Connect with us

ದಿನದ ಸುದ್ದಿ

ತುಮಕೂರು :’ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ ಕಾರ್ಯಾಗಾರ’ ದಲ್ಲಿ ಪತ್ರಕರ್ತ ಪಿ. ಸಾಯಿನಾಥ್

Published

on

ಸುದ್ದಿದಿನ,ತುಮಕೂರು: ಬಂಡಾಯ ಸಾಹಿತ್ಯ ಸಂಘಟನೆಯು ನಿರ್ದಿಷ್ಟ ವಿಷಯಾಧಾರಿತ ಕಾರ್ಯಗಾರ ಮತ್ತು ಸಂವಾದಗಳ ಮೂಲಕ ಯುವ ಸಾಂಸ್ಕೃತಿಕ ನಾಯಕತ್ವವನ್ನು ಬೆಳೆಸುವ ಉದ್ದೇಶ ಹೊಂದಿದ್ದು ಇದರ ಭಾಗವಾಗಿ ಇಂದು ತುಮಕೂರಿನಲ್ಲಿ ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ ಎಂಬ ರಾಜ್ಯ ಮಟ್ಟದ ಕಾರ್ಯಗಾರವನ್ನು ಏರ್ಪಡಿಸಿಲಾಗಿತ್ತು.

ರಾಜ್ಯಾದ್ಯಂತ ಸಾಕಷ್ಟು ಯುವ ಪ್ರತಿನಿಧಿಗಳನ್ನು ಒಳಗೊಂಡ ಈ ಕಾರ್ಯಗಾರವನ್ನು ಬಂಡಾಯದ ಬರಹಗಾರಾದ ಪ್ರೊ. ಬರಗೂರು ರಾಮ ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ
ದೇಶದ ಹೆಸರಾಂತ ಪತ್ರಕರ್ತರೂ ಮತ್ತು ಚಿಂತಕರೂ ಆದ ಪಿ ಸಾಯಿನಾಥ್ ಉದ್ಘಾಟಿಸಿ, ಪತ್ರಿಕೆ, ಚಲನ ಚಿತ್ರ, ರಂಗಭೂಮಿ, ಜನಪದ ಕಲೆ, ಮತ್ತು ವಿದ್ಯುನ್ಮಾನ ಮಾಧ್ಯಮಗಳ ಸಾಮಾಜಿಕ ಹೊಣೆ ಮತ್ತು ಸ್ಥಿತ್ಯಂತರದ ಸ್ಥಿತಿಗಳನ್ನ ಕುರಿತು ವಿಷಯ ಮಂಡನೆ ಮತ್ತು ಸಂವಾದಗಳ ಜೊತೆಗೆ “ಸಮೂಹ ಮಾಧ್ಯಮ ಮತ್ತು ಮಹಿಳೆ” ಹಾಗೂ ಸಮೂಹ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ವಿಶೇಷ ಉಪನ್ಯಾಸ ಮಾಡಲಾಯಿತು.

ಎಲ್ಲಾ ವಿಷಯಗಳ ಬಗ್ಗೆಯೂ ವ್ಯಾಪಕ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾದ ಸಿ. ಬಸವಲಿಂಗಯ್ಯ (ರಂಗಭೂಮಿ). ಜಿ. ಎನ್. ಮೋಹನ್ (ವಿದ್ಯುನ್ಮಾನ). ಅರುಣ ಜೋಳದ ಕೂಡ್ಲಿಗಿ (ಜನಪದ ಕಲೆ). ಚಂದ್ರಕಾಂತ ವಡ್ಡು (ಪತ್ರಕೆ). ಗಂಗಾಧರ ಮೊದಲಿಯಾರ್ (ಚಲನಚಿತ್ರ). ಗೀತಾ ವಸಂತ್ (ಮಾಧ್ಯಮ ಮತ್ತು ಮಹಿಳೆ).
ಚ. ಹ. ರಘುನಾಥ್ (ಅಭಿವ್ಯಕ್ತಿ ಸ್ವಾತಂತ್ರ್ಯ). ದಿನೇಶ್ ಆಮಿನ್ ಮಟ್ಟು ಸಮಾರೋಪ ನುಡಿಗಳನ್ನಾಡಿದರು.

ರಾಜ್ಯದ ವಿವಿಧ ಕಡೆಯಿಂದ ವೈ. ಬಿ. ಹಿಮ್ಮಡಿ. ಆರ್ ಜಿ ಹಳ್ಳಿ ನಾಗರಾಜ್. ಗಡಿ ಹಳ್ಳಿ ನಾಗರಾಜ್. ರಂಗಾರೆಡ್ಡಿ ರಾಜಶೇಖರ ಮೂರ್ತಿ ಜ್ಯೋತಿ. ಪ್ರದೀಪ್ ಮಾಲ್ಗುಡಿ. ಮಲ್ಲಿಕಾರ್ಜುನ ಮಾನ್ಪಡೆ. ಸ್ಥಳಿಯ ಕವಿ ಕೆ ಬಿ ಸಿದ್ದಲಿಂಗ. ದೊರೆ ರಾಜ್. ಪ್ರೊ ಶ್ರೀನಿವಾಸಯ್ಯ. ಸೋಮಣ್ಣ. ಬೂವನ ಹಳ್ಳಿನಾಗರಾಜ್. ಬಾ ಹ ರಮಾಕೂಮಾರಿ. ಎಸ್ ರಮೇಶ್. ಲಕ್ಷ್ಮಣ್ ದಾಸ್. ಶೈಲ ನಾಗರಾಜ್. ಅಂತಮೂರ್ತಿ. ಹೊನ್ನಾಗಾನಹಳ್ಳಿ ಕರಿಯಣ್ಣ. ಸೈಯ್ಯದ್ ಮುಜೀಬ್. ರಘು ಎಸ್ ಎಲ್. ಹಫಿಜ್. ನಾಗರಾಜ ಎಂ. ಷಕೀಬ್ ಎಸ್ ಕಣದ್ಮನೆ. ಸತೀಶ್ ಶಿವಪ್ಪಯ್ಯನಮಠ. ಶಂಭನಗೌಡ. ಸಕ್ರಿಯವಾಗಿಭಾಗವಹಿಸಿದ್ದರು.

ಡಾ. ರಾಜಪ್ಪ ದಳವಾಯಿ ಮತ್ತು ಡಾ. ಸುಕನ್ಯ ಮಾರುತಿಯವರು ಕಾರ್ಯಗಾರದ ನಿರ್ದೇಶಕರಾಗಿ ಮತ್ತು ಜಿಲ್ಲಾ ಸಂಚಾಲಕರಾದ ನಾಗಭೂಷಣ ಬಗ್ಗನಡು. ಓ ನಾಗರಾಜ್ ಇವರ ನೇತೃತ್ವದಲ್ಲಿ ಕಾರ್ಯಗಾರವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : 2023-24 ನೇ ಸಾಲಿನ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಆನ್‍ಲೈನ್ (ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದ) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಇಲಾಖೆಗಳ ವಿದ್ಯಾರ್ಥಿನಿಲಯಗಳಲ್ಲಿ 5 ನೇ ತರಗತಿಯಿಂದ 10 ನೇ ತರಗತಿಯವರೆಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ತಮ್ಮ ಎಸ್.ಎಸ್.ಪಿ ಐಡಿಯೊಂದಿಗೆ ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದ ವಿಳಾಸ: https://shp.karnataka.gov.in ಇಲ್ಲಿ ಸಂದರ್ಶಿಸಿ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ನಾಗರಾಜ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಗಳೂರು | ಸಿಡಿಲು ಬಡಿದು ಇಬ್ಬರು ರೈತರು ಸಾವು

Published

on

ಸುದ್ದಿದಿನ, ದಾವಣಗೆರೆ : ಸಿಡಿಲು ಬಡಿದು, ಇಬ್ಬರು ರೈತರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ನಿನ್ನೆ ಸಂಜೆ ನಡೆದಿದೆ.

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಳೆಬಂದ ಕಾರಣ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದಾಗ ಈ ದುರಂತ ಸಂಭವಿಸಿದೆ. ಮೃತರ ಕುಟುಂಬಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಜಿಲ್ಲಾಡಳಿತ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ; ನಾಡಿದ್ದು ವಿಧ್ಯುಕ್ತ ಚಾಲನೆ

Published

on

ಸುದ್ದಿದಿನ, ಬೆಂಗಳೂರು : ಸರ್ಕಾರದ ಗ್ಯಾರಂಟಿ ಘೋಷಣೆಗಳಲ್ಲೊಂದಾದ ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿದ್ದು ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಇದೇ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದೆ.

ಈ ಯೋಜನೆಗೆ ರಾಜ್ಯಾದ್ಯಂತ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಜಿಲ್ಲೆಗಳಲ್ಲಿ ಯೋಜನೆಗೆ ಏಕಕಾಲಕ್ಕೆ ಚಾಲನೆ ನೀಡಲಿದ್ದು, ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲಾ ವರ್ಗಗಳ ಮಹಿಳೆಯರಿಗೆ ಎಸಿ ಹಾಗೂ ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ಇತರ ಎಲ್ಲಾ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗುವುದು. ಇದರಿಂದ ಶೇಕಡ 94 ರಷ್ಟು ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬಸ್‌ಗಳಲ್ಲಿ ಶೇ. 50 ರಷ್ಟು ಆಸನಗಳನ್ನು ಪುರುಷರಿಗೆ ಮೀಸಲಿರಿಸಲಾಗುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending