Connect with us

ದಿನದ ಸುದ್ದಿ

ನೀರವ್ ಮೋದಿಗೆ ಬ್ರಿಟನ್‌ನಲ್ಲಿ ರಾಜಕೀಯ ಆಶ್ರಯ?

Published

on

ಸುದ್ದಿ ದಿನ ಡೆಸ್ಕ್: ನ್ಯಾಶನಲ್ ಬ್ಯಾಂಕ್‌ಗೆ ಹನ್ನೊಂದು ಸಾವಿರ ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಫಲಾಯನ ಮಾಡಿರುವ  ಗುಜರಾತ್ ಮೂಲದ ವಜ್ರದ ವ್ಯಾಪಾರಿ ನೀರ್ ಮೋದಿ ಅವರು ಬ್ರಿಟನ್‌ನಲ್ಲಿ ರಾಜಕೀಯ ಆಶ್ರಯ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಫಿನಾನ್ಷಿಯಲ್ ಟೈಮ್ಸ್ ಮಾಡಿರುವ ವರದಿಗಳ ಪ್ರಕಾರನ ನೀರವ್ ಅವರು ರಾಜಕೀಯ ಆಶ್ರಯ ಬಯಸಿ ಬ್ರಿಟನ್ ಸರಕಾರಕ್ಕೆ ಪತ್ರ ಬರೆದಿದ್ದು, ಒಂದು ವೇಳೆ ಅವರಿಗೆ ಅವಕಾಶ ಸಿಕ್ಕಲ್ಲಿ ನೀರವ್ ಅವರನ್ನು ರೆಡ್ ಕಾರ್ನರ್ ನೋಟಿಸ್ ಮೇರೆಗೆ ಭಾರತಕ್ಕೆ ಕರೆ ತರುವುದು ಕಷ್ಟವಾಗಬಹುದು.
ನೀರವ್ ಅವರ ಪತ್ರಕ್ಕೆ ಬ್ರಿಟನ್ ಸರಕಾರ ಸಮ್ಮತಿ ಕೊಡುವುದಕ್ಕೂ ಮುನ್ನವೇ ವಿದೇಶಾಂಗ ಕಾರ‌್ಯಾಲಯವು ಬ್ರಿಟನ್ ರಾಯಭಾರಿಯನ್ನು ಸಂಪರ್ಕಿಸಿದ್ದು, ಭಾರತದಲ್ಲಿ ನೀರವ್ ನಡೆಸಿರುವ ವಂಚನೆ ಪ್ರಕರಣಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಬ್ರಿಟನ್ ಸರಕಾರದ ಆಶ್ರಯ ಪಡೆದಿರುವ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಒಪ್ಪಿಸುವಂತೆ ಭಾರತ ಸರಕಾರ ಮೇಲಿಂದ ಮೇಲೆ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಅದು ಸಾಧ್ಯವಾಗಿಲ್ಲ. ಈ ಮಧ್ಯೆ ನೀರವ್ ಮೋದಿ ಅವರೂ ಕೂಡ ಮಲ್ಯ ಅವರ ದಾರಿ ಹಿಡಿದಿದ್ದಾರೆ.
ನಕಲಿ ದಾಖಲೆಗಳನ್ನು ನೀಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನೀರವ್ ಮೋದಿ ಅವರು ಹನ್ನೊಂದು ಸಾವಿರ ಕೋಟಿ ರೂಪಾಯಿ ಸಾಲ ಪಡೆದಿದ್ದರು. ಅವರ ಸಮಬಂಧ ಮೆಹುಲ್ ಚೊಕ್ಸಿ ಅವರೂ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರೂ ಕೂಡ ಫಲಾಯನವಾಗಿದ್ದಾರೆ. ಇವರಿಬ್ಬರೂ ಸೇರಿ ಎಸಗಿರುವ ಈ ವಂಚನೆ ಪ್ರಕರಣದ ಒಟ್ಟು ಮೌಲ್ಯ ಎರಡು ಶತಕೋಟಿ ಡಾಲರ್‌ಗಳು ಎಂದು ಅಂದಾಜಿಸಲಾಗಿದೆ.
Advertisement
Click to comment

Leave a Reply

Your email address will not be published. Required fields are marked *

ದಿನದ ಸುದ್ದಿ

ಕೊರೋನಾ ಎಫೆಕ್ಟ್ | ಯುವಕನಿಗೆ ಬ್ಲಾಕ್ ಫಂಗಸ್ ; ಚಿಕಿತ್ಸೆಗೆ ಸರ್ಕಾರದ ಸಹಾಯ ಬೇಡಿದ ಕುಟುಂಬಸ್ಥರು

Published

on

ಸುದ್ದಿದಿನ,ಬೆಳಗಾವಿ: ಕೊರೋನಾ ರೋಗದ ಪರಿಣಾಮ ಬೆಳಗಾವಿಯಲ್ಲಿ ಬ್ಲ್ಯಾಕ್ ಫಂಗಸ್ ಭೀತಿ ಎದುರಾಗಿದ್ದು, ಬ್ಲ್ಯಾಕ್ ಫಂಗಸ್‌ನಿಂದ 30 ವರ್ಷದ ಯುವಕನೊಬ್ಬ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ಆನಂದ ಕುಲಾಲಿ ಎಂಬ ಯುವಕ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.ಯುವಕ ಆನಂದ ಕುಲಾಲಿ
ಅಥಣಿ ತಾಲೂಕು ಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಮೇ 5ರಂದು ಕೊರೋನ ಟೆಸ್ಟ್ ಮಾಡಿಸಿದ್ದು, ಮೇ 7ರಂದು ಕೊರೊನಾ ಪಾಸಿಟಿವ್ ಎಂದು ರಿಪೋರ್ಟ್ ಬಂದಿತ್ತು.

ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿಯೇ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಆನಂದ ಕುಲಾಲಿಯನ್ನು ಹುಕ್ಕೇರಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಂತರ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ವೈದ್ಯರು ಅಡ್ಮಿಟ್ ಆಗುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮೇ 10ರಂದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಯುವಕ ಆನಂದ ಕುಲಾಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ.

ಇದನ್ನೂ ಓದಿ | ದಾವಣಗೆರೆ | ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ; ಇಂದಿನ ಬೆಲೆ ಎಷ್ಟು ಗೊತ್ತಾ..?

ಬಳಿಕ ಯುವಕ ಆನಂದ ಕುಲಾಲಿಯ ಮುಖವು ಬಾವು ಬರುತ್ತಿದ್ದು ಇಎನ್‌ಟಿ ಸ್ಪೆಷಲಿಸ್ಟ್ ಬಳಿ ತೆರಳಿ ಚೆಕಪ್ ಮಾಡಿಸಿ ಸಲಹೆಯನ್ನು ನೀಡಲಾಗಿತ್ತು. ಬಳಿಕ ಮಹಾರಾಷ್ಟ್ರದ ಮೀರಜ್ ಖಾಸಗಿ ಆಸ್ಪತ್ರೆಗೆ ಯುವಕ ಆನಂದ ಕುಲಾಲಿ
ಅಡ್ಮಿಟ್ ಆದನು. ಆಗ ಖಾಸಗಿ ಆಸ್ಪತ್ರೆಯ ವೈದ್ಯರು ಯುವಕನಿಗೆ ಬ್ಲ್ಯಾಕ್ ಫಂಗಸ್ ಆಗಿದೆ ಎಂದು ತಿಳಿಸಿದ್ದಾರೆ.

ಬ್ಲಾಕ್ ಫಂಗಸ್

ಯುವಕ ಆನಂದ ಕುಲಾಲಿ ಕೊರೋನಾದಿಂದ ಗುಣಮುಖ ಆದ ಬಳಿಕ ಸರ್ಜರಿ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಯುವಕನ ಕುಟುಂಬಸ್ಥರು ರಾಜ್ಯ ಸರ್ಕಾರವು ತಮ್ಮ ನೆರವಿಗೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ; ಇಂದಿನ ಬೆಲೆ ಎಷ್ಟು ಗೊತ್ತಾ..?

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ದಾವಣಗೆರೆ : ದಾವಣಗೆರೆಯಲ್ಲಿ ಪೆಟ್ರೋಲ್ ಬೆಲೆ ರೂ. ಪ್ರತಿ ಲೀಟರ್‌ಗೆ 97.35 ರೂ. ಆಗಿದೆ. ಭಾನುವಾರ ಮೇ 16 ರಂದು ಮತ್ತು 25 ಪೈಸೆಯನ್ನು ಹೆಚ್ಚಿಸಲಾಗಿದೆ. ಪೆಟ್ರೋಲ್ ಬೆಲೆ ಕರ್ನಾಟಕ ರಾಜ್ಯ ತೆರಿಗೆಯನ್ನು ಒಳಗೊಂಡಿದೆ.

ಡೀಸೆಲ್‌ ಬೆಲೆ

ದಾವಣಗೆರೆ (ಕರ್ನಾಟಕ) ದಲ್ಲಿ ಇಂದು ಡೀಸೆಲ್ ಬೆಲೆ ರೂ. ಲೀಟರ್‌ಗೆ 89.99 ರೂ. ಆಗಿದೆ. ಶನಿವಾರ ಮೇ 15 ರಂದು 63 ಪೈಸೆ ಹೆಚ್ಚಾಗಿದೆ. ಕಳೆದ 10 ದಿನಗಳಲ್ಲಿ ದಾವಷಗೆರೆಯಲ್ಲಿ ಡೀಸೆಲ್ ಬೆಲೆ 88.06 ರಿಂದ 89.99 ರೂಗಳ ನಡುವೆ ಏರಿಳಿತವಾಗಿದೆ. ನೀವು ಇಂದು ಕರ್ನಾಟಕದ ಇತರ ನಗರಗಳಲ್ಲಿ ಡೀಸೆಲ್ ದರ ಮತ್ತು ಹಿಂದಿನ ದಿನಕ್ಕೆ ಹೋಲಿಸಿದರೆ ಬೆಲೆಗಳಲ್ಲಿನ ಬದಲಾವಣೆಯನ್ನು ಸಹ ಪರಿಶೀಲಿಸಬಹುದು. ಡೀಸೆಲ್ ಬೆಲೆ ಕರ್ನಾಟಕ ರಾಜ್ಯ ತೆರಿಗೆಯನ್ನು ಒಳಗೊಂಡಿದೆ.

ಇದನ್ನೂ ಓದಿ |ಕೊರೋನಾ | ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ನಾಳೆ ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯರವರು ಮೇ 16 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ಅಂದು ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವೀಕ್ಷಣೆ ಮಾಡಲಿದ್ದಾರೆ.

ಇದನ್ನೂ ಓದಿ | ಭದ್ರಾ ನಾಲೆಗಳ ಮೂಲಕ ಹರಿಸುತ್ತಿರುವ ನೀರು, ಮೇ.20 ರವರೆಗೆ ಮುಂದೂಡಿಕೆ 

ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನಯಡಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ವೀಕ್ಷಣೆ ಕೋವಿಡ್-19 ಹರಡುವಿಕೆ ತಡೆಗಟ್ಟುವ ಕುರಿತು ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ/ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವರು, ನಂತರ ಹೊನ್ನಾಳಿಗೆ ಪ್ರಯಾಣ ಬೆಳೆಸುವರೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ ವಿಶೇಷ ಕರ್ತವ್ಯಾಧಿಕಾರಿ ಕೆ.ರುದ್ರೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ನೆಲದನಿ7 hours ago

ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ಮೈಸೂರು ಕಾಗದ ಕಾರ್ಖಾನೆ ನಿಯಮಿತ (ಎಂ.ಪಿ.ಎಂ)

ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್ ರವರು ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್ (ಎಮ್ ಪಿ ಎಮ್) ನ್ನು 1936 ರಲ್ಲಿ ಸ್ಥಾಪಿಸಿದರು. ಇದನ್ನು...

ದಿನದ ಸುದ್ದಿ7 hours ago

ಕೊರೋನಾ ಎಫೆಕ್ಟ್ | ಯುವಕನಿಗೆ ಬ್ಲಾಕ್ ಫಂಗಸ್ ; ಚಿಕಿತ್ಸೆಗೆ ಸರ್ಕಾರದ ಸಹಾಯ ಬೇಡಿದ ಕುಟುಂಬಸ್ಥರು

ಸುದ್ದಿದಿನ,ಬೆಳಗಾವಿ: ಕೊರೋನಾ ರೋಗದ ಪರಿಣಾಮ ಬೆಳಗಾವಿಯಲ್ಲಿ ಬ್ಲ್ಯಾಕ್ ಫಂಗಸ್ ಭೀತಿ ಎದುರಾಗಿದ್ದು, ಬ್ಲ್ಯಾಕ್ ಫಂಗಸ್‌ನಿಂದ 30 ವರ್ಷದ ಯುವಕನೊಬ್ಬ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಬೆಳಗಾವಿ ಜಿಲ್ಲೆ...

ದಿನದ ಸುದ್ದಿ8 hours ago

ದಾವಣಗೆರೆ | ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ; ಇಂದಿನ ಬೆಲೆ ಎಷ್ಟು ಗೊತ್ತಾ..?

ಸುದ್ದಿದಿನ, ದಾವಣಗೆರೆ : ದಾವಣಗೆರೆಯಲ್ಲಿ ಪೆಟ್ರೋಲ್ ಬೆಲೆ ರೂ. ಪ್ರತಿ ಲೀಟರ್‌ಗೆ 97.35 ರೂ. ಆಗಿದೆ. ಭಾನುವಾರ ಮೇ 16 ರಂದು ಮತ್ತು 25 ಪೈಸೆಯನ್ನು ಹೆಚ್ಚಿಸಲಾಗಿದೆ....

ಲೈಫ್ ಸ್ಟೈಲ್9 hours ago

ಕೊರೋನಾ | ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

ಶ್ರೀಮತಿ ಅರ್ಪಿತಾ ಚಕ್ರವರ್ತಿ, ನ್ಯೂಟ್ರಿಷನಿಸ್ಟ್- ಅಪೊಲೊ ಕ್ಲಿನಿಕ್ ಎಚ್‌ಎಸ್‌ಆರ್, ಬೆಂಗಳೂರು COVID -19 ಅಥವಾ ಕರೋನಾ ವೈರಸ್ ಸೋಂಕನ್ನು ಜಾಗತಿಕ ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ...

ನಿತ್ಯ ಭವಿಷ್ಯ13 hours ago

ಈ ರಾಶಿಯವರಿಗೆ ಆಕಸ್ಮಿಕ ಹಣ ಲಾಭ ಗಳಿಸುವ ಸಾಧ್ಯತೆ ಇದೆ! ಉದ್ಯೋಗದಲ್ಲಿ ಅಡಚಣೆ ಸಂಭವ! ಭಾನುವಾರರಾಶಿ ಭವಿಷ್ಯ -ಮೇ-16,2021

ಸೂರ್ಯೋದಯ: 05:52 AM, ಸೂರ್ಯಸ್ತ: 06:36 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ವೈಶಾಖ ಮಾಸ, ವಸಂತ ಋತು, ಉತ್ತರಾಯಣ,...

ದಿನದ ಸುದ್ದಿ23 hours ago

ದಾವಣಗೆರೆ | ನಾಳೆ ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

ಸುದ್ದಿದಿನ,ದಾವಣಗೆರೆ : ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯರವರು ಮೇ 16 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಹೊನ್ನಾಳಿ...

ದಿನದ ಸುದ್ದಿ23 hours ago

ಭದ್ರಾ ನಾಲೆಗಳ ಮೂಲಕ ಹರಿಸುತ್ತಿರುವ ನೀರು, ಮೇ.20 ರವರೆಗೆ ಮುಂದೂಡಿಕೆ

ಸುದ್ದಿದಿನ,ದಾವಣಗೆರೆ : ಭದ್ರಾ ಜಲಾಶಯದಿಂದ ನೀರು ಸ್ಥಗಿತಗೊಳಿಸುವ ನಿರ್ಧಾರವನ್ನು ಕಾಡಾ ಮುಂದೂಡಿ, ಮೇ.20 ರವರೆಗೆ ನೀರು ಹರಿಸಲು ನಿರ್ಧರಿಸಿದೆ ಎಂದು ಭದ್ರಾ ಕಾಡಾ ಸಮಿತಿ ಅಧ್ಯಕ್ಷರಾದ ಪವಿತ್ರರಾಮಯ್ಯ...

ದಿನದ ಸುದ್ದಿ24 hours ago

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ: ಮೆಟ್ರಿಕ್ ನಂತರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಂದ, 2020-21ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ...

ದಿನದ ಸುದ್ದಿ24 hours ago

ಪಾಲಿಕೆ ವತಿಯಿಂದ 60 ಆಕ್ಸಿಜನ್ ಕಾನ್ಸಂಟ್ರೇಟರ್ ಸಿಗಲಿವೆ, ಆಕ್ಸಿಜನ್ ಪರ್ಯಾಯ ವ್ಯವಸ್ಥೆಗೆ ಕೊಡುಗೈ ದಾನಿಗಳು ಮುಂದಾಗಿ : ಡಿಸಿ ಮಹಾಂತೇಶ್ ಬೀಳಗಿ ಮನವಿ

ಸುದ್ದಿದಿನ,ದಾವಣಗೆರೆ : ಕೋವಿಡ್ 2ನೇ ಅಲೆಯಲ್ಲಿ ಸೋಂಕಿತರಿಗೆ ಅತ್ಯವಶ್ಯವಾಗಿರುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್‍ಗೆ ಪರ್ಯಾಯವಾಗಿ ಆಕ್ಸಿಜನ್ ಒದಗಿಸುವಂತಹ ಮೆಡಿಕಲ್ ಆಕ್ಸಿಜನ್ ಜನರೇಟರ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ದಾನವಾಗಿ...

ದಿನದ ಸುದ್ದಿ24 hours ago

ದಾವಣಗೆರೆ | ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಇಲ್ಲ : ಜಿಲ್ಲಾಧಿಕಾರಿ

ಸುದ್ದಿದಿನ, ದಾವಣಗೆರೆ : ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಈಗಿರುವ ಮಾರ್ಗಸೂಚಿಗಳನ್ನೇ ಅತ್ಯಂತ ಕಠಿಣವಾಗಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ...

Trending