ನಿತ್ಯ ಭವಿಷ್ಯ
ಶ್ರಾವಣ ಶನಿವಾರ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯನ್ನು ನೆನೆಸಿಕೊಂಡು ಈ ದಿನದ ಭವಿಷ್ಯವನ್ನು ತಿಳಿದುಕೊಳ್ಳಬೇಕು : 17/08/2019 ಶನಿವಾರ
ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಶಕ್ತಿ ಯಿಂದ ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಬಹುದು. ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು PH:- 9900494333.
ಮೇಷ ರಾಶಿ
ನೀವು ಮಾಡುವ ಉದ್ಯೋಗದಿಂದ ಜೀವನವನ್ನು ಹೆಚ್ಚು ಭವ್ಯ ಗಳಿಸಿ ಆನಂದದಿಂದ ಇರುತ್ತೀರಿ. ನೀವು ಈ ದಿನ ಮೊದಲು ಇಡುವ ಹೆಜ್ಜೆ ನಿಮಗೆ ಹೆಚ್ಚು ಆಕಾಂಕ್ಷೆಗಳನ್ನು ತೋರಿಸುತ್ತದೆ. ಯಾರಿಗೆ ಎಷ್ಟೇ ಒಳ್ಳೆಯದು ಮಾಡಿದರು ನಿಮಗೆ ಕೆಟ್ಟದ್ದು ಆಗುತ್ತದೆ. ಗ್ರಹಗತಿಗಳ ಫಲಗಳು ಸರಿಯಾಗಿ ಇರುವುದಿಲ್ಲ. ದಾಂಪತ್ಯದಲ್ಲಿ ಹೆಚ್ಚು ಪ್ರೀತಿಯ ಶಕ್ತಿ ಕಂಡು ಬಾಳ ಸಂಗಾತಿಯು ಭ್ರಮೆಯಿಂದ ನೋಡುವವರು. ಕುಟುಂಬದಲ್ಲಿನ ವಿಚಾರಗೋಷ್ಠಿಗಳು ನಿಮಗೆ ತೃಪ್ತಿ ನೀಡುವುದಿಲ್ಲ. ದೂರದ ಊರಿಗೆ ಪ್ರಯಾಣ ಮಾಡುವ ಅನುಪಸ್ಥಿತಿ ಉಂಟಾಗುತ್ತದೆ. ಕಲ್ಯಾಣ ಕಾರ್ಯಕ್ರಮಗಳು ನಡೆಸಿಕೊಂಡು ಹೋಗುವುದು ಉತ್ತಮ ಎನಿಸುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ವೃಷಭ ರಾಶಿ
ಆರೋಗ್ಯದಲ್ಲಿ ನಿಮ್ಮ ವಿಶ್ವಾಸದಿಂದ ನೆಮ್ಮದಿ ಇಂದು ಅಧಿಕವಾಗಿ ಕಂಡುಬರುತ್ತದೆ. ನೀವು ಇಷ್ಟ ಪಟ್ಟು ಕನಸು ಕಾಣುವಂತಹ ಸಂಗಾತಿಯು ಆಕಸ್ಮಿಕವಾಗಿ ಎದುರುಗಡೆ ಕಾಣಿಸಿಕೊಳ್ಳುತ್ತಾರೆ. ಕುಟುಂಬದಲ್ಲಿ ಶುಭ ಕಾರ್ಯಗಳು ಮದುವೆ ಸಮಾರಂಭಗಳು ಮನೆಯಲ್ಲಿ ಕೈಗೊಳ್ಳಲಾಗುವುದು. ಉದ್ಯೋಗದಲ್ಲಿ ನಿಮಗೆ ಆರ್ಥಿಕ ಲಾಭವನ್ನು ತಂದು ಕೊಡುತ್ತದೆ. ಸ್ನೇಹಿತರ ಜೊತೆ ಮತ್ತು ಸಂಬಂಧಿಗಳ ಜೊತೆ ಹೆಚ್ಚು ಹೊತ್ತು ಮಾತನಾಡುತ್ತಾ ಅವರ ಮನಸ್ಸು ಅರ್ಥ ಮಾಡಿಕೊಳ್ಳಬೇಕು. ದಾಂಪತ್ಯದಲ್ಲಿ ರೋಮಾಂಚನಕಾರಿಯಾಗಿ ಇಂದು ಅನುಭವ ಉಂಟಾಗುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಮಿಥುನ ರಾಶಿ
ನಿಮ್ಮ ಬಂಧುಗಳ ಮನೆಯಲ್ಲಿ ಹಣವಿದ್ದರೆ ತಾತ್ಕಾಲಿಕವಾಗಿ ಸಾಲ ಪಡೆದುಕೊಳ್ಳಬಹುದು. ನಿಮ್ಮ ಬಗ್ಗೆ ನಿಂದನೇ ಮಾಡುವ ಜನರನ್ನು ನಿರ್ಲಕ್ಷಿಸಬೇಕು. ನಿಮ್ಮ ಬಗ್ಗೆ ದೂರು ನೀಡಲು ಒಳ್ಳೆಯ ಹೆಸರು ಕೆಡಿಸಲು ಶತತವಾಗಿ ಪ್ರಯತ್ನ ಮಾಡುತ್ತಾ ಇರುತ್ತಾರೆ. ಕುಟುಂಬದಲ್ಲಿ ಈ ದಿನ ನಿಮಗೆ ಸಂತೋಷ ಸಂತೃಪ್ತಿ ಕಾಣುವುದಿಲ್ಲ. ಎಲ್ಲರನ್ನೂ ಮರೆತ ಹಾಗೆ ಸಂಗಾತಿಯ ಜೊತೆಯು ಕೂಡ ಜಗಳ ಕಂಡುಬರುತ್ತದೆ. ಆರೋಗ್ಯದಲ್ಲಿ ಗುಣಮಟ್ಟದ ಆಹಾರವನ್ನು ಈದಿನ ಸೇವಿಸಬೇಕು. ನಿರಂತರ ಚಟುವಟಿಕೆಗಳಿಂದ ಯಶಸ್ಸಿನ ಕಾರ್ಯವನ್ನು ನಿರ್ವಹಿಸಬಹುದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಕರ್ಕಾಟಕ ರಾಶಿ
ಉದ್ಯೋಗದಲ್ಲಿ ಬೇರೆಯವರಿಗೆ ಪ್ರಯಾಣ ಮಾಡುವುದರಿಂದ ಅತಿ ಆಯಾಸ ಕಂಡುಬರುವುದು. ಹಣಕಾಸು ವ್ಯವಹಾರಗಳಲ್ಲಿ ತೊಂದರೆಗೆ ಸಿಲುಕಿ ಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ನಿಮ್ಮಲ್ಲಿ ಇರುವ ಸಾಮಾನ್ಯ ಜ್ಞಾನದ ಜೊತೆಗೆ ನಿರಂತರ ಪ್ರಯತ್ನವು ಖಂಡಿತವಾಗಿಯೂ ಇದ್ದರೆ ಕೆಲಸದಲ್ಲಿ ಯಶಸ್ಸನ್ನು ತರಬಹುದು. ಕಲ್ಯಾಣ ಕಾರ್ಯಕ್ರಮಗಳು ಮನೆಯಲ್ಲಿ ನಡೆಸುವಾಗ ಕೆಲವು ವಿಘ್ನಗಳು ಬರುತ್ತವೆ. ಇಂದು ನೀವು ವಾಹನ ಆಘಾತದಿಂದ ಪಾರಾಗುವಿರಿ. ದಾಂಪತ್ಯದಲ್ಲಿ ಸಂಶಯಾಸ್ಪದ ವಿಷಯಗಳು ಕಂಡುಬರಬಹುದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಸಿಂಹ ರಾಶಿ
ನೀವು ಉದ್ಯೋಗದಲ್ಲಿ ಎಷ್ಟೇ ಎಚ್ಚರಿಕೆಯಿಂದ ಕೆಲಸ ಮಾಡಿದರು ನಿಮಗೆ ಏನಾದರೂ ಒಂದು ಅನಾಹುತ ಕಾಣಿಸುತ್ತದೆ. ವಿವಾಹದ ಸಂಬಂಧಿಗಳು ನಿಮಗೆ ಅನುಕೂಲಕರವಾದ ವಸ್ತುಗಳನ್ನು ನೀಡುವರು. ನಿಮ್ಮ ಸಂತಸದ ಪ್ರಯಾಣ ತೃಪ್ತಿದಾಯಕ ಆಗಿರುತ್ತದೆ. ನಮ್ಮಲ್ಲಿ ಬೇಕಾದಷ್ಟು ಹಣವಿದ್ದರೂ ಸಂಬಂಧಿಗಳಿಗೆ ಸಾಲ ನೀಡುವುದು ಶುಭ ಎನಿಸುವುದಿಲ್ಲ. ಶತ್ರುಗಳನ್ನು ಗುಪ್ತವಾಗಿ ತೊಂದರೆಗಳಿಗೆ ಸಿಲುಕಿ ಸಬೇಕು. ನೀವೆಷ್ಟೇ ಆರೋಗ್ಯವಾಗಿ ಇರಲು ಪ್ರಯತ್ನಿಸಿದರು ಅದು ಸಾಕಷ್ಟು ವಿಫಲವಾಗುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಕನ್ಯಾ ರಾಶಿ
ನಿಮ್ಮ ಜೀವನದಲ್ಲಿ ಆಧ್ಯಾತ್ಮಿಕ ವ್ಯಕ್ತಿಯೊಬ್ಬ ನಿಮಗೆ ಈ ದಿನ ಆಶೀರ್ವಾದ ಮಾಡುತ್ತಾರೆ. ಕುಟುಂಬದ ಜನರೊಂದಿಗೆ ವ್ಯಾಪಾರ ಮಾಡಲು ಆಚೆಕಡೆ ಹೋಗಬಹುದು. ನೀವು ಲೆಕ್ಕ ಹಾಕಿದಷ್ಟು ಹಣಕಾಸು ನಿಮ್ಮ ಹತ್ತಿರ ಕಾಣಿಸುವುದಿಲ್ಲ. ಇಷ್ಟವಿಲ್ಲದ ಮದುವೆ ಕಾರ್ಯಗಳು ಮಾಡಲು ಸಂಬಂಧಿಗಳು ಮುಂದಾಗುತ್ತಾರೆ. ಹೂವಿನ ವಾಸನೆ ನಿಮಗೆ ಈ ದಿನ ತುಂಬಾ ಹಿತವಾಗಿ ರೋಮಾಂಚನವಾಗಿ ಅನುಭವ ತರುತ್ತದೆ. ವಿದ್ಯಾಭ್ಯಾಸ ಮಾಡಲು ಇದು ಒಳ್ಳೆಯ ಸಮಯವಾಗಿರುತ್ತದೆ. ಪೋಷಕರು ನಿಮಗೆ ಸಹಾಯ ಕೂಡ ಮಾಡುತ್ತಾರೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ತುಲಾ ರಾಶಿ
ನಿಮ್ಮ ಭಾವನೆಗಳನ್ನು ಮತ್ತು ಆಸೆಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೂರುವುದರಿಂದ ಯಶಸ್ಸು ಕಡಿಮೆಯಾಗುತ್ತದೆ. ನೀವು ಇಷ್ಟಪಟ್ಟಿದ್ದ ಸ್ತ್ರೀಯನ್ನು ನೇರವಾಗಿ ಭೇಟಿ ಮಾಡಿ ವಿಷಯಗಳನ್ನು ತಿಳಿಸುವುದು ಈ ದಿನ ಮಹತ್ತರ ವಾಗುತ್ತದೆ. ಕುಟುಂಬದಲ್ಲಿ ನಿಮ್ಮನ್ನು ಅರ್ಥಮಾಡಿಕೊಳ್ಳುವ ಶಕ್ತಿ ಬಹಳ ಕಡಿಮೆ ಇರುತ್ತದೆ. ಸ್ನೇಹಿತರೊಂದಿಗೆ ಕೆಲವು ಹವ್ಯಾಸಗಳನ್ನು ದೂರ ಇರುವುದರಿಂದ ಆರೋಗ್ಯಕರ ಹಿತವೆನಿಸುತ್ತದೆ. ನೀವು ಕೂಡ ಲಾಭ ಕಾಣಿಸುವ ಉದ್ಯೋಗದಲ್ಲಿ ತೊಡಗಿದರೆ ಯಶಸ್ಸು ಖಂಡಿತವಾಗಿಯೂ ಬೇಗನೆ ದೊರೆಯುತ್ತದೆ. ಪಾಲುದಾರರ ಜೊತೆ ಕೈಜೋಡಿಸುವ ಮೊದಲು ಬಹಳಷ್ಟು ಯೋಚನೆಯನ್ನು ಮಾಡಬೇಕಾಗುತ್ತದೆ. ಆರೋಗ್ಯದಲ್ಲಿ ನಿಮಗೆ ಕೀಲುನೋವು ಹೆಚ್ಚಾಗಿ ಕಾಣಿಸುತ್ತಿರುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ವೃಶ್ಚಿಕ ರಾಶಿ
ನೀವು ಮಾಡುವ ಉದ್ಯೋಗದಲ್ಲಿ ವಿಶ್ರಾಂತಿ ಪಡೆಯಲು ಈ ದಿನ ಸಾಧ್ಯವಾಗುತ್ತದೆ. ಮನೋರಂಜನೆಗಾಗಿ ಹೆಚ್ಚು ಸಮಯ ಮತ್ತು ಹಣವನ್ನು ಖರ್ಚು ಮಾಡುವ ಪ್ರಯತ್ನ ನಿಯಂತ್ರಿಸ ಬೇಕು.ಇಲ್ಲವಾದರೆ ಶತ್ರುಗಳು ನಿಮ್ಮನ್ನು ಮಟ್ಟ ಹಾಕಬಹುದು. ಮದುವೆ ವಿಷಯಗಳು ಮುಂದೂಡಿ ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತಾರೆ. ನಿಮ್ಮ ಪ್ರೇಮಿಯು ಈ ದಿನ ನಿಮ್ಮನ್ನು ಕಂಡು ಅಸಮಾಧಾನದಿಂದ ಇರುತ್ತಾರೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಈ ದಿನ ಬಹಳಷ್ಟು ಯಶಸ್ಸು ಗಳಿಸುವ ಪ್ರಗತಿಯನ್ನು ಹೊಂದುವ ದಿನವಾಗಿರುತ್ತದೆ. ಮನೆಯಲ್ಲಿ ಕೆಲವು ಕಿರಿಕಿರಿ ಪರಿಸ್ಥಿತಿಗಳಿಂದ ನಿಮಗೆ ಅಸಮಾಧಾನ ಉಂಟಾಗಬಹುದು. ತಂದೆ-ತಾಯಿಗಳು ನಿರೀಕ್ಷಿಸಿದ ಹಾಗೆ ಫಲಿತಾಂಶಗಳು ಮಕ್ಕಳಿಂದ ಬರುವುದಿಲ್ಲ. ಅನಿರೀಕ್ಷಿತವಾಗಿ ಬಂಧುಗಳು ನಿಮ್ಮ ಮನೆಗೆ ಬಂದು ಸೇರುವರು. ಅತ್ತೆ ಸೊಸೆ ಜಗಳ ಇಂದು ಕೂಡ ಹೆಚ್ಚಾಗಿ ಮನೆಯಲ್ಲಿ ಕಾಣಿಸತೊಡಗುತ್ತದೆ. ಕೆಲವು ಜನರು ವಿವಾಹದಲ್ಲಿ ನಿಮಗೆ ಅನ್ಯಾಯವನ್ನು ಉಂಟುಮಾಡುತ್ತಾರೆ. ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಕೊಳ್ಳುವುದು. ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಮಕರ ರಾಶಿ
ಸ್ನೇಹಿತರ ಮನೆಗೆ ಈ ದಿನ ಊಟ ಮಾಡಲು ಆಕಸ್ಮಿಕವಾಗಿ ಕೂರಬೇಕಾಗುತ್ತದೆ. ನೀವು ಮಾಡುವಂತಹ ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ನೀವು ಸಾಕಷ್ಟು ಸಂಗಾತಿಯ ಕಡೆಗೆ ಗಮನ ಕೊಡದೆ ಮನೆಯಲ್ಲಿ ಅನವಶ್ಯಕ ಮನಸ್ತಾಪಗಳನ್ನು ಉಂಟು ಮಾಡುತ್ತೀರಿ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಕುಟುಂಬದಲ್ಲಿ ಒಂದು ಮಾತು ಹೇಳುವುದು ಉತ್ತಮವಾಗಿರುತ್ತದೆ. ಅನುಕೂಲಕರ ಗ್ರಹಗಳು ಇಂದು ಆರೋಗ್ಯಕರವಾಗಿರಲು ಸಹಾಯವಾಗುತ್ತದೆ. ನಿಮ್ಮ ಇಷ್ಟವಾದ ದೇವರ ಮೂಲ ಮಂತ್ರವನ್ನು ಹೇಳಿಕೊಳ್ಳುವುದರಿಂದ ಸಾಕಷ್ಟು ಅನುಕೂಲಕರವಾಗಿರುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಕುಂಭ ರಾಶಿ
ನಿಮಗೆ ಈ ದಿನ ಕೆಲಸದಲ್ಲಿ ಸಾಕಷ್ಟು ಒತ್ತಡ ಹೇರಿ ಕೋಪ ತರುವಂತೆ ಮಾಡುತ್ತಾರೆ. ನೀವು ಆರಾಮಾಗಿ ಇಷ್ಟ ವಿಶ್ರಾಂತಿ ತೆಗೆದುಕೊಂಡು ಮನೆಯಲ್ಲಿ ಸಮಯ ಕಳೆಯುವುದು ಒಳ್ಳೆಯದು. ಹೆಚ್ಚು ದೈವ ಭಕ್ತಿ ಈ ದಿನ ನಿಮಗೆ ಕಾಣಿಸಿಕೊಳ್ಳುತ್ತದೆ. ಹಣಕಾಸಿನಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದಬಹುದು. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚು ನಿಮ್ಮ ಮೇಲೆ ಅವಲಂಬಿತವಾಗಿರುತ್ತವೆ. ಪ್ರೀತಿ ಮಾಡುವ ವಿಷಯವನ್ನು ಹೇಳದೆ ತುಂಬಾನೇ ಮನಸ್ಸಿನಲ್ಲಿ ಪಶ್ಚಾತಾಪ ಮಾಡಿಕೊಳ್ಳುವಿರಿ. ಹೊಸ ವೈದ್ಯರನ್ನು ಸಂಪರ್ಕಿಸುವ ಮೂಲಕ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಮನಸ್ಸಿನಲ್ಲಿ ಏನಾದರೂ ಭಯವಿದ್ದರೆ ಆಂಜನೇಯ ಸ್ವಾಮಿಯನ್ನು ನೆನೆಸಿಕೊಂಡು ಪೂಜಿಸಬೇಕು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಮೀನಾ ರಾಶಿ
ನೀವು ಈ ದಿನ ಪ್ರೀತಿಪಾತ್ರರೊಂದಿಗೆ ಕಿರಿಕಿರಿಯನ್ನು ಮಾಡಿಕೊಳ್ಳುತ್ತೀರಿ. ಭವಿಷ್ಯದ ಗುರಿಯನ್ನು ತಲುಪಲು ಉದ್ಯೋಗದಲ್ಲಿ ಸಾಕಷ್ಟು ಶ್ರಮವನ್ನು ಹೊಂದಬೇಕು. ಬೇರೆಯವರನ್ನು ನೋಡಿ ಕಲಿಯುವುದಕ್ಕಿಂತ ನಿಮ್ಮ ಮನಸ್ಸಿನ ಮಾತನ್ನು ಆಲಿಸುವುದು ಬಹಳ ಮುಖ್ಯವಾಗಿರುತ್ತದೆ. ಪದೇಪದೇ ಆರೋಗ್ಯ ನಾಶ ಒಂದು ಇದ್ದರೆ ಕೂಡಲೇ ಯಾವುದಾದರೂ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವುದು ಒಳ್ಳೆಯದು. ವೈವಾಹಿಕ ಜೀವನದಲ್ಲಿ ಸಂತಾನದ ವಿಷಯವನ್ನು ಕೇಳಬಹುದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ
ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.
ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.
ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.
ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.
ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.
ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ಅಂತರಂಗ2 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ3 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ4 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ


