ದಿನದ ಸುದ್ದಿ
800 ಕೋಟಿ ರೂ. ಆಸ್ತಿ ಎಲ್ಲಿ: ಅಮರಪಲ್ಲಿ ಗ್ರೂಪ್ ಮುಖ್ಯಸ್ಥನಿಗೆ ಸುಪ್ರೀಂ ತರಾಟೆ

ಸುದ್ದಿದಿನ ಡೆಸ್ಕ್: 2014ರ ಚುನಾವಣೆಯಲ್ಲಿ ನಿಮ್ಮ ಆಸ್ತಿ 847 ಕೋಟಿ ರೂ. ಇದೆ ಎಂದು ಚುನಾವಣಾ ಆಯೋಗಕ್ಕೆ ಲೆಕ್ಕ ಕೊಟ್ಟಿದ್ದೀರಿ ಹಾಗಿದ್ದರೆ ಈಗ ನಿಮ್ಮ ಬಳಿ 67 ಕೋಟಿ ರೂ. ಆಸ್ತಿ ಇದೆ ಎಂದು ಹೇಳುತ್ತಿದ್ದೀರಿ ಮಿಕ್ಕ 800 ಕೋಟಿ ರೂ. ಎಲ್ಲಿ ಹೋಯ್ತು?
ಮನೆ ಕೊಳ್ಳುವ ಆಸೆ ಹೊತ್ತಿದ್ದ ನೂರಾರು ಜನರಿಂದ ಹಣ ವಸೂಲಿ ಮಾಡಿರುವ ಹಾಗೂ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ಕೊಟ್ಟ ಆರೋಪದಲ್ಲಿ ಸಿಲುಕಿರುವ ಅಮರಪಲ್ಲಿ ಗ್ರೂಪ್ ಮುಖ್ಯಸ್ಥ ಅನಿಲ್ ಶರ್ಮಾಗೆ ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆ ಹೀಗಿದೆ.
ನೀವು ಕೊಟ್ಟ ಲೆಕ್ಕಕ್ಕೂ ಈಗಲೂ 800 ಕೋಟಿ ರೂ. ವ್ಯತ್ಯಾಸ ಬರುತ್ತಿದೆ. ಆ ಹಣ ಎಲ್ಲಿ ಹೋಯ್ತು? ಎಂದು ನ್ಯಾಯಮೂರ್ತಿಗಳು ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡರು.
ನಾನು ಶೇರ್ ಮೇಲೆ ಹಣ ಹಾಕಿದ್ದೆ ಅದರಿಂದ ಹಣ ಸಂಪಾದಿಸಿದೆ ಎಂದು ಶರ್ಮಾ ಕೊಟ್ಟ ಲೆಕ್ಕದಿಂದ ಖುದ್ದುಹೋದ ನ್ಯಾಯಮೂರ್ತಿಗಳು. ನಿಮ್ಮ ಶೇರ್ಗಳ ಮುಖಬೆಲೆ 700 ಕೋಟಿ ರೂ. ಇದೆ ಈ ಹಣದಿಂದ 7ಸಾವಿರ ಕೋಟಿ ರೂ. ಹೇಗೆ ಸಂಪಾದಿಸಿದಿರಿ? ಕಂಪನಿಗಳು ಈ ಪರಿಯ ಹಣವನ್ನು ಶೇರ್ ಮೇಲೆ ಕೊಡುವುದಿಲ್ಲ. ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದೀರಾ? ಹುಶಾರ್ ಎಂದು ಕೋರ್ಟ್ ವಾರ್ನಿಂಗ್ ಕೊಟ್ಟಿದೆ.
ನೀವು ಹೇಳುತ್ತಿರುವ ಮಾಹಿತಿ ಸರಿ ಇದೆ ಎಂದಾದರೆ ಮನೆ ಕೊಳ್ಳಲು ಬಯಸಿದ್ದ ಸಾವಿರಾರು ಮಂದಿಯಿಂದ ಸಂಗ್ರಹಿಸಿದ್ದ 2ಸಾವಿರ ಕೋಟಿ ರೂ. ಎಲ್ಲಿ ಹೋಯ್ತು ಲೆಕ್ಕ ಕೊಡಿ ಎಂದು ಕೋರ್ಟ್ ಪ್ರಶ್ನಿಸಿತು.
ತಮ್ಮ ಆಸ್ತಿಯ ಲೆಕ್ಕ ಕೊಡಲು ಶರ್ಮಾ ಅವರಿಗೆ 4 ದಿನಗಳ ಸಮಯಾವಕಾಶ ಕೊಟ್ಟಿದ್ದು, ಅಷ್ಟರಲ್ಲಿ ನಿಜ ಆಸ್ತಿ ಎಷ್ಟೆಂಬುದನ್ನು ಶರ್ಮಾ ಕೋರ್ಟ್ ಮುಂದೆ ಹಾಜರುಪಡಿಸಬೇಕಿದೆ.

ದಿನದ ಸುದ್ದಿ
ಹಾವೇರಿ | ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಸುದ್ದಿದಿನ,ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಲು ಕಾರಣನಾದ ಹಾನಗಲ್ ತಾಲೂಕಿನ ಯಳ್ಳೂರ ಗ್ರಾಮದ ಸುನೀಲಗೌಡ ಮಹಾದೇವಗೌಡ ಪಾಟೀಲ ಎಂಬಾತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಸಜೆ ಹಾಗೂ ರೂ.ಏಳು ಸಾವಿರ ದಂಡ ವಿಧಿಸಿ ಗುರುವಾರ ಹೆಚ್ಚುವರಿ ಜಿಲ್ಲಾ ವ ಸತ್ರ ಎಫ್.ಟಿ.ಎಸ್.ಸಿ.-1(ಪೊಕ್ಸೊ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಕೆ.ಎಸ್.ಜ್ಯೋತಿಶ್ರೀ ಅವರು ತೀರ್ಪು ನೀಡಿದ್ದಾರೆ.
ಆರೋಪಿ ಸುನೀಲಗೌಡ ಮಹಾದೇವಗೌಡ ಪಾಟೀಲ ಈತನು ಅಪ್ರಾಪ್ತ ಬಾಕಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಅವಳ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ರೇವಪ್ಪ ಕಟ್ಟಿಮನಿ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದನ್ನೂ ಓದಿ | ಕವಿತೆ | ಕಾಮಧೇನು
ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ 10 ವರ್ಷಗಳ ಕಠಿಣ ಸಜೆ ಹಾಗೂ ರೂ.ಏಳು ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಭಾದಿತಳಿಗೆ ರೂ.ಐದು ಲಕ್ಷ ಪರಿಹಾರ ನೀಡಲು ಆದೇಶಿಸಿ ತೀರ್ಪು ನೀಡಿದ್ದಾರೆ ಎಂದು ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದಮಂಡಿಸಿದ ಹೆಚ್ಚುವರಿ ಜಿಲ್ಲಾ ವ ಸತ್ರ ಎಫ್.ಟಿ.ಎಸ್.ಸಿ.-1(ಪೊಕ್ಸೊ) ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ವಿನಾಯಕ ಎಸ್.ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋವಿಡ್-19 ವ್ಯಾಕ್ಸಿನ್ ಡೇಟಾ ಎಂಟ್ರಿಗೆ ಜನ ಮಾಹಿತಿ ನೀಡ್ತಿಲ್ಲ ; ಲಸಿಕೆ ಹಾಕಿಸಿಕೊಳ್ಳೋಕೆ ಒಪ್ತಿಲ್ಲ..!

ಸುದ್ದಿದಿನ,ಬೆಂಗಳೂರು: ಕೊರೋನಾ ಎರಡನೇ ಅಲೆಯ ಆತಂಕದ ಮಧ್ಯೆ ಸಾರ್ವಜನಿಕರಿಗೆ ಕೋವಿಡ್-19 ವ್ಯಾಕ್ಸಿನ್ ವಿತರಣೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಹೈ ರಿಸ್ಕ್ ಕೇಸ್ ಮತ್ತೆ 50 ವರ್ಷ ಮೇಲ್ಪಟ್ಟವರ ಪಟ್ಟಿಯನ್ನು ಸಿದ್ಧಗೊಳಿಸಲು ಆರೋಗ್ಯ ಇಲಾಖೆಯು ಹರಸಾಹಸ ಪಡುತ್ತಿದೆ.
ಮನೆ ಮನೆಗಳ ಸರ್ವೇ ವೇಳೆ ಕೋವಿಡ್-19 ವ್ಯಾಕ್ಸಿನ್ ಡೇಟಾ ಎಂಟ್ರಿಗೆ ಸಾರ್ವಜನಿಕರು ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಿಯಾದ ಮಾಹಿತಿ ಸಿಗದ ಆಶಾ ಕಾರ್ಯಕರ್ತೆಯರು ಆರೋಗ್ಯಾಧಿಕಾರಿಗಳ ಪರದಾಟವನ್ನು ಪಬ್ಲಿಕ್ ಕನ್ಮಡ ಖಾಸಗಿವಾಹಿನಿಯು ವರದಿ ಮಾಡಿದೆ.
ಸಾರ್ವಜನಿಕರಿಗೆ ಮಾರ್ಚ್ 1 ರಿಂದ ಕೊರೊನಾ ಲಸಿಕೆಯನ್ನು ವಿತರಿಸಲು ಆರೋಗ್ಯ ಇಲಾಖೆಯು ತಯಾರಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಮತ್ತು ಹಲವು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲು ಇಲಾಖೆ ನಿರ್ಧಾರ ಮಾಡಿದೆ.
ಸಾರ್ವಜನಿಕರು ಸರಿಯಾದ ಮಾಹಿತಿ ನೀಡ್ತಿಲ್ಲ
ರಾಜ್ಯದಲ್ಲಿ 50 ವರ್ಷ ಮೇಲ್ಪಟ್ಟವರು ಮತ್ತು ಹಲವು ಕಾಯಿಲೆಯಿಂದ ಬಳಲುತ್ತಿರುವ ಜನ ಎಷ್ಟಿದ್ದಾರೆ ? ಎಷ್ಟು ವ್ಯಾಕ್ಸಿನ್ ಕೊಡಬೇಕು? ಫಲಾನುಭವಿಗಳು ಎಷ್ಟು ಮಂದಿ ಆಗುತ್ತಾರೆ ಎಂದು ತಿಳಿಯಲು ಸರ್ಕಾರ ಸರ್ವೇ ನಡೆಸುತ್ತಿದೆ.
ಈ ಸರ್ವೇಯನ್ನು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಸ್ವಯಂ ಸೇವಕರು ನಡೆಸುತ್ತಿದ್ದಾರೆ. ಆದರೆ ಸರ್ವೇ ವೇಳೆ ಸಾರ್ವಜನಿಕರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಆರೋಗ್ಯ ಸಿಬ್ಬಂದಿ ಜೊತೆ ಶನಿವಾರ ಕನ್ನಡ ಸುದ್ದಿವಾಹಿನಿ ಸರ್ವೇಗೆ ಇಳಿದಾಗ ಅಲ್ಲಿನ ವಾಸ್ತವ ಬಯಲಾಗಿದೆ.
ಇದನ್ನೂ ಓದಿ | ಕೃಷಿ ಸಿಂಚಾಯಿ ಯೋಜನೆ | ಸಹಾಯಧನ ಪಡೆಯಲು ಅರ್ಜಿ ಆಹ್ವಾನ
ಪ್ಯಾಲೇಸ್ ಗುಟ್ಟಹಳ್ಳಿಯ ಜಟಕಾಸ್ಟಾಂಡ್ ವಸತಿ ಗೃಹದ ಸಂಕೀರ್ಣದ ಬಳಿ ಸುದ್ದಿವಾಹಿನಿ ಸರ್ವೇಗೆ ಇಳಿದಾಗ ಅಲ್ಲಿನ ಮನೆಯವರು ಸ್ಪಂದಿಸಿದ್ದಾರೆ. ಆರೋಗ್ಯ ಸಿಬ್ಬಂದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ವ್ಯಾಕ್ಸಿನ್ ತೆಗೆದುಕೊಳ್ಳೋದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ.
ಬಾಂಧವ್ಯ ನಗರದಲ್ಲಿ ಸರ್ವೆಗೆ ಅಂತಾ ಒಂದು ಮನೆಗೆ ಸುದ್ದಿವಾಹಿನಿ ತಂಡ ತೆರಳಿದೆ ಅಲ್ಲಿನ ನಿವಾಸಿ ನಿಮಗೆ ಎಷ್ಟು ವಯಸ್ಸು ಎಂದರೆ ಅವರು ಒಂದು ಬಾರಿ 49 ವರ್ಷ ಎನ್ನುತ್ತಾರೆ. ಮತ್ತೊಮ್ಮೆ 51 ವರ್ಷ ಎನ್ನುತ್ತಾರೆ.
ಮನೆಯಲ್ಲಿಯೇ ಇದ್ದ ಅವರು ಆಧಾರ್ ಕಾರ್ಡ್ ವೋಟರ್ ಐಡಿ ಕೇಳಿದ್ರೆ ಇಲ್ಲ ಅಂತಾರೆ. ವ್ಯಾಕ್ಸಿನ್ ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಕೆಲವರು ನಾವು ಆರೋಗ್ಯವಾಗಿದ್ದು, ಲಸಿಕೆ ಬೇಡ ಅಂತ ಹೇಳುತ್ತಾರೆ ಎಂದು ವರದಿಯಲ್ಲಿ ಸುದ್ದಿವಾಹಿನಿ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ನಗರದ ಬಾರ್ & ರೆಸ್ಟೋರೆಂಟ್ಗಳ ಮೇಲೆ ತಂಬಾಕು ನಿಯಂತ್ರಣ ಅಧಿಕಾರಿಗಳ ದಾಳಿ

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದ ಅಬಕಾರಿ ಇಲಾಖೆಯ ವಲಯ-01 ರ ಸಹಯೋಗದೊಂದಿಗೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸರ್ವೇಕ್ಷಣಾಧಿಕಾರಿ ಹಾಗೂ ಕಾರ್ಯಕ್ರಮಾಧಿಕಾರಿಂ ಡಾ.ರಾಘವನ್.ಜಿ.ಡಿ ಅವರನ್ನು ಒಳಗೊಂಡ ತಂಡ ಫೆ.25 ರಂದು ಬಾರ್ & ರೆಸ್ಟೋರೆಂಟ್ಗಳ ಮೇಲೆ ದಾಳಿ ನಡೆಸಿ, ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದೆ.
30 ಕ್ಕಿಂತ ಹೆಚ್ಚು ಆಸನಗಳಿರುವ ಬಾರ್ & ರೆಸ್ಟೋರೆಂಟ್ಗಳಲ್ಲಿ ‘ನಿರ್ಧಿಷ್ಠ ಧೂಮಪಾನ ವಲಯವನ್ನು ಸ್ಥಾಪಿಸುವುದು ಹಾಗೂ ಬಾರ್ಗಳ ವ್ಯಾಪ್ತಿಯಲ್ಲಿ ಟೇಬಲ್ಗಳ ಮೇಲೆ ಬೆಂಕಿಪೊಟ್ಟಣ, ಲೈಟರ್, ಆ್ಯಶ್ಸ್ಟ್ರೇ ಮತ್ತು ಸಪ್ಲೇಯರ್ಸ ವತಿಯಿಂದ ಯಾವುದೇ ಸಿಗರೇಟು ಒದಗಿಸದಂತೆ ಮಾಲೀಕರು ಜವಾಬ್ದಾರಿಯಿಂದ ಎಚ್ಚರಿಕೆ ವಹಿಸಬೇಕು ಅಲ್ಲದೆ ಎಲ್ಲಾ ರೆಸ್ಟೋರೆಂಟ್ಗಳಲ್ಲಿರುವ ಕೆಲಸಗಾರರು ಕಡ್ಡಾಯವಾಗಿ ಪ್ರತಿ 15 ದಿನಕ್ಕೊಮ್ಮೆ ಕೋವಿಡ್-19 ಪರೀಕ್ಷೆಯನ್ನು ಮಾಡಿಸಬೇಕೆಂದು ಸೂಚಿಸಿದರು.
ಇದನ್ನೂ ಓದಿ |“ರೈತರ ಹಿತ ಕಾಯಲು ಸರ್ಕಾರ ಮಧ್ಯ ಪ್ರವೇಶಿಸುವ ಅತ್ಯಗತ್ಯ” ಕಾರ್ಯಗಾರ
ಕೋಟ್ಪಾ ಸೆಕ್ಷನ್-4 ರ ಅಡಿಯಲ್ಲಿ ನಿಯಮ ಉಲ್ಲಂಘನೆಯ 23 ಪ್ರಕರಣಗಳಿಗೆ ರೂ. 2300, ಸೆಕ್ಷನ್-6ಎ ಅಡಿಯಲ್ಲಿ 2 ಪ್ರಕರಣಕ್ಕೆ ರೂ. 200 ಸೇರಿದಂತೆ ಒಟ್ಟು 25 ಪ್ರಕರಣಗಳಿಗೆ 2500 ರೂ ದಂಡ ವಸೂಲಾಗಿದೆ ಎಂದರು.
ದಾಳಿಯಲ್ಲಿ ಅಬಕಾರಿ ನಿರೀಕ್ಷಕ ವಿನೋದ್.ಬಿ ಕಾಳಪ್ಪಗೋಳ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತ ದೇವರಾಜ್.ಕೆ.ಪಿ, ಅಬಕಾರಿ ಇಲಾಖೆಯ ಸಬ್ಇನ್ಸ್ಪೆಕ್ಟರ್ ಶಂಕರಪ್ಪ, ಕಾನ್ಸ್ಟೇಬಲ್ ಶಿವರಾಜ್ ಪಾಟೀಲ್ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್7 days ago
ವೀರ್ಯಾಣು ಬಲವೃದ್ಧಿಗೆ ಇಲ್ಲಿವೆ ಉಪಾಯಗಳು..!
-
ಅಂತರಂಗ7 days ago
ಅನಾಥರನ್ನಾಗಿಸದ ಅಂತಿಮ ಸಂಗಾತಿ
-
ದಿನದ ಸುದ್ದಿ7 days ago
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ
-
ರಾಜಕೀಯ7 days ago
ಜನರನ್ನು ಕಷ್ಟಕ್ಕೆ ದೂಡಿ ಮೋದಿ ಸರ್ಕಾರ ಲಾಭಗಳಿಸುತ್ತಿದೆ : ಸೋನಿಯಾ ಗಾಂಧಿ ಕಿಡಿ
-
ಲೈಫ್ ಸ್ಟೈಲ್7 days ago
ಜಾನುವಾರುಗಳ ಲೋಹ ಕಾಯಿಲೆ
-
ದಿನದ ಸುದ್ದಿ6 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ಲೈಫ್ ಸ್ಟೈಲ್5 days ago
ಏನಿದು ? ಗಡಿಮಾರಿ..!
-
ದಿನದ ಸುದ್ದಿ6 days ago
ಚನ್ನಗಿರಿ | ಲಂಚ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿಗೆ 2 ವರ್ಷ ಜೈಲು