Connect with us

ದಿನದ ಸುದ್ದಿ

ಭದ್ರಾ ನಾಲೆಯಲ್ಲಿ ತೇಲುತ್ತಿರುವ ನವಜಾಜ ಶಿಶು ಶವ ಪತ್ತೆ

Published

on

ಸುದ್ದಿದಿನ ಡೆಸ್ಕ್ | ದಾವಣಗೆರೆಯ ಭದ್ರಾ ನಾಲೆ ನಲ್ಲಿ ನವಜಾತ ಶಿಶು ಶವ ಪತ್ತೆಯಾಗಿದೆ. ಹಳೇ ಕುಂದುವಾಡದ ಬಳಿ ಇರುವ ಭದ್ರಾ ನಾಲೆಯಲ್ಲಿಮೃತ ಮಗುವಿನ ಪೋಷಕರೋ ಅಥವಾ ಯಾವುದೋ ಆಸ್ಪತ್ರೆಯಿಂದ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಎರಡು ದಿನದಿಂದ ನಾಲೆಯಲ್ಲಿ ತೇಲುತ್ತಿರುವ ಮೃತಶಿಶು.ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

“ರೈತರ ಹಿತ ಕಾಯಲು ಸರ್ಕಾರ ಮಧ್ಯ ಪ್ರವೇಶಿಸುವ ಅತ್ಯಗತ್ಯ” ಕಾರ್ಯಗಾರ

Published

on

ಸುದ್ದಿದಿನ,ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಸರ್ಕಾರದ ಸಮರ್ಥ ಮಧ್ಯ ಪ್ರವೇಶವೂ ಅಗತ್ಯ. ಇದನ್ನು ರಾಜ್ಯದ ವಿವಿಧ ಭಾಗಗಳ ರೈತರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಇಂದು ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಒಂದು ದಿನದ ತಾಂತ್ರಿಕ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

ಪೃತ್ವಿ ಪ್ರತಿಷ್ಠಾನ, ಮಳೆ ಆಶ್ರಿತ ಕೃಷಿ ಪುನರುಜ್ಜೀವನ ಜಾಲ ಹಾಗೂ ಪರ್ಯಾಯ ಕಾನೂನು ವೇದಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ “ರೈತರ ಹಿತ ರಕ್ಷಣೆಗೆ ಸರ್ಕಾರದ ಮಧ್ಯ ಪ್ರವೇಶ ಅತ್ಯಗತ್ಯ” ಕಾರ್ಯಗಾರದಲ್ಲಿ ಕೃಷಿ ಆರ್ಥಿಕ ತಜ್ಞರಾದ ಡಾ. ಪ್ರಕಾಶ್ ಕಮ್ಮರಡಿ, ಕಾನೂನು ತಜ್ಞ ವಿನಯ್ ಶ್ರೀನಿವಾಸ್, ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ಗ್ರೇಸಿ ಸಿ.ಪಿ ಹಾಗೂ ರೈತ ಮುಖಂಡರಾದ ಕುರಬೂರು ಶಾಂತಕುಮಾರ್ ಮುಂತಾದವರು ಕಳೆದ ದಶಕಗಳಲ್ಲಿ ಕೃಷಿ ಕ್ಷೇತ್ರದಲ್ಲಾದ ಏರಿಳಿತಗಳು ಹಾಗೂ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಿದರು.

ಇದನ್ನೂ ಓದಿ | ಫೆ.28ಕ್ಕೆ ಎಫ್ ಡಿ ಎ ಪರೀಕ್ಷೆ | ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿ

ಮೊದಲಿಗೆ ಕಾರ್ಯಗಾರದ ಪ್ರಸ್ತಾವನೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಟಿ. ಎನ್ ಪ್ರಕಾಶ್ ಕಮ್ಮರಡಿ. ಬೆಳೆಗೆ ಬೆಂಬಲ ಬೆಲೆಯನ್ನು ಕಾನೂನಿನ ಮೂಲಕ ಖಾತ್ರಿಗೊಳಿಸಬೇಕು. ಅವತ್ತಿನ ಕಾಲಕ್ಕೆ ಬೆಳೆ ಬೆಳಡಯುವುದು ಮಾತ್ರ ರೈತನ ಕೆಲಸವಾಗಿತ್ತು. ಮಾರುಕಟ್ಟೆಯ ಜವಾಬ್ದಾರಿಯನ್ನು ಸರ್ಕಾರ ನೋಡಿಕೊಳ್ಳುತ್ತಿತ್ತು. ಆಗ ಕಾಫಿ ಬೋರ್ಡ್, ಟೀ ಬೋರ್ಡ್ ಗಳು ಸಮೃದ್ಧವಾಗಿ, ಸಮರ್ಥವಾಗಿದ್ದವು. ಆದರೆ ಈಗ ಕೃಷಿಯಲ್ಲಿ ಸರ್ಕಾರದ ಮಧ್ಯ ಪ್ರವೇಶವಿಲ್ಲದೆ ಈ ಎಲ್ಲ ನಿಗಮಗಳು ದುರ್ಬಲವಾಗಿವೆ. ರೈತರ ವಿಚಾರದಲ್ಲಿ ತನ್ನ ಜವಾಬ್ದಾರಿಗಳಿಂದ ಜಾರಿಕೊಳ್ಳುವ ಸಲುವಾಗಿ ಸರ್ಕಾರ ಈ ಕಾಯ್ದೆಗಳನ್ನು ತರಲು ಹೊರಟಿದೆ ಎಂದರು.

ಇನ್ನು ತೋಟಗಾರಿಕಾ ಬೆಳೆಗಳು ಸೇರಿದಂತೆ ಇತರ ಪ್ರಮುಖ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂಬುದರ ಬಗ್ಗೆ ಮಾತನಾಡಿದ ತಜ್ಞರು. ಕನಿಷ್ಟ ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ನೀಡಿ ಲಾಭದಾಯಕ ಧಾರಣೆ ಖಾತರಿಗೊಳಿಸುವುದು ಕೂಡ ಅಗತ್ಯ ಎಂದು ಅಭಿಪ್ರಾಯ ಪಟ್ಟರು.

ಬೆಂಬಲ ಬೆಲೆಯನ್ನು ಕಾನೂನಿನ ವ್ಯಾಪ್ತಿಗೆ ತರುವಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯತೆ ಏರ್ಪಡಬೇಕು ಎಂಬ ಬಗ್ಗೆಯೂ ಚರ್ಚಿಸಲಾಯಿತು.

Courtesy : Mass Media Foundation, New Delhi

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಫೆ.28ಕ್ಕೆ ಎಫ್ ಡಿ ಎ ಪರೀಕ್ಷೆ | ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿ

Published

on

ಸುದ್ದಿದಿನ,ಶಿವಮೊಗ್ಗ : ಕರ್ನಾಟಕ ಲೋಕಸೇವಾ ಆಯೋಗವು 2019ನೇ ಸಲಿನ ಸಹಾಯಕರು, ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಫೆಬ್ರವರಿ 28ರಂದು ಜಿಲ್ಲೆ 27ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿದೆ.

ಸದರಿ ಪರೀಕ್ಷೆಗಳನ್ನು ಪಾರದರ್ಶಕವಾಗಿ, ಯಾವುದೇ ಅವ್ಯವಹಾರಗಳಿಗೆ, ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ, ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಫೆಬ್ರವರಿ 28ರಂದು ಬೆಳಿಗ್ಗೆ 7.30ರಿಂದ ಸಂಜೆ 5.30ರವರೆಗೆ ಭಾರತೀಯ ದಂಡಸಂಹಿತೆ 144ರನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲಿನ 200ಮೀ. ಪ್ರದೇಶದ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ನಿಷೇಧಿತ ಪ್ರದೇಶದಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿ ಐದು ಮತ್ತು ಐದಕ್ಕಿಂತ ಹೆಚ್ಚಿನ ಜನ ಸೇರುವುದನ್ನು ನಿಷೇಧಿಸಲಾಗಿದೆ.

ಕೇಂದ್ರಗಳ ಸುತ್ತಮುತ್ತಲ ಟೈಪಿಂಗ್, ಝೆರಾಕ್ಸ್ ಹಾಗೂ ಫ್ಯಾಕ್ಸ್ ಅಂಗಡಿಗಳು ತೆರೆದಿರುವುದನ್ನು ಪ್ರತಿಬಂಧಿಸಲಾಗಿದೆ. ಅಲ್ಲದೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಸ್ಸಾಂ | ಅಥ್ಲೀಟ್ ಹಿಮಾ ದಾಸ್ ಡಿಎಸ್ಪಿಯಾಗಿ ನೇಮಕ ; ನನ್ನ ಮತ್ತು ತಾಯಿಯ ಕನಸು ನನಸಾದ ದಿನವಿದು : ಹಿಮಾ ಭಾವುಕ ನುಡಿ

Published

on

ಸುದ್ದಿದಿನ, ಗುವಾಹಟಿ: ಸ್ಟಾರ್ ಸ್ಪ್ರಿಂಟರ್ ಹಿಮಾ ದಾಸ್ ಅವರನ್ನು ಶುಕ್ರವಾರ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಸಮ್ಮುಖದಲ್ಲಿ ಅಸ್ಸಾಂ ಪೊಲೀಸ್ ಉಪ ಅಧೀಕ್ಷಕರನ್ನಾಗಿ ನೇಮಕಮಾಡಲಾಯಿತು.

ಗುವಾಹಟಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ನೇಮಕಾತಿ ಪತ್ರವನ್ನು ನೀಡಿದರು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಪೊಲೀಸ್ ಮಹಾನಿರ್ದೇಶಕರು ಭಾಗವಹಿಸಿದ್ದರು.

ಡಿ ಎಸ್ ಪಿ ಆಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಹಿಮಾದಾಸ್ ಅವರು , ತಾನು ಚಿಕ್ಕವಳಿದ್ದಾಗ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದೆ ಈಗ ಆ ಕನಸು ನನಸಾಗಿದೆ. ಈಕ್ಷಣ ನನಗೆ ಬಹಳ ವಿಶೇಷವಾದ ಕ್ಷಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನನ್ನ ಆರಂಭಿಕ ಶಾಲಾ ದಿನಗಳಿಂದ, ನಾನು ಒಂದು ದಿನ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯಿತ್ತು, ನನ್ನ ತಾಯಿಯೂ ಕೂಡ ನಾನು ಪೊಲೀಸ್ ಆಗ ಬೇಕೆಂದು ಕನಸು ಕಂಡಿದ್ದರು ಎಂದರು.

ನನ್ನ ತಾಯಿ “ಅವಳು ದುರ್ಗಾ ಪೂಜೆಯ ಸಮಯದಲ್ಲಿ (ಆಟಿಕೆ) ಗನ್ ಖರೀದಿಸಿ ನನಗೆ ಆಟವಾಡಲು ಕೊಟ್ಟಾಗ ಅದು ನನ್ನಲ್ಲಿ ಪೊಲೀಸ್ ಆಗುವ ಭಾವನೆಗಳನ್ನು ಮೂಡಿಸಿತ್ತು. ನನ್ನ ತಾಯಿ ಅಸ್ಸಾಂ ಪೊಲೀಸ್ ಆಗಿ ಜನರಿಗೆ ಸೇವೆ ಸಲ್ಲಿಸ ಬೇಕು ಒಳ್ಳೆಯ ವ್ಯಕ್ತಿಯಾಗ ಬೇಕು ಎಂದು ಹೇಳುತ್ತಿದ್ದರು” ಎಂದು ದಾಸ್ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.

ಕ್ರೀಡೆ ನನಗೆ ಎಲ್ಲವನ್ನೂ ನೀಡಿದೆ

ಹಿಮಾ ಅವರು ಅಸ್ಸಾಂನ ಒಳಿತಿಗಾಗಿ ನಾನು ಕೆಲಸ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತೇನೆ, ಹಾಗೂ ತಮ್ಮ ಕ್ರೀಡಾ ವೃತ್ತಿಜೀವನವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದರು.

“ನಾನು ಕ್ರೀಡೆಯಿಂದಾಗಿ ಎಲ್ಲವನ್ನೂ ಪಡೆದುಕೊಂಡಿದ್ದೇನೆ, ನಾನು ರಾಜ್ಯದ ಕ್ರೀಡೆಗಳ ಸುಧಾರಣೆಗಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಮತ್ತು ಹರಿಯಾಣದಂತೆಯೇ ಅಸ್ಸಾಂ ಅನ್ನು ದೇಶದ ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಲ್ಲಿ ಒಂದನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ ಎಂದರು.

ಹಿಮಾ ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 hour ago

“ರೈತರ ಹಿತ ಕಾಯಲು ಸರ್ಕಾರ ಮಧ್ಯ ಪ್ರವೇಶಿಸುವ ಅತ್ಯಗತ್ಯ” ಕಾರ್ಯಗಾರ

ಸುದ್ದಿದಿನ,ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಸರ್ಕಾರದ ಸಮರ್ಥ ಮಧ್ಯ ಪ್ರವೇಶವೂ ಅಗತ್ಯ. ಇದನ್ನು ರಾಜ್ಯದ ವಿವಿಧ ಭಾಗಗಳ ರೈತರಿಗೆ ಮನವರಿಕೆ...

ದಿನದ ಸುದ್ದಿ2 hours ago

ಫೆ.28ಕ್ಕೆ ಎಫ್ ಡಿ ಎ ಪರೀಕ್ಷೆ | ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿ

ಸುದ್ದಿದಿನ,ಶಿವಮೊಗ್ಗ : ಕರ್ನಾಟಕ ಲೋಕಸೇವಾ ಆಯೋಗವು 2019ನೇ ಸಲಿನ ಸಹಾಯಕರು, ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಫೆಬ್ರವರಿ 28ರಂದು ಜಿಲ್ಲೆ 27ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ...

ನಿತ್ಯ ಭವಿಷ್ಯ4 hours ago

ಫೆಬ್ರವರಿ-27 | ಈ ರಾಶಿಯವರಿಗೆ ಬಯಸಿದ್ದೆಲ್ಲ ಸಿಗುವುದು! ಶನಿವಾರ- ರಾಶಿ ಭವಿಷ್ಯ

ಸೂರ್ಯೋದಯ: 06:35 AM, ಸೂರ್ಯಸ್ತ: 06:26 PM ಶಾರ್ವರೀ ನಾಮ ಸಂವತ್ಸರ ಮಾಘ ಮಾಸ, ಶಿಶಿರ ಋತು, ಉತ್ತರಾಯಣ, ಶುಕ್ಲ ಪಕ್ಷ, ತಿಥಿ: ಹುಣ್ಣಿಮೆ ( 13:47...

ದಿನದ ಸುದ್ದಿ12 hours ago

ಅಸ್ಸಾಂ | ಅಥ್ಲೀಟ್ ಹಿಮಾ ದಾಸ್ ಡಿಎಸ್ಪಿಯಾಗಿ ನೇಮಕ ; ನನ್ನ ಮತ್ತು ತಾಯಿಯ ಕನಸು ನನಸಾದ ದಿನವಿದು : ಹಿಮಾ ಭಾವುಕ ನುಡಿ

ಸುದ್ದಿದಿನ, ಗುವಾಹಟಿ: ಸ್ಟಾರ್ ಸ್ಪ್ರಿಂಟರ್ ಹಿಮಾ ದಾಸ್ ಅವರನ್ನು ಶುಕ್ರವಾರ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಸಮ್ಮುಖದಲ್ಲಿ ಅಸ್ಸಾಂ ಪೊಲೀಸ್ ಉಪ ಅಧೀಕ್ಷಕರನ್ನಾಗಿ ನೇಮಕಮಾಡಲಾಯಿತು. ಗುವಾಹಟಿಯಲ್ಲಿ ಆಯೋಜಿಸಲಾಗಿದ್ದ...

ದಿನದ ಸುದ್ದಿ20 hours ago

ಕನಸು ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಡಿಜಿಟಲ್ ಮಾಧ್ಯಮ ಅತ್ಯುತ್ತಮ ವೇದಿಕೆ : ಈಗಲ್ಸ್ ಫೋರ್ಡ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಆರ್ಯನ್ ಕುಂದರ್

ಸುದ್ದಿದಿನ,ದಾವಣಗೆರೆ : ಇದು ಕನಸನ್ನು ಮಾರಾಟ ಮಾಡುವ ಕಾಲ. ನಿಮ್ಮ ಕನಸನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಡಿಜಿಟಲ್ ಮಾಧ್ಯಮ ಅತ್ಯುತ್ತಮ ವೇದಿಕೆಯಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾಧ್ಯಮಕ್ಷೇತ್ರದ...

ದಿನದ ಸುದ್ದಿ21 hours ago

ದಾವಣಗೆರೆ | ವಯೋಶ್ರೇಷ್ಟ ಸಮ್ಮಾನ್-2021 ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ನವದೆಹಲಿ ಇವರು 2021-22ನೇ ಸಾಲಿನಲ್ಲಿ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಂದ/ಸಂಸ್ಥೆಗಳಿಂದ...

ದಿನದ ಸುದ್ದಿ21 hours ago

ಪರವಾನಗಿ ಹೊಂದಿದ ಮಾರಾಟಗಾರರಿಂದ ಮಾತ್ರ ತಂಬಾಕು ಮಾರಾಟವಾಗಬೇಕು : ಎನ್ಎಲ್ಎಸ್ಐಯು ವರದಿ

ಸುದ್ದಿದಿನ,ಬೆಂಗಳೂರು: ತಂಬಾಕು ಉತ್ಪನ್ನಗಳ ಮಾರಾಟ ಮಾಡಲು ಎಲ್ಲ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ಪರವಾನಗಿ ಹೊಂದಿರಬೇಕು. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವ ಎಲ್ಲ ಆವರಣಗಳಲ್ಲಿ...

ದಿನದ ಸುದ್ದಿ22 hours ago

ದಾವಣಗೆರೆ ಜಿ.ಪಂ ಸಾಮಾನ್ಯ ಸಭೆ | ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸುವಂತೆ ಸದಸ್ಯರ ಒತ್ತಾಯ

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳವನ್ನು ಖರೀದಿಸುವಂತೆ ಹಾಗೂ ಪಡಿತರ ವಿತರಣೆಯಲ್ಲಿ(ಪಿಡಿಎಸ್) ಮೆಕ್ಕಜೋಳವನ್ನು ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಜಿಲ್ಲಾ...

ದಿನದ ಸುದ್ದಿ1 day ago

ಕೃಷಿ ಸಿಂಚಾಯಿ ಯೋಜನೆ | ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: 2020-21ನೇ ಸಾಲಿನ ಕೇಂದ್ರ ಪುರಸ್ಕøತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಮಿತ ಬಳಕೆಗಾಗಿ ಹನಿ ನೀರಾವರಿ ಅಳವಡಿಸಲು...

ದಿನದ ಸುದ್ದಿ1 day ago

Breaking | ಕೇರಳ ರೈಲು ಪ್ರಯಾಣಿಕರಿಂದ 100 ಕ್ಕೂ ಹೆಚ್ಚು ಜೆಲೆಟಿನ್ ಸ್ಟಿಕ್‌ಗಳು, 350 ಡಿಟೋನೇಟರ್‌ಗಳನ್ನು ವಶಕ್ಕೆ ಪಡೆದ ಪೊಲೀಸ್

ಸುದ್ದಿದಿನ ಡೆಸ್ಕ್ : ಕೇರಳದ ಕೋಜಿಕ್ಕೋಡ್ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಂದ 100 ಕ್ಕೂ ಹೆಚ್ಚು ಜೆಲೆಟಿನ್ ಸ್ಟಿಕ್‌ಗಳು ಮತ್ತು 350 ಡಿಟೋನೇಟರ್‌ಗಳನ್ನು ಹಾಗೂ ಹೆಚ್ಚಿನ ಸಂಖ್ಯೆಯ...

Trending