Connect with us

ದಿನದ ಸುದ್ದಿ

ಆತ್ಮಕತೆ | ಮಗು : ಆತಂಕದ ಕ್ಷಣಗಳು

Published

on

ಪತ್ನಿ ಗಾಯತ್ರಿ ಹಾಗೂ ಮಗ ಶಿಶಿರನೊಂದಿಗೆ ಲೇಖಕ ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ದುವೆಯಾಗಿ 1-2 ವರ‍್ಷ ಮಕ್ಕಳ ಕನಸು ಬೇಡ ಎಂದು ಯೋಚಿಸಿದ್ದರೂ ಅದೇನು ಸಫಲವಾಗದೆ ನನ್ನ ಮಗ ಶಿಶಿರ ಆಗಮಿಸಿದ್ದ.

ಭದ್ರಾವತಿಯಲ್ಲಿ ಇಂದಿರಾ ಅವರ ಮನೆಗೆ ಹೋಗಿ ಅಲ್ಲಿಂದ ಲೇಡಿ ಡಾಕ್ಟರ್ ಬಳಿ ಹೋಗಿ ತಪಾಸಣೆ ಮಾಡಿಸಿದೆವು. ನಮ್ಮಿಬ್ಬರ ರಕ್ತದ ಗುಂಪು ಆರ್‌ಹೆಚ್ ಪಾಸಿಟಿವ್ ನೆಗೆಟಿವ್‌ಗಳಾಗಿದ್ದು ನೀವು ರ‍್ಭಿಣಿ ಆಗಲು ಸಾಧ್ಯವಿಲ್ಲ. ಇದೆಲ್ಲ ಹೇಗಾಯಿತೆಂಬ ಅಭಿಪ್ರಾಯ ತಿಳಿಸಿ, ನಮಗೆ ದಿಗಿಲು ಬೀಳುವಂತೆ ವಿವರಿಸಿದ್ದಳು. ನಮಗಾರಿಗೂ ಬೇರೆ ಡಾಕ್ಟರ್ ಪರಿಚಯವಿಲ್ಲದೆ ಇರುವಾಗ ಡಾ. ಹೆಚ್. ಶಿವರಾಂ ಅವರು ಮೆಗ್ಗಾನ್ ಹಾಸ್ಪಿಟಲ್‌ನಲ್ಲಿ ಜನರಲ್ ಫಿಜಿಸಿಯನ್ ಆಗಿ ಇರುವುದು ತಿಳಿಯಿತು.

ಶಿವರಾಂ ಡಾಕ್ಟರ್ ನಮಗೆ ಮೈಸೂರಿನಲ್ಲಿರುವಾಗ ಎಸ್‌ವೈಎಸ್ ರ‍್ಯಕ್ರಮಗಳ ಹುಡುಗರ ಆರೋಗ್ಯ ಸಮಸ್ಯೆ ಬಂದಾಗ ಉಪಚರಿಸುತ್ತಿದ್ದರು. ಡಾ. ಶಿವರಾಂ ಅವರು ಹಾಸನ ಜಿಲ್ಲೆಯ ಸಕಲೇಶಪುರದ ಹಾನಬಾಳ್ ಗ್ರಾಮದವರು. ಶಿವರಾಂ ಅವರಿಗೆ ರ‍್ಣಚಂದ್ರ ತೇಜಸ್ವಿ, ಕಡಿದಾಳ್ ಶಾಮಣ್ಣ, ಸುಂದರೇಶ್, ರವರ‍್ಮಕುಮಾರ್ ಇವರೆಲ್ಲ ಪರಿಚಯವಿದ್ದವರು. ಮತ್ತು ನನಗೆ ಮೈಸೂರಿನಲ್ಲಿ ಓದುವಾಗಲೇ ಪರಿಚಯವಾಗಿದ್ದರು. ನಾನು ಮೈಸೂರು ಮಹಾರಾಜಾ ಕಾಲೇಜಿನಿಂದ ಬಿಆರ್‌ಪಿಗೆ ಬಂದದ್ದು, ನಂತರ ಮದುವೆಯಾದದ್ದು ಈಗ ನನ್ನ ಹೆಂಡತಿ ಗರ‍್ಭಿಣಿ ಆಗಿರುವ ಸುದ್ದಿ ತಿಳಿದು ಸಂತೋಷಗೊಂಡರು. ನಂತರ ಗಾಯತ್ರಿ ಭದ್ರಾವತಿಯ ಲೇಡಿ ಡಾಕ್ಟರ್ ಹೇಳಿದ ವಿಚಾರ ತಿಳಿಸಿದೆ.

ಅವರು ತಪಾಸಣೆ ನಡೆಸಿ ಇದೆಲ್ಲ ಏನೂ ಇಲ್ಲ ಇಡೀ ಏಶಿಯಾ ಖಂಡದಲ್ಲಿ ಶೇ 15ರಷ್ಟು ಜನರು ಆರ್‌ಹೆಚ್ ಪಾಸಿಟಿವ್ ನೆಗಟಿವ್ ಸಮಸ್ಯೆ ಇರುವವರು, ಅದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ ಎಂದು ಹೇಳಿ ಆಗ ಗೈನಾಕಾಲಜಿಸ್ಟ್ ಆಗಿದ್ದ ಡಾ. ಮುರುಗೇಂದ್ರಪ್ಪ ಅವರಿಗೆ ರೆಫರ್ ಮಾಡಿ ತಪಾಸಣೆ ನಡೆಸಿದ ನಂತರ ಕೆಲವು ಸಲಹೆ ನೀಡಿದರು. ಕೆಲವು ದಿನ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ ಮೇರೆಗೆ ನಾವಿಬ್ಬರೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂತು. ಈ ಸಮಯದಲ್ಲಿ ಗಾಯತ್ರಿಗೆ ಹಾಲು ಮೆತ್ತನೆ ಅನ್ನ ಬಿಟ್ಟರೆ ಬೇರೇನೂ ಪಥ್ಯ ಹೇಳಿರಲಿಲ್ಲ. ನಾವು ಅದಕ್ಕಾಗಿ ಒಂದು ಸ್ಟವ್ ತಂದು ಅನ್ನ ಮತ್ತು ಹಾಲನ್ನು ನಮಗೆ ನೀಡಿದ ರೂಂನಲ್ಲಿಯೇ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ನನಗೆ ಇಂದಿರಾ ಮತ್ತವರ ಸ್ನೇಹಿತರಾದ ಸಾಕಮ್ಮ ಹಾಗೂ ಎಂ.ಬಿ. ನಟರಾಜ್ ಅವರ ಪತ್ನಿ ಲಕ್ಷ್ಮಿ ಇವರುಗಳ ಮನೆಯಿಂದ ಚೆನ್ನಾಗಿರುವ ಊಟ ಬರುತ್ತಿತ್ತು. ಜೊತೆಗೆ ಶಿವರಾಂ ಅವರ ನಿವಾಸ ಕೂಡ ಆಸ್ಪತ್ರೆ ಹತ್ತಿರವಿತ್ತು. ನನಗೆ ಅವರ ಮನೆಗೆ ಹೋಗಿ ಊಟ ಮಾಡಿಕೊಂಡು ಬರಲು ಶಿವರಾಂ ಡಾಕ್ಟರ್ ಹೇಳುತ್ತಿದ್ದರು.

ಶಿವರಾಂ ಅವರ ಶ್ರೀಮತಿ ಆಶಾ, ಅತ್ತೆ ಶಾರದಮ್ಮ ಮತ್ತವರ ತಾಯಿ ತಂದೆ ಕೂಡ ಮನೆಯಲ್ಲೇ ಇದ್ದರು. ಅವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದರು. ಶಿವರಾಂ ಅವರ ಮಾವ ಸ್ವಾತಂತ್ರ್ಯ ಹೋರಾಟಗಾರರು. ರೈತ ಸಂಘದಲ್ಲಿ ಸಕ್ರಿಯ ನಾಯಕರಾಗಿದ್ದರು. ಈ ಎಲ್ಲರ ಪರಿಚಯದಿಂದಾಗಿ ನನಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯತ್ರಿಯ ಆರೋಗ್ಯ ತಪಾಸಣೆ ಸಮಯದಲ್ಲಿ ಇದ್ದ ಆತಂಕ ದೂರವಾಗಿತ್ತು. ಪ್ರಭು ಜೊತೆಗೆ, ದಿವಾಕರ ಹೆಗ್ಗಡೆ ಆಗ ತಾನೆ ತನ್ನ ಪುಸ್ತಕದ ಅಂಗಡಿ ತೆರೆದುಕೊಂಡಿದ್ದರು. ಜೊತೆಗೆ ಲಂಕೇಶ್ ಪತ್ರಿಕೆಯ ವರದಿಗಾರನೂ ಆಗಿ ಶಿವಮೊಗ್ಗದಲ್ಲಿದ್ದರು. ನಾನು ಬಿಆರ್‌ಪಿಯಿಂದ ಊರಿಗೆ ಬರುವಾಗಲೆಲ್ಲ ನನ್ನ ಲಗ್ಗೇಜನ್ನು ಹೆಗ್ಗಡೆ ಬುಕ್ ಸ್ಟಾಲ್‌ನಲ್ಲಿಟ್ಟು ಪ್ರಭು ಜೊತೆ ಮಾತಾಡಿಕೊಂಡು ರಾತ್ರಿ ಬಿಆರ್‌ಪಿಗೆ ಹೋಗುತ್ತಿದ್ದೆ. ಹಾಗಾಗಿ ಶಿವಮೊಗ್ಗದಲ್ಲಿದ್ದ ಪ್ರಭು, ಮಂಜಪ್ಪ, ದಿವಾಕರ, ಹೆಗ್ಗಡೆ, ಡಾ. ಶಿವರಾಂ, ಎಂ.ಬಿ. ನಟರಾಜ್ ಇವರೆಲ್ಲರ ಒಡನಾಟದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯತ್ರಿ ವಿಶ್ರಾಂತಿಯಲ್ಲಿದ್ದಾಗ, ನನಗಿದ್ದ ಗೆಳೆಯರ ಸಹಾಯದಿಂದ ನಾವು ನಾವೇ ನಿಭಾಯಿಸಿಕೊಂಡೆವು. ಇಂತಹ ಸರ‍್ಭಗಳಲ್ಲಿ ಹೆಣ್ಣು ಮಕ್ಕಳಿಗೆ ಏಕಾಂಗಿತನ ಮತ್ತು ತೌರ ಮನೆ ಕಾಡುತ್ತದೆ. ಆದರೆ ಎರಡೂ ಕಡೆಯಿಂದ ನಮಗೆ ಸಾನ್ನಿಧ್ಯದ ಅನುಕೂಲ ಪಡೆಯುವ ಅವಕಾಶವಾಗಲಿಲ್ಲ. ಇದ್ದ ಸ್ನೇಹ ಬಳಗವೇ ಈ ಎಲ್ಲ ಕೊರತೆಯನ್ನು ನಮಗೆ ಪೂರೈಸಿತ್ತು.

ಆ ನಂತರ ಪ್ರತಿ ತಿಂಗಳೂ ತಪಾಸಣೆ ಮತ್ತು ಶುಶ್ರೂಷೆಯ ನಂತರ 3-4 ದಿನ ಮುಂಚಿತವಾಗಿ ಹೆರಿಗೆಗೆ ಬರಬೇಕೆಂದು ಸೂಚಿಸಿದ್ದರು. ಅದರಂತೆ ಹೋಗಿ ಆಸ್ಪತ್ರೆ ಸೇರಿದ್ದೆವು. ನಾವು ಆಸ್ಪತ್ರೆಯಲ್ಲಿ ಇದ್ದಾಗ ಡಾ. ಶಿವರಾಂ ಅವರು ನಮ್ಮಿಬ್ಬರನ್ನು ಸಂಜೆ ಊಟಕ್ಕೆ ಮನೆಗೆ ಆಹ್ವಾನಿಸಿದ್ದರು. ಅವರದು ತುಂಬಿದ ಮನೆಯಾಗಿತ್ತು. ಬಸುರಿ ಹೆಂಗಸೆAದು ಡಾ. ಶಿವರಾಂ ಅವರ ಹೆಂಡತಿ ಆಶಾ ಮತ್ತು ಅವರ ತಾಯಿ ಶಾರದಮ್ಮನವರು ವಿಶೇಷ ಅಡುಗೆ ಮಾಡಿ ಅಕ್ಕರೆಯಿಂದ ಆದರಿಸುತ್ತಿದ್ದರು. ಅಂದು ಸಂಜೆ ಅವಳಿನ್ನೂ ರ‍್ತಿ ಊಟ ಮುಗಿಸುವ ಮುಂಚೆಯೇ ಹೆರಿಗೆ ನೋವು ಕಾಣಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಡಾ. ಶಿವರಾಂ ಅವರು ದಾಖಲು ಮಾಡಿಸಿದರು. ಇಡೀ ರಾತ್ರಿ ಹೆರಿಗೆ ರ‍್ಡ್ ಒಳಗೆ ಇದ್ದ ಗಾಯತ್ರಿಗೆ ಮಾರನೆ ದಿನ ಮಧ್ಯಾಹ್ನವಾದರೂ ಹೆರಿಗೆ ಆಗಿರಲಿಲ್ಲ. ನಾನು ಹೊರಗಡೆ ಇದ್ದ ಬೆಂಚ್ ಮೇಲೆ ಕೂತು ಕಾಯುತ್ತಿದ್ದೆ. ಪ್ರಭು ಫ್ರೆಂಡ್ ಶಶಿ ಮೂಲಕ ಭದ್ರಾವತಿಗೆ ಹೋಗಿ ಇಂದಿರಾ ಅವರನ್ನು ಕರೆದುಕೊಂಡು ಬರಲು ಕಳಿಸಿದ್ದೆ. ಅವರು ಆಫೀಸಿಗೆ ರಜೆ ಹಾಕಿ ಬರುವ ಸಮಯಕ್ಕಾಗಲೇ ಗಾಯತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ದಿನಾಂಕ 11-03-81ಸಂಜೆ 4ಗಂಟೆ ಸುಮಾರಿಗೆ ಗಂಡು ಮಗು ಜನನವಾಗಿತ್ತು. ಡಾ. ಶಿವರಾಂ ಮನೆಯ ಇಬ್ಬರು ಮಕ್ಕಳು ಸೇರಿದಂತೆ ಎಲ್ಲರೂ ಬಂದು ನೋಡಿ ಸಂತಸಪಟ್ಟರು. ಮಗುವಿನ ಬೆಳವಣಿಗೆ ಹೆಚ್ಚಾಗಿದ್ದ ಕಾರಣ ಈoಡಿಛಿeಠಿs ಮುಖಾಂತರ ಮಗುವನ್ನು ಹೊರತೆಗೆಯಬೇಕಾಯಿತು ಎಂದು ಡಾಕ್ಟರ್ ಹೇಳಿದರು. ಭದ್ರಾವತಿಯಿಂದ ಬಂದ ಇಂದಿರಾ ಕೂಡಲೆ ರ‍್ಣ ಜವಾಬ್ದಾರಿ ತೆಗೆದುಕೊಂಡು, ಅಲ್ಲಿಂದ ಅವರ ಮನೆಗೆ ಕರೆದುಕೊಂಡು ಹೋಗಿ ಒಂದು ತಿಂಗಳ ಕಾಲ ಬಾಣಂತನ ಮಾಡಿ ಬಿ.ಆರ್.ಪಿಗೆ ನಾವು ಬರುವವರೆಗೆ ಮಗು ಬಾಣಂತಿಯನ್ನು ನೋಡಿಕೊಂಡದ್ದು ಮರೆಯಲಾಗದ ಘಟನೆಯಾಗಿ ಉಳಿದಿದೆ.

ಭದ್ರಾವತಿಗೆ ಮಗು ಬಾಣಂತಿ ಕೃಷ್ಣಪ್ಪನವರ ಮನೆಗೆ ಹೋಗಿ ಉಳಿದಿದ್ದೆವು. ಮಗುವಿನ ಬಾಣಂತನ ಆರೈಕೆಯನ್ನು ಮಾಡಲು ಶಿವಮೊಗ್ಗ ಮುನೀರ್ ಅವರ ತಾಯಿ ಬಚ್ಚಿಮ್ಮ ಅವರು ರ‍್ಕಾರಿ ಆಸ್ಟತ್ರೆಯಲ್ಲಿ ರ‍್ಸ ಆಗಿದ್ದವರು. ಅವರು ಬೆಳಿಗ್ಗೆ ಮತ್ತು ಸಂಜೆ ಬಂದು ಸಹಾಯ ಮಾಡುತ್ತಿದ್ದರು. ಇಂದಿರಾ ಬೆಳಿಗ್ಗೆ ಬಾಣಂತಿಗೆ ಮತ್ತು ಮತ್ತೆಲ್ಲರಿಗೂ ಅಡುಗೆ ಮಾಡಿಟ್ಟು ಆಫೀಸಿಗೆ ಹೋಗುತ್ತಿದ್ದರು. ಗಾಯತ್ರಿ ಮೌಖಿಕವಾಗಿ ಅವಳೇನು ಹೇಳದಿದ್ದರೂ ಭಾವನಾತ್ಮಕವಾಗಿ ಅವಳಿಗೆ ಬಹಳ ಕಷ್ಟದ ದಿನಗಳಾಗಿದ್ದವು. ಅವನ್ನೆಲ್ಲ ಮಗುವಿನ ಮುಖ ನೋಡಿಕೊಂಡು ಬಚ್ಚಿಮ್ಮನ ಶುಶ್ರೂಷೆಯಲ್ಲಿ ಕಾಲ ಹಾಕುತ್ತಿದ್ದಳು. ನಾನು ಕೂಡ ಮಗುವಿಗೆ ಎಣ್ಣೆ ಹಚ್ಚಿ ಬಿಸಿನೀರ ಸ್ನಾನ ಮಾಡಿಸುವುದನ್ನು ಬಚ್ಚಿಮ್ಮನಿಂದ ವಿಶೇಷವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಒಂದು ತಿಂಗಳ ನಂತರ ಬಿಆರ್‌ಪಿಯ ಮನೆಗೆ ಬಂದಿದ್ದೆವು. ಈ ನಡುವೆ ಮಾಧ್ಯಮಿಕ ತರಗತಿಯಲ್ಲಿ ಓದುತ್ತಿದ್ದ ನನ್ನ ತಂಗಿಯನ್ನು ಕರೆತಂದು ಬಿಆರ್‌ಪಿಯಲ್ಲಿ ಶಾಲೆಗೆ ಸೇರಿಸಿದ್ದೆ. ನಾವು ಬಿಆರ್‌ಪಿಗೆ ಬಂದ ಮೇಲೆ ಊರಿನಿಂದ ಅವ್ವ ಕೂಡ ಬಂದು ಸ್ವಲ್ಪ ದಿನ ಬಾಣಂತನ ಮಾಡುವ ಶಾಸ್ತ್ರ ಮಾಡಿದ್ದಳು.

ಆ ನಂತರ ಮೂರು ತಿಂಗಳಲ್ಲಿ ಮಗುವಿಗೆ ನಾಮಕರಣ ಮಾಡುವ ಸಣ್ಣ ಸಮಾರಂಭವನ್ನು ರ‍್ಪಡಿಸಿದ್ದೆವು. ಆಗ ಇಂದಿರಾ – ಕೃಷ್ಣಪ್ಪನವರು ಸೇರಿದಂತೆ ಬಿಆರ್‌ಪಿಯಲ್ಲಿನ ಕೇಶವರ‍್ತಿ, ಪ್ರಭು, ಗ್ರಂಥಪಾಲಕರಾಗಿದ್ದ ರಾಮಕೃಷ್ಣಗೌಡ ಇನ್ನೂ ಅನೇಕರು ಭಾಗವಹಿಸಿ ಶಿಶಿರ ಎಂದು ಹೆಸರಿಟ್ಟು ಸಂಭ್ರಮ ಪಟ್ಟೆವು. ಮಗುವಿಗೆ 3 ತಿಂಗಳು ಮುಗಿದ ನಂತರ ನಮ್ಮ ಮನೆ ಹತ್ತಿರದಲ್ಲೇ ಇದ್ದ ಅರವಿಂದ ಆಶ್ರಮದವರು ನಡೆಸುತ್ತಿದ್ದ ಪ್ರಾಥಮಿಕ ಶಾಲೆಗೆ ಗಾಯತ್ರಿ ಟೀಚರ್ ಆಗಿ ಸೇರಿಕೊಂಡಳು. ಶಿಶಿರನನ್ನು ಬೆಳಿಗ್ಗೆ ಸ್ನಾನ ಮಾಡಿಸಿ ತಿಂಡಿ ತಿನಿಸಿದ್ದು ಬಿಟ್ಟರೆ ಅವನನ್ನು ನಮ್ಮ ಇಡೀ ಬೀದಿಯಲ್ಲಿರುವವರು ಎತ್ತಿಕೊಂಡು ಹೋಗಿ ಊಟ ನಿದ್ದೆ ಮಾಡಿಸಿಕೊಂಡು ಸಂಜೆಗೆ ಮನೆಗೆ ತಂದು ಬಿಡುತ್ತಿದ್ದರು. ಅವನ ಆಗಮನದಿಂದ ನಮಗಿದ್ದ ಪ್ರತ್ಯೇಕತೆ ಕಳೆದು ಎಲ್ಲರೂ ನಮ್ಮನ್ನು `ಬುಡ್ಲ್ಲಿ’ ಅಪ್ಪ ಅಮ್ಮ ಎಂದು ಮಕ್ಕಳು, ದೊಡ್ಡವರು ಹೊರಗಡೆ ಹೋದಾಗ ಗುರುತಿಸಿ ಮಾತಾಡುವಂತಾಗಿತ್ತು. ನಮಗಿಂತಲೂ `ಬುಡ್ಲಿ’ಗೆ ಹೆಚ್ಚು ಪರಿಚಯದ ಹುಡುಗರ ದಂಡು ಸೃಷ್ಟಿಯಾಗಿತ್ತು. ಇನ್ನು ಇವಳು ಟೀಚರ್ ಕೆಲಸದಿಂದ ನನ್ನ ರ‍್ಥಿಕ ಸಂಕಷ್ಟಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾದವು. ನಾನು ಮಾಡಿಕೊಂಡಿದ್ದ 15 ಸಾವಿರ ಸಾಲಕ್ಕೂ ನನಗೆ ವಿಶ್ವವಿದ್ಯಾಲಯದಿಂದ ಬರಬೇಕಾಗಿದ್ದ ಅರರ‍್ಸ್ ಬಂದು ನನ್ನ ಎಲ್ಲ ಸಾಲವನ್ನು ತೀರಿಸಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು.

ನಾನು ಕೆಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡದ್ದು ಮೊದಲೇ ಹೇಳಿದ್ದೇನೆ. ಅದರ ಪರೀಕ್ಷೆ ಬರೆಯಲು ಮೈಸೂರನ್ನು ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿದ್ದ ಕಾರಣ 1981ರಲ್ಲೇ ಮೈಸೂರಿಗೆ ಹೋಗಿ ಸುಮಾರು 15 ದಿನಗಳ ರಜೆ ಹಾಕಿ ಪರೀಕ್ಷೆ ಬರೆದೆ. ಆ ಸಮಯದಲ್ಲಿ ರೊಟ್ಟಿ, ಚಟ್ನಿ ಪುಡಿ, ಪುಳಿಯೋಗರೆ ವಾರಕ್ಕೂ ಹೆಚ್ಚು ಆಗುವಷ್ಟನ್ನು ಮಾಡಿಕೊಂಡು ಗಂಗೋತ್ರಿಯಲ್ಲಿರುವ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ನಾವು ಮೂವರೂ ಉಳಿಯುತ್ತಿದ್ದೆವು. ನಾನು ಪರೀಕ್ಷೆಗೆ ಹೋದಾಗ ಗಾಯತ್ರಿ ಶಿಶಿರ ಇಬ್ಬರೇ ಅಲ್ಲಿರುವ ಗಿಡಮರಗಳನ್ನು ನೋಡುತ್ತಾ ಇರುತ್ತಿದ್ದರು.

ಈ ಸಮಯದಲ್ಲಿ ದೇವಯ್ಯ ಹರವೆ ಮೈಸೂರಿನಲ್ಲಿ ಮಾನಸ ಗಂಗೋತ್ರಿಯಲ್ಲಿ ಕನ್ನಡ ಅಧ್ಯಾಪಕನಾಗಿದ್ದು, ಡಿ.ಎಸ್.ಎಸ್. ಸ್ಥಾಪಕ ಸದಸ್ಯರುಗಳ ಜೊತೆ ಗಟ್ಟಿ ದನಿಯಾಗಿದ್ದರು. ನಾನು ಇರುವ ಸುದ್ದಿ ತಿಳಿದು ನಮ್ಮ ಗೆಸ್ಟ್ಹೌಸ್‌ಗೆ ಬಂದು ಪುಳಿಯೋಗರೆ ತಿಂದು `ಗಾಯತ್ರಮ್ಮ, ಎಲ್ಲಾ ಪುಳಿಯೋಗರೆ ನನಗೆ ಕೊಡಿ ರುದ್ರಣ್ಣನಿಗೆ ನಾನು ಬಿಸಿ ಮಾಂಸದೂಟ ಮಾಡಿಸುವೆ’ ಎಂದು ಹೇಳಿ ನಮ್ಮೆಲ್ಲರನ್ನು ತನ್ನ ಮನೆಗೂ ಕರೆದುಕೊಂಡು ಹೋಗಿದ್ದ. ದೇವಯ್ಯ ಹರವೆ ಮತ್ತು ಪುಷ್ಪ ನಮಗೆ ಆಗ ಪರಿಚಯವಾಗಿ ನಂತರದ ದಿನಗಳಲ್ಲಿ ಅವರ ಮನೆಗೆ ಪುಳಿಯೋಗರೆಯೊಡನೆ ಆಗಾಗ ಹೋಗಿ ಬರುತ್ತಿದ್ದೆವು.
ಬುಡ್ಲಿಯನ್ನು ನೋಡುವ ನೆಪದಲ್ಲಿ ವಿಶಾಖಪಟ್ಟಣದಲ್ಲಿದ್ದ ಗಾಯತ್ರಿಯ ದೊಡ್ಡ ಅಕ್ಕ ಶಕುಂತಲಾರ‍್ತಿ ಮತ್ತು ಅವರ ಹಿರಿಯ ಮಗಳಾದ ಮೀನಾ ಬಿಆರ್‌ಪಿಗೆ ಬಂದು ಒಂದು ದಿನ ಉಳಿದು ನಂತರ ನರಸಿಂಹರಾಜಪುರಕ್ಕೆ ಹೋಗಿದ್ದರು. ಆಗ ಅವರಿಂದ ಗಾಯತ್ರಿ ತಂದೆ ತಾಯಿ ಇಬ್ಬರಿಗೂ ನಾವಿಬ್ಬರು ಮತ್ತು `ಬುಡ್ಲಿ’ ಆರಾಮವಾಗಿ ಇರುವುದಾಗಿಯೂ ಮತ್ತು ಅವರಿವರು ತೇಲಿ ಬಿಡುತ್ತಿದ್ದ ಸುಳ್ಳಿನ ಸುದ್ದಿಗಳಲ್ಲಿ ಸತ್ಯಾಂಶವಿಲ್ಲವೆAದು ತಿಳಿಸಿ, ಅವರಿಗೆ ನಮ್ಮ ಮದುವೆಯ ಘಟನೆಯ ನಂತರ ಸ್ವಲ್ಪಮಟ್ಟಿನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು.

ಕೃಷ್ಣಪ್ಪನವರು ಎಸ್‌ವೈಎಸ್ ಸಂಘಟನೆಯಲ್ಲಿ 1970ರ ದಶಕದ ಪ್ರಾರಂಭದಿAದ ಇದ್ದರೂ, ಕ್ರಮೇಣ ದಲಿತರ ಸಮಸ್ಯೆಗಳಿಗೆ ಪ್ರತ್ಯೇಕ ಸಂಘಟನೆಯ ಅವಶ್ಯಕತೆ ಕಂಡುಕೊAಡು ಭದ್ರಾವತಿಯಲ್ಲಿ ರಾಜ್ಯ ಮಟ್ಟದ ಜಾತಿ ವಿನಾಶ ಸಮ್ಮೇಳನ ಆಯೋಜಿಸಿದ್ದರು. ಭದ್ರಾವತಿಯಲ್ಲಿ ಆಗಿನ ಕೃಷ್ಣಪ್ಪನವರ ತಂಡದಲ್ಲಿ, ಎನ್. ಗಿರಿಯಪ್ಪ, ಟಿ. ರಾಜಣ್ಣ, ಹಾಲಯ್ಯ, ನರಸಿಂಹಯ್ಯ, ಚನ್ನಕೇಶವ, ಗಂಗಣ್ಣ, ಶಿವಲಿಂಗ, ಚಂದ್ರನ್, ಅತ್ತಿಗುಂದ ಕರಿಯಪ್ಪ, ಮಹಾಲಿಂಗರ‍್ತಿ ಜಿ., ಎಂಪಿಎಂನ ಕೃಷ್ಣರ‍್ತಿ ಇವರೆಲ್ಲ ಆಪ್ತ ವಲಯದಲ್ಲಿದ್ದು ಏನೇ ಹೋರಾಟದ ಕರೆ ಕೊಟ್ಟಾಗ ಬಂದು ಸೇರುತ್ತಿದ್ದರು.

ಇತರ ಮಿತ್ರ ಪಡೆ ಭದ್ರಾವತಿಯಲ್ಲಿ ದೊಡ್ಡದಿತ್ತು. ವಕೀಲ ನಾಗೇಂದ್ರರಾವ್, ಪ್ರೊ. ಚಂದ್ರಶೇಖರಯ್ಯ, ಬಿ. ರಾಜಣ್ಣ, ಶಿವಮೊಗ್ಗದ ಮುನೀರ್, ಸಾಸ್ವೆಹಳ್ಳಿ ಹಾಲಪ್ಪ, ಎಂ.ಎಲ್. ನಾಗಭೂಷಣ, ವೈ.ಎನ್. ಆಚಾರ್, ಶಿವಪ್ರಸಾದ್ (ವಿಐಎಸ್‌ಎಲ್), ಚಂದ್ರಪ್ರಸಾದ್ ತ್ಯಾಗಿ, ನಿಸಾರ್ ಅಹಮದ್, ರಾಚಪ್ಪ ಹೆಚ್, ವಾಗೀಶ್, ರಾಘವೇಂದ್ರ ರಾವ್ (ದಲಿತರ ಪರ ವಕೀಲರಾಗಿ ಮೊಕದ್ದಮೆಗಳನ್ನು ನಡೆಸುತ್ತಿದ್ದರು) ಇದ್ದರು. ಮಾದೇವ, ಸಿದ್ದಲಿಂಗಯ್ಯ, ವೆಂಕಟಸ್ವಾಮಿ, ಮುನಿವೆಂಕಟಪ್ಪ, ನಾರಾಯಣಸ್ವಾಮಿ, ದಿವಾಕರ ಹೆಗ್ಗಡೆ, ಎಂ.ಬಿ. ನಟರಾಜ್, ಸತ್ಯನಾರಾಯಣರಾವ್ ಅಣತಿ, ಚನ್ನಣ್ಣ ವಾಲೀಕಾರ, ದೇವಯ್ಯ ಹರವೆ ಇನ್ನು ಅನೇಕರು ರಾಜ್ಯದಾದ್ಯಂತ ಚೆದುರಿದ್ದ ಕೃಷ್ಣಪ್ಪನವರ ಹೋರಾಟದ ಸಂಗಾತಿಗಳಾಗಿದ್ದರು.

ಇವರೆಲ್ಲರ ಸಮಾಗಮವೆಂಬಂತೆ ಬಿಆರ್‌ಪಿಯಲ್ಲಿರುವ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳ ದಲಿತ ಸರ‍್ಷ ಸಮಿತಿಯ ತರಬೇತಿ ಶಿಬಿರವನ್ನು ಆಯೋಜಿಸಿದ್ದರು. ಆಗ ಬಂದ ಸಂಘಟಕರಿಗೆ ಊಟ ವಸತಿ ಮತ್ತು ಬಸ್ ರ‍್ಜ್ ಹೊಂದಿಸುವಲ್ಲಿ ಕೃಷ್ಣಪ್ಪನವರು ಪಡುತ್ತಿದ್ದ ಪಾಡನ್ನು ಬೇರೆ ಯಾವ ದಲಿತ ಸಂಘಟಕರು ಅನುಭವಿಸಿಲ್ಲ. ನಾನು ಮತ್ತು ನಮ್ಮಲ್ಲಿನ ಪ್ರಗತಿಪರ ಅಧ್ಯಾಪಕರು, ಸಹೋದ್ಯೋಗಿಗಳು ಸೇರಿ ಸ್ವಲ್ಪ ಹಣ ಸಂಗ್ರಹಿಸಿಕೊಟ್ಟಿದ್ದೆವು. ಅಲ್ಲಲ್ಲೆ ಪ್ರಗತಿಪರವಾಗಿ ಬರೆದುಕೊಂಡು ಹೋರಾಟಗಳನ್ನು ಮಾಡುತ್ತಿದ್ದ ದಲಿತರು ಅಂಬೇಡ್ಕರ್ ಸಿದ್ಧಾಂತದ ಗಟ್ಟಿ ನೆಲೆಯಲ್ಲಿ ಆತ್ಮೀಯ ಸಂಬಂಧಿಕರಂತೆ ಕೃಷ್ಣಪ್ಪನವರ ಸುತ್ತ ಒಟ್ಟುಗೂಡಿ ಇಂತಹ ಸಮಾವೇಶಗಳಲ್ಲಿ ಭಾಗವಹಿಸಿ ರ‍್ಚಿಸುತ್ತಿದ್ದರು.

ಬುಡ್ಲಿ ಬಂದ ನಂತರ, ಟೀಚರ್ ಕೆಲಸ ಸೇರಿದ ಗಾಯತ್ರಿ ಮನೆಯ ಹಿಂದೆ ಮುಂದೆ ಇದ್ದ ಜಾಗದಲ್ಲಿ ತರಕಾರಿ ಜೊತೆಗೆ ಇದ್ದ ಮಾವಿನ ಮರ ಮತ್ತು ದೊಡ್ಡ ನುಗ್ಗೆಮರ, ಸೀತಾಫಲದ ಮರಗಳನ್ನು ಸಂರಕ್ಷಿಸಿಕೊಂಡು ಸಾಕಷ್ಟು ಫಲ ಪಡೆಯುತ್ತಿದ್ದೆವು. ಬಂದ ಸಂಬಳದಲ್ಲಿ ಹತ್ತಿರದಲ್ಲಿದ್ದ ಲಕ್ಕವಳ್ಳಿಯಲ್ಲಿ ನಡೆಯುವ ಸಂತೆಗೆ ಹೋಗಿ ಅಗತ್ಯ ವಸ್ತುಗಳನ್ನು ವಾರಕ್ಕೊಮ್ಮೆ ಕೊಂಡು ಬರುತ್ತಿದ್ದೆವು. ಬಂದ ಎಲ್ಲ ಸಂಬಳದಲ್ಲಿ ದುಂದಾಗಿ ರ‍್ಚು ಮಾಡುತ್ತಾ ಉಳಿತಾಯ ಮತ್ತು ಅಚ್ಚುಕಟ್ಟುತನವಿಲ್ಲದೆ ಸ್ವಚ್ಛಂದವಾಗಿದ್ದ ನನಗೆ ಮದುವೆ ನಂತರ ಮಗು ಶಿಶಿರ ಬಂದು ಸಂಸಾರ ಜೀವನದ ಹೊಸ ಜೀವನಾನುಭವವನ್ನು ನೀಡಿತೆಂದೇ ಹೇಳಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.

ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ

Published

on

ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ‌ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ‌. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending