Connect with us

ಸಿನಿ ಸುದ್ದಿ

ಅರಮನೆಯಲ್ಲಿ ಫೋಟೊ ಶೂಟ್: ವಿವಾದಕ್ಕೆ ಸಿಲುಕಿದ ನಿಧಿ ಸುಬ್ಬಯ್ಯ

Published

on

ಸುದ್ದಿದಿನ ಡೆಸ್ಕ್: ಮೈಸೂರು ಅರಮನೆಯಲ್ಲಿ ನಟಿ ನಿಧಿ ಸುಬ್ಬಯ್ಯ ತೆಗೆಸಿರಿವ ಫೋಟೊ ವೈರಲ್ ಆಗಿದ್ದು, ವಿವಾದಕ್ಕೀಡಾಗಿದೆ.

ನಿಧಿ ಸುಬ್ಬಯ್ಯ ಅವರು ದರ್ಬಾರ್ ಹಾಲ್ ನಲ್ಲಿ ಫೋಟೊ ತೆಗಿಸಿದ್ದಲ್ಲದೆ ಇನ್ಸ್ ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಅನುಮತಿ ಇಲ್ಲದೆ ಫೋಟೊ ಶೂಟ್ ಮಾಡಿಸಿದ್ದು ಹೇಗೆಂಬುದು ಎಲ್ಲರ ಪ್ರಶ್ನೆ.
ಅಷ್ಟಕ್ಕೂ ಫೋಟೋಶೂಟ್​ಗೆ ಅವಕಾಶ ಕೊಟ್ಟಿದ್ಯಾರು..? ಸಾರ್ವಜನಿಕರಿಗೆ ಇಲ್ಲದ ಅವಕಾಶ ನಿಧಿ ಸುಬ್ಬಯ್ಯಗೆ ಸಿಕ್ಕಿದ್ದು ಹೇಗೆ..? ಒಂದು ವೇಳೆ ವಿಐಪಿ ಹಾಗೂ ಸೆಲೆಬ್ರಿಟಿಗಳಿಗೆ ಮಾತ್ರ ಫೋಟೋಶೂಟ್​ಗೆ ಅವಕಾಶ ಇದೆಯಾ ಎಂಬ ಅನುಮಾಗಳು ಸಾರ್ವಜನಿಕರನ್ನ ಕಾಡತೊಡಗಿದೆ.
ಅರಮನೆ ಆಡಳಿತ ಮಂಡಳಿ ಪದೇ ಪದೇ ಭದ್ರತಾ ವೈಫಲ್ಯದಿಂದ ಒಂದಲ್ಲ ಒಂದು ಯಡವಟ್ಟುಗಳನ್ನ ಮಾಡಿಕೊಳ್ಳುತ್ತಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು ಅರಮನೆಯಲ್ಲಿ ಫೋಟೋಶೂಟ್ ಬಗ್ಗೆ ಆಡಳಿತ ಮಂಡಳಿ ಹಾಗೂ ಆರಕ್ಷಕರ ನಡುವೆ ಗೊಂದಲವಿದೆ ಎಂದು ಹೇಳಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

ಸಿನಿ ಸುದ್ದಿ

ಸ್ವೀಟಿ ಅನುಷ್ಕಾ ಶೆಟ್ಟಿ ಮದುವೆ..!?

Published

on

ಸುದ್ದಿದಿನ ಡೆಸ್ಕ್ : ನಟಿ, ತುಳುನಾಡ ಚೆಲುವೆ ಅನುಷ್ಕಾ ಶೆಟ್ಟಿ ಅವರ ವಿವಾಹವು 2023ರ ಒಳಗೆ ನಡೆಯಲಿದೆ ಎಂದು ಜ್ಯೋತಿಷಿ ಪಂಡಿತ್ ಜಗನ್ನಾಥ ಗುರೂಜಿ ಹೇಳಿದ್ದು, ಶ್ರೀಗಳ ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು, ವೃತ್ತಿಜೀವನದಲ್ಲಿ ಅನುಷ್ಕಾ ಶಿಸ್ತು ಕಾಪಾಡಿಕೊಂಡು ಬಂದಿದ್ದಾರೆ. ಆಕೆಯ ಮುಖಭಾವ ನೋಡಿದರೆ ಸಿನಿಮಾಗಿಂತ ಹೊರಗಿನ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ. ಅವರದ್ದು ಡೌನ್‌ ಟು ಅರ್ತ್‌ ವ್ಯಕ್ತಿತ್ವ. ಆಕೆಗೆ ಸ್ವಲ್ಪವೂ ಅಹಂಕಾರವಿಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹಿರಿಯ ನಟಿ ಜಯಂತಿ ಇನ್ನಿಲ್ಲ

Published

on

ಸುದ್ದಿದಿನ, ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ (76) ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕನ್ನಡ, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ 6 ಭಾಷೆಗಳಲ್ಲಿ ನಟಿಸಿದ್ದಾರೆ. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದರು. ಜಯಂತಿ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ಭೀಮ ಪರಂಬರೈ ಹಾಗೂ ಕಬಿಲನ್ ರಂಜಿತ್..!

Published

on

  • ಬಸವರಾಜು ಕಹಳೆ

Float like a butterfly, sting like a bee”
Muhammad Ali

ಗಾಯಗೊಂಡಿದ್ದು ನಿನ್ನ ಮೈಯಷ್ಟೇ, ನಿನ್ನ ಮನಸ್ಸಲ್ಲ.”

ಇಲ್ಲಿ ನಮ್ಮಂಥವರಿಗೆ ಅವಕಾಶ ಸುಲಭವಾಗಿ ಬರುವುದಿಲ್ಲ. ಈ ಆಟ ನಮ್ಮದು. ಎದುರು ಬರುವವನ ಚಡ್ಡಿ ಒದ್ದೆಯಾಗಬೇಕು. ಮುನ್ನುಗು ಕಬಿಲನ್ ಈ ಕಾಲ ನಮ್ಮದು”
ಇಂಥದ್ದೊಂದು ಡೈಲಾಗ್ ಕಿವಿಗೆ ಬೀಳುತ್ತಿರುವಾಗಲೇ ಸೀನ್ ಮಧ್ಯೆ ಬಾಬಾ ಸಾಹೇಬರ ಭಾವಚಿತ್ರ ಎದ್ದು ಕಾಣುತ್ತದೆ. ಹೀಗೆ ಸಿನಿಮಾದ ಉದ್ಧಕ್ಕೂ ಆಗೊಮ್ಮೆ ಈಗೊಮ್ಮೆ ಬುದ್ಧ, ಭೀಮರು ಎದ್ದು ಕಾಣುತ್ತಾರೆ.

ಕೊಳಗೇರಿಯ ಗುಡಿಸಲುಗಳ ಮಧ್ಯೆ ಬುದ್ಧನ ವಿಗ್ರಹದ ಪಕ್ಕದಲ್ಲೇ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುವ ಸನ್ನಿವೇಶ ವಿಶಿಷ್ಟ ಪ್ರತಿಮೆಯಂತೆ ಕಾಣುತ್ತದೆ. ನವ ವಧು ವರರ ಕೈಗೆ ಉಡುಗೊರೆಯಾಗಿ ಬುದ್ಧ, ಭೀಮರ ಫೋಟೋ ಕೊಡುವ ದೃಶ್ಯ ಎದೆಗೂಡಲ್ಲಿ ಸರಪಟಾಕಿ ಹಚ್ಚುತ್ತದೆ. ದ್ರಾವಿಡ ಸ್ವಾಭಿಮಾನದ ಕಪ್ಪು ಪತಾಕೆಯನ್ನು ಬಿಳಿ ಮುಗಿಲಿನಲ್ಲಿ ಹಾರಿಸಿದ ಪೆರಿಯಾರ್ ಕಂಡಾಗಲೂ ಹುಚ್ಚೆದ್ದು ಕುಣಿಯುವ ಉತ್ಸಾಹ ಮೂಡುತ್ತದೆ

ಅಣ್ಣ ಪಾ.ರಂಜಿತ್ ಸಿನಿಮಾ ಅನ್ನೋ ಬಾಕ್ಸಿಂಗ್ ರಿಂಗ್​ನಲ್ಲಿ ಎದುರಾಳಿಗೆ ತಿಕ ಮಕ ನೋಡದೇ ಯಕ್ಕಾಮಕ್ಕಾ ಗುದ್ದಿ ಕೆಡವಿ ಭೀಮ ಪರಂಪರೆಯ ತಾಕತ್ತು ಎಂಥದ್ದು ಅನ್ನೋದನ್ನ ತೋರಿಸಿದ್ದಾರೆ. ಸರ್ಪಟ್ಟ ಪರಂಬರೈ ಸಿನಿಮಾ ನನ್ನ ಕಣ್ಣಿಗೆ ಒಂದೇ ಗುಕ್ಕಿನಲ್ಲಿ ಕಾಣಿಸಿದ್ದು ಹೀಗೆ. ಇಲ್ಲಿ ನನಗೆ ಕಂಡಿದ್ದು ಸರ್ಪಟ್ಟ ಅನ್ನೋ ನಾಲ್ಕು ಪಟ್ಟದ ಕತ್ತಿಗಳ ಕಥೆಯಲ್ಲ. ವರ್ಣಾಶ್ರಮದ ನಾಲ್ಕು ವರ್ಗಗಳ ಪೈಕಿ ಕೊನೆಯ ಶೂದ್ರ ಪರಂಪರೆ ಗೆದ್ದ, ಗೆಲ್ಲುತ್ತಿರುವ, ಗೆಲ್ಲಬೇಕಿರುವ ಕಥೆಯಂತೆ ಕಾಣುತ್ತದೆ.

ಕಬಿಲನ್ (ಆರ್ಯ) ನನಗೆ ಬರೀ ಪಾತ್ರದಂತೆ ಕಾಣುವುದಿಲ್ಲ. ಜಾತಕ ಕಥೆಗಳು ಹೇಳುವಂತೆ ಬುದ್ಧನ ಮತ್ತೊಂದು ಅವತಾರವೇ ಆದ ಕಪಿಲನೇ ಕಬಿಲನ್ ಅನಿಸುತ್ತದೆ. ಇಬ್ಬರೂ ನಿರೀಶ್ವರವಾದವನ್ನೇ ಸಾರಿದ್ದವರು. ಸಿನಿಮಾದಲ್ಲಿ ಕಬಿಲನ್ ಸಿದ್ಧಾರ್ಥನಂತೆಯೂ ಕಾಣುತ್ತಾನೆ. ಅಣ್ಣ ಪಾ.ರಂಜಿತ್ ಎಲ್ಲಾ ಸಿನಿಮಾಗೂ ಹಾಡುಗಳನ್ನು ಬರೆದುಕೊಟ್ಟ ಕವಿ ಕಬಿಲನ್ ಪ್ರೇರಣೆಯಿಂದ ಹುಟ್ಟಿದ ವ್ಯಕ್ತಿತ್ವದಂತೆ ಕಾಣುತ್ತದೆ. ಆರ್ಯನನ್ನು ಮೊದಲು ನೋಡಿದ್ದು ಆ್ಯಟ್ಲಿಯ ರಾಜರಾಣಿಯಲ್ಲೇ. ಆ ಬಳಿಕ ಮದರಾಸಿಪಟ್ಟಿನಂ ನೋಡಿದ್ದೇವೆ. ಈ ಎರಡೂ ಸಿನಿಮಾಗಳಿಗಿಂತಲೂ ಕಬಿಲನ್ ಆಗಿ ಜೀವ ತುಂಬುವ ಕೆಲಸ ಮಾಡಿದ್ದಾನೆ ಆರ್ಯ.

ಪಶುಪತಿ ರಂಗನ್ ವಾತಿಯರ್, ಬೀಡಿ ತಾತ, ವೆಂಬುಲಿ, ಡ್ಯಾಡಿ, ಡ್ಯಾನ್ಸಿಂಗ್ ರೋಸಿ ಈ ಎಲ್ಲಾ ಪಾತ್ರಗಳಿಗಿಂತಲೂ ಹೆಚ್ಚು ನನ್ನನ್ನು ಆಕರ್ಷಿಸಿದ್ದು ಎರಡೇ ಎರಡು ಪಾತ್ರ. ಆ ಪಾತ್ರಗಳೇ ಮರಿಯಮ್ಮ ಹಾಗೂ ಬಾಕ್ಯಮ್ಮ. ವಿಶೇಷ ಅಂದ್ರೆ 60 ಸೆಕೆಂಡ್ ಕಾಲ ಬಂದು ಹೋಗುವ ನಮ್ಮ ಕನ್ನಡಿಗ ಕಿಶೋರ್​ಗಿಂತಲೂ ಮರಿಯಮ್ಮ ಹಾಗೂ ಭಾಕ್ಯಮ್ಮ ಪಾತ್ರಗಳು ಈ ಸರ್ಪಟ್ಟ ಪರಂಪರೆಯನ್ನು ಎಳೆದೊಯ್ದ ಸ್ವಾಭಿಮಾನದ ಸೀರೆಯುಟ್ಟ ಕುಸ್ತಿ ಪಟು​ಗಳಂತೆ ಕಾಣುತ್ತಾರೆ.

ಒಬ್ಬಳು ಪುಟ್ಟ ಮಗನೊಂದಿಗೆ ಗಂಡನನ್ನು ಉಳಿಸಿಕೊಳ್ಳೋದಕ್ಕೆ ಸಾಹಸಪಡುವ ಹೆಣ್ಣು ಹುಲಿಯಂತೆ ಕಾಣುತ್ತಾಳೆ. ಮತ್ತೊಬ್ಬಳು ಕುಡಿದು ಮಲಗಿದ ಗಂಡನನ್ನು ಕಾಪಾಡೋದಕ್ಕೆ ಹಸುಗೂಸಿನೊಂದಿಗೆ ಬಗೆದು ಹಾಕುವ ಬಾಣಂತಿ ಹುಲಿಯಂತೆ ಗೆಬರುತ್ತಾಳೆ, ಅಬ್ಬರಿಸುತ್ತಾಳೆ. ರಂಜಿತ್ ಅಣ್ಣನ ಸಿನಿಮಾಗಳಲ್ಲಿ ಇಂಥಾ ಪವರ್​​ಫುಲ್ ಪಾತ್ರಗಳು ಪ್ರತೀ ಸಿನಿಮಾದಲ್ಲೂ ನೋಡಬಹುದು. ಕಬಾಲಿಯ ಕುಮುದವಲ್ಲಿ, ಕಾಲಾನ ಸೆಲ್ವಿ, ಜರೀನಾರಿಗಿಂತಲೂ ಪವರ್​ಫುಲ್ ಪಾತ್ರಗಳು ಮರಿಯಮ್ಮ ಹಾಗೂ ಬಾಕ್ಯಮ್ಮ. ಕಮ್ಮನೆಯ ಕಪ್ಪು ಸಂಸ್ಕೃತಿಯ ಸಣ್ಣ ತುಣುಕಿನಂತೆ ದುಷಾರ ವಿಜಯನ್ ಮರಿಯಮ್ಮನಾಗಿ ಕಾಣುತ್ತಾಳೆ.

“ಅವಕಾಶ ನಮಗಾಗಿ ಬರೋದಿಲ್ಲ. ಅವಕಾಶವನ್ನು ನಾವೇ ಹುಡುಕುತ್ತಾ ಹೋಗಬೇಕು. ಅದನ್ನು ಮನಸ್ಸಿನಲ್ಲಿ ಇಟ್ಟುಕೋ ಗೆಲುವು ನಿನ್ನದೇ. ಹೋಗಪ್ಪಾ ಹೋಗು” ಎನ್ನುವಾಗ ಬೀಡಿ ತಾತನ ಎದುರಿಗೆ ನಿಂತ ಕಬಿಲನ್ ಮಧ್ಯೆ ಮಹಾಸಮುದ್ರ ರಣಕೇಕೆ ಹಾಕುತ್ತಿರುತ್ತದೆ. ಕಡುಗತ್ತಲಿನಲ್ಲಿ ಟೈಟಲ್ ಕಾರ್ಡ್​ನಲ್ಲಿ ಓಡುತ್ತಾ ಸಾಗುವ ನೆತ್ತರುಂಡ ಅಕ್ಷರಗಳು. ಅಲ್ಲಲ್ಲಿ ಕತ್ತಲ ಸೀರೆಯುಡಿಸಿ ತೆಗೆದ ಸೀನ್​ಗಳು ಮತ್ತೊಮ್ಮೆ ಸರ್ಪಟ್ಟ ಪರಂಪರೆಯನ್ನು ನೋಡಬೇಕಿನಿಸುತ್ತದೆ.

My films are an extension of my ideology ಎನ್ನುವ ಪಾ. ರಂಜಿತ್ ಆಡಿದ ಮಾತಿನ ಪ್ರತೀ ಅಕ್ಷರ ಒಂದೊಂದು ಸೀನ್​​ನಲ್ಲಿ ಕಾಣುತ್ತದೆ. ಇಲ್ಲಿ ಐಡಿಯಾಲಜಿ ಅನ್ನೋ ದೊಡ್ಡ ಶಬ್ಧ ಅರ್ಥವಾಗದ ಮಂತ್ರದಂತೆ ಕೇಳಿಸೋದೂ ಇಲ್ಲ. ಕಾಣಿಸೋದೂ ಇಲ್ಲ. ಬದಲಿಗೆ ತಮಟೆಯ ಏಟಿನಂತೆ, ಜೇನ್ನೊಣದ ಕುಟುಕಿನಂತೆ ಅನುಭವಿಸಬಹುದು. ಮೊಲದ ಬಾಡು, ದನದ ಬಾಡು ತಿಂದಷ್ಟೇ ಖುಷಿಯಾಗುತ್ತದೆ.

ಬ್ರಿಟಿಷರು ಕಲಿಸಿ ಹೋದ ಬಾಕ್ಸಿಂಗ್ ನಲ್ಲಿ ಹೆಚ್ಚುಗಾರಿಕೆಯ ಪರಂಪರೆಗಾಗಿ ನಡೆಯುವ ಕಾದಾಟದ ಕಥೆ ಎಂದು ಸುಲಭಕ್ಕೆ ಹೇಳಬಹುದಾದ ಸಿನಿಮಾವನ್ನು ಎದೆಗಣ್ಣಿನಿಂದ ನೋಡಬೇಕಷ್ಟೇ. ರಂಗನ್ ವಾತಿಯರ್ ಹೇಳುವಂತೆ, “ನಿಮಗಿಂತ ಗಂಡ್ಸು ಇಲ್ಲಿ ಯಾರೂ ಇಲ್ಲ ಅನ್ನೋದನ್ನ ಸದಾ ತಲೆಯಲ್ಲಿ ಇಟ್ಟುಕೊಂಡಿರಬೇಕು”. ಎಂದಿನಂತೆ ಕ್ಯಾಮರಾ ವರ್ಕ್, ಮ್ಯೂಸಿಕ್ ಚೆನ್ನಾಗಿದೆ. ಕಿಶೋರ್​ ಅವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಸಿನಿ ಸುದ್ದಿ4 hours ago

ಸ್ವೀಟಿ ಅನುಷ್ಕಾ ಶೆಟ್ಟಿ ಮದುವೆ..!?

ಸುದ್ದಿದಿನ ಡೆಸ್ಕ್ : ನಟಿ, ತುಳುನಾಡ ಚೆಲುವೆ ಅನುಷ್ಕಾ ಶೆಟ್ಟಿ ಅವರ ವಿವಾಹವು 2023ರ ಒಳಗೆ ನಡೆಯಲಿದೆ ಎಂದು ಜ್ಯೋತಿಷಿ ಪಂಡಿತ್ ಜಗನ್ನಾಥ ಗುರೂಜಿ ಹೇಳಿದ್ದು, ಶ್ರೀಗಳ...

ನಿತ್ಯ ಭವಿಷ್ಯ9 hours ago

ಈ ರಾಶಿಯವರಿಗೆ ಗುಡ್ ನ್ಯೂಸ್ ಪಕ್ಷಮಾಸ ಕಳೆದ ತಕ್ಷಣವೇ ಮದುವೆ ಫಿಕ್ಸ್, ಸಂತಾನದ ಸಿಹಿಸುದ್ದಿ, ವ್ಯಾಪಾರದಲ್ಲಿ ಆರ್ಥಿಕ ಲಾಭ, ವಿದೇಶ ಪ್ರವಾಸ ಯಶಸ್ಸು! ‘ಭಾನುವಾರ ರಾಶಿ ಭವಿಷ್ಯ-ಸೆಪ್ಟೆಂಬರ್-26,2021’

  ಸೂರ್ಯೋದಯ: 06:07 AM, ಸೂರ್ಯಸ್ತ: 06:12 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಭಾದ್ರಪದ ಮಾಸ, ಗ್ರೀಷ್ಮ ಋತು,...

ದಿನದ ಸುದ್ದಿ16 hours ago

ಸಂಕೇಶ್ವರ್ ಬಸ್ ನಿಲ್ದಾಣ; ಪುರಸಭೆ ಕಟ್ಟಡ ಉದ್ಘಾಟನೆ | ಕನ್ನಡ ನೆಲ-ಜಲ ರಕ್ಷಣೆಗೆ ಬದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ,ಬೆಳಗಾವಿ : ರಾಜ್ಯದ ನೆಲ-ಜಲ‌‌ ಹಾಗೂ‌ ಜನರ ರಕ್ಷಣೆಗೆ ಸರಕಾರ ಕಟಿಬದ್ಧವಾಗಿದೆ. ಇದಲ್ಲದೇ ಉತ್ತರ ಕರ್ನಾಟಕ ಅಭಿವೃದ್ಧಿ ಸೇರಿದಂತೆ ಕೃಷ್ಣಾ ಯೋಜನೆಯಡಿ ರಾಜ್ಯದ ಪಾಲಿನ ನೀರಿನ ಸಂಪೂರ್ಣ...

ದಿನದ ಸುದ್ದಿ18 hours ago

ಸೆ.26 ರಂದು “ಸರ್ವರಿಗೂ ಸಂವಿಧಾನ” ನಾಟಕ ಪ್ರದರ್ಶನ

ಸುದ್ದಿದಿನ,ಧಾರವಾಡ: ರಂಗಾಯಣವು ಡಾ.ಬಿ.ಆರ್ ಅಂಬೇಡ್ಕರ ಅವರ ಆಲೋಚನೆಗಳು, ಸಾಮಾಜಿಕ ಅಸಮಾನತೆ, ಲಿಂಗ ತಾರತಮ್ಯ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ಸಂವಿಧಾನದಲ್ಲಿರುವ ಇತರೆ ಪ್ರಮುಖವಾದ ವಿಷಯಗಳ ಮೇಲೆ ಬೆಳಕು...

ದಿನದ ಸುದ್ದಿ18 hours ago

ಕೃಷಿ ಸಿಂಚಾಯಿ ಯೋಜನೆ ಸೌಲಭ್ಯ ಪಡೆಯಲು ಸೂಚನೆ

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿನ ಕೇಂದ್ರ ಪುರಸ್ಕøತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಲು ದಾವಣಗೆರೆ ತಾಲ್ಲೂಕಿನ...

ದಿನದ ಸುದ್ದಿ18 hours ago

ದಾವಣಗೆರೆ |ಸೆ.27 ರಂದು ಚರ್ಮ ಕುಶಲಕರ್ಮಿಗಳಿಗೆ ಚರ್ಮಶಿಲ್ಪ ಭವನ, ವಸತಿ ಕಾರ್ಯಗಾರ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಸುದ್ದಿದಿನ,ದಾವಣಗೆರೆ:ಸೆ.27 ರಂದು ಬೆಳಿಗ್ಗೆ 10 ಗಂಟೆಗೆ ಆನಗೋಡಿನ ಶ್ರೀಮರುಳಸಿದ್ದೇಶ್ವರ ಸಮುದಾಯ ಭವನ ಇಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚರ್ಮಕುಶಲಕರ್ಮಿಗಳಿಗೆ ವಸತಿ ಕಾರ್ಯಾಗಾರ, ಚರ್ಮಶಿಲ್ಪಿ ಭವನ ಮತ್ತು...

ದಿನದ ಸುದ್ದಿ19 hours ago

ಅ.2 ರಂದು ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ: ಸಚಿವ ಆನಂದ್ ಸಿಂಗ್

ಸುದ್ದಿದಿನ,ಹೊಸಪೇಟೆ: ಅ.2 ಮತ್ತು 3 ರಂದು ಅದ್ದೂರಿಯಾಗಿ ವಿಜಯನಗರ ಜಿಲ್ಲಾ ಉತ್ಸವ ಕಾರ್ಯಕ್ರಮ ನಡೆಯಲಿದೆ ಪ್ರವಾಸೋದ್ಯಮ , ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು...

ದಿನದ ಸುದ್ದಿ19 hours ago

ಪಾಲಿಟೆಕ್ನಿಕ್ ಶಿಕ್ಷಣದಿಂದ ಉದ್ಯೋಗ ಖಚಿತ : ಸಚಿವ ಡಾ.ಅಶ್ವಥ್ ನಾರಾಯಣ್

ಸುದ್ದಿದಿನ,ಉಡುಪಿ : ಪಾಲಿಟೆಕ್ನಿಕ್ ಶಿಕ್ಷಣ ಪಡೆಯುವದರಿಂದ ವಿದ್ಯಾರ್ಥಿಗಳಿಗೆ ಖಚಿತವಾಗಿ ಉದ್ಯೋಗ ಪಡೆಯಬಹುದಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಸೇರ್ಪಡೆಗೊಂಡು ಅದರ ಪ್ರಯೋಜನ ಪಡೆಯುವಂತೆ , ರಾಜ್ಯದ...

ದಿನದ ಸುದ್ದಿ1 day ago

ಕಿತ್ತೂರು ರಾಣಿ ಚೆನ್ನಮ್ಮ ಮತ್ತು ವೀರಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ವೀರಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಿತ್ತೂರು ರಾಣಿ...

ನಿತ್ಯ ಭವಿಷ್ಯ1 day ago

ಬುಧಾದಿತ್ಯ ಯೋಗ

  ನಿಮ್ಮ ಜನ್ಮ ಕುಂಡಲಿಯಲ್ಲಿ ರವಿ ಬುಧ ಗ್ರಹಗಳು ಒಂದೇ ರಾಶಿ ಮನೆಯಲ್ಲಿದ್ದರೆ ಇದನ್ನು “ಬುಧಾದಿತ್ಯ ಯೋಗ” ಅಥವಾ “ನಿಪುಣ ಯೋಗ” ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ....

Trending