Connect with us

ದಿನದ ಸುದ್ದಿ

ಕನ್ನಡ ಅಧಿನಿಯಮ ಜಾರಿಗೆ ವಿಳಂಬ : ಜ್ಞಾನ್ ಮಧು ಕಲ್ಲಹಳ್ಳಿ

Published

on

  • ವರದಿ: ಶಿವರಾಜ್ ಮೋತಿ

ಸುದ್ದಿದಿನ,ಬೆಂಗಳೂರು: ರಾಜ್ಯ ಸರ್ಕಾರವು “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ” ಅಂದರೆ “ಕನ್ನಡ ಕಾಯಿದೆ” ಈಗಾಗಲೇ ಅನುಮೋದನೆ ಆಗಿದ್ದು 2023 ರಲ್ಲಿ. ಈಗ ಹೊಸ ಸರ್ಕಾರ ರಚನೆಯಾಗಿ ಒಂದು ವರ್ಷ ತುಂಬಿದರೂ ಈ ಅಧಿನಿಯಮ ಜಾರಿ ಮಾಡುವ ಪ್ರಾಧಿಕಾರಗಳು, ಆಯೋಗಗಳು, ನಿರ್ದೇಶನಾಲಯಗಳ ರಚನೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಸರ್ಕಾರವು ಮಾರ್ಚ್ 12 , 2024 ರಿಂದ ಈ ಅಧಿನಿಯಮ ಜಾರಿಯಲ್ಲಿದೆ ಎಂದು ರಾಜ್ಯಪತ್ರ ಹೊರಡಿಸಿ ಸುಮ್ಮನಾಗಿ ಬಿಟ್ಟಿದೆ. ಈ ಅಧಿನಿಯಮ ಜಾರಿಯಾಗಲು ಆದಷ್ಟು ಬೇಗ ಪ್ರಾಧಿಕಾರಗಳು, ನಿರ್ದೇಶನಾಲಯ, ಭಾಷಾ ಆಯೋಗಗಳು ರಚನೆಯಾಗಬೇಕೆಂದು ಕನ್ನಡ ಪರ ವಿಚಾರವಂತರು, ಹೋರಾಟಗಾರರೂ ಆದ ಜ್ಞಾನ್ ಮಧು ಕಲ್ಲಹಳ್ಳಿ ತಿಳಿಸಿದರು.

ಅತಿ ತುರ್ತಾಗಿ ಈ ಆಡಳಿತ ವ್ಯವಸ್ಥೆ ಮುಗಿಸಲು ಮತ್ತು ಈ ಅಧಿನಿಯಮದ ಪರಿಣಾಮಕಾರಿ ಅನುಷ್ಠಾನ ಬೇಗ ಆಗಲೆಂದು ಸರ್ಕಾರಕ್ಕೆ ಖುದ್ದಾಗಿ ಒತ್ತಡ ಹೇರಿ ಕನ್ನಡ ಎಲ್ಲೆಡೆ ಬರುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ ಜೊತೆಗೆ ಈ ವಿಳಂಬವು ಸಾಕಷ್ಟು ಕನ್ನಡ ಅಭಿವೃದ್ದಿಗೆ ಈಗಾಗಲೇ ಹಿನ್ನೆಡೆಯಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಕೆಲಸ ಎಲ್ಲ ಕೆಲಸಗಳಿಗಿಂತ ಮೊದಲ ಆದ್ಯತೆಯಾಗಿರಬೇಕೆಂದು ಈ ಮೂಲಕ ಮನವರಿಕೆ ಮಾಡಿಕೊಡಲು ಇಚ್ಛಿಸುತ್ತೇನೆಂದು ಹಲ್ಮಿಡಿ ಕೂಟದ ಸಂಸ್ಥಾಪಕರಾದ ಪ್ರಾದೇಶಿಕವಾದಿ ಜ್ಞಾನ್ ಮಧು ಕಲ್ಲಹಳ್ಳಿ(ಜ್ಞಾನೇಶ್ವರ್) ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ “ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಅಧಿನಿಯಮ” ಮಾಡಬೇಕಾದ ತಿದ್ದುಪಡಿಯ ವಿಸ್ತೃತವಾದ ವರದಿಯನ್ನು ಸಲ್ಲಿಸಿ ಹಾಗೆಯೇ ನಾನು ಈ ಹಿಂದಿನ ಸರ್ಕಾರದಲ್ಲಿ ಪ್ರಸ್ತಾಪ ಮಾಡಿ ಕೊನೆಯ ಹಂತಕ್ಕೆ ತಲುಪಿರುವ ಕನ್ನಡ ಯೋಜನೆಗಳ ಬಗ್ಗೆ ಭೇಟಿಯಾಗಿ ವಿಸ್ತೃತವಾಗಿ ಚರ್ಚಿಸಿ ವಿಷಯಗಳನ್ನು ಹಂಚಿಕೊಂಡು ಕನ್ನಡದ ಕಾರ್ಯಗಳು ಆದಷ್ಟು ಬಹುಬೇಗನೇ ಪೂರ್ಣವಾಗಲೆಂದು ಮನವಿಕೊಟ್ಟು ಬಂದಿದ್ದೇನೆಂದು ತಿಳಿಸಿದರು. (ವರದಿ: ಶಿವರಾಜ್ ಮೋತಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪುಸ್ತಕ ಬಹುಮಾನ | ಲೇಖಕ ; ಪ್ರಕಾಶಕರಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ ಕಲಾಪ್ರಕಾರಗಳಾದ (ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ), ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಇತ್ಯಾದಿ ಕಲಾಪ್ರಕಾರಗಳಿಗೆ ಸಂಬಂಧಿಸಿದಂತೆ 2022 ಹಾಗೂ 2023ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ ಪ್ರಕಟಿಸಿರುವ ಪ್ರಥಮ ಆವೃತ್ತಿ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ , ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಯ್ಕೆಯಾದ ಪುಸ್ತಕಕ್ಕೆ ರೂ.25,000/-ಗಳ ಬಹುಮಾನವನ್ನು ನೀಡಲಾಗುವುದು. ಯಕ್ಷಗಾನದ ವಿವಿಧ ಆಯಾಮಗಳಾದ ಸಂಗೀತ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ.

ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು 560 002, ಇವರಿಗೆ ಪುಸ್ತಕದ ನಾಲ್ಕು ಪ್ರತಿಗಳೊಂದಿಗೆ ಕಳುಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 080-22113146 ದೂರವಾಣಿಗೆ ಸಂಪರ್ಕಿಸಲು ರಿಜಿಸ್ಟ್ರಾರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬ್ಯಾಕ್ ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡದಿದ್ದರೆ ಕಠಿಣ ಕ್ರಮ : ಸಚಿವ ಡಾ.ಹೆಚ್.ಸಿ.ಮಹದೇವಪ್ಪ

Published

on

ಸುದ್ದಿದಿನಡೆಸ್ಕ್:ನ್ಯಾಯಾಲಯದ ಆದೇಶದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡುವಂತೆ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳು, ನಿಗಮಗಳು, ಮಂಡಳಿಗಳು, ಸಹಕಾರ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯದಲ್ಲಿ ಬಾಕಿ ಇರುವ ಹುದ್ದೆಗಳನ್ನು ಭರ್ತಿ ಮಾಡಿರುವ ಬಗ್ಗೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪ್ರಗತಿ ಪರಿಶೀಲಿಸುವಂತೆ ನಿರ್ದೇಶನ ನೀಡಿದರು.

ಸಂವಿಧಾನಾತ್ಮಕ ಹುದ್ದೆಗಳನ್ನು ಭರ್ತಿ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಳಂಬ ಮತ್ತು ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಡಾ. ಮಹದೇವಪ್ಪ ಎಚ್ಚರಿಕೆ ನೀಡಿದರು.

https://x.com/CMahadevappa/status/1807981112821469317?t=hkrumLedUcPg92VQNpi4Ow&s=19

https://x.com/CMahadevappa/status/1807720400073249053?t=PM_8Q86VfkCqbKWHf5zoIQ&s=19

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸ್ತ್ರೀಬಂಜೆತನಕ್ಕೆ ಕಾರಣಗಳು ಮತ್ತು ಲಕ್ಷಣಗಳು

Published

on

ಒಂದು ವರ್ಷಕ್ಕೂ ಹೆಚ್ಚು ಕಾಲ ಆಗಾಗ್ಗೆ ಪ್ರಯತ್ನಿಸಿದರೂ ಗರ್ಭಿಣಿಯಾಗಲು ಸಾಧ್ಯವಾಗದಿರುವುದು ಬಂಜೆತನ ಎಂದು ವ್ಯಾಖ್ಯಾನಿಸಲಾಗಿದೆ. ಪುರುಷ /ಮಹಿಳೆಯರಿಗೆ ಬಂಜೆತದ ಸಮಸ್ಯೆ ಕಾಡಬಹುದು. ಕೆಲವು ಸಂದರ್ಭಗಳಲ್ಲಿ ಬಂಜೆತನವನ್ನು ಸ್ವಯಂ ಕಂಡುಹಿಡಿಯಬಹುದು. ದಂಪತಿಗಳಿಗೆ ಕಾರಣ ತಿಳಿದಿಲ್ಲದಿದ್ದರೆ, ವೈದ್ಯರು ಅನೇಕ ಪರೀಕ್ಷೆಗಳನ್ನು ಮಾಡಿ, ಬಂಜೆತನಕ್ಕೆ ಕಾರಣವೇನು ಎಂಬುದನ್ನು ಕಂಡು ಹಿಡಿಯಲು ಸಹಾಯ ಮಾಡ ಬಹುದು.

ಬಂಜೆತನದ ಕಾರಣಗಳು:
ಮಹಿಳೆಯರಲ್ಲಿ ಬಂಜೆತನವು ಹೆಚ್ಚಾಗಿ ಅಂಡೋತ್ಪತ್ತಿ ಅಸ್ವಸ್ಥತೆಗಳಿಂದ ಉಂಟಾಗುತ್ತದೆ:
• ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS)
• ಪ್ರೈಮರಿ ಓವರಿಯನ್ ಇನ್ಸುಫಿಸೈನ್ಸಿ (POI)
• ಹೈಪರ್ಪ್ರೊಲ್ಯಾಕ್ಟಿನೆಮಿಯಾ
ಸ್ತ್ರೀ ಬಂಜೆತನವು ಗರ್ಭಾಶಯದ ಅಥವಾ ಗರ್ಭಕಂಠದ ಅಸಹಜತೆಗಳು, ಫಾಲೋಪಿಯನ್ ಟ್ಯೂಬ್ ಹಾನಿ, ಗರ್ಭಾಶಯದ ಫೈಬ್ರಾಯ್ಡ್ಗಳು, ಎಂಡೊಮೆಟ್ರಿಯೊಸಿಸ್, ತೀವ್ರ ಮಾನಸಿಕ ಯಾತನೆ ಇತ್ಯಾದಿಗಳಿಂದ ಕೂಡ ಉಂಟಾಗಬಹುದು.

ರೋಗಲಕ್ಷಣಗಳು:ಬಂಜೆತನದ ಮುಖ್ಯ ಲಕ್ಷಣವೆಂದರೆ ಗರ್ಭಿಣಿಯಾಗಲು ಅಸಮರ್ಥತೆ. ದೀರ್ಘಾವಧಿಯ ಮುಟ್ಟು (35 ದಿನಗಳು ಅಥವಾ ಹೆಚ್ಚು), ತುಂಬಾ ಕಡಿಮೆ ಅವಧಿಗೆ ಮುಟ್ಟಾ ಗುವುದು (21 ದಿನಗಳಿಗಿಂತ ಕಡಿಮೆ), ಅನಿಯಮಿತ ಮುಟ್ಟು ಅಥವಾ ಮುಟ್ಟಾಗದಿರುವುದು – ಇದಲ್ಲ ನೀವು ಅಂಡೋತ್ಪತ್ತಿ ಮಾಡುತ್ತಿಲ್ಲ ಎಂದು ಅರ್ಥೈಸಬಹುದು.

ಪರೀಕ್ಷೆಗಳು:ಮಹಿಳೆಯರ ಫಲವತ್ತತೆ ಆರೋಗ್ಯಕರ ಮೊಟ್ಟೆಗಳನ್ನು ಬಿಡುಗಡೆ ಮಾಡುವ ಅಂಡಾಶಯವನ್ನು ಅವಲಂಬಿಸಿರುತ್ತದೆ. ಸಂತಾನೋತ್ಪತ್ತಿ ಪ್ರದೇಶವು ಮೊಟ್ಟೆಯನ್ನು ಫಾಲೋಪಿಯನ್ ಟ್ಯೂಬ್ಗಳಿಗೆ ಹಾದುಹೋಗಲು ಅನುಮತಿಸಬೇಕು ಮತ್ತು ಫಲೀಕರಣಕ್ಕಾಗಿ ವೀರ್ಯದೊಂದಿಗೆ ಸೇರಿಕೊಳ್ಳಬೇಕು. ಫಲವತ್ತಾದ ಮೊಟ್ಟೆಯು ಗರ್ಭಾಶಯಕ್ಕೆ ಹೋಗಬೇಕು ಮತ್ತು ಒಳಪದರದಲ್ಲಿ ಸೇರ ಬೇಕು. ಸ್ತ್ರೀ ಬಂಜೆತನದ ಪರೀಕ್ಷೆಗಳು ಈ ಪ್ರಕ್ರಿಯೆಗಳಲ್ಲಿ ಯಾವುದಾದರೂ ದುರ್ಬಲಗೊಂಡಿವೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತವೆ.

ಅಂಡೋತ್ಪತ್ತಿ ಪರೀಕ್ಷೆ: ಹಾರ್ಮೋನ್ ಮಟ್ಟವನ್ನು ಅಳೆಯಲು ರಕ್ತ ಪರೀಕ್ಷೆಯನ್ನು ಮಾಡಲಾಗುತ್ತದೆ. ನೀವು ಅಂಡೋತ್ಪತ್ತಿ ಮಾಡುತ್ತಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ಹಿಸ್ಟರೊಸಾಲ್ಪಿಂಗೋಗ್ರಫಿ: ಇದು ಗರ್ಭಾಶಯ ಮತ್ತು ಫಾಲೋಪಿಯನ್ ಟ್ಯೂಬ್ಗಳ ಸ್ಥಿತಿಯನ್ನು ಪರೀಕ್ಷಿಸುತ್ತದೆ ಮತ್ತು ಅಡೆತಡೆಗಳು ಅಥವಾ ಇತರೆ ಸಮಸ್ಯೆಗಳನ್ನು ಸಹ ಪರೀಕ್ಷೆ ಮಾಡುತ್ತದೆ. ಎಕ್ಸ್-ರೇ ಕಾಂಟ್ರಾಸ್ಟ್ ಅನ್ನು ಗರ್ಭಾಶಯಕ್ಕೆ ಚುಚ್ಚಲಾಗುತ್ತದೆ, ನಂತರ ಕುಹರವು ಸಾಮಾನ್ಯವಾಗಿದೆಯೇ ಎಂದು ನಿರ್ಧರಿಸಲು ಮತ್ತು ಫಾಲೋಪಿಯನ್ ಟ್ಯೂಬ್ಗಳಿಂದ ದ್ರವವು ಹೊರಬರುತ್ತಿದೆಯೇ ಎಂದು ನೋಡಲು ಎಕ್ಸ್-ರೇ ತೆಗೆದುಕೊಳ್ಳಲಾಗುತ್ತದೆ.

ಓವರಿಯನ್ ರಿಸರ್ವೆ ಟೆಸ್ಟಿಂಗ್: ಈ ಪರೀಕ್ಷೆಯು ಅಂಡೋತ್ಪತ್ತಿಗೆ ಲಭ್ಯವಿರುವ ಮೊಟ್ಟೆಗಳ ಪ್ರಮಾಣವನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಈ ಪರೀಕ್ಷೆಯು ಋತುಚಕ್ರದ ಆರಂಭದಲ್ಲಿ ಹಾರ್ಮೋನ್ ಪರೀಕ್ಷೆಯೊಂದಿಗೆ ಪ್ರಾರಂಭವಾಗುತ್ತದೆ.

ಇತರ ಹಾರ್ಮೋನ್ ಪರೀಕ್ಷೆಗಳು: ಇತರ ಹಾರ್ಮೋನ್ ಪರೀಕ್ಷೆಗಳು ಅಂಡೋತ್ಪತ್ತಿ ಹಾರ್ಮೋನುಗಳ ಮಟ್ಟವನ್ನು ಹಾಗೆಯೇ ಪಿಟ್ಯುಟರಿ ಹಾರ್ಮೋನುಗಳನು (ಸಂತಾನೋತ್ಪತ್ತಿ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ) ಪರಿಶೀಲಿಸಲು ಮಾಡಲಾಗುತ್ತದೆ.

ಇಮೇಜಿಂಗ್ ಪರೀಕ್ಷೆಗಳು: ಶ್ರೇಣಿಯ ಅಲ್ಟ್ರಾಸೌಂಡ್ ಗರ್ಭಾಶಯದ ಅಥವಾ ಅಂಡಾಶಯದ ರೋಗವನ್ನು ಹುಡುಕುತ್ತದೆ. ಕೆಲವೊಮ್ಮೆ ಸೋನೊಹಿಸ್ಟರೊಗ್ರಾಮ್ ಅನ್ನು (ಸಲೈನ್ ಇನ್ಫ್ಯೂಷನ್ ಸೋನೋಗ್ರಾಮ್ ಎಂದೂ ಕರೆಯುತ್ತಾರೆ) ಗರ್ಭಾಶಯದ ಒಳಗಿನ ವಿವರಗಳನ್ನು ನೋಡಲು ಬಳಸಲಾಗುತ್ತದೆ, ಏಕೆಂದರೆ ಇದು ಸಾಮಾನ್ಯ ಅಲ್ಟ್ರಾಸೌಂಡ್ ನಲ್ಲಿ ಕಾಣುವುದಿಲ್ಲ.ಪರಿಸ್ಥಿತಿಗೆ ಅನುಗುಣವಾಗಿ, ಅಪರೂಪದ ಪರೀಕ್ಷೆಯು ಸಹ ಒಳಗೊಂಡಿರಬಹುದು.

ಹಿಸ್ಟರೊಸ್ಕೋಪಿ: ರೋಗಲಕ್ಷಣಗಳನ್ನು ಅವಲಂಬಿಸಿ, ವೈದ್ಯರು ಗರ್ಭಾಶಯದ ರೋಗವನ್ನು ಪರೀಕ್ಷಿಸಲು ಹಿಸ್ಟರೊಸ್ಕೋಪಿಗೆ ಹೇಳಬಹುದು. ಕಾರ್ಯವಿಧಾನದ ಸಮಯದಲ್ಲಿ, ಯಾವುದೇ ಸಂಭಾವ್ಯ ಅಸಹಜತೆಗಳನ್ನು ಪರೀಕ್ಷಿಸಲು ವೈದ್ಯರು ಗರ್ಭಕಂಠದ ಮೂಲಕ ತೆಳುವಾದ ಸಾಧನವನ್ನು ಗರ್ಭಾಶಯದೊಳಗೆ ಸೇರಿಸುತ್ತಾರೆ.

ಲ್ಯಾಪರೊಸ್ಕೋಪಿ: ಈ ಶಸ್ತ್ರಚಿಕಿತ್ಸೆಯಲ್ಲಿ ಹೊಕ್ಕುಳದ ಕೆಳಗೆ ಸಣ್ಣ ಛೇದನವನ್ನು ಮಾಡಿ, ತೆಳುವಾದ ಸಾಧನವನ್ನು ಸೇರಿಸಿ, ಫಾಲೋಪಿಯನ್ ಟ್ಯೂಬ್ಗಳು, ಅಂಡಾಶಯಗಳು ಮತ್ತು ಗರ್ಭಾಶಯವನ್ನು ಪರೀಕ್ಷಿಸುತ್ತರೆ. ಲ್ಯಾಪರೊಸ್ಕೋಪಿಯಿಂದ ಎಂಡೊಮೆಟ್ರಿಯೊಸಿಸ್, ಗಾಯ, ತಡೆ ಅಥವಾ ಫಾಲೋಪಿಯನ್ ಟ್ಯೂಬ್ಗಳ ಇತರ ಸಮಸ್ಯೆಗಳನ್ನು ಕಂಡುಹಿಡಿಯಬಹುದು. ಅಲ್ಲದೆ ಅಂಡಾಶಯ ಮತ್ತು ಗರ್ಭಾಶಯದ ಸಮಸ್ಯೆಗಳಿದ್ದರು ಕಂಡುಹಿಡಿಯಬಹುದು.

ಮನೆಮದ್ದುಗಳು
1. ಒಮೆಗಾ-3 ಕೊಬ್ಬಿನಾಮ್ಲಗಳು ಮಹಿಳೆಯರಲ್ಲಿ ಉತ್ತಮ ಅಂಡೋತ್ಪತ್ತಿ ಮತ್ತು ಪುರುಷರಲ್ಲಿ ಉತ್ತಮ ವೀರ್ಯದ ಆರೋಗ್ಯಕ್ಕೆ ಬಹಳ ಅವಶ್ಯಕವಾಗಿದೆ. ನಮ್ಮ ದೇಹವು ಒಮೆಗಾ -3 ಕೊಬ್ಬಿನಾಮ್ಲಗಳನ್ನು ತಯಾರಿಸಲು ಸಾಧ್ಯವಿಲ್ಲ ಆದ್ದರಿಂದ ಅವುಗಳನ್ನು ಆಹಾರದ ಮೂಲಕ ಪಡೆಯಬೇಕು. ವಾಲ್ ನಟ್, ಅಗಸೆ ಬೀಜಗಳು, ಸಮುದ್ರ ಮೀನು, ಗಸಗಸೆ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಸಮೃದ್ಧವಾಗಿದೆ. ಮಗುವಿಗೆ ಜನ್ಮ ನೀಡಲು ಬಯಸುವ ಮಹಿಳೆಯರಿಗೆ ಬಹಳ ಒಳ್ಳೆಯದು.

2. ಬಂಜೆತನದ ಪ್ರಮುಖ ಕಾರಣಗಳಲ್ಲಿ ಒಂದಾದ PCOS ಅನ್ನು ದಾಲ್ಚಿನ್ನಿ ಸೇವನೆಯಿಂದ ಸ್ವಲ್ಪ ಮಟ್ಟಿಗೆ ಸರಿಪಡಿಸಬಹುದು. ಇದು ಋತುಚಕ್ರವನ್ನು ಸುಧಾರಿಸುವ ಮೂಲಕ ಅಂಡಾಶಯದ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ದಾಲ್ಚಿನ್ನಿ ಸ್ತ್ರೀ ಬಂಜೆತನಕ್ಕೆ ಕಾರಣವಾಗುವ – ಅನಿಯಮಿತ ಮುಟ್ಟು, ಗರ್ಭಾಶಯದಲ್ಲಿನ ಫೈಬ್ರಾಯ್ಡ್ಗಳು ಅಥವಾ ಎಂಡೊಮೆಟ್ರಿಯೊಸಿಸ್ ಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನ ಸ್ವಲ್ಪ ಪ್ರಮಾಣದ ದಾಲ್ಚಿನ್ನಿ ಚಹಾವನ್ನು ಸೇವಿಸಿ.

3. ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರವು ಅಂಡೋತ್ಪತ್ತಿಗೆ ಸಹಾಯ ಮಾಡುತ್ತದೆ. ಹಸಿರು ಎಲೆಗಳ ತರಕಾರಿಗಳು, ಸೂರ್ಯಕಾಂತಿ ಬೀಜಗಳು, ತಾಜಾ ಹಣ್ಣುಗಳು, ಬೀನ್ಸ್, ಬ್ರೊಕೊಲಿ ಇತ್ಯಾದಿಗಳಲ್ಲಿ ಫೋಲಿಕ್ ಆಮ್ಲ ಸಮೃದ್ಧವಾಗಿದೆ.

ಉತ್ತಮ ಫಲಿತಾಂಶಕ್ಕಾಗಿ ಈ ಜೀವನಶೈಲಿ ಬದಲಾವಣೆಗಳನ್ನು ಮಾಡಿ:
• ಧ್ಯಾನವು ಒತ್ತಡದಿಂದ ಹೊರಬರಲು ಸಹಾಯ ಮಾಡುತ್ತದೆ.
• ಜಂಕ್ ಮತ್ತು ಕೊಬ್ಬಿನ ಆಹಾರವನ್ನು ಸೇವಿಸಬೇಡಿ.
• ಉತ್ತಮ ಮತ್ತು ಸಾಕಷ್ಟು ನಿದ್ರೆ ಪಡೆಯಲು ಪ್ರಯತ್ನಿಸಿ.
• ನಿಯಮಿತವಾಗಿ ವ್ಯಾಯಾಮ ಮಾಡಿ.
• ಸಂತೋಷವಾಗಿರಿ.
• ನಿಮ್ಮ ಸಂಗಾತಿಯೊಂದಿಗೆ ಯಾವಾಗಲೂ ಒಳ್ಳೆಯ ಸಮಯವನ್ನು ಕಳೆಯಲು ಪ್ರಯತ್ನಿಸಿ.

(ಬರಹ :ಡಾ. ರಮೇಶ್ ಬಿ.
ಆಲ್ಟಿಯಸ್ ಹಾಸ್ಪಿಟಲ್,# 6/63, 59ನೇ ಅಡ್ಡರಸ್ತೆ, 4ನೇ ಬ್ಲಾಕ್, ರಾಜಾಜಿನಗರ ಪ್ರವೇಶ ದ್ವಾರ, ಎಂಇಐ
ಪಾಲಿಟೆಕ್ನಿಕ್ ಎದುರು, ಬೆಂಗಳೂರು 560010
080-23151873, Ph 9900031842, 9844291777 – ಈ ಲೇಖನವು ಮಹಿಳೆಯರ ಬಂಜೆತನವನ್ನು ಕೇಂದ್ರೀಕರಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346343

Continue Reading

Trending