Connect with us

ದಿನದ ಸುದ್ದಿ

ದಾವಣಗೆರೆ | ಸೀಲ್‍ಡೌನ್ ಪ್ರದೇಶದ ಜನತೆಯ ಮನೆಗೆ ಪಡಿತರ ವಿತರಣೆ ; ಯಾರೂ ಹೊರಗೆ ಬರೋ ಹಾಗಿಲ್ಲ

Published

on

ಸುದ್ದಿದಿನ,ದಾವಣಗೆರೆ: ನಿಜಲಿಂಗಪ್ಪ ಲೇಔಟ್ ಕೊವೀಡ್-19 ಸೋಂಕಿತ ವ್ಯಕ್ತಿಯ ಮನೆಯ ಸುತ್ತ ಮುತ್ತಲಿನ 100 ಮೀಟರ್ ಪ್ರದೇಶವನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದ್ದು, ಅದನ್ನು ನಿಯಂತ್ರ್ರಿತ ಪ್ರದೇಶ ಎಂದು ಗುರುತಿಸಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರನ್ನು ಘಟಕ ನಿಯಂತ್ರಕರಾಗಿ (ಕಮಾಂಡರ್) ನಿಯೋಜನೆ ಮಾಡಲಾಗಿದೆ.

ಸೋಮವಾರ ದಾವಣಗೆರೆಯ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಘಟನಾ ಕಮಾಂಡರ್ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ನಿಯಂತ್ರಣ ವಲಯಕ್ಕೆ ಸಂಬಂದಿಸಿದಂತೆ ಯಾವರೀತಿ ಸಂಪೂರ್ಣ ಸೀಲ್‍ಡೌನ್ ನಿಯಮಾವಳಿಗಳನ್ನು ಅನುಸರಿಸಬೇಕು ಎಂಬವುದರ ಕುರಿತು ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಸಿಟಿವ್ ಪ್ರಕರಣ ಹೊಂದಿರುವ ಜಿಲ್ಲೆಗಳಲ್ಲಿ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದಿರುವ ಪ್ರದೇಶವನ್ನು ನಿಯಂತ್ರಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ ಈ ನಿಯಂತ್ರಿತ ಪ್ರದೇಶದಲ್ಲಿ ವಿವಿಧ ಇಲಾಖೆಗಳ ಪಾತ್ರ ಕುರಿತು ಯಾವರೀತಿ ಕಟ್ಟುನಿಟಿನ ಕ್ರಮಗಳನ್ನು ಕೈಗೊಳ್ಳಬೇಕು ಹೇಗೆ ನಿಯಂತ್ರಿಸಬೇಕು ಎಂದು ಚರ್ಚಿಸಿ, ಸೂಚನೆಗಳನ್ನು ನೀಡಿದರು.

ಪೊಲೀಸ್ ಇಲಾಖೆ : ನಿಯಂತ್ರಿತ ವಲಯದ ಎಲ್ಲಾ ಪ್ರವೇಶ ದ್ವಾರಗಳನ್ನು ಶಾಶ್ವತವಾಗಿ ತೆಡೆಗೋಡೆ ಹಾಕುವ ಮೂಲಕ ಪೊಲೀಸ್ ನಾಕಾಬಂಧಿ ಮಾಡಬೇಕು. ನಿಯಂತ್ರಿತ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಯಾವುದೇ ವಿವಿಧ ಉದ್ದೇಶಗಳಿಂದ ಮನೆಯಿಂದ ಹೊರೆಗೆ ಬರಲು ಅವಕಾಶ ನೀಡಬಾರದು ಪ್ರತಿಯೊಂದು ವಲಯದಲ್ಲಿ ಒಂದೇ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರವಿರಬೇಕು. ನಿಯಂತ್ರಿತ ವಲಯದ ಒಳಗೆ ಮತ್ತು ಹೊರಗೆ ಖಾಸಗಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಮತ್ತು ಅಗತ್ಯ ಸೇವೆಗಳು, ವೈದ್ಯಕೀಯ ತುರ್ತು ಸಂದರ್ಭಗಳಿಗೆ ಪೊಲೀಸ್ ಎಮರ್ಜೆನ್ಸಿ ಪಾಸ್‍ಗಳನ್ನು ನೀಡುವುದು. ನಿಯಂತ್ರಿತ ವಲಯದಲ್ಲಿ ಸಂಪೂರ್ಣ ಲಾಕ್‍ಡೌನ್ ಖಾತರಿ ಪಡಿಸಲು ಡ್ರೋನ್‍ಗಳನ್ನು ಬಳಸಬೇಕು ಎಂದರು.

ಆರೋಗ್ಯ ಇಲಾಖೆ : ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಜಂಟಿಯಗಿ ಮತ್ತು ಮುನ್ನೆಚ್ಚರಿಕೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ನಿಯಂತ್ರಿತ ವಲಯದಲ್ಲಿ ಆರೋಗ್ಯ ಔಟ್ ಪೋಸ್ಟ್ ಆರಂಭಿಸಿ ಓರ್ವ ವ್ಯೆದ್ಯ ಹಾಗೂ ಸತತ ಐಇಸಿ ಪ್ರಚಾರದ ಜೊತೆಗೆ ದಿನಕ್ಕೆ ಎರಡು ಭಾರಿ ಜನಸಂಪರ್ಕಗಳ ಪತ್ತೆ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು.

ಜನಸಂಪರ್ಕ ನಿಗಾ ಪತ್ತೆ ಕಾರ್ಯವನ್ನು ಶಿಷ್ಠಾಚಾರದ ನಿಯಮಗಳ ಪ್ರಕಾರ ನಡೆಸಬೇಕು ಹೆಚ್ಚಿನ ರಿಸ್ಕ್ ಸಂಪರ್ಕದ ವ್ಯಕ್ತಿಗಳನ್ನು ತಕ್ಷಣವೇ ಸಾಂಸ್ಥಿಕ ದಿಗ್ಬಂದನ ಕೇಂದ್ರಕ್ಕೆ ರವಾನಿಸುವ ಹಾಗೂ ಕಡಿಮೆ ಸಂಪರ್ಕದ ವ್ಯಕ್ತಿಗಳನ್ನು ಗೃಹ ದಿಗ್ಬಂದನಕ್ಕೆ ಒಳಪಡಿಸಬೇಕು ಅಧಿಕ ಅಪಾಯ ಮತ್ತು ಕಡಿಮೆ ಅಪಾಯವಿರುವ ವ್ಯಕ್ತಿಗಳಿಂದ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವ ಹೊಣೆಗಾರಿಕೆ ಆರೋಗ್ಯ ಇಲಾಖೆ ತಂಡದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಇಲಾಖೆಗಳು ಕ್ರಮ ವಹಿಸಬೇಕು ಎಂದರು.

ಮಹಾನಗರಪಾಲಿಕೆ : ನೈರ್ಮಲಿಕರಣದ ನಿರ್ವಹಣೆ ಮಾಡುವುದು ಪ್ರತಿದಿನವೂ ಘನತ್ಯಾಜ್ಯ ನಿರ್ವಹಣೆ ಮತ್ತು ಸೋಂಕು ನಿವಾರಣೆ ಮಾಡುವ ಕೆಲಸವನ್ನು ನಿರ್ವಹಿಸತಕ್ಕದ್ದು ಮತ್ತು ಕುಡಿಯುವ ನೀರಿನ ಸರಬರಾಜು ಮಾಡುವ ಕೆಲಸವನ್ನು ಮಾಡಬೇಕು ಅಗತ್ಯವಿರುವವರಿಗೆ ಆಹಾರ ಪೊಟ್ಟಣಗಳು ಮತ್ತು ಪಡಿತರವನ್ನು ಒದಗಿಸುವುದು ಮತ್ತು ಕಾರ್ಯನಿರ್ವಹಿಸಲು ಸರ್ಕಾರಿ ಗುರುತಿನ ಪತ್ರಗಳನ್ನು ಸಿಬ್ಬಂದಿಗೆ ನೀಡಬೇಕು. ಇವರನ್ನು ಹೊರತು ಪಡಿಸಿ ಬೇರೆಯವರಿಗೆ ಪ್ರವೇಶವನ್ನು ನಿರ್ಭಂದಿಸಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆ : ನಿಯಂತ್ರಿತ ವಲಯವನ್ನು ಸಂಪೂರ್ಣ ಸೀಲ್ ಮಾಡುವುದರರಿಂದ ಜನ ಮನೆಗಳಿಂದ ಯಾವ ಕಾರಣಕ್ಕೂ ಹೊರಗೆ ಬರುವಂತಿಲ್ಲ ಹಾಗೂ ಜನರಿಗೆ ಅಗತ್ಯ ವಸ್ತು ದಿನಸಿ ಪದಾರ್ಥಗಳು ಮಾಂಸ ಹಾಲು ಎಲ್.ಪಿ.ಜಿ. ಅನಿಲ ಔಷಧಿಗಳನ್ನು ಪೂರೈಸುವವರಿಗೆ ಪಾಸ್ ಕೊಡಬೇಕು ಅಗತ್ಯ ಸೇವೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಿಗಾವಹಿಸಬೇಕು ಮತ್ತು ಪಡಿತರ ಚೀಟಿ ಹೊಂದಿರುವವರಿಗೆ ನ್ಯಾಯಬೆಲೆ ಅಂಗಡಿಗಳು ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ನಗರ ಆರೋಗ್ಯ ಕುಟುಂಬ ಕಲ್ಯಾಣ ಕೇಂದ್ರದ ವೈದ್ಯರಾದ ಡಾ.ವೆಂಕಟೇಶ್, ಡಾ.ನಾಗರಾಜ್, ಡಾ. ಸುಧೀಂದ್ರ ಮಹಾನಗರ ಪಾಲಿಕೆ ಆರೋಗ್ಯ ನೀಕ್ಷಕರಾದ ರಾಜಪ್ಪ, ಮದುಶ್ರೀ, ಬಡಾವಣೆ ಪೊಲೀಸ್ ಠಾಣೆ ಎ.ಎಸ್.ಐ ಮಂಜುನಾಥ ಸ್ವಾಮಿ, ಕಂದಾಯ ಇಲಾಖೆ ಸಿಬ್ಬಂದಿ ಮಂಜುನಾಥ ಡಿ, ಅಂಜನಪ್ಪ ಮತ್ತು ಉಪೇಂದ್ರ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಜನಸಿರಿ ಫೌಂಡೇಶನ್ ವತಿಯಿಂದ ಕವಿಗಳ ಕಲರವ

Published

on

ಸುದ್ದಿದಿನ,ಬೆಂಗಳೂರು:ಫೆ 10 ರಂದು ಜನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ 21 ನಿಮಿಷಗಳಲ್ಲಿ ರೈತರ ಕುರಿತು ಕವನ ರಚಿಸುವ ಬೃಹತ್ ಕಾರ್ಯ ಕ್ರಮವನ್ನು ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಉದ್ಘಾಟಿಸಿದರು.

ರಾಜ್ಯದ ನಾನಾ ಭಾಗಗಳಿಂದ ಸುಮಾರು 650 ಕ್ಕಿಂತ ಹೆಚ್ಚು ಕವಿಗಳು ಆಗಮಿಸಿ 21 ನಿಮಿಷಗಳಲ್ಲಿ ರೈತರ ಕುರಿತು ಕವನ ರಚಿಸಿದರು,ಇದೇ ಸಂಧರ್ಭದಲ್ಲಿ ಅನೇಕ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಮಾವಳ್ಳಿ ಶಂಕರ್,ಮಿಮಿಕ್ರಿ ಗೋಪಿ, ಜನಸಿರಿ ಫೌಂಡೇಶನ್ ಮುಖ್ಯಸ್ಥರಾದ ನಾಗಲೇಖ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತುಂಬಿದ ಕೊಡ ತುಳುಕಿತಲೇ ಪರಾಕ್..!

Published

on

  • ಗಿರೀಶ್ ಕುಮಾರ್ ಗೌಡ, ಬಳ್ಳಾರಿ

ತುಂಬಿದ ಕೊಡ ತುಳುಕಿತಲೇ ಪರಾಕ್” ಎಂದು ಕಾರ್ಣಿಕ ನುಡಿದ ಗೊರವಯ್ಯ, ಅದು ಮೈಲಾರ ಕೋಟ್ಯಾಂತರ ಭಕ್ತರ ಆರಾಧ್ಯದೈವ ಮೈಲಾರ ಲಿಂಗನ ಪುಣ್ಯ ಕ್ಷೇತ್ರ. ಈ ಪುಣ್ಯ ಕ್ಷೇತ್ರ ಪ್ರತಿ ವರ್ಷ ಕಾರ್ಣಿಕ ನುಡಿಗೆ ರಾಜ್ಯಾದ್ಯಂತ ಫೇಮಸ್. ನುಡಿ ಆಲಿಸಲು ಲಕ್ಷಾಂತರ ಜನ್ರು ಅಲ್ಲಿಗೆ ಆಗಮಿಸ್ತಾರೆ. ಇನ್ನು 18 ಅಡಿ ಬಿಲ್ಲನ್ನ ಏರಿ ಕಾರ್ಣಿಕ ನುಡಿ ನುಡಿಯುವ ಗೊರವಯ್ಯನ ನುಡಿಯನ್ನ ಮಳೆ, ಬೆಳೆ, ರಾಜಕೀಯ ಹೀಗೆ ಆಗು ಹೋಗಗಳ ಬಗ್ಗೆ ವಿಮರ್ಶೆ ಮಾಡ್ತಾರೆ ಹಾಗಾದ್ರೆ ಈ ವರ್ಷ ನುಡಿದ ಕಾರ್ಣಿಕ ನುಡಿ ಏನು…? ಅಂತಿರಾ ಈ ಸ್ಟೋರಿ ಓದಿ

ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಭವಿಷ್ಯ ನುಡಿದ ಗೊರವಯ್ಯ ಸದ್ದಲೇ ಎಂದು ಭವಿಷ್ಯವಾಣಿ ನುಡಿದ ಕಾರ್ಣಿಕದ ಗೊರವಯ್ಯ ರಾಮಣ್ಣ , 18 ಅಡಿ ಬಿಲ್ಲನ್ನು ಏರಿ ಕಾರ್ಣಿಕ ನುಡಿದು ಕೆಳಗೆ ಬಿದ್ದ ಗೊರವಯ್ಯ.

ತುಂಬಿದ ಕೊಡ ತುಳುಕಿತಲೇ ಪರಾಕ್… ಹೌದು ಇದು ಈ ವರ್ಷದ ಶ್ರೀ ಕ್ಷೇತ್ರ ಮೈಲಾರದ ಕಾರ್ಣಿಕ ( 2025 ರ ವರ್ಷ ಭವಿಷ್ಯ) ಅದು ಜಿಲ್ಲೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ. ಮೈಲಾರದ ಮೈಲಾರ ಲೀಂಗೆಶ್ವರನ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ. ಭರತ ಹುಣ್ಣಿಮೆಯ ಬಳಿಕ ಶ್ರೀ ಕ್ಷೇತ್ರ ಮೈಲಾರದ ಡಂಕನಮರಡಿಯಲ್ಲಿ ಕಾರ್ಣಿಕ ನುಡಿಯನ್ನ 11 ದಿನಗಳ ಕಾಲ ಉಪವಾಸ ವಿದ್ದು ಭಕ್ತಿ ಭಾವ ಮಡಿ, 18 ಅಡಿಯ ಬಿಲ್ಲನ್ನ ಏರಿ ಕಾರ್ಣಿಕ ನುಡಿ ಭವಿಷ್ಯ ನುಡಿದ ಗೊರವಯ್ಯ ರಾಮಣ್ಣ, ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಭವಿಷ್ಯವಾಣಿ ನುಡಿದಿದ್ದಾರೆ‌ ಸಂಪಾದೀತಲೇ ಪರಾಕ್.

|ವೆಂಕಪ್ಪಯ್ಯ ಒಡೆಯರ್, ಮೈಲಾರ ಕ್ಷೇತ್ರದ ಧರ್ಮದರ್ಶಿ

ಈ ಸಮಯದಲ್ಲಿ ಹೂವಿನಹಡಗಲಿ ಶಾಸಕ ಕೃಷ್ಣ ನಾಯಕ್
ಮಾತನಾಡಿದ ಅವರು ತುಂಬಿದ ಕೊಡಾ ತುಳುಕಿತಲೇ ಪರಾಕ್ ‌ಎಂಬ ಎರಡೇ ಶಬ್ದದಲ್ಲಿ ಈ ವರ್ಷದ ದೈವವಾಣಿ ಹೇಳಿದ ಗೊರವಯ್ಯ ರಾಮಣ್ಣ, ಗೊರವಯ್ಯನ ಹೇಳಿಕೆಯಿಂದ ನೆರೆದಿದ್ದ ಲಕ್ಷಾಂತರ ಜನರಿಂದ ವ್ಯಕ್ತವಾದ ಹರ್ಷಾದ್ಘೋರ ಮುಗಿಲು ಮುಟ್ಟಿತು.ಈ ಬಾರಿ ಉತ್ತಮ ಮಳೆ,ಬೆಳೆಯಾಗಲಿದೆ.‌ ದೇಶ ಸುಭಿಕ್ಷೆಯಾಗಿರಲಿದೆ ಎಂದು ಅರ್ಥೈಸಲಾಗುತ್ತಿದೆ.

ಇದಕ್ಕೂ ಮೊದಲು ಮೈಲಾರಲಿಂಗೇಶ್ವರನ ದೇವಸ್ಥಾನದಿಂದ ಶ್ರೀ ವೆಂಕಪ್ಪಯ್ಯ ಒಡೆಯರ್ ಕುದುರೆಯನ್ನೇರಿ ಡೆಂಕನಮರಡಿ ಪ್ರದೇಶದವರೆಗೆ ಮೆರವಣಿ ಮೂಲಕ ಸಾಗಿ ಬಂದು ಕಾರ್ಣಿಕ ನುಡಿಯುವ ಸ್ಥಳದ ಸುತ್ತ ಪ್ರದಕ್ಷಿಣೆ ಹಾಕಿ, ಭಕ್ತರಿಗೆ ಆಶೀರ್ವಾದ ನೀಡಿದರು. ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಲಕ್ಷಾಂತ ಭಕ್ತರು ನೆರೆದಿದ್ದರು.

ಒಟ್ಟಾರೆ ಹೇಳುವುದಾದರೆ, ಈ ಬಾರಿಯ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು ದೇಶ ಸುಭಿಕ್ಷವಾಗಿರಲಿದೆ, ಮಳೆ ಬೆಳೆ ಚೆನ್ನಾಗಿ ಆಗಲಿದೆ.. ರೈತರು ಉತ್ತಮ ರೀತಿಯಲ್ಲಿ ಇರ್ತಾರೆ ಅನ್ನೋ ಸಂದೇಶ ನೀಡಿದಂತಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ

Published

on

ಸುದ್ದಿದಿನ,ದಾವಣಗೆರೆ:ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ಇತ್ತೀಚಿಗೆ ನಡೆದ ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂ ಡಿಪ್ಲೋಮೋ ಕಾಲೇಜಿನ ವಿವಿಧ ವಿಭಾಗಗಳಿಂದ 44 ಅಂತಿಮ ವರ್ಷದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಒಟ್ಟು 44 ಅಂತಿಮ ವರ್ಷದ ವಿದ್ಯಾರ್ಥಿಗಳು ನ್ಯೂಜೈಸಾ ಟೆಕ್ನಾಲಜಿಸ್ ನಲ್ಲಿ ಉದ್ಯೋಗವಕಾಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ತೇಜಸ್ವಿ ಕಟ್ಟಿಮನಿ ಟಿ.ಆರ್. ತಿಳಿಸಿದ್ದಾರೆ.

ಆಯ್ಕೆಯಾದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಜಿಎಂ ಕಾಲೇಜಿನ ಚೇರ್ಮನ್ ಆದ ಜಿ.ಎಂ. ಲಿಂಗರಾಜು, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂಬಿ, ಕಾಲೇಜಿನ ಆಡಳಿತ ಅಧಿಕಾರಿಗಳಾದ ವೈ.ಯು. ಸುಭಾಷ್ ಚಂದ್ರ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಬಿ.ಎನ್. ಶ್ರೀಧರ್ ಅಭಿನಂದನೆ ಸಲ್ಲಿಸಿದ್ದು, 44 ವಿದ್ಯಾರ್ಥಿಗಳು ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಹರುಷ ವ್ಯಕ್ತಪಡಿಸಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದು, ಈ ಸಂಭ್ರಮದಲ್ಲಿ ಜಿಎಂ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಸಿ. ನಿಂಗರಾಜು, ಡಿಪ್ಲೋಮೋದ ತರಬೇತಿ ಮತ್ತು ಉದ್ಯೋಗ ವಿಭಾಗದ ಸಂಯೋಜಕರಾದ ಯಾಸ್ಮಿನ್ ಬೇಗಮ್, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಕೆ.ಬಿ. ಜನಾರ್ಧನ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸಿ.ಎನ್. ಸಂದೀಪ್, ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಎಂ. ಪ್ರವೀಣ್ ಕುಮಾರ್, ಕೆ. ಗಿರಿಜಾ ಸೇರಿದಂತೆ ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending