ದಿನದ ಸುದ್ದಿ
ಸಿದ್ದು ‘ಮುನಿಸು’ ಮುರಿಯಲಿದ್ದಾರಂತೆ ಖರ್ಗೆ..!

ಸುದ್ದಿದಿನ ಡೆಸ್ಕ್ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡವಳಿಕೆ ಕಾಂಗ್ರಸ್ ಸೇರಿದಂತೆ ಅವರ ಅಭಿಮಾನಿಗಳಿಗೆ ತುಂಬಾ ಮುಜುಗರ ಉಂಟುಮಾಡಿದೆ. ಸಮ್ಮಿಶ್ರ ಸರ್ಕಾರ ಸ್ವತಂತ್ರ ಬಜೆಟ್ ಮಂಡಿಸುವ ಬಗ್ಗೆ ಸಿದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಅಪಸ್ವರ ಯಾಕೋ ತಣ್ಣಗಾಗುವ ಹಾಗೆ ಕಾಣುತ್ತಿಲ್ಲ. ಸಿದ್ದ ರಾಮಯ್ಯ ಅವರ ಈ ನಡೆಗೆ ಬೇಸರಗೊಂಡಿರುವ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
” ಕೋಮುವಾದಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸಬಾರದು ಎಂಬ ಉದ್ದೇಶದಿಂದ, ಜಾತ್ಯತೀತ ಜನಾತಾದಳ ಪಕ್ಷದೊಂದಿಗೆ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಈ ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ ಅವಧಿಗೆ ಮುನ್ನ ಬಿದ್ದು ಹೋಗುವುದಿಲ್ಲ, ಐದು ವರ್ಷ ಪೂರೈಸುತ್ತದೆ” ಎಂದು ಆತ್ಮವಿಶ್ವಾಸದಿಂದ ಮಾಧ್ಯಮಗಳಿಗೆ ತಿಳಿಸಿದರು. ಹಾಗೇ ಸಮ್ಮಿಶ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರ ಬಗೆಗೆ ಮಾತನಾಡಿದ ಅವರು” ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರ ಏಕೆ ಐದುವರ್ಷ ಪೂರೈಸುವುದಿಲ್ಲ ಎಂದು ಹೇಳಿದ್ದಾರೆಂಬುದು ತಿಳಿದಿಲ್ಲ. ಈತರಹದ ಹೇಳಿಕೆಗಳನ್ನ ಅವರು ಕೊಡಬಾರದು. ನಾನು ದೆಹಲಿಯಿಂದ ಬೆಂಗಳೂರಿಗೆ ಬಂದ ನಂತರ ಜತೆ ಮಾತಾಡಿ ಸಮಸ್ಯೆ ಬಗೆಹರಿಸಲಿದ್ದೇನೆ” ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ನಾರಾಯಣ ಗೌಡರು ಯಾರು..? ಅಂದ ಸಚಿವ ಡಾ.ಸುಧಾಕರ್ ಕ್ಷಮೆಯಾಚಿಸಲೇ ಬೇಕು

- ದಿವ್ಯಶ್ರೀ.ವಿ, ಬೆಂಗಳೂರು
ತನ್ನ ಬದುಕಿನಲ್ಲಿ ಕಿಂಚಿತ್ತು ಸ್ವಾರ್ಥವಿಲ್ಲದೆ ನಮ್ಮ ನಾಡಿಗೋಸ್ಕರ ಕನ್ನಡಿಗರಿಗೋಸ್ಕರ ತಮ್ಮ ಬದುಕನ್ನು ಮುಡುಪಾಗಿಟ್ಟಿರುವ ಕೆಚ್ಚೆದೆಯ ಕನ್ನಡಿಗ ಎಂದರೆ ನಾರಾಯಣ ಗೌಡರು.
ಇವರೆಂದರೆ ಪುಟ್ಟ ಪುಟ್ಟ ಮಕ್ಕಳು ಕೂಡ ಗೊತ್ತು ಎನ್ನುತ್ತಾರೆ ಆದರೆ ಬೇಸರದ ಸ್ಥಿತಿ ಏನೆಂದರೆ ನಮ್ಮ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಮಾತ್ರ ನಮ್ಮ ಗೌಡ್ರು ಯಾರೆಂದು ಗೊತ್ತಿಲ್ಲ ಎನ್ನುವ ಮಾತು ನಿಜಕ್ಕೂ ಖಂಡನೀಯ.
ನಮ್ಮ ಕರ್ನಾಟಕದಲ್ಲಷ್ಟೇ ಅಲ್ಲದೆ ಇತರ ರಾಜ್ಯ ಮತ್ತು ದೇಶಗಳಿಗೆ ನಮ್ಮ ಗೌಡರು ಪರಿಚಯ ಅಂತಹುದರಲ್ಲಿ ನಮ್ಮ ರಾಜ್ಯದ ಸಚಿವರಿಗೆ ಗೊತ್ತಿಲ್ಲ ಎನ್ನುವುದು ಮೂರ್ಖತನ ಪರಮಾವಧಿ. ಇವರ ಹೇಳಿಕೆಯಿಂದ ಎಲ್ಲಾ ಕನ್ನಡಿಗರಿಗೆ ಕಾಡುವ ಪ್ರಶ್ನೆ ಎಂದರೆ ನಮ್ಮ ಸಚಿವರಾದ ಡಾ. ಸುಧಾಕರ್ ಅವರು ನಿಜಕ್ಕು ಕನ್ನಡಿಗರ ಎನ್ನುವುದು!
ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.facebook.com/tv5kannadatv/videos/119132520071641/
ಅಂದು ಬಾಗೇಪಲ್ಲಿಯಲ್ಲಿ ಜನರಿಗೆ ಕುಡಿಯುವ ನೀರಿನ ಕೊರತೆಯಾಗಿತ್ತು. ಬಾಗೇಪಲ್ಲಿ ಜನರಿಗೋಸ್ಕರ ಕುಡಿಯುವ ನೀರಿಗಾಗಿ ಚಿತ್ರಾವತಿ ನದಿಗೊಂದು ಅಣೆಕಟ್ಟು ನಿರ್ಮಿಸಲು ಅಂದಿನ ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಅಂದು ಆಂಧ್ರಪ್ರದೇಶದ ಸರ್ಕಾರ ಈ ಯೋಜನೆಗೆ ಕಿರುಕುಳ ಕೊಡಲು ಆರಂಭಿಸುತ್ತಾರೆ.
ಆದುದರಿಂದ ಬಾಗೇಪಲ್ಲಿಯಲ್ಲಾದರೂ ಅಣೆಕಟ್ಟು ಕಟ್ಟಲು ಪ್ರಾರಂಭಿಸುತ್ತಾರೆ. ಆದರೆ ಅಂದು ಬಂದಂತಹ ಬೆದರಿಕೆಯ ಮಾತುಗಳು ತೊಂದರೆಗಳನ್ನು ಎದುರಿಸಲು ಯಾರೊಬ್ಬರೂ ಮುಂದಾಗಲಿಲ್ಲ ಆಗಿದ್ದು ನಮ್ಮ ಗೌಡರು ಮಾತ್ರ.ಅಂದು ಎಂತಹ ಬೆದರಿಕೆ ಬಂದರು ಹೆದರದೆ ನೇರವಾಗಿ ಸ್ವೀಕರಿಸಿದ್ದು ಹೆಮ್ಮೆಯ ಕನ್ನಡಿಗ ನಾರಾಯಣಗೌಡರು.
ಯಾರ ಮಾತಿಗೂ ಅವರು ಹೆದರದೆ ಬಾಗೇಪಲ್ಲಿಯ ಅಣೆಕಟ್ಟು ನಿರ್ಮಾಣದ ಪರವಾಗಿ ತೀವ್ರ ಸ್ವರೂಪದ ಹೋರಾಟ ನಡೆಸಿದರು. ಬೆಂಗಳೂರಿನ ಕೆಂಪೇಗೌಡ ಪ್ರತಿಮೆಯಿಂದ ಬಾಗೇಪಲ್ಲಿಗೆ ತಮ್ಮ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಹೋರಾಟ ನಡೆಸಿದರು ಅಂದು ಹೊರಟ ಅತ್ಯಂತ ಯಶಸ್ವಿಯಾಗಿ ನಡೆಯಿತು. ಮತ್ತು ಯಾವುದೇ ತೊಂದರೆ ಇಲ್ಲದೆ ಹಣೆಕಟ್ಟು ಕೂಡ ನಿರ್ಮಾಣವಾಯಿತು.
ಸಾವಿರಾರು ಜನರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ನಮ್ಮ ಗೌಡರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಣೆಕಟ್ಟಿನ ಮೊದಲ ಬಾಗಿನ ಪೂಜೆಯನ್ನು ನಮ್ಮ ಗೌಡರ ಕೈಯಿಂದ ನೆರವೇರಿದೆ ಇದೆಲ್ಲವೂ ಡಾ.ಸುಧಾಕರ್ ಅವರು ರಾಜಕೀಯಕ್ಕೆ ಬರುವ ಮುಂಚೆಯೇ ಆಗಿರುವ ಘಟನೆ.
ಚಿಕ್ಕಬಳ್ಳಾಪುರದಲ್ಲಿ ಹುಟ್ಟಿದ ನಮ್ಮ ಸಚಿವರಿಗೆ ಯಾರಿಗೋಸ್ಕರ ಯಾರು ಏನು ಮಾಡಿದರು ಎಷ್ಟು ಸಹಾಯ ಮಾಡಿದರು ಎಂದು ಪ್ರಜ್ಞೆಯಿಲ್ಲ. ತಮ್ಮಊರಲ್ಲಿ ಅಣೆಕಟ್ಟೆ ಗಾಗಿ ಹೋರಾಡಿದ ವ್ಯಕ್ತಿಯ ಹೆಸರು ಕೂಡ ಗೊತ್ತಿಲ್ಲ ಎಂದರೆ ಇವರೆಂತಹ ಸಚಿವರು ತಮ್ಮ ಊರಿನ ಬಗ್ಗೆ ಗೊತ್ತಿಲ್ಲ ಇನ್ನೂ ರಾಜ್ಯಕ್ಕೆ ಏನು ಮಾಡುವರು ಎನ್ನುವುದು ಯಕ್ಷಪ್ರಶ್ನೆಯಾಗಿದೆ. ನಮ್ಮ ಸಚಿವರು ಈ ಹೇಳಿಕೆಗೆ ಕನ್ನಡಿಗರ ಮುಂದೆ ಮುಖ್ಯವಾಗಿ ಕರವೇ ಕಾರ್ಯಕರ್ತರ ಮುಂದೆ ಕ್ಷಮೆಯನ್ನು ಯಾಚಿಸಲೇಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಡಿಎಸ್ಟಿ/ಪಿಹೆಚ್ಡಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಈ ಯೋಜನೆಯಡಿ ಶಿಷ್ಯವೇತನ ಪಡೆಯಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಸಂಸ್ಥೆ /ಕಾಲೇಜುಗಳಲ್ಲಿ ಈಗಾಗಲೇ ಪಿಹೆಚ್ಡಿ ಪದವಿಗೆ ನೋಂದಾಯಿತರಾಗಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಡಿ.ಎಸ್.ಟಿ) 2018-19ನೇ ಸಾಲಿನಿಂದ ಕರ್ನಾಟಕ ಡಿ.ಎಸ್.ಟಿ-ಪಿಹೆಚ್ಡಿ ಶಿಷ್ಯವೇತನ ಎಂಬ ಕಾರ್ಯಕ್ರಮವನ್ನು ಇಲಾಖೆಯ ಸ್ವಯತ್ತ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಮುಖಾಂತರ ಅನುಷ್ಠಾನಗೊಳಿಸಿದ್ದು, ಅರ್ಜಿಯನ್ನು ಆನ್ಲೈನ್ http://ksteps.karnataka.gov.in ಮುಖಾಂತರ ಫೆಬ್ರವರಿ 10, 2021 ರೊಳಗಾಗಿ ಸಲ್ಲಿಸಬೆಕೆಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ಪ.ಜಾತಿ/ಪ.ಪಂಗಡಕ್ಕೆ ಸಹಾಯಧನ ಮತ್ತು ಕ್ರೀಡಾಗಂಟಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಜನ ಸಂಘ ಸಂಸ್ಥೆಗಳಿಗೆ ನೋಂದಾವಣೆ ಮಾಡಲು ಸಹಾಯಧನ ಮತ್ತು ಕ್ರೀಡಾಗಂಟನ್ನು ನೀಡುವ ಹೊಸ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ತಾಲ್ಲೂಕಿನಲ್ಲಿ 02 ಪರಿಶಿಷ್ಟ ಜಾತಿ ಮತ್ತು 01 ಪರಿಶಿಷ್ಟ ಪಂಗಡದ ಯುವಜನ ಸಂಘವನ್ನು ನೋಂದಾಯಿಸಲು ಸಹಾಯಧನ ಹಾಗೂ ಕ್ರೀಡಾಗಂಟನ್ನು ನೀಡಲಾಗುವುದು. ಜಿಲ್ಲೆಯ 15 ರಿಂದ 35 ವರ್ಷ ವಯೋಮಾನದೊಳಗಿನ ಪ.ಜಾತಿ/ಪ.ಪಂಗಡಕ್ಕೆ ಸೇರಿರುವ ಯುವಕ/ಯುವತಿಯರು ಯುವಜನ ಸಂಘವನ್ನು ರಚಿಸಿಕೊಳ್ಳಲು ಸದವಕಾಶವಿರುವದರಿಂದ ಕರ್ನಾಟಕ ರಾಜ್ಯ ಸಂಘ ಸಂಸ್ಥೆಗಳ ನೋಂದಾವಣೆ ಕಾಯಿದೆ 1960 ರ ಅಡಿಯಲ್ಲಿ ಯುವಜನ ಸಂಘಗಳ ನೋಂದಣಿ ಮಾಡಿಸಿ, ಜ.28 ರೊಳಗಾಗಿ ಮಾನ್ಯತೆಗಾಗಿ ಈ ಕಚೇರಿಗೆ ಸಲ್ಲಿಸಲು ಕೋರಿದೆ. ನಂತರ ಬಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ಕಚೇರಿ ವೇಳೆಯಲ್ಲಿ ಮೊ.ಸಂ: 9620796970 ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು, ಸಂಜೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ್ರು ನಾಗೇಶ್..!
-
ದಿನದ ಸುದ್ದಿ6 days ago
ಕೋವಿದ್ ಪ್ರಭಾವಳಿಯಲ್ಲಿ ಪ್ರಭುತ್ವದ ಕ್ರೌರ್ಯ
-
ಲೈಫ್ ಸ್ಟೈಲ್6 days ago
ಪಕ್ಷಿ ಪರಿಚಯ | ಬೆಳ್ಗಣ್ಣ
-
ದಿನದ ಸುದ್ದಿ7 days ago
“ನೀನು ಅಪ್ಪನಿಗೆ ಹುಟ್ಟಿದಿಯಾ ಅನ್ನೋದಕ್ಕೆ ಸಾಕ್ಷಿ ಏನು..?” : ಸಚಿವ ಈಶ್ವರಪ್ಪ
-
ದಿನದ ಸುದ್ದಿ7 days ago
ಸಚಿವ ಸಂಪುಟ ವಿಸ್ತರಣೆ : ಏಳು ಹೊಸ ಸಚಿವರ ಹೆಸರು ಫೈನಲ್ ಗೊಳಿಸಿದ ಯಡಿಯೂರಪ್ಪ
-
ಲೈಫ್ ಸ್ಟೈಲ್6 days ago
ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ ; ಮಿಸ್ ಮಾಡ್ದೆ ಓದಿ..!
-
ದಿನದ ಸುದ್ದಿ6 days ago
ದಲಿತರಿಗೆ ಪರ್ಯಾಯ ಸಂಸ್ಕೃತಿ ಇಲ್ಲವೆ..?
-
ದಿನದ ಸುದ್ದಿ3 days ago
ಕಿಸಾನ್ ಸಮ್ಮಾನ್ನಡಿ 9 ಕೋಟಿ ರೈತರಿಗೆ 1.34 ಲಕ್ಷ ಕೋಟಿ ರೂ. ಸಹಾಯಧನ : ಅಮಿತ್ ಶಾ