Connect with us

ದಿನದ ಸುದ್ದಿ

ಆಧಾರ್ ಸವಾಲ್: ಟ್ರಾಯ್ ಅಧ್ಯಕ್ಷರ ಖಾತೆಗೆ ಕನ್ನ ಹಾಕಿದ ಹ್ಯಾಕರ್

Published

on

ಸುದ್ದಿದಿನ ಡೆಸ್ಕ್: ಆಧಾರ್ ಕಾರ್ಡ್ ನಂಬರ್ ಕೊಟ್ಟು ತಾಕತ್ತಿದ್ದರೆ ನನ್ನ ಮಾಹಿತಿಗಳನ್ನು ಕದಿಯಿರಿ ಎಂದು ಸವಾಲು ಹಾಕಿದ ಭಾರತೀಯ ದೂರ ಸಂಪರ್ಕ ನಿಯಂತ್ರಣ ಮಂಡಳಿ (ಟ್ರಾಯ್) ಮುಖ್ಯಸ್ಥರ ಸೊಕ್ಕು ಮುರಿದಿರುವ ಹ್ಯಾಕರ್‍ಗಳು, ಅವರ ಖಾತೆಗೆ ಒಂದು ರೂ. ಜಮೆಮಾಡಿದ್ದಾರೆ.

ಆಧಾರ್ ಕಾರ್ಡ್ ಮಾಹಿತಿಗಳು ಸುರಕ್ಷಿತ. ಅದನ್ನು ಎಂದಿಗೂ ಕದಿಯಲು ಸಾಧ್ಯವಿಲ್ಲಎಂದು ಟ್ವಿಟರ್‍ನಲ್ಲಿ ಹೇಳಿದ್ದ ಆರ್‍ಎಸ್ ಶರ್ಮಾ ಅವರು ತಮ್ಮ ಆಧಾರ್ ಸಂಖ್ಯೆಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದರು. ತಾಕತ್ತಿದ್ದರೆ ಆಧಾರ್ ಮಾಹಿತಿಗಳನ್ನು ಬಹಿರಂಗಪಡಿಸಿ ಎಂದು ಸವಾಲುಹಾಕಿದರು.

ಇದಾದ ಕೆಲವೇ ಗಂಟೆಗಳಲ್ಲಿ ಬ್ರಿಟನ್ ಮೂಲದ ಹ್ಯಾಕರ್‍ವೊಬ್ಬ ಶರ್ಮಾ ಅವರ ಮೊಬೈಲ್ ಸಂಖ್ಯೆಗಳು, ಅವರು ಬಳಸುತ್ತಿರುವ ಮೊಬೈಲ್, ಅವರ ಬ್ಯಾಂಕ್ ಖಾತೆಗಳು ಮೊದಲಾದ ಮಾಹಿತಿಗಳನ್ನು ಟ್ವಿಟರ್‍ನಲ್ಲೇ ಲೀಕ್ ಮಾಡಿದ್ದಾನೆ.

ಆಧಾರ್ ಕಾರ್ಡ್ ಕೆಟ್ಟದ್ದು ಎಂದು ನಾನು ಹೇಳುವುದಿಲ್ಲ ಆದರೆ, ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವುದು ಸುರಕ್ಷಿತವಲ್ಲ ಎಂದು ಹ್ಯಾಕರ್ ಪ್ರತಿಕ್ರಿಯೆ ನೀಡಿದ್ದ. ಈ ಎಲ್ಲ ಮಾಹಿತಿಗಳು ವೆಬ್‍ಸೈಟ್‍ನಲ್ಲಿ ಲಭ್ಯವಿವೆ ಎಂದು ಶರ್ಮಾ ಅವರು ಸಮರ್ಥನೆ ಮಾಡಿಕೊಂಡಿದ್ದರು.
ಇದರ ಬೆನ್ನಿಗೇ ಬೆಂಗಳೂರಿನ ಹ್ಯಾಕರ್‍ಗಳು ಶರ್ಮಾ ಅವರ ಖಾತೆಗೆ ಒಂದು ರೂ. ಜಮೆ ಮಾಡಿ ಆ ಸ್ಕ್ರೀನ್ ಶಾಟ್‍ಅನ್ನು ಹಂಚಿಕೊಂಡಿದ್ದಾರೆ.

ಶರ್ಮಾ ಅವರ ಆಧಾರ್ ಕಾರ್ಡ್ ಮಾಹಿತಿ ಹ್ಯಾಕ್ ಆಗಿರುವ ಬೆನ್ನಿಗೇ ಟ್ವಿಟರ್‍ನಲ್ಲಿ ಆಧಾರ್ ಪರವಾದ ಮತ್ತು ವಿರೋಧಿಗಳ ನಡುವೆ ಪರ ವಿರೋಧದ ಚರ್ಚೆ ಆರಂಭವಾಗಿದೆ.

ಆಧರ್ ಕಾರ್ಡ್ ಮಾಡಿಸಲು ದೇಶದ ಜನರು ಈಗಾಗಲೇ ನೀಡಿರುವ ಮಾಹಿತಿಗಳು ಸರಕಾರದ ಬಳಿ ಭದ್ರವಾಗಿದೆ ಎಂದು ನೀವು ಅಂದುಕೊಂಡಿದ್ದರೆ ಅದು ಶುದ್ಧ ಸುಳ್ಳು. ಆಧಾರ್ ಮಾಹಿತಿಗಳು ಹ್ಯಾಕರ್‍ಗಳ ಕೈಗೆ ಸುಲಭವಾಗಿ ಸಿಕ್ಕಿವೆ. ಅವರು ಯಾವಾಗ ಬೇಕಾದರೂ ನಮ್ಮ ಖಾತೆಗೆ ಕೈ ಹಾಕಬಹದು, ನಮ್ಮ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಹಾಗೂ ಮಿಕ್ಕ ವಿವರಗಳನ್ನೆಲ್ಲ ಕದಿಯಬಹುದು ಎಂದು ಟ್ವಿಟ್ಟಿಗರು ವಾದಿಸಿದ್ದಾರೆ.

trai chairman account hacked

ದಿನದ ಸುದ್ದಿ

ಸರ್ಕಾರಿ ವೈದ್ಯರು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಕಾರ್ಯ ನಿರ್ವಹಿಸುವುದು ಕಡ್ಡಾಯ:ಸಚಿವ ಶರಣಪ್ರಕಾಶ್ ಪಾಟೀಲ್

Published

on

ಸುದ್ದಿದಿನಡೆಸ್ಕ್:ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಡ್ಡಾಯವಾಗಿ ಕಾರ್ಯ ನಿರ್ವಹಿಸಬೇಕು ಎಂದು ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪರಿಷತ್‌ನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸದಸ್ಯೆ ಬಲ್ಕಿಶ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ವೈದ್ಯರು ಯಾವುದೇ ಕಾರಣಕ್ಕೂ ಬೇರೆ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

ಈ ಮೊದಲು 2 ಗಂಟೆಗಳ ನಂತರ 1 ಗಂಟೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿತ್ತು. ಆದರೆ ವೈದ್ಯರು 1 ಗಂಟೆ ಮುಂಚಿತವಾಗಿ ಹೋಗುವುದು, ಇಲ್ಲವೇ 1 ಗಂಟೆ ತಡವಾಗಿ ಬರುತ್ತಾರೆಂಬ ಆರೋಪ ಕೇಳಿಬರುತ್ತಿದೆ. ಇದನ್ನು ತಡೆಗಟ್ಟಲು ಈ ಕ್ರಮ ತೆಗೆದುಕೊಂಡಿದ್ದಾಗಿ ಸಚಿವರು ಸಮರ್ಥಿಸಿಕೊಂಡಿದ್ದಾರೆ.

ಒAದು ವೇಳೆ ವೈದ್ಯರು, ಉಲ್ಲಂಘನೆ ಮಾಡಿರುವುದು ಕಂಡುಬಂದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.
ವೈದ್ಯರು ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ನಾಲ್ಕು ಬಾರಿ ಬಯೋಮೆಟ್ರಿಕ್‌ಗೆ ತಮ ಹಸ್ತಮುದ್ರೆ ಹಾಕಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯೇ ಪೂರಕ : ಡಾ.ಬಾಬು

Published

on

ಸುದ್ದಿದಿನ,ದಾವಣಗೆರೆ:ಮಹಿಳಾ ಸಬಲೀಕರಣ, ಸಾಮಾಜಿಕ. ನ್ಯಾಯಕ್ಕೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಪೂರಕ ಮತ್ತು ಅವರ ಸಾಧನೆಯ ಮಹತ್ವವನ್ನು ಬೆಳಕಿಗೆ ತರುವ ಉದ್ದೇಶವೇ ಮಹಿಳಾ ದಿನಾಚರಣೆಯ ಉದ್ದೇಶ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ವೆಂಕಟೇಶ್ ಬಾಬು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳಾ ಶಕ್ತಿ, ಸಬಲೀಕರಣ ಮತ್ತು ಸಮಾನ ಅವಕಾಶಗಳ ಅಗತ್ಯತೆಯ ಮಹತ್ವವನ್ನು ವಿವರಿಸಿದರು. ಮಹಿಳೆಯರು ಸಮಾಜದ ನಾಂದಿ ಕಲ್ಲು. ಅವರ ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಮತ್ತು ನಾಯಕತ್ವಕ್ಕೆ ಪ್ರೋತ್ಸಾಹ ನೀಡಿದರೆ, ಸಮಗ್ರ ಅಭಿವೃದ್ಧಿ ಸಾಧ್ಯ. ಮಹಿಳಾ ಶಕ್ತಿಯನ್ನು ಗುರುತಿಸಿ, ಅವರಿಗೆ ಸಮಾನ ಅವಕಾಶಗಳನ್ನು ಒದಗಿಸುವುದು ನಿಜವಾದ ಸಬಲೀಕರಣ”, ಎಂದು ಅಭಿಪ್ರಾಯಪಟ್ಟರು.

“ಮಹಿಳೆಯರು ಕೇವಲ ಗೃಹ ಜೀವನಕ್ಕೆ ಸೀಮಿತವಾಗದೇ, ವೈಜ್ಞಾನಿಕ, ಆರ್ಥಿಕ, ರಾಜಕೀಯ ಹಾಗೂ ಆಡಳಿತಾತ್ಮಕ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಆದರೆ ಇನ್ನೂ ಅವರು ಎದುರಿಸುತ್ತಿರುವ ಸಾಮಾಜಿಕ ಹಾಗೂ ವೃತ್ತಿಪರ ಸವಾಲುಗಳಿಗೆ ಪರಿಹಾರ ಕಾಣುವುದು ಅವಶ್ಯಕ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಮಹಿಳಾ ಸಬಲೀಕರಣದ ಮಹತ್ವದ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡರು.

ಸಮಾಜ ಶಾಸ್ತ್ರ ಪ್ರಾಧ್ಯಾಪಕ ಪ್ರೊ ಸುರೇಶ್ ಅವರು ಮಾತನಾಡಿ, “ಮಹಿಳೆಯರು ಸ್ವತಂತ್ರ ನಿರ್ಧಾರ ಮಾಡಿಕೊಳ್ಳುವಂತಾಗಬೇಕು. ಸಮಾನತೆ ಮಾತ್ರ ಸಬಲೀಕರಣವಲ್ಲ, ಮಹಿಳೆಯರು ಅವರ ಹಕ್ಕುಗಳನ್ನು ಅರಿತು, ಅವುಗಳನ್ನು ಅನುಷ್ಠಾನಗೊಳಿಸಬೇಕು” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವಿಭಾಗದ ಮಹಿಳಾ ಶಿಕ್ಷಕರಿಗೆ ಹಾಗೂ ಕಚೇರಿ ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಯಿತು.

ಪ್ರೊ ಬಿ ಸಿ ತಹಸಿಲ್ದಾರ್ ಅವರು ತಮ್ಮ ಅಧ್ಯಕ್ಷರ ಭಾಷಣದಲ್ಲಿ “ಈ ರೀತಿಯ ಕಾರ್ಯಕ್ರಮಗಳು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ, ವಿದ್ಯಾರ್ಥಿಗಳು ಮಹಿಳಾ ಸಬಲೀಕರಣದ ಬಗ್ಗೆ ಅರಿವು ಹೊಂದಲು ಸಹಾಯ ಮಾಡುತ್ತದೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ನಿರ್ವಹಣಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ತೀವ್ರ ಶ್ರಮ ವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮುಂದಿನ ನಾಯಕರಾಗಿ ತಯಾರಾಗಿ : ಪ್ರೊ ಇಗ್ನಿಸಿಯಸ್

Published

on

ಸುದ್ದಿದಿನ,ದಾವಣಗೆರೆ:ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ “ಫ್ರೆಷರ್ಸ್ ಫಿಯೆಸ್ಟಾ – 2K25” ಕಾರ್ಯಕ್ರಮವು ಮಹಾ ಸಡಗರದಿಂದ ನಡೆಯಿತು. ಈ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಸವರಾಜ ಸಿ. ತಹಸಿಲ್ದಾರ್ ಅವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ಪ್ರೊ. ಬಸವರಾಜ ಸಿ. ತಹಸಿಲ್ದಾರ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ಕಟ್ಟುವಲ್ಲಿ ಪ್ರಾರಂಭಿಕ ದಿನಗಳ ಮಹತ್ವ ಕುರಿತು ವಿವರಿಸಿದರು. ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಅವರು, ಶಿಕ್ಷಣವು ಜೀವನ ರೂಪಿಸುವ ಪ್ರಮುಖ ಅಂಶವಾಗಿದ್ದು, ಅವರ ಶೈಕ್ಷಣಿಕ ಪಯಣ ಸದೃಢವಾಗಿರಬೇಕೆಂದು ಆಶಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಇಗ್ನೇಷಿಯಸ್. ಬಿ., ಪ್ರಾಂಶುಪಾಲರು, RVD ಕಾಲೇಜು, ಬೆಂಗಳೂರು, ಅವರು “ವಿದ್ಯಾರ್ಥಿಗಳು ಮುಂದಿನ ನಾಯಕರು” ಎಂಬ ವಿಷಯದ ಮೇಲೆ ಪ್ರೇರಣಾತ್ಮಕ ಭಾಷಣವನ್ನು ನೀಡಿದರು. ವಿದ್ಯಾರ್ಥಿಗಳು ಕೇವಲ ಅಧ್ಯಯನದಲ್ಲಿ ಮಾತ್ರವಲ್ಲ, ನೈತಿಕ ಮತ್ತು ವ್ಯಕ್ತಿತ್ವ ಅಭಿವೃದ್ಧಿಯಲ್ಲಿಯೂ ಮುಂದೆ ಬರಬೇಕು ಎಂದು ಅವರು ಸಲಹೆ ನೀಡಿದರು. ತಾಂತ್ರಿಕ ಜ್ಞಾನ, ನಿರ್ಧಾರಕ್ಷಮತೆ ಮತ್ತು ತಂಡದ ಮನೋಭಾವ ಇಂದಿನ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವೆಂದು ಅವರು ಒತ್ತಿಹೇಳಿದರು.

ಪ್ರಪಂಚದ ಮುಂದಿನ 40 ವರ್ಷಗಳು ನಿರ್ವಹಣಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ವರ್ಷಗಳು ಯಾವುದೇ ವಿಷಯಕ್ಕೆ ಬೇಡಿಕೆ ಕಡಿಮೆಯಾದರೂ ನಿರ್ವಹಣ ಶಾಸ್ತ್ರಕ್ಕೆ ತೊಂದರೆ ಆಗದು ಇತ್ತೀಚಿನ. ಎ ಐ ತಂತ್ರಜ್ಞಾನ ಕಲಿತರೆ ವಿದ್ಯಾರ್ಥಿಗಳು ವಾಣಿಜ್ಯ ಪ್ರಪಂಚವನ್ನು ಆಳಬಹುದು ಎಂದು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಡಾ. ವೆಂಕಟೇಶ್ ಬಾಬು. ಎಸ್., ನಿರ್ವಹಣಾ ವಿಭಾಗದ ಮುಖ್ಯಸ್ಥರು, ಕಾರ್ಯಕ್ರಮದ ಪ್ರಸ್ತಾವಿಕ ಭಾಷಣ ಮಾಡಿದರು. ಅವರು ವಿಭಾಗದ ಶೈಕ್ಷಣಿಕ ಕಾರ್ಯಕ್ರಮಗಳು, ಶಿಷ್ಯತ್ವ ಮತ್ತು ಕೈಗಾರಿಕಾ ಸಂಪರ್ಕದ ಮಹತ್ವ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳನ್ನು ಸಂಪೂರ್ಣವಾಗಿ ಬಳಸಿಕೊಂಡು, ವ್ಯಕ್ತಿತ್ವ ವೃದ್ಧಿಸಲು ಮತ್ತು ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳಲು ಮುನ್ನಡೆಯಬೇಕು ಎಂದು ಹೇಳಿದರು. ಬಾಯ್ ಶಾಸ್ತ್ರ ಮತ್ತು ವಿದ್ಯಾರ್ಥಿಗಳಿಗೆ ಯಾವತ್ತಿಗೂ ಭವಿಷ್ಯವಿದೆ ಪ್ರಪಂಚದಲ್ಲಿ ವಾಣಿಜ್ಯ ವ್ಯವಹಾರ ಇರುವರೆಗೂ ನಿಮಗೆ ಅವಕಾಶಗಳು ಕಡಿಮೆ ಆಗುತ್ತಿಲ್ಲ ಆದರೆ ಒಂದಿಷ್ಟು ಮೌಲ್ಯ ಆಧಾರಿತ ಶಿಕ್ಷಣವನ್ನು ಪಡೆದುಕೊಂಡರೆ ನೀವು ಜೀವನದಲ್ಲಿ ಯಶಸ್ವಿಯಾಗಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಸುರೇಶ್ ಅವರು ಮಾತನಾಡುತ್ತಾ ಕಾಲೇಜಿನಲ್ಲಿ ಇತರದ ಕಾರ್ಯಕ್ರಮಗಳು ಸದಾ ನಡಿಯುತ್ತಿರುತ್ತವೆ. ಅವುಗಳ ಉಪಯೋಗವನ್ನು ಪಡೆದುಕೊಂಡರೆ ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕಾಲೇಜಿನ ಅಧೀಕ್ಷಕರಾದ ಆತ್ಮಹತ್ಯೆ ಪ್ರತಿಭಾ ಹಾಗೂ ಶ್ರೀ ಕುಮಾರ ಜಮುನಾ ಮತ್ತು ನಿರ್ಣಯಶಾಸ್ತ್ರ ಭಾಗದ ಉಪನ್ಯಾಸಕರಾದ ಶ್ರೀಮತಿ ಪ್ರತಿಭಾ ಶ್ರೀಮತಿ ರಾಧಾ ಹಾಗೂ ಶ್ರೀಮತಿ ಡಾ ಸೌಜನ್ಯವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ರಾಂಕ್ ವಿಜೇತರಿಗೆ ಸನ್ಮಾನಿಸಲಾಯಿತು. ನಿರ್ವಹಣ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ ವಿನಾಯಕ್ ದಾ ಪ್ರಭಾಕರ್ ಪ್ರೊ ವೀರೇಶ್ ಪ್ರೊ ಶಂಕರಯ್ಯ ಮತ್ತು ಪ್ರೊ ನಾಗರಾಜ ಹಾಗೂ ಹಲವಾರು ಪ್ರಾಧ್ಯಾಪಕರು ಹಾಜರಿದ್ದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು. ಕಾರ್ಯಕ್ರಮವನ್ನು ದ್ವಿತೀಯ ವರ್ಷದ ಎಂಬಿಎ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ5 hours ago

ಸರ್ಕಾರಿ ವೈದ್ಯರು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಕಾರ್ಯ ನಿರ್ವಹಿಸುವುದು ಕಡ್ಡಾಯ:ಸಚಿವ ಶರಣಪ್ರಕಾಶ್ ಪಾಟೀಲ್

ಸುದ್ದಿದಿನಡೆಸ್ಕ್:ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಡ್ಡಾಯವಾಗಿ ಕಾರ್ಯ ನಿರ್ವಹಿಸಬೇಕು ಎಂದು ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ್...

ದಿನದ ಸುದ್ದಿ5 hours ago

ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯೇ ಪೂರಕ : ಡಾ.ಬಾಬು

ಸುದ್ದಿದಿನ,ದಾವಣಗೆರೆ:ಮಹಿಳಾ ಸಬಲೀಕರಣ, ಸಾಮಾಜಿಕ. ನ್ಯಾಯಕ್ಕೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಪೂರಕ ಮತ್ತು ಅವರ ಸಾಧನೆಯ ಮಹತ್ವವನ್ನು ಬೆಳಕಿಗೆ ತರುವ ಉದ್ದೇಶವೇ ಮಹಿಳಾ ದಿನಾಚರಣೆಯ ಉದ್ದೇಶ ಎಂದು...

ದಿನದ ಸುದ್ದಿ2 days ago

ಮುಂದಿನ ನಾಯಕರಾಗಿ ತಯಾರಾಗಿ : ಪ್ರೊ ಇಗ್ನಿಸಿಯಸ್

ಸುದ್ದಿದಿನ,ದಾವಣಗೆರೆ:ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ “ಫ್ರೆಷರ್ಸ್ ಫಿಯೆಸ್ಟಾ – 2K25” ಕಾರ್ಯಕ್ರಮವು ಮಹಾ ಸಡಗರದಿಂದ ನಡೆಯಿತು. ಈ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ...

ದಿನದ ಸುದ್ದಿ4 days ago

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ; ಇಲ್ಲಿವೆ ಪ್ರಮುಖಾಂಶಗಳು

ಸುದ್ದಿದಿನಡೆಸ್ಕ್:ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ 4 ಲಕ್ಷದ 9 ಸಾವಿರದ 549 ಕೋಟಿ ರೂ ಬಜೆಟ್ ಗಾತ್ರದ ಕರ್ನಾಟಕ ರಾಜ್ಯ ಆಯವ್ಯಯವನ್ನು ಇಂದು ಮಂಡಿಸಿದ್ದಾರೆ. ಕೃಷಿ ಮತ್ತು...

ಅಂತರಂಗ5 days ago

ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು...

ದಿನದ ಸುದ್ದಿ1 week ago

ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ಬಸ್ ಪಾಸ್ : ಆನ್‌ಲೈನ್ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ...

ದಿನದ ಸುದ್ದಿ2 weeks ago

ನಮ್ಮ‌ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

ಹರ್ಷಕುಮಾರ್ ಕುಗ್ವೆ ಲಿಂಗವು ದೇವರಲ್ಲ ಶಿವನು ದೇವರಲ್ಲ ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ...

ದಿನದ ಸುದ್ದಿ2 weeks ago

ಚಿಕ್ಕಮಗಳೂರು | ಕಾಡ್ಗಿಚ್ಚಿನಿಂದ ಕಾಫಿ ತೋಟ, ಅರಣ್ಯ ಪ್ರದೇಶ ನಾಶ

ಸುದ್ದಿದಿನ,ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ಹಾಗು ಕಳಸ ತಾಲೂಕುಗಳಲ್ಲಿ ಉಂಟಾದ ಪ್ರತ್ಯೇಕ ಕಾಡ್ಗಿಚ್ಚು ಪ್ರಕರಣಗಳಲ್ಲಿ 15 ಎಕರೆ ಕಾಫಿ ತೋಟ ಮತ್ತು 25 ಕ್ಕು ಹೆಚ್ಚು ಎಕರೆ ಅರಣ್ಯ ಪ್ರದೇಶ...

ದಿನದ ಸುದ್ದಿ2 weeks ago

ಕಂದಗಲ್‌ ಗ್ರಾಮ ಪಂಚಾಯಿತಿ ನೂತನ ಆಧ್ಯಕ್ಷರಾಗಿ ಎಲ್‌.ಆರ್.‌ ಚಂದ್ರಪ್ಪ ಆಯ್ಕೆ

ಸುದ್ದಿದಿನ,ದಾವಣಗೆರೆ:ತಾಲೂಕಿನ ಕಂದಗಲ್‌ ಗ್ರಾಮ ಪಂಚಾಯಿತಿಯ ನೂತನ ಆಧ್ಯಕ್ಷರಾಗಿ ಫೆ.21 ರಂದು ಎಲ್‌.ಆರ್.‌ ಚಂದ್ರಪ್ಪ ಆಯ್ಕೆಯಾಗಿದ್ದಾರೆ. ಎರಡನೇ ಅವಧಿಗೆ ಸಾಮಾನ್ಯ ಪುರುಷ ಮೀಸಲಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಆಧಿಕಾರಿಯಾಗಿ...

ದಿನದ ಸುದ್ದಿ2 weeks ago

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಕಾಂಗ್ರೆಸ್ ಸರ್ಕಾರ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಬೆಂಗಳೂರು:ಕಾವೇರಿ ನಿವಾಸದಲ್ಲಿ ಲಿಂಗಾಯತ ಸ್ವಾಮೀಜಿಗಳು, ಸಚಿವರು, ಶಾಸಕರು, ಸಮಾಜದ ಮುಖಂಡರ ನಿಯೋಗದವರು ಸೊಮವಾರ ನನ್ನನ್ನು ಭೇಟಿಯಾಗಿ, ಸಮುದಾಯದ ಬೇಡಿಕೆಗಳ ಕುರಿತು ಸಮಾಲೋಚನೆ ನಡೆಸಿ, ಮನವಿಪತ್ರ ನೀಡಿದರು. ಬಸವ...

Trending