ರಾಜಕೀಯ
ಹಾರು ತಿಹುದು ಏರು ತಿಹುದು ನೋಡು ಬಂಡಾಯದ ಬಾವುಟ
ಸುದ್ದಿದಿನವಿಶೇಷ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆ ಪ್ರಮುಖವಾದ ಜಿಲ್ಲೆ. ಇಲ್ಲಿನ ಜಿದ್ದಾ ಜಿದ್ದಿನ ಚುನಾವಣೆ ಈ ಬಾರಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿಯವರೆಗು ಜಿಲ್ಲೆಯ 8ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 116 ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಮಲ ಪಾಳೆಯಕ್ಕೆ ತೆಂಗಿನಕಾಯಿ ಸೆಡ್ಡು ಹೊಡೆದು ನಿಂತಿತ್ತು. ಆದರೆ ಈ ಬಾರಿಯು ಕೂಡ ಬಿಜೆಪಿ ಟಿಕೇಟ್ ವಂಚಿತ ಅಭ್ಯರ್ಥಿಗಳು ಪತ್ಯೇಕವಾಗಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.ಕಳೆದ ಬಾರಿ ಕೆಜೆಪಿಯ ಹೊಡೆತ ದಿಂದ ತನ್ನ ಅಸ್ತಿತ್ವವನ್ನು ಕಳೆದಕೊಂಡ ಬಿಜೆಪಿ ಈ ಬಾರಿ ಜಿಲ್ಲೆಯಲ್ಲಿ ಕಮಲ ಅರಳಿಸಲು ಸಜ್ಜಾಗಿತ್ತು, ಆದರೆ, ಒಂದೆ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ಜೋರಾಗಿದ್ದ ಹಿನ್ನಲೆಯಲ್ಲಿ, ಟಿಕೇಟ್ ಕೈ ತಪ್ಪಿದವರು, ಬಂಡಾಯದ ಬಾವುಟವನ್ನು ಹಾರಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರ ಪ್ರಮುಖ ಕ್ಷೇತ್ರವಾಗಿದೆ. ಆದರೆ ಮಾಯಕೊಂಡ ಕ್ಷೇತ್ರದಲ್ಲಿ ಈ ಬಾರಿ ಮಾಯದಾಟ ಶುರುವಾಗಿದೆ.ಕಮಲದ ಮಾಜಿ ಶಾಸಕ ಬಸವರಾಜ್ ನಾಯ್ಕ ಕೂಡ ಶತಾಯಗತಾಯ ಬಿಜೆಪಿಯಿಂದ ನಿಲ್ಲಲು ಯತ್ನಿಸಿದರು ಆದರೆ ಕೊನೆ ಗಳಿಗೆಯಲ್ಲಿ ಪ್ರೊ.ಲಿಂಗಪ್ಪನವರ ಹೆಸರು ಅಂತಿಮವಾದ ಬಳಿಕ, ಜೆಡಿಯು ಸೇರಿ ಕಮಲಕ್ಕೆ ಬಾಣ ಬಿಟ್ಟಿದ್ದಾರೆ. ಈ ನಡೆಯು ಕೂಡ ಒಂದು ಕಡೆ ಕಮಲಕ್ಕೆ ಮುಳ್ಳಾಗುವುದರಲ್ಲಿ ಸಂಶಯವಿಲ್ಲ .ಇನ್ನು ಇದೇ ಕ್ಷೇತ್ರದ ಮತ್ತೊಬ್ಬ ಪ್ರಮುಖರಲ್ಲಿ ಎಚ್.ಆನಂದಪ್ಪ ಕೂಡ ಟಿಕೇಟ್ ಪಡೆಯಲು ಪ್ರಯತ್ನ ಮಾಡಿದರು. ಆದರೆ ಅಧಿಕೃತವಾಗಿ ಲಿಂಗಪ್ಪನವರಿಗೆ ಘೋಷಣೆ ಯಾದ ಬಳಿಕ ಆನಂದಪ್ಪ ನವರು ಬಂಡಾಯದ ಕಹಳೆ ಮೊಳಗಿಸಿದ್ದಾರೆ.ಇನ್ನು ಒಂದೇ ಕ್ಷೇತ್ರದಲ್ಲಿ , ಒಂದೇ ಪಕ್ಷದ ವಿರುದ್ಧ ಇಬ್ಬರು ಅಭ್ಯರ್ಥಿಗಳು ಬಂಡಾಯ ಸಿಡಿಸಿದ್ದಾರೆ.ಇದರಿಂದಾಗಿ ಈ ಬಾರಿ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇಬ್ಬರ ಜಗಳದಿಂದ ಮೂರನೆ ಅವರಿಗೆ ಲಾಭವಾಗುಬಂತೆ ಇಲ್ಲಿನ ಜೆಡಿಎಸ್ ಅಭ್ಯರ್ಥಿ ಗೆ ವರ ವಾಗುವುದೆ ಕಾದು ನೋಡಬೇಕಿದೆ.
ಇನ್ನು ಜಿಲ್ಲೆಯ ಪ್ರಮುಖ ಕ್ಷೇತ್ರವಾದ ಹರಪನಹಳ್ಳಿ ಯಲ್ಲು ಬಿಜೆಪಿಯ ಬಂಡಾಯದ ಹಾರಟ ಕಡಿಮೆಯಿಲ್ಲ. ಯಡಿಯೂರಪ್ಪ ಮತ್ತು ಶ್ರೀರಾಮುಲು ಆಪ್ತರಾಗಿದ್ದ ಎನ್ .ಕೊಟ್ರೇಶ್ ಬಿಜೆಪಿಯ ಅಭ್ಯರ್ಥಿ ಯಾಗುವುದು ಕಚಿತವೆಂದಿತ್ತು ಆದರೆ ಕೊನೆ ಕ್ಷಣದಲ್ಲಿ ಕರುಣಾಕರ ರೆಡ್ಡಿಗೆ ಟಿಕೇಟ್ ಘೋಷಣೆ ಮಾಡಿದರು. ಇದರಿಂದಾಗಿ ನನಗೆ ಯಡಿಯೂರಪ್ಪ, ರಾಮುಲು ಮೋಸ ಮಾಡಿದರು ಎಂದು ಕಮಲ ಬಿಟ್ಟು ತೆನೆ ಹೊತ್ತುಕೊಂಡಿದ್ದಾರೆ. ಕಡೆಯ ಕ್ಷಣದಲ್ಲಿ ಜೆಡಿಎಸ್ ಸೇರಿದ ಕೊಟ್ರೇಶ್ ಬಿಜೆಪಿಯ ವಿರುದ್ದ ನೇರವಾಗಿ ಬಂಡಾಯದ ಬಿಸಿ ಅಲೆಯನ್ನು ನಿರ್ಮಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಕೂಡ ಬಂಡಾಯದ ಹೊಗೆ ಕಾಣಿಸುತ್ತಿದೆ.
ಬಿ ಫಾರಂ ಸಿಗುವುದಕ್ಕೂ ಮುಂಚೆಯೇ ಬಿಜೆಪಿಯ ಅಭ್ಯರ್ಥಿ ಎಂದು ಯಶವಂತರಾವ್ ಜಾಧವ್ ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಕಮಲದ ಅಧಿಕೃತ ಅಭ್ಯರ್ಥಿ ಯಾಗಿಯೇ ಘೊಷಿತಗೊಂಡರು. ಇನ್ನು ಇದೆ ಕ್ಷೇತ್ರದಿಂದಲೆ ಎಚ್. ಎಸ್. ನಾಗರಾಜು ಕೂಡ ಕಮಲ ಪಾಳಯದಲ್ಲಿ ಟಿಕೇಟ್ ಆಕಾಂಕ್ಷಿಯಾಗಿದ್ದರು ಆದರೆ ಯಶವಂತರಾವ್ ಜಾದವ್ ಗೆ ಟಿಕೇಟ್ ನೀಡಿದ ಪರಿಣಾಮ ಪ್ರತ್ಯೇಕವಾಗಿ ಕಮಲಕ್ಕೆ ಬಂಡಾಯದ ಅಭ್ಯರ್ಥಿ ಯಾಗಿ ಕಣಕ್ಕಿಳಿದ್ದಿದ್ದಾರೆ. ಒಟ್ಟಾರೆಯಾಗಿ ಜಾತಿ ಸಮೀಕರಣ ಸೇರಿದಂತೆ ನಾನಾ ಕಾರಣಗಳಿಂದಾಗಿ ಬಿಜೆಪಿಗೆ ಬಂಡಾಯದ ಕಾವು ಜೋರಾಗಿಯೆ ತಟ್ಟಲಿದೆ . ಕಳೆದ ಬಾರಿ ತನ್ನ ಗರ್ಭದಲ್ಲಿಯೇ ಹುಟ್ಟಿದ ಕೆಜೆಪಿಯಿಂದ ಗಟ್ಟಿ ತೆಂಗಿನಕಾಯಿಯಿಂದ ತನ್ನ ನೆಲೆಯನ್ನೆ ಕಳೆದುಕೊಂಡಿತು. ಈ ಬಾರಿಯ ಬಂಡಾಯದ ಅಲೆಯಿಂದ ಬಿಜೆಪಿ ಚೇತರಿಸಿಕೊಳ್ಳುವುದು ಕಷ್ಟದಂತೆ ಕಾಣಿಸುತ್ತಿದೆ…
ಇನ್ನು ಬಂಡಾಯದ ಬಾವುಟ ಕೇವಲ ಕಮಲ ಪಾಳಯದಲ್ಲು ಅಲ್ಲದೆ ಕೈ ಪಾಳಯದಲ್ಲೂ ಸದ್ದು ಮಾಡುತ್ತಿದೆ. ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಂದ ವರದಿಯನ್ನು ಅನುಸರಿಸಿ ಹಾಲಿ ಶಾಸಕ ರಾಜೇಶ್ ಗೆ ಟಿಕೇಟ್ ಮಿಸ್ಸಾಗಿತ್ತು. ಅಧಿಕೃತ ವಾಗಿ ಪುಷ್ಪಾ ಲಕ್ಷಣಸ್ವಾಮಿ ಎಂಬುವರಿಗೆ ಟಿಕೇಟ್ ಘೋಷಣೆ ಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಲಾಭಿ ನಡೆಸಿದ ಎಚ್. ಪಿ. ರಾಜೇಶ್ ರವರು ಕೈ ನಾಯಕರ ಜೊತೆ ಕಸರತ್ತು ನಡೆಸಿ ಕೊನೆಗೂ ಬಿ ಫಾರಂ ತರುವಲ್ಲಿ ಯಶಸ್ವಿಯಾದರು. ಆದರೆ ಕಾಂಗ್ರೆಸ್ ನ ಜಗಳೂರು ಅಭ್ಯರ್ಥಿ ಯೆಂದೇ ಪಕ್ಷದಿಂದ ಘೋಷಣೆ ಯಾದರು ಕೂಡ ಟಿಕೇಟ್ ನೀಡಲಿಲ್ಲವೆಂಬುದಾಗಿ ನೊಂದ ಪುಷ್ಪಾ ಲಕ್ಷ್ಮಣಸ್ವಾಮಿ ಕಾಂಗ್ರೆಸ್ ವಿರುದ್ಧ ಬಂಡಾಯದ ಕೈ ಬೀಸಿದ್ದಾರೆ. ಶತಾಯಗತಾಯ ಕಾಂಗ್ರೆಸ್ ನನ್ನು ಸೋಲಿಸಲೇ ಬೇಕೆಂದು ಪಣ ತೊಟ್ಟಿದ್ದಾರೆ.
ಜಿಲ್ಲೆಯಲ್ಲಿ ಎಂದೂ ಇಲ್ಲದ ಇಂತಹ ಬಂಡಾಯದ ಅಲೆಗಳ ಮಧ್ಯೆ ಯಾರು ತಮ್ಮ ಪಟ ಹಾರಿಸುವರೋ , ಜಿಲ್ಲೆಯಲ್ಲಿ ಬದಲಾವಣೆ ತರುವರೋ ಕಾದು ನೋಡಬೇಕಿದೆ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401


ರಾಜಕೀಯ
ದೇವರಮನೆ ಶಿವಕುಮಾರ್ ಬಿಜೆಪಿ ಸೇರ್ಪಡೆ | ನಾವು ಯಾರಿಗೂ ಆಮಿಷ ಒಡ್ಡಿಲ್ಲ : ಸಂಸದ ಜಿಎಂ ಸಿದ್ದೇಶ್ವರ್

ಸುದ್ದಿದಿನ, ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆ ಗದ್ದುಕೆ ಹಿಡಿದಿದ್ದಕ್ಕೆ ಸಂಸದ ಜಿಎಂ ಸಿದ್ದೇಶ್ವರ ಹರ್ಷ ವ್ಯಕ್ತಪಡಿಸಿದ್ದು, ವರಿಷ್ಠರ ನಿರ್ಧಾರದಂತೆ ಎಸ್ ಟಿ ವೀರೇಶ್ ಅವರನ್ನ ಮೇಯರ್ ಆಗಿ ಆಯ್ಕೆ ಮಾಡಲಾಗಿದೆ ಎಂದರು.
ಇದನ್ನೂ ಓದಿ | ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
ಬುಧವಾರ ಮಹಾನಗರ ಪಾಲಿಕೆ ಮೇಯರ್ – ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಮನೆ ಶಿವಕುಮಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಅವರ ವೈಯಕ್ತಿ ವಿಚಾರವಾಗಿದೆ. ನಾವು ಯಾರಿಗೂ ಯಾವ ಆಮಿಷ ಒಡ್ಡಿಲ್ಲ. ಸ್ವತ: ಅವರೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ತಿನಿ ಅಂತ ಬಂದಿದ್ದರು, ಹಾಗಾಗಿ ಅವರನ್ನ ಬಿಜೆಪಿಗೆ ಸೇರಿಸಿಕೊಂಡಿದ್ದೇವೆ. ಇನ್ನು ಯಾರಾದರೂ ಬಿಜೆಪಿ ಸೇರ್ತಾರ ಎಂಬ ವರದಿಗಾರರ ಪ್ರಶ್ನೆಗೆ ಸಿದ್ದೇಶ್ವರ್ ಅವರು ‘ವೇಟ್ ಆ್ಯಂಡ್ ಸೀ ಎಂದು ಅಚ್ಚರಿ ಮೂಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ರಾಜಕೀಯ
ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ : ಮೇಯರ್ ಆಗಿ ಎಸ್.ಟಿ.ವೀರೇಶ್, ಉಪಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್

ಸುದ್ದಿದಿನ,ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ – ಉಪಮೇಯರ್ ಚುನಾವಣೆಯತಲ್ಲಿ ಬಿಜೆಪಿಯು ಭರ್ಜರಿ ಗೆಲುವು ಪಡೆಯಿತು. ಮೇಯರ್ ಆಗಿ ಬಿಜೆಪಿಯ ಎಸ್.ಟಿ. ವೀರೇಶ್ ಹಾಗೂ ಉಪ ಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾದರು.
29 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯು ದಾವಣಗೆರೆ ಪಾಲಿಕೆ ಅಧಿಕಾರ ಹಿಡಿದಿದ್ದು, ಕಾಂಗ್ರೆಸ್ 22 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ | ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ರಾಜಕೀಯ
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು

ಸುದ್ದಿದಿನ, ದಾವಣಗೆರೆ : ಕಾಂಗ್ರೆಸ್ ನ ಹಿರಿಯ ಮುಖಂಡ ಶಾಸಕ ಶಾಮನೂರು ಶಿವಶಂಕರಪ್ಪ ಗೈರು ಹಾಜರಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕರ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಮತದಾನ ನಡೆಯಿತು.
ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಎಸ್. ಟಿ. ವೀರೇಶ್, ಕಾಂಗ್ರೆಸ್ ನಿಂದ ಗಡಿಗುಡಾಳ್ ಮಂಜುನಾಥ್ ಅವರು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಶಿಲ್ಪ ಜಯಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿಯಿಂದ ಸಂಸದ ಜಿ ಎಂ ಸಿದ್ದೇಶ್ವರ್ , ಸಚಿವ ಆರ್ ಶಂಕರ್, ಚಿದಾನಂದಗೌಡ ಸೇರಿದಂತೆ ಬಿಜೆಪಿ ಪಕ್ಷದ 29 ಸದಸ್ಯರು ಇದ್ದರು. ಕಾಂಗ್ರೆಸ್ ನ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮೂವರು ಎಂ ಎಲ್ ಸಿ ಗಳಾದ ಕೆಸಿ ಕೊಂಡಯ್ಯ, ರಘು ಆಚಾರ್ , ಯುಬಿ ವೆಂಕಟೇಶ್ ಗೈರಾಗಿದ್ದರು. ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಸೇರಿದಂತೆ ಮಹಾನಗರ ಪಾಲಿಕೆ 22 ಸದಸ್ಯರು ಹಾಜರಿದ್ದರು.
ಶಾಸಕ ಶಾಮನೂರು ಶಿವಶಂಕರಪ್ಪ ಆಪ್ತರಾಗಿದ್ದ ಶಿವಕುಮಾರ್ ದೇವರಮನಿ ಮಂಗಳವಾರ (ಫೆ.23) ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದು ಖಚಿತವಾಗಿತ್ತು. ಇದರ ನಡುವೆ ಬೆಳಗ್ಗೆ ಕಾಂಗ್ರೆಸ್ ಹಿರಿಯ ಮುಖಂಡರ ಅನುಪಸ್ಥಿತಿಯಲ್ಲಿ ಚುನಾವಣೆ ನೆಡೆದಿದ್ದರಿಂದ ಬಿಜೆಪಿಗೆ ಗೆಲುವು ಸುಲಭವಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ6 days ago
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
-
ಭಾವ ಭೈರಾಗಿ6 days ago
ಕರುಣಾಳು ಅವನು, ಅವನು ನನ್ನವನು..!
-
ದಿನದ ಸುದ್ದಿ6 days ago
ದಿಶಾ ಕೇಸ್ | ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ..! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು..!
-
ದಿನದ ಸುದ್ದಿ6 days ago
ಬಡವರನ್ನು ಸಬಲೀಕರಣಗೊಳಿಸಲು ಉಚಿತ ಅನಿಲ ಸಂಪರ್ಕ ನೀಡಿದ್ದೇವೆ : ಪ್ರಧಾನಿ ಮೋದಿ
-
ಲೈಫ್ ಸ್ಟೈಲ್5 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ5 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್5 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ
-
ಭಾವ ಭೈರಾಗಿ5 days ago
ಕವಿತೆ | ಅವಳು