Connect with us

ದಿನದ ಸುದ್ದಿ

ದಾವಣಗೆರೆ ಸಹಕಾರ ಬ್ಯಾಂಕ್ ಒಕ್ಕೂಟ | ಕೇರಳ-ಕೊಡಗು ಸಂತ್ರಸ್ತರಿಗೆ 1 ಕೋಟಿ‌ ರೂ ಪರಿಹಾರ

Published

on

ಸುದ್ದಿದಿನ ಡೆಸ್ಕ್ | ದಾವಣಗೆರೆ ಸಹಕಾರ ಬ್ಯಾಂಕ್ ಒಕ್ಕೂಟದಿಂದ ಮಡಿಕೇರಿ ಕೇರಳ ಸಂತ್ರಸ್ಥರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ.

ಮಡಿಕೇರಿ ಸಂತ್ರಸ್ಥರಿಗೆ ಹಾಗೂ ಕೇರಳ ಸಂತ್ರಸ್ಥರಿಗೆ ತಲಾ 50 ಲಕ್ಷ ರೂಪಾಯಿ ನೀಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ನಿಧಿಗೆ ಹಾಗೂ ಪ್ರಧಾನ ಮಂತ್ರಿ ನಿಧಿಗೆ 50-50 ಹಣ ಹಾಕಲು ನಿರ್ಧಾರ ಕೈಗೊಂಡಿದೆ. ಶಾಸಕ ಶಾಮನೂರ ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶಾಸಕ ಶಾಮನೂರ ಶಿವಶಂಕರಪ್ಪ ವೈಯುಕ್ತಿಕ ವಾಗಿ 25 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಡಿಎಸ್‍ಟಿ/ಪಿಹೆಚ್‍ಡಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಈ ಯೋಜನೆಯಡಿ ಶಿಷ್ಯವೇತನ ಪಡೆಯಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಸಂಸ್ಥೆ /ಕಾಲೇಜುಗಳಲ್ಲಿ ಈಗಾಗಲೇ ಪಿಹೆಚ್‍ಡಿ ಪದವಿಗೆ ನೋಂದಾಯಿತರಾಗಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಡಿ.ಎಸ್.ಟಿ) 2018-19ನೇ ಸಾಲಿನಿಂದ ಕರ್ನಾಟಕ ಡಿ.ಎಸ್.ಟಿ-ಪಿಹೆಚ್‍ಡಿ ಶಿಷ್ಯವೇತನ ಎಂಬ ಕಾರ್ಯಕ್ರಮವನ್ನು ಇಲಾಖೆಯ ಸ್ವಯತ್ತ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಮುಖಾಂತರ ಅನುಷ್ಠಾನಗೊಳಿಸಿದ್ದು, ಅರ್ಜಿಯನ್ನು ಆನ್‍ಲೈನ್ http://ksteps.karnataka.gov.in ಮುಖಾಂತರ ಫೆಬ್ರವರಿ 10, 2021 ರೊಳಗಾಗಿ ಸಲ್ಲಿಸಬೆಕೆಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಪ.ಜಾತಿ/ಪ.ಪಂಗಡಕ್ಕೆ ಸಹಾಯಧನ ಮತ್ತು ಕ್ರೀಡಾಗಂಟಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಜನ ಸಂಘ ಸಂಸ್ಥೆಗಳಿಗೆ ನೋಂದಾವಣೆ ಮಾಡಲು ಸಹಾಯಧನ ಮತ್ತು ಕ್ರೀಡಾಗಂಟನ್ನು ನೀಡುವ ಹೊಸ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿ ತಾಲ್ಲೂಕಿನಲ್ಲಿ 02 ಪರಿಶಿಷ್ಟ ಜಾತಿ ಮತ್ತು 01 ಪರಿಶಿಷ್ಟ ಪಂಗಡದ ಯುವಜನ ಸಂಘವನ್ನು ನೋಂದಾಯಿಸಲು ಸಹಾಯಧನ ಹಾಗೂ ಕ್ರೀಡಾಗಂಟನ್ನು ನೀಡಲಾಗುವುದು. ಜಿಲ್ಲೆಯ 15 ರಿಂದ 35 ವರ್ಷ ವಯೋಮಾನದೊಳಗಿನ ಪ.ಜಾತಿ/ಪ.ಪಂಗಡಕ್ಕೆ ಸೇರಿರುವ ಯುವಕ/ಯುವತಿಯರು ಯುವಜನ ಸಂಘವನ್ನು ರಚಿಸಿಕೊಳ್ಳಲು ಸದವಕಾಶವಿರುವದರಿಂದ ಕರ್ನಾಟಕ ರಾಜ್ಯ ಸಂಘ ಸಂಸ್ಥೆಗಳ ನೋಂದಾವಣೆ ಕಾಯಿದೆ 1960 ರ ಅಡಿಯಲ್ಲಿ ಯುವಜನ ಸಂಘಗಳ ನೋಂದಣಿ ಮಾಡಿಸಿ, ಜ.28 ರೊಳಗಾಗಿ ಮಾನ್ಯತೆಗಾಗಿ ಈ ಕಚೇರಿಗೆ ಸಲ್ಲಿಸಲು ಕೋರಿದೆ. ನಂತರ ಬಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ಕಚೇರಿ ವೇಳೆಯಲ್ಲಿ ಮೊ.ಸಂ: 9620796970 ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರೈತರು- ಕೇಂದ್ರ ಸರ್ಕಾರದ ನಡುವಿನ 10ನೇ ಸುತ್ತಿನ ಮಾತುಕತೆ ನಾಳೆಗೆ ಮುಂದೂಡಿಕೆ

Published

on

ಸುದ್ದಿದಿನ,ನವದೆಹಲಿ : ಇಂದು ನಡೆಯಬೇಕಾಗಿದ್ದ ರೈತ ಮುಖಂಡರು ಮತ್ತು ಕೇಂದ್ರದ ಮಂತ್ರಿಗಳ ನಡುವಿನ 10ನೇ ಸುತ್ತಿನ ಮಾತುಕತೆ ಜ. 20ರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಕೃಷಿ ಸಚಿವ ನರೇಂದ್ರ ಸಿಂಗ್‌ ತಡರಾತ್ರಿ ರೈತ ಮುಖಂಡರಿಗೆ ಬರೆದಿರುವ ಪತ್ರದಲ್ಲಿ, ತಳ್ಳಿ ಹಾಕಲಾದ ಕಾರಣಗಳಿಂದಾಗಿ ಇಂದು ಸಭೆ ನಡೆಸಲಾಗುತ್ತಿಲ್ಲ ಎಂದು,’ ಜ. 20ರಂದು ಮಧ್ಯಾಹ್ನ 2 ಗಂಟೆಗೆ ವಿಜ್ಞಾನ್‌ ಭವನದಲ್ಲಿ ಸಭೆ ನಡೆಸಲಾಗುವುದು” ಎಂದು ತಿಳಿಸಲಾಗಿದೆ.

ಮಧ್ಯಪ್ರದೇಶದ ತಮ್ಮ ಕ್ಷೇತ್ರದ ವೀಕ್ಷಣೆಗೆ ತೆರಳಿದ್ದ ಕೃಷಿ ಸಚಿವ ನರೇಂದ್ರ ಸಿಮಗ್‌ ತೋಮರ್‌ ಸೋಮವಾರ ತಡರಾತ್ರಿ ದೆಹಲಿಗೆ ಮರಳಿದರು. ಗ್ವಾಲಿಯರ್‌ನಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ರೈತ ಸಂಘಟನೆಗಳು ಕಾಯ್ದೆಗಳಲ್ಲಿರುವ ನಿರ್ದಿಷ್ಟ ರಿಯಾಯಿತಿಗಳ ಕುರಿತು ಚರ್ಚಿಸುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಪಟ್ಟು ಸಡಿಸಲು ಸಿದ್ಧರೇ ಇಲ್ಲ. ನಾಳೆ ಸಭೆ ಇದೆ. ಅಲ್ಲಿ ರೈತ ಸಂಘಟನೆಗಳು ಪರ್ಯಾಯ ಸಾಧ್ಯತೆಗಳ ಕುರಿತು ಚರ್ಚಿಸುವ ನಂಬಿಕೆ ಇದೆ. ಹಾಗಾದರೆ ನಾವು ಪರಿಹಾರ ಕಂಡುಕೊಳ್ಳಲು ಸಾಧ್ಯ” ಎಂದಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ7 hours ago

ಡಿಎಸ್‍ಟಿ/ಪಿಹೆಚ್‍ಡಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಈ ಯೋಜನೆಯಡಿ ಶಿಷ್ಯವೇತನ ಪಡೆಯಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಸಂಸ್ಥೆ /ಕಾಲೇಜುಗಳಲ್ಲಿ ಈಗಾಗಲೇ ಪಿಹೆಚ್‍ಡಿ...

ಕ್ರೀಡೆ8 hours ago

ಪ.ಜಾತಿ/ಪ.ಪಂಗಡಕ್ಕೆ ಸಹಾಯಧನ ಮತ್ತು ಕ್ರೀಡಾಗಂಟಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ...

ದಿನದ ಸುದ್ದಿ14 hours ago

ರೈತರು- ಕೇಂದ್ರ ಸರ್ಕಾರದ ನಡುವಿನ 10ನೇ ಸುತ್ತಿನ ಮಾತುಕತೆ ನಾಳೆಗೆ ಮುಂದೂಡಿಕೆ

ಸುದ್ದಿದಿನ,ನವದೆಹಲಿ : ಇಂದು ನಡೆಯಬೇಕಾಗಿದ್ದ ರೈತ ಮುಖಂಡರು ಮತ್ತು ಕೇಂದ್ರದ ಮಂತ್ರಿಗಳ ನಡುವಿನ 10ನೇ ಸುತ್ತಿನ ಮಾತುಕತೆ ಜ. 20ರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ. ಕೃಷಿ...

ದಿನದ ಸುದ್ದಿ15 hours ago

ದಾವಣಗೆರೆ | ಗಣರಾಜ್ಯೋತ್ಸವ ಪೂರ್ವಸಿದ್ಧತಾ ಸಭೆ

ಸುದ್ದಿದಿನ,ದಾವಣಗೆರೆ : 72 ನೇ ಗಣರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜ.19 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾಧಿಕಾರಿಗಳು ಮಾತನಾಡಿ,...

ದಿನದ ಸುದ್ದಿ18 hours ago

ಜಿಎಸ್ ಟಿ ಪರಿಹಾರದಲ್ಲಿ ರಾಜ್ಯಕ್ಕೆ ಅಂದಾಜು 27 ಸಾವಿರ ಕೋಟಿ ಖೋತಾ ಆಗಬಹುದು : ಸಿದ್ದರಾಮಯ್ಯ

ಸುದ್ದಿದಿನ,ಬೆಂಗಳೂರು : ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯುಪಿಎ ಸರ್ಕಾರದ ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ನೀಡಿದ್ದ ಕೊಡುಗೆ ಏನು ಎಂದು...

ದಿನದ ಸುದ್ದಿ19 hours ago

ಕೆಎಸ್‍ಆರ್‍ಟಿಸಿ ನೌಕರರು ಆತಂಕಕ್ಕೆ ಒಳಗಾಗುವುದು ಬೇಡ : ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ

ಸುದ್ದಿದಿನ,ದಾವಣಗೆರೆ : ಕೊರೊನಾ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸೊರಗಿದೆ ನಿಜ. ಒಟ್ಟಾರೆ 4 ಸಾವಿರ ಕೋಟಿ ಹಾನಿಗೊಳಗಾಗಿದೆ. ಹೀಗಂದ ಮಾತ್ರಕ್ಕೆ ನೌಕರರು ಆತಂಕಕ್ಕೆ ಒಳಗಾಗುವುದು ಬೇಡ. ನೌಕರರ...

ದಿನದ ಸುದ್ದಿ20 hours ago

ದಾವಣಗೆರೆ | 120 ಕೋಟಿ‌ ವೆಚ್ಚದಲ್ಲಿ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣ : ಸಂಸದ ಜಿ.ಎಂ.ಸಿದ್ದೇಶ್ವರ

ಸುದ್ದಿದಿನ, ದಾವಣಗೆರೆ : ಸ್ಮಾರ್ಟ್ ಸಿಟಿ ಯೋಜನೆಯ ರೂ.90 ಕೋಟಿ ಹಾಗೂ ಸಾರಿಗೆ ಇಲಾಖೆಯ ರೂ.30 ಕೋಟಿ ಒಟ್ಟು ರೂ.120 ಕೋಟಿ ಮೊತ್ತದಲ್ಲಿ ನೂತನ ಹೈಟೆಕ್ ಬಸ್...

ದಿನದ ಸುದ್ದಿ1 day ago

ಚನ್ನಗಿರಿ | ಕುಟುಂಬಸ್ಥರ ಜಮೀನು ವ್ಯಾಜ್ಯ ; ‘ನ್ಯಾಯ ಕೊಡಿ ಇಲ್ಲಾ ವಿಷ ಕೊಡಿ’ : ತೇಜಸ್ವಿ ಪಟೀಲ್ ನೇತೃತ್ವದಲ್ಲಿ ಪ್ರತಿಭಟನೆ

ಸುದ್ದಿದಿನ,ಚನ್ನಗಿರಿ : ತಾಲೂಕಿನ ಎಕ್ಕೆಗೊಂದಿ ಗ್ರಾಮದ ಪದ್ಮಾವತಿ ಕೋಂ ಲೇಟ್ ಪ್ರಕಾಶ್ ರವರ 28.32 ಎ. ಗುಂ. ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಯನ್ನು ಕುಟುಂಬದ...

ದಿನದ ಸುದ್ದಿ1 day ago

ದಾವಣಗೆರೆ | ಕೆಎಸ್‍ಆರ್‍ಟಿಸಿ ತಾತ್ಕಾಲಿಕ ಬಸ್ ನಿಲ್ದಾಣ ಉದ್ಘಾಟನೆ

ಸುದ್ದಿದಿನ,ದಾವಣಗೆರೆ : ಕ.ರಾ.ರ.ಸಾ ನಿಗಮದ ಕೇಂದ್ರ ಬಸ್ ನಿಲ್ದಾಣ ದಾವಣಗೆರೆ ಇಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕ.ರಾ.ರ.ಸಾ ನಿಗಮದ ಬಸ್ ನಿಲ್ದಾಣದ ಪುನರ್ ನಿರ್ಮಾಣದ ಹಿನ್ನೆಲೆ ಹೈಸ್ಕೂಲ್...

ದಿನದ ಸುದ್ದಿ2 days ago

ಈ ಶೈಕ್ಷಣಿಕ ವರ್ಷದಿಂದ ಹೊಸ ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ಕ್ರಮ : ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ

ಸುದ್ದಿದಿನ,ಶಿವಮೊಗ್ಗ: ಶಿವಮೊಗ್ಗದಲ್ಲಿ ಹೊಸದಾಗಿ ಇನ್ನೊಂದು ಕೇಂದ್ರೀಯ ವಿದ್ಯಾಲಯವನ್ನು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು. ಅವರು ಸೋಮವಾರ...

Trending