ದಿನದ ಸುದ್ದಿ
ಇಸ್ರೊ ನನ್ನ ಉಸಿರೆಂದು ನಂಬಿದ್ದ ವಿಜ್ಞಾನಿಗೆ ಪೊಲೀಸರು ಕೊಟ್ಟ ಟಾರ್ಚರ್ ಹೇಗಿತ್ತು ಗೊತ್ತಾ?
ಭಾರತವು ಸ್ವದೇಶಿ ನಿರ್ಮಿತ ರಾಕೆಟ್ ಎಂಜಿನ್ ಅಭಿವೃದ್ಧಿಪಡಿಸುತ್ತಿತ್ತು. ಹೊಟ್ಟೆ ಕಿಚ್ಚು ತಾಳಲಾರದೆ ಅಮೆರಿಕ ನಡೆಸಿದ ಗೂಢಚರ್ಯೆ ಕಥಾ ಪ್ರಸಂಗದಲ್ಲಿ ಸಿಕ್ಕಿಬಿದ್ದವರು ಇಸ್ರೊದ ಖ್ಯಾತ ವಿಜ್ಞಾನಿ ನಂಬಿ ನಾರಾಯಣನ್.
ಬಹಳ ತಡವಾಗಿಯಾದರೂ ನಂಬಿ ಅವರಿಗೆ ನ್ಯಾಯ ಸಿಕ್ಕಿದೆ. 50 ಲಕ್ಷ ರೂ. ಪರಿಹಾರ ನೀಡಬೇಕಂದೂ ಸುಪ್ರೀಂ ಕೋರ್ಟ್ ಹೇಳಿದೆ. ನಂಬಿ ಅವರನ್ನು ಈ ಪ್ರಕರಣದಲ್ಲಿ ತಳಕುಹಾಕಿದ್ದಾದರೂ ಹೇಗೆ? ನಂಬಿ ಅವರೇ ಬರೆದಿರುವ ರೆಡಿ ಟು ಫೈರ್ ಪುಸ್ತಕದಲ್ಲಿ ತಮಗಾದ ಅನ್ಯಾಯ ಹಾಗೂ ಪೊಲೀಸರು ಕೊಟ್ಟ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಖುದ್ದು ವಿವರಿಸಿದ್ದಾರೆ. ಈ ಕುರಿತು ಸ್ಕ್ರಾಲ್ ಪ್ರಕಟಿಸಿರವ ವರದಿಯ ಕನ್ನಡ ಅವತರಣಿಕೆ ಇಲ್ಲಿದೆ.
ಸತ್ಯ ಮತ್ತು ಧರ್ಮ ಎಂದು ಹೇಳಿಕೊಂಡು ಬಂದ ಇಬ್ಬರು ನನ್ನ ಹಿಂದೆ ನಿಂತುಕೊಂಡರು. ಅವರಿಬ್ಬರು ನನ್ನ ಕುತ್ತಿಗೆ ಹಿಡಿದು ಅದುಮಿ ಕೆಳಗೆ ಕೂರಿಸಲಿದ್ದಾರೆ ಎಂಬುದನ್ನು ತಿಳಿಯಲು ನನಗೆ ಹೆಚ್ಚು ಕಾಲ ಹಿಡಿಯಲಿಲ್ಲ.
ಅವರಲ್ಲಿ ಹಿರಿಯ ಅಧಿಕಾರಿಯಂತೆ ಕಾಣುತ್ತಿದ್ದ ಒಬ್ಬ ನನ್ನನ್ನು ಹೀಗೆ ಕೇಳಿದ. “ನೀನೊಬ್ಬ ಹಿರಿಯ ವಿಜ್ಞಾನಿ. ಒಬ್ಬ ಬುದ್ದಿವಂತ ವ್ಯವಸ್ಥಾಪಕ. ದೇಶದ ಆಸ್ತಿ. ನೀನ್ಯಾಕೆ ಹೀಗೆ ಮಾಡಿದೆ?
ನಂಬಿ: ನಾನು ಏನು ಮಾಡಿದೆ?
ಅಧಿಕಾರಿ: ಗೂಢಚರ್ಯೆ.
ನಂಬಿ: ಯಾವ ಗೂಢಚರ್ಯೆ?
ಅಧಿಕಾರಿ: ಗಂಟಲು ಸರಿ ಮಾಡಿಕೊಂಡು ಹೇಳಿದ ಮಿಸ್ಟರ್ ನಂಬಿ, ಸಾರಿ ಡಾಕ್ಟರ್ ನಂಬಿ.
ನಂಬಿಎ: ನಾನು ಡಾಕ್ಟರ್ ಅಲ್ಲ ಮಿಸ್ಟರ್ ಸರಿ ಹೊಂದುತ್ತದೆ.
ಅಧಿಕಾರಿ: ಸರಿ ನನಗ್ಯಾಕೊ ಡಾಕ್ಟರ್ ಅನ್ನುವುದೇ ಸೂಕ್ತ ಎನಿಸುತ್ತದೆ. ಮತ್ತೊಮ್ಮೆ ಗಂಟಲು ಸರಿಮಾಡಿಕೊಂಡು ಕೇಳಿದ. ಹೇಳು ಯಾಕೆ ಹೀಗೆ ಮಆಡಿದೆ.
ನಂಬಿ: ದಯವಿಟ್ಟು ಅರ್ಥ ಮಾಡಿಕೊಳ್ಳಿ ನಾನು ಯಾವುದೇ ಅಪರಾಧ ಮಾಡಿಲ್ಲ. ನಿಮಗೆ ನಿಜವಾಗಿ ಏನು ಬೇಕು ಹೇಳಿ?
ಅಧಿಕಾರಿ: ನಿಜ ಬೊಗಳು.. ನೀನು ಒಪ್ಪಿಕೊಂಡ್ಯೋ ಸರಿ. ಇಲ್ದಿದ್ರೆ ನಿನ್ನನ್ನು ಒಪ್ಪಿಸೋದು ಹೇಗೆಂದು ನನಗೆ ಗೊತ್ತು.
ನಂಬಿ: ಅದು ಬೆದರಿಕೆಯ ಮೊದಲ ಹೆಜ್ಜೆಯಾಗಿತ್ತು (ಸ್ವಗತ)
ನಂಬಿ: ನನ್ನ ಅಪರಾಧವಾದರೂ ಏನು?
“ನಿಂಗೆ ಗೊತ್ತಿಲ್ಲವಾ? ಎದ್ದುನಿಂತು ಹೇಳಿದ. ನೀನು ದೇಶದ ರಕ್ಷಣೆಗೆ ಸಂಬಂಧಿಸಿದ ದಾಖಲೆಗಳನ್ನು ಪಾಕಿಸ್ತಾನಕ್ಕೆ ಮಾರಿದ್ದೀಯ. ಈಗ ಏನೂ ಗೊತ್ತಿಲ್ಲದವನಂತೆ ನಾಟಕ ಮಾಡ್ತಿದ್ದೀಯಾ? ಬೊಗಳು ಇದೆಲ್ಲ ಹೇಗೆ ಮಾಡಿದೆ ಅಂತ. ಇದಕ್ಕಾಗಿ ಅವರು ಕೊಟ್ಟ ಇನಾಮು ಎಷ್ಟು ಹೇಳು?
ಅದೇ ಸಮಯಕ್ಕೆ ಮತ್ತೆ ಮೂವರು ಅಧಿಕಾರಿಗಳು ರೂಂನೊಳಗೆ ಬಂದರು. ಅದರಲ್ಲಿ ಒಬ್ಬ ಬೂದಿ ಬಣ್ಣದ ಸಫಾರಿ ಸೂಟ್ ಹಾಕಿದ್ದ. ಅವರು ಇಂಟೆಲಿಜನ್ಸ್ ಬ್ಯೂರೋದ ಮುಖ್ಯಸ್ಥರು ಸಣ್ಣಗೆ ಕುಳ್ಳಗಿದ್ದ ಒಬ್ಬ ಅಧಿಕಾರಿಯು ನನಗೆ ಪರಿಚಯ ಮಾಡಿಸಿದ.
ಸಣ್ಣಗಿದ್ದ ಅಧಿಕಾರಿಯು ಇದ್ದಕ್ಕಿದ್ದಂತೆ ನನ್ನ ಮುಖದ ಮೇಲೆ ತಿವಿದು. ಹೇಳು ಸೂಳೆ ಮಗನೆ? ನಿನಗೆ ಗೊತ್ತಿಲ್ವಾ ನೀನು ಮಾಡಿದ ಅಪರಾಧ ಏನಂತ? ಇಲ್ಲ ನಂಗೆ ಗೊತ್ತಿಲ್ಲ ಎಂದೆ. ಕೆಲವು ಪೇಪರ್‍ಗಳನ್ನು ನನ್ನ ಮುಖಕ್ಕೆ ಎಸೆದು ಬೋಳಿಮಗನೆ ನೋಡು ನೀನು ಮಾಡಿರುವ ಅನಾಚಾರ ಯಾರ್ಗೂ ಗೊತ್ತಾಗಲ್ಲ ಅಂದುಕೊಂಡಿದ್ದೀಯಾ? ಭಾರತದ ರಾಕೆಟ್ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಮಾರಿದ್ದೀಯಾ? ನಿಂಗೆ ಗೊತ್ತಾ ಇದು ಎಷ್ಟು ದೊಡ್ಡ ಅಪರಾಧ ಹದಿನಾಲ್ಕು ವರ್ಷ ಕಂಬಿ ಎಣಿಸಬೇಕಾಗುತ್ತೆ ಹುಷಾರ್ ಅಂದ.
ಐಬಿಯ ದೊಡ್ಡ ವ್ಯಕ್ತಿ ಎಂದು ಪರಿಚಯಿಸಿದ್ದ ವ್ಯಕ್ತಿ ಕಡೆಗೆ ಬೊಟ್ಟುಮಾಡಿ. ನೋಡು ಅವರು ಈಗಿಂದೀಗಲೇ ದಿಲ್ಲಿಗೆ ಹೊರಡಬೇಕು. ಅವರ ವಿಮಾನಕ್ಕೆ ತಡವಾಗುತ್ತಿದೆ. ಬೇಗ ಒಪ್ಪಿಕೊ. ನಡೆದದ್ದು ಏನೆಂತ ಹೇಳಿಬಿಡು ಎಂದು ಪಿಸುಗುಟ್ಟಿದ.
ಕೆಲವೇ ಹೊತ್ತಿನ ನಂತರ ಗೊತ್ತಾಯಿತು. ಐಬಿಯ ದೊಡ್ಡ ವ್ಯಕ್ತಿ ಎಂದು ಹೇಳಿದ್ದ ವ್ಯಕ್ತಿ ವಾಸ್ತವದಲ್ಲಿ ಇಂಟೆಲಿಜೆನ್ಸ್ ಬ್ಯೂರೊದ ಜಂಟಿ ನಿರ್ದೇಶಕ ಎಂ ಕೆ. ಧರ್.
ನಾನೊಬ್ಬ ನಿರಪರಾಧಿ. ಯಾವ ತಪ್ಪ ಮಾಡಿಲ್ಲ. ನೀವು ನನ್ನನ್ನು ತಪ್ಪು ತಿಳಿದುಕೊಂಡಿದ್ದೀರ ಎಂದು ನಾನು ಮೆಲ್ಲ ಧ್ವನಿಯಲ್ಲೇ ಹೇಳಿದೆ.
ಇಲ್ಲ ಎಂದು ಜೋರಾಗಿ ಅರುಚಿದ ಅಧಿಕಾರಿ, ಬೋಳಿಮಗನೆ ಹೇಳು ಮಾರಿಯಂ ರಶೀದಾಳನ್ನು ಎಲ್ಲಿ ಭೇಟಿಯಾಗಿದ್ದೆ?
ನಂಬಿ: ನಾನು ಯಾವಾಗಲೂ ಭೇಟಿಯಾಗಿಲ್ಲ
ಅಧಿಕಾರಿ: ಬಡವ ರಾಸ್ಕಲ್ ಎಷ್ಟು ಧೈರ್ಯವಿದ್ದರೆ ನನ್ನ ಹತ್ತಿರನೇ ಸುಳ್ಳು ಹೇಳುತ್ತಿದ್ದೀಯಾ? ನೀವಿಬ್ಬರು ಭೇಟಿಯಾಗಿದ್ದಾಗೆ ಮೇರಿಯಂ ಖುದ್ದು ಒಪ್ಪಿಕೊಂಡಿದ್ದಾಳೆ. ನಿಜ ಬೊಗಳು.
ನಂಬಿ: ನೀವು ಹೇಳುತ್ತಿರುವ ಮಾಲ್ಡೀವಿಯಾ ಪ್ರಜೆಯನ್ನು ನಾನು ಎಂದಿಗೂ ಭೇಟಿಯಾಗಿಲ್ಲ. ದಯವಿಟ್ಟು ನನ್ನನ್ನು ನಂಬಿ. ನನಗೆ ಗೊತ್ತೇ ಇಲ್ಲದ ವ್ಯಕ್ತಿಯನ್ನು ನಾನು ಹೇಗೆ ಭೇಟಿಯಾಗಲಿ?
ಅಧಿಕಾರಿ: ನೀನು ನಿಜ ಬೊಗಳಲಿಲ್ಲ ಅಂಧ್ರೆ ಫೌಜಿಯಾಳನ್ನು ಇಲ್ಲಿಗೆ ಕರೆಸುತ್ತೇನೆ. ನೀವಿಬ್ಬರು ಜತೆಯಲ್ಲಿರುವ ಫೋಟೊಗಳು ನಾಳೆ ಪೇಪರ್‍ನಲ್ಲಿ ಬರುತ್ತವೆ ಸರಿನಾ?
ಮಾರಿಯಂಳನ್ನು ನಾನು ಯಾವಾಗ ಭೇಟಿ ಮಾಡಿದ್ದೆ? ಪೊಲೀಸರು ಯಾಗಿ ಸುಳ್ಳು ಕತೆ ಹೆಣೆಯುತ್ತಿದ್ದಾರೆ ಎಂದು ನನ್ನ ಮನಸ್ಸು ಮಂಥನವಾಗುತ್ತಾಹೋಯಿತು. ಅಷ್ಟರಲ್ಲಿ ಐಬಿಯ ದೊಡ್ಡ ಅಧಿಕಾರಿ ಹಾಗೂ ಆತನ ಸಹಾಯಕ ಅಲ್ಲಿಂದ ಹೊರಟರು. ಮುಖ್ಯ ವಿಚಾರಣಾಧಿಕಾರಿ ಮುಂದುವರಿಸಿದ.
ಅಧಿಕಾರಿ: ನಾವು ಹೇಳುತ್ತಿರುವ ಇಬ್ಬರು ಮಹಿಳೆಯರಷ್ಟೆ ಅಲ್ಲ. ನಿನ್ನ ಸಹೋದ್ಯೋಗಿ ಸಸಿಕುಮಾರನ್ ಕೂಡ ನಿಜ ಒಪ್ಪಿಕೊಂಡಿದ್ದಾನೆ. ನೀನು ನಮ್ಮ ಬಳಿ ಏನೂ ಮುಚ್ಚಿಡಲು ಸಾಧ್ಯವಿಲ್ಲ.
ವಿಷಯ ಕೇಳಿ ನಾನು ಚೇರ್‍ನಿಂದ ಕುಸಿದುಬಿದ್ದೆ. ಸಸಿಕುಮಾರ್ ಎಲ್ಲ ಒಪ್ಪಿಕೊಂಡಿಬಿಟ್ಟನಾ?
ಅಧಿಕಾರಿ: ನೀನ್ಯಾಕೆ ಇಷ್ಟು ಗಾಬರಿಯಾಗಿದ್ದೀಯಾ? ಮದ್ರಾಸ್, ತಿರುವನಂತಪುರಂನಲ್ಲಿ ನಡೆದ ಎರಡು ಭೇಟಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳಿಗೆ ನೀನು ಕ್ರಯೋಜನಿಕ್ ಎಂಜಿನ್‍ನ ಸ್ಕೆಚ್‍ಗಳನ್ನು ಮಾರಾಟ ಮಾಡಿದ್ದೀಯ ಎಂದು ಸಸಿಕುಮಾರ್ ಒಪ್ಪಿಕೊಂಡಿದ್ದಾನೆ. ಇದಕ್ಕೆ ಸಸಿಕುಮಾರ್ ಮಧ್ಯವರ್ತಿಯಾಗಿದ್ದ ಎಂದೂ ಬಾಯ್ಬಿಟ್ಟಿದ್ದಾನೆ. ಹೇಳು ಪಾಕಿಸ್ತಾನದಿಂದ ಎಷ್ಟು ಹಣ ತೆಗೆದುಕೊಂಡೆ?
ನಂಬಿ: ಸಸಿ ನಿಮ್ಮ ಬಳಿ ಏನು ಹೇಳಿದ್ದಾನೋ ಗೊತ್ತಿಲ್ಲ. ನಾನು ಯಾವ ತಪ್ಪೂ ಮಾಡಿಲ್ಲ ಯಾರನ್ನೂ ಭೇಟಿಯಾಗಿಲ್ಲ.
ಈ ಮಧ್ಯೆ ಒಬ್ಬ ಹುಡುಗ ಅನ್ನ ಸಾಂಬರ್ ತಂದ. ವಿಚಾರಣೆ ನಡೆಸಿದ ವ್ಯಕ್ತಿ ಅಲ್ಲಿಂದ ಹೋದ ಮತ್ತಿಬ್ಬರು ಹೊಸ ವ್ಯಕ್ತಿಗಳು ಬಂದರು.
ಮತ್ತೆ ಅದೇ ಪ್ರಶ್ನೆ ಕೇಳಿದರು. ಹೇಳು ಯಾಕೆ ಹೀಗೆ ಮಾಡಿದೆ? ವಿಚಾರಣೆ ನಡೆಸುವವರು ಹೊಸಬರೇ ಆದರೂ, ಅವರು ಕೇಳಿದ್ದ ಪ್ರಶ್ನೆಗಳೆಲ್ಲಾ ಹಳೆಯವು.
ಅಧಿಕಾರಿ: ವಿಕಾಸ್ ಎಂಜಿನ್ ಹಾಗೂ ಕ್ರಯೋಜನಿಕ್ ಎಂಜಿನ್ ಡ್ರಾಯಿಂಗ್‍ಗಳನ್ನು ಪಆಕಿಸ್ತಾನಕ್ಕೆ ಏಕೆ ಮಾರಾಟ ಮಾಡಿದೆ?
ನಂಬಿ: ನಿಮಗೆ ರಾಕೆಟ್ ವಿಜ್ಞಾನದ ಬಗ್ಗೆ ಅರಿವಿದೆಯಾ? ಯಾವುದೇ ಡ್ರಾಯಿಂಗ್‍ಗಳು ಇಸ್ರೊದ ಹೊರಗೆ ಹೋಗಲು ಸಾಧ್ಯವೇ ಇಲ್ಲ. ಬರೀ ಡ್ರಾಯಿಂಗ್ ಇಟ್ಟುಕೊಂಡು ಯಾವುದೇ ಎಂಜಿನ್‍ಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಅದನ್ನು ತಯಾರಿಸಿದ ವಿಜ್ಞಾನಿಗಳು ಇದ್ದರೆ ಮಾತ್ರ ಅದು ಸಾಧ್ಯವಾಗುತ್ತೆ.
ಅಧಿಕಾರಿ: ಹಾಗಾದ್ರೆ ನೀನು ಡ್ರಾಯಿಂಗ್‍ಗಳನ್ನು ಪಾಕಿಸ್ತಾನಕ್ಕೆ ಕೊಟ್ಟಿದ್ದೀಯಾ?
ನಂಬಿ: ಡ್ರಾಯಿಂಗ್‍ಗಳು, ದಾಖಲೆಗಳಿಗೆ ಯಾರೂ ಕಾಸು ಕೊಡಲ್ಲ. ನೀವು ಹೇಳುತ್ತಿರುವ ವಿಕಾಸ್ ಎಂಜಿನ್ ತಯಾರಿಸಲು ಫ್ರಾನ್ಸ್‍ನ ವೆರ್ನಾನ್ ಎಂಬಲ್ಲಿರುವ ಬಾಹ್ಯಾಕಾಶ ಕೇಂದ್ರದಲ್ಲಿ ಫ್ರಾನ್ಸ್ ವಿಜ್ಞಾನಿಗಳೊಂದಿಗೆ ನಾವು 150 ಮಂದಿ ತಂಡ ಒಂದು ಅಧಿಕೃತ ಗುತ್ತಿಗೆ ಮೇರೆಗೆ ಕೆಲಸ ಮಾಡಿದ್ದೇವೆ. ನಿತ್ಯವೂ ಪ್ರಯೋಗಗಳು, ಬದಲಾವಣೆಗಳು ನಡೆಯುತ್ತಲೇ ಇದ್ದವು. ಅಷ್ಟೆಲ್ಲ ಇದ್ದರೂ ಆ ಎಂಜಿನ್ ತಯಾರಿಸಲು ನಮಗೆ ಹದಿನಾರು ವರ್ಷ ಹಿಡಿಯಿತು.
ಈಗ ವಿಚಾರಣೆ ನಡೆಸಿದ ಅಧಿಕಾರಿಗಳು ನನ್ನ ಹೇಳಿಕೆಯನ್ನು ಸ್ವಲ್ಪ ಇಂಪ್ರೂ ಮಾಡಿಕೊಂಡು ತಮ್ಮದೇ ಧಾಟಿಯಲ್ಲಿ ಪ್ರಶ್ನೆ ಕೇಳಲು ಮುಂದಾದರು. ಪಾಕಿಸ್ತಾನದವರು ವಿಕಾಸ್ ಎಂಜಿನ್‍ಅನ್ನು ನಕಲು ಮಾಡಬೇಕಾದರೆ ನೀನು ನೀಡಿರುವ ಡ್ರಾಯಿಂಗ್‍ಗಳು ಅವರಿಗೆ ಉಪಯೋಗಕ್ಕೆ ಬರುತ್ತವೆ ಅಲ್ಲವೇ?
ನಂಬಿ: ನನ್ನನ್ನು ನಂಬಿ ಎಂದು ಎಷ್ಟೇ ಬೇಡಿಕೊಂಡರೂ ಅವರು ಕೇಳಲಿಲ್ಲ. ತರ್ಕವಿಲ್ಲದ ಪ್ರಶ್ನೆಗಳು. ತಂತ್ರಜ್ಞಾನ ವೈಜ್ಞಾನಿಕ ಅರಿವಿಲ್ಲದವರ ಬಳಿ ನಾನು ಎಷ್ಟೇ ಬಾಯಿ ಬಡಿದುಕೊಂಡರೂ ಅರ್ಥ ಮಾಡಿಕೊಳ್ಳಲಿಲ್ಲ. ನೀನು ಹೇಳುತ್ತಿರುವುದು ಡ್ರಾಯಿಂಗ್‍ಗಳೂ ನಿಷ್ಪ್ರಯೋಜಕ. ಹಾಗಾದ್ರೆ ನೀವ್ಯಾಕೆ ಇಟ್ಟುಕೊಡಿದ್ದೀರಾ?
ನಂಬಿ: ರಾಕೆಟ್ ಎಂಜಿನ್ ತಯಾರಿಕೆಯಲ್ಲಿ ಡ್ರಾಯಿಂಗ್‍ಗಳು ಒಂದು ಚಿಕ್ಕ ಪಾತ್ರವಷ್ಟೆ. ಅವಕ್ಕೆ ಯಾರೂ ಕಾಸು ಕೊಡುವುದಿಲ್ಲ. ಪಠ್ಯ ಪುಸ್ತಕದಲ್ಲಿರುವ ರಾಕೆಟ್ ಡ್ರಾಯಿಂಗ್ ನೋಡಿ ರಾಕೆಟ್ ಮಾಡಲು ಸಾಧ್ಯವೇ? ಅದಕ್ಕೆ ಯಾರಾದರೂ ಕಾಸು ಕೊಡುತ್ತಾರಾ?
ಆಗ ಹೊಸ ಅಧಿಕಾರಿಗಳ ತಂಡವೊಂದು ಬಂತು. ಅದರಲ್ಲೊಬ್ಬ ಜೋರು ಧ್ವನಿಯಲ್ಲಿ ಎದ್ದೇಳು ಸೂಳೇಮಗನೆ. ನೀನು ಕೂರಲು ಯೋಗ್ಯ ವ್ಯಕ್ತಿಯಲ್ಲ. ನಿಂತುಕೊಂಡೇ ಮಾತಾಡು ಅಂದ. ನಾನು ನೀರಿಗಾಗಿ ಬೆಳಗ್ಗೆ ಇಂದ ಪರಿಪರಿಯಾಗಿ ಬೇಡಿಕೊಂಡೆ ಆದರೆ ಯಾರೂ ಕೊಡಲಿಲ್ಲ. ನಿನ್ನನ್ನು ಪಠಾಣ್‍ಕೋಟ್ ಅಥವ ಕಾಶ್ಮೀರದ ಬ್ಲಾಕ್ ಸೆಲ್‍ನಲ್ಲಿ ಹಾಕಿ ಕೊಂದು ಹಿಮದ ರಾಶಿಯಲ್ಲಲಿ ಹಾಕುವುದಾಗಿ ಅವರು ಬೆದರಿಸಿದರು. ನನ್ನ ದೇಹ ಹಿಮದ ರಾಶಿಯಲ್ಲಿ ಬಿದ್ದಿರುವಂತೆ ಚಿತ್ರವು ಮನಸ್ಸಿನಲ್ಲಿ ಮೂಡಿತು.
ಆ ರಾತ್ರಿ ನನ್ನನ್ನು ಮಲಗಲು ಬಿಡಲಿಲ್ಲ 30 ಗಂಟೆಗಳ ಕಾಲ ಅದೇ ಪ್ರಶ್ನೆ. ಅನ್ನ, ನೀರು ಏನೂ ಎಲ್ಲದೆ ನಿತ್ರಾಣನಾಗಿದ್ದೆ. ಸಿಮೆಂಟ್ ನೆಲವಾಗಿದ್ದರಿಂದ ದೇಹವು ತಣ್ಣಗಾಗಿಹೋಯಿತು.
ಹೀಗೇ ಇದ್ದರೆ ಅಧಿಕಾರಿಗಳು ನನ್ನನ್ನು ಮುಗಿಸಿಬಿಡುತ್ತಾರೆ ನಾನು ಈಗ ಹೋರಾಟ ನಡೆಸಲೇಬೇಕೆಂದು ತೀರ್ಮಾನಿಸಿ ಜೋರಾಗಿ ಉಸಿರೆಳೆದುಕೊಂಡು ಎದ್ದು ನಿಂತೆ.
ನಂಬಿ: ನೀವು ಒಂದು ದೊಡ್ಡ ಅಪರಾಧ ಮಾಡುತ್ತಿದ್ದೀರ. ಇದಕ್ಕಾಗಿ ನೀವು ಬಹಳ ದೊಡ್ಡ ಶಿಕ್ಷೆ ಅನುಭವಿಸುತ್ತೀರ. ನಾನು ನಿಮ್ಮನ್ನು ಬಿಡಲ್ಲ ನೆನಪಿಟ್ಟುಕೊಳ್ಳಿ ನಿಮಗೂ ಕುಟುಂಬ ಇದೆ. ಇದನ್ನ ಕೇಳಿಸಿಕೊಂಡ ಅಧಿಕಾರಿ ನೀನು ಇಲ್ಲಿಂದ ಜೀವ ಸಮೇತ ಹೋದರೆ ತಾನೆ ಎಂದು ನಕ್ಕ.
ನಿಮ್ಮನ್ನೆಲ್ಲ ನೆನಪಿಟ್ಟುಕೊಂಡಿದ್ದೇನೆ. ಒಬ್ಬೊಬ್ಬರನ್ನಾಗಿ ಕೊಂದುಬಿಡುತ್ತೇನೆ ಎಂದೆ.
ಅಧಿಕಾರಿಯೊಬ್ಬ ತಣ್ಣನೆ ಧ್ವನಿಯಲ್ಲಿ ಹೇಳಿದ. ಸರ್ ನಾವು ನಮ್ಮ ಡ್ಯೂಟಿ ಮಾಡ್ತಿದ್ದೀವಿ. ತಪ್ಪಿದ್ದರೆ ನಿಮ್ಮ ಚಪ್ಪಲಿಯಲ್ಲಿ ಹೊಡೆಯಿರಿ.
22 ವರ್ಷಗಳಾಗಿವೆ ನನ್ನ ಚಪ್ಪಲಿಯನ್ನು ಹಾಗೇ ಇಟ್ಟಿದ್ದೇನೆ.
ಮತ್ತೆ ಅಧಿಕಾರಿ ನನ್ನನ್ನ ಪ್ರಶ್ನಿಸಿದ. ಹೇಳು ಮಹಮದ್ ಅಸ್ಲಮ್ ಯಾರು?
ನಂಬಿ: ಯಾವ ಅಸ್ಲಂ ನನಗೆ ಗೊತ್ತಿಲ್ಲ.
ಅಧಿಕಾರಿ: ಸರಿ ನಾನು ನೆನಪಿಸುತ್ತೇನೆ. ಮೊಹಮದ್ ಅಸ್ಲಾಂ ಪಾಕಿಸ್ತಾನದ ಅಣು ವಿಜ್ಞಾನಿ. 1985ರಲ್ಲಿ ಆತ ನಿನ್ನನ್ನು ಭೇಟಿಯಾಗಿ ರಾಕೆಟ್ ತಂತ್ರಜ್ಞಾನದ ಬಗ್ಗೆ ಮಾತನಾಡಿದ್ದ.
ನಾನು ತಲೆ ಚಚ್ಚಿಕೊಂಡೆ.
ನಂಬಿ: ನನಗೆ ಯಾವ ಅಸ್ಲಂ ಕೂಡ ಗೊತ್ತಿಲ್ಲ. ಆದರೆ, ರಾಕೆಟ್ ಟೆಕ್ನಾಲಜಿ ತಿಳಿಯಲು ಪಾಕಿಸ್ತಾನ ಏಕೆ ಅಣು ವಿಜ್ಞಾನಿ ಕಳಿಸುತ್ತೆ? ಅಬ್ದುಲ್ ಕಲಾಂ ಅವರ ಹತ್ತಿರಾನೋ ಅಥವಾ ಯು ಆರ್ ರಾವ್ ಅವರನ್ನೋ ಸಂಪರ್ಕಿಸಬೇಕಲ್ವಾ? ನಿಮ್ಮ ಕತೆ ನಿಮಗೇ ಒಪ್ಪಿಗೆಯಾಗುತ್ತಾ?
ಆ ಇಬ್ಬರೂ ವ್ಯಕ್ತಿಗಳೂ ತಾವು ಹೇಳಿದ್ದ ಹೇಳಿಕೆ ಎಷ್ಟು ತಮಾಷೆಯಾಗಿತ್ತು ಎಂದುಕೊಂಡರು. ಒಬ್ಬರ ಮುಖ ಒಬ್ರು ನೋಡಿಕೊಂಡು ನಮಗೆ ಅದು ಗೊತ್ತು. ನೀನು ಈ ಪ್ರಶ್ನೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತೀಯಾ ಎಂಬುದು ನಮಗೆ ಗೊತ್ತಾಗಬೇಕು ಎಂದ.
ಇವರು ಮುಂಚೆಯೇ ಹೆಣೆದಿರುವ ಕತೆಯಲ್ಲಿ ನನ್ನನ್ನು ಸೇರಿಸಿದ್ದಾರೆ. ಇವರೇ ಸೃಷ್ಟಿಸಿದ ಪಾತ್ರಗಳಿಗೆ ನಾನು ಹೆಸರಿಡಬೇಕು ಎಂದು ಆಗ ನನಗೆ ಅರ್ಥವಾಯಿತು. ನನಗೆ ಗೊತ್ತಿಲ್ಲದ ವ್ಯಕ್ತಗಳ ಹೆಸರನ್ನು ಕೇಳುವ ತಂತ್ರ ಮುಂದುವರಿಯುತ್ತಲೇ ಹೋಯಿತು.
ಅಧಿಕಾರಿ: ಮಿಸ್ಟರ್ ನಂಬಿ. ನಮ್ಮನ್ನು ಮೂರ್ಖರೆಂದು ತಿಳಿದಿದ್ದೀಯಾ? ನಮಗೆ 25 ವರ್ಷದ ಅನುಭವ ಇದೆ. ನಿನ್ನಿಂದ ನಿಜ ಕಕ್ಕಿಸುವುದು ಹೇಗೆಂದುನನಗೆ ಗೊತ್ತು. ನಿನ್ನ ನಟ್ಟು ಬೋಲ್ಟು ಬಿಚ್ಚುತ್ತೀವಿ. ರೊಟ್ಟಿಗಾಗಿ ಅಂಗಲಾಚುವಂತೆ ಮಾಡುತ್ತೀವೆ. ಸೂಳೆ ಮಕ್ಕಳಾ ದೇಶದ ಆಸ್ತಿನ ಮಾರ್ಕೊತೀರಾ? ಎಂದು ಕೇಳಿದ.
ಮತ್ತೊಬ್ಬ ಅಧಿಕಾರಿ ಇದ್ದಕ್ಕಿದ್ದಂತೆ ಬಂದ. ಏನೂ ಕೇಳದೆ ದಿಢೀರನೆ ಮುಖದ ಮೇಲೆ ಹೊಡೆದ. ನಮ್ಮಪ್ಪ ಕೂಡ ನನಗೆ ಒಂದೇಟೂ ಹೊಡೆದಿರಲಿಲ್ಲ. ಈತ ಹೊಡೆದದ್ದು ನನಗೆ ದೈಹಿಕ ಹಿಂಸೆಗಿಂತ ಮಾನಸಿಕವಾಗಿ ಘಾಸಿಗೊಳಿಸಿತು.
ನಾನು ಯಾರಿಗೂ ಹೆದರುವುದಿಲ್ಲ. ನಿಜ ಒಪ್ಪಿಕೊಂಡರೆ ಸರಿ ಎಂದು ಅರುಚುತ್ತಿದ್ದ.
ಇನ್ನೊಬ್ಬ ಅಧಿಕಾರಿ ನನ್ನ ಕಿವಿ ಹತ್ತಿರ ಬಂದು ಹೌದು ಎಂದು ಒಪ್ಪಿಕೊ ಎಂದ. ನಾನು ಧೈರ್ಯವಾಗಿ ಇಲ್ಲ ಎಂದು ಹೇಳಿದೆ.
ಕನ್ನಡಕ ಹಾಕಿದ್ದ ಆ ವ್ಯಕ್ತಿ ಒಮ್ಮೆ ನನ್ನನ್ನು ಗುರಾಯಿಸಿ ತನ್ನ ಸಹಾಯಕನೊಂದಿಗೆ ಹೊರಗೆ ನಡೆದ.
ಚುಟ್ಟಾ ಸೇದುತ್ತಿದ್ದ ವ್ಯಕ್ತಿ ನನ್ನ ಹತ್ತಿರ ಬಂದು ನೀನ್ಯಾಕೆ ನಿಜ ಒಪ್ಪಿಕೊಳ್ಳಬಾರದು? ನನಗೆ ನಿಜಕ್ಕೂ ನೀವು ಹೇಳುತ್ತಿರವ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ ಎಂದೆ.
ಅಧಿಕಾರಿ ಹೇಳಿದ ನೋಡು. ನಾವು ಹೇಳಿದ ಹೆಸರಿನವರು ಗೊತ್ತಿಲ್ಲ ಎಂದರೆ ಬಿಟ್ಟುಬಿಡು. ನಿನಗೆ ಗೊತ್ತಿರುವ ಯಾರಾದರೂ ಮುಸ್ಲಿಮರ ಹೆಸರು ಹೇಳು ಎಂದ.
ನನಗೆ ಗೊತ್ತಿದ್ದದ್ದು ನನ್ನ ಬಾಲ್ಯದ ಗೆಳೆಯ ಒಬ್ಬ ಮುಸ್ಲಿಂ. ಆತ ಈಚೆಗೆ ಸಿಕ್ಕಿ ಇಸ್ರೊದಲ್ಲಿ ತನ್ನ ಮಗನಿಗೆ ಕೆಲಸ ಕೊಡಿಸು ಎಂದಿದ್ದ. ಎಕ್ಸಾಂ ಬರೆದು ಪಾಸಾದ್ರೆ ನೋಡುವಾ ಎಂದಿದ್ದೆ. ಆತ ಎಕ್ಸಾನಲ್ಲಿ ಫೇಲ್ ಆಗಿದ್ದ.
ಮತ್ತೆ ನೀರಿಗಾಗಿ ಬೇಡಿಕೊಂಡೆ. ಆಗ ಅಧಿಕಾರಿಯೊಬ್ಬ ಹೇಳಿದ. ನೀನು ನಾವು ಹೇಳಿದ ಹೇಳಿಕೆಯನ್ನೇ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ನೀರು ಸಿಗಲ್ಲ ಎಂದ. ನನಗೆ ನೀಡುತ್ತಿದ್ದ ಟ್ರೀಟ್‍ಮೆಂಟ್ ಥರ್ಡ್ ಡಿಗ್ರಿಯವು ಎಂದು ಗೊತ್ತಾಯಿತು. ನಾನು ಧೈರ್ಯವಾಗಿ ಮತ್ತೊಮ್ಮೆಎದ್ದು ನಿಂತು ಹೇಳಿದೆ.
ನನಗೆ ನೀರು ಬೇಡ. ನಾನು ಹೆಚ್ಚು ಹೊತ್ತು ಕೂರುವುದೂ ಇಲ್ಲ. ನಾನೊಬ್ಬ ನಿರಪರಾಧಿ ಎಂದು ನೀವು ಒಪ್ಪುವ ವರೆಗೆ ನಾನು ಅನ್ನಾಹಾರ ಇಲ್ಲದೆ ಇಲ್ಲೇ ನಿಲ್ಲುತ್ತೇನೆ ಎಂದೆ.
ಪೊಲೀಸರು ಕತೆಯನ್ನು ಮುಂಚೆಯೇ ಹೆಣೆದಿದ್ದರು. ನಾನೊಬ್ಬ ಹರಕೆಯ ಕುರಿಯಾಗಿದ್ದೆ. ಅವರು ಬಿಟ್ಟಿದ್ದ ಸ್ಥಳಗಳಲ್ಲಿ ನನು ಹೆಸರು ಸೇರಿಸಬೇಕಿತ್ತು ಅಷ್ಟೆ. 22 ವರ್ಷ ನರಕದಲ್ಲಿ ಕಳೆದೆ.
ಕೃಪೆ: ಸ್ಕ್ರಾಲ್ ಡಾಟ್ ಇನ್

ದಿನದ ಸುದ್ದಿ
ಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
ಸುದ್ದಿದಿನ,ಚಿತ್ರದುರ್ಗ:ಜಿಲ್ಲೆಯ ಬ್ಯಾಂಕ್ ಕಾಲೋನಿಯ ಸ್ಪೀಚ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡು ಅವಧಿಗೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹೆಚ್.ರಾಮಚಂದ್ರಪ್ಪ (59 ವರ್ಷ) ಶನಿವಾರ ಬೆಳಗ್ಗೆ 10:35 ಕ್ಕೆ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯ ಕ್ರಿಯೆಯನ್ನು ಹೊಳಲ್ಕೆರೆ ಸಮೀಪದ ನೆಹರು ಕಾಲೋನಿಯ ಜಮೀನಿನಲ್ಲಿ ಇಂದು (ಭಾನುವಾರ, ಜೂನ್ 07 ರಂದು ಮಧ್ಯಾಹ್ನ 2 ಗಂಟೆಗೆ) ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಪರ್ಕ ಮೊಬೈಲ್ ಸಂಖ್ಯೆ : 9740114246
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಶ್ರಯ ಯೋಜನೆ – ಆವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ : 2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್ 30 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ದಾವಣಗೆರೆ ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿನ ಅರ್ಹ ನಿವೇಶನ ಹಾಗೂ ವಸತಿ ರಹಿತ ಅಂಗವಿಕಲರು, ಹಿರಿಯ ನಾಗರಿಕರು, ಒಂಟಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರು, ತೃತೀಯ ಲಿಂಗಿಗಳು, ಸ್ವಚ್ಛತಾ ಕಾರ್ಮಿಕರು, PM SVanidhi (ಪಿ ಎಂ -ಸ್ವ ನಿಧಿ )ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯಡಿ ಗುರುತಿಸಿದ ಕುಶಲ ಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ವಲಸೆ ಬಂದ ಕುಟುಂಬದವರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು http://pmayurban.gov.in ಆನ್ಲೈನ್ ವೆಬ್ ಸೈಟ್ ನಲ್ಲಿ ಸಲ್ಲಿಸಬಹುದು ಅಥವಾ ಖುದ್ದಾಗಿ ಮಹಾನಗರ ಪಾಲಿಕೆಯ ಆಶ್ರಯ ಶಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗರಿಕೆ ಹುಲ್ಲಿನ ಜ್ಯೂಸ್‌ನಲ್ಲಿದೆ ರಕ್ತದ ಕ್ಯಾನ್ಸರ್ ಗುಣಪಡಿಸುವ ಶಕ್ತಿ
ಗಿರೀಶ್ ಮುತ್ತು
ಗರಿಕೆ ಹುಲ್ಲಿನ ರಸದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಿನೊಡಾನ್ ಡ್ಯಾಕ್ಟಿಲಾನ್ ಪ್ರೊಟೀನ್ ಎಂಬ ಅಂಶವಿದ್ದು, ಇದು ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಇದು ಜ್ವರದಂತಹ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಹಾಗಾಗೊ ವಾರಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಗರಿಕೆ ಹುಲ್ಲಿನ ರಸ ಅಥವಾ ಕಷಾಯದ ಸೇವನೆ ಮಾಡಬೇಕು
ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ರೀತಿಯ ವ್ಯಾಯಾಮ ಮತ್ತು ಡಯಟ್ ಮಾಡುತ್ತೇವೆ. ಈ ಮಳೆಗಾಲದಲ್ಲಿ ಅನೇಕ ಜನರು ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಹಲವು ಬಗೆಯ ಜ್ಯೂಸ್ ಕುಡಿಯುತ್ತಾರೆ. ಹಣ್ಣು, ತರಕಾರಿ ರಸ ಕುಡಿದು ಆರೋಗ್ಯವಾಗಿರಲು ಪ್ರಯತ್ನಿಸುತ್ತಾರೆ. ಆದರೆ ಈ ಒಂದು ಜ್ಯೂಸ್ ಅನ್ನು ನೀವು ಕುಡಿದರೆ ನಿಮ್ಮತ್ತ ಕಾಯಿಲೆಗಳು ಸುಳಿಯುವುದೇ ಇಲ್ಲ. ಅದುವೇ ಗರಿಕೆ ಹುಲ್ಲುನ ಜ್ಯೂಸ್.
ಹೌದು… ಆಯುರ್ವೇದ ವೈದ್ಯರು ಈ ಮೂಲಿಕೆಯು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಲ್ಲದೆ ಈ ಹುಲ್ಲಿನ ರಸವನ್ನು ಕುಡಿಯುವುದರಿಂದ ರಕ್ತದಲ್ಲಿರುವ ಕ್ಯಾನ್ಸರ್ ಕೋಶಗಳು ಕಡಿಮೆಯಾಗುವುದು ಮಾತ್ರವಲ್ಲದೆ ರಕ್ತ ಶುದ್ಧವಾಗಿರುತ್ತದೆ.
ಈ ಗರಿಕೆ ಹುಲ್ಲಿನಲ್ಲಿ ವಿಟಮಿನ್ ಎ, ಕೆ, ಸಿ ಮತ್ತು ವಿಟಮಿನ್ ಇ ಗಳು ಸಮೃದ್ಧವಾಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತದೊತ್ತಡ, ರಕ್ತಹೀನತೆ ಮತ್ತು ರಕ್ತ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸುತ್ತದೆ. ಹಾಗಾದರೆ ಗರಿಕೆ ಹುಲ್ಲಿನ ಜ್ಯೂಸ್‌ನ ಇತರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಗರಿಕೆ ರಸದ ಪ್ರಯೋಜನಗಳು
1. ಈ ಗರಿಕೆ ಹುಲ್ಲಿನ ಜ್ಯೂಸ್ ಎಲ್ಲಿಯೂ ಸಿಗುವುದಿಲ್ಲ. ಕೆಲವೆಡೆ ಮಾತ್ರ ಸಿಗುತ್ತದೆ. ಬೇರು ಮತ್ತು ಎಲೆಗಳು ಸೇರಿದಂತೆ ಗರಿಕೆ ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಹೊಂದಿದೆ. ಇದು ಕೆಲವು ಹಾನಿಕಾರಕ ವ್ಯಾಕ್ಸಿನಿಯಾ ವೈರಸ್ ಎಂಬ ಸೂಕ್ಷ್ಮಜೀವಿಯನ್ನು ನಾಶಪಡಿಸುವ ಗುಣವನ್ನು ಹೊಂದಿದೆ. ಹೀಗಾಗಿ ಈ ಜ್ಯೂಸ್ ಕುಡಿಯುವವರೂ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ.
2. ಮೂತ್ರಕೋಶದ ಕಲ್ಲುಗಳು, ದೇಹದ ಊತ, ಮಕ್ಕಳಲ್ಲಿ ದೀರ್ಘಕಾಲದ ನೆಗಡಿ, ಮೂಗು ಸೋರುವಿಕೆ, ನೆಗಡಿ, ಅತಿಸಾರ, ಕಣ್ಣಿನ ದೋಷಗಳು, ಮೆದುಳಿನ ರಕ್ತಸ್ರಾವದಂತಹ ಕಾಯಿಲೆಗಳಿಗೆ ಈ ರಸ ತುಂಬಾ ಒಳ್ಳೆಯದು.
3. ಅಲ್ಲದೆ ತೂಕ ನಷ್ಟ, ಕೊಲೆಸ್ಟ್ರಾಲ್ ಕಡಿತ, ನರರೋಗ, ರಕ್ತದ ಕ್ಯಾನ್ಸರ್ ಚಿಕಿತ್ಸೆ, ಕೆಮ್ಮು, ಹೊಟ್ಟೆ ನೋವು, ರಕ್ತಹೀನತೆ, ಸಂಧಿವಾತ, ಹೃದಯ ಅಸ್ವಸ್ಥತೆ, ಚರ್ಮ ರೋಗಗಳು ಇತ್ಯಾದಿಗಳಿಗೆ ಅತ್ಯುತ್ತಮ ಔಷಧವಾಗಿ ಕಾರ್ಯನಿರ್ವಹಿಸುತ್ತದೆ
4. ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ರಕ್ತದಿಂದ ವಿಷವನ್ನು ತೆಗೆದುಹಾಕುವಲ್ಲಿ ಗರಿಕೆ ರಸವು ಪರಿಣಾಮಕಾರಿಯಾಗಿದೆ.
5. ಗರಿಕೆ ಹುಲ್ಲಿನ ರಸ ಮತ್ತು ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಕುದಿಸಬೇಕು.. ನಂತರ ಚರ್ಮರೋಗಗಳಾದ ರಿಂಗ್‌ವರ್ಮ್ ಮತ್ತು ಒಣ ಚರ್ಮವನ್ನು ತ್ವರಿತವಾಗಿ ಗುಣ ಪಡಿಸುತ್ತದೆ.
6. ಗರಿಕೆ ಹುಲ್ಲು ಬೇಕಾದಷ್ಟು ಸಂಗ್ರಹಿಸಿ, ಸ್ವಲ್ಪ ಅರಿಶಿನವನ್ನು ಸೇರಿಸಿ ಪೇಸ್ಟ್ ಮಾಡಿ ದೇಹಕ್ಕೆ ಉಜ್ಜಿಕೊಂಡರೆ, ಒಂದು ಗಂಟೆ ಬಿಟ್ಟು ನಂತರ ಸ್ನಾನ ಮಾಡಿ. ಇದರಿಂದ ದೇಹದ ತುರಿಕೆ ನಿವಾರಣೆಯಾಗುತ್ತದೆ.
ಗರಿಕೆ ಹುಲ್ಲಿನ ರಸ ತಯಾರಿಸುವುದು ಹೇಗೆ?
*ತಾಜಾ ಗರಿಕೆ ಹುಲ್ಲು ಒಂದು ಹಿಡಿಯಷ್ಟು ತೆಗೆದುಕೊಂಡು ಸ್ವಚ್ಚವಾಗಿ ತೊಳೆದುಕೊಳ್ಳಿ.
* ಬಳಿಕ ಇದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
* ಬಳಿಕ ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.
* ಚೆನ್ನಾಗಿ ಪೇಸ್ಟ್ ಆದ ಬಳಿಕ ಇದನ್ನು ಸೋಸಿಕೊಳ್ಳಬೇಕು.
* ಬಳಿಕ ಇದನ್ನು ಕುಡಿಯಬೇಕು. ಆದರೆ ಇದು ತಕ್ಷಣದ ಮನೆಮದ್ದಾಗಿದೆ. ಆದರೆ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಇದು ಕೊನೆಯ ಮದ್ದು ಅಲ್ಲ. ಹೀಗಾಗಿ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾದಾಗ ಮೊದಲು ವೈದ್ಯರನ್ನು ಸಂಪರ್ಕಿಸುವುದು ತುಂಬಾ ಅವಶ್ಯಕ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಕೀಲ ಎಲ್.ಎಚ್.ಅರುಣಕುಮಾರ್ ಮನವಿ
-
ದಿನದ ಸುದ್ದಿ3 days agoಮೊದಲ ಸಂಪುಟ ಸಭೆಯಲ್ಲೇ ಮಹತ್ವದ 5 ಘೋಷಣೆ ಮಾಡಿದ ಸಿಎಂ ಡಿಕೆಶಿ
-
ದಿನದ ಸುದ್ದಿ6 days agoದಾವಣಗೆರೆ ವಿಶ್ವವಿದ್ಯಾಲಯ | ಜೂನ್ 2 ರಿಂದ 4 ರವರೆಗೆ ‘ಭಾಷಾಂತರ ಕೌಶಲ್ಯ ತರಬೇತಿ ಶಿಬಿರ’
-
ಅಂಕಣ3 days agoಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
-
ದಿನದ ಸುದ್ದಿ3 days agoಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದು : ಸಿಎಂ ಡಿಕೆಶಿ
-
ದಿನದ ಸುದ್ದಿ3 days agoಬಿ.ಕೆ. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ
-
ದಿನದ ಸುದ್ದಿ3 days agoಧನ್ಯವಾದಗಳು ಕರ್ನಾಟಕ : ಸಿಎಂ ಡಿಕೆ ಶಿವಕುಮಾರ್
-
ದಿನದ ಸುದ್ದಿ5 days agoಕುಂಬಳಕಾಯಿ ಬೀಜದಲ್ಲಿ ‘ ಜೀವ ಸಂಜೀವಿನಿ’ : ಮಿಸ್ ಮಾಡ್ದೆ ಓದಿ ; ಆರೋಗ್ಯದ ಗುಟ್ಟು ತಿಳಿಯಿರಿ

