Connect with us

ದಿನದ ಸುದ್ದಿ

2018-19 ರಲ್ಲಿ ಸ್ವಾರ್ಥದ ರಾಜಕಾರಣ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ,ಮಂಡ್ಯ : 2018-19 ರಲ್ಲಿ ಅಧಿಕಾರವನ್ನು ಸ್ವಾರ್ಥಕ್ಕಾಗಿ, ತಮ್ಮವರ ಸ್ವಾರ್ಥಕ್ಕಾಗಿ ಅಲ್ಲದೇ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಎಲ್ಲರ ಜೊತೆ ರಾಜಿಯಾಗಿ, ಕಾನೂನು ಸುವ್ಯವಸ್ಥೆಯನ್ನು ಗಾಳಿಗೆ ತೂರಿ ಸಮಯವನ್ನು ವ್ಯರ್ಥ ಮಾಡಿ, ಸ್ವಾರ್ಥಕ್ಕೆ ಲಾಭ ಮಾಡಿಕೊಂಡಿರುವುದನ್ನು ನಾವು ನೋಡಿದ್ದೇವೆ. ಅದು ಅಧಿಕಾರ ಪಡೆಯುವ ಮತ್ತು ಉಳಿಯುವ ರಾಜಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಸರ್ಕಾರಿ ಸವತ್ತುಗಳ ವಿತರಣಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಾರಾಯಣಗೌಡರು ಯಾಕೆ ರಾಜಿನಾಮೆ ಕೊಟ್ಟರು ಎಂದು ಕೆ.ಆರ್.ಪೇಟೆಯಲ್ಲಿ ದೊಡ್ಡ ಪ್ರಶ್ನೆ ಎದ್ದಿತ್ತು. ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ನಾರಾಯಣಗೌಡರು ಯಾಕೆ ರಾಜಿನಾಮೆ ಕೊಟ್ಟರು ಎಂಬ ಪ್ರಶ್ನೆಗೆ ಉತ್ತರ ದೊರಕಿದೆ. 17 ಸಾವಿರ ಕೋಟಿ ರೂ.ಗಳ ಅಭಿವೃದ್ಧಿಯನ್ನು ಮಾಡಿ ಕೆ.ಆರ್.ಪೇಟೆಯ ಸಮಗ್ರ ಅಭಿವೃದ್ಧಿಗಾಗಿ ರಾಜಿನಾಮೆ ಕೊಟ್ಟು, ನುಡಿದಂತೆ ನಾನು ನಡೆದಿದ್ದೇನೆ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.

2019 ರ ಮಧ್ಯ ಭಾಗದಿಂದ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ‌ ಆಗಿದ್ದಾಗ ಮಹಾಮಾರಿಯನ್ನು ವಿಶ್ರಾಂತಿಯಿಲ್ಲದೆ ನಿರಂತರವಾಗಿ ಕೋವಿಡ್ ವಿರುದ್ಧ ಹೋರಾಡಿದರು. ರಾಜ್ಯ ಬೊಕ್ಕಸದ ಹಣವನ್ನು ಆರೋಗ್ಯ ಇಲಾಖೆಯ ಕಾಯಕಲ್ಪಕ್ಕೆ ಕೊಟ್ಟು ಕೋವಿಡ್ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಹಿಂದಿನ ಸರ್ಕಾರಗಳಲ್ಲಿ ಆರೋಗ್ಯ ವ್ಯವಸ್ಥೆ ಸರಿಯಿರಲಿಲ್ಲ. ಆದರೂ ದಿಟ್ಟತನದಿಂದ ಎದುರಿಸಿದರು. ಅಂದು ಅವರು ಮಾಡಿದ ಕೆಲಸದಿಂದ ಇಂದು ಕೋವಿಡ್ ನಿರ್ವಹಣೆ ಮಾಡಲು ಸಾಧ್ಯವಾಯಿತು.

ಒಂದು ಕಡೆ ಯಡಿಯೂರಪ್ಪ ಅವರ ಕೋವಿಡ್ ವಿರುದ್ಧದ ಕಾರ್ಯಕ್ರಮಗಳು, ಮತ್ತೊಂದೆಡೆ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋಡಿಯವರ ಲಸಿಕಾ ಕಾರ್ಯಕ್ರಮ ಕೋವಿಡ್ ನಿರ್ವಹಣೆ ಮಾಡಲು ಸಹಾಯವಾಯಿತು. ಹೀಗಾಗಿ ನೆಮ್ಮದಿಯಿಂದ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿದೆ. ಕರ್ನಾಟಕದ ಮಹಾಜನತೆ ಈ ಇಬ್ಬರೂ ಮಹನೀಯರನ್ನು ಸದಾ ಕಾಲ ನೆನಪಿನಲ್ಲಿಡಬೇಕು.

ಲಕ್ಷಗಟ್ಟಲೇ ಜನರ ಜೀವ ಉಳಿಸಿದ್ದಾರೆ. ಕೆಲಸವಿಲ್ಲದವರಿಗೆ ಬದುಕು ನೀಡಿದ್ದಾರೆ. ಆಟೋ ಚಾಲಕರು, ಕೂಲಿ ಕಾರ್ಮಿಕರಿಗೂ ಸಹ ಯಡಿಯೂರಪ್ಪ ನವರು ಬದುಕು ನೀಡಿದ್ದಾರೆ. ಇದು ಜನಪರವಾದ ಆಡಳಿತ, ಜನರ ರಾಜಕಾರಣ. ನಾರಾಯಣಗೌಡರು ರಾಜಿನಾಮೆ ಕೊಟ್ಟಿದ್ದೂ ಕೂಡ ಜನರ ರಾಜಕಾರಣದ ಸಲುವಾಗಿ. ನಾರಾಯಣಗೌಡರಿಗೆ ಸದಾ ಕಾಲ ನಿಮ್ಮ ಆಶಿರ್ವಾದ ಇರಬೇಕು ಎಂದರು.

ನಮ್ಮ ಸರ್ಕಾರ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಸಾಗಿದೆ. ಸಮಾಜದ ಕಟ್ಟಕಡೆಯ, ಅತ್ಯಂತ ದುರ್ಬಲ ವ್ಯಕ್ತಿ, ದೀನ ದಲಿತ, ಹಿಂದಳಿದ ವರ್ಗದ ಜನ, ಅವಕಾಶ ವಂಚಿತರಿಗೆ ಅವಕಾಶ, ದುಡಿಯವ ವರ್ಗಕ್ಕೆ ಕೆಲಸ, ಯಡಿಯೂರಪ್ಪ ನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಾಲಮನ್ನಾ, ಬಡ್ಡಿ ರಹಿತ ಸಾಲ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಭೂಚೇತನ, ಕೆರೆಗಳ ಅಭಿವೃದ್ಧಿ ಮಾಡಿದರು. ರೈತರಿಗೆ 10 ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡಿದರು. ಇದು ರೈತರ ಬಗ್ಗೆ ಅವರಿಗಿದ್ದ ಕಳಕಳಿ. ಅದೇ ದಾರಿಯಲ್ಲಿ ನಾವು ಇಂದು ಮುಂದುವರೆಯುತ್ತಿದ್ದೇವೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಿಜೆಪಿಯ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ ಎನ್.ಬಿ.ಭಾರ್ಗವಿ ದ್ರಾವಿಡ್ ಆಯ್ಕೆ

Published

on

ಸುದ್ದಿದಿನ,ಚಿತ್ರದುರ್ಗ : ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಯಾಗಿ ಚಿತ್ರದುರ್ಗದ ಶ್ರೀಮತಿ ಎನ್.ಬಿ.ಭಾರ್ಗವಿ ದ್ರಾವಿಡ್ ಅವರನ್ನು ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಂಸದರಾದ ತೇಜಸ್ವಿ ಸೂರ್ಯ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜ್ ರವರು ಅಧಿಕೃತ ನೇಮಕ ಪತ್ರ ನೀಡುವುದರ ಮೂಲಕ ಆಯ್ಕೆ ಮಾಡಲಾಯಿತು.

ಭಾರ್ಗವಿ ದ್ರಾವಿಡ್ ಅವರು ಈ ಹಿಂದೆ ಭಾರತ ಸರ್ಕಾರವು ಚಿತ್ರದುರ್ಗ ನೆಹರು ಯುವ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾಗಿ ನೇಮಕ ಮಾಡಿತ್ತು. ಹಾಗೂ ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಲಾಗಿತ್ತು.

ಎಸ್.ಸಿ.ಮೋರ್ಚಾದ ರಾಜ್ಯ ಕಾರ್ಯ ಕಾರಿಣಿ ಸದಸ್ಯರಾಗಿ ಪ್ರವಾಸ ಕೈಗೊಂಡು ಕೆಲಸ ಮಾಡಿದ್ದರು. ಎ.ಬಿ.ವಿ.ಪಿ ಸಂಘಟನೆಯಲ್ಲಿಯೂಸಹ ಸಾಕಷ್ಟು ರಾಜ್ಯ ಮಟ್ಟದ ಜವಾಬ್ದಾರಿ ಗಳನ್ನು ನಿಭಾಯಿಸಿದ್ದರು.ಬರುವ 2024 ರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಕೂಡ ಆಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಪಿಎಲ್, ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಎಪಿಎಲ್, ಬಿಪಿಎಲ್ ಪಡಿತರ ಚೀಟಿಗಳಿಗಾಗಿ ಹೊಸ ಅರ್ಜಿಗಳನ್ನು ಏಪ್ರಿಲ್ 1 ರಿಂದ ಸ್ವೀಕರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ವಿಧಾನಸಭೆಗೆ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ಆದಾಯ1.20 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಅಂತಹವರನ್ನು ಬಿಪಿಎಲ್ ಚೀಟಿಯಿಂದ ಹೊರಗಿಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ : ಅವಧಿ ವಿಸ್ತರಣೆ

Published

on

ಸುದ್ದಿದಿನ ಡೆಸ್ಕ್ : ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಗಡುವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್‌ಗಿಂದು ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಅವರು, ಕಾಂಗ್ರೆಸ್‌ನ ಮಾದೇಗೌಡ ಅವರ ಪ್ರಸ್ತಾಪಕ್ಕೆ ಉತ್ತರಿಸಿ, ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಇದುವರೆಗೂ 18 ಲಕ್ಷ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇದು ನಡೆಯಬೇಕಾಗಿರುವುದರಿಂದ ಮೂರು ತಿಂಗಳು ವಿಸ್ತರಣೆ ಮಾಡಲಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending