Connect with us

ಕ್ರೀಡೆ

ಖೇಲೊ ಇಂಡಿಯಾ ಯೂತ್ ಗೇಮ್ಸ್ ; ಪದಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಹರಿಯಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ

Published

on

ಸುದ್ದಿದಿನ ಡೆಸ್ಕ್ : ಹರಿಯಾಣದಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಗೇಮ್ಸ್ 2021ರ ಪದಕ ಪಟ್ಟಿಯಲ್ಲಿ ನಿನ್ನೆಯ ಅಂತ್ಯಕ್ಕೆ ಹರಿಯಾಣ ಅಗ್ರಸ್ಥಾನ ಗಳಿಸಿದೆ.

41ಚಿನ್ನ, 35 ಬೆಳ್ಳಿ 45 ಕಂಚು ಸೇರಿದಂತೆ ಒಟ್ಟಾರೆ 118 ಪದಕ ಗೆದ್ದು ಮೊದಲ ಸ್ಥಾನ ಪಡೆದಿದೆ. 41 ಸ್ವರ್ಣ, 35 ಬೆಳ್ಳಿ ಮತ್ತು 30ಕಂಚಿನ ಪದಕ ಗೆದ್ದಿರುವ ಮಹಾರಾಷ್ಟ್ರ ದ್ವಿತೀಯ ಸ್ಥಾನದಲ್ಲಿದ್ದರೆ, 21 ಬಂಗಾರ, 16ರಜತ ಮತ್ತು 23 ಕಂಚು ಸೇರಿ 60 ಪದಕಗಳೊಂದಿಗೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಕುಂದುವಾಡ ಪ್ರೀಮಿಯರ್ ಲೀಗ್ -6 ; ಡಿ ರಾಕ್ಸ್ ತಂಡಕ್ಕೆ ರೋಚಕ ಜಯ

Published

on

ಸುದ್ದಿದಿನ,ದಾವಣಗೆರೆ: ನಗರದ ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್ ಹಾಗೂ ಜನತಾ ರಕ್ಷಣಾ ವೇದಿಕೆಯಿಂದ ಚಿಲ್ಡ್ರನ್ ಕುಂದುವಾಡ ಪ್ರೀಮಿಯರ್ ನಡೆದಿದ್ದು, ಈ ಪಂದ್ಯಾವಳಿಯಲ್ಲಿ ಡಿ ರಾಕ್ಸ್ ತಂಡ ರೋಚಕವಾಗಿ ಒಂದು ರನ್ ನಿಂದ ಗೆದ್ದು ಬೀಗಿದೆ.

ಪ್ರತಿ ವರ್ಷದಂತೆ ಈ ವರ್ಷವು ಕುಂದುವಾಡ ಪ್ರೀಮಿಯರ್ ಲೀಗ್ -6 ಆಯೋಜನೆ ಮಾಡಲಾಗಿತ್ತು, ಈ ಭಾರೀ ವಿಶೇಷವಾಗಿ ಗೋಲ್ಡನ್ ಕೆಪಿಎಲ್(ಬಂಗಾರದ ಕಪ್) ನ್ನು ಇಡಲಾಗಿತ್ತು, ಮಳೆ ನಿರಂತರ ಆಗಮಿಸಿದ ಹಿನ್ನಲೆ ಗೋಲ್ಡನ್ ಕಪ್ ಮುಂದೂಡಲಾಯಿತು. ಈ ಮಧ್ಯೆ ಮಳೆ ಬಿಡುವು ನೀಡಿದ ಹಿನ್ನಲೆ ಭಾನುವಾರ ಚಿಲ್ಡ್ರನ್ ಕೆಪಿಎಲ್ ಪಂದ್ಯ ನಡೆಸಲಾಯಿತು, ಐದನೇ ತರಗತಿಯಿಂದ 8ನೇ ತರಗತಿ ಒಳಗಿನ ಮಕ್ಕಳು ಮಾತ್ರ ಈ ಟೂರ್ನಿಯಲ್ಲಿ ಭಾಗವಹಿಸಿದ್ದರು.

ನಾಲ್ಕು ತಂಡಗಳನ್ನ ರಚಿಸಲಾಗಿತ್ತು, ಡೆವಿಲ್ಸ್ ಕ್ರಿಕೇಟರ್ಸ್, ಡಿ ರಾಕ್ಸ್, ಶ್ರೀ ವಿನಾಯಕ ಕ್ರಿಕೇಟರ್ಸ್, ಜೂನಿಯರ್ಸ್ ಸ್ನೇಹ ಬಳಗ ತಂಡಗಳು ಭಾಗವಹಿಸಿದ್ದವು, ಗ್ರಾಮದ ಹಿಡಿಯ ಮುಖಂಡರು ಪಂದ್ಯಾವಳಿ ಉದ್ಘಾಟಿಸಿದರು, ಡೆವಿಲ್ಸ್ ಹಾಗೂ ಡಿ ರಾಕ್ಸ್ ತಂಡ ಫೈನಲ್ ಪ್ರವೇಶ ಪಡೆದಿದ್ದವು, ಮೊದಲ ಬ್ಯಾಟ್ ಮಾಡಿದ ಸಂಜಯ್ ಲೋಕಿಕೆರೆ ನಾಯಕತ್ವದ ಡಿ ರಾಕ್ಸ್ ತಂಡ ನಿಗಧಿತ 4 ಓವರ್ ಗಳಲ್ಲಿ 28ರನ್ ಗಳಿಸಿತು, ಗುರಿ ಬೆನ್ನಟ್ಟಿದ ಗೌಡ್ರು ಪುನೀತ್ ನಾಯಕತ್ಸ ಡೆವಿಲ್ಸ್ ತಂಡ ರೋಚಕ ಹಣಾಹಣಿಯಲ್ಲಿ ಕೇವಲ 1 ರನ್ ನಿಂದ ಸೋತು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆಯಬೇಕಾಯಿತು.

ಕೊನೆಯ ಎಸೆತದಲ್ಲಿ ಗೆಲ್ಲಲು ಮೂರು ರನ್ ಗಳ ಅವಶ್ಯಕತೆ ಇತ್ತು, ಕೊನೆಯ ಎಸೆತ ಬಿಗಿ ಬೌಲಿಂಗ್ ದಾಳಿ ನಡೆಸಿದ ಬೌಲರ್ ಕೇವಲ ಒಂದು ರನ್ ಬಿಟ್ಟುಕೊಟ್ಟರು ಇದರೊಂದಿಗೆ ಕೇವಲ ಒಂದು ರನ್ ನಿಂದ ಡಿ ರಾಕ್ಸ್ ತಂಡ ವಿಜಯಶಾಲಿಯಾಯಿತು, ಇನ್ನೂ ಮೂರನೇ ಸ್ಥಾನಕ್ಕಾಗಿ ಶ್ರೀ ವಿನಾಯಕ ಕ್ರಿಕೇಟರ್ಸ್ ಹಾಗೂ ಜೂನಿಯರ್ಸ್ ಸ್ನೇಹಬಳಗ ತಂಡ ಸೆಣಸಾಟ ನಡೆಸಿದವು.

ಈ ಪಂದ್ಯದಲ್ಲಿ ಶ್ರೀ ವಿನಾಯಕ ತಂಡ ಸುಲಭವಾಗಿ ಗೆಲುವು ಪಡೆಯುದರೊಂದಿಗೆ ಮೂರನೇ ಬಹುಮಾನ ಪಡೆಯಿತು, ಜೂನಿಯರ್ಸ್ ಸ್ನೇಹ ಬಳಗ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇನ್ನೂ ಎಲ್ಲಾ ಪಂದ್ಯಗಳು ರೋಚಕವಾಗಿದ್ದವು, ಮಕ್ಕಳಿಗಷ್ಟೆ ಈ ಪಂದ್ಯಾವಳಿಯಲ್ಲಿ ಅವಕಾಶ ಇದ್ದಿದ್ದರಿಂದ ಆಟಕ್ಕೆ ಎಲ್ಲರಿಗೂ ಅವಕಾಶ ಸಿಕ್ಕಿತ್ತು, ಅಷ್ಟೆ ಉತ್ಸಾಹಕರಾಗಿ ಮಕ್ಕಳು ಪಾಲ್ಗೊಂಡಿದ್ದು ಚಿಲ್ಡ್ರನ್ ಕೆಪಿಎಲ್ ಯಶಸ್ವಿಯಾಗಿ ಮುಗಿದಿದೆ, ಇನ್ನೂ ಗೋಲ್ಡನ್ ಕೆಪಿಎಲ್ ಟೂರ್ನಿಯನ್ನೂ ಮುಂದೂಡಲಾಗಿದ್ದು, ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್‌ ನಿಧನ

Published

on

ಸುದ್ದಿದಿನಡೆಸ್ಕ್ :ಮಾಧ್ಯಮ ಲೋಕದ ದಿಗ್ಗಜ, ಉದ್ಯಮಿ ಹಾಗೂ ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್‌ (87) ನಿಧನರಾಗಿದ್ದಾರೆ.

ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ 4:50ಕ್ಕೆ ಕೊನೆಯುಸಿರೆಳೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಅಮೆರಿಕಾ ಪರ ಆಡಿ ಪಾಕಿಸ್ತಾನ ಸೋಲಿಸಿದ ಆ ಬೌಲರ್ಸ್ ಮೂಲ ಚಿಕ್ಕಮಗಳೂರು, ಮುಂಬೈ !

Published

on

ನೋಸ್ತುಶ್ ಪ್ರದೀಪ್ ಕೆಂಜಿಗೆ | ಸೌರಭ್ ನೇತ್ರಾವಲ್ಕರ್
  • ಸಿದ್ದು ಸತ್ಯಣ್ಣನವರ್

ಸದ್ಯ ನಡೆದಿರುವ T-20 ಕ್ರಿಕೆಟ್ ವಿಶ್ವಕಪ್ ನಲ್ಲಿ ದಿಟ್ಟ ಆಟವಾಡಿದ ಅಮೆರಿಕಾ ತಂಡ ಬಲಿಷ್ಟ ಪಾಕಿಸ್ತಾನ ತಂಡವನ್ನು ಸೂಪರ್ ಓವರಿನಲ್ಲಿ 5 ರನ್ ಅಂತರದಿಂದ ಸೋಲಿಸಿತು. ವಿವಿಧ ರಾಷ್ಟ್ರಗಳ ಮೂಲದ ಆಟಗಾರರನ್ನೇ ಹೆಚ್ಚು ಹೊಂದಿರುವ ಅಮೆರಿಕಾ ತಂಡದ ಗೆಲುವಿನಲ್ಲಿ ಗಮನ ಸೆಳೆದ ಹೆಸರು ಕರ್ನಾಟಕದ ಚಿಕ್ಕಮಗಳೂರಿನ ನೋಸ್ತುಶ್ ಪ್ರದೀಪ್ ಕೆಂಜಿಗೆ ಹಾಗೂ ಮುಂಬೈ ಮೂಲದ ಸೌರಭ್ ನೇತ್ರಾವಲ್ಕರ್ ಅವರದು. ನೋಸ್ತುಶ್ ಅವರು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕೆಂಜಿಗೆ ಗ್ರಾಮದವರು. ಕನ್ನಡದ ಹೆಸರಾಂತ ಸಾಹಿತಿಗಳಾದ ಪೂರ್ಣಚಂದ್ರ ತೇಜಸ್ವಿಯವರೊಡನೆ ಮಿಲೇನಿಯಮ್ ಸರಣಿಯ ಪುಸ್ತಕಗಳನ್ನು ನೀಡಿದ ಸಾಹಿತಿ, ಕಾಫಿ ಬೆಳೆಗಾರರಾದ ಪ್ರದೀಪ್ ಕೆಂಜಿಗೆ ಅವರ ಪುತ್ರ ನೋಸ್ತುಶ್.

ಅಮೆರಿಕಾ ತಂಡ ತನ್ನ ಕೋಟಾದ 20 ಓವರ್ ಬೌಲಿಂಗ್ ಮುಗಿಸಿದಾಗ ಸ್ಕೋರ್ ಬೋರ್ಡ್ ಮೇಲೆ ನೋಸ್ತುಶ್ ಅವರ ಆಟದ ವೈಖರಿಯ ಅಂಕಿಸಂಖ್ಯೆ 4-0-30-3.
ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದದ್ದು ಪಂದ್ಯದ ತಿರುವುಗಳಲ್ಲೊಂದು. ಪಾಕ್ ನೀಡಿದ 160 ರನ್ ಲಕ್ಷ್ಯ ಬೆನ್ನಟ್ಟಿದ ಅಮೆರಿಕನ್ನರು 159 ರನ್ ಗಳಿಸಿದ್ದರಿಂದ ಪಂದ್ಯ ಟೈಗೊಂಡ ಕಾರಣಕೆ ಸೂಪರ್ ಓವರಿನಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು ಅಮೆರಿಕ ನೀಡಿದ ಗುರಿ 19 ರನ್. ಆಗ ಈ ಮೊತ್ತವನ್ನು ರಕ್ಷಿಸಿಕೊಳ್ಳಲು ಅಮೆರಿಕಾ ತಂಡದ ನಾಯಕ ಚೆಂಡಿತ್ತದ್ದು ಎಡಗೈ ವೇಗಿ ಸೌರಭ್ ನೇತ್ರಾವಲ್ಕರ್ ಅವರ ಕೈಗೆ. ಆರು ಎಸೆತಗಳಲ್ಲಿ 13 ರನ್ ಅಷ್ಟೇ ನೀಡಿದ ನೇತ್ರಾವಲ್ಕರ್ ಅಮೆರಿಕ ತಂಡದ ಜಯಕ್ಕೆ ಕಾರಣರಾದರು. ಭಾರತದ ಪರ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ U-19 ವಿಶ್ವಕಪ್ ಆಡಿದ್ದ ಹಾಗೂ ಮುಂಬೈ ಪರ ರಣಜಿ ಪಂದ್ಯಗಳಲ್ಲೂ ಮಿಂಚಿದ್ದ ನೇತ್ರಾವಲ್ಕರ್ ಸದ್ಯ ಅಮೆರಿಕಾದಲ್ಲಿ ಟೆಕ್ಕಿ. ಅಮೆರಿಕಾ ಪರ 40ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿ, ತಂಡದ ಪ್ರಮುಖ ಖಾಯಂ ಸದಸ್ಯರಾಗಿದ್ದಾರೆ.

ನೋಸ್ತುಶ್ ಕೆಂಜಿಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ, ಕ್ರಿಕೆಟ್ ತರಬೇತಿ ಪಡೆದರೂ, ಕ್ಲಬ್ ಕ್ರಿಕೆಟ್ ಆಡಿದರೂ ಭಾರತದಲ್ಲಿ ಸ್ಪರ್ಧೆ ಹೆಚ್ಚಾಗಿರುವ ಕಾರಣಕೆ ಅವಕಾಶ ಸಿಗುವ ಸಾಧ್ಯತೆ ಬಹಳ ಕಷ್ಟವಿತ್ತು. ಆ ಕಾರಣಕೆ ಉದ್ಯೋಗ ನಿಮಿತ್ತ ಅಮೆರಿಕಾ ತೆರಳಿದವರಿಗೆ ಅಲ್ಲಿಯ ರಾಷ್ಟ್ರೀಯ ತಂಡಕ್ಕೆ ಆಡುವ ಸುಯೋಗ ಒಲಿಯಿತು. 2017ರಲ್ಲಿ ನೋಸ್ತುಶ್ ಅವರು ಅಮೆರಿಕಾ ಪರ ಪಾದಾರ್ಪಣೆ ಮಾಡಿದಾಗ ಅವರ ಸಮಕಾಲೀನರಾದ ಈಗಾಗಲೇ ಭಾರತದ ಪರ ಜನಪ್ರಿಯರಾಗಿರುವ ಬ್ಯಾಟರ್ ಗಳಾದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ಜೊತೆ ಆಡಿದವರು. ಎಡಗೈ ಸ್ಪಿನ್, ಬಲಗೈ ಬ್ಯಾಟಿಂಗ್ ಕೌಶಲ ಹೊಂದಿರುವ ನೋಸ್ತುಶ್ ಹಾಗೂ ಸೌರಭ್ ಅವರ ಪಾಕಿಸ್ತಾನದ ವಿರುದ್ಧದ ಆಟ ಅಮೆರಿಕಾ ತಂಡಕ್ಕೆ ಗೆಲುವು ಕೊಡಿಸಿತು. ಆ ಮೂಲಕ ಕ್ರಿಕೆಟ್ ಶಿಶು ಎಂದು ಕರೆಯಲ್ಪಟ್ಟರೂ ಬಲಿಷ್ಟ ಪಾಕಿಸ್ತಾನವನ್ನು ಸೋಲಿಸಲು ಕಾರಣವಾದ ಅಮೆರಿಕಾ ತಂಡದ ಸಂತಸಕೆ ಕನ್ನಡಿಗನ ಕೊಡುಗೆಯು ಸೇರಿ ಮುಂಬೈ ಮೂಲದ ಸೌರಭ್ ಅವರ ಪ್ರದರ್ಶನವು ಕಾರಣವಾಯಿತು.

ಅಮೆರಿಕ ತಂಡ ಪಾಕ್ ವಿರುದ್ಧ ಗೆಲ್ಲಲು ಮಾಡಿದ ಸಂಘಟಿತ ಹೋರಾಟ ಖಂಡಿತ ಕ್ರಿಕೆಟ್ ಪ್ರಿಯರ ಮನಸೆಳೆಯುವಂತಿತ್ತು. ಈ ಜಯ ಹಾಗೂ ವಿಶ್ವಕಪ್ ಆತಿಥ್ಯದಿಂದ ಅಮೆರಿಕದಲ್ಲಿ ಕ್ರಿಕೆಟ್ ಜನಪ್ರಿಯವಾಗಿ ಬೆಳೆಯಲು ಕಾರಣವಾಗಬಹುದು. (ಕೃಪೆ : ಸಿದ್ದು ಸತ್ಯಣ್ಣನವರ್ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending