ದಿನದ ಸುದ್ದಿ
ಕರುನಾಡ ಹಣತೆ ಕವಿ ಬಳಗ | ರಾಜ್ಯ ಮಟ್ಟದ ಕವಿಗೋಷ್ಟಿಗೆ ಹೆಸರು ನೊಂದಾಯಿಸಿ

ಸುದ್ದಿದಿನ ಡೆಸ್ಕ್ | ಈಗಾಗಲೇ ರಾಜ್ಯದ ಎಲ್ಲಾ ಯುವ ಕವಿಗಳನ್ನು ಒಂದೆಡೆ ಸೇರಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸ್ಪರ್ಧೆ ನಡೆಸುವುದರೊಂದಿಗೆ , ಜನಮಾನಸದಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ಕವಿ ಬಳಗ’ಕರುನಾಡ ಹಣತೆ ಕವಿ ಬಳಗ ಚಿತ್ರದುರ್ಗ.
ಇದು ಮೊದಲ ಬಾರಿಗೆ ಪದಾಧಿಕಾರಿಗಳ ಪದಗ್ರಹಣ ಮತ್ತು ‘ರಾಜ್ಯ ಮಟ್ಟದ ಕವಿ ಗೋಷ್ಠಿ’ ಯನ್ನ ಸೆಪ್ಟಂಬರ್ ತಿಂಗಳಲ್ಲಿ ಹಮ್ಮಿಕೊಳ್ಳುತ್ತಿದೆ.
ಅದಕ್ಕಾಗಿ ರಾಜ್ಯದ ಎಲ್ಲಾ ಮೂಲೆಗಳಿಂದ ಯುವ ಕವಿಗಳನ್ನು ಅಹ್ವಾನಿಸಿ ವೇದಿಕೆ ಒದಗಿಸುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದೆ..
ಗೋಷ್ಠಿಯಲ್ಲಿ ಕವಿತೆಗಳುಮತ್ತು ಗಜಲ್ ಗಳನ್ನು ವಾಚನ ಮಾಡಿಸಲಾಗುವುದು .
ಗೋಷ್ಠಿಯಲ್ಲಿ ಭಾಗವಹಿಸುವವರು ಕವನ&ಗಝಲ್ ಗಳನ್ನು ಕಳುಹಿಸಿ ಹೆಸರು ನೊಂದಣಿ ಮಾಡಿಕೊಳ್ಳಬೇಕು. ಕೊನೆಯ ದಿನಾಂಕ:-16 ಆಗಸ್ಟ್ ಕೊನೆಯ ದಿನಾಂಕವಾಗಿದೆ.
ಸಂಪರ್ಕಿಸಿ
ಕನಕ ಪ್ರೀತೀಶ್
ಸಂಸ್ಥಾಪಕ ಅದ್ಯಕ್ಷರು
7204569522
ರಾಜು ಸುಲೇನಹಳ್ಳಿ
ರಾಜ್ಯಾದ್ಯಕ್ಷರು
9741566313
ವಾಯ್.ಜೆ.ಮಹಿಬೂಬ
ರಾಜ್ಯ ಉಪಾಧ್ಯಕ್ಷರು
9535104785
ಈ ಮೊಬೈಲ್ ಕರೆ ಮಾಡುವಂತಿಲ್ಲ ಮೆಸೆಜ್ ಮೂಲಕ ಸಂಖ್ಯೆ ಗಳಿಗೆ ತಮ್ಮ ಪೂರ್ಣ ಪರಿಚಯದೊಂದಿಗೆ ಹೆಸರು ನೊಂದಾಯಿಸಿ ಖಚಿತ ಪಡಿಸಿಕ್ಕೊಳ್ಳಬೇಕು. ಅತೀ ಶೀಘ್ರದಲ್ಲೇ ಕಾರ್ಯಕ್ರಮದ ದಿನಾಂಕ ತಿಳಿಸಲಾಗುತ್ತದೆ.

ದಿನದ ಸುದ್ದಿ
ಚಿತ್ರದುರ್ಗ | ನೀರಾವರಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸರಿಯಿಲ್ಲ : ಸಮಿತಿ ಸಂಚಾಲಕರ ಅಭಿಮತ

ಸದಸ್ಯ ಸಂಘಟನೆಗಳಿಗೆ ಪದಾಧಿಕಾರಿಗಳ ನೇಮಕ ಅಧಿಕಾರ ಇಲ್ಲ
ಸುದ್ದಿದಿನ,ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಭೆ ಕರೆಯುವ ಅಧಿಕಾರ ಸಮಿತಿ ಸಂಚಾಲಕರಿಗೆ ಸೇರಿದ್ದು, ಸದಸ್ಯ ಸಂಘಟನೆಗಳಿಗೆ ಇರುವುದಿಲ್ಲ ಎಂದು ಸಮಿತಿ ಸಂಚಾಲಕ ಚಳ್ಳಕೆರೆ ಬಸವರಾಜ್ ತಿಳಿಸಿದ್ದಾರೆ.
ಪತ್ರಿಕಾ ಭವನದದಲ್ಲಿ ಸೋಮವಾರ ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತಸಂಘಟನೆ ಸೇರಿದಂತೆ ನೂರಾರು ಸಂಘಟನೆಗಳು ಸಮಿತಿ ಹೋರಾಟದಲ್ಲಿ ಪಾಲ್ಗೊಂಡಿವೆ. ಹಾಗೇಂದು ಸಮಿತಿ ಹೆಸರಲ್ಲಿ ಸಭೆ ಕರೆಯುವ, ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಅಧಿಕಾರ ಸದಸ್ಯ ಸಂಘಟನೆಗಳಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರವಾಸಿ ಮಂದಿರದಲ್ಲಿ ರೈತಸಂಘ ಆಯೋಜಿಸಿದ ಸಭೆಗೆ ಸಮಿತಿ ಪ್ರಧಾನ ಸಂಚಾಲಕ ಡಾ.ಬಂಜಗೆರೆ ಜಯಪ್ರಕಾರ್ಶ ಆಗಮಿಸಿರಲಿಲ್ಲ. ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ಟಿ.ಶಿವಪ್ರಕಾಶ್, ಕೆ.ಆರ್ ದಯಾನಂದ್, ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು.
ಅಷ್ಟೇ ಅಲ್ಲದೆ ಇಡೀ ಸಮಿತಿ ಹಾದಿಯಲ್ಲಿ ಈವರೆಗೂ ಪದಗ್ರಹಣ ಎಂಬ ಪದ ಬಳಕೆಯಿಲ್ಲ. ಆದರೆ, ಭಾನುವಾರ ಚಿತ್ರದುರ್ಗದ ಎಪಿಎಂಸಿ ಆವರಣದ ರೈತ ಭವನದಲ್ಲಿ ನಡೆದ ಸಭೆಗೆ ಪಿ.ಕೋದಂಡರಾಮಯ್ಯ, ಪ್ರಧಾನ ಸಂಚಾಲಕ ಡಾ.ಬಂಜಗೆರೆ ಜಯಪ್ರಕಾಶ್ ಸಹ ಆಗಮಿಸಿರಲಿಲ್ಲ. ಆದರೆ, ಮಾಧ್ಯಮಗಳಲ್ಲಿ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿದರು ಎಂದು ಸುದ್ದಿಗಳು ಬಿತ್ತರವಾಗಿವೆ. ಈ ಎಲ್ಲ ನಡೆ ಬಗ್ಗೆ ಸಂಚಾಲಕ ಸಮಿತಿಗೆ ಅಸಮಾಧಾನವಿದೆ ಎಂದು ತಿಳಿಸಿದರು.
ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ನಾನು ಕೂಡ ಅಂದಿನ ಸಭೆಗೆ ಹೋಗಿದ್ದೇ, ಆದರೆ, ಈಗ ನನಗೆ ಮನವರಿಕೆ ಆಗಿದ್ದು, ಪ್ರಜಾಪ್ರಭುತ್ವದ ತಳಹದಿಯಲ್ಲಿ ಆಯ್ಕೆ ಪ್ರಕ್ರಿಯೆ ಆಗಬೇಕು ಎಂಬುದು ಸ್ಪಷ್ಟಗೊಂಡಿದೆ. ಸಮಿತಿಯಲ್ಲಿ ಒಡಕು ಇಲ್ಲ, ಆದರೆ, ಕೆಲ ಸಣ್ಣಪುಟ್ಟ ತಪ್ಪುಗಳು ಆಗಿವೆ. ಅವುಗಳನ್ನು ಸರಿಪಡಿಸಿಕೊಂಡು ಹೋರಾಟ ರೂಪಿಸುವ ಅಗತ್ಯವಿದೆ ಎಂದರು.
ಬಯಲುಸೀಮೆಯ ಕಟ್ಟ ಕಡೆಯ ಜನರಿಗೆ ನೀರು ತಲುಪುವಂತೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಹೆಜ್ಜೆ ಹಾಕಲಾಗುವುದು ಎಂದರು.
ಸಂಚಾಲಕ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ಹಿಂದಿನಿಂದಲೂ ಸಮಿತಿ ಸಂಚಾಲಕರ ಸಭೆಯಲ್ಲಿ ಚರ್ಚೆ ಬಳಿಕ, ಜನರನ್ನಳಗೊಂಡ ಸಭೆ ಕರೆದು ಅನುಮತಿ ಪಡೆಯುವ ಪದ್ಧತಿ ಹೋರಾಟ ಸಮಿತಿಯಲ್ಲಿದೆ. ಅದೇ ರೀತಿ ಮುಂದೆಯೂ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರಿಗೆ ಸಮಿತಿಯ ಯಾದವರೆಡ್ಡಿ, ಜಿ.ಎಸ್.ಉಜ್ಜಿನಪ್ಪ, ಚಳ್ಳಕೆರೆ ಬಸವರಾಜ್, ಈ.ಮಹೇಶ್ಬಾಬು, ಆರ್.ಶೇಷಣ್ಣಕುಮಾರ್, ಟಿ.ಷಫಿವುಲ್ಲಾ, ದಸಂಸ ರಾಜ್ಯ ಮುಖಂಡ ಡಿ.ದುರುಗೇಶ್ ಇತರರು ಸಹಿ ಮಾಡಿ ಬಿಡುಗಡೆ ಮಾಡಿದ ಪ್ರಕಟಣೆಯ ಯಥಾರೂಪ ಇಲ್ಲಿದೆ.
ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೋಂದಾಯಿತ ಸಂಘಟನೆಯಲ್ಲ. ಆದರೂ ಈ ಸಮಿತಿ ಕೆಲ ಪದ್ಧತಿಗಳನ್ನು ಚಾಚೂತಪ್ಪದೇ ಪಾಲಿಸಿಕೊಂಡು ಬರುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಜಾರಿ ಸಾಧ್ಯವೇ ಇಲ್ಲ ಎಂಬ ಬಲವಾದ ನಂಬಿಕೆ ಜನರ ಮನದಲ್ಲಿ ಬೇರೂರಿದ್ದ ಸಂದರ್ಭ ಕವಿ ಬಂಜಿಗೆರೆ ಜಯಪ್ರಕಾಶ್ ನೇತೃತ್ವದಲ್ಲಿ ಜಿಲ್ಲೆಯ ಪತ್ರಕರ್ತರ ತಂಡ ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಅಧ್ಯಯನ ನಡೆಸಿ ಯೋಜನೆ ಸಾಧ್ಯವಿದೆ ಎಂದು ಮೊದಲು ಮನವರಿಕೆ ಮಾಡಿಕೊಳ್ಳಲಾಯಿತು.
ಬಳಿಕ ಮುಕ್ತ ವಿಚಾರ ವೇದಿಕೆ ನೇತೃತ್ವದಲ್ಲಿ ಹಲವು ಸಭೆ, ಚಿಂತನೆಗಳ ಬಳಿಕ ಬಹಿರಂಗವಾಗಿ ಗುರುಭವನದಲ್ಲಿ ಸಾರ್ವನಿಕರು, ಸಂಘ-ಸಂಸ್ಥೆಗಳು, ಎಲ್ಲ ರಾಜಕೀಯ ಪಕ್ಷಗಳ ಸಭೆ ಕರೆಯಲಾಯಿತು. ಅಲ್ಲಿ ಹೋರಾಟ ಸಮಿತಿ ರೂಪ ಪಡೆಯಿತು ಸಭೆಯಲ್ಲಿ ರಾಜ್ಯಸಭಾ ಹಿರಿಯ ಸದಸ್ಯ ಹೆಚ್.ಹನುಮಂತಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ವೇಳೆ ವಿವಿಧ ಆತಿಯು ಸಮಿತಿ ರಚಿಸಲಾಯಿತು.
ಮುಖ್ಯವಾಗಿ ಸಂಚಾಲಕರ ಸಮಿತಿಯೇ ಎಲ್ಲ ರೀತಿಯ ಚರ್ಚೆ ನಡೆಸಿ, ಆ ವಿಚಾರವನ್ನು ಜನರ ಮುಂದಿಟ್ಟು ಅನುಮತಿ ಅಥವಾ ಜನರು ತಿರಸ್ಕರಿಸಿದರೆ ಆ ವಿಷಯವನ್ನು ಕೈಬಿಡುವ ಪದ್ಧತಿ ಈ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದೆ. ಹೆಚ್.ಹನುಮಂತಪ್ಪ ಅವರ ಬಳಿಕ ಪಿ.ಕೋದಂಡರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಬಸವ ಮಂಟಪದಲ್ಲಿ ಜರುಗಿದ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಜನರ ಸಭೆಯಲ್ಲಿ ಆಯ್ಕೆ ಮಾಡಿಕೊಳ್ಳಲಾಯಿತು.
ಈ ಅವಧಿಯಲ್ಲಿ ಸರ್ಕಾರದ ಮಟ್ಟದಲ್ಲಿ ಸಭೆ, ಬೃಹತ್ ಹೋರಾಟಗಳು, ರಸ್ತೆ ತಡೆ, ಸಮಾವೇಶ ಜರುಗಿದ. ಹೋರಾಟದ ಫಲ ಸರ್ಕಾರ ಯೋಜನೆ ಜಾರಿಗೆ ಅನುಮತಿ ನೀಡಿತು. ಬಳಿಕ ಎಲ್ಲ ಸರ್ಕಾರಗಳು ಒಂದಲ್ಲ ಒಂದು ರೀತಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಇಚ್ಛಾಶಕ್ತಿ ತೋರಿವೆ. ಆದರೆ, ನಿಧಾನಗತಿಯಲ್ಲಿ ಆಗುತ್ತಿದೆ ಎಂಬ ಅಸಮಾಧಾನ ಹೋರಾಟ ಸಮಿತಿ ಮತ್ತು ಜಿಲ್ಲೆಯ ಜನರ ಮನದಲ್ಲಿದೆ.
ಜಿಲ್ಲೆಯ ಕೆರೆಗಳ ಹೂಳೂ ತೆಗೆಸುವ, ಅಚ್ಚುಕಟ್ಟು ಮಾಡುವ ಹಾಗೂ ಮೊದಲ ಹಂತದ ಕಾಮಗಾರಿ ಆರಂಭಕ್ಕೆ ಒತ್ತಡ, ಪರಿಸರ ಇಲಾಖೆ ಅನುಮತಿ ಸೇರಿ ವಿವಿಧ ವಿಷಯಗಳ ಕುರಿತು ಸಮಿತಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ತೀವ್ರ ಚರ್ಚೆ ನಡೆಸಿ, ಹೋರಾಟ ರೂಪಿಸುವ ಹಾದಿಯಲ್ಲಿದ್ದರು. ಆದರೆ, ದುರಾದುಷ್ಟವಾಶತ್ ನಮ್ಮ ಸಮಿತಿ ಅಧ್ಯಕ್ಷರಾದ ಎಂ.ಜಯಣ್ಣ, ಕಾರ್ಯಾಧ್ಯಕ್ಷರಾದ ಮುರುಘ ರಾಜೇಂದ್ರ ಒಡೆಯರ್ ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ನಮ್ಮನ್ನು ಅಗಲಿದ್ದು ಹೋರಾಟಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಹೋರಾಟದ ರೂಪರೇಷೆ ಸಿದ್ಧಪಡಿಸುವ ಚರ್ಚೆ ನನೆಗುದಿಗೆ ಬಿದ್ದಿತು.
ಈಗ ಚಾಲನೆ ನೀಡುವ ಸಂಬಂಧ ಚರ್ಚೆ ನಡೆಯುತ್ತಿರುವಾಗಲೇ ನೀರಾವರಿ ಹೋರಾಟ ಸಮಿತಿಯ ಸದಸ್ಯ ಸಂಘಟನೆಗಳು ನಾವು ಎಂದು ಹೇಳಿಕೊಂಡು ಕೆಲವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಕಾರಣಕ್ಕೆ ಮಾಧ್ಯಮಗಳ ಮುಂದೆ ಬರಬೇಕಾಗಿದೆ. ನೀರಾವರಿ ಹೋರಾಟ ಸಮಿತಿ ಯಾವುದೇ ತೀರ್ಮಾನಗಳನ್ನು ಏಕಾಏಕಿ ತೆಗೆದುಕೊಳ್ಳುವುದಿಲ್ಲ. ಮೊದಲಿಗೆ ಸಂಚಾಲಕರ ಸಮಿತಿ ಸಭೆಯಲ್ಲಿ ಈ ಕುರಿತು ವಿಷಯದ ಗಂಭೀರತೆ ಆಧರಿಸಿ ಸಭೆಗಳನ್ನು ನಡೆಸಲಾಗುತ್ತದೆ.
ಅಲ್ಲಿ ಅಂತಿಮ ತೀರ್ಮಾನಕ್ಕೆ ಬಂದ ಬಳಿಕ ಪತ್ರಿಕೆಗಳ ಮೂಲಕ ಜಿಲ್ಲೆಯ ಜನರನ್ನೊಳಗೊಂಡ ಸಭೆ ಕರೆಯಲಾಗುತ್ತದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಲಾಗುತ್ತದೆ. ಸಭೆಯಲ್ಲಿ ಪಾಲ್ಗೊಂಡ ಜನರ ಅಭಿಪ್ರಾಯದಂತೆ ಪದಾಧಿಕಾರಿಗಳ ಆಯ್ಕೆ, ಹೋರಾಟದ ರೂಪುರೇಷೆ ಸಿದ್ಧಗೊಂಡು, ಅದನ್ನು ಅನುಷ್ಟಾನಕ್ಕೆ ತರಲಾಗುತ್ತದೆ.
ಆದರೆ, ರೈತಸಂಘದ ಒಂದು ಬಣ ಸೇರಿದಂತೆ ಯಾವುದೇ ಸಂಘಟನೆಗಳಿಗೆ ನೀರಾವರಿ ಹೋರಾಟ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಹಾಗೂ ಸಭೆ ಸಮಿತಿ ಹೆಸರಲ್ಲಿ ಸಭೆ ಕರೆಯುವ ಅಧಿಕಾರ ಹೊಂದಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ.
ದಲಿತ ನಾಯಕ, ಸಮಿತಿ ಅಧ್ಯಕ್ಷ ಎಂ.ಜಯಣ್ಣ, ಅಹಿಂದ-ನಾಯಕ, ಸಮಿತಿ ಕಾರ್ಯಾಧ್ಯಕ್ಷ ಮುರುಘ ರಾಜೇಂದ್ರ ಒಡೆಯ. ಅವರಿಗೆ ಸಮಿತಿಯಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಿ ಗೌರವ ಸೂಚಿಸಿಲ್ಲ. ಈಗಲೇ ಕೆಲವರು ನೀರಾವರಿ ಹೋರಾಟ ಸಮಿತಿಯ ಸದಸ್ಯ ಸಂಘಟನೆಗಳ ಹೆಸರಲ್ಲಿ ಸಭೆ ಕರೆದು ಆಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಹೇಳಿಕೆ ನೀಡಿ ಗೊಂದಲ ಹುಟ್ಟುಹಾಕಲಾಗುತ್ತಿದೆ.
ಇದು ಅವರಿಗೆ ಸರಿಯಾದ ಮಾಹಿತಿ ಕೊರತೆ ಇಲ್ಲದ ಕಾರಣಕ್ಕೆ ಮಾಡಿದ್ದಾರೆ ಎಂದು ಭಾವಿಸಿದ್ದೇವೆ. ಅದನ್ನು ನಾವುಗಳು ಗಂಭೀರವಾಗಿ ಪರಿಗಣಿಸದೇ ಕ್ಷಮಾಗುಣದಿಂದ ಅವರ ಸಮಂಜಸವಲ್ಲದ ಕಾರ್ಯವನ್ನು ಖಂಡಿಸುತ್ತೇವೆ.
ಸಮಿತಿ ಕಾರ್ಯಚಟುವಟಿಕೆ, ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಈ ಮೊದಲಿನಂತೆಯೇ ಸಂಚಾಲಕರ ಸಮಿತಿ ಸಭೆಯಲ್ಲಿ ಚರ್ಚೆ ಬಳಿಕ, ಪತ್ರಿಕಾ ಹೇಳಿಕೆ ನೀಡಿ ಜಿಲ್ಲೆಯ ಮಠಾಧೀಶರು, ಎಲ್ಲ ರಾಜಕೀಯ ಪಕ್ಷಗಳು ಹಾಗೂ ರೈತ, ಕಾರ್ಮಿಕ ಸೇರಿದಂತೆ ಎಲ್ಲ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿ ಆಸಕ್ತ ಎಲ್ಲರನ್ನೊಳಗೊಂಡು ಸಭೆ ಕರೆಯಲಾಗುತ್ತದೆ.
ಆ ಸಭೆಯಲ್ಲಿ ಜನರು ಅಭಿಪ್ರಾಯವೇ ಅಂತಿಮವಾಗಿರುತ್ತದೆ. ಇಲ್ಲಿ ಸಂಚಾಲಕರ ಸಮಿತಿ ಎಂಬುದು ಸಭೆ ಆಯೋಜಿಸುವುದು, ಹೋರಾಟಕ್ಕೆ ಒಂದು ರೂಪ ಕೊಡುವ ಕೆಲಸವನ್ನೇ ಮಾಡುತ್ತದೆ.
ನೀರಾವರಿ ಹೋರಾಟಕ್ಕೆ ಶ್ರೀ ಶಿವಮೂರ್ತಿ ಮುರುಘಾ ಸ್ವಾಮೀಜಿ, ಸಾಣೇಹಳ್ಳಿ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಸೇವಾಲಾಲ್ ಸ್ವಾಮೀಜಿ, ಭೋವಿ ಮಠದ ಗುರುಗಳು, ಛಲವಾದಿ ಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಹೀಗೆ ಬಹಳಷ್ಟು ಮಠಾಧೀಶರು ಬೆಂಬಲವಾಗಿ ನಿಂತಿದ್ದಾರೆ.
ಸಮಿತಿ ಆಯೋಜಿಸುವ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ. ಜೋಳಿಗೆ ಹಿಡಿದು ವಿಧಾನಸೌಧಕ್ಕೆ ನೀರಿನ ಭೀಕ್ಷೆ ಬೇಡಲು ಸಮಿತಿ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಆರ್ಥಿಕ ಸಹಾಯ ಮಾಡಿದ್ದಾರೆ.
ಹಾಲಿ, ಮಾಜಿ ಶಾಸಕರು, ಸಂಸದರು, ಜಿಪಂ, ತಾಪಂ, ಗ್ರಾಪಂ ಸದಸ್ಯರು, ಕನ್ನಡ, ಕಾರ್ಮಿಕ, ದಲಿತ, ರೈತ, ವಿದ್ಯಾರ್ಥಿ ಸೇರಿದಂತೆ ನೂರಾರು ಸಂಘಟನೆಗಳು, ಎಲ್ಲ ಸಮುದಾಯದ ಸಮಿತಿ ಜನ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಹಣದ ಸಹಕಾರ ನೀಡಿದ್ದಾರೆ. ಅವರನ್ನೊಳಗೊಂಡ ಸಭೆಯಲ್ಲಿ ನೂತನ ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು.
ಈ ಸಂಬಂಧ ಶೀಘ್ರದಲ್ಲಿಯೇ ಸಂಚಾಲಕರ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡು ಬಹಿರಂಗ ಸಭೆ ಕರೆಯಲಾಗುವುದು, ಅದೆಲ್ಲದಕ್ಕಿಂತಲೂ ಮುಖ್ಯವಾಗಿ ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಅವರ ಹೋರಾಟದ ಹಾದಿ ಸ್ಮರಿಸಲು ಶ್ರದ್ಧಾಂಜಲಿ ಸಭೆ ಆಯೋಜಿಸುವುದು ತುರ್ತು ಕಾರ್ಯವಾಗಿದೆ. ಈ ಸಂಬಂಧ ಸಮಿತಿ ಶೀಘ್ರದಲ್ಲಿ ದಿನಾಂಕ ಪ್ರಕಟಿಸಲಿದೆ.
ಸಮಿತಿಯ ಸದಸ್ಯ ಸಂಘಟನೆಗಳು ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಕರೆಯುವ ಜಿಲ್ಲೆಯ ಜನರನ್ನೊಳಗೊಂಡ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸುವ ಅಧಿಕಾರ, ಹಕ್ಕು ಹೊಂದಿರುತ್ತವೆ. ಆದರೆ, ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವ, ಸಮಿತಿ ಹೆಸರಲ್ಲಿ ಸಭೆ ಕರೆಯುವ ಅಧಿಕಾರ ನೀರಾವರಿ ಹೋರಾಟ ಸಮಿತಿಗೆ ಮಾತ್ರ ಇರುತ್ತದೆ. ಸದಸ್ಯ ಸಂಘಟನೆಗಳಿಗೆ ಇರುವುದಿಲ್ಲ.
ಆದ್ದರಿಂದ ಜಿಲ್ಲೆಯ ಜನರಲ್ಲಿ ಗೊಂದಲ ಹುಟ್ಟುಹಾಕುವ ಕಾರ್ಯ ಜವಾಬ್ದಾರಿಯುತ ಸಂಘಟನೆಗಳು ಮಾಡಬಾರದು ಎಂದು ಮನವಿ ಮಾಡಿಕೊಳ್ಳುತ್ತೇವೆ. ನೀರಾವರಿ ಹೋರಾಟ ಸಮಿತಿ ಆಯೋಜಿಸುವ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅಧಿಕಾರಸ್ಥರು ಸದಸ್ಯ ಸಂಘಟನೆ ಮುಖಂಡರು, ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಇರುತ್ತದೆ ಎಂಬುದನ್ನು ಈ ಮೂಲಕ ಹೇಳುತ್ತೇವೆ.
ಸುದ್ದಿಗೋಷ್ಟಿಯಲ್ಲಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ದಿವಂಗತ ಎಂ.ಜಯಣ್ಣ, ಕಾರ್ಯಾಧ್ಯಕ್ಷ ಮುರುಘ ರಾಜೇಂದ್ರ ಒಡೆಯರ್ ಭಾವಚಿತ್ರಕ್ಕೆ ಸಮಿತಿ ಸಂಚಾಲಕರು ಪುಷ್ಪನಮನ ಸಲ್ಲಿಸಿದರು. ಜಿ.ಎಸ್.ಉಜ್ಜಿನಪ್ಪ, ಜೆ.ಯಾದವರೆಡ್ಡಿ, ಆರ್.ಶೇಷಣ್ಣಕುಮಾರ್, ಎಂ.ಜೆ.ಪ್ರಸನ್ನ, ಪಾರ್ಥ ರಾಜೇಂದ್ರ ಒಡೆಯರ್, ಚಳ್ಳಕೆರೆ ಬಸವರಾಜ್, ಟಿ.ಷಫೀವುಲ್ಲಾ ಇತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಅನುಗ್ರಹ’ ಯೋಜನೆ ರಾಜ್ಯದಲ್ಲಿ ಮರುಜಾರಿಗೊಳಿಸದಿದ್ದರೆ ವಿಧಾನಸಭೆಯಲ್ಲಿ ಹೋರಾಟ : ಸಿದ್ದರಾಮಯ್ಯ ಎಚ್ಚರಿಕೆ

ಸುದ್ದಿದಿನ ಡೆಸ್ಕ್ : ಕುರಿ, ಮೇಕೆಗಳು ಆಕಸ್ಮಿಕವಾಗಿ ಸತ್ತರೆ ಐದು ಸಾವಿರ ರೂ.ಗಳ ಪರಿಹಾರ ನೀಡುವ “ಅನುಗ್ರಹ” ಯೋಜನೆಯನ್ನು ರಾಜ್ಯ ಬಿಜೆಪಿ ಸರ್ಕಾರ ಮರು ಜಾರಿಗೊಳಿಸಿದ್ದರೆ ವಿಧಾನಸಭೆಯಲ್ಲಿ ಹೋರಾಟ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಕುರಿಗಳನ್ನು ಕಾಡಿನಲ್ಲಿ ಮೇಯಿಸಲು ಹಾಗೂ ಅವುಗಳಿಗೆ ಕಾಯಿಲೆ ಕಾಣಿಸಿಕೊಂಡಾಗ ಕಡ್ಡಾಯವಾಗಿ ಚಿಕಿತ್ಸೆ ಮತ್ತು ಔಷಧ ನೀಡಲು ಅವಕಾಶ ಕಲ್ಪಿಸಿದ್ದು ನಮ್ಮ ಸರ್ಕಾರ. ಇದರ ಜೊತೆಗೆ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾ ಮಂಡಳ ರಚನೆಯಾಗಿದ್ದೂ ನಮ್ಮ ಸರ್ಕಾರದ ಅವಧಿಯಲ್ಲಿ ಎಂದರು.
ಇದನ್ನೂ ಓದಿ | ಅಧಿಕಾರಿಗಳ ನಿರ್ಲಕ್ಷ್ಯ; ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲೇ ಓಪನ್ ಆಗಿದೆ ಡ್ರೈನೇಜ್ , ಆಪಾಯ ಕಟ್ಟಿಟ್ಟ ಬುತ್ತಿ..!
ಕುರಿ, ಮೇಕೆ, ದನ ಮತ್ತು ಎಮ್ಮೆಗಳು ಸಾವಿಗೀಡಾದಾಗ ಅದರ ಮಾಲೀಕರಿಗೆ ನೆರವಾಗುವ ದೃಷ್ಟಿಯಿಂದ ನಾನು ಮುಖ್ಯಮಂತ್ರಿಯಾಗಿದ್ದಾಗ ಅನುಗ್ರಹ ಯೋಜನೆ ಜಾರಿಗೆ ತಂದಿದ್ದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎರಡು ವರ್ಷದಿಂದ ಯೋಜನೆ ಸ್ಥಗಿತಗೊಳಿಸಿದೆ ಹಾಗೂ ರೂ.30 ಕೋಟಿ ಬಾಕಿಯನ್ನೂ ಪಾವತಿ ಮಾಡಿಲ್ಲ ಎಂದು ಕಿಡಿಕಾರಿದರು.
ಕುರಿ ಸಾಕಾಣಿಕೆ ಈಗ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ತೋಟದಲ್ಲಿ 500 ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಕುರಿ ಸಾಕಣೆ ಎಂಬುದು ಬದುಕಿಗೆ ಒಂದು ದಾರಿ.
ಒಂದು ಕುರಿಗೆ ಹತ್ತರಿಂದ ಇಪ್ಪತ್ತು ಸಾವಿರ ರೂ.ಗಳ ಬೆಲೆಯಿದೆ. ಆ ಕುರಿ ಸತ್ತರೆ ಕುರಿಗಾರರ ಬದುಕಿನ ದಾರಿಯೇ ಮುಚ್ಚಿಹೋಗುತ್ತದೆ. ಹಾಗಾಗಿ ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪರಿಹಾರದ ಮೊತ್ತವನ್ನು ಹತ್ತು ಸಾವಿರ ರೂ.ಗಳಿಗೆ ಏರಿಕೆ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೆಹಲಿ ಗಡಿಗಳು ಯುದ್ಧದ ಗಡಿಗಳಾಗಿ ಪರಿವರ್ತನೆಯಾಗಿವೆ : ಸಿರಿಮನೆ ನಾಗರಾಜು

ಸುದ್ದಿದಿನ,ದೆಹಲಿ: ‘ಭಾರತದ ಇತಿಹಾಸದಲ್ಲಿ ಹಿಂದೆದೂ ನಡೆಯದ ಸುಧೀರ್ಘ ಹೋರಾಟ ಇದಾಗಿದೆ. ದೀರ್ಘಕಾಲ ಅಂದರೆ ವರ್ಷಗಟ್ಟಲೆ ಹೋರಾಟ ನಡೆಸಲು ರೈತರು ತಯಾರಿ ನಡೆಸಿದ್ದಾರೆ. ಒಕ್ಕೂಟ ಸರ್ಕಾರ ಇಡೀ ದೇಶದ ಜನತೆ ಮೇಲೆ ಯುದ್ಧ ಸಾರಿದೆ. ಸರ್ಕಾರ ಗಡಿ ರಕ್ಷಣಾ ಪಡೆಗಳನ್ನು ನಿಲ್ಲಿಸಿದ್ದಾರೆ. ರೈತರು ಹೋರಾಟ ನಡೆಸುತ್ತಿರುವ ಗಡಿಗಳು ಯುದ್ಧದ ಗಡಿಗಳಾಗಿ ಪರಿವರ್ತನೆಯಾಗಿದೆ’ ಎಂದು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಸಿರಿಮನೆ ನಾಗರಾಜು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಭಾಗವಹಿಸಿ ಹಲವು ದಿನಗಳ ಕಾಲ ಹೋರಾಟದಲ್ಲಿ ತೊಡಗಿಕೊಂಡಿದ್ದ ರಾಜ್ಯದ ಯುವ ಹೋರಾಟಗಾರ ತಂಡ ಇಂದು ರೈತ ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ, ರೈತ ಹೋರಾಟಕ್ಕೆ ಜಯವಾಗಲಿ ಘೋಷಣೆ ಕೂಗುತ್ತಾ ಬೆಂಗಳೂರಿಗೆ ಬಂದಿಳಿದರು.
‘ಉತ್ತರ ಪ್ರದೇಶಗಳ ಹಳ್ಳಿ ಹಳ್ಳಿ ಗಳಲ್ಲಿ ಕಿಸಾನ್ ಮಹಾಪಂಚಾಯತ್ಗಳು ನಡೆಯುತ್ತಿವೆ. ಕರ್ನಾಟಕದಲ್ಲಿಯೂ ಕಿಸಾನ್ ಮಹಾಪಂಚಾಯತ್ಗಳು ನಡೆಯುತ್ತಿದ್ದು, ರೈತ ಮುಖಂಡರು ಕರ್ನಾಟಕಕ್ಕೂ ಬರಲಿದ್ದಾರೆ. ಸಂಯುಕ್ತ ರೈತ ಹೋರಾಟ ಸಮಿತಿಯಿಂದ ಕರ್ನಾಟಕದಲ್ಲಿ ತಾಲ್ಲೂಕು ಮಟ್ಟದಲ್ಲಿ ಕಿಸಾನ್ ಪಂಚಾಯತ್ಗಳು ನಡೆಯಲಿವೆ’ ಎಂದರು.
ಇದನ್ನೂ ಓದಿ | ಅಧಿಕಾರಿಗಳ ನಿರ್ಲಕ್ಷ್ಯ; ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲೇ ಓಪನ್ ಆಗಿದೆ ಡ್ರೈನೇಜ್ , ಆಪಾಯ ಕಟ್ಟಿಟ್ಟ ಬುತ್ತಿ..!
ಯುವ ಹೋರಾಟಗಾರ ಸಂತೋಷ್ ಮಾತನಾಡಿ, ’ದೆಹಲಿ ಗಡಿಗಳಲ್ಲಿ ಲಕ್ಷಾಂತರ ರೈತರು ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಹೋರಾಟ ನಡೆಯುತ್ತಲಿರುವ 4 ಗಡಿಗಳಿಗೂ ನಾವು ಭೇಟಿ ಕೊಟ್ಟಿದ್ದೇವೆ. ಪಂಜಾಬ್ ಮತ್ತು ಹರಿಯಾಣ ರಾಜ್ಯದ ರೈತರಿಗೆ ನಾವು ನಿಜಕ್ಕೂ ಧನ್ಯವಾದ ಹೇಳಬೇಕು.
ಏಕೆಂದರೆ ಕೃಷಿ ಕಾಯ್ದೆಗಳು ರೈತ ಸಮುದಾಯಕ್ಕೆ ಹೇಗೆ ಮಾರಕವಾಗಲಿವೆ ಎಂಬುದರ ಬಗ್ಗೆ ಸ್ಪಷ್ಟ ಅರಿವಿಟ್ಟುಕೊಂಡು ಅವರು ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟ ದೇಶದ ಮೂಲೆ ಮೂಲೆಗೂ ತಲುಪಬೇಕು. ಬೆಳೆಗೆ ಕನಿಷ್ಠ ಬೆಂಬಲ ಸಿಗಬೇಕು ಎಂಬುದು ರೈತರ ಒಕ್ಕೊರಲ ಬೇಡಿಕೆಯಾಗಿದೆ. ರೈತ ಹೋರಾಟದಲ್ಲಿ ಯುವ ಜನತೆ ಭಾಗಿಯಾಗುವ ಅಗತ್ಯವಿದೆ’ ಎಂದರು.
ಕೊಡಗಿನ ಯುವ ಹೋರಾಟಗಾರ್ತಿ ಕಾವೇರಿ ಮಾತನಾಡಿ, ‘ಭಾರತೀಯರಾದ ನಾವು ಕರಾಳ ದಿನಗಳಲ್ಲಿ ಬುದುಕು ದೂಡುತ್ತಿದ್ದೇವೆ.. ಇಂತಹ ಸಂದರ್ಭದಲ್ಲಿ ಎಲ್ಲೆಡೆಯೂ ಆತಂಕ ಮನೆ ಮಾಡಿದೆ. ಭಾರತದ ಭವಿಷ್ಯ ಎತ್ತ ಸಾಗುತ್ತಿದೆ ಎಂಬ ಭಯ ಎಲ್ಲರಲ್ಲೂ ಇತ್ತು. ಆದರೆ, ಈಗ ಆಡಳಿತರೂಢ ಸರ್ಕಾರದ ಮೇಲಿನ ಕಿಚ್ಚು ದೇಶದ ತುಂಬೆಲ್ಲ ಹಬ್ಬುತ್ತಿದೆ. ಸದ್ಯ ಭಾರತದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದೆ. ಈ ಹೋರಾಟಕ್ಕೆ ರೈತರು ಮಾತ್ರವಲ್ಲ ನಾವೆಲ್ಲರೂ ಕೈಜೋಡಿಸಬೇಕು’ ಎಂದರು.
ಕಳೆದ ಮೂರು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ತೆಲಂಗಾಣ ರಾಜ್ಯಗಳ ವಿವಿಧ ಸಂಘಟನೆಗಳ ಹೋರಾಟಗಾರರ ‘ದಕ್ಷಿಣ ಭಾರತ ನಿಯೋಗ’ ಭಾಗವಹಿಸಿತ್ತು. ಕರ್ನಾಟಕದಿಂದ ಕರ್ನಾಟಕ ಜನಶಕ್ತಿ, ಕರ್ನಾಟಕ ಶ್ರಮಿಕ ಶಕ್ತಿ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಸುಮಾರು 60ಕ್ಕೂ ಹೆಚ್ಚು ಹೋರಾಟಗಾರರು ಒಂಬತ್ತು ದಿನಗಳ ಕಾಲ ಹೋರಾಟದಲ್ಲಿ ಭಾಗವಹಿಸಿದ್ದರು.
ಕೃಪೆ: ಮಾಸ್ ಮೀಡಿಯಾ ಫೌಂಡೇಶನ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್6 days ago
ಏನಿದು ? ಗಡಿಮಾರಿ..!
-
ದಿನದ ಸುದ್ದಿ7 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ರಾಜಕೀಯ5 days ago
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
-
ದಿನದ ಸುದ್ದಿ7 days ago
ಚನ್ನಗಿರಿ | ಲಂಚ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿಗೆ 2 ವರ್ಷ ಜೈಲು
-
ಬಹಿರಂಗ6 days ago
ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್’
-
ನೆಲದನಿ6 days ago
ರೈತ ಹೋರಾಟಗಾರ `ಸಹಜಾನಂದ ಸರಸ್ವತಿ’
-
ರಾಜಕೀಯ4 days ago
ದೇವರಮನೆ ಶಿವಕುಮಾರ್ ಬಿಜೆಪಿ ಸೇರ್ಪಡೆ | ನಾವು ಯಾರಿಗೂ ಆಮಿಷ ಒಡ್ಡಿಲ್ಲ : ಸಂಸದ ಜಿಎಂ ಸಿದ್ದೇಶ್ವರ್
-
ಬಹಿರಂಗ7 days ago
ಪಾಂಡವರಿಗೂ ಭಾವ, ಕೌರವರಿಗೂ ಭಾವ..!