ದಿನದ ಸುದ್ದಿ
ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ ಶಾಹುಮಹರಾಜ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ನೆನೆಯಬೇಕು : ಸಿದ್ದರಾಮಯ್ಯ
ಸುದ್ದಿದಿನ ಡೆಸ್ಕ್ : ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಆಯೋಜಿಸಿದ್ದ ಶ್ರೀಮತಿ ಇಂದಿರಾ ಗಾಂಧಿ, ದಿ.ರಾಜೀವ್ ಗಾಂಧಿ & ದಿ.ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಿಜೆಪಿಯವರಿಗೆ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿಯಿಲ್ಲ, ಈ ಹಿಂದೆ ಎಲ್.ಕೆ.ಅಡ್ವಾಣಿಯವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿರೋಧಿಸಿ ರಥಯಾತ್ರೆ ನಡೆಸಿದ್ದರು ಎಂದು ಹೇಳಿದರು.
ಹಿಂದುಳಿದ ಜಾತಿಗಳಿಗೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೀಸಲಾತಿ ನೀಡಲು ಪ್ರಮುಖ ಪಾತ್ರ ವಹಿಸಿದವರು ಶಾಹು ಮಹಾರಾಜರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಆ ಮಹಾ ಪುರುಷರನ್ನು ಇಂದಿಗೂ ನಾವು ನೆನೆಯಬೇಕು ಎಂದು ಸ್ಮರಿಸಿದರು.
ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿರೋಧಿಸಿ ರಥ ಯಾತ್ರೆ ಮಾಡಿದವರು ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿಯವರು. ಆ ರಥ ಯಾತ್ರೆ ತಡೆದವರು ಲಾಲೂ ಪ್ರಸಾದ್ ಅವರು. ಹಿಂದುಳಿದ ವರ್ಗಗಳ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇಲ್ಲ. ಅವರದ್ದೇನಿದ್ದರು ಕೇವಲ ಸ್ವಾರ್ಥ ರಾಜಕಾರಣ ಅಷ್ಟೆ.
— Siddaramaiah (@siddaramaiah) November 20, 2018
ಬಿಜೆಪಿಯವರು ಬಹಳ ಡೇಂಜರ್. ಜನರ ದಾರಿ ತಪ್ಪಿಸಿ ಹೇಗಾದರೂ ಮಾಡಿ ಅಧಿಕಾರ ಹಿಡಿಯುವುದಷ್ಟೇ ಅವರ ಗುರಿ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವುದನ್ನು ಬಿಟ್ಟರೆ ಅಹಿಂದ ವರ್ಗಕ್ಕೆ ಏನು ಮಾಡಿದ್ದಾರೆ?#ದೇವರಾಜಅರಸುಜಯಂತಿ
— Siddaramaiah (@siddaramaiah) November 20, 2018
ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಆಯೋಜಿಸಿದ್ದ ಶ್ರೀಮತಿ ಇಂದಿರಾ ಗಾಂಧಿ, ದಿ.ರಾಜೀವ್ ಗಾಂಧಿ & ದಿ.ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಎಂ.ಡಿ.ಲಕ್ಷ್ಮಿನಾರಾಯಣ್ ಅವರೊಂದಿಗೆ ಉದ್ಘಾಟಿಸಿದೆ.@INCKarnataka @dineshgrao pic.twitter.com/SQl4kzjQsU
— Siddaramaiah (@siddaramaiah) November 20, 2018
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಸಮಾಜ ಕಲ್ಯಾಣ ಇಲಾಖೆ ಕಚೇರಿ ಸ್ಥಳಾಂತರ
ಸುದ್ದಿದಿನ,ದಾವಣಗೆರೆ:ಎಂ.ಸಿ.ಸಿ. ಬ್ಲಾಕ್‍ನಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯನ್ನು #1374/19, ಎರಡನೇ ಮಹಡಿ, ಸರೂರ್ ಆರ್ಕೆಡ್ ಯು.ಬಿ.ಡಿ.ಟಿ ಇಂಜಿನಿಯರಿಂಗ್ ಲೇಡಿಸ್ ಹಾಸ್ಟೆಲ್ ಎದುರು, ನೂತನ ಕಾಲೇಜು ರಸ್ತೆ ದಾವಣಗೆರೆ, ಇಲ್ಲಿಗೆ ನವಂಬರ್ 11 ರಿಂದ ಸ್ಥಳಾಂತರಿಸಲಾಗುವುದು ಎಂದು ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾ ದೇವಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ:ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಜಿಯ ಸಲ್ಲಿಸುವ ಅವಧಿಯನ್ನು ನವಂಬರ್ 10 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಜಗಳೂರು ಕಾಟಮ್ಮ ; ಸಾಧನೆಯ ಹೆಗ್ಗುರುತುಗಳು
- ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು
ದಾವಣಗೆರೆ ಜಿಲ್ಲೆಯ ಜಗಳೂರು ಸೀಮೆ ಬುಡಕಟ್ಟು ಸಮುದಾಯಗಳ ನೆಲೆವೀಡು, ತಾಜಾ ಜಾನಪದ ಸಂಸ್ಕೃತಿಯು ಹಾಸು ಹೊಕ್ಕಾದ ಸಮೃದ್ಧ ಹೊನ್ನ ಕಣಜ.
ಜಗಳೂರು ತಾಲೂಕಿನ ಹೆಗ್ಗುರುತಿನ ಊರಾದ ತೋರಣಗಟ್ಟೆಯ ಗೌಡ್ರ ಚಿಕ್ಕಪ್ಪ ಮತ್ತು ಗೌರಮ್ಮ ಇವರ ಪುತ್ರಿಯಾದ ಕಾಟಮ್ಮ ತನ್ನ ಬಾಲ್ಯದಲ್ಲೇ ಊರಿನ ಪರಿಸರಕ್ಕನುಗುಣವಾಗಿ ಹೊಲಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ಊರ ದೇವರುಗಳ ಪರುವು ಉತ್ಸವಗಳನ್ನು ಕಣ್ಣುತುಂಬಿಸಿಕೊಳ್ಳುವಾಗ ವಾರಗಟ್ಟಲೆ ಜರುಗುತಿದ್ದ ಮದುವೆ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವಾಗ ಊರಿನ ಹಿರಿಯರು ಹಾಡುತಿದ್ದ ಸೋಬಾನೆ ಪದಗಳು ದೇವರ ಪದಗಳು ಕುಣಿತ ಮಣಿತಗಳ ಪದಗಳನ್ನು ಚಿತ್ತವಿಟ್ಟು ಆಲಿಸುತ್ತಲೇ ತಾನೂ ಅವುಗಳನ್ನು ಅಸ್ವಾದಿಸಿಕೊಂಡು ಸಹವರ್ತಿಯಾಗಿ ದನಿ ಸೇರಿಸಲು ಆರಂಭಿಸಿದರು.
ಹುಟ್ಟಿದ ಊರಿನಲ್ಲಿಯೇ ಬಾಲಪ್ಪನವರನ್ನು ವಿವಾಹವಾದ ಕಾಟಮ್ಮ ನಾಲ್ಕು ಮಕ್ಕಳ ತಾಯಿಯಾಗಿ ತುಂಬು ಸಂಸಾರವನ್ನು ನಿರ್ವಹಿಸುತ್ತಲೇ ತನ್ನ ಎದೆಯೊಳಗಿನ ಪದಗಳಿಗೆ ದನಿಯಾಗುತ್ತಾ ಬಂದರು. ತನ್ನ ಸೋದರಿ ಶಾಂತ ವೀರಮ್ಮ ಹಾಗೂ ಸಮೀಪದ ಬಂದುಗಳಾದ ಬಾಲಮ್ಮ, ಬಡಮ್ಮ ಮುಂತಾದವರ ತಂಡ ಕಟ್ಟಿಕೊಂಡು ಮದ್ಯ ಕರ್ನಾಟಕದ ಪ್ರಸಿದ್ಧ ಜಾನಪದ ಸಾಂಸ್ಕೃತಿಕ ವೀರರಾದ ಕಾಟಣ್ಣ, ದೊಡ್ಡಣ್ಣ, ಬಡಣ್ಣ, ಚಿಕ್ಕಣ್ಣ ಇವರ ಬಗ್ಗೆ ಸುದೀರ್ಘ ಕಥನ ಕಾವ್ಯಗಳನ್ನು ಕಟ್ಟಿ ನಿರರ್ಗಳವಾಗಿ ಹಾಡಬಲ್ಲವರಾಗಿದ್ದಾರೆ. ವಿಶೇಷವಾಗಿ ದಾವಣಗೆರೆ ಸೀಮೆಯಲ್ಲಿ ‘ಮಳೆ ಮಲ್ಲಪ್ಪ’ ನೆಂದೇ ಖ್ಯಾತನಾಮರಾಗಿ ಆರಾಧನೆಗೆ ಒಳಗಾಗಿರುವ ಅವಧೂತ ಪರಂಪರೆಯ ‘ಮೆಲ್ಲಜ್ಜಿ’ ನ ಬಗ್ಗೆ ಈ ತಾಯಿ ಕಟ್ಟಿಕೊಡುವ ಪದಗಳು ಬಹು ಪ್ರಸಿದ್ದಿ ಪಡೆದಿವೆ.
ಮೆಲ್ಲಜ್ಜ ಸುಮಾರು ನೂರಾ ಐವತ್ತು ವರ್ಷಗಳ ಹಿಂದೆ ತೋರಣಗಟ್ಟೆಯಲ್ಲಿ ಎಲ್ಲರಂತೆ ಬದುಕಿ ಬಾಳಿದ ವ್ಯಕ್ತಿ. ಆದರೆ ತನ್ನ ವಿಶಿಷ್ಟ ಆಧ್ಯಾತ್ಮಿಕ ಮನೋಪ್ರವೃತ್ತಿಯ ಅವಧೂತನಾಗಿ, ಹವಮಾನ ತಜ್ಞನಾಗಿ ‘ ಮಳೆ ಮೆಲ್ಲಜ್ಜ ‘ ಎಂದು ಪ್ರಸಿದ್ದಿ ಪಡೆದು ಮರಣೋತ್ತರದಲ್ಲಿ ಜನ ಸಮುದಾಯದಿಂದ ಸಂಗತಿಯಾಗಿದೆ.ಗಾಗುತ್ತಾನೆ. ಇಂತಹ ಅಸಾಮಾನ್ಯ ವ್ಯಕ್ತಿತ್ವದ ಮೆಲ್ಲಜ್ಜನ ಕುರಿತಂತೆ ಪದಗಾತಿ ಕಾಟಮ್ಮ ಸುಧೀರ್ಘವಾಗಿ ಕಥನ ಕಟ್ಟಿ ಹಾಡುವ ಸೋಪಜ್ಞ ಕಲೆಗಾರಿಕೆಯನ್ನು ಹೊಂದಿದವರಾಗಿದ್ದಾರೆ. ಜಗಳೂರು ಸೀಮೆಯಲ್ಲಿ ಈ ಕಥನ ಮನೆಮಾತಾಗಿದೆ.
ಜಗಳೂರು ಸೀಮೆಯಲ್ಲಿ ಯಾರದೇ ಮದುವೆ ಸಂಬಂದಿತ ಕಾರ್ಯಗಳಲ್ಲಿ ಶ್ರೀಮತಿ ಕಾಟಮ್ಮ ನವರ ಉಪಸ್ಥಿತಿ, ಸೋಬಾನೆ ಪದಗಾರಿಕೆ ಇರಲೇಬೇಕು. ಅಷ್ಟರಮಟ್ಟಿಗೆ ಇವರು ಸುಪ್ರಸಿದ್ಧರಾಗಿದ್ದಾರೆ.
ಮದುವೆಯ ಹಸೆ ಚಿತ್ತಾರ ಬಿಡಿಸುವಲ್ಲಿ ಸಿದ್ಧ ಹಸ್ತರು. ಬುಡಕಟ್ಟು ಸಮುದಾಯಗಳ ಮದುವೆಗಳಲ್ಲಿ ಹಾಕಲಾಗುವ ಹಾಲಸ್ತ್ರ ಹಸೆ, ಒಳ್ಳಕ್ಕಿ ಹಸೆ, ದೇವರ ಹಸೆ, ಬೂವದ ಹಸೆ . ಅರಿಣಿ ಹಸೆ . ಅಂದ್ರದ ಹಸೆ ಮುಂತಾದ ಹಸೆಗಳನ್ನು ಕರಿಕಂಬಳಿಹಾಸು ಮೇಲೆ ತಾನೇ ಬಿಡಿಸಿ ಆಯಾ ಸಂದರ್ಭಗಳನ್ನು ಮಧುರವಾಗಿ ಹಾಡುವ ನಿಪುಣೆಯಾಗಿದ್ದಾರೆ.
ಸಾಮಾನ್ಯವಾಗಿ ಹಸೆ ಬಿಡಿಸುವವರಿಗೆ ಹಾಡಲು ಬರುವುದಿಲ್ಲ. ಹಾಡುವವರು ಹಸೆ ಬಿಡಿಸುವುದಿಲ್ಲ. ಆದರೆ ಕಾಟಮ್ಮ ಇದಕ್ಕೆ ಭಿನ್ನ. ಎರಡನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಕಲಾಚತುರೆ. ಸುದೀರ್ಘ ನಲವತ್ತು ವರ್ಷಗಳಿಂದ ನಿರಂತರವಾಗಿ ಪದಗಂಗೆಯನ್ನು ಹರಿಸುತ್ತಿರುವ ಎಲೆಮರೆಯ ಪ್ರತಿಭೆ ಕಾಟಮ್ಮನವರನ್ನು ಯಾವ ಸಂಘ ಸಂಸ್ಥೆಗಳು ಗುರುತಿಸದೆಹೋದ ಈ ಹೊತ್ತಿನಲ್ಲಿ ಮೊದಲ ಬಾರಿಗೆ ಕರ್ನಾಟಕ ಜಾನಪದ ಅಕಾಡೆಮಿ ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ(ಬರಹ: ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ4 days ago
ಸಿಕ್ಕಾಬಟ್ಟೆ ಸಾಲ, ಸಾಲು ಸಾಲು ಚೆಕ್‌ಬೌನ್ಸ್ ಕೇಸ್ ; ನಿರ್ದೇಶಕ ಗುರುಪ್ರಸಾದ್ ಸಾವಿಗೆ ಕಾರಣವಾಯ್ತಾ..!?
-
ದಿನದ ಸುದ್ದಿ5 days ago
ಚನ್ನಗಿರಿ | ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ; ಬಹುಮಾನ ವಿತರಣೆ
-
ದಿನದ ಸುದ್ದಿ4 days ago
‘ಮಠ’ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ..!
-
ದಿನದ ಸುದ್ದಿ3 days ago
SC-ST | ರೈತರಿಗೆ ಪಶುಸಂಗೋಪನಾ ಚಟಿವಟಿಕೆಗಳ ತರಬೇತಿ
-
ದಿನದ ಸುದ್ದಿ3 days ago
ಮಾಜಿ ಸೈನಿಕರ ಮಕ್ಕಳ ವಿದ್ಯಾಭ್ಯಾಸದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಕರ್ನಾಟಕ ಜಾನಪದ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪ್ರಕಟ
-
ದಿನದ ಸುದ್ದಿ2 days ago
ಹಿ.ಚಿ ಸಂಭ್ರಮದಲ್ಲಿ ನೆಲಮೂಲ ಸಂಸ್ಕೃತಿಯ ಪ್ರತಿಬಿಂಬದ ಪ್ರತಿನಿಧಿಗಳಿಗೆ ಜನಪದ ರಾಜ್ಯೋತ್ಸವ ಪ್ರಶಸ್ತಿ : ಜನಪದ ಸಿರಿಯ ಜರಗನಹಳ್ಳಿ ಕಾಂತರಾಜು
-
ದಿನದ ಸುದ್ದಿ2 days ago
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಜಗಳೂರು ಕಾಟಮ್ಮ ; ಸಾಧನೆಯ ಹೆಗ್ಗುರುತುಗಳು