Connect with us

ದಿನದ ಸುದ್ದಿ

ದೇಶ ಸುತ್ತೋರಿಗೆ ರೈಲ್ವೆ ಇಲಾಖೆಯ ಭರ್ಜರಿ ಆಫರ್..!

Published

on

ಸುದ್ದಿದಿನ ಡೆಸ್ಕ್ : ದೇಶ ಸುತ್ತು ಕೋಶ ಓದು ಎಂಬುದು ಜನಪದರ ನುಡಿಯಂತೆ ಕೋಶ ಓದಿಯಾದರೂ ಸರಿ, ದೇಶ ಸುತ್ತಿಯಾದರೂ ಜ್ಞಾನ ಗಳಿಸಬೇಕು. ಓದೋರಿಗಿಂತ ದೇಶ ಸುತ್ತೋರೇ ಹೆಚ್ಚು ಜನ. ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗಾಗಿಯೇ ರೈಲ್ವೆ ಇಲಾಖೆಯು ಕೈಗೆಟುಕುವ ದರದಲ್ಲಿ ಆಕರ್ಷಕ ಪ್ರವಾಸದ ಪ್ಯಾಕೇಜ್ ನೀಡಿದೆ.

ರೈಲು ದೇಶದ ಪ್ರಮುಖ ಪ್ರವಾಸಿ, ಧಾರ್ಮಿಕ ಸ್ಥಳಗಳನ್ನು ಒಳಗೊಂಡಿದೆ. ಪ್ರವಾಸಿಗರ ಬಜೆಟ್ ಗೆ ತಕ್ಕಂತೆ ತಮಗಿಷ್ಟದ ಸ್ಥಳಗಳುಳ್ಳ ಪ್ಯಾಕೇಜ್ ಆಯ್ಕೆ ಮಾಡಿಕೊಂಡು ಪ್ರಕಾರ ವಾಸ ಕೈಗೊಳ್ಳಬಹುದು. ಐಆರ್ಟಿಸಿಟಿಸಿ ಟೂರಿಸಂ ವೆಬ್‌ಸೈಟ್ ಗೆ ಹೋಗಿ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಯಾಕೇಜ್ ನ ಟಿಕೆಟ್ ಗಳನ್ನು ಆನ್‌ಲೈನ್ ಇಲ್ಲವೇ ರೈಲ್ವೆ ಇಲಾಖೆಯ ಕಚೇರಿಯಲ್ಲಿ ಟಿಕೆಟ್ ಬುಕ್ ಮಾಡಬಹುದು.

ಈ ಪ್ರವಾಸ ಕೈಗೊಳ್ಳುವ ರೈಲಿನಲ್ಲಿ ಬೋರ್ಡಿಂಗ್ ವ್ಯವಸ್ಥೆಯೂ ಲಭ್ಯವಿದೆ. ವಿವಿಧ ನಗರಗಳಲ್ಲಿ ರಾತ್ರಿ ಉಳಿದುಕೊಳ್ಳುವ ಪ್ರವಾಸಿಗರಿಗೆ ಅಕಾಮಡೆಷನ್ ಲಭ್ಯವಿದೆ. ಪ್ರವಾಸಿಗರ ಸುರಕ್ಷತೆಗಾಗಿ ಸ್ಥಳದಲ್ಲಿ ಭದ್ರತಾ ಪಡೆ ನಿಯೋಜಿಸಲಾಗಿರುತ್ತದೆ. ರೈಲಿನಲ್ಲಿ ಬಹುತೇಕ ಸ್ವೀಪರ್ ಕೋಚ್ ಇದೆ. ಪ್ರವಾಸಿಗರು ಬೇಡಿಕೆಯಿಟ್ಟರೆ ಎಸಿ ಕೋಚ್ ವ್ಯವಸ್ಥಯನ್ನು ಮಾಡಲಾಗುತ್ತದೆ.

ಭಾರತ್ ದರ್ಶನ್ ರೈಲಿನ ಪ್ಯಾಕೇಜ್ ಇಲ್ಲಿದೆ

01. ಶ್ರಾವಣ ಸ್ಪೆಷಲ್ ಜ್ಯೋತಿರ್ಲಿಂಗ ಯಾತ್ರೆ ಪ್ಲಸ್ ನೇಪಾಲ್ (WZBD235)

ಇದು 20 ಹಗಲು/ 19 ರಾತ್ರಿಯ ಟ್ರಿಪ್ ಆಗಿದ್ದು, ಇದು ಧಾರ್ಮಿಕ ಸ್ಥಳಗಳ ಪ್ರವಾಸವಾಗಿದೆ. ಆಸ್ತಿಕರಿಗೆ ಇಷ್ಟವಾಗುವಂಥ ಟ್ರಿಪ್ ಆಗಲಿದೆ. *ಎಲ್ಲೆಲ್ಲಿ:* ಪುಣೆ, ನಾಸಿಕ್, ದ್ವಾರಕ, ಸೋಮನಾಥ, ಉಜ್ಜಯಿನಿ, ಅಲಹಾಬಾದ್, ವಾರಾಣಸಿ, ಪಶುಪತಿನಾಥ ( ನೇಪಾಳ), ಪೋಕರ್, ಔರಂಗಾಬಾದ್, ಪರ್ಭಾನಿ, ಪರ್ಲಿ, ಕರ್ನೂಲ್ ಟೌನ್ ಪ್ಯಾಕೇಜ್ ನ ಸ್ಥಳಗಳಾಗಿವೆ.

ನೀವು ಆಯ್ದುಕೊಳ್ಳುವ ಸ್ಥಳಗಳಲ್ಲಿ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ವ್ಯವಸ್ಥೆ ಇದೆ. ಸ್ವೀಪರ್ ಮತ್ತು tier-3 AC ಕ್ಲಾಸ್ ಕೋಚ್ ವ್ಯವಸ್ಥೆ ಇದೆ. ಬೆಳಗ್ಗೆ ಟಿಫಿನ್, ಮಧ್ಯಾಹ್ನ, ರಾತ್ರಿ ಊಟ ಒದಗಿಸಲಾಗುತ್ತದೆ. ಸ್ಟ್ಯಾಂಡರ್ಡ್ ಪ್ಯಾಕೇಜ್ ಗೆ ₹ 18,900 ಹಾಗೂ ಕಂಫರ್ಟ್ (tier-3 AC) ಪ್ಯಾಕೇಜ್ ಗೆ ₹ 23,100 ದರ ನಿಗದಿ ಮಾಡಲಾಗಿದೆ. ಉಳಿದ ಸೌಲಭ್ಯಗಳು ಎರಡಕ್ಕೂ ಅನ್ವಯವಾಗಲಿವೆ.

O2. ಭಾರತ್ ದರ್ಶನ್ (WZBD234R)

ಇದು 10ಹಗಲು/ 9ರಾತ್ರಿಯ ರಾಜ್ ಕೋಟ್ ನಿಂದ ರತ್ಲಂ ವರೆಗಿನ ಪ್ರವಾಸವಾಗಿದೆ. ಪುರಿ, ಆನಂದ, ವಡೋದರ, ಗೋಧ್ರಾ, ರತ್ಲಂ ಪ್ರವಾಸಿ ಸ್ಥಳಗಳನ್ನೊಳಗೊಂಡಿದೆ. ಇದು ಕಡಿಮೆ ದರದ ಪ್ರವಾಸವಾಗಿದ್ದು, ಯಾತ್ರಾರ್ಥಿಗಳಿಗೆ ಹೇಳಿ ಮಾಡಿಸಿದ ಪ್ರವಾಸವಾಗಿದೆ. ಈ ರೈಲು ಸ್ವೀಪರ್ ಕೋಚ್ ಮಾತ್ರ ಸೌಲಭ್ಯ ಹೊಂದಿದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಉಪಹಾರ ಮತ್ತು ಊಟದ ವ್ಯವಸ್ಥೆ ಇದೆ. ಒಬ್ಬರಿಗೆ ₹ 9,450 ದರ ನಿಗದಿ ಮಾಡಲಾಗಿದೆ.

03. ದಕ್ಷಿಣ್ ಭಾರತ್ ಯಾತ್ರಾ (NZBD225)

ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸ ಸ್ಥಳಗಳ ಟ್ರಿಪ್ ಮಾಡೋರಿಗೆ ಇದು ಬೆಸ್ಟ್ ಪ್ಯಾಕೇಜ್. ಚಂಡೀಗಡ, ಅಂಬಾಲ, ಕುರುಕ್ಷೇತ್ರ, ಕರ್ನಲ್, ಪಾಣಿಪತ್, ದೆಹಲಿ ಕಾಂಟಿನೆಂಟಲ್, ರೆವರಿ, ಅಲ್ವರ್, ಜೈಪುರದೊಂದಿಗೆ ರಾಮೇಶ್ವರ, ಮಧುರೈ, ಕೋವಲಂ, ತಿರುಪತಿ ಸ್ಥಳಗಳನ್ನು ದರ್ಶನ ಮಾಡಬಹುದಾಗಿದೆ. ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ವ್ಯವಸ್ಥೆ ಇದೆ. ಹರ್ಯಾಣ, ಪಂಜಾಬ್, ದೆಹಲಿ, ರಾಜಸ್ಥಾನ ರಾಜ್ಯಗಳ ಜನರಿಗೆ ದಕ್ಷಿಣ ಭಾರತದ ಪ್ರವಾಸದ ಪ್ಯಾಕೇಜ್ ಇಷ್ಟವಾಗಬಹುದು. 12ಹಗಲು, 11 ರಾತ್ರಿಯ ಪ್ರವಾಸದ ಪ್ಯಾಕೇಜ್ ಆಗಿದೆ. ಒಬ್ಬರಿಗೆ ₹ 11,340 ದರ ನಿಗದಿ ಮಾಡಲಾಗಿದೆ.

04. ಆಸ್ತ ಸ್ಪೆಷನ್ (SZBD332)

ಇದು 7 ಹಗಲು, 6 ರಾತ್ರಿಗಳುಳ್ಳ ಯಾತ್ರೆಯ ಪ್ಯಾಕೇಜ್ ಆಗಿದ್ದು, ಕೃಷ್ಣನ ಜನ್ಮಸ್ಥಳ ಹಾಗೂ ಉತ್ತರ ಪ್ರದೇಶ, ಬಿಹಾರ ರಾಜ್ಯದಲ್ಲಿರುವ ಧಾರ್ಮಿಕ ಸ್ಥಳಗಳನ್ನು ದರ್ಶನ ಮಾಡುವ ಆಸಕ್ತಿಯುಳ್ಳವರಿಗೆ ಬೆಸ್ಟ್ ಪ್ಯಾಕೇಜ್ ಆಗಿದೆ. ದೆಹಲಿ, ಅಮೃತಸರ, ಹರಿದ್ವಾರ, ಮತುರಾ, ಅಲಹಾಬಾದ್, ವಾರಾಣಸಿ, ಗಯಾ ಸ್ಥಳಗಳನ್ನು ದರ್ಶನ ಮಾಡಬಹುದು. ಒಬ್ಬರಿಗೆ ₹ 12,325 ದರ ನಿಗದಿ ಮಾಡಲಾಗಿದೆ. ಮದುರೈನಿಂದ ಪ್ರವಾಸ ಆರಂಭವಾಗಲಿದೆ.

05. ಶಿರಡಿ ಸ್ಪೆಷಲ್ (SZBD321)

ಈ ಪ್ಯಾಕೇಜ್ ನ ಹೆಸರೇ ಸೂಚಿಸುವಂತೆ ಇದು ಶಿರಡಿ ಸಾಯಿಬಾಬಾ ದರ್ಶನ ಮಾಡುವ ಆಸಕ್ತರಿಗಾಗಿಯೇ ರೆಡಿ ಮಾಡಿದ ಪ್ಯಾಕೇಜ್ ಆಗಿದೆ. 7ಹಗಲು, 6ರಾತ್ರಿಗಳುಳ್ಳ ಪ್ಯಾಕೇಜ್. ಮದುರೈನಿಂದ ಆರಂಭವಾಗುವ ಪ್ರವಾಸವು, ದಿಂಡಿಗಲ್, ಕರೂರ್, ಎರೋಡ್, ಸೇಲಂ, ಜೋಲರ್ಪೆಟ್ಟಯ್, ಕಾಟಪಡಿ, ಚೆನ್ನೈ ಸ್ಥಳಗಳನ್ನೊಳಗೊಂಡಿದೆ. ಒಬ್ಬರಿಗೆ ₹ 6,615 ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಮಹಾರಾಷ್ಟ್ರ | ಕೋವಿಡ್ ಸೆಂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ 13 ಸೋಂಕಿತರು ಸಾವು..!

Published

on

ಸುದ್ದಿದಿನ ಡೆಸ್ಕ್ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಸೈ ವಿರಾರ್ನಲ್ಲಿರುವ ಕೋವಿಡ್ -19 ಕೇಂದ್ರದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ 13 ರೋಗಿಗಳು ಸಾವನ್ನಪ್ಪಿದ ನಂತರ ಶುಕ್ರವಾರ ಮಹಾರಾಷ್ಟ್ರದ ಆತಂಕಗಳು ಮತ್ತಷ್ಟು ಹೆಚ್ಚಿವೆ.

ಮುಂಜಾನೆ 03: 13 ಕ್ಕೆ ಬಂಜಾರ ಹೋಟೆಲ್‌ನಿಂದ ತಿರುಪತಿ ನಗರದ ವಿಜಯ್ ವಲ್ಲಭ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮುಂಜಾನೆ 5.50 ರ ಸುಮಾರಿಗೆ ಬೆಂಕಿ ನಂದಿಸಲಾಯಿತು. ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಬೆಂಕಿ ಕಾಣಿಸಿಕೊಂಡಿದೆ.

ವಾಸೈ ವಿರಾರ್ ನಗರ ಮುನ್ಸಿಪಲ್ ಕಾರ್ಪೊರೇಷನ್ (ವಿವಿಸಿಎಂಸಿ) ತಂಡಗಳು ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಘಟನೆ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.

ಪಾಲ್ಘರ್ ಅವರ ರಕ್ಷಕ ಸಚಿವರಾಗಿರುವ ಕೃಷಿ ಸಚಿವ ದಾದಾ ಭೂಸ್ ಅವರು “ನಾನು ಘಟನೆಯ ಸ್ಥಳ ತಲುಪಿದ್ದು, 13 ಸಾವುಗಳು ಉಂಟಾಗಿರುವುದನ್ನು ಖಚಿತ ಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಒಂದು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ

Published

on

ಸುದ್ದಿದಿನ, ಬೆಂಗಳೂರು :400 ಕೋಟಿ ರೂ.ಗಳ ವೆಚ್ಚದಲ್ಲಿ ಒಂದು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಸಲು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ ಎಂದು ಅವರ ಕಚೇರಿ ಗುರುವಾರ ತಿಳಿಸಿದೆ.

ಇದು ಖರೀದಿಯ ಮೊದಲ ಹಂತವಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದ್ದು,”ಇದನ್ನು 18 ರಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ಲಸಿಕೆ ಹಾಕಲು ಬಳಸಲಾಗುತ್ತದೆ” ಎಂದು ಅದು ಹೇಳಿದೆ. ಇಲ್ಲಿಯವರೆಗೆ, ಕರ್ನಾಟಕವು 45 ವರ್ಷಕ್ಕಿಂತ ಮೇಲ್ಪಟ್ಟ 76.41 ಲಕ್ಷ ಜನರಿಗೆ ಲಸಿಕೆ ನೀಡಿದೆ.

ಇದನ್ನೂ ಓದಿ | ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತವಾಗಿಪೂರ್ಣಗೊಳಿಸಬೇಕು : ಎಂಪಿ ಜಿ.ಎಂ. ಸಿದ್ದೇಶ್ವರ 

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸ್ಥಳೀಯವಾಗಿ ತಯಾರಿಸಿದ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆಯನ್ನು ಕೋವಿಶೀಲ್ಡ್ ಖರೀದಿಸಲು ಯಡಿಯೂರಪ್ಪ ಅವರು ನಿರ್ಧರಿಸಿದ್ದಾರೆ.

18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರನ್ನು ಒಳಗೊಳ್ಳುವ ಮೂರನೇ ಹಂತದ ವ್ಯಾಕ್ಸಿನೇಷನ್ ಮೇ 1 ರಿಂದ ಪ್ರಾರಂಭವಾಗುತ್ತದೆ. ಕೆಲವು ಬಿಜೆಪಿ ಆಡಳಿತದ ರಾಜ್ಯಗಳು ಎಲ್ಲಾ ವಯಸ್ಕರಿಗೆ ಉಚಿತವಾಗಿ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿವೆ. ಈ ಕುರಿತು ಕರ್ನಾಟಕ ಇನ್ನೂ ಕರೆ ನೀಡಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಲಾಖಾ ಪರೀಕ್ಷೆ ಮುಂದೂಡಿಕೆ

Published

on

ಸುದ್ದಿದಿನ,ದಾವಣಗೆರೆ: 2020 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಏ.22 ರಿಂದ 30 ರವೆರೆಗೆ ನಡೆಸಲು ನಿಗದಿಪಡಿಸಿದ್ದು, ಕೋವಿಡ್ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಇದನ್ನೂ ಓದಿ | ನ್ಯಾಯಾಧಿಕರಣದಲ್ಲಿ ತರಬೇತಿ ನೀಡಲು ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ 

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಹಾಜರಾಗಬೇಕಿದ್ದು, ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಡಿಸಿರುವ ಆದೇಶದ ಮಾರ್ಗಸೂಚಿಗಳನ್ನು ಪಾಲಿಸುವ ಉದ್ದೇಶದಿಂದ ಏ.21 ರಿಂದ ಮೇ 4 ರವರೆಗೆ ರಾತ್ರಿ ಮತ್ತು ವಾರಾಂತ್ಯದವರೆಗೂ ಕಫ್ರ್ಯೂ ಜಾರಿಯಾಗಿರುವುದರಿಂದ ಮುಂದಿನ ಪರೀಕ್ಷಾ ದಿನಾಂಕವನ್ನು ನಂತರದ ದಿನಗಳಲ್ಲಿ ಆಯೋಗದ ಅಂತರ್ಜಾಲ http://kpsc.kar.nic.in ರಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಕ್ರೀಡೆ10 hours ago

ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 6 ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್..!

ಸುದ್ದಿದಿನ ಡೆಸ್ಕ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಗುರುವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 6,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್...

ದಿನದ ಸುದ್ದಿ11 hours ago

ಮಹಾರಾಷ್ಟ್ರ | ಕೋವಿಡ್ ಸೆಂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ 13 ಸೋಂಕಿತರು ಸಾವು..!

ಸುದ್ದಿದಿನ ಡೆಸ್ಕ್ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಸೈ ವಿರಾರ್ನಲ್ಲಿರುವ ಕೋವಿಡ್ -19 ಕೇಂದ್ರದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ 13 ರೋಗಿಗಳು ಸಾವನ್ನಪ್ಪಿದ ನಂತರ ಶುಕ್ರವಾರ ಮಹಾರಾಷ್ಟ್ರದ...

ನಿತ್ಯ ಭವಿಷ್ಯ11 hours ago

ನಿಮ್ಮ ಜನ್ಮಕುಂಡಲಿಯ ಕುಜದೋಷದ ಬಗ್ಗೆ ಮಾಹಿತಿ

ಜನ್ಮ ಕುಂಡಲಿಯಲ್ಲಿ ಯಾವ ಯಾವ ಮನೆಯಲ್ಲಿ ಕುಜ( ಮಂಗಳ, ಮಾಂಗಲೀಕ) ಇದ್ದರೆ ಕುಜದೋಷ ಪರಿಣಾಮ ಬೀರುವುದು ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ.. ಮದುವೆಗೂ ಮುನ್ನ ಗಂಡು-ಹೆಣ್ಣಿನ ಜಾತಕವನ್ನು...

ನಿತ್ಯ ಭವಿಷ್ಯ13 hours ago

ಈ ರಾಶಿಯವರಿಗೆ ಬಹುದಿನದ ಬೇಡಿಕೆ ಮತ್ತು ಕನಸು ಈಡೇರಲಿದೆ..! ಶುಕ್ರವಾರ ರಾಶಿ ಭವಿಷ್ಯ-ಏಪ್ರಿಲ್-23,2021

ಸೂರ್ಯೋದಯ: 06:01 AM, ಸೂರ್ಯಸ್ತ: 06:32 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಚೈತ್ರ ಮಾಸ, ವಸಂತ ಋತು, ಉತ್ತರಾಯಣ,...

ದಿನದ ಸುದ್ದಿ21 hours ago

ಒಂದು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ

ಸುದ್ದಿದಿನ, ಬೆಂಗಳೂರು :400 ಕೋಟಿ ರೂ.ಗಳ ವೆಚ್ಚದಲ್ಲಿ ಒಂದು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಸಲು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ ಎಂದು ಅವರ ಕಚೇರಿ...

ದಿನದ ಸುದ್ದಿ21 hours ago

ಇಲಾಖಾ ಪರೀಕ್ಷೆ ಮುಂದೂಡಿಕೆ

ಸುದ್ದಿದಿನ,ದಾವಣಗೆರೆ: 2020 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಏ.22 ರಿಂದ 30 ರವೆರೆಗೆ ನಡೆಸಲು ನಿಗದಿಪಡಿಸಿದ್ದು, ಕೋವಿಡ್ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ....

ದಿನದ ಸುದ್ದಿ22 hours ago

ನ್ಯಾಯಾಧಿಕರಣದಲ್ಲಿ ತರಬೇತಿ ನೀಡಲು ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: 2021-22ನೇ ಸಾಲಿನಲ್ಲಿ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಧೀಕರಣದಲ್ಲಿ ತರಬೇತಿ ನೀಡಲು ಕಾನೂನು ಪದವಿ ಹೊಂದಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲೆಗೆ 08...

ದಿನದ ಸುದ್ದಿ22 hours ago

ಚನ್ನಗಿರಿ ತಾಲ್ಲೂಕಿನಲ್ಲಿ ತಂಬಾಕು ದಾಳಿ : ಕಾಯ್ದೆ ಉಲ್ಲಂಘನೆಗೆ ದಂಡ

ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲ್ಲೂಕಿನಲ್ಲಿ ತಂಬಾಕು ನಿಯಂತ್ರಣ ತನಿಖಾ ದಳವು ಗುರುವಾರದಂದು ಸಂತೇಬೆನ್ನೂರಿನ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳು, ಪಾನ್‍ಶಾಪ್, ಹೋಟೆಲ್‍ಗಳ ಮೇಲೆ ದಾಳಿ ನಡೆಸಿ...

ದಿನದ ಸುದ್ದಿ22 hours ago

ದಾವಣಗೆರೆ | ಶನಿವಾರ ಮತ್ತು ಭಾನುವಾರ ಎಪಿಎಂಸಿಗೆ ರಜೆ

ಸುದ್ದಿದಿನ,ದಾವಣಗೆರೆ : ಕೊರೊನಾ 19 ಸಾಂಕ್ರಾಮಿಕ ರೋಗ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯವಾಗಿ ಏ.22 ರಂದು ಕಫ್ರ್ಯೂ ಜಾರಿಯಲ್ಲಿರುವುದರಿಂದ ಹಾಗೂ ಕೃಷಿ ಮಾರಾಟ...

ದಿನದ ಸುದ್ದಿ22 hours ago

ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತವಾಗಿಪೂರ್ಣಗೊಳಿಸಬೇಕು : ಎಂಪಿ ಜಿ.ಎಂ. ಸಿದ್ದೇಶ್ವರ

ಸುದ್ದಿದಿನ,ದಾವಣಗೆರೆ: ಜಿಲ್ಲೆಯ ಸಾಸ್ವೆಹಳ್ಳಿ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಪಂಪ್‍ಹೌಸ್‍ಗಳು, ಡೆಲವರಿ ಚೇಂಬರ್‍ಗಳು, ಎಲೆಕ್ಟ್ರಿಕಲ್ ಸಬ್‍ಸ್ಟೇಷನ್‍ಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ನಿರ್ಮಿಸಬೇಕಿರುವ ವಿದ್ಯತ್ ಟವರ್‍ಗಳ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಭೂಸ್ವಾಧೀನ...

Trending