ನಿತ್ಯ ಭವಿಷ್ಯ
ನವರಾತ್ರಿ ಮುಗಿದ ಕೂಡಲೇ 4 ಪ್ರಮುಖ ರಾಶಿಯವರಿಗೆ ಈ ಶುಕ್ರವಾರದಿಂದ ಧನಲಾಭ : ಮಿಸ್ ಮಾಡ್ದೆ ಓದಿ 11/10/2019
ದಿನ ನಿತ್ಯ ನಿಮ್ಮ ರಾಶಿ ಭವಿಷ್ಯವಾಣಿ
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶ್ರೀ ಮಹಾಕಾಳಿ ದೈವಿಕ ಮಾಂತ್ರಿಕ ಪೂಜಾಶಕ್ತಿಯಿಂದ ಶೀಘ್ರದಲ್ಲಿ ಸೂಕ್ತವಾದ ಶಾಶ್ವತವಾಗಿ ಪರಿಹಾರ ಮಾಡಿಕೊಡಲಾಗುತ್ತದೆ. ನೀವು ಎಷ್ಟೋ ಜ್ಯೋತಿಷ್ಯರಲ್ಲಿ ದೈವ ದೇವಸ್ಥಾನಗಳಲ್ಲಿ ಕೇಳಿ ಮನನೊಂದಿದ್ದರೆ ತಕ್ಷಣವೇ ಕರೆಮಾಡಿ. ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್. PH:- 9945590266
ಮೇಷ ರಾಶಿ
ಉದ್ಯೋಗದಲ್ಲಿ ಪ್ರಗತಿ ಇದೆ. ನಿಮ್ಮ ಮಕ್ಕಳ ಜೊತೆಗೆ ಸಮಯವನ್ನು ಕಳೆಯುವುದು ಉತ್ತಮ ಎನಿಸುತ್ತದೆ. ಬಂಧುಗಳ ಆಗಮನ ಮನೆಯಲ್ಲಿ ಕಿರಿಕಿರಿ ಉಂಟು ಮಾಡಬಹುದು. ಪ್ರೀತಿಯಲ್ಲಿ ಮೋಸ ಹೋಗಬಹುದು. ಜನರು ನಿಮಗೆ ಇಲ್ಲದ ಸಲ್ಲದ ಅಪವಾದ ನೀಡುತ್ತಾರೆ. ಹೊಸ ಹಣದ ಚಿಂತನೆ ನಡೆಯುವುದು. ಆರೋಗ್ಯದಲ್ಲಿ ತೊಂದರೆಗೆ ಒಳಪಡುತ್ತಾರೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 9945590266.
ವೃಷಭ ರಾಶಿ
ಈ ರಾಶಿಯವರ ಸಂಸಾರ ಜೀವನ ರೋಮಾಂಚನಕರ ಆಗಿರುತ್ತದೆ. ವಿವಾದಗಳಲ್ಲಿ ಎಚ್ಚರದಿಂದ ಇರಬೇಕು. ಅವಸರದಲ್ಲಿ ನಿರ್ಧಾರ ತೆಗೆದು ಕೊಳ್ಳಲು ಸಾಧ್ಯವಾಗುವುದಿಲ್ಲ. ಮನೆಯಲ್ಲಿ ಶುಭ ಕಾರ್ಯಗಳನ್ನು ಮಾಡುವ ಬಗ್ಗೆ ಮಾತನಾಡಬೇಕು. ಹಣಕಾಸಿನಲ್ಲಿ ಬಿಕ್ಕಟ್ಟು ಕಾಣಿಸಿಕೊಳ್ಳುತ್ತದೆ. ಆರೋಗ್ಯ ಗಮನದಲ್ಲಿಟ್ಟುಕೊಂಡು ಪ್ರಯಾಣ ನಡೆಸಬೇಕು. ಉದ್ಯೋಗದಲ್ಲಿ ಅವಕಾಶಗಳು ಬರುತ್ತವೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 9945590266.
ಮಿಥುನ ರಾಶಿ
ನಿಮ್ಮ ಮನಸ್ಸಿನಲ್ಲಿ ಮೂಡಿಸುವ ಭಾವನೆಗಳು ಮತ್ತು ಅನುಭವಗಳ ಕುರಿತು ಪ್ರಸ್ತಾಪ ಮಾಡಬಾರದು. ಕೆಲಸದಲ್ಲಿ ಸಹೋದ್ಯೋಗಿಯೊಂದಿಗೆ ಸಹಾಯಕರರಾಗಿ ಅವರಲ್ಲಿ ಸಲಹೆಗಳನ್ನು ಪಡೆದು ಉತ್ತಮವಾಗಿ ನಡೆದುಕೊಳ್ಳಿ. ವಿವಾಹದಲ್ಲಿ ಅವಸರದಲ್ಲಿ ಪ್ರಯತ್ನಿಸದೆ ಬಂಧುಗಳು ಹಾಗೂ ಮಿತ್ರರಲ್ಲಿ ಹೇಳಿಕೊಳ್ಳುವುದು ಉತ್ತಮ. ಆರೋಗ್ಯದಲ್ಲಿ ನಿರಾಳವಾಗಿ ಚೇತರಿಕೆ ಆಗಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 9945590266.
ಕರ್ಕಾಟಕ ರಾಶಿ
ಉದ್ಯೋಗದಲ್ಲಿ ಒಂದು ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು. ನಿಮ್ಮ ಹಠಮಾರಿ ವರ್ತನೆಯಿಂದ ಕುಟುಂಬದಲ್ಲಿ ಇರುವವರಿಗೆ ನೋವುಂಟು ಆಗಬಹುದು. ಮದುವೆಯ ವಿಳಂಬದ ಚಿಂತನೆ ಕಾಡುತ್ತಿದೆ. ಶತೃಗಳಿಂದ ಮೆಚ್ಚುಗೆ ಪಡೆಯುವುದು. ಪತಿ ಪತ್ನಿ ದೂರವಾಗಿದ್ದರು ಮಾರ್ಗದರ್ಶನ ಪಡೆಯುವುದು ಉತ್ತಮ ಲಾಭವಿದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 9945590266
ಸಿಂಹ ರಾಶಿ
ನಿಮ್ಮ ಉದ್ಯೋಗದಲ್ಲಿ ರಹಸ್ಯವಾಗಿ ನಡೆದುಕೊಂಡು ಯೋಜನೆಗಳನ್ನು ಪ್ರಾರಂಭಿಸಬಹುದು. ನಿಮ್ಮ ಆಕರ್ಷಣೆ ಎಲ್ಲರ ಗಮನ ಸೆಳೆಯುತ್ತದೆ. ದಾಂಪತ್ಯದಲ್ಲಿ ಸಂಗಾತಿಯ ನೋವನ್ನು ಹಂಚಿಕೊಳ್ಳಬೇಕು. ಕೇವಲ ಹಣದ ವಿಷಯವಾಗಿ ಕುಟುಂಬದವರು ನಿಮ್ಮನ್ನು ಕಾಡುತ್ತಾರೆ. ಶತೃಗಳಿಂದ ನಿಮ್ಮ ಕೋಪ ಅತಿರೇಕವಾಗಿ ಇರುತ್ತದೆ. ರಕ್ತದೊತ್ತಡ ಸಮಸ್ಯೆಗಳು ಆರೋಗ್ಯದಲ್ಲಿ ಕಿರಿಕಿರಿ ಉಂಟು ಮಾಡುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 9945590266.
ಕನ್ಯಾ ರಾಶಿ
ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದರೂ ಹಣದ ವೆಚ್ಚ ಕಡಿಮೆ ಆಗುವುದಿಲ್ಲ. ನಿಮ್ಮ ಕೆಲಸದಲ್ಲಿ ಇರುವ ಒತ್ತಡ ಹೆಚ್ಚಾಗಿ ನಿದ್ದೆ ಸರಿಯಾಗಿ ಬರುವುದಿಲ್ಲ. ಇದರಿಂದ ಸ್ವಲ್ಪ ಅನಾರೋಗ್ಯದ ಸಮಸ್ಯೆಗಳು ಉದ್ಬವವಾಗುತ್ತವೆ. ಉದ್ಯೋಗದಲ್ಲಿ ನಿಮ್ಮ ಏಕಾಂತದಲ್ಲಿ ಮಾಡುವ ಕೆಲಸ ಕಾರ್ಯಗಳು ಸಫಲತೆ ಪಡೆಯುತ್ತದೆ. ಕುಟುಂಬದ ಸದಸ್ಯರು ನಿಮ್ಮ ಪ್ರಯತ್ನಗಳನ್ನು ಪ್ರಶಂಸಿಸುತ್ತಾರೆ. ಕಂಕಣ ಭಾಗ್ಯ ಕೂಡಿ ಬಂದಿದೆ. ಸ್ತ್ರೀ ಪುರುಷ ವಶೀಕರಣ, ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 9945590266.
ತುಲಾ ರಾಶಿ
ಆರ್ಥಿಕ ಸಮಸ್ಯೆ ಪರಿಹಾರ ಆಗಲು ರಚನಾತ್ಮಕವಾಗಿ ಯೋಚಿಸುವ ನಿಮ್ಮ ಸಾಮರ್ಥ್ಯ ಶತ್ರುಗಳಿಂದ ಹಾಳು ಆಗುತ್ತದೆ. ಮನೆಯಲ್ಲಿ ಧರ್ಮ ಕಾರ್ಯಗಳು ನಡೆಸಲಾಗುವುದು. ಉದ್ಯೋಗಿಗಳಿಗೆ ಜವಾಬ್ದಾರಿಯುತ ಕೆಲಸಗಳು ಹುಟ್ಟುತ್ತವೆ. ನಿಮ್ಮ ಸಂಗಾತಿ ವಿಷಯದಲ್ಲಿ ಮನಸ್ತಾಪ ಮಾಡಿಕೊಳ್ಳಬೇಡಿ.ನಿಮ್ಮ ವ್ಯಯಕ್ತೀಕ ಜೀವನದಲ್ಲಿ ಯೋಚನೆ ಕಂಡುಬರುತ್ತದೆ. ಆರೋಗ್ಯದಲ್ಲಿ ತಲೆ ನೋವು ಕೀಲುನೋವು ಕಾಣಿಸಿಕೊಳ್ಳುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 9945590266.
ವೃಶ್ಚಿಕ ರಾಶಿ
ನೀವು ಸಂದಿಗ್ಧ ಪರಿಸ್ಥಿತಿಯನ್ನು ಈ ದಿನ ಎದುರಿಸಬೇಕಾಗುತ್ತದೆ. ನಿಮಗೆ ವಶೀಕರಣದಂತಹ ಸಮಸ್ಯೆಗಳು ಕಾಡಿಸುತ್ತದೆ. ನಿಮ್ಮನ್ನು ನೀವೇ ದೂಷಿಸ ಕೊಳ್ಳುವುದು ಆಗುತ್ತದೆ. ನಿಮಗೆ ಕಾಡುವಂತಹ ರೋಗಗಳು ಕೂಡ ಬಹಳ ರಹಸ್ಯಮಯ ವಾಗಿರುತ್ತದೆ. ನೀವು ಪ್ರೀತಿಸಿದ ವ್ಯಕ್ತಿಯನ್ನು ಕಳೆದು ಕೊಳ್ಳುವುದು ಆಗುತ್ತದೆ. ಹಣಕಾಸಿನಲ್ಲಿ ಉತ್ತಮ ಲಾಭವಿದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 9945590266.
ಧನಸ್ಸು ರಾಶಿ
ಉದ್ಯೋಗದಲ್ಲಿ ನಿಮಗೆ ಒಳ್ಳೆಯ ಆಲೋಚನೆಗಳು ಮತ್ತು ಕಾರ್ಯಗಳು ಅಗತ್ಯ ಇರುವ ಸಮಾಧಾನ ಕಾಣಿಸಿಕೊಳ್ಳುತ್ತದೆ. ಕುಟುಂಬದಲ್ಲಿ ಒತ್ತಡಗಳು ಬೇರೆ ಆಗಿ ನಿಮಗೆ ನೆಮ್ಮದಿ ಮತ್ತು ವಿಶ್ರಾಂತಿ ತಂದು ಕೊಡುತ್ತದೆ. ದಾಂಪತ್ಯದಲ್ಲಿ ಮಡದಿಯೊಂದಿಗೆ ಸುಖಕರ ಜೀವನ ಹೊಂದುವಿರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಾಣುವುದು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಗುರುಬಲ ಇಲ್ಲದ ಕಾರಣ ಮದುವೆ ಕಾರ್ಯಗಳು ವಿಳಂಬ ಆಗಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 9945590266.
ಮಕರ ರಾಶಿ
ಉತ್ತಮ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀವು ಸಹೋದ್ಯೋಗಿಗಳ ಗಮನ ಸೆಳೆಯುತ್ತದೆ. ನಿಮ್ಮ ಕೌಟುಂಬಿಕ ವರ್ಗಗದವರಿಂದ ಸಂಭ್ರಮಾಚರಣೆ ಆನಂದದ ಕ್ಷಣಗಳು ಕಾಣಬಹುದು. ಪ್ರೇಮಿಗಳ ಜೀವನ ಮದುವೆ ಕಾರ್ಯಗಳಿಗೆ ಮುಂದುವರಿಯುವುದು. ಧನ ವಿಚಾರದಲ್ಲಿ ಆಕರ್ಷಣೆ ಆಗುತ್ತದೆ. ಆರೋಗ್ಯ ಸಾಮಾನ್ಯವಾಗಿ ಶೀತದಿಂದ ಕೂಡಿರುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 9945590266.
ಕುಂಭ ರಾಶಿ
ಯೋಗ ಮತ್ತು ವ್ಯಾಯಾಮ ದೇಹಾರೋಗ್ಯ ಕಾಪಾಡಲು ಉತ್ತಮ ಎನಿಸುತ್ತದೆ. ಉದ್ಯೋಗಸ್ಥರಲ್ಲಿ ಯಾವುದೋ ವಾದ ವಿವಾದ ಕೆಲಸದಲ್ಲಿ ನಡೆಯುವುದು. ಒಳ್ಳೆಯ ಹಾಸ್ಯ ಮತ್ತು ನಿಮ್ಮ ಜ್ಞಾನದಿಂದ ಕುಟುಂಬದಲ್ಲಿ ಶಾಂತಿ ತುಂಬಾಬಹುದು. ಈ ದಿನ ಜೀವನ ಸಂಗಾತಿಯೊಂದಿಗೆ ಹೆಚ್ಚು ಕಾಳಜಿಯನ್ನು ಕಾಣಿಸಿಕೊಳ್ಳುತ್ತದೆ. ಹಣಕಾಸು ಲಾಭದಾಯಕವಾಗಿರುತ್ತದೆ. ಮಕ್ಕಳು ಓದಿನಲ್ಲಿ ಆಸಕ್ತಿ ತೋರಬೇಕಾಗುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 9945590266.
ಮೀನಾ ರಾಶಿ
ಮನೆಯಲ್ಲಿ ಸದಸ್ಯರ ಖುಷಿಯ ಸ್ವಭಾವ ಕುಟುಂಬದಲ್ಲಿನ ವಾತವರಣ ಹಗುರಗೊಳಿಸುತ್ತದೆ. ನೀವು ಭವಿಷ್ಯಕ್ಕಾಗಿ ಹೊಸ ಹೊಸ ಕೆಲಸಗಳ ಬಗ್ಗೆ ಕೂಡ ಗಮನ ನೀಡಬೇಕು. ನೀವು ವಿಶ್ರಾಂತಿ ಪಡೆಯಲು ಸಹಾಯವಾಗುತ್ತದೆ. ನಿಮ್ಮ ಸ್ನಾಯುಗಳ ಸೆಳೆತದಿಂದ ನೋವನ್ನು ಅನುಭವಿಸುತ್ತಾರೆ. ಹಣಕಾಸಿನಲ್ಲಿ ಖರ್ಚು ಯಥೇಚ್ಛವಾಗಿ ಕಾಣಿಸಿಕೊಳ್ಳುತ್ತದೆ. ಮದುವೆ ವಿಚಾರ ಮನೆಯಲ್ಲಿ ಕಂಡುಬರುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 9945590266.

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ
ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.
ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.
ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.
ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.
ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.
ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ಅಂತರಂಗ2 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ3 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ4 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ


