ಬಹಿರಂಗ
ವರ್ಣವ್ಯವಸ್ಥೆ ಜಾತಿವ್ಯವಸ್ಥೆಯಾದ ಬಗೆ
ಜಾತಿ ಭಾರತದ ಸಾಮಾಜಿಕ ವ್ಯವಸ್ಥೆಯ ಪೀಡೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರಜ್ಞಾವಂತರಿಗೆ ಅದರ ನಿರ್ಮೂಲನೆಯಾಗಬೇಕೆಂಬ ಕಳಕಳಿಯೂ ಇದೆ. ಅಂತಹ ಕಳಕಳಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ಕಳಕಳಿ ಸದಾ ಒಂದು ಕೈಮೇಲು. ಯಾಕೆಂದರೆ ಅಂಬೇಡ್ಕರರು ಜಾತಿಯ ಮೂಲವನ್ನು ಪತ್ತೆ ಹಚ್ಚುವ ಯತ್ನ ನಡೆಸಿದ್ದಾರೆ. ಮೂಲ ಪತ್ತೆಯಾದರೆ ಚಿಕಿತ್ಸೆ ಸುಲಭ ಎಂಬುದಷ್ಟೆ ಇಲ್ಲಿ ಬಾಬಾಸಾಹೇಬರ ನಿಲುವು. ಅಂಬೇಡ್ಕರರ ಈ ಪತ್ತೆಹಚ್ಚುವ ಕ್ರಿಯೆಯಲ್ಲಿ ಪತ್ತೆಯಾದ ಸತ್ಯವೆಂದರೆ ಜಾತಿವ್ಯವಸ್ಥೆಯ ಮೂಲ ವರ್ಣವ್ಯವಸ್ಥೆ ಎಂಬುದು.
ಜಾತಿ ಮತ್ತು ಹಿಂದೂ ಧರ್ಮಕ್ಕೆ ಯಾವ ಸಂಬಂಧವಿದೆ? ಅಂಬೇಡ್ಕರರ ಉತ್ತರವನ್ನಿಲ್ಲಿ ದಾಖಲಿಸುವುದಾದರೆ… “ತಮ್ಮ ನಡುವೆ ಯಾವುದೇ ಅಭಿಪ್ರಾಯ ಭೇದವಿದ್ದರೂ ಹಿಂದೂಗಳು ವಿಧೇಯರಾಗಿದ್ದರೆ ಎಂಬ ಭಾವ ಉಕ್ಕಿಸುವಂತಹ ಯಾವುದಾದರೂ ತತ್ವ ಹಿಂದೂ ಧರ್ಮದಲ್ಲಿದೆಯಾ? ಖಂಡಿತ ಇಲ್ಲ. ನನ್ನ ದೃಷ್ಟಿಯಲ್ಲಿ ಅಂತಹ ತತ್ವ ಯಾವುದಾದರೂ ಇದೆ ಎನ್ನುವುದಾದರೆ ಅದು ಜಾತಿ ತತ್ವ ಮಾತ್ರ. ಹಿಂದುತ್ವಕ್ಕೆ ಸಂಬಂಧಿಸಿದಂತೆ ಅದರ ಮೂಲ ತಿರುಳು ಏನನ್ನು ಒಳಗೊಂಡಿದೆ ಎಂಬುದರ ಬಗ್ಗೆ ಅಭಿಪ್ರಾಯ ಭೇದವಿರಬಹುದು.
ಆದರೆ ಹಿಂದುತ್ವದ ಅವಿಭಾಜ್ಯ ಮತ್ತು ಅತ್ಯಗತ್ಯ ಭಾಗ ಜಾತಿ ಎಂಬುದರ ಬಗ್ಗೆ ಯಾವುದೇ ಅನುಮಾನವಿಲ್ಲ. ಪ್ರತಿಯೊಬ್ಬ ಹಿಂದೂ ಆತ ಶಾಸನಬದ್ಧ ಹಿಂದೂವಲ್ಲದಿದ್ದರೂ ಕೂಡ ಜಾತಿಯನ್ನು ನಂಬುತ್ತಾನೆ. ಹಾಗೆಯೇ ಪ್ರತಿಯೊಬ್ಬ ಹಿಂದೂ ಹೌದು, ನಾನು ಶಾಸನಬದ್ಧ ಹಿಂದೂ ಎಂದು ಆತ ಹೆಮ್ಮೆಪಟ್ಟುಕೊಂಡರೂ ಕೂಡ ಆತ ಕೂಡ ಒಂದು ಜಾತಿಯನ್ನು ಹೊಂದಿರುತ್ತಾನೆ.
ಒಬ್ಬ ಹಿಂದೂ ಹಿಂದೂಧರ್ಮದಲ್ಲಿ ಹೇಗೆ ಹುಟ್ಟಿರುತ್ತಾನೆಯೋ ಅದಕ್ಕಿಂತ ಹೆಚ್ಚಿಗೆ ಆತ ಒಂದು ಜಾತಿಯಲ್ಲಿ ಹುಟ್ಟಿರುತ್ತಾನೆ. ನಿಜಕ್ಕೂ ಹೇಳಬೇಕೆಂದರೆ, ಒಬ್ಬ ವ್ಯಕ್ತಿ ಆತ ಒಂದು ಜಾತಿಯಲ್ಲಿ ಹುಟ್ಟಿಲ್ಲವೆಂದರೆ ಆತ ಹಿಂದೂ ಧರ್ಮದಲ್ಲಿ ಹುಟ್ಟಲು ಸಾಧ್ಯವೇ ಇಲ್ಲ. ಈ ಕಾರಣದಿಂದಾಗಿ ಹಿಂದೂ ಧರ್ಮ ಮತ್ತು ಜಾತಿ ಪರಸ್ಪರ ಪ್ರತ್ಯೇಕಿಸಲಾಗದಂತಹವುಗಳಾಗಿವೆ”
ಈ ನಿಟ್ಟಿನಲ್ಲಿ ಸ್ಪಷ್ಟ, ಜಾತಿ ಪದ್ಧತಿ ಮತ್ತು ಹಿಂದುತ್ವದ ಸಂಬಂಧ ಅವಿನಾಭಾವ ಎಂಬುದು. ಹಾಗೆ ಸ್ಪಷ್ಟಪಡಿಸಿಕೊಳ್ಳುತ್ತಾ ಅಂಬೇಡ್ಕರರು ಅದರ ಮೂಲ ಹುಡುಕಹೊರಡುತ್ತಾರೆ. “ಅಸ್ಪøಶ್ಯತೆಯ ಮೂಲ ಜಾತಿ ವ್ಯವಸ್ಥೆಯಲ್ಲಿದೆ. ಜಾತಿವ್ಯವಸ್ಥೆಯ ಮೂಲ ವರ್ಣವ್ಯವಸ್ಥೆಯಲ್ಲಿದೆ. ವರ್ಣವ್ಯವಸ್ಥೆಯ ಮೂಲ ಬ್ರಾಹ್ಮಣರ ಶಾಸ್ತ್ರಪುರಾಣಗಳಲ್ಲಿದೆ (ಶೃತಿ-ಸ್ಮøತಿಗಳಲ್ಲಿದೆ)” ಎಂಬುದನ್ನು ಕಂಡುಕೊಳ್ಳುತ್ತಾರೆ.
ಒಟ್ಟಾರೆ ಅಂಬೇಡ್ಕರರಷ್ಟು ಕರಾರುವಕ್ಕಾಗಿ ಭಾರತದ ಜನಸಾಮಾನ್ಯನಿಗೆ ಜಾತಿವ್ಯವಸ್ಥೆಯ ಮೂಲವನ್ನು ಬಿಡಿಸಿಟ್ಟವರು ಮತ್ತೊಬ್ಬರಿರಲಿಕ್ಕಿಲ್ಲ. “ಜಾತಿ ವಿನಾಶ” ಎಂಬ ಕೃತಿಯನ್ನೇ ಅವರು ಬರೆದಿದ್ದಾರೆಂದರೆ.. ತಮ್ಮ ಈ ಜಾತಿವಿನಾಶದ ಹಾದಿಯಲ್ಲಿ ಅಂಬೇಡ್ಕರರು ಜಾತಿ ಅದಕ್ಕೆ ಮೂ¯ ವರ್ಣಾಶ್ರಮ ಧರ್ಮ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಇಡೀ ದೇಶ ಹೇಗೆ ಮಗ್ಗಿ ಒಪ್ಪಿಸುತ್ತದೆಯೋ ಅಂತಹ ವರ್ಣವ್ಯವಸ್ಥೆ ಎಂದು ದಾಖಲಿಸುತ್ತಾರೆ.
ಈ ವಾದವನ್ನು ಅಂದರೆ ಜಾತಿಗೆ ಮೂಲ ವರ್ಣವ್ಯವಸ್ಥೆ ಎಂಬುದನ್ನು ಒಂದಿಷ್ಟು ಮಂದಿ ಒಪ್ಪುವುದಿಲ್ಲ. ಹೇಗೆ ಎಂಬ ಪ್ರಶ್ನೆ ಇಡುತ್ತಾರೆ. ಅಂಬೇಡ್ಕರ್ ಹೇಳುತ್ತಾರೆ, “ಬ್ರಾಹ್ಮಣವಾದ ವರ್ಣವನ್ನು ಜಾತಿಯಾಗಿ ಪರಿವರ್ತಿಸಿತು. ಅದರರ್ಥ ಸಾಮಾಜಿಕ ಅಂತಸ್ತು ಮತ್ತು ಉದ್ಯೋಗವನ್ನು ಬ್ರಾಹ್ಮಣವಾದ ವಂಶಪಾರಂಪರ್ಯಗೊಳಿಸಿತು”.
ಹೌದು, ವಂಶಪಾರಂಪರ್ಯ… ಪ್ರಪಂಚದ ಎಲ್ಲಿಯೂ ಕಸಗುಡಿಸುವವನ ಮಗನೊಬ್ಬ ಕಸಗುಡಿಸಬೇಕು, ಕ್ಷೌರಿಕನ ಮಗನೊಬ್ಬ ಕ್ಷೌರವೃತ್ತಿಯನ್ನೇ ಮಾಡಬೇಕು, ಬಟ್ಟೆ ಒಗೆಯುವವನ ಮಗನೊಬ್ಬ ಬಟ್ಟೆ ಒಗೆಯಬೇಕು, ಕುರಿ ಕಾಯುವವನ ಮಗನೊಬ್ಬ ಕುರಿಕಾಯಬೇಕು… ಹೀಗೆ ಉದ್ಯೋಗ ಮಾಡುವವರನ್ನು ಅದೇ ಉದ್ಯೋಗದ ಹೆಸರಿನ ಒಂದು ಗುಂಪಿಗೆ ಅರ್ಥಾತ್ ವಂಶಪಾರಂಪರ್ಯಕ್ಕೆ, ಜಾತಿಗೆ ಕಟ್ಟಿಹಾಕಿದ್ದು, ಅಲ್ಲಿಯೇ ಕೊಳೆಯುವಂತೆ ಮಾಡಿದ್ದು ಅದು ಭಾರತದಲ್ಲಷ್ಟೆ.
ಅಂಬೇಡ್ಕರ್ ಹೇಳುತ್ತಾರೆ ‘ಅದನ್ನು ಧರ್ಮದ ನೀತಿ ನಿಯಮಗಳನ್ನು ಹೇರಿ ಕಾನೂನು ಕ್ರಮದಲ್ಲಿ ವರ್ಣವನ್ನು ಜಾತಿಯಾಗಿ ಪರಿವರ್ತಿಸುವ ಮೂಲಕ ತರಲಾಯಿತು’. ಹಾಗಿದ್ದರೆ ವರ್ಣದಿಂದ ಜಾತಿಯಾಗಿ ಈ ಪರಿವರ್ತನೆ ಅದು ಹೇಗಾಯಿತು? ಅಂಬೇಡ್ಕರ್ ಹೇಳುತ್ತಾರೆ “ಆ ಪರಿವರ್ತನೆಯನ್ನು ನಿಧಾನವಾಗಿ ಹಂತಗಳ ಮೂಲಕ ಸಾಧಿಸಲಾಗಿದೆ. ಹಾಗೆ ವರ್ಣವನ್ನು ಜಾತಿಯಾಗಿ ಪರಿವರ್ತಿಸುವಾಗ ಮೂರು ಹಂತಗಳು ಸುಸ್ಪಷ್ಟವಾಗಿ ಗೋಚರಿಸುತ್ತವೆ.
ಅವುಗಳಲ್ಲಿ ಮೊದಲ ಹಂತ, ವರ್ಣಪದ್ಧತಿಯ ಅವಧಿಯನ್ನು ಅಂದರೆ ವ್ಯಕ್ತಿಯ ಉದ್ಯೋಗ ಮತ್ತು ಅಂತಸ್ತನ್ನು ನಿರ್ದಿಷ್ಟ ಕಾಲಮಿತಿಯವರೆಗಷ್ಟೆ ಮಿತಿಗೊಳಿಸಿದ ಹಂತ. ಎರಡನೆಯ ಹಂತ, ವರ್ಣಪದ್ಧತಿಯ ಪ್ರಕಾರದ ಸದರಿ ವ್ಯಕ್ತಿಯ ಅಂತಸ್ತು ಮತ್ತು ಉದ್ಯೋಗವನ್ನು ಆತನ ಜೀವಿತ ಅವಧಿಗಷ್ಟೆ ಸೀಮಿತಗೊಳಿಸಿದ ಹಂತ. ಕಡೆಯದಾಗಿ ಮೂರನೆಯ ಹಂತದಲ್ಲಷ್ಟೆ, ವ್ಯಕ್ತಿಯ ಉದ್ಯೋಗ ಮತ್ತು ಅಂತಸ್ತನ್ನು ಆತನ ಜೀವಿತ ಅವಧಿಯನ್ನು ಮೀರಿ ಅವನ ಮಗಳಿಗೆ ಅಥವಾ ಮಗನಿಗೆ ಅದನ್ನು ಆರೋಪಿಸಲಾಯಿತು, ಆರ್ಥಾತ್ ವಂಶಪಾರಂಪರ್ಯಗೊಳಿಸಲಾದ ಹಂತ”.
ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಹೇಳುತ್ತಾರೆ “ಧರ್ಮದ ಮೂಲಕ ಮನುಷ್ಯ ಮನುಷ್ಯ ಸಂಬಂಧವನ್ನು ಸಾಮಾಜಿಕ ಶ್ರೇಣೀಕರಣಗೊಳಿಸಿ(ವರ್ಣ), ಪವಿತ್ರೀಕರಣಗೊಳೀಸಿ ಅದು ಚಿರಾಯು(ಶಾಶ್ವತ)ವಾಗಿರುವಂತೆ ಮತ್ತು ಅತಿಕ್ರಮಿಸಲಾಗದಂತೆ ಮೀಸಲಿಟ್ಟುಕೊಂಡ ಪ್ರಪಂಚದ ಏಕೈಕ ಜನಾಂಗವೆಂದರೆ ಅದು ಹಿಂದೂಗಳಷ್ಟೆ” (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.5, ಪು.190).
ವಿವರಿಸುವುದಾದರೆ, ಅಂಬೇಡ್ಕರರ ಪ್ರಕಾರ ಮೊದಲ ಹಂತದಲ್ಲಿ ಅಂತಸ್ತು ಮತ್ತು ಉದ್ಯೋಗದ ಆಧಾರದ ಮೇಲೆ ವ್ಯಕ್ತಿಯ ವರ್ಣವನ್ನು 4 ವರ್ಷಗಳ ಸೀಮಿತ ಅವಧಿಗೆ ನಿಯುಕ್ತಿಗೊಳಿಸಲಾಗುತ್ತಿತ್ತು. ಹಾಗೆ ವ್ಯಕ್ತಿಯ ವರ್ಣವನ್ನು ನಿಯುಕ್ತಿಗೊಳಿಸುತ್ತಿದ್ದ ಅಧಿಕಾರಿಗಳು ಮನು ಮತ್ತು ಸಪ್ತಋಷಿಗಳು ಎಂಬ ಅಧಿಕಾರಿಗಳಾಗಿದ್ದರು.
ವ್ಯಕ್ತಿಗಳಿಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಈ ಮೂರು ವರ್ಣಗಳನ್ನು ಸಂಬಂಧಪಟ್ಟ ವ್ಯಕ್ತಿಗಳ ಮಾನಸಿಕ, ದೈಹಿಕ ಅರ್ಹತೆ ಮತ್ತು ಉದ್ಯೋಗದ ಆಧಾರದ ಮೇಲೆ, ಸಮುದಾಯದ ಹಿತದೃಷ್ಟಿಯಿಂದಷ್ಟೆ ನೀಡಲಾಗುತ್ತಿತ್ತು. ಈ ಮೂರೂ ವರ್ಣಗಳನ್ನು ನೀಡದವರನ್ನು ಅಥವಾ ಉಳಿದವರನ್ನು ಶೂದ್ರರು ಎನ್ನಲಾಗುತ್ತಿತ್ತು.
ಹೀಗೆ ನಿಯುಕ್ತಿಗೊಳಿಸಲಾದ ವರ್ಣವು ಕೇವಲ 4 ವರ್ಷಗಳ ಸೀಮಿತ ಅವಧಿಗೆ ಎಂಬುದಿಲ್ಲಿ ಗಮನಾರ್ಹ ಮತ್ತು ಆ ಪ್ರಕ್ರಿಯೆಯಲ್ಲಿ ವ್ಯಕ್ತಿಯ ನಾಲ್ಕು ವರ್ಷಗಳ ಆ ಅವಧಿಯನ್ನು ‘ಯುಗ’ ಎನ್ನಲಾಗುತ್ತಿತ್ತು. ನಾಲ್ಕು ವರ್ಷಗಳ ನಂತರ ವ್ಯಕ್ತಿಗಳ ವರ್ಣಗಳು ಬದಲಾಗುತ್ತಿದ್ದವು ಮತ್ತು ಬದಲಾವಣೆಯ ಈ ಸಮಯವನ್ನು ‘ಮನ್ವಂತರ’ ಎನ್ನಲಾಗುತ್ತಿತ್ತು. ಒಂದಂತು ನಿಜ, ‘ವರ್ಣ’ ಅದು ಮೊದಲ ಹಂತದಲ್ಲಿ ಕೇವಲ 4 ವರ್ಷಗಳ ಅವಧಿಗಷ್ಟೆ ಸೀಮಿತಗೊಂಡಿತ್ತು.
ಎರಡನೆಯ ಹಂತದಲ್ಲಿ ವ್ಯಕ್ತಿಯ ವರ್ಣವನ್ನು ನಿಯುಕ್ತಿಗೊಳಿಸುವ ಪ್ರಕ್ರಿಯೆ ಮನು ಮತ್ತು ಸಪ್ತಋಷಿಗಳಿಂದ ಗುರು ಅಥವಾ ಆಚಾರ್ಯರಿಗೆ ಬಂತು. ಈ ಹಂತದಲ್ಲಿ ಗುರುಕುಲಗಳು ಹುಟ್ಟಿಕೊಂಡವು. ವ್ಯಕ್ತಿಗಳು ಗುರುಕುಲದಲ್ಲಿ 12 ವರ್ಷಗಳು ಅಭ್ಯಾಸ ನಡೆಸಬೇಕಾಗುತ್ತಿತ್ತು. 12 ವರ್ಷಗಳ ಅಭ್ಯಾಸದ ನಂತರ ಅಂತಹ ವ್ಯಕ್ತಿಗಳಿಗೆ ಗುರು ಅಥವಾ ಆಚಾರ್ಯ ವರ್ಣದ ದೀಕ್ಷೆ ನೀಡುತ್ತಿದ್ದರು.
ಗುರುಕುಲದಲ್ಲಿ ವರ್ಣ ನಿರ್ಧರಿಸುವ ಈ ಪದ್ಧತಿಯನ್ನು, ಕ್ರಮವನ್ನು ‘ಉಪನಯನ’ ಎನ್ನಲಾಗುತ್ತಿತ್ತು. ಎರಡನೆಯ ಈ ಹಂತದಲ್ಲಿ ಕಂಡುಬಂದ ಒಂದು ವ್ಯತ್ಯಾಸವೆಂದರೆ ವರ್ಣವನ್ನು 4 ವರ್ಷಗಳ ನಿರ್ದಿಷ್ಟ ಅವಧಿಯ ಬದಲಿಗೆ ವ್ಯಕ್ತಿಯ ಜೀವಿತ ಅವಧಿಯವರೆಗೆ ವಿಸ್ತರಿಸಲಾದದ್ದು. ಹಾಗಿದ್ದರೂ ಅದನ್ನು ವಂಶಪಾರಂಪರ್ಯಗೊಳಿಸಲಿಲ್ಲ ಎಂಬುದಿಲ್ಲಿ ಗಮನಾರ್ಹ.
ಆದರೆ… ಮೂರನೆಯ ಹಂತದಲ್ಲಿ ವರ್ಣವನ್ನು ನಿರ್ಧರಿಸುವ ಗುರುಕುಲದ ಈ ಪದ್ಧತಿಯನ್ನೇ ರದ್ದುಗೊಳಿಸಲಾಯಿತು! ಹಾಗೆಯೇ ವರ್ಣವನ್ನು ನಿರ್ಧರಿಸುವ (ಉಪನಯನ ನೀಡುವ) ಗುರುಕುಲದ ಹಕ್ಕನ್ನು ಕೂಡ ಕಿತ್ತುಕೊಳ್ಳಲಾಯಿತು. ಹೀಗೆ ವರ್ಣವನ್ನು ನಿರ್ಧರಿಸುವ ಹಕ್ಕನ್ನು ಗುರುವಿನಿಂದ ಕಿತ್ತು ವ್ಯಕ್ತಿಯ ತಂದೆಗೆ ನೀಡಿದ್ದು ಮನುಸ್ಮøತಿ (ಸುಮತೀ ಭಾರ್ಗವ ವಿರಚಿತ) ಎಂಬುದಿಲ್ಲಿ ಉಲ್ಲೇಖಾರ್ಹ.
ಈ ಪ್ರಕಾರ ಮನುಸ್ಮøತಿಯ ಕಾನೂನು ವರ್ಣ ನಿರ್ಧರಿಸುವ ಉಪನಯನದಲ್ಲಿ ಪರಿಪೂರ್ಣ ಬದಲಾವಣೆ ತಂದು ಶಿಕ್ಷಣದ ನಂತರ ಉಪನಯನ ಎಂಬುದನ್ನು ರದ್ದುಗೊಳಿಸಿ ಶಿಕ್ಷಣಕ್ಕೂ ಮೊದಲೆ ಉಪನಯನ ಎಂಬ ನೀತಿ ಜಾರಿಗೊಳಿಸಿತು. ಹಾಗೆಯೇ ವರ್ಣ ನಿರ್ಧರಿಸುವ ಹಕ್ಕನ್ನು ಗುರುವಿನಿಂದ ಕಿತ್ತು ವ್ಯಕ್ತಿಯ ತಂದೆಗೆ ನೀಡಿದ್ದರಿಂದ ಸ್ವಾಭಾವಿಕವಾಗಿ ಆತ (ತಂದೆ) ಉಪನಯನದ ಸಂದರ್ಭದಲ್ಲಿ ತನ್ನ ಮಗನಿಗೆ ಆತನ ಶಕ್ತಿಸಾಮಥ್ರ್ಯ ನೋಡುವುದನ್ನು ಬಿಟ್ಟು ತಾನು ಈಗ ಯಾವ ವರ್ಣದಲ್ಲಿರುವನೋ ಅದೇ ವರ್ಣವನ್ನು ತನ್ನ ಮಗನಿಗೂ ನೀಡಲಾರಂಭಿಸಿದ. ಪರಿಣಾಮ ವರ್ಣ ವಂಶಪಾರಂಪರ್ಯವಾಯಿತು, ಅದು ಜಾತಿಯಾಗಿ ಪರಿವರ್ತನೆ ಹೊಂದಿತು ಅರ್ಥಾತ್ ಜಾತಿ ಸೃಷ್ಟಿಯಾಯಿತು.
–ರಘೋತ್ತಮ ಹೊ.ಬ
ಮೈಸೂರು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



