Connect with us

ದಿನದ ಸುದ್ದಿ

ಪಠ್ಯ ಪುಸ್ತಕ ಕೇಸರಿಕರಣದ ವಿರುದ್ಧ ಬೃಹತ್ ಪ್ರತಿಭಟನೆ : ಸಾವಿರಾರು ಜನ ಭಾಗಿ

Published

on

ಸುದ್ದಿದಿನ ಡೆಸ್ಕ್ : ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ( ಕರ್ನಾಟಕ) ವತಿಯಿಂದ ಬೆಂಗಳೂರಿನ ಕೇಂದ್ರೀಯ ರೈಲು ನಿಲ್ದಾಣದಿಂದ ಪ್ರೀಂಡಂ ಪಾರ್ಕ್‌ವರೆಗೆ ಮೆರವಣಿಗೆ ನಡೆದಿದೆ. ಈ ಪ್ರತಿಭಟನಾ ಸಮಾವೇಶದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು.

ಈ ಸಮಾವೇಶದ ಸಭೆಯಲ್ಲಿ ಬಸವಣ್ಣ, ಕುವೆಂಪು ಅವರನ್ನು ಅವಮಾನಿಸಿದವರು ಈ‌ ನೆಲದಲ್ಲಿ ಬದುಕಲು ಯೋಗ್ಯರಲ್ಲ. ಇತಿಹಾಸ ತಾಯಿ ಗರ್ಭವಿದಂತೆ, ಇತಿಹಾಸ ತಿರುಚಿದರೆ ತಾಯಿ ಗರ್ಭವನ್ನೇ ತಿರುಚಿದಂತೆ. ಇಂತಹ ಸಾಹಸಕ್ಕೆ ಕೈ ಹಾಕಬಾರದು. ನಾಡು ಸರ್ವ ಜನಾಂಗದ ಶಾಂತಿ ತೋಟ ಆಗಬೇಕು. ಎಂದು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಆಕ್ರೋಶ ಹೊರಹಾಕಿದರು.

“ಕುವೆಂಪು ಅವರ ಕುರಿತು ಮಾತನಾಡುವಷ್ಟು ನಾನು ದೊಡ್ಡವನಲ್ಲ” ಎಂದು ಈ ನೆಲದ ವರನಟ ಡಾ.ರಾಜ್ ಅವರು ಹೇಳಿದ್ದರು. ಅಂತಹ ಸರಳತೆ ಇರುವ ವ್ಯಕ್ತಿತ್ವ ಹೊಂದಿದವರು. ದೇವೇಗೌಡ, ಬರಗೂರು ರಾಮಚಂದ್ರಪ್ಪ, ಸೇರಿದಂತೆ ಅನೇಕ ಮಹನೀಯರು, ಹಿರಿಯ ಕವಿ, ಸಾಹಿತಿಗಳು, ನ್ಯಾಯಮೂರ್ತಿಗಳ ಇದ್ದಾರೆ. ಇವರನ್ನು ಬಿಟ್ಟು ಅನುಭವ ಇಲ್ಲದವರಿಂದ ಪರಿಷ್ಕರಣೆ ಅಗತ್ಯತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಶಾಲೆಗಳು ಆರ್ ಎಸ್ ಎಸ್ ನ ಪಡಶಾಲೆಯಲ್ಲ. ಈದೀಗ ಪಠ್ಯ ಪುಸ್ತಕ ಪರಿಷ್ಕರಣೆ ಆಗಿದೆ ಅವುಗಳನ್ನೇ ವಿತರಿಸುತ್ತೇವೆ ಎಂಬುದು ಸರಿಯಲ್ಲ. ಕೋವಿಡ್ ವೇಳೆ ಪಾಸ್ ಮಾಡಿದಂತೆ ವಿದ್ಯಾರ್ಥಿಗಳನ್ನು ಈ ವರ್ಷವು ಪಾಸ್ ಮಾಡಿ. ಆದರೆ ಪರಿಷ್ಕರಣೆಯಾದ ಪಠ್ಯವನ್ನು ಬೋಧಿಸುವುದು ಬೇಡ, ಹಳೆಯ ಪಠ್ಯ ಪುಸ್ತಕಗಳೇ ಬೇಕು ಎಂದು ಆಗ್ರಹಿಸಿದರು.

ಇಂದು ಪ್ರಜಾಪ್ರಭುತ್ವ ಜನರಿಗಾಗಿ ಇಲ್ಲ.‌ ಕೆಲವರಿಗಾಗಿ ಎಂಬಂತಾಗಿದೆ. ನಾಡ ಗೀತೆ ಅವಮಾನ ಆಗಿದ್ದು ಗೊತ್ತಾದ ಕೂಡಲೆ ಅಪರಾಧಿಗಳನ್ನು ಏಕೆ ಬಂಧಿಸಲಿಲ್ಲ. ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಸರ್ಕಾರಕ್ಕೆ ನೈತಿಕತೆ ಇಲ್ಲ. ಬರಗೂರು ಸಮಿತಿ ಅಂತಿಮ ಮಾಡಿದ ಹಳೆಯ ಪಠ್ಯ ಪುಸ್ತಕಗಳೇ ನೀಡಬೇಕು.

ಶಿಕ್ಷಣ ಕ್ಷೇತ್ರಕ್ಕೆ ಜನಿವಾರ ಹಾಕುವ ಕೆಲಸ ಮಾಡಬಾರದು. ನಾವು ಯಾವ ಜಾತಿ ಜನಾಂಗದ ವಿರೋಧಿಗಳೂ ಅಲ್ಲ. ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಹೊಸ ಪಠ್ಯ ಪುಸ್ತಕವನ್ನು ನೀಡಲು ಬಿಡುವುದಿಲ್ಲ. ಈ ನಿಟ್ಟಿನಲ್ಲ ನಾವೇಲ್ಲರು ಒಕ್ಕೋರಲಿನಿಂದ ಹೋರಾಡಲಿದ್ದೇವೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಕೆ ನೀಡಿದರು‌.

ಎಲ್ಲರ ಭಾವನಾತ್ಮಕ ವಿಚಾರಗಳೂ ಮೌಲ್ಯವನ್ನು ಹೊಂದಿರುತ್ತವೆ ಎಂಬುದನ್ನು ಪರಿಗಣಿಸಬೇಕು. ನಾಡ ಧ್ವಜವನ್ನು ಒಳ ಉಡುಪಿಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ವ್ಯಕ್ತಿಗಳಿಗೆ ಸರ್ಕಾರದ ಮಟ್ಟದಲ್ಲಿ ಒಂದು ಸ್ಥಾನ ನೀಡುವುದು ಎಷ್ಟು ಸರಿ ಎಂದು ಯೋಚಿಸಿ.‌ ಇವೆಲ್ಲಾ ಅತೀ ಸೂಕ್ಷ್ಮ ವಿಷಯಗಳು. ಈಗಾಗಲೇ ಈ ತಪ್ಪನ್ನು ಸರಿಪಡಿಸಬೇಕಿತ್ತು. ನಿನ್ನೆ ಈ ಬಗ್ಗೆ ಸಿಎಂ ಹೇಳಿದ್ದಾರೆ. ತುಂಬಾ ವಿಳಂಬದ ನಂತರ ಸಿಎಂ ತಪ್ಪು ತಿದ್ದಲು ಮುಂದಾಗಿದ್ದಾರೆ. ಶಾಲೆ ಆರಂಭವಾಗಿ ತಿಂಗಳಾಯ್ತು ಎಂದು ವಿವರಿಸಿದರು. ತಮಗೆ ಬೇಕಾದ ರೀತಿಯಲ್ಲಿ ಸಂವಿಧಾನವನ್ನು, ‌ಪಠ್ಯವನ್ನು ತಿದ್ದಿವುದು ತಪ್ಪು. ಅದನ್ನು ಸಮಾಜ ಒಪ್ಪುವುದಿಲ್ಲ. ಸಂವಿಧಾನಕ್ಕೆ, ಅಂಬೇಡ್ಕರ್ರಿಗೆ, ಶರಣರಿಗೆ ಹೀಗೆ ಎಲ್ಲಾ ವರ್ಗದವರಿಗೆ ಗೌರವ ಕೊಡಬೇಕು ಎಂದು ಶ್ರೀ ನಂಜಾವಧೂತ ಸ್ವಾಮೀಜಿ‌ ಹೇಳಿದರು.

ಇಂದು ನಡೆಸುತ್ತಿರುವ ಸಾಂಕೇತಿಕ ಪ್ರತಿಭಟನೆ. ಸೂಕ್ಷ್ಮ ವಿಚಾರಗಳನ್ನು ಅರಿತುಕೊಳ್ಳದೇ ವಿಷಯ, ವ್ಯಕ್ತಿಗಳ ಅಪಮಾನಕ್ಕೆ ಮುಂದಾದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ.. ಅದು ಆಗಬಾರದೆಂದರೆ ಸೂಕ್ಷ್ಮ ವಿಚಾರಗಳ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಇಂದಿನ ಸಮಾವೇಶವನ್ನು ಎಚ್ಚರಿಕೆ ಸಭೆ ಎಂದು ಭಾವಿಸಬೇಕು. ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರ ವಹಿಸಬೇಕು. ಇಲ್ಲವಾದರೆ ಮಠಾಧೀಶರು, ದಲಿತರು, ಸಾಹಿತಿಗಳು, ಕನ್ನಡಪರ‌ ಹೋರಾಟಗಾರರು ಎಲ್ಲರೂ ಸೇರಿ ಸಂಘಟಿತರಾಗಿ ಬೀದಿಗಿಳಿಯಬೇಕಾಗುತ್ತದೆ. ಆಗಿರುವ ತಪ್ಪನ್ನು ಸರಿಪಡಿಸುವ ವಿಚಾರವನ್ನು ಯಾರೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಬೇಡ. ಈ ಸಮಿತಿ ಜೊತೆಗೆ ನಾವು ಸದಾ ಇರುತ್ತೇವೆ ಎಂದರು.

“ತಪ್ಪಾಗಿರುವ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ!” ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಯಿತು. ಈ ಪ್ರತಿಭಟನೆಯಲ್ಲಿ ಕರ್ನಾಟಕ ಭೀಮ ಸೇನೆ, ರಾಜ್ಯ ಒಕ್ಕಗಲಿಗರ ಸಂಘ, ಸಿಐಟಿಯು, ದಲಿತ ಹಕ್ಕುಗಳ ಸಮಿತಿ, ಅಲೆಮಾರಿ ಬುಡಕಟ್ಟು ಮಹಾಸಭಾ, ಕೆಆರ್‌ಎಸ್‌ ಪಕ್ಷ, ದಲಿತ ಸಂಘರ್ಷ ಸಮಿತಿ, ಭೀಮ್‌ ಆರ್ಮಿ, ಕಾಂಗ್ರೆಸ್ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಮೊದಲಾದ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ರಾಜಕೀಯ ನಾಯಕರಾದ ರಾಮಲಿಂಗ ರೆಡ್ಡಿ, ಡಿ.ಕೆ.ಶಿವಕುಮಾರ್‌, ಸಿ.ಎಂ. ಇಬ್ರಾಹಿಂ, ಮುಖ್ಯಮಂತ್ರಿ ಚಂದ್ರು, , ಶಾಸಕ ಕೃಷ್ಣಪ್ಪ, ಶಿವರಾಮೇಗೌಡ, ಪ್ರವೀಣ್‌ ಶೆಟ್ಟಿ, ಸಂಗೀತ ನಿರ್ದೇಶಕ ಹಂಸಲೇಖ, ಜಸ್ಟೀಸ್ ನಾಗಮೋಹನ, ಚಿಂತಕ ಎಸ್‌.ಜಿ.ಸಿದ್ದರಾಮಯ್ಯ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

(ಕೃಪೆ : ವಸಂತ ಋತು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending