ಕ್ರೀಡೆ
ಶತಮಾನದ ಎಸೆತ ಎಂದರೆ ಯಾವುದು..?
- ಸಿದ್ದು ಸತ್ಯಣ್ಣವರ್
ಮೇಲಿನಂತೆ ಯಾರಿಗಾದರೂ ಕ್ರಿಕೆಟ್ ಅಭಿಮಾನಿಗಳಿಗೆ ಪ್ರಶ್ನಿಸಿದರೆ ಅದನ್ನು ಅವರಿಗೆ ಉತ್ತರಿಸಲಾಗುವುದಿಲ್ಲ. ಆ ಬೌಲ್ ಎಸೆದ ಬೌಲರ್ ನೆನಪಾಗುತ್ತಾನೆ. ಆತ ಶೇನ್ ವಾರ್ನ್.
1993ರ ಆ್ಯಷಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಇಂಗ್ಲೆಂಡ್ ಬ್ಯಾಟರ್ ಮೈಕ್ ಗ್ಯಾಟಿಂಗ್ ನನ್ನ ಬೌಲ್ಡ್ ಮಾಡಿದ್ದ ಆ ಎಸೆತ ಯೂಟ್ಯೂಬಲ್ಲಿ ಎಂದೋ ನೋಡಿದರೂ ಇನ್ನು ನೆನಪಿದೆ. ಆ್ಯಂಡ್ರೂ ಸ್ಟ್ರಾಸ್ ಸಹ ಒಮ್ಮೆ ವಾರ್ನ್ ಎಸೆತಕ್ಕೆ ಹೀಗೆ ಬೌಲ್ಡ್ ಆಗಿದ್ದ. ವಾರ್ನ್ ಎಂದರೆ ಹಾಗೇ; ಒಮ್ಮೆ ನೇರ, ಮತ್ತೊಮ್ಮೆ ಗೂಗ್ಲಿ, ಮಗದೊಮ್ಮೆ ಶತಮಾನದ ಎಸೆತ ಎನ್ನುವಷ್ಟು ಲೆಗ್ ಸ್ಟಂಪ್ ನಿಂದ ಆಚೆಗೆ ಬೌಲಿಂಗ್ ಮಾಡಿ ಆಫ್ ಸ್ಟಂಪ್ ಬೇಲ್ಸ್ ಎಗರಿಸಿದಾತ.
ಆತನ ವೈಯಕ್ತಿಕ ಬದುಕೂ ಹಾಗೆಯೇ, ಎಸೆಯುತ್ತಿದ್ದ ಬೌಲಿಂಗಿನಂತೆ. ಅಲ್ಲಿ ಘಟಿಸುವವರೆಗೂ ಯಾವುದು ನಿರ್ಣಯವಾಗುತ್ತಿರಲಿಲ್ಲ. ಯಾರೋ ಆಸ್ಟ್ರೇಲಿಯಾದ ಹೋಟೆಲ್ ನೌಕರಳೊಬ್ಬಳು ಈತನ ಮೇಲೆ ಅತ್ಯಾಚಾರದ ಕೇಸ್ ಹೊರಿಸಿದ್ದಳು. ಕಾಂಡೋಮ್ ಹಿಡಿದ ವಾರ್ನ್ ಅತ್ಯಾಚಾರಕ್ಕೆ ಯತ್ನಿಸಿದ ಅಂತಲೂ ಕೇಸ್ ಆಗಿತ್ತು.
ವೈಯಕ್ತಿಕ ಬದುಕಿನ ಇಂತಹ ಹಳವಂಡಗಳಾಚೆಗೂ ಅವನ್ನು ಮೀರಿ ನಿಲ್ಲಲು ಹೋರಾಡಿದ ಮನುಷ್ಯ ವಾರ್ನ್ ಎಂದರೆ ಉತ್ಪ್ರೇಕ್ಷೆಯಾಗಲಾರದೇನೋ? ಯಾಕೆಂದರೆ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ನಡುವೆ ವಾರ್ನ್ ಒಂದು ಅಂತರ ಕಾಯ್ದುಕೊಂಡಿದ್ದ. ಇಲ್ಲವಾದರೆ ಮೊದಲ ಐಪಿಎಲ್ ಸೀಸನ್ ನಲ್ಲಿ ಈತ ನಾಯಕನಾಗಿದ್ದ ರಾಜಸ್ತಾನ್ ರಾಯಲ್ಸ್ ಕಪ್ ಎತ್ತಿ ಹಿಡಿಯುತ್ತಿರಲಿಲ್ಲ.
ವೈಯಕ್ತಿಕ ಬದುಕಿಗೆ ನೀಡಿದ ಸಮಯವನ್ನು ವಾರ್ನ್ ಎಂದೂ ತನ್ನ ವೃತ್ತಿ ಜೀವನಕ್ಕೆ ನೀಡಲಿಲ್ಲ. ಹೀಗೆ ಕೆಲ ವರ್ಷಗಳ ಹಿಂದೆ ಅಂತರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಸುದ್ದಿ ಬಿತ್ತರವಾಗಿತ್ತು. ವಾರ್ನ್ ಅದೆಲ್ಲದರಾಚೆಗೆ ಆಗ ವೃತ್ತಿಯಿಂದ ಭಾರತದ ಐಪಿಎಲ್ ತಂಡವೊಂದಕ್ಕೆ ಮೆಂಟರ್/ ಕೋಚ್ ಆಗಿದ್ದ.
ಆಗ ವಾರ್ನ್ ಉಸ್ತುವಾರಿಕೆಯಲ್ಲಿ ಇರ್ಫಾನ್ ಖಾನ್, ಸ್ವಪ್ನಿಲ್ ಅಸ್ನೋಡ್ಕರ್ ಎಂಬ ಭಾರತದ ಪ್ರತಿಭೆಗಳು ಬೆಳಕಿಗೆ ಬಂದಿದ್ದವು. ಖಾನ್ ಶ್ರೀಲಂಕಾದ
ಲಸಿತ್ ಮಾಲಿಂಗ ಶೈಲಿಯ ಎಡಗೈ ಬೌಲರ್ ಆದರೆ, ಗೋವಾದ ರಣಜಿ ಕ್ರಿಕೆಟಿಗ ಸ್ವಪ್ನಿಲ್ ಬಹಳ ಸದ್ದು ಮಾಡಿದ್ದ ಬ್ಯಾಟ್ಸಮನ್.
ವಾರ್ನ್ ಬರೀ ಲೆಗ್ ಸ್ಪಿನ್ನರ್ ಅಲ್ಲ. ಶ್ರೀಲಂಕಾದ ಸನತ್ ಜಯಸೂರ್ಯನಂತೆ ಸ್ಪಿನ್ನರ್ ಆಗಿ ರಾಷ್ಟ್ರೀಯ ತಂಡ ಪ್ರವೇಶಿಸಿ, ಬ್ಯಾಟರ್ ಆಗಿಯೂ ಹೆಚ್ಚಿನ ಸಾಧನೆ ಮಾಡಬಹುದಿತ್ತು. ಆದರೆ ವಯಸ್ಸಿಗೆ ತಕ್ಕಂತಿದ್ದ ವಾರ್ನ್ ವಯಸ್ಸಿಗೆ ತಕ್ಕಂತೆಯೇ ನಡೆದುಕೊಂಡ; ಥೇಟ್ ಒಂದು ಮಾತಿದೆಯಲ್ಲ ‘ ಹಾರುವ ಹಕ್ಕಿ ಇದ್ದರಷ್ಟೇ ರೆಕ್ಕೆ. ಇಲ್ಲವಾದರೆ ಅದೊಂದು ಹಕ್ಕಿಗೆ ರೆಕ್ಕೆಗಳಿದ್ದವು ಅಷ್ಟೇ’ ಎಂಬ ಮಾತಿನಂತೆ.
ರೆಸ್ಟ್ ಇನ್ ಪೀಸ್ ಲೆಜೆಂಡ್. ಶತಮಾನದ ಎಸೆತಕ್ಕಿಂತ ಮೊದಲು ಬಲಗೈಯಲ್ಲಿ ಬೌಲ್ ಹಿಡಿಯುವ ಆ ನಿನ್ನ ತಂತ್ರ ಸದಾ ನೆನಪಲ್ಲಿರುತ್ತದೆ.
(ಫೇಸ್‌ಬುಕ್ ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ರಾಘವೇಂದ್ರ ಎನ್ ಬಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯದ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ 90ಕೆಜಿ ವಿಭಾಗದಲ್ಲಿ ರಾಘವೇಂದ್ರ ಚಿನ್ನದ ಪದಕ ಗೆಲ್ಲುವ ಮೂಲಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ..
ದಾವಣಗೆರೆ ನಗರದ ಜಿಎಫ್ ಜಿಸಿ ಕಾಲೇಜಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದಿಂದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಆಯ್ಕೆ ಗಳು ನಡೆದವು, ಕಾಲೇಜಿನಲ್ಲಿ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿರುವ ರಾಘವೇಂದ್ರ, ಹಳೇ ಕುಂದುವಾಡದ ಬಸವರಾಜ್, ಲಕ್ಷ್ಮಿದೇವಿ ದಂಪತಿಯ ಪುತ್ರನಾಗಿದ್ದು, ಸ್ಪರ್ಧೆಯಲ್ಲಿ 90ಕೆಜಿ ವಿಭಾಗದಲ್ಲಿ ದೇಹ ಪ್ರದರ್ಶಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾನೆ.
ಓದಿನ ಜೊತೆಗೆ ತನ್ನ ತಂದೆಯ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಬಿಡುವಿನ ವೇಳೆಯಲ್ಲಿ ಕೋಚ್ ಮಧು ಪೂಜಾರ್ ಮಾರ್ಗದರ್ಶನದಲ್ಲಿ ದೇಹ ಹುರಿಗೊಳಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ್ದಾನೆ, ಸ್ಪರ್ಧೆಯಲ್ಲಿ ಬೈಸಿಪ್ಸ್, ಲ್ಯಾಟ್ ಸ್ಟ್ರೈಡ್ ಪೋಸ್ ಕೊಟ್ಟು ನೋಡುಗರನ್ನು, ತೀರ್ಪುಗಾರರನ್ನು ಬೆರಗುಗೊಳಿಸಿದ್ದಾನೆ.
ಇನ್ನೂ ರಾಘವೇಂದ್ರನ ದೇಹ ಪ್ರದರ್ಶನ ವೇಳೆ ಶಿಳ್ಳೆ, ಚಪ್ಪಾಳೆ ಕೇಳಿ ಬಂದವು, ರಾಘವೇಂದ್ರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಬರುವ ಫೆಬ್ರುವರಿಯಲ್ಲಿ ಮಂಗಳೂರಿನಲ್ಲಿ ಸ್ಪರ್ಧೆ ನಡೆಯಲಿದೆ, ಇನ್ನೂ ಚಿನ್ನದ ಪದಕ ಗಳಿಸಿರುವ ರಾಘವೇಂದ್ರನಿಗೆ ಜಿಎಫ್ ಜಿಸಿ ಕಾಲೇಜು ಆಡಳಿತ ಮಂಡಳಿ, ಮಾರ್ಗದರ್ಶಕರು, ಹಳೇ ಕುಂದುವಾಡ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ಅದ್ವಿತೀಯ 2024ರಲ್ಲಿ ಜಿಎಂಐಟಿ ಕಾಲೇಜಿನ ಸಿಎಸ್ಇ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿಯಲ್ಲಿ ತೃತೀಯ ಸ್ಥಾನ
ಸುದ್ದಿದಿನ,ದಾವಣಗೆರೆ:ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ (ಸಿ.ಎಸ್.ಇ) ವಿಭಾಗದ 5ನೇ ಸೆಮಿಸ್ಟರ್ ‘ಎ’ ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ್ ಯು. ಮತ್ತು ಅಫ್ರಿದ್ ಆರ್.ಕೆ. ಈ ಇಬ್ಬರು ಇತ್ತೀಚಿಗೆ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ಸಂಸ್ಥೆಯಲ್ಲಿ ನಡೆದ ಅದ್ವಿತೀಯ 2024ರಲ್ಲಿ ಪೋಸ್ಟರ್ ಪ್ರಸ್ತುತಿಯಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.
ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಬಿ. ಸಂಜಯ್ ಪಾಂಡೆ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಎನ್. ವೀರಪ್ಪ, ಇನ್ಫಾರ್ಮಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ನೀಲಾಂಬಿಕೆ, ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ಉಪ ನಿರ್ದೇಶಕರಾದ ಎಂ. ಸಂತೋಷ ಕುಮಾರ್, ಜಿಎಂ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಎಸ್. ಓಂಕಾರಪ್ಪ ಸೇರಿದಂತೆ ಆಡಳಿತ ಮಂಡಳಿ, ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ತುಮಕೂರು:ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದ್ದು ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತುಮಕೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆದಷ್ಟು ಶೀಘ್ರವೇ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಲಾಗುವುದು ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದ್ದು ಮೈಸೂರಿನಲ್ಲೂ ಜಾಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಚೆನ್ನೈ-ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಗಾಗಿ ಆರು ಹಂತದಲ್ಲಿ 20 ಸಾವಿರ ಎಕರೆ ಸ್ವಾಧೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಸಂತನರಸಾಪುರದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಟೌನ್ ಶಿಪ್ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೆಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243