ಷೇತ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ?
ಖಂಡಿತ ಇಲ್ಲ. ಏಕೆಂದರೆ ಸಿನಿಮಾ ಆಫರ್ ಗಳು ನನಗೆ ಇಂದು ನಿನ್ನೆ ಬಂದದ್ದಲ್ಲ. ಸಿನಿಮಾಗಳಲ್ಲಿ ನಟಿಸಬೇಕೆಂದು ಅವಕಾಶಗಳು ಸರಣಿಯಾಗಿ ನನ್ನನ್ನು ಹುಡುಕಿಕೊಂಡು ಬಂದವು. ಆದರೆ, ನಾನು ತುಂಬ ಚೂಸಿ. ನನಗೆ ತಕ್ಕನಾದ ಕತೆ, ಒಂದು ಶಕ್ತಿಯುತ ಪಾತ್ರವಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ?
• ಸದ್ಯ ಯಾವ ಆಫರ್ಗಳು ನಿಮ್ಮ ಕೈಲಿವೆ.
ನಾನು ನಾಯಕಿಯಾಗಿ ನಟಿಸುತ್ತಿರುವ ಬಾಲಿವುಡ್ ಸಿನಿಮಾ, ಚಿತ್ರೀಕರಣ ಹಂತದಲ್ಲಿದೆ. ಸಿನಿಮಾದ ಶೂಟಿಂಗ್ ಸದ್ಯ ಊಟಿಯಲ್ಲಿ ನಡೆಯುತ್ತಿದೆ.
• ರಾಜಕೀಯಕ್ಕೆ ಬರುವ ಆಸಕ್ತಿ ಇದೆಯೇ?
ಖಂಡಿತ ಇಲ್ಲ. ಜನ ಸೇವೆ ಮಾಡಲು ರಾಜಕೀಯ ಒಂದು ಕ್ಷೇತ್ರ ಹೌದು ಆದರೆ, ಅದೊಂದೇ ಕ್ಷೇತ್ರದಲ್ಲಿ ಜನ ಸೇವೆ ಮಾಡಲು ಅವಕಾಶ ಎಂದಲ್ಲ. ನಾನು ಹೊರಗಿನಿಂದಲೇ ಸೇವೆ ಮಾಡಲು ಇಚ್ಛಿಸುತ್ತೇನೆ.
• ನಿಮ್ಮ ಫಿಟ್ನೆಸ್‌ನ ಗುಟ್ಟೇನು?
ದಿನವೂ ಮೂರು ಗಂಟೆಗಳ ಕಾಲ ವರ್ಕ್ ಔಟ್ ಮಾಡುತ್ತೇನೆ. ನಿಯಮಿತ ಆಹಾರ, ಡಯೆಟ್ ಇವು ನನ್ನ ಆರೋಗ್ಯದ ಗುಟ್ಟು. ಸಣ್ಣ ಆಗಲು ಸಪ್ಲಿಮೆಂಟ್‌ಗಳನ್ನು ಸೇವಿಸುವುದಿಲ್ಲ.ನಿತ್ಯದ ಆಹಾರದಲ್ಲೇ ಕಂಟ್ರೋಲ್ ಮಾಡುತ್ತೇನೆ. ಟೆಕ್ವೆಂಡೊ, ಮಾರ್ಷಲ್ ಆರ್ಟ್ಸ್, 1300 ವರ್ಕ್ ಔಟ್‌ಗಳು ದಿನವೂ ಮಾಡುತ್ತೇನೆ. ಭರತ ನಾಟ್ಯ, ಏರೋಬಿಕ್ಸ್, ಸಾಲ್ಸಾ, ಸಂಬ ಮೊಂಬ ಮೊದಲಾದ ಡಾನ್ಸ್‌ಗಳು ನನ್ನ ಫಿಟ್‌ನೆಸ್ಟ್ ರಹಸ್ಯ. ಯೋಗದಿಂದ ನನ್ನಲ್ಲಿ ಧನಾತ್ಮಕ ಶಕ್ತಿ ತುಂಬಿದೆ. ರೋಪ್ ವ್ಯಾಯಾಮಗಳೂ ಕೂಡ ಮಾಡುತ್ತೇನೆ. ಬಾದಾಮಿ, ಗೋಡಂಬಿ ಮೊದಲಾದ ಐದು ನಟ್ಸ್‌ಗಳಿಂದ ದೇಹಕ್ಕೆ ಸಾಕಷ್ಟು ಎಣ್ಣೆ ಅಂಶ ಸಿಗುತ್ತದೆ. ಬ್ರೋಕ್ಲಿ ಗ್ರೀನ್ ಟೀ ನನ್ನ ಬದುಕನ್ನು ಬದಲಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ಸಿನಿ ಸುದ್ದಿ
ಪೊಗರು ವಿವಾದ ಅಂತ್ಯ | ಸೀನ್ ಕಟ್ ; ಶುಭಹಾರೈಸಿದ ಬ್ರಾಹ್ಮಣ ಸಮುದಾಯ

ಸುದ್ದಿದಿನ, ಬೆಂಗಳೂರು : ಕೊನೆಗೂ ‘ಪೊಗರು’ ಸಿನಿಮಾದ ಕಾಂಟ್ರವರ್ಸಿ ಸುಖಾಂತ್ಯ ಕಂಡಿದ್ದು, ಸಿನಿಮಾ ನೋಡಿ ಬ್ರಾಹ್ಮಣ ಸಭಾದ ಸದಸ್ಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ನಂದ ಕಿಶೋರ್ ನಿರ್ದೇಶಸಿ, ಧ್ರುವ ಸರ್ಜಾ ನಟಿಸಿರುವ ‘ಪೊಗರು’ ಸಿನಿಮಾ ಕಳೆದ ಶುಕ್ರವಾರ ತೆರೆ ಕಂಡಿತ್ತು. ಬ್ರಾಹ್ಮಣರನ್ನು ಅವಹೇಳನ ಮಾಡುವ ಸಂಭಾಷಣೆ ಮತ್ತು ದೃಶ್ಯಗಳನ್ನ ಸಿನಿಮಾದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ ಎಂದು ಕ ಬ್ರಾಹ್ಮಣ ಸಮುದಾಯು ‘ಪೊಗರು’ ಸಿನಿಮಾ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಮಂಗಳವಾರ ಬ್ರಾಹ್ಮಣ ಸಭಾದ ಸದಸ್ಯರು ಫಿಲ್ಮ್ ಚೇಂಬರ್ ಗೆ ಹೋಗಿ ‘ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಿರುವ ದೃಶ್ಯಗಳನ್ನ ತೆಗೆಯುವಂತೆ ಆಗ್ರಹಿಸಿದ್ದರು. ಸಿನಿಮಾದ ನಿರ್ಮಾಪಕ ಬಿ.ಕೆ ಗಂಗಾಧರ್ ಹಾಗೂ ನಿರ್ದೇಶಕ ನಂದ ಕಿಶೋರ್ ಅವರು ಬ್ರಾಹ್ಮಣ ಸಮುದಾಯದ ಜೊತೆ ಚರ್ಚಿಸಿ ಅವಹೇಳನದಂತೆ ಕಾಣುವ ದೃಶ್ಯಗಳನ್ನು ಎಡಿಟ್ ಮಾಡುವಂತೆ ತಿಳಿಸಿದ್ದರು.
ಬುಧವಾರ ಬ್ರಾಹ್ಮಣ ಸಮುದಾಯದ ಸದಸ್ಯರು ಎಡಿಟ್ ಮಾಡಿದ ‘ಪೊಗರು’ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಾಹ್ಮಣ ಸಮುದಾಯದ ಸದಸ್ಯರು ಹೇಳಿದ ದೃಶ್ಯಗಳಿಗೆ ‘ಪೊಗರು’ ಚಿತ್ರತಂಡ ಕತ್ತರಿ ಹಾಕಿದ್ದು, ಬ್ರಾಹ್ಮಣ ಸಮುದಾಯದ ಸದಸ್ಯರು ‘ಪೊಗರು’ ತಂಡಕ್ಕೆ ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಸಿನಿ ಸುದ್ದಿ
ವಿಡಿಯೋ | ನೇತ್ರಾಣಿ ದ್ವೀಪದಲ್ಲಿ ಅಪ್ಪು ‘ಬ್ಯಾಕ್ಫ್ಲಿಪ್’; ಅಭಿಮಾನಿಗಳು ಫಿದಾ..! ನೀವೂ ಒಮ್ಮೆ ನೋಡಿ ಬಿಡಿ

ಸುದ್ದಿದಿನ ಡೆಸ್ಕ್ : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ತಮ್ಮ ಫಿಟ್ನೆಸ್ ಗಾಗಿ ಮಾಡದ ವರ್ಕೌಟ್ ಇಲ್ಲ. ಜಿಮ್, ಯೋಗ, ಸೈಕ್ಲಿಂಗ್, ಡಾನ್ಸ್ ಹೀಗೆ ಹಲವು ದೈಹಿಕ ಚಟುವಟಿಕೆಗಳನ್ನು ಉತ್ಸಾಹದಿಂದ ಮಾಡುತ್ತಾರೆ.
ಪುನೀತ್ ಬ್ಯಾಕ್ ಫ್ಲಿಪ್ ಮಾಡುವುದರಲ್ಲೂ ಸಿದ್ದಹಸ್ತರು. ಮುರುಡೇಶ್ವರದ ಹತ್ತಿರ ವಿರುವ ನೇತ್ರಾಣಿ ದ್ವೀಪದಲ್ಲಿ ಬ್ಯಾಕ್ ಫ್ಲಿಪ್ ಮಾಡಿದ್ದು, ಅದ ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಲಿಂಕ್
https://www.facebook.com/watch/?v=1547766108948138
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಸಿನಿ ಸುದ್ದಿ
ವಂಚನೆ ಪ್ರಕರಣ : ಬಿಗ್ ಬಾಸ್ ನಟಿಯ ವಿರುದ್ಧ ಎಫ್ ಐ ಆರ್ ದಾಖಲು

ಸುದ್ದಿದಿನ ಡೆಸ್ಕ್ : ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಹರಿಯಾನ್ವಿ ಗಾಯಕಿ,ನೃತ್ಯಗಾರ್ತಿ ಸಪ್ನಾ ಚೌಧರಿ ಮತ್ತು ಇತರರ ವಿರುದ್ಧ ಹಣದ ದುರುಪಯೋಗ, ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ನಟಿ ಸಪ್ನಾ ಚೌಧರಿ 2018ರಲ್ಲಿ ಸ್ಟೇಜ್ ಶೋಗಾಗಿ ಪಿ ಆರ್ ಕಂಪೆನಿಯ ಮುಖ್ಯಸ್ಥ ಪಂಕಜ್ ಚಾವ್ಲಾ ಅವರಿಂದ 1 ಕೋಟಿ ರೂ ಮುಂಗಡ ಹಣವನ್ನು ಪಡೆದಿದ್ದರು. ಆ ಮುಂಗಡ ಹಣದಲ್ಲಿ ನಟಿ ಚೌಧರಿ ಫ್ಲ್ಯಾಟ್ ಖರೀದಿಸಿದ್ದಾರೆ
ಒಪ್ಪಂದದ ಪ್ರಕಾರ ವೇದಿಕೆಯಲ್ಲಿ ಪ್ರದರ್ಶನ ನೀಡಲಿಲ್ಲ ಎನ್ನುವ ಆರೋಪ ಕೇಳಿಬಂದಿದ್ದು, ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ಸಪ್ನಾ ಚೌಧರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇ 2018 ರಲ್ಲಿ, ಎಂ.ಎಸ್. ಚೌಧರಿ ಮತ್ತು ಅವರ ತಾಯಿ ಆರೋಗ್ಯ ಸಮಸ್ಯೆ ಇದ್ದ ಸಮಯ ಚಾವ್ಲಾ ಅವರಿಂದ 50 ಲಕ್ಷ ರೂ.ಪ, ಅದರ ನಂತರ ತಲಾ 25 ಲಕ್ಷ ರೂ.ಗಳ ಎರಡು ಚೆಕ್ಗಳನ್ನು ಅವರಿಗೆ ನೀಡಲಾಗಿದೆ ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ಅಂತರಂಗ5 days ago
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
-
ಭಾವ ಭೈರಾಗಿ6 days ago
ಕರುಣಾಳು ಅವನು, ಅವನು ನನ್ನವನು..!
-
ದಿನದ ಸುದ್ದಿ5 days ago
ದಿಶಾ ಕೇಸ್ | ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ..! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು..!
-
ದಿನದ ಸುದ್ದಿ6 days ago
ಬಡವರನ್ನು ಸಬಲೀಕರಣಗೊಳಿಸಲು ಉಚಿತ ಅನಿಲ ಸಂಪರ್ಕ ನೀಡಿದ್ದೇವೆ : ಪ್ರಧಾನಿ ಮೋದಿ
-
ಲೈಫ್ ಸ್ಟೈಲ್5 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ5 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್5 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ
-
ಭಾವ ಭೈರಾಗಿ5 days ago
ಕವಿತೆ | ಅವಳು