ದಿನದ ಸುದ್ದಿ
ದಾವಣಗೆರೆಯಲ್ಲಿ ಇಂದು ‘ಕಸಾಪ ಉಳಿಸಿ ಆಂದೋಲನ’ ಸಭೆ : ಶಿವಕುಮಾರಸ್ವಾಮಿ ಕುರ್ಕಿ
ದಾವಣಗೆರೆಯ ಕಸಾಪ ಆಜೀವ ಸದಸ್ಯರ ಸಮಾನ ಮನಸ್ಕರ ವೇದಿಕೆಯು 11 ಮಾರ್ಚ್ 2018 ರಂದು ಇಲ್ಲಿನ ಕನ್ನಡ ಭವನದ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ಹಾಲಿ ಇರುವ ಬೈಲಾವನ್ನು ತಿದ್ದುಪಡಿ ಮಾಡಿಕೊಂಡ ಕಸಾಪ ಅಧ್ಯಕ್ಷರ ಅಧಿಕಾರಾವಧಿಯನ್ನು ತಂತಾನೆ ಹೆಚ್ಚಿಸಿಕೊಳ್ಳುವುದನ್ನು ವಿರೋಧಿಸಿದ್ದೆವು.
ಅಲ್ಲದೆ ನಾವು ಹೈಕೋರ್ಟ್ ಮೆಟ್ಟಿಲೇರಿ ಬಹುದೂರದ ದ.ಕ. ಜಿಲ್ಲೆಯ ಪುಟ್ಟಗ್ರಾಮ ಕೋಟದಲ್ಲಿ ನಡೆವ ಸಭೆಗೆ ತಡೆಯಾಜ್ಞೆ ತರಲು ಲಾಯರ್ ಬಳ್ಳಾರಿ ರೇವಣ್ಣನವರ ವಕಾಲತ್ತಿನ ಮೂಲಕ ಪ್ರಯತ್ನಿಸಿದ್ದೆವು. ಆಗ ಸಮಯದ ಅಭಾವದಿಂದ ಈ ಕೆಲಸ ಆಗಿರಲಿಲ್ಲ. ಆದರೆ “ಸಹಕಾರಿ ಸಂಘಸಂಸ್ಥೆಗಳ ಉಪ ನೋಂದಣಾಧಿಕಾರಿಗಳಿಗೆ ತಿದ್ದುಪಡಿಮಾಡದಿರಲು ಅರ್ಜಿ ಹಾಕಬಹುದು ” ಎಂಬ ಸಲಹೆಯನ್ನು ಹೈಕೋರ್ಟ್ ಸೂಚಿಸಿತ್ತು.
ಆದ ಕಾರಣ ದಾವಣಗೆರೆ ಕಸಾಪ ಸಮಾನ ಮನಸ್ಕರ ವೇದಿಕೆಯಿಂದ ಈ ಕುರಿತ ಅರ್ಜಿಯೊಂದಿಗೆ ನಾವು ಹೈಕೋರ್ಟ್ಗೆ ನೀಡಿದ ಎಲ್ಲಾ ದಾಖಲೆಗಳನ್ನೂ ಬೆಂಗಳೂರು ಮಲ್ಲೇಶ್ವರಂ ಸಹಕಾರ ಭವನದಲ್ಲಿರುವ ಈ ಸಂಘ ಸಂಸ್ಥೆಗಳ ಉಪನೋಂದಾವಣಾಧಿಕಾರಿಗಳ ಕಡೆ ನೀಡಿದ್ದೆವು.
ಜುಲೈ 9ರಂದು ಬೆಂಗಳೂರು ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಡಾ.ಕೋ.ವೆಂ.ರಾಮಕೃಷ್ಣೇಗೌಡರು, ಧಾರವಾಡದ ಲೇಖಕಿ ಹೊರಾಟಗಾರ್ತಿ ಡಾ.ಹನುಮಾಕ್ಷಿ ಗೋಗಿ ಹಾಗೂ ದಾವಣಗೆರೆ ಕಸಾಪ ಸಮಾನ ಮನಸ್ಕರ ವೇದಿಕೆಯ ಪರವಾಗಿ ಸಂಚಾಲಕರಾದ ಆರ್. ಶಿವಕುಮಾರಸ್ವಾಮಿ ಕುರ್ಕಿ ಎಂಬ ನಾನು ಇಲ್ಲಿನ ಉಪನಿಬಂಧಕರ ನ್ಯಾಯಾಲಯಕ್ಕೆ ಹಾಜರಾಗಿದ್ದೆವು.
ಆ ವಿಚಾರಣೆಯಲ್ಲಿ ಕಸಾಪ ಅಧ್ಯಕ್ಷರಾದ ಡಾ.ಮನುಬಳಿಗಾರ್ ಹಾಗೂ ಗೌ.ಕಾರ್ಯದರ್ಶಿಗಳು ಉಪಸ್ಥಿತರಿದ್ದು ಮತ್ತೆ ತಮ್ಮ ಅದೇ ಹಳೇ ರಾಗದಲ್ಲಿ ” ಅಧ್ಯಕ್ಷರ ಅಧಿಕಾರ ಅವಧಿಯನ್ನು 3 ರ ಬದಲು 5 ವರ್ಷ ಮಾಡಿಕೊಳ್ಳಲು ಅವಕಾಶ ನೀಡಲು ಕೇಳಿಕೊಂಡರು. ಅಲ್ಲದೆ ಈ ನಿಬಂಧನೆಗಳನ್ನು ಇವತ್ತೇ ಈಗಲೇ ಅನುಮೋದಿಸುವಂತೆ , ತಮ್ಮ ಅಧಿಕಾರ ಅವಧಿಯಿಂದಲೇ ಜಾರಿಯಾಗುವಂತೆ ಕೋಟಾದಲ್ಲಿ ನಡೆಸಿದ ಸಭೆಯ ನಿಬಂಧನೆಗಳನ್ನು ಅನುಮೋದಿಸಬೇಕಾಗಿ ಹಟಕ್ಕೆ ಬಿದ್ದವರಂತೆ ಕೇಳಿಕೊಂಡರು.
ಆಗ ನಾವು ಮೂವರೂ ಸೂಕ್ತ ಕಾರಣಗಳನ್ನು ನೀಡಿ ಅದನ್ನು ಬಲವಾಗಿ ವಿರೋಧಿಸಿದೆವು. ಚುನಾವಣೆ ನಡೆದುದು 3 ವರ್ಷಗಳ ಕಾಲಾವಧಿಗಾಗಿಯೇ ವಿನಃ 5 ವರ್ಷಗಳಿಗಲ್ಲ. ಅಲ್ಲದೆ ನ್ಶಾ.ಶ್ಯಾಮಸಂದರ್ ಆಯೋಗ ಹಿಂದೊಮ್ಮೆ ಹಂ.ಪ.ನಾ. ಅವರು ತಮ್ಮ ಆಧಿಕಾರ ಅವಧಿ ವಿಸ್ತರೀಕರಣ ಮಾಡಿಕೊಳ್ಳಲು ಇವರಂತೆಯೇ ಮುಂದಾದಾಗ ಅದನ್ನು ತಿರಸ್ಕರಿಸಿತ್ತು. ಅಗ ಅವರು ತಿದ್ದಿಕೊಂಡಿದ್ದ 5 ರ ಬದಲು 3 ವರ್ಷವೇ ಇರುವಂತೆ ಸರಕಾರ ನೇಮಿಸಿದ ಆಯೋಗ ತಾಕೀತು ಮಾಡಿತ್ತು’ ಎಂಬ ವಿಷಯವನ್ನು ಕೋರ್ಟ್ ಗಮನಕ್ಕೆ ತಂದೆವು.
ಆಗ ಸ್ಪಂದಿಸಿದ ಉಪನಿಬಂಧಕರು ಅದನ್ನು ಆಸಕ್ತಿಯಿಂದ ಆಲಿಸಿದರು. ಅಲ್ಲದೆ ಬಳಿಗಾರರ ವಾದವನ್ನು ಒಪ್ಪದೆ ಈ ಕುರಿತು ಮಾಹಿತಿ ಸಾಕ್ಷಿಗಳನ್ನು ತೋರಿಸಲು ನಾವು ಮೂವರಿಗೆ ಅವಕಾಶ ಕೊಟ್ಟು ಜು.20 ರಂದು ವಿಚಾರಣೆ ಮಾಡಲಾಗುವುದೆಂದು ತಿಳಿಸಿದರು.
ಕನ್ನಡ ವಿದ್ವಾಂಶರು ದಿಗ್ಗಜರು ಕವಿಪುಂಗವರು 100 ವರ್ಷಗಳ ಹಿಂದೆ ನಿಸ್ವಾರ್ಥತೆಯಿಂದ ಕಟ್ಟಿದ ಈ ಕನ್ನಡ ಸಾಹಿತ್ಯ ಹೃನ್ಮಂದಿರ ಇದೀಗ ಹಣ-ಅಧಿಕಾರ ಲಾಲಸೆ ಇರುವ ಮನುಬಳಿಗಾರ ಅವರಂತಹ ಸ್ವಾರ್ಥಪರ ಜನರಿಂದ ಪೂರ್ಣ ಕಲುಷಿತವಾಗಿದೆ.
ಇದರ ಶುದ್ಧೀಕರಣಕ್ಕಾಗಿ ಇಂದು (ಜುಲೈ12) ರ ಸಂಜೆ 6 ಗಂಟೆಗೆ ದಾವಣಗೆರೆಯ ಉದ್ಯಾನವನದ ಕಾವ್ಯ ಮಂಟಪದಲ್ಲಿ “ಕಸಾಪ ಉಳಿಸಿ” ಆಂದೋಲನ ನಡೆಸಲು ಪೂರ್ವಬಾವೀ ಸಮಾಲೋಚನಾ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಕಸಾಪ ಆಜೀವ ಸದಸ್ಯರುಗಳು ಸ್ವಯಂಸ್ಫೂರ್ತಿಯಿಂದ ಪಾಲ್ಗೊಂಡು ಕಸಾಪ ಕ್ಕೆ ಬಂದಿರುವ ಈ ಕುತ್ತನ್ನು ದೂರಮಾಡಲು ಸಹಕರಿಸಲು ವಿನಂತಿ.
ಈಗಾಗಲೆ ಧಾರವಾಡ, ಬೆಂಗಳೂರು, ಮಂಗಳೂರು, ಬಳ್ಳಾರಿ, ಮೈಸೂರು, ಮಂಡ್ಯ, ಮುಂತಾದ ಕಡೆ ಆಂಧೋಲನ ನಡೆಸಲು ಹುರಿಗೊಳ್ಳುತ್ತಿದ್ದಾರೆ. ಆದ್ದರಿಂದ ಹಾಲಿ ಕಸಾಪ ಸಮಿತಿಯ ಯಾವುದೇ ಆಸೆ ಆಮಿಷ, ಹಿಂಜರಿಕೆಗೆ ಒಳಗಾಗದೆ ನಾಳೆ ಜು.12 ರ ಗುರುವಾರ ಸಂಜೆ 6.00 ಗಂಟೆಗೆ ಸರಿಯಾಗಿ ದಾವಣಗೆರೆ ವಿದ್ಯಾನಗರದ ಕಾವ್ಯಮಂಟಪ ಉದ್ಯಾನವನಕ್ಕೆ ಆಗಮಿಸಲು ಆಹ್ವಾನಿಸುತ್ತೇವೆ. ತಮ್ಮ ಆತ್ಮೀಯರೆಲ್ಲರಿಗೂ ಈ ಸಂದೇಶವನ್ನು ರವಾನಿಸಲು ವಿನಂತಿ.
ಆರ್.ಶಿವಕುಮಾರಸ್ವಾಮಿ ಕುರ್ಕಿ, ಸಂಚಾಲಕರು, ದಾವಣಗೆರೆ
ಮೊ: 8970948221

ದಿನದ ಸುದ್ದಿ
ಪಿಎಂ ಸ್ವನಿಧಿ ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಕೇಂದ್ರ ಪುರಸ್ಕøತ ಯೋಜನೆಯಾದ ಡೇ-ನಲ್ಮ್ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಉಪಘಟಕವಾದ ಪಿ.ಎಂ. ಸ್ವನಿಧಿ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಬೀದಿ ಬದಿ ವ್ಯಾಪಾರಸ್ಥರು, ಸಾರ್ವಜನಿಕ ಸ್ಥಳಗಳಲ್ಲಿ ಹಾಲು ಮಾರಾಟಗಾರರು, ದಿನಪತ್ರಿಕೆ ಹಾಕುವವರು, ಅಸಕ್ತ ಸಾರ್ವಜನಿಕರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಹಾಗೂ ಪಾನ್ ಕಾರ್ಡ್ ದಾಖಲಾತಿಗಳೊಂದಿಗೆ ಪಾಲಿಕೆಯ ನಗರ ಬಡತನ ನಿವಾರಣಾ ಕೋಶ, ನಲ್ಮ್ ಶಾಖೆ(ಎಸ್.ಜೆ.ಎಸ್.ಆರ್.ವೈ ಕೆಂಪು ಕಟ್ಟಡ) ಮಹಾಪಾಲಿಕೆ ದಾವಣಗೆರೆ ಇಲ್ಲಿಗೆ ಸಲ್ಲಿಸಬೇಕೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿ ವಾಸವಿದ್ದರೆ ಮಾಹಿತಿ ಕೊಡಿ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳ ಉಪಟಳ ತಡೆಯಲು ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಆಸ್ಪತೆಗಳು, ಕ್ರೀಡಾ ಸಂಕೀರ್ಣ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಯಾವುದೇ ಬೀದಿ ನಾಯಿಗಳು ವಾಸವಿದ್ದಲ್ಲಿ ಮಾಹಿತಿಯನ್ನು ಹರಿಹರ ಪೌರಾಯುಕ್ತರಿಗೆ ನೀಡಲು ತಿಳಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇಣುಕಾ ದೇವಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖರೀದಿಸಿದ ಸಾಮಾಗ್ರಿಗಳ ಬಿಲ್ಲಿನ ದಿನಾಂಕಕ್ಕೂ ಹಾಗೂ ದಾಸ್ತಾನು ವಹಿಯಲ್ಲಿ ನಮೂದಾಗಿರುವ ದಿನಾಂಕಕ್ಕೂ ಇರುವ ವ್ಯತ್ಯಾಸಕ್ಕೆ ಸ್ಪಷ್ಟನೆ ಕೋರಿ 3 ತಿಂಗಳು ಕಳೆದರೂ ಯಾವುದೇ ಸ್ಪಷ್ಟನೆ ನೀಡದೆ ಕರ್ತವ್ಯ ಲೋಪ ಎಸಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರೇಣುಕಾ ದೇವಿ ವಿರುದ್ಧ ಲೋಕಾಯುಕ್ತಕ್ಕೆ ವಕೀಲ ಡಾ.ಕೆ.ಎ.ಓಬಳೇಶ್ ದೂರು ನೀಡಿದ್ದಾರೆ.
ದಾವಣಗೆರೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2020-21 ರಿಂದ 2024-25ನೇ ಸಾಲಿನ ಅವಧಿಯ ದಾಸ್ತಾನು ವಹಿಯನ್ನು ಮಾಹಿತಿಹಕ್ಕು ಅಧಿನಿಯಮ ಅಡಿಯಲ್ಲಿ ಪಡೆದು ಪರಿಶಿಲನೆ ಮಾಡಿದಾಗ ಸಾಮಾಗ್ರಿಗಳು ಖರೀದಿ ದಿನಾಂಕ ಹಾಗೂ ದಾಸ್ತಾನು ವಹಿಯಲ್ಲಿ ನಮೂದಾಗಿರುವ ದಿನಾಂಕಕ್ಕೂ ಸಾಕಷ್ಟು ವ್ಯತ್ಯಾಸ ಕಂಡು ಬಂದಿದ್ದು, ಈ ಬಗ್ಗೆ ಸ್ಪಷ್ಟತೆ ನೀಡುವಂತೆ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿರುತ್ತಾರೆ. ನಿಗದಿತ ಅವಧಿಯಲ್ಲಿ ಯಾವುದೇ ಸ್ಪಷ್ಟನೆ ನೀಡದ ಕಾರಣ ಜ್ಞಾಪನವನ್ನು ನೀಡಲಾಗಿತ್ತು. ಜ್ಞಾಪನ ಪತ್ರ ನೀಡಿ ನಿಗದಿತ ಅವಧಿ ಮುಕ್ತಾಯವಾದರೂ ಯಾವುದೇ ಸ್ಪಷ್ಟನೆ ನೀಡದೆ ನಿರ್ಲಕ್ಷö್ಯ ತೋರಿದ ರೇಣುಕಾ ದೇವಿಯವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಕರ್ತವ್ಯ ಲೋಪ | ಆಯುಕ್ತೆ ಮಂಜುಶ್ರೀ, ಜಂಟಿ ನಿರ್ದೇಶಕಿ ಕೆ.ಆರ್.ಕವಿತಾ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoಕರ್ತವ್ಯ ಲೋಪ ; ಪಿ.ಮಣಿವಣ್ಣನ್, ಕ್ರೈಸ್ ಇ.ಡಿ ಕಾಂತರಾಜು ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoಸಚಿವ ಪ್ರಿಯಾಂಕ ಖರ್ಗೆ ಪಂಚಾಯತ್ ರಾಜ್ ಇಲಾಖೆ ನಿರ್ಲಕ್ಷ್ಯ | ದೂರು ನೀಡಿ 6 ತಿಂಗಳಾದರೂ ಯಾವುದೇ ಕ್ರಮವಿಲ್ಲ ; ವಕೀಲ ಡಾ.ಕೆ.ಎ.ಓಬಳಪ್ಪ ಆರೋಪ
-
ದಿನದ ಸುದ್ದಿ6 days agoಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ | 8 ಕುಲಸಚಿವರು, 10 ಹಣಕಾಸು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು
-
ದಿನದ ಸುದ್ದಿ6 days agoಹೊಳಲ್ಕೆರೆ | ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ; ನಕಲಿ ಜಿ.ಎಸ್.ಟಿ ಬಿಲ್ಲುಗಳ ಮೂಲಕ ಖರೀದಿ ವ್ಯವಹಾರ ಪ್ರಾಂಶುಪಾಲ ಡಾ ಎಸ್.ಪಿ ರವಿ ವಿರುದ್ಧ ಲೋಕಾಯುಕ್ತಕ್ಕೆ ವಕೀಲ ಡಾ.ಓಬಳೇಶ್ ದೂರು
-
ದಿನದ ಸುದ್ದಿ3 days agoಕರ್ತವ್ಯ ಲೋಪ | ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು
-
ದಿನದ ಸುದ್ದಿ5 days agoನರೇಗಾ ಕಾರ್ಮಿಕ ಕೆಲಸದ ಸ್ಥಳದಲ್ಲಿ ನಿಧನ : ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ
-
ದಿನದ ಸುದ್ದಿ5 days agoಇದೇ 15 ರಂದು ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

