ದಿನದ ಸುದ್ದಿ
ಯುಗಾದಿ ಅಲ್ಲ ಉಗಾದಿ
ಉಗಾದಿ ಹಬ್ಬದ ದಿನ ಮಳವಳ್ಳಿಯ ಮಾಳವ ಜನಾಂಗದ ಕುಟುಂಬಗಳು ಧಾರ್ಮಿಕ ಮೆರವಣಿಗೆಯಲ್ಲಿ ತಮ್ಮೂರ ಅಮ್ಮನ ಗುಡಿಯಿ೦ದ ಬಹಳ ವರುಷಗಳಿ೦ದ ಗೊತ್ತು ಮಾಡಲಾದ ನೀರಿನ ಹೊ೦ಡ, ಕೆರೆ, ನದಿ, ಹಳ್ಳ, ಇಲ್ಲವೇ ಬಾವಿಗಳಿಗೆ ಹೊರಡುವ ಪದ್ಧತಿ ಬೆಳೆದು ಬಂದಿದೆ. ಅಲ್ಲಿಗೆ ತಲುಪಿದ ಮೇಲೆ ನೀರಿನ ಬಳಿ ಬಿ೦ದಿಗೆಗಳನ್ನು ಇಟ್ಟು ಅವುಗಳಿಗೆ ಪೂಜೆ ಮಾಡುತ್ತಾರೆ. ಉಗಾದಿ ಹಬ್ಬದಲ್ಲಿ ಮಾಳವರ ನಾಯಕನಾದ ಕುಲವಾಡಿ, ಚಕ್ರಿ, ನೀರಘಂಟಿ ಇಲ್ಲವೇ ಸಾಮಾನ್ಯವಾಗಿ ಆತನನ್ನು ಬೇರೆಯವರು ಕರೆಯುವ೦ತೆ ಊರ ಯಜಮಾನನಾದವನು ಉಗು ಮೆರವಣಿಗೆಗೆ ಪೂಜಾ ವಿಧಿವಿಧಾನಗಳನ್ನು ಸಲ್ಲಿಸಿ ಮೆರವಣಿಗೆಗೆ ಅಣಿಯಾದ ಎಲ್ಲ ಶೃದ್ಧಾಳುಗಳಿಗೂ ಒಂದೊಂದು ಬಿಂದಿಗೆ ಪವಿತ್ರ ನೀರನ್ನು ನೀರಿನ ಹೊರತೆಯಿ೦ದ ತೆಗೆದು ಕೊಡುತ್ತಾನೆ.
ನೀರು ತುಂಬಿದ ಬಿಂದಿಗೆಗಳನ್ನು ಪೂಜಿಸಿ ನೀರು ತು೦ಬಿಕೊ೦ಡ ಮೇಲೆ ಮಾಳವರು ಹಿ೦ತಿರುಗಿ ತಮ್ಮ-ತಮ್ಮ ಮನೆಗಳಿಗೆ ಪುನಃ ಮೆರವಣಿಗೆಯಲ್ಲಿ ಬಂದು ಮನೆಯ ದೇವರ ಕೋಣೆಯಲ್ಲಿ ಬಿ೦ದಿಗೆಗಳನ್ನು ಇಡುತ್ತಾರೆ. ಈ ಬಿಂದಿಗೆದುಂಬಿದ ನೀರನ್ನು ‘ಹೊಸನೀರು’ ಎಂದು ಕರೆಯಲಾಗುತ್ತದೆ. ಆ ಬಿ೦ದಿಗೆಗೆ ಪೂಜೆಸಲ್ಲಿಸಿ ಬಿಂದಿಗೆಯ ‘ಹೊಸನೀರ’ನ್ನು ಮನೆಯಲ್ಲಿ ತು೦ಬಿಟ್ಟು ಕೊ೦ಡಿರುವ ದಿನ ಬಳಕೆಯ ಹ೦ಡೆಗಳು, ತೊಟ್ಟಿಗಳು, ಬಿ೦ದಿಗೆಗಳು ಮತ್ತು ಬಕೇಟುಗಳ ನೀರಿಗೆ ತೊಟ್ಟು ಬೆರೆಸಿ ದಿನನಿತ್ಯದ ಅಡುಗೆ, ಸ್ನಾನ, ಪೂಜೆ ಪುನಸ್ಕಾರಾದಿ ಶುಭ ಕಾರ್ಯಗಳಿಗೆ ಬಳಸುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ.
ಮಾಳವರು ಉಗಾದಿಯ ಸಾ೦ಯಕಾಲ ಮುಳುಗುವ ಸೂರ್ಯನಿಗೆ ಹಾಗೂ ಉದಯಿಸುವ ಚ೦ದ್ರನಿಗೆ ನಮಿಸುತ್ತಾರೆ. ಸುಮೇರಿಯನ್ ಭಾಷೆಯಲ್ಲಿ ‘ಉಗು’ ಎಂದರೆ ನೀರಾವರಿ ಭೂಮಿ. ಕರ್ನಾಟಕದ ಮಂಡ್ಯ ಜಿಲ್ಲೆ ಮಳವಳ್ಳಿ ಪ್ರದೇಶದ ಮಾಳವ ಜನಾಂಗದ ಭಾಷೆಯಲ್ಲಿಯೂ ಉಗು ಎಂದರೆ ಜಲ ಸಂಪನ್ನ ಭೂಮಿ. ‘ಉ’ ಎ೦ದರೆ ನೀರು. ಉಗಳು ಎ೦ದರೆ ಮಾನವನ ಬಾಯಿಯ ನೀರು. ಇಲ್ಲಿ ಗ ಅಥವಾ ಕ ಎ೦ದರೆ ಬಾಯಿ. ಳು ಎ೦ದರೆ ಮಾನವ ಅಥವಾ ವ್ಯಕ್ತಿ. ‘ಉಕು’ ಎಂಬ ಶಬ್ದದ ಅರ್ಥವೂ ನೀರಾವರಿ ಭೂಮಿ. ಉಕುರಗುಡ್ಡೆ ಹೊಲ ಎಂದರೆ ಬೆಟ್ಟದಂಚಿನಿಂದ ಸಮೃದ್ಧ ನೀರು ಪಡೆಯುವ ನೀರಾವರಿ ಜಮೀನು ಎಂದಾಗುತ್ತದೆ. ‘ಉಗುನಿ ಹಂಬು’ ನೀರಿನ ಮೇಲ್ಭಾಗದವರೆಗೆ ಬೆಳೆಯುವ ಹಚ್ಚಹಸುರು ಗಿಡಗಂಟಿಗಳೆಂದು ಸಹ ಅರ್ಥೈಸುವ ಹಾಗೆ ಇನ್ನಿತರ ಸಂಪ್ರದಾಯಗಳು ‘ಉಗು’ವಿನೊಂದಿಗೆ ಹೆಣೆದುಕೊಂಡಿವೆ.
ನೀರು, ಸೂರ್ಯ ಹಾಗೂ ಚಂದ್ರನನ್ನು ಪೂಜಿಸುವ ಹಬ್ಬವೇ ‘ಉಗಾದಿ’. ಮಾಳವರಲ್ಲಿ ‘ಆದಿ’ ಎಂದರೆ ಸೂರ್ಯನ ಹೆಸರು. ಉಗು ಮತ್ತು ಆದಿ ಸೇರಿದಾಗ ನೀರು ಮತ್ತು ಸೂರ್ಯ ಎಂದಾಗುತ್ತದೆ. ನಾಗಾ ಜನಾಂಗದ ನಾಗಧರ್ಮದ ಕಾಲದ ದಿನಗಳಲ್ಲೇ ಸಂಪ್ರದಾಯ ಹುಟ್ಟಿ ಬೆಳೆದಿರಬಹುದು. ಉಗ್,ಉಗಿ, ಉಗ್ಗು, ಉಪ್ಪು, ಉಮಾ, ಉಕ್ಕು, ಉ೦ಣು, ಉಕ್ಕಡ, ಉಕ್ಕಡಗಾತ್ರಿ ಮತ್ತು ಇತ್ಯಾದಿ ಪದಗಳು ‘ಉ’ ಅ೦ದರೆ ನೀರಿಗೆ ಅ೦ಟಿಕೊ೦ಡ ಪದಗಳಾಗಿವೆ. ಪ್ರಸ್ತುತ ಉಗಾದಿ ತನ್ನ ಮೂಲಾರ್ಥ ಕಳೆದುಕೊಂಡು ‘ಹೊಸವರ್ಷ ಪ್ರಾರಂಭ’ ಎಂದಷ್ಟೇ ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕ್ರತಿಯೂ ಹಳೆಯ ನಾಗಾ ಸಂಪ್ರದಾಯವನ್ನು ಮರೆಮಾಚಿ( ನುಂಗಿಕೊಂಡು) ಸಾಧ್ಯವಾದಷ್ಟು ಇಂದಿನ ಸಂಪ್ರದಾಯಗಳಿಗೆ ಒಗ್ಗಿಕೊಂಡಿದೆ. ಇದು ‘ಉಗಾದಿ’ ಹೊರತು ‘ಯುಗಾದಿ’ ಅಲ್ಲ. ಉಗಾದಿ ಎ೦ಬ ಪದ ಮೂಲ ದ್ರಾವಿಡ ಪದವೇ ಹೊರತು ಸ೦ಸ್ಕೃತದಿ೦ದ ಉದಯಿಸಿಲ್ಲ.

ದಿನದ ಸುದ್ದಿ
ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಆತ್ಮಹತ್ಯೆ ; ಕಾರಣ ಏನು ಗೊತ್ತಾ..!?

ಸುದ್ದಿದಿನ,ಬೆಂಗಳೂರು : ಸೀಸನ್ ಮೂರರ ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯಶ್ರೀ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇತ್ತೀಚಿಗೆ ಕೆಲದಿನಗಳಿಂದ ಅತೀವ ಖಿನ್ನತೆಯಿಂದ ಬಳಲುತ್ತಿದ್ದರು.
ಮಾದನಾಯಕನಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಗತಿ ಬಡಾವಣೆಯ ಅಪಾರ್ಟ್ಮೆಂಟ್ ನಲ್ಲಿ ಜಯಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಅಂದಹಾಗೇ ಈ ಹಿಂದೆಯೂ ನಟಿ ಜಯಶ್ರೀ ಆತ್ಮಹತ್ಯೆಗೆ ಯತ್ನಿಸಿದ್ದರು. ಆನಂತ್ರ ಅವರು ಸಾವಿನಿಂದ ಬಚಾವ್ ಆಗಿದ್ದರು. ಆದ್ರೇ ಇದೀಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನನ್ನ ಜೀವನದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಅದರಿಂದ ಹೊರಬರಲು ಆಗುತ್ತಿಲ್ಲ ನನಗೆ ದಯಾಮರಣ ಕೊಡಿ ಎಂದು ತಮ್ಮ ಫೇಸ್ ಬುಕ್ ನಲ್ಲಿ ಲೈವ್ ಬಂದು ಕೆಲವು ದಿನಗಳ ಹಿಂದೆ ಕೇಳಿಕೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಎಂ.ಜಿ.ಶಶಿಕಲಾ ಮೂರ್ತಿ ನಲ್ಕುದುರೆ ಅವರಿಗೆ ‘ಜನಸೇವಾರತ್ನ’ ರಾಜ್ಯ ಪ್ರಶಸ್ತಿ

ಸುದ್ದಿದಿನ,ದಾವಣಗೆರೆ : ಭಾರತರತ್ನ ಡಾ| ಬಾಬಾಸಾಹೇಬ ಅಂಬೇಡ್ಕರ ಹಾಗೂ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಪ್ರತಿ ವರ್ಷದಂತೆ ಕೊಡಮಾಡುವ ಮಾನವ ಧರ್ಮ 4ನೇ ಕನ್ನಡ ಮಾಧ್ಯಮ ಸಮಾವೇಶ ಹಾಗೂ ಜನಸೇವಾರತ್ನ ರಾಜ್ಯ ಪ್ರಶಸ್ತಿಪ್ರಧಾನ ಸಮಾರಂಭದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪತ್ರವನ್ನು ಎಂ.ಜಿ.ಶಶಿಕಲಾ ಮೂರ್ತಿ ನಲ್ಕುದುರೆ ಅವರಿಗೆ ನೀಡಿ ಗಣ್ಯಮಾನ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.
ಮಾನವ ಇತಿಹಾಸದಲ್ಲಿ ಮನುಕುಲವನ್ನೆ ತತ್ತರಿಸುವಂತೆ ಮಾಡಿದ ಕೋವಿಡ್-19ಹೋರಾಟದಲ್ಲಿ ಜನಕಲ್ಯಾಣಕ್ಕಾಗಿ ಸಂಜೀವಿನಿ ಲಸಿಕೆ ತಯಾರಿಸಿದ ಭಾರತೀಯರು ತಮ್ಮ ತನು-ಮನ ಧನವನ್ನು ಸಮರ್ಪಿಸಿ ಜನಸೇವೆ ರಕ್ಷಣೆಗೆ ಕಂಕಣ ಬದ್ಧರಾಗಿ ನಿಂತು ಹೋರಾಟ ಮಾಡಿದ್ದರ ಫಲವಾಗಿ ಟ್ರಸ್ಟ್ ಹಾಗೂ ಪತ್ರಿಕಾಬಳಗದ ವತಿಯಿಂದ ನಾಡು-ನುಡಿ ನೆಲ-ಜಲ ಭಾಷೆಗಾಗಿ ಅಕ್ಷರ ಸೇವೆಗಾಗಿ ಮತ್ತು ಮಾನವ ಧರ್ಮ ಪರಿಪಾಲನೆಗಾಗಿ ಹಾಗೂ ಸಮಾಜಸೇವೆಗಾಗಿ ಶ್ರಮಿಸಿದ ಸಾಧಕರಾದ ಶ್ರೀಮತಿ ಎಂ.ಜಿ.ಶಶಿಕಲಾ ಮೂರ್ತಿ ನಲ್ಕುದುರೆ ಅವರ ಅನುಪಮ ಸೇವೆಯನ್ನು ಸ್ಮರಿಸಿ ಇವರಿಗೆ ಅತ್ಯಂತ ಗೌರವಪೂರ್ವಕಾಗಿ ಸನ್ಮಾನಿಸಿ ಈ ರಾಜ್ಯ ಪ್ರಶಸ್ತಿಯನ್ನು
ಪ್ರಧಾನ ಮಾಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ಪ್ರವಾಸಿ ಟ್ಯಾಕ್ಸಿಗೆ ಸಹಾಯಧನ : ಅಂತಿಮ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳ ಆಹ್ವಾನ

ಸುದ್ದಿದಿನ,ದಾವಣಗೆರೆ : ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ಪ್ರವಾಸಿ ಟ್ಯಾಕ್ಸಿಗೆ ಸಹಾಯಧನ ಒದಗಿಸಲು ಫಲಾನುಭವಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಆಯ್ಕೆ ಪಟ್ಟಿ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
2012-13 ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಬಾಕಿ ಇರುವ ಪರಿಶಿಷ್ಟ ಜಾತಿ 9, ಪರಿಶಿಷ್ಟ ಪಂಗಡ 4 ಮತ್ತು 2013-14 ರಿಂದ 2016-17 ನೇ ಸಾಲಿನವರೆಗೆ ಬಾಕಿ ಇರುವ ಹಿಂದುಳಿದ ವರ್ಗದ 10 ಹಾಗೂ ಅಲ್ಪಸಂಖ್ಯಾತರ ವರ್ಗದ 03 ಸೇರಿದಂತೆ ಒಟ್ಟು 26 ಅರ್ಹ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ತಲಾ ರೂ.2 ಲಕ್ಷಗಳಲ್ಲಿ ಪ್ರವಾಸಿ ಟ್ಯಾಕ್ಸಿಗೆ ಸಹಾಯಧನ ಒದಗಿಸಲು ಅರ್ಹ ಫಲಾನುಭವಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಥವಾ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಆಕ್ಷೇಪಣೆಗಳೇನಾದರೂ ಇದಲ್ಲಿ ಸೂಕ್ತ ದಾಖಲೆಗೊಂದಿಗೆ ಫೆ.5 ರೊಳಗೆ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ, ದಾವಣಗೆರೆ ಅಥವಾ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಉಪವಿಭಾಗಾಧಿಕಾರಿಗಳ ಕಚೇರಿ ಆವರಣ, ರೈಲ್ವೆ ನಿಲ್ದಾಣದ ಪಕ್ಕ, ಪಿ.ಬಿ.ರಸ್ತೆ ದಾವಣಗೆರೆ ಇಲ್ಲಿಗೆ ಆಕ್ಷೇಪಣೆ ಸಲ್ಲಿಸಬಹುದೆಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ದಾವಣಗೆರೆ | 120 ಕೋಟಿ ವೆಚ್ಚದಲ್ಲಿ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣ : ಸಂಸದ ಜಿ.ಎಂ.ಸಿದ್ದೇಶ್ವರ
-
ದಿನದ ಸುದ್ದಿ6 days ago
ಕೆಎಸ್ಆರ್ಟಿಸಿ ನೌಕರರು ಆತಂಕಕ್ಕೆ ಒಳಗಾಗುವುದು ಬೇಡ : ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ
-
ದಿನದ ಸುದ್ದಿ5 days ago
ಲಜ್ಜೆಗೆಟ್ಟ ರಾಜಕಾರಣಕ್ಕೆ ಕರ್ನಾಟಕವೇ ತವರು..!
-
ದಿನದ ಸುದ್ದಿ7 days ago
ಚನ್ನಗಿರಿ | ಕುಟುಂಬಸ್ಥರ ಜಮೀನು ವ್ಯಾಜ್ಯ ; ‘ನ್ಯಾಯ ಕೊಡಿ ಇಲ್ಲಾ ವಿಷ ಕೊಡಿ’ : ತೇಜಸ್ವಿ ಪಟೀಲ್ ನೇತೃತ್ವದಲ್ಲಿ ಪ್ರತಿಭಟನೆ
-
ದಿನದ ಸುದ್ದಿ6 days ago
ಜಿಎಸ್ ಟಿ ಪರಿಹಾರದಲ್ಲಿ ರಾಜ್ಯಕ್ಕೆ ಅಂದಾಜು 27 ಸಾವಿರ ಕೋಟಿ ಖೋತಾ ಆಗಬಹುದು : ಸಿದ್ದರಾಮಯ್ಯ
-
ದಿನದ ಸುದ್ದಿ7 days ago
ದಾವಣಗೆರೆ | ಕೆಎಸ್ಆರ್ಟಿಸಿ ತಾತ್ಕಾಲಿಕ ಬಸ್ ನಿಲ್ದಾಣ ಉದ್ಘಾಟನೆ
-
ದಿನದ ಸುದ್ದಿ5 days ago
ರಾಷ್ಟ್ರೀಯ ತನಿಖಾ ದಳದಿಂದ ಸಮನ್ಸ್ ಪಡೆದಿದ್ದ ಖಾಲ್ಸಾ ಏಡ್ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ..!
-
ಕ್ರೀಡೆ6 days ago
ಪ.ಜಾತಿ/ಪ.ಪಂಗಡಕ್ಕೆ ಸಹಾಯಧನ ಮತ್ತು ಕ್ರೀಡಾಗಂಟಿಗೆ ಅರ್ಜಿ ಆಹ್ವಾನ