Connect with us

ದಿನದ ಸುದ್ದಿ

ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸಮಯ ಮೀಸಲಿಡೋಣ

Published

on

ಲೇಖನ : ಸಿ.ಎಚ್.ನಾಗೇಂದ್ರಪ್ಪ, ನವಿಲೇಹಾಳು
  • ಸಿ.ಎಚ್.ನಾಗೇಂದ್ರಪ್ಪ,ನವಿಲೇಹಾಳು

ನವಂಬರ್ 14 ಭಾರತದ ಮೊದಲ ಪ್ರಧಾನಿ ಚಾಚ ಜವಹಾರ ಲಾಲ್ ನೆಹರು ರವರ ಜನ್ಮದಿನ, ನೆಹರು ರವರಿಗೆ ಮಕ್ಕಳೆಂದರೆ ತುಂಬಾ ಅಚ್ಚು-ಮೆಚ್ಚು. ಭಾರತದಾದ್ಯಂತ ನವಂಬರ್ 14 ರಂದು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ.ನಾಡಿನ ಸಮಸ್ತ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸುತ್ತಾ,

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು* ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ? ಕೂಸು ಕಂದಯ್ಯ ಒಳ ಹೊರಗೆ ಆಡಿದರೆ, ಬೀಸಣಿಕೆ ಗಾಳಿ ಸುಳಿದಾವ ಎಂಬ ಜನಪದದಂತೆ,ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬಂತೆ, ಮಕ್ಕಳಿರುವ ಮನೆಯಲ್ಲಿ ಸಡಗರ-ಸಂಭ್ರಮಕ್ಕೆ ಬರವಿಲ್ಲ, ಎಷ್ಟೇ ಒತ್ತಡ,ನೋವುಗಳಿದ್ದರೂ ಮಕ್ಕಳು ತಮ್ಮತುಂಟಾಟ, ಚೇಷ್ಟೆಗಳಿಂದ ಎಲ್ಲವನ್ನು ಮರೆಸುತ್ತಾರೆ.

” ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ,ತಾಯಿಯೇ ಮೊದಲ ಗುರುವಾಗಿರುವುದರಿಂದ,ತೊದಲ ನುಡಿಯಿಂದ ಪ್ರಾರಂಭವಾಗುವ ಮಗುವಿನ ಎಲ್ಲಾ ಚಟುವಟಿಕೆಗಳನ್ನು ಅಮ್ಮ ಗ್ರಹಿಸಿ ತಿದ್ದುತ್ತಾ ಸಾಗುತ್ತಾಳೆ.”

ಮಕ್ಕಳು ಶೈಕ್ಷಣಿಕವಾಗಿ ಶಾಲೆಯಲ್ಲಿ ಎಷ್ಟೇ ಕಲಿತರೂ ಸಹ, ಮನೆಯಲ್ಲಿ ಮಕ್ಕಳಿಗೆ ಪಠ್ಯದ ವಿಷಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳ ಬಗ್ಗೆ ವಿಶೇಷ ಆಸಕ್ತಿ-ಕಾಳಜಿ ಮೂಡಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ.

ಮಕ್ಕಳು ಪಠ್ಯಕ್ಕೆ ಸೀಮಿತ ವಾಗದಂತೆ,ಮಕ್ಕಳ ವಿದ್ಯಾಭ್ಯಾಸದ ಮಟ್ಟ ಗ್ರಹಿಸಿ,ಅವರಲ್ಲಿ ಸಮಯ ಪ್ರಜ್ಞೆ ಮೂಡಿಸಿ,ಕಲಿಕೆಗೆ ಸೂಕ್ತ ವಾತಾವರಣ ಕಲ್ಪಿಸಿ,ಮಕ್ಕಳ ಕಲಿಕೆಗೆ ಅನುಗುಣವಾಗಿ ಉತ್ತಮ ಸಲಹೆ,ಪ್ರೋತ್ಸಾಹ, ಮಾರ್ಗದರ್ಶನದೊಂದಿಗೆ, ಮಕ್ಕಳೊಂದಿಗೆ ಸ್ನೇಹಿತರಂತೆ ಬೆರೆತು,
ಭವಿಷ್ಯದ ಉತ್ತಮ ಪ್ರಜೆಯನ್ನಾಗಿಸಲು,ಉತ್ತಮ ಸಂಸ್ಕಾರ ಕಲಿಸಿ,ಮೌಲ್ಯಗಳನ್ನು ಬೆಳಸಿ,ಮಕ್ಕಳಿಗೂ ಪ್ರಶ್ನಿಸುವ,
ಸ್ವಇಚ್ಛೆಯಿಂದ ಕಲಿಯಲು ಬಯಸುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಮತ್ತು ನಾಯಕತ್ವದ ಗುಣ ಬೆಳೆಯಲು,ಮಕ್ಕಳಲ್ಲಿನ ಭಯ-ಆತಂಕ ದೂರಮಾಡಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಮಯ ಮಕ್ಕಳಿಗೆ ಅತ್ಯಮೂಲ್ಯವಾಗಿದೆ.

ಇಂದಿನ ಯಾಂತ್ರಿಕ ಯುಗದಲ್ಲಿ ಮಾನವ ಬಿಡುವಿಲ್ಲದೇ ತನ್ನ ಕುಟುಂಬವನ್ನು ಅಡೆ-ತಡೆಯಿಲ್ಲದೇ ಮುನ್ನೆಡೆಸಲು,ತನ್ನ ಮಕ್ಕಳ ಉನ್ನತ ಭವಿಷ್ಯಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾನೆ,ಮಕ್ಕಳು ಸಹ ಇದನ್ನ ಅರಿತು ನಡೆದರೆ ಪೋಷಕರು ಮಕ್ಕಳನ್ನೇ ಆಸ್ತಿ ಮಾಡುವುದರಲ್ಲಿ ಸಂಶಯ ಇಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಿಜೆಪಿಯ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ ಎನ್.ಬಿ.ಭಾರ್ಗವಿ ದ್ರಾವಿಡ್ ಆಯ್ಕೆ

Published

on

ಸುದ್ದಿದಿನ,ಚಿತ್ರದುರ್ಗ : ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಯಾಗಿ ಚಿತ್ರದುರ್ಗದ ಶ್ರೀಮತಿ ಎನ್.ಬಿ.ಭಾರ್ಗವಿ ದ್ರಾವಿಡ್ ಅವರನ್ನು ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಂಸದರಾದ ತೇಜಸ್ವಿ ಸೂರ್ಯ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜ್ ರವರು ಅಧಿಕೃತ ನೇಮಕ ಪತ್ರ ನೀಡುವುದರ ಮೂಲಕ ಆಯ್ಕೆ ಮಾಡಲಾಯಿತು.

ಭಾರ್ಗವಿ ದ್ರಾವಿಡ್ ಅವರು ಈ ಹಿಂದೆ ಭಾರತ ಸರ್ಕಾರವು ಚಿತ್ರದುರ್ಗ ನೆಹರು ಯುವ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾಗಿ ನೇಮಕ ಮಾಡಿತ್ತು. ಹಾಗೂ ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಲಾಗಿತ್ತು.

ಎಸ್.ಸಿ.ಮೋರ್ಚಾದ ರಾಜ್ಯ ಕಾರ್ಯ ಕಾರಿಣಿ ಸದಸ್ಯರಾಗಿ ಪ್ರವಾಸ ಕೈಗೊಂಡು ಕೆಲಸ ಮಾಡಿದ್ದರು. ಎ.ಬಿ.ವಿ.ಪಿ ಸಂಘಟನೆಯಲ್ಲಿಯೂಸಹ ಸಾಕಷ್ಟು ರಾಜ್ಯ ಮಟ್ಟದ ಜವಾಬ್ದಾರಿ ಗಳನ್ನು ನಿಭಾಯಿಸಿದ್ದರು.ಬರುವ 2024 ರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಕೂಡ ಆಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಪಿಎಲ್, ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಎಪಿಎಲ್, ಬಿಪಿಎಲ್ ಪಡಿತರ ಚೀಟಿಗಳಿಗಾಗಿ ಹೊಸ ಅರ್ಜಿಗಳನ್ನು ಏಪ್ರಿಲ್ 1 ರಿಂದ ಸ್ವೀಕರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ವಿಧಾನಸಭೆಗೆ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ಆದಾಯ1.20 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಅಂತಹವರನ್ನು ಬಿಪಿಎಲ್ ಚೀಟಿಯಿಂದ ಹೊರಗಿಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ : ಅವಧಿ ವಿಸ್ತರಣೆ

Published

on

ಸುದ್ದಿದಿನ ಡೆಸ್ಕ್ : ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಗಡುವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್‌ಗಿಂದು ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಅವರು, ಕಾಂಗ್ರೆಸ್‌ನ ಮಾದೇಗೌಡ ಅವರ ಪ್ರಸ್ತಾಪಕ್ಕೆ ಉತ್ತರಿಸಿ, ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಇದುವರೆಗೂ 18 ಲಕ್ಷ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇದು ನಡೆಯಬೇಕಾಗಿರುವುದರಿಂದ ಮೂರು ತಿಂಗಳು ವಿಸ್ತರಣೆ ಮಾಡಲಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending