Connect with us

ದಿನದ ಸುದ್ದಿ

ನವಿಲೇಹಾಳಿನಲ್ಲಿ 67ನೇ ಕನ್ನಡ ರಾಜ್ಯೋತ್ಸವ ; ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ

Published

on

ಸುದ್ದಿದಿನ,ದಾವಣಗೆರೆ: ಚನ್ನಗಿರಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ,ಗ್ರಾಮ ಘಟಕ ನವಿಲೇಹಾಳಿನಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಶನಿವಾರ ನಡೆಯಿತು.

ಕನ್ನಡ ದ್ವಜಾರೋಹಣವನ್ನು ಮಂಗಳೂರು ಘಟಕದ ಆರಕ್ಷಕ ಉಪ ನಿರೀಕ್ಷಕರಾದ ಶ್ರೀಯುತ ಪ್ರದೀಪ್ ರವರು ನಾಡಗೀತೆ ಯೊಂದಿಗೆ ನೆರವೇರಿಸಿದರು.

ಬೃಹತ್ ಗಾತ್ರದ ನಾಡ ಬಾವುಟದ ಮೆರವಣಿಗೆಗೆ ನವಿಲೇಹಾಳು ಪದ್ಮಶ್ರೀ ಪ್ರೌಢ ಶಾಲೆಗೆ ಭೂ ಧಾನ ಮಾಡಿದ ಶ್ರೀಯುತ ಎನ್.ವಿ. ಮಂಜುನಾಥರವರು ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದರಿ ಗ್ರಾಮದ
ಕ.ರ.ವೇ ಗೌರವಾಧ್ಯಕ್ಷರಾದ ಶ್ರೀ ಜಿ.ಮಹೇಶ್ವರಪ್ಪ ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಉದಯ ಟಿವಿ ಹರಟೆ ಖ್ಯಾತಿಯ ಹಾಸ್ಯ ಭಾಷಣ
ಕಾರರಾದ ಕಲಬುರುಗಿಯ ಶ್ರೀಮತಿ ಇಂದುಮತಿ ಸಾಲಿಮಠ್ ರವರು ನೆರವೇರಿಸಿ, ತಮ್ಮ ಹಾಸ್ಯ ಭಾಷಣದಿಂದ ಮತ್ತು ಹಾಸ್ಯ ಹಾಡುಗಳಿಂದ ನೆರೆದಿದ್ದ ಗ್ರಾಮಸ್ಥರ ಜನಸ್ತೋಮವನ್ನು ನಗೆ ಕಡಲಿನಲ್ಲಿ ತೇಲಿಸಿದರು. ವರ ನಟ ಡಾ. ರಾಜಕುಮಾರ್ ರವರ ಸುಪುತ್ರ ಕರ್ನಾಟಕ ರತ್ನ,ಚಂದನ ವನದ ಧ್ರುವತಾರೆ ಪುನೀತ್ ರಾಜಕುಮಾರ್ ರವರ ಸಾಮಾಜಿಕ ಸೇವೆಯನ್ನು ತಾವೆಲ್ಲರೂ ಅನುಸರಿಸಬೇಕು, ಅಪ್ಪುತಮ್ಮ ಕಣ್ಣಿನ ಧಾನದಿಂದ ಇಂದು ನಾಲ್ಕು ಜನರ ಜೀವನಕ್ಕೆ ಬೆಳಕಾಗಿದೆ ಎಂದರು.

ಇಂದು ನೀವೆಲ್ಲರೂ ಈ ಕಾರ್ಯಕ್ರಮದಲ್ಲಿ ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ ಹಮ್ಮಿಕೊಂಡಿರುವುದು ಅತೀವ ಸಂತೋಷ ತಂದಿದೆ,ನಾನು ಕೂಡ ನನ್ನ ದೇಹವನ್ನು ಈಗಾಗಲೇ ತನ್ನ ಮರಣದ ನಂತರ ಧಾನ ಮಾಡಲಿಕ್ಕೆ ನೊಂದಣಿ ಮಾಡಿಕೊಂಡಿರುವ ಸತ್ಯ ಸಂಗತಿಯನ್ನು ತಿಳಿಸಿ,ಇಂದು ನವಿಲೇಹಾಳು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಊರಿನ ಹಿರಿಯರು- ಕಿರಿಯರು,ಗ್ರಾಮಸ್ಥರು,ಶಾಲಾ ಮಕ್ಕಳು,ಕನ್ನಡ ಮನಗಳು,ಕ.ರ.ವೇ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾಯಿ ಭುವನೇಶ್ವರಿ ಕೃಪೆಗೆ ಪಾತ್ರರಾಗಿರುವುದ್ದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಮದ್ಯಪಾನ ಒಳ್ಳೆಯ ಅಭ್ಯಾಸ ಅಲ್ಲ,ಯಾರು ಸಹ ಕುಡಿಯಬೇಡಿ ಎಂಬ ಉತ್ತಮ ಸಂದೇಶವನ್ನು ತಿಳಿಸಿದರು.ಎಲ್ಲರೂ ಸಹ ಕನ್ನಡ ಕಲಿಯಿರಿ,ಕಲಿಸಿರಿ,
ಕನ್ನಡವನ್ನು ಉಳಿಸಿರಿ, ಕನ್ನಡ ನಾಡು-ನುಡಿ ಸೇವೆಗೆ ತಮ್ಮ ಸಮಯ ಮೀಸಲಿಡಿ ಎಂಬುದಾಗಿ ತಿಳಿಸಿದರು.

ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ನವಿಲೇಹಾಳಿನ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಆಕರ್ಷಣೆಯಾಗಿ,ಎಲ್ಲಾರ ಪ್ರಶಂಸೆಯೊಂದಿಗೆ ಮೆಚ್ಚುಗೆ ಗಳಿಸಿದವು.ಮುಖ್ಯ ಅಥಿತಿಗಳಾಗಿ ಆಗಮನಿಸಿದ್ದ ಚಾಮರಾಜನಗರದ ಸಾಹಿತಿಗಳಾದ ಶ್ರೀ ಕೆ.ಶ್ರೀಧರ್(ಕೆ. ಸಿರಿ)ನವಿಲೇಹಾಳುನ ಸಾಹಿತಿಗಳಾದ ಡಾ.ಶ್ರೀ ಷಕೀಬ್ ಕಣದ್ಮನೆ ರವರು ರಚಿಸಿರುವ ನಮ್ಮೂರು ನವಿಲೂರು ಎಂಬ ಕವನ ವಾಚನ ದೊಂದಿಗೆ ತಮ್ಮ ಮಾತನ್ನು ಪ್ರಾರಂಭಿಸಿ, ಇತಿಹಾಸದ ಪುಟಗಳ ಸಂಗ್ರಹದೊಂದಿಗೆ ನವಿಲೂರು ನವಿಲೇಹಾಳು ಆದ ಸಂಗತಿಯನ್ನು ಬಿಚ್ಚಿಟ್ಟರು.ಹಾಗೂ ನವಿಲೇಹಾಳು ಗ್ರಾಮದಲ್ಲಿನ ಹಿಂದೂ-ಮುಸ್ಲಿಂ ಜನತೆಯ ಬಾಂಧವ್ಯವನ್ನು ಕೊಂಡಾಡಿದರು.

ಆರಕ್ಷಕ ಉಪ ನಿರೀಕ್ಷಕರಾದ ಶ್ರೀ ಪ್ರದೀಪ್ ರವರು ಮಾತನಾಡಿ ತಮ್ಮ ವ್ಯಾಪ್ತಿಗೆ ಬಂದತಹ ಎರಡು ಸೂಕ್ಷ್ಮ ಅಪರಾಧ ತನಿಖೆಗಳನ್ನು ಕೆಲವೇ ದಿನಗಳಲ್ಲಿ ಗುರುತಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರ ತಮ್ಮ ಸೇವೆ ಗುರುತಿಸಿ,ಮುಖ್ಯ ಮಂತ್ರಿ ಪದಕ ನೀಡಿದ ಸಂಗತಿಯನ್ನು ತಿಳಿಸಿದರು.

ನಮ್ಮೂರು ಎಲ್ಲಾ ಗ್ರಾಮಸ್ಥರ ಪ್ರೋತ್ಸಾಹದೊಂದಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ,ಸಾಮಾಜಿಕವಾಗಿ ಉನ್ನತ ಅಭಿವೃದ್ಧಿಯೊಂದಿಗೆ ಸ್ವಚ್ಛ ಗ್ರಾಮವಾಗಿ ಹೊರಹೊಮ್ಮಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಲಕ್ಕಿ ನುಡಿತೈತೆ ಕೃತಿ ಬಿಡುಗಡೆ

67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ನವಿಲೇಹಾಳು ಪ್ರತಿಭೆ ಭದ್ರಾವತಿಯ ನವಚೇತನ ಕನ್ನಡ ಶಾಲೆಯ ಶಿಕ್ಷಕರಾದ ಸಿ.ಎಚ್.ನಾಗೇಂದ್ರಪ್ಪ ರವರ ಚೊಚ್ಚಲ ಕೃತಿಯಾದ ಹಾಲಕ್ಕಿ ನುಡಿತೈತೆ ಕವನ ಸಂಕಲನವನ್ನು
ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಜಿ.ಮಹೇಶ್ವರಪ್ಪ ರವರು ಮರು ಬಿಡುಗಡೆ ಗೊಳಿಸಿದರು.

ಹಾಲಕ್ಕಿ ನುಡಿತೈತೆ ಕೃತಿ ಬಿಡುಗಡೆ

ಸನ್ಮಾನ ಕಾರ್ಯಕ್ರಮ

ನವಿಲೇಹಾಳಿನ ಪದ್ಮಶ್ರೀ ಪ್ರೌಢ ಶಾಲೆಗೆ ಭೂ ಧಾನ ಮಾಡಿದ ನಿವಾಸಿಗಳಾದ ಶ್ರೀಯುತ ಎನ್.ವಿ.ಮಂಜುನಾಥ್ ಮತ್ತು ಹಿರಿಯರಾದ ಶ್ರೀಯುತ ದೊಡ್ಡ ಹನುಮಪ್ಪ ರವರನ್ನು, ಮಂಗಳೂರು ವಿಭಾಗದ ಆರಕ್ಷಕ ಉಪ ನಿರೀಕ್ಷಕರಾದ ಶ್ರೀ ಪ್ರದೀಪ್ ರವರನ್ನು,ಶ್ರೀಮತಿ ಇಂದುಮತಿ ಸಾಲಿಮಠ ರವರನ್ನು,ಶ್ರೀ ಕೆ.ಶ್ರೀಧರ್ ರವರನ್ನು,ನೇತಾಜಿ ಪ್ರೌಢಶಾಲೆ,
ಬಲ್ಲಮಾವಟಿ ಗ್ರಾಮ,ಕೊಡುಗು ಜಿಲ್ಲೆಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನವಿಲೇಹಾಳು ಗ್ರಾಮದ ಶ್ರೀ ಎನ್.ಕೆ. ಮಹಬೂಬ್ ಸಾಬ್ ರವರನ್ನು, ಸ್ಥಳೀಯ ಪ್ರತಿಭೆಗಳಾದ ರಾಜ್ಯಮಟ್ಟದ ಬಸವ ಪ್ರಶಸ್ತಿ ಪುರಸ್ಕೃತರು,ಶಿಕ್ಷಕ,ಯುವ ಸಾಹಿತಿಗಳಾದ ಶ್ರೀ ಡಿ.ಸನಾವುಲ್ಲಾ ರವರನ್ನು,ಸುದ್ದಿದಿನ ಕನ್ನಡ ದಿನಪತ್ರಿಕೆಯ ಸಂಪಾದಕರು, ಸಾಹಿತಿಗಳಾದ ಶ್ರೀ ಗೋವರ್ಧನ್ ರವರನ್ನು,ರಾಜ್ಯಮಟ್ಟದ ಉದ್ಯೋನ್ಮುಖ ಕಾವ್ಯ ಚೇತನ ಪ್ರಶಸ್ತಿ ವಿಜೇತರಾದ ಯುವ ಕವಿ ಶ್ರೀ ವಿಜಯ್ ಕುಮಾರ್ ರವರನ್ನು,ಕರ್ನಾಟಕ ಶಿಲ್ಪಾಕಲಾ ಅಕಾಡಮಿ ಪ್ರಶಸ್ತಿ ವಿಜೇತರಾದ ಶ್ರೀ ಸದ್ದಾಂ ಹುಸೇನ್ ಸನ್ಮಾನಿಸಲಾಯಿತು.

ನವಿಲೇಹಾಳು ಕ.ರ.ವೇ ಘಟಕದ ಗೌರವಾಧ್ಯಕ್ಷರಾದ ಶ್ರೀ ಜಿ. ಮಹೇಶ್ವರರವನ್ನು,ಈ ದಿನದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಂಡ ಹಾಲಕ್ಕಿ ನುಡಿತೈತೆ ಕೃತಿಯ ಲೇಖಕರಾದ,ಸಾಹಿತಿ ಶಿಕ್ಷಕರಾದ ಶ್ರೀ ಸಿ.ಎಚ್.ನಾಗೇಂದ್ರಪ್ಪ ರವರನ್ನು,
ನವಿಲೇಹಾಳು ಘಟಕದ ಕ.ರ.ವೇ ಅಧ್ಯಕ್ಷರಾದ ಶ್ರೀ ಎಸ್.ಶೇಕ್ ಹುಸೇನ್ ರವರನ್ನು,ನವಿಲೇಹಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಬಿ.ಹೆಚ್.ಶಬ್ ನಮ್ ರವರನ್ನು,ಉಪಾಧ್ಯಕ್ಷರಾದ ಶ್ರೀ ಹನುಮಂತಪ್ಪ ರವರನ್ನು,ಸದಸ್ಯರಾದ ಶ್ರೀ ಎಸ್. ಎನ್.ದೇವಣ್ಣ ರವರನ್ನು,ಪದ್ಮಶ್ರೀ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶಿವಪ್ಪ ರವರನ್ನು ಇದೇ ಸಂದರ್ಭದಲ್ಲಿ ಕ.ರ.ವೇ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಗೌರವಿಸಿ ಸನ್ಮಾನಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಕೃಷ್ಣಪ್ಪ, ಸ್ವಾಗತವನ್ನು ಶಿಕ್ಷಕರಾದ ಶ್ರೀ ಇಸ್ಮಾಯಿಲ್ ರವರು, ವಂದನಾರ್ಪಣೆಯನ್ನು ಶ್ರೀ ಎನ್. ಎಸ್.ಜಗದೀಶ್ ರವರು ನಡೆಸಿಕೊಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending