Connect with us

ದಿನದ ಸುದ್ದಿ

ಕಬಿನಿ ಹಿನ್ನೀರಿನಲ್ಲಿ ತೇಲಿ ಬಂದ ಹುಲಿ ಶವ !

Published

on

ಸುದ್ದಿದಿನ ಡೆಸ್ಕ್: ಮೈಸೂರು ಭಾಗದ ಎಲ್ಲ ಜಲಾಶಯಗಳು ತುಂಬಿದ್ದು, ಪರಿಣಾಮವಾಗಿ ಒಂದಿಲ್ಲೊಂದು ಅನಾಹುತಗಳಾಗುತ್ತಿವೆ.

ಕಬಿನಿ ಜಲಾಶಯದಲ್ಲಿ ಹಿನ್ನೀರಿನಲ್ಲಿ ಹುಲಿ ಶವವೊಂದು ತೇಲಿಬಂದಿದ್ದು, ಇದು ಸುತ್ತಮುತ್ತಲಿನವರನ್ನು ಆತಂಕಕ್ಕೀಡುಮಾಡಿದೆ. ಕಬಿನಿ ಅಚ್ಚುಕಟ್ಟು ಪ್ರದೇಶದ ಜಮೀನಿನಲ್ಲಿ ಹುಲಿ ಶವ ಕಂಡ ರೈತರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದರು, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಹಿನ್ನೀರಿನ ಪ್ರವಾಹದಲ್ಲಿ ಪ್ರಾಣಿ ಶವ ತೇಲಿಬಂದಿರುವುದು ಇದೇ ಮೊದಲು.

ದಿನದ ಸುದ್ದಿ

ಹೊಲಿಗೆ, ವೀಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಯುವಕ, ಯುವತಿಯರಿಗೆ ಹೊಲಿಗೆ ಹಾಗೂ ವಿಡಿಯೋಗ್ರಾಫಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೊಲಿಗೆ ತರಬೇತಿಗೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿ 18 ರಿಂದ 40 ವರ್ಷದೊಳಗಿರಬೇಕು. ವಿಡಿಯೋಗ್ರಾಫಿ ತರಬೇತಿಗೆ ಎಸ್.ಎಸ್.ಎಲ್.ಸಿ ಉತ್ತೀರ್ಣ, ಅನುತ್ತೀರ್ಣರಾಗಿದ್ದು 18 ರಿಂದ 40 ವರ್ಷ ವಯೋಮಾನದವರಾಗಿರಬೇಕು.

ಅರ್ಜಿಯನ್ನು ಕಚೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 25 ರೊಳಗೆ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ 08192-237480 ದೂರವಾಣಿಗೆ ಸಂಪರ್ಕಿಸಲು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ ಅಧಿಸೂಚನೆ ರದ್ದು

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಚನ್ನಗಿರಿ:ತಾಲ್ಲೂಕಿನಲ್ಲಿ ಖಾಲಿ ಇದ್ದ 16 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 52 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು ಇದನ್ನು ರದ್ದುಪಡಿಸಲಾಗಿದೆ. ಮುಂದೆ ನಡೆಯುವ ನೇಮಕಾತಿ ಬಗ್ಗೆ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ರಾಜಾನಾಯ್ಕ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬೆಸ್ಕಾಂನಿಂದ ಉಚಿತ ಡಿಜಿಟಲ್ ಮೀಟರ್ ಅಳವಡಿಕೆ

Published

on

ಸುದ್ದಿದಿನ,ದಾವಣಗೆರೆ:ಜಗಳೂರು ಬೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ಹಳೇ ವಿದ್ಯುತ್ ಮೀಟರ್‍ಗಳನ್ನು ತೆಗೆದು ಉಚಿತವಾಗಿ ಹೊಸ ಡಿಜಿಟಲ್ ಮೀಟರ್‍ಗಳನ್ನು ಅಳವಡಿಸಲಾಗುತ್ತಿದ್ದು ಬೆಸ್ಕಾಂ ಗ್ರಾಹಕರ ಬಳಿ ಹಳೆ ಮಾಪಕ ಎಲೆಕ್ಟ್ರೋ ಮೆಕ್ಯಾನಿಲ್ ಬದಲಾಗಿ ಎಲೆಕ್ಟ್ರೋ ಸ್ಟ್ಯಾಟಿಕ್ ಡಿಜಿಟಲ್ ಮಾಪಕ ಅಳವಡಿಸಿಕೊಳ್ಳಲು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending