Connect with us

ದಿನದ ಸುದ್ದಿ

ಹೆಬ್ಬಾವಿನ ಹೊಟ್ಟೆಯಲ್ಲಿದ್ದ ಮಹಿಳೆ : ವೀಡಿಯೊ ನೋಡಿ..!

Published

on

ಸುದ್ದಿದಿನ ಡೆಸ್ಕ್ : ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಹೆಬ್ಬಾವು ನುಂಗಿದ್ದು, ಘಟನೆ ನಡೆದು ಕೆಲ ಹೊತ್ತಿನ ನಂತರ ನೋಡಿದ ಗ್ರಾಮಸ್ಥರು ಹೆಬ್ಬಾವನ್ನು ಕೊಂದು ಮಹಿಳೆ ದೇಹವನ್ನು ಹೊರ ತೆಗೆದಿದ್ದಾರೆ.

ಇಂಡೋನೇಷ್ಯಾದ ಮುನಾ ಐಸ್ಲ್ಯಾಂಡ್ ನ ಸುಲಾವೆಸಿ ಹತ್ತಿರದ ಪರ್ಸೀಪನ್ ಲಾಲಾ ಗ್ರಾಮದ ತೋಟದಲ್ಲಿ ಕೆಲಸ ಮಾಡುತ್ತಿದ್ದ 54 ವರ್ಷದ ಮಹಿಳೆ ವಾ ಟಿಬಾ ಎಂಬಾಕೆಯನ್ನು ಏಳು ಮೀಟರ್ ಉದ್ದದ (23 ಅಡಿ) ದೈತ್ಯ ಹೆಬ್ಬಾವೊಂದು ನುಂಗಿದೆ. ನಂತರ ಹೆಬ್ಬಾವಿನ ಹೊಟ್ಟೆ ಉಬ್ಬಿಕೊಂಡಿದ್ದನ್ನು ನೋಡಿದ ಪರ್ಸೀಪನ್ ಲಾಲಾ ಗ್ರಾಮದ ಸ್ಥಳೀಯರು ಅದರ ಹೊಟ್ಟೆ ತುಂಡರಸಿ ಮಹಿಳೆಯನ್ನು ಹೊರತೆಗೆದಿದ್ದಾರೆ. ಈ ಹೊತ್ತಿಗಾಗಲೇ ಮಹಿಳೆ ಮೃತಪಟ್ಟಿದ್ದಳು.

ಮಹಿಳೆ ಕೆಲಸ ಮಾಡುತ್ತಿದ್ದ ತೋಟದ ಹತ್ತಿರದಲ್ಲೇ ಬೃಹದಾಕಾರದ ಬಂಡೆಗಳು, ಗುಹೆ ಇದ್ದು, ಅದು ಹಾವುಗಳ ವಾಸಸ್ಥಾನವಾಗಿದೆ. ಹೆಬ್ಬಾವು ಮಹಿಳೆಯನ್ನು ನುಂಗಿದೆ ಎಂದು ಶಂಕಿಸಿದ ಸ್ಥಳೀಯರು ಅದರ ಹೊಟ್ಟೆ ಕತ್ತರಿಸಿದ್ದಾರೆ. ಆಗ ಮಹಿಳೆ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ನಲ್ಲಿ ಆರು ಅಡಿ ಉದ್ದದ ಹೆಬ್ಬಾವುಗಳು ಪ್ರತಿದಿನವೂ ಕಾಣಿಸುವುದು ಸಾಮಾನ್ಯ. ಸಣ್ಣಪುಟ್ಟ ಪ್ರಾಣಿಗಳನ್ನು ಭೇಟಿಯಾಡುತ್ತವೆ. ಆದರೆ, ಮನುಷ್ಯರನ್ನು ನುಂಗಿರುಬುದು ಅಪರೂಪ. ಕಳೆದ ವರ್ಷ ಮಾರ್ಚ್ ನಲ್ಲಿ ಸಲೂಬಿರೊ ಗ್ರಾಮದಲ್ಲಿ ರೈತನೊಬ್ಬನನ್ನು ಹೆಬ್ಬಾವು ನುಂಗಿದ ಘಟನೆ ನಡೆದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಪಡಿತರ ವಿತರಕರಿಗೆ ಕಮಿಷನ್ ಮೊತ್ತ ಹೆಚ್ಚಳ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು : ಪಡಿತರ ವಿತರಕರಿಗೆ ಪ್ರತಿ ಕೆ.ಜಿ. ಅಕ್ಕಿಗೆ ಕಮಿಷನ್ ಮೊತ್ತ ಒಂದೂವರೆ ರೂಪಾಯಿ ಹೆಚ್ಚಳಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅನ್ನಭಾಗ್ಯ ದಶಮಾನೋತ್ಸವ ಹಸಿವು ಮುಕ್ತ ಕರ್ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಕಾಯಕ ದಾಸೋಹದ ಪರಿಕಲ್ಪನೆ ಅನ್ನಭಾಗ್ಯಕ್ಕೆ ಪ್ರೇರಣೆಯಾಗಿತ್ತು. ಆಹಾರ ಉತ್ಪಾದನೆ ಮಾಡುವವರು ಕಾಯಕ ಜೀವಿಗಳು ಹಸಿವಿನಿಂದ ಮಲಗಬಾರದು. 5 ಕೆ.ಜಿ. ಅಕ್ಕಿಗೆ ಬದಲಾಗಿ ಪ್ರತಿ ಕೆ.ಜಿ.ಗೆ 34 ರೂಪಾಯಿಯಂತೆ ಫಲಾನುಭವಿಗಳಿಗೆ ನೇರ ನಗದು ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಉದ್ದೇಶ ರಾಜ್ಯವನ್ನು ಹಸಿವು, ಅನಾರೋಗ್ಯ, ಅನಕ್ಷರತೆ, ನಿರುದ್ಯೋಗ ಮುಕ್ತ ಮಾಡುವುದೇ ಆಗಿದೆ. ಸರ್ಕಾರದ ಯೋಜನೆಗಳಿಂದ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಗ್ರಾಹಕ ರಕ್ಷಕ ತಪಾಸಣೆ ವಾಹನಗಳಿಗೆ ಚಾಲನೆ ಹಾಗೂ ತೂಕ ಮತ್ತು ಅಳತೆಗಳ ಗ್ರಾಹಕರ ಜಾಗೃತಿ ಕೈಪಿಡಿ ಬಿಡುಗಡೆ ಮಾಡಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿಯ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ ಎನ್.ಬಿ.ಭಾರ್ಗವಿ ದ್ರಾವಿಡ್ ಆಯ್ಕೆ

Published

on

ಸುದ್ದಿದಿನ,ಚಿತ್ರದುರ್ಗ : ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಯಾಗಿ ಚಿತ್ರದುರ್ಗದ ಶ್ರೀಮತಿ ಎನ್.ಬಿ.ಭಾರ್ಗವಿ ದ್ರಾವಿಡ್ ಅವರನ್ನು ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಂಸದರಾದ ತೇಜಸ್ವಿ ಸೂರ್ಯ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜ್ ರವರು ಅಧಿಕೃತ ನೇಮಕ ಪತ್ರ ನೀಡುವುದರ ಮೂಲಕ ಆಯ್ಕೆ ಮಾಡಲಾಯಿತು.

ಭಾರ್ಗವಿ ದ್ರಾವಿಡ್ ಅವರು ಈ ಹಿಂದೆ ಭಾರತ ಸರ್ಕಾರವು ಚಿತ್ರದುರ್ಗ ನೆಹರು ಯುವ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾಗಿ ನೇಮಕ ಮಾಡಿತ್ತು. ಹಾಗೂ ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಲಾಗಿತ್ತು.

ಎಸ್.ಸಿ.ಮೋರ್ಚಾದ ರಾಜ್ಯ ಕಾರ್ಯ ಕಾರಿಣಿ ಸದಸ್ಯರಾಗಿ ಪ್ರವಾಸ ಕೈಗೊಂಡು ಕೆಲಸ ಮಾಡಿದ್ದರು. ಎ.ಬಿ.ವಿ.ಪಿ ಸಂಘಟನೆಯಲ್ಲಿಯೂಸಹ ಸಾಕಷ್ಟು ರಾಜ್ಯ ಮಟ್ಟದ ಜವಾಬ್ದಾರಿ ಗಳನ್ನು ನಿಭಾಯಿಸಿದ್ದರು.ಬರುವ 2024 ರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಕೂಡ ಆಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಪಿಎಲ್, ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಎಪಿಎಲ್, ಬಿಪಿಎಲ್ ಪಡಿತರ ಚೀಟಿಗಳಿಗಾಗಿ ಹೊಸ ಅರ್ಜಿಗಳನ್ನು ಏಪ್ರಿಲ್ 1 ರಿಂದ ಸ್ವೀಕರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ವಿಧಾನಸಭೆಗೆ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ಆದಾಯ1.20 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಅಂತಹವರನ್ನು ಬಿಪಿಎಲ್ ಚೀಟಿಯಿಂದ ಹೊರಗಿಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಪಡಿತರ ವಿತರಕರಿಗೆ ಕಮಿಷನ್ ಮೊತ್ತ ಹೆಚ್ಚಳ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ, ಬೆಂಗಳೂರು : ಪಡಿತರ ವಿತರಕರಿಗೆ ಪ್ರತಿ ಕೆ.ಜಿ. ಅಕ್ಕಿಗೆ ಕಮಿಷನ್ ಮೊತ್ತ ಒಂದೂವರೆ ರೂಪಾಯಿ ಹೆಚ್ಚಳಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಗುರುವಾರ ಬೆಂಗಳೂರಿನ ಅರಮನೆ...

ದಿನದ ಸುದ್ದಿ1 week ago

ಬಿಜೆಪಿಯ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ ಎನ್.ಬಿ.ಭಾರ್ಗವಿ ದ್ರಾವಿಡ್ ಆಯ್ಕೆ

ಸುದ್ದಿದಿನ,ಚಿತ್ರದುರ್ಗ : ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಯಾಗಿ ಚಿತ್ರದುರ್ಗದ ಶ್ರೀಮತಿ ಎನ್.ಬಿ.ಭಾರ್ಗವಿ ದ್ರಾವಿಡ್ ಅವರನ್ನು ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ...

ದಿನದ ಸುದ್ದಿ2 weeks ago

ಎಪಿಎಲ್, ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಆಹ್ವಾನ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಎಪಿಎಲ್, ಬಿಪಿಎಲ್ ಪಡಿತರ ಚೀಟಿಗಳಿಗಾಗಿ ಹೊಸ ಅರ್ಜಿಗಳನ್ನು ಏಪ್ರಿಲ್ 1 ರಿಂದ ಸ್ವೀಕರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ...

ದಿನದ ಸುದ್ದಿ2 weeks ago

ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ : ಅವಧಿ ವಿಸ್ತರಣೆ

ಸುದ್ದಿದಿನ ಡೆಸ್ಕ್ : ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಗಡುವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ...

ದಿನದ ಸುದ್ದಿ1 month ago

ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2022 ನೇ ಸಾಲಿನ ಕನ್ನಡ ಪುಸ್ತಕ ಕೃತಿಗಳ ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ...

ಕ್ರೀಡೆ1 month ago

ಅಭಿಮಾನಿಗಳೊಂದಿಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ‘ಸ್ಟಾರ್ ಟಾಕ್’ ಕಾರ್ಯಕ್ರಮ

ಸುದ್ದಿದಿನ,ಬೆಂಗಳೂರು : ಜಗತ್ತಿನ ಅತ್ಯುನ್ನತ ಅಥ್ಲೆಟ್ ಗಳಿಂದ ಸ್ಫೂರ್ತಿ ಪಡೆದ ಕ್ರೀಡಾ ಉಡುಪುಗಳ ಬ್ರಾಂಡ್ – ಪರಿಮ್ಯಾಚ್ ಸ್ಪೋರ್ಟ್ಸ್ ಬೆಂಗಳೂರಿನ ಮಂತ್ರಿ ಸ್ಟೋರ್ ಮಾಲ್‌ನಲ್ಲಿ ಭಾನುವಾರ ಖ್ಯಾತ...

ದಿನದ ಸುದ್ದಿ1 month ago

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು...

ದಿನದ ಸುದ್ದಿ1 month ago

ಜ.20 ಹಾಗೂ 21 ರಂದು ಗ್ರೂಪ್ ಸಿ ಹುದ್ದೆಗಳಿಗೆ ಪರೀಕ್ಷೆ ; ಸಕಲ ಸಿದ್ದತೆ : ಎಡಿಸಿ ಪಿ.ಎನ್ ಲೋಕೇಶ್

ಸುದ್ದಿದಿನ,ದಾವಣಗೆರೆ : ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ ಪರಿವೀಕ್ಷಕರ ಗ್ರೂಪ್ ಸಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಜ.20, 21...

ದಿನದ ಸುದ್ದಿ2 months ago

ಗಣಿತಜ್ಞ ಶ್ರೀನಿವಾಸ್ ರಾಮಾನುಜಾನ್ ಮತ್ತು ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಸುದ್ದಿದಿನ,ಹರಪನಹಳ್ಳಿ : ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಕುಂಚೂರಿನಲ್ಲಿ ನಮ್ಮ ದೇಶ ಕಂಡ ಶ್ರೇಷ್ಠ ಗಣಿತ ರತ್ನ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ...

ದಿನದ ಸುದ್ದಿ2 months ago

ಪರಿಶಿಷ್ಟ ಜಾತಿ ಯುವಜನರಿಗೆ ‘ನಿರೂಪಣಾ ಮತ್ತು ವಾರ್ತಾ ವಾಚಕರ ತರಬೇತಿ ಶಿಬಿರ’ : ಅರ್ಜಿ ಆಹ್ವಾನ

ಸುದ್ದಿದಿನ, ಬೆಂಗಳೂರು : 2023-24ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಯುವಜನರಿಗೆ ಅನುಷ್ಠಾನಗೊಳಿಸಲಿರುವ ತರಬೇತಿ ಶಿಬಿರಕ್ಕೆ...

Trending