Connect with us

ಸಿನಿ ಸುದ್ದಿ

ಶೃತಿ ಹರಿಹರನ್ ದೂರಿನಲ್ಲಿ ಏನಿದೆ ಗೊತ್ತಾ?

Published

on

ಸುದ್ದಿದಿನ ದಾವಣಗೆರೆ: ಪ್ರಶಾಂತ್ ನಿಂಬರಗಿ, ಈ ನಟಿಗೆ ಮಾಡಿದ್ದಾದರೂ ಏನು? ಶೃತಿ ಹರಿಹರನ್ ಹಿಂದೂ ಧರ್ಮದ ವಿರೋಧಿ ಎಂದಿದ್ದ ಪ್ರಶಾಂತ್ ನಿಂಬರಗಿ ಅವರ ಆರೋಪಕ್ಕೆ ಇದು ಧರ್ಮವನ್ನು ಎತ್ತಿಕಟ್ಟುವ ಕೃತ್ಯ ಎಂದು ನಟಿ ಶೃತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಾಗೇ ಶೃತಿಯ ಫೇಸ್ ಬುಕ್ ಖಾತೆ ಮೂರು ಕಡೆಗಳಲ್ಲಿ ನಿರ್ವಹಿಸಲ್ಪಡುತ್ತಿದ್ದು, ಐಪಿ ವಿಳಾಸವೂ ತಿಳಿದಿದೆ ಎಂದ ಸಂಬರಗಿ ಅವರ ಹೇಳಿದ್ದ ಹಿನ್ನೆಲೆ ಫೇಸ್ ಬುಕ್ ಮಾಹಿತಿ ಹ್ಯಾಕ್ ಮಾಡುವ ಮೂಲಕ ತನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ದೂರಿದ್ದಾರೆ.

ವಿದೇಶಿ ಹಣವನ್ನು ಮಾಧ್ಯಮಗಳಿಗೆ ನೀಡಿ ಮಹಿಳಾ ಪರ ಸುದ್ದಿ ಮಾಡಿಸುತ್ತಿದ್ದಾಳೆ ಎಂದಿದ್ದ ಸಂಬರಗಿ ಅವರಿಗೆ ವಿದೇಶಿ ಹಣ ನನ್ನ ಖಾತೆಯಲ್ಲಿ ಇಲ್ಲವಾಗಿದ್ದು ಸುಳ್ಳು ಆರೋಪದ ಮೂಲಕ ನನ್ನ ಮತ್ತು ಮಾಧ್ಯಮಗಳ ತೇಜೋವಧೆ ಎಂದು ಶೃತಿ ದೂರಿದ್ದಾರೆ.

ನಾನು ಶೃತಿ ಹರಿಹರನ್ ಳನ್ನು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದ ಪ್ರಶಾಂತ್ ಸಂಬರಗಿ ಅವರ ‘ನಾನು ಬಿಡುವುದಿಲ್ಲ ಎನ್ನುವುದು: ಕೊಲೆ ಬೆದರಿಕೆಯಾಗಿದೆ ಎಂದು ನಟಿ ಶೃತಿ ಹರಿಹರನ್ ದೂರು ನೀಡಿದ್ದಾರೆ.

ದಿನದ ಸುದ್ದಿ

ಕೊಲೆಕೇಸ್ | ನಟ ಚಿಕ್ಕಣ್ಣ ಆಯ್ತು ; ಈಗ ಮತ್ತೊಬ್ಬ ನಟ..!

Published

on

ಸುದ್ದಿದಿನಡೆಸ್ಕ್:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಪ್ರಮುಖ ಆರೋಪಿ ಆಗಿದ್ದಾರೆ. ಈ ಕೇಸ್‌ನ ಆರೋಪಿಗಳು ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.

ರೇಣುಕಾಸ್ವಾಮಿ ಕೊಲೆ ಮಾಡುವುದಕ್ಕೂ ಮುನ್ನ ಆರ್‌ಆರ್‌ ನಗರದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಇವರು ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ದರ್ಶನ್‌ ಜೊತೆ ಚಿಕ್ಕಣ್ಣ ಕೂಡ ಇದ್ದರು. ಹಾಗೆಯೇ ಚಿಕ್ಕಣ್ಣ ಜೊತೆಗೆ ಮತ್ತೋರ್ವ ಸ್ಯಾಂಡಲ್‌ವುಡ್‌ ನಟ ಇದ್ದರು ಎನ್ನಲಾಗಿದೆ. ದರ್ಶನ್‌ ಆಪ್ತ ಕೂಡ ಇದ್ದರು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಾಗರ | ಇಂದು ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಪುಸ್ತಕಗಳ ಬಿಡುಗಡೆ

Published

on

ಸುದ್ದಿದಿನ,ಸಾಗರ : ಅ.ರಾ.ಶ್ರೀನಿವಾಸರು ಬರೆದ ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಈ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಇಂದು ಸಂಜೆ ಪಟ್ಟಣದ ಸಿಜಿಕೆ ಸಭಾಭವನದಲ್ಲಿ ಅಂತರಂಗ ಪ್ರಕಾಶನ ಹಮ್ಮಿಕೊಂಡಿದೆ.

ಪುಸ್ತಕಗಳ ಬಿಡುಗಡೆಯನ್ನು ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಎಂ.ವಿ ಮಾಡಲಿದ್ದು, ಅಧ್ಯಕ್ಷತೆಯನ್ನುನಿವೃತ್ತ ಪ್ರಾಂಶುಪಾಲರಾದ ಅ.ರಾ.ಲಂಬೋದರ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ‘ಆರು ಲಘು ನಾಟಕಗಳು’ ಕುರಿತು ನಿವೃತ್ತ ಪ್ರಾಂಶುಪಾಲರು ಡಾ. ಜಯಪ್ರಕಾಶ್ ಮಾವಿನಕುಳಿ ಹಾಗೂ ‘ಗುಚ್ಛ’ ಕುರಿತು ಸಹಕಾರ ಸಂಘಗಳ ನಿವೃತ್ತ ಉಪ ನಿಬಂಧಕರು ಜಯಪ್ರಕಾಶ್ ತಲವಾಟ ಅವರು ಮಾತನಾಡಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ

Published

on

ಸುದ್ದಿದಿನಡೆಸ್ಕ್: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್(93) ಅವರು ಅನಾರೋಗ್ಯದಿಂದ ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ತಿಂಗಳಲ್ಲಿ ಕುಸಿದು ಬಿದ್ದಿರುವುದರಿಂದ ಅವರ ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಬೆಳಿಗ್ಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶ್ರೇಷ್ಠ ಭಾರತೀಯ ಶಾಸ್ತ್ರೀಯ ಸಂಗೀತಗಾರ ಆಗಿರುವ ಅವರು ಸರೋದ್ ವಾದಕರೂ ಆಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending