ದಿನದ ಸುದ್ದಿ
ಮರಿ ಕೋಗಿಲೆ ‘ಜೀವಿತಾ’ಳ ಕುಹೂ ಕುಹೂ!
“ಹಾಡು ಎಂದ ಕೂಡಲೇ ಹಾಡದು ಯಾವ ಕೋಗಿಲೆ” ಅಂತ ನಾದ ಬ್ರಹ್ಮ ಹಂಸಲೇಖ ಹೇಳ್ತಾರೆ. ಆದರೆ ಈ ಮರಿ ಕೋಗಿಲೆಯೊಂದು ಹಾಡು ಎಂದರೆ ಸಾಕು ಪರಮೋತ್ಸಾಹದೊಂದಿಗೆ ಒಂದರ ಮೇಲೊಂದರಂತೆ ಹಾಡಲು ಶುರು ಮಾಡುತ್ತೆ. ಹಾಡು ಕೇಳಿದವರಂತೂ ‘ನಿಲ್ಲಿಸು’ ಎಂಬ ಮಾತೇ ಮರೆತು ತಲೆತೂಗಿ, ಮುತ್ತಿಕ್ಕಿಸಿಕೊಂಡು ಹಾರೈಸಿಕೊಂಡುಬಿಡುತ್ತೆ ಈ ಮರಿ ಕೋಗಿಲೆ.
ಅಂದಹಾಗೆ ಯಾರೀ ಮರಿ ಕೋಗಿಲೆ ಎಂಬ ಕುತೂಹಲದ ಪ್ರಶ್ನೆ ನಿಮ್ಮಲ್ಲೀಗ ಮೂಡಿರ ಬಹುದು. ಅವರೇ ಬೆಣ್ಣೆ ನಗರಿಯ ಬೆಣ್ಣೆಯಂತಹ ದಾವಣಗೆರೆಯ ಜೀವಿತಾ ಮೌನೇಶ್.
ಆಡಿಕೊಂಡು ತುಂಟಾಟ ಮಾಡಿಕೊಂಡು, ಅಪ್ಪ ಅಮ್ಮಂದಿರಿಗೆ ಪ್ರೀತಿಯಿಂದ ಕಾಡುತ್ತಾ ಕುಣಿಯುವ ಈ ಚಿನಕುರುಳಿ ಮರಿಕೋಗಿಲೆಗಿನ್ನೂ ವಯಸ್ಸು ಐದು. ಇಲ್ಲಿನ ತರಳಬಾಳು ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಾಳೆ.ಆಡುವುದರ ಜೊತೆಗೆ ಹಾಡುವ ಪ್ರತಿಭೆಯಾಗಿ, ಭವಿಷ್ಯದ ಭರವಸೆಯ ಗಾಯಕಿಯಾಗುವ ಎಲ್ಲ ಲಕ್ಷಣಗಳೂ ಈ ಮರಿ ಕೋಗಿಲೆಗಿವೆ.
“ ಈಕೆ ತನ್ನ ಎರಡು-ಮೂರನೇ ವಯಸ್ಸಿನಲ್ಲೇ ನಾವು ಹೇಳಿಕೊಡುವ, ಟಿವಿ, ಮೊಬೈಲ್‍ಗಳಲ್ಲಿ ಕೇಳುವ ಹಾಡುಗಳನ್ನು ತನಗಿಷ್ಟ ಬಂದಂತೆ ಮುದ್ದಾಗಿ ಹಾಡುವ ಗೀಳೊಂದನ್ನು ಬೆಳೆಸಿಕೊಂಡಳು. ಅದನ್ನು ಗುರುತಿಸಿ ನಾವು ಸಂಗೀತದ ಜಾಡಿನಲ್ಲಿಯೇ ಬೆಳೆಸುವ ಪ್ರಯತ್ನ ಮಾಡುತ್ತಿದ್ದೇವೆ.” ಎಂಬುದು ಜೀವಿತಾ ಮೌನೇಶ ಅವರ ತಾಯಿ ಶ್ವೇತಾ ಮೌನೇಶ್ ಹಾಗೂ ತಂದೆ ಡಾ.ಮೌನೇಶ್ ಆಚಾರ್ ಅವರ ಮನದ ಮಾತು.
ಈ ಮರಿಕೋಗಿಲೆಗೆ ಶಾಸ್ರ್ತೀಯ ಸಂಗೀತದ ಅಭ್ಯಾಸ ಬಹುಮುಖ್ಯವಾದ್ದರಿಂದ ‘ಮಾನಸ’ ಎಂಬ ಸಂಗೀತ ಗುರುಗಳಿಂದ ಕರ್ನಾಟಕ ಸಂಗೀತದ ಪಾಠ ಈಗಾಗಲೇ ಶುರುವಾಗಿದ್ದು, ಶ್ರದ್ಧೆಯಿಂದ ದಿನಕ್ಕೊಂದು ಗಂಟೆ ಅಭ್ಯಾಸ ಮಾಡುತ್ತಾಳಂತೆ ಜೀವಿತಾ.
ಜೀ ಟಿವಿಯ ಸರಿಗಮಪ ಲಿಟ್ಲ್ ಚಾಂಪ್ಸ್ 14 ನೇ ಸೀಸನ್ ನಲ್ಲಿ ಸಾವಿರಾರು ಅಭ್ಯರ್ಥಿಗಳೊಟ್ಟಿಗೆ ಸ್ಪರ್ಧಿಸಿ, ಟಾಪ್ 30ರವರೆಗೆ ಟಾಕು ಟೀಕಾಗಿ ಪ್ರವೇಶ ಮಾಡಿದ್ದಳು ಈ ಮರಿ ಕೋಗಿಲೆ ಜೀವಿತಾ ಮೌನೇಶ್.
ಇನ್ನೇನು ಸ್ಪರ್ಧೆ ಆಯ್ಕೆಯಾಗಬೇಕು ಅನ್ನುವಷ್ಟರಲ್ಲಿ ದಿಢೀರನೆ ಕಾಡಿದ ಜ್ವರದಿಂದ ಕರ್ನಾಟಕದ ಮರಿಕೋಗಿಲೆ ಎಂದು ಜನರ ಬಾಯ್ಮಾತಾಗುವಲ್ಲಿ ಸುವರ್ಣ ಅವಕಾಶವೊಂದು ತಪ್ಪಿ ಹೋಯಿತು. ಈ ಮರಿಕೋಗಿಲೆಯು ‘ಕನ್ನಡವೇ ನಮ್ಮಮ್ಮ’, ‘ಅಮ್ಮಾನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ಹೇಳುವ ಹಾಡುಗಳಂತೂ ಕೇಳುಗರ ಕೈಕಾಲುಗಳು ತಮಗರಿವಿಲ್ಲದೇ ತಾಳ ಹಾಕಲು ಶುರುಮಾಡುತ್ತವೆ. ಅಂತಹದೊಂದು ತಾಕತ್ತು ಈ ಮರಿ ಕೋಗಿಲೆ ಜೀವಿತಾಳ ಧ್ವನಿಯಲ್ಲಿದೆ.
ದಾವಣಗೆರೆಯಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಲ್ಲಿ ಈ ಮರಿ ಕೋಗಿಲೆ ಭಾಗವಹಿಸಿ ಹಾಡಲಿಲ್ಲವೆಂದರೆ ಆ ಕಾರ್ಯಕ್ರಮ ಅಪೂರ್ಣವೇ ಸರಿ. ನಗರದಲ್ಲಿ ಸುರೇಶ್ ಬಾಬು ಎಂಬುವವರು ಆಯೋಜಿಸಿದ್ದ, ‘ಕುಹೂ ಕುಹೂ’ ಕ್ಯಾರಿಯೋಕೆ ಸ್ಪರ್ಧೆಯಲ್ಲಿ ಮಧುರವಾಗಿ ಹಾಡಿ ಎರಡನೇ ಬಹುಮಾನಗಿಟ್ಟಿಸಿದ್ದಳು. ಜೀ ಟಿವಿ ಆಯೀಜಿಸಿದ್ದ ‘ದಸರಾ ವಿಶೇಷ’ ಕಾರ್ಯಕ್ರಮದಲ್ಲಿ ಈ ಮರಿ ಬೊಂಬೆ “ ಬೊಂಬೆ ಹೇಳುತೈತೆ” ಎಂಬ ಹಾಡೇಳಿ ಎದುರಿದ್ದವರನ್ನು ವೇದಿಕೆಮೇಲಿದ್ದವರನ್ನು ಮಂತ್ರ ಮುಗ್ಧಗೊಳಿಸಿ ಅವರೆನ್ನೆಲ್ಲಾ ಗಾನಲೋಕಕ್ಕೆ ಕರೆದ್ಯೊಯ್ದಿದ್ದಳು ಎಂದು ಜೀವಿತಾ ಆಭಿಮಾನಿಯೊಬ್ಬರು ಹೇಳುತ್ತಾರೆ.
ಹಾಗೇ, ಶಂಕರ ಹಾಗೂ ಆಯುಶ್ ಟಿವಿಯ ‘ಪ್ಲಾಟ್ ಫಾರಂ ಟು ಪರ್‍ಪಾರ್ಮ್’ ಎಂಬ ಕಾರ್ಯಕ್ರಮದಲ್ಲಿ ‘ಬಾನಿಗೊಂದು ಎಲ್ಲೆ ಎಲ್ಲಿದೆ’ ಹಾಡ ಹೇಳಿ ರಂಜಿಸಿದ್ದಾಳೆ. ನಂತರ ಚಿತ್ರದುರ್ಗದಲ್ಲಿ ನಡೆದಹಲವು ಸಂಗೀತ ಕಾರ್ಯಕ್ರಮಗಳಲ್ಲಿ ಮರಿ ಕೋಗಿಲೆ ಭಾಗವಹಿಸಿದ್ದಾಳೆ. ಅವೆಂದರೆ, ಪಿ.ಬಿ. ಶ್ರೀವಾಸ್ ಹಿಟ್ಸ್, ಕನ್ನಡ ರಾಜ್ಯೋತ್ಸವದ ಹಲವು ಕಾರ್ಯಕ್ರಮಗಳು, ಸಾಹಿತಿ ಚಂಪಾ ಹಾಗೂ ಮುರುಘಾ ಶರಣರ ಎದುರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರ ಪ್ರೀತಿಯ ಮೆಚ್ಚುಗೆ ಪಡೆದವಳಾಗಿದ್ದಾಳೆ ಈ ಮರಿ ಕೋಗಿಲೆ ಜೀವಿತಾ.
ಒಟ್ಟಾರೆ ದಾವಣಗೆರೆಯ ಈ ಮರಿಕೋಗಿಲೆ ಜೀವಿತಾ ಮೌನೇಶ್ ಹಾಡಿಗೊಂದು ಹಾಡ ಹೇಳಿ, ಶೃತಿ, ತಾಳದೊಂದಿಗೆ ಬೆರೆತು ಭಾರತದ ಬಹುದೊಡ್ಡ ಗಾಯಕಿಯಾಗಲಿ ಎಂಬುದೇ ಈ ಕ್ಷಣದ ಅಂಬೋಣ.
ಜೀವಿತಾಳ ಹಾಡು ಮತ್ತು ನಟನೆಯ ವೀಡಿಯೋಗಳನ್ನು ಯೂಟ್ಯೂಬಿನಲ್ಲಿ ನೋಡಲು | jeevitha mounesh ಎಂದು type ಮಾಡಿ.
ಇದುವರೆಗೆ ಜೀವಿತಾ ನೀಡಿರುವ ಕಾರ್ಯಕ್ರಮಗಳು
- Zee Kannadaದಲ್ಲಿ ಬರುವ Sa Re Ga Ma Pa Season – 14 ರಲ್ಲಿ ದಾವಣಗೆರೆಯಲ್ಲಿ ನಡೆದ Audition ನಲ್ಲಿ ಸುಮಾರು 250 ಸ್ಪರ್ದಿಗಳೊಂದಿಗೆ ಭಾಗವಹಿಸಿ select ಆಗಿ, ಕರ್ನಾಟಕದಾದ್ಯಂತ 2.5 ಲಕ್ಷ ಸ್ಪರ್ದಿಗಳಲ್ಲಿ Top30 ವರೆಗೆ select ಆಗಿದ್ದರು.
- 16.6.2017 ರಲ್ಲಿ ನಡೆದ ಜಿಲ್ಲಾ ಮಟ್ಟದ “ಕುಹೂ ಕುಹೂ ದಾವಣಗೆರೆ ಕೋಗಿಲೆ” ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ.
- 2.3.2018 ರಂದು ನಡೆದ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 61ನೇ ಸ್ಮರಣೋತ್ಸವ 2018 ಹಾಗೂ ಶರಣ ಸಂಸ್ಕøತಿ ಉತ್ಸವದಲ್ಲಿ ಹಾಡಿ, ಡಾ|| ಶ್ರೀ ಶಿವಮೂರ್ತಿ ಮುರಘಾಶರಣರಿಂದ ಆಶಿರ್ವಾದ ಮತ್ತು ಗೌರವ ಸಮರ್ಪಣೆಯನ್ನು ಸ್ವೀಕರಿಸಿರುತ್ತಾರೆ.
- 20.11.2017 ರಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದಾವಣಗೆರೆ ಇವರು ನಡೆಸಿದ “ಚಿಗುರು” ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾವಗೀತೆ ಹಾಗೂ ಚಿತ್ರಗೀತೆ ಕಾರ್ಯಕ್ರಮ ನೀಡಿರುತ್ತಾರೆ.
- 1.12.2017 ರಂದು ದಾವಣಗೆರೆ ಜಿಲ್ಲೆ ಹೆಬ್ಬಾಳ ಮಠದಲ್ಲಿ ನಡೆದ 330ನೇ ಕಾರ್ತಿಕ ಮಹೋತ್ಸವದಲ್ಲಿ ವಚನ, ಭಾವಗೀತೆ ಹಾಗು ಚಿತ್ರಗೀತೆ ಕಾರ್ಯಕ್ರಮ ನೀಡಿರುತ್ತಾರೆ.
- 28.11.2017 ರಂದು ದಾವಣಗೆರೆ ಮಹಾನಗರ ಪಾಲಿಕೆ ಇವರು ನಡೆಸಿದ 62ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಚಿತ್ರಗೀತೆ ಹಾಡಿರುತ್ತಾರೆ.
- 12.8.2017 ರಂದು ಶಂಕರ ಹಾಗು ಆಯುಷ್ ಟಿವಿ ಯವರು ನಡೆಸಿದ Platform to Perform ನಲ್ಲಿ ಭಾಗವಹಿಸಿ ಚಿತ್ರಗೀತೆ ಹಾಡಿರುತ್ತಾರೆ.
- 21.9.2017 ರಂದು Zee Kannada ನಡೆಸಿದ ದಸರ ಪ್ರಯುಕ್ತ ವಿಶೇಷ ಕಾರ್ಯಕ್ರಮದಲ್ಲಿ ಚಿತ್ರಗೀತೆ ಹಾಡಿರುತ್ತಾರೆ.
- 2.2.2018 ರಂದು ವನಿತಾ ಸಮಾಜ ಪ್ರೇರಣಾ ರವರು ನಡೆಸಿದ ಕಾರ್ಯಕ್ರಮದಲ್ಲಿ ಚಿತ್ರಗೀತೆಗಳನ್ನು ಹಾಡಿರುತ್ತಾರೆ.
- 7.1.2018 ರಂದು “Davangere Expo 2018” ರಲ್ಲಿ ಚಿತ್ರಗೀತೆಗಳನ್ನು ಹಾಡಿರುತ್ತಾರೆ.
- 21.1.2018 ರಲ್ಲಿ Vasavi Cultural Academy, Chitradurga ಇವರು ಎರ್ಪಡಿಸಿದ ಪಿ.ಬಿ. ಶ್ರಿನಿವಾಸ್ ಹಿಟ್ಸ್ ಅಲ್ಲಿ ಹಾಡಿ ಜನರ ಮೆಚ್ಚುಗೆಯನ್ನ ಪಡೆದಿರುತ್ತಾರೆ.
- 28.12.2017 ರಲ್ಲಿ ದಾವಣಗೆರೆಯಲ್ಲಿ ಸಿ.ಅಶ್ವತ್ ಅವರ ಗೌರವಾರ್ಪಣೆ ಕಾರ್ಯಕ್ರಮ ಗುರುನಮನ ದಲ್ಲಿ ಭಾಗವಹಿಸಿದ ಅತೀ ಕಿರಿಯ ಗಾಯಕಿಯಾಗಿರುತ್ತಾರೆ.
- 26.11.2017 ರಂದು GMIT ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ “ನಂದಿತ” ರವರೊಂದಿಗೆ ಸ್ಟೆಜ್ ಶೇರ್ ಮಾಡಿ ಚಿತ್ರಗೀತೆಯನ್ನು ಹಾಡಿ ಅವರ ಮೆಚ್ಚುಗೆ ಪಡೆದಿರುತ್ತಾರೆ.
- ಶಾಲೆಯಲ್ಲಿ ನಡೆಯುವ ಎಲ್ಲಾ ಸಿಂಗಿಂಗ್ Competition ನಲ್ಲಿ ಪ್ರತೀ ಬಾರಿಯು ಮೊದಲ ಬಹುಮಾನ ಗಳಿಸಿರುತ್ತಾರೆ.
- 28.12.2016 ರಲ್ಲಿ ದಾವಣಗೆರೆಯಲ್ಲಿ ಸಿ.ಅಶ್ವತ್ ಅವರ ಗೌರವಾರ್ಪಣೆ ಕಾರ್ಯಕ್ರಮ ಗುರುನಮನ ದಲ್ಲಿ ಭಾಗವಹಿಸಿದ ಅತೀ ಕಿರಿಯ ಗಾಯಕಿಯಾಗಿರುತ್ತಾರೆ.
- ಇವರು ಹಾಡಿರುವ ಗೀತೆಗಳು facebook ನಲ್ಲಿ 1.7 ಸಾವಿರಕ್ಕೂ ಹೆಚ್ಚು view ಗಳು ಹಾಗು ಮೆಚ್ಚುಗೆಗಳು ಸಿಕ್ಕಿವೆ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ |9986715401

ದಿನದ ಸುದ್ದಿ
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್‍ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಇವರ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಬಹುದು. ಅರ್ಜಿ ನಮೂನೆಯನ್ನು ಸಂಬಂಧಿಸಿದ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ನಿರೀಕ್ಷಕರಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 11 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಚೇರಿ ದೂ ಸಂ:08192-237332 ಸಂಪರ್ಕಿಸಲು ಕಾರ್ಮಿಕ ಅಧಿಕಾರಿ ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ

ಸುದ್ದಿದಿನ ಡೆಸ್ಕ್ : ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ಸಮಿತಿ ತೀರ್ಪಿನ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಿನ್ನೆ ಹೇಳಿದ್ದಾರೆ.
ತಮಿಳುನಾಡಿಗೆ ನಾಳೆಯಿಂದ (ಸೆಪ್ಟಂಬರ್28) ಅಕ್ಟೋಬರ್ 15ರ ತನಕ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ನಂತೆ ನೀರು ಹರಿಸುವಂತೆ, ಕಾವೇರಿ ನದಿ ನೀರು ಸಮಿತಿ ನಿನ್ನೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಕಾವೇರಿ ನದಿ ನೀರು ಸಮಿತಿ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಈ ನಿರ್ದೇಶನ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ

ಸುದ್ದಿದಿನ, ಬಳ್ಳಾರಿ : ಸಿರಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಸವನಪೇಟೆ) ಮುಖ್ಯ ಗುರುಗಳಾದ ಶ್ರೀಮತಿ ಸುಮಂಗಳಾ ಮೇಟಿಯವರು 2023-24 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ವೃತ್ತಿ ಧರ್ಮ ನೇ ತನ್ನ ಸರ್ವಸ್ವ ಎಂದು ತಿಳಿದುಕೊಂಡಂತಹ ಶ್ರೀಮತಿ ಸುಮಂಗಳಾ ಮೇಟಿಯವರು, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಕರ್ತವ್ಯ ಹಾಗೂ ಸೇವೆಯನ್ನು ಸಲ್ಲಿಸಿದನ್ನು ಪರಿಗಣಿಸಿ ಈ ಹಿಂದೆಯೇ 2022-23 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಇವರ ಶಿಕ್ಷಣ ಕ್ಷೇತ್ರದಲ್ಲಿನ ಅಗಾಧವಾದ ಕರ್ತವ್ಯ ಮತ್ತು ಸೇವೆ ನಿಷ್ಠೆಯನ್ನು ಗುರುತಿಸಿದ ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ವತಿಯಿಂದ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಇದೇ ಸಂದರ್ಭದಲ್ಲಿ ಗ್ರಾಮಸ್ಥರು, ಸಮಸ್ತ ಶಿಕ್ಷಕರ ವರ್ಗದವರು, ಅತಿಥಿ ಶಿಕ್ಷಕರು, ಹಿತೈಷಿಗಳು, ಹಳೆಯ ವಿದ್ಯಾರ್ಥಿ ಬಳಗ, ಶಿಕ್ಷಣ ಪ್ರೇಮಿಗಳು, ಅಭಿಮಾನಿ ಬಳಗ,
ಮುಂತಾದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ3 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ2 days ago
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ