ಲೈಫ್ ಸ್ಟೈಲ್
ಟಾಪ್ ಸೆಲಿಬ್ರಿಟಿಗಳ ಯೋಗ ಸೀಕ್ರೇಟ್..!

ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಡೀ ವಿವ್ವವೇ ಯೋಗಾಸನ ಗಳನ್ನ ಮಾಡುವಲ್ಲಿ ತಲ್ಲೀನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಚಾಲೆಂಜ್ ಎಲ್ಲೆಲ್ಲೂ ವೈರಲ್ ಆಗಿದ್ದು,
ಸೆಲಿಬ್ರಿಟಿ ಜನಸಾಮಾನ್ಯರೆನ್ನದೇ ಪ್ರತಿ ಒಬ್ಬರೂ ಫಿಟ್ನೆಸ್ ಚಾಲೆಂಜ್ ನಲ್ಲಿ ಭಾಗವಹಿಸುತ್ತಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ಈಗ ವೈರಲ್ ಟ್ರೆಂಡ್ ಆಡುತ್ತಿರುವ ಟಾಪ್ ನ್ಯೂಸ್ ಕೂಡಾ ಇದಾಗಿದೆ.. ಹೀಗಿರುವಾಗ ನಮ್ಮ ಸಿನಿಮಾ ದುನಿಯಾದಲ್ಲಿ ಯೋಗ ದಿನಾಚರಣೆ ಯಾರೆಲ್ಲ ಆಚರಿಸುತ್ತಿದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ.
ಶಿಲ್ಪ ಶೆಟ್ಟಿ ಅವರ ಯೋಗ ಕ್ರೇಜ್ ಎಲ್ಲರಿಗೂ ಗೊತ್ತಿರುವುದೇ. ಯೋಗ ಮಹತ್ವ ಸಾರುವ ಹಲವಾರು DVDಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇವರು ಕೂಡ ಫಿಟ್ ಇಂಡಿಯಾ ಚಾಲೆಂಜ್ ಸ್ವೀಕರಿಸಿದ್ದು.. ಸೋಷಿಯಲ್ ಮೀಡಿಯಾ ದಲ್ಲಿ ಈಗ ವೈರಲ್ ಆಗಿದೆ.. ತಮ್ಮ ಸೋಷಿಯಲ್ ಪ್ರೊಫೈಲ್ ನಲ್ಲಿ ಯೋಗ ಭಂಗಿಯ ವಿಡಿಯೋ ಅಪ್ಲೋಡ್ ಮಾಡಿ ಯೋಗ ದಿನಾಚರಣೆ ಶುಭ ಕೋರಿದ್ದಾರೆ.
ಬಾಲಿವುಡ್ ಟಾಪ್ ನಟಿ ಬೇಕೋ ತಮ್ಮ ಸುಂದರ ಶಾಂತಿಯುತ ತ್ವಚೆಯ ರಹಸ್ಯ ದಿನನಿತ್ಯ ದ ಯೋಗಭ್ಯಾಸ ಎಂದು ಹೇಳಿದ್ದಾರೆ.ಪ್ರತಿ ದಿನ 45 ನಿಮಿಷಗಳ ಕಾಲ 50 ಸೂರ್ಯ ನಮಸ್ಕಾರ ಮಾಡುವುದು ಇವರ ನಿತ್ಯ ಆಚರಣೆ.
ಯೋಗದಿಂದ ಲೇ ಬಹಳಷ್ಟು ಕೆಜಿ ತೂಕದ ಇಳಿಸಿ ಕೊಂಡ ಸೋನಮ್ ಕಪೂರ್ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿದ್ದು ಸೋಷಿಯಲ್ ಮೀಡಿಯಾ ದಲ್ಲಿ ಈಗ ವೈರಲ್ ಯೋಗ ದಿನಾಚರಣೆ ಯ ಫೋಟೋ ಶೇರ್ ಮಾಡಿದ್ದಾರೆ.
ರೇಸ್3 ಯ ಯಶಸ್ಸು ಆಸ್ವಾದಿಸುತ್ತಾ ಜಾಕ್ವಿಲಿನ್ ಫರ್ನಾಂಡೀಸ್.. ತಮ್ಮ ಮನೆಯಲ್ಲಿಯೇ ಅರಿಯಲು ಯೋಗ ಮಾಡುವುದರೊಂದಿಗೆ ಯೋಗ ದಿನಾಚರಣೆ ಆಚರಿಸುತ್ತಿದ್ದಾರೆ. ಇವರ ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಕ್ಲೀನ್ ಕಂಪನಿ ರನೌತ್ ಧ್ಯಾನ, ಪ್ರಾಣಾಯಾಮ, ವೃಷ್ಚಿಕಾಸನ, ನೌಕಾಸನಗಳೊಂದಿಗೆ ದಿನ ಪ್ರಾರಂಭಿಸುತ್ತಾರಂತೆ. ತಮ್ಮ ಮುಂಬೈನ ಮನೆಯಲ್ಲಿಯೇ ಇವರು ಯೋಗಾಸನ ಗಳನ್ನ ಮಾಡುವಲ್ಲಿ ಮಗ್ನರಾಗಿದ್ದಾರೆ.
ತಮ್ಮ ಸುಂದರ ಮೈಮಾಟಕ್ಕೆ ಹೆಸರಾದ ಮೂಲಕ ಅರೋರ ಖಾನ್ ಕರೀನ ಕಪೂರ್ ಇಂದ ಯೋಗ ಕಲಿತು ಯೋಗಾಭ್ಯಾಸಿಗಳಿಗೆ ಮನಸೋತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025
ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಸುದ್ದಿದಿನ.ಕಾಂ ಫಲಶೃತಿ | ಕಬ್ಬಿಣ ಬಿಸಾಡಿ ಓಡಿ ಹೋದ ಶಾಸಕರ ಆಪ್ತರು ; ಗೇಟ್ ಗೆ ಡಿಕ್ಕಿ, ಕ್ಯಾಮರಾಗಳಲ್ಲಿ ಸೆರೆ
-
ದಿನದ ಸುದ್ದಿ6 days ago
ವಕ್ಫ್ ತಿದ್ದುಪಡಿ ಕಾಯ್ದೆ- 2025 | ಇಂದು ಸುಪ್ರೀಂ ವಿಚಾರಣೆ
-
ರಾಜಕೀಯ4 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ5 days ago
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್
-
ದಿನದ ಸುದ್ದಿ6 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ
-
ದಿನದ ಸುದ್ದಿ4 days ago
ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ