ದಿನದ ಸುದ್ದಿ
ಸಾವಿರ ರೂ. ಹೊಸ ನೋಟಲ್ಲಿ ಗುಜರಾತ್ ರಾಣಿ ಉದಯಮತಿ ಇತಿಹಾಸ ?

ಸುದ್ದಿದಿನ ಡೆಸ್ಕ್: ಹೊಸದಾಗಿ ಬಿಡುಗಡೆಯಾಗಲಿರುವ ಸಾವಿರ ರೂ.ನೋಟುಗಳಲ್ಲಿ ಗುಜರಾತ್ ರಾಣಿ ಉದಯಮತಿ ಇತಿಹಾಸ ಇದೆ ಎನ್ನುವ ವಿಷಯ ಈಗ ಜಾಅಲತಾಣಗಳಲ್ಲಿ ಹರಿದಾಡುತ್ತಿವೆ.
ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿರೋ 100 ರ ಹೊಸ ನೋಟಿಗೂ.. ಗುಜರಾತ್‌ನ ರಾಣಿಗೂ, ಪ್ರಧಾನಿ ಮೋದಿಗೂ ಒಂದು ಲಿಂಕ್ ಇದೆ. ಅದೇನಪ್ಪಾ ಅಂದ್ರೆ ರಿಲೀಸ್ ಆಗಲಿರೋ ಹೊಸ 100 ರ ನೋಟಿನಲ್ಲಿ ಗುಜರಾತ್ ರಾಣಿಯ ಇತಿಹಾಸವನ್ನ ಸಾರುವ ರಾಣಿ ಕಿ ವಾವ್ ಚಿತ್ರವನ್ನ ಸೇರಿಸಿದೆ.
ಈ ರಾಣಿ ಕಿ ವಾವ್ ಗುಜರಾತ್‌ನ ಪಠಾಣ್‌ನಲ್ಲಿರೋ ಪಾರಂಪರಿಕ ಸ್ಥಳ. ಯುನ್ಸ್ಕೋನ ವಿಶ್ವ ಪ್ರಸಿದ್ದ ಪಾರಂಪರಿಕ ಸ್ಥಳಗಳ ಪೈಕಿ ಇದೂ ಒಂದು.. ಈ ರಾಣಿ ಕಿ ವಿವಾ ತಲೆ ಕೆಳಗಾದ ದೇವಸ್ಥಾನವೂ ಹೌದು ಹಾಗೂ ಜಲ ಶೇಖರಣೆ ಮಾಡುವ ಮೆಟ್ಟಿಲಿನ ಬಾವಿಯೂ ಕೂಡ.. ನಿಜಕ್ಕೂ ಇದರ ನಿರ್ಮಾಣ ಅಚ್ಚರಿ ಆಗುತ್ತೆ. ಇಂತಹ ಒಂದು ಸ್ಮಾರಕವನ್ನ ನಿರ್ಮಿಸಿದ ಆ ರಾಣಿಯ ಹೆಸರು ಉದಯಮತಿ.
11 ನೇ ಶತಮಾನದಲ್ಲಿ ಚೌಲುಕ್ಯ ಸಾಮ್ರಾಜ್ಯದ ಭೀಮ ಮಹಾರಾಜನ ನೆನಪಿಗಾಗಿ ರಾಣಿ ಉದಯಮತಿ ಮತ್ತು ಮಗ ಕರ್ಣ ಈ ದೇವಾಲಯದ ಬಾವಿಯನ್ನ ನಿರ್ಮಿಸಿದ್ರು.. ಈ ದೇವಾಲಯದ ಪಕ್ಕದಲ್ಲೇ ಸರಸ್ವತಿ ನದಿ ಹರೀತಿರೋದ್ರಿಂದ ಅಲ್ಲಿನ ನೀರನ್ನ ಇಲ್ಲಿ ಶೇಖರಣೆ ಮಾಡಲಾಗ್ತಿತ್ತು.. ಈ ದೇವಾಲಯದಲ್ಲಿ ವಿಷ್ಣು, ರಾಮ, ಕೃಷ್ಣ, ನರಸಿಂಹ, ವಾಮನ ವರಾಹಿ ದೇವರುಗಳು ಸೇರಿದಂತೆ ಅನೇಕ ಶಿಲಾಕೃತಿಗಳನ್ನ ಕೆತ್ತಲಾಗಿದೆ.. ಏಳು ಗ್ಯಾಲರಿಗಳಲ್ಲಿ ಸುಮಾರು 800 ಕಲಾಕೃತಿಗಳಿರೋ ಈ ರಾಣಿ ಕಿ ವಾವ್ ಇವತ್ತಿಗೂ ತನ್ನ ಸೌಂದರ್ಯವನ್ನ ಕೆಡಿಸಿಕೊಳ್ಳದೇ ಪ್ರವಾಸಿಗರನ್ನ ಆಕರ್ಷಿಸುತ್ತಿದೆ..
ಸದ್ಯ ಈ ರಾಣಿ ಕಿ ವಾವ್ ಭಾರತದ ಮೆಟ್ಟಿಲಿನ ಭಾವಿ ಎಂದೇ ಖ್ಯಾತವಾಗಿದೆ. ಇದರ ತಳದಲ್ಲೊಂದು ಸುರಂಗಕ್ಕೆ ಬಾಗಿಲಿದ್ದು ಇಲ್ಲಿಂದ ಹೊರ ನಡೆದರೆ 30 ಕಿ.ಮೀ ದೂರದ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ.. ಇನ್ನು ಈ ದೇವಾಲಯದ ಸುತ್ತ ಮುತ್ತ 50-60 ವರ್ಷಗಳ ಹಿಂದೆ ಆಯುರ್ವೇದ ಔಷಧಿಗೆ ಸಂಬಂಧಿಸಿದ ಗಿಡಗಳಿದ್ದವಂತೆ. ಇದರ ಪರಿಣಾಮವೋ ಏನೋ ಈ ಬಾವಿಯಲ್ಲಿನ ನೀರು ಇಂದಿಗೂ ಔಷಧಿಯಾಗಿ ಬಳಸಲಾಗ್ತಿದ್ಯಂತೆ. ಜ್ವರ ಸೇರಿದಂತೆ ಹಲವಾರು ರೋಗಗಳಿಗೆ ಈ ಬಾವಿಯ ನೀರು ಮದ್ದಂತೆ..
ರಾಣಿ ಉದಯಮತಿ ತನ್ನ ಪತಿಗಾಗಿ ನಿರ್ಮಿಸಿದ ಈ ದೇವಾಲಯದ ಬಾವಿ ಮೋದಿ ಮನಸ್ಸನ್ನ ಸೂರೆಗೊಂಡಿದೆ. ಹಾಗಾಗಿ ಇದನ್ನ 2016 ರಲ್ಲಿ ಮೋದಿ ಅವರು ಸ್ವಚ್ಚ ಪಾರಂಪರಿಕ ತಾಣ ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲ ಮಹೇಶ ಬಾಬು ನಟಿಸಿರೋ ತೆಲಗಿನ ದೂಕುಡು ಚಿತ್ರದ ಶೂಟಿಂಗ್ ಕೂಡ ಇಲ್ಲೇ ನಡೆದಿದೆ. ಇದೀಗ ಮೋದಿ ಬಿಡುಗೆಡೆ ಮಾಡಲಿರೋ 100ರ ನೋಟಿನಲ್ಲೂ ಸ್ಥಾನ ಪಡೆದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ; ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಉಚಿತ ಪ್ರಯಾಣ

ಸುದ್ದಿದಿನ ಡೆಸ್ಕ್ : ಇದೇ 12 ರಿಂದ 19 ರವರೆಗೆ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. “ಪ್ರವೇಶ ಪತ್ರ” ತೋರಿಸಿ, ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕನ್ನಡ ಸಾಹಿತ್ಯ ಪರಿಷತ್ | ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟ

ಸುದ್ದಿದಿನ, ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟವಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು 2022ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಪ್ರಶಸ್ತಿಯು 51 ಸಾವಿರ ರೂಪಾಯಿ ನಗದು, ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

ಸುದ್ದಿದಿನ ಡೆಸ್ಕ್ : 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಮಿತಿ ಅನುಮೋದಿಸಿದೆ.
ಸಾಮಾನ್ಯ ದರ್ಜೆ ಭತ್ತಕ್ಕೆ ಕ್ವಿಂಟಲ್ಗೆ 2 ಸಾವಿರದ 40 ರೂಪಾಯಿಯಿಂದ 2ಸಾವಿರದ 183 ರೂಪಾಯಿಗೆ ಹಾಗೂ ’ಎ’ ದರ್ಜೆ ಭತ್ತಕ್ಕೆ 2 ಸಾವಿರದ 60 ರಿಂದ 2 ಸಾವಿರದ 203 ರೂಪಾಯಿಗೆ ಹೆಚ್ಚಿಸಲಾಗಿದೆ.
ರಾಗಿಗೆ ಪ್ರತಿ ಕ್ವಿಂಟಲ್ಗೆ 3 ಸಾವಿರದ 578 ರೂಪಾಯಿಯಿಂದ 3 ಸಾವಿರದ 846 ರೂಪಾಯಿಗೆ ಹೆಚ್ಚಿಸಲಾಗಿದೆ. ತೊಗರಿಗೆ ಪ್ರತಿ ಕ್ವಿಂಟಲ್ಗೆ 6 ಸಾವಿರದ 600 ರಿಂದ 7 ಸಾವಿರ ರೂಪಾಯಿಗೆ, ಹೆಸರು ಕಾಳಿಗೆ ಪ್ರತಿ ಕ್ವಿಂಟಲ್ಗೆ 7 ಸಾವಿರದ 755 ರಿಂದ 8 ಸಾವಿರದ 558 ರೂಪಾಯಿಗೆ, ಪ್ರತಿ ಕ್ವಿಂಟಲ್ ಉದ್ದಿಗೆ 6 ಸಾವಿರದ 600 ರಿಂದ 6 ಸಾವಿರದ 950 ರೂಪಾಯಿಗೆ ಹೆಚ್ಚಿಸಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ 2022-23ನೇ ಸಾಲಿಗೆ 330.5 ದಶಲಕ್ಷ ಟನ್ನಷ್ಟು ಆಹಾರ ಧಾನ್ಯ ಉತ್ಪಾದನೆ ಅಂದಾಜಿಸಲಾಗದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಇಲ್ಲಿದೆ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕಂಪ್ಲೀಟ್ ಡೀಟೆಲ್ಸ್
-
ದಿನದ ಸುದ್ದಿ6 days ago
ಐದು ಗ್ಯಾರಂಟಿ | ಫಲಾನುಭವಿಗಳ ಆಯ್ಕೆ ಮಾನದಂಡ
-
ಲೈಫ್ ಸ್ಟೈಲ್4 days ago
ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!
-
ದಿನದ ಸುದ್ದಿ6 days ago
ಈ ವರ್ಷವೇ ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಚಿಂತನೆ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
-
ದಿನದ ಸುದ್ದಿ6 days ago
ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬಿತ್ತನೆ ಬೀಜ ಕೊರತೆಯಾಗದಂತೆ ರಾಜ್ಯಾದ್ಯಂತ ಕ್ರಮ
-
ದಿನದ ಸುದ್ದಿ6 days ago
ಡಿ.ಇ.ಎಲ್.ಇ.ಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ4 days ago
ಜೂನ್ 8 ರಿಂದ ಕೋಳಿ ಸಾಕಾಣಿಕೆ ತರಬೇತಿ ಶಿಬಿರ