Connect with us

ನಿತ್ಯ ಭವಿಷ್ಯ

ಶ್ರೀ ಭಗವತಿ ದೇವಿಯ ಅನುಗ್ರಹದಿಂದ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ : 06-11-2019 ಬುಧವಾರ

Published

on

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ. ಪಂಡಿತ್ ಗುರು ದೀಕ್ಷಿತ್ : 9036933032

ಮೇಷ ರಾಶಿ

ಜನರ ವಕ್ರ ದೃಷ್ಟಿ ನಿಮ್ಮ ಮೇಲೆ ತುಂಬಾ ಇದೆ. ಹಣಕಾಸಿನ ಸಮಸ್ಯೆ ಕಾಡಲಿದೆ. ಕುಟುಂಬ ಸದಸ್ಯರು ಅನಾರೋಗ್ಯದಿಂದ ಬಳಲುವ ಸಾಧ್ಯತೆಯಿದೆ. ವೈದ್ಯಕೀಯ ವೆಚ್ಚ ಭರಿಸುವ ಸಾಧ್ಯತೆ ಇದೆ. ನೌಕರರಿಗೆ ಮೇಲಾಧಿಕಾರಿ ಕಿರುಕುಳ ಕೊಡಲಿದ್ದಾರೆ. ಯಾರೋ ಮಾಡಿರುವಂತ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಪ್ರೇಮಿಗಳು ಮಾನಸಿಕವಾಗಿ ಖಿನ್ನತೆ ಒಳಗಾಗುವಿರಿ.

ಪಂಡಿತ್ ಗುರು ದೀಕ್ಷಿತ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9036933032

ವೃಷಭ ರಾಶಿ

ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುವುದು. ತಮ್ಮ ವಿವೇಚನೆಗಳು ವಿಳಂಬವಾಗುವುದು. ಗೃಹ ಕಟ್ಟಡ, ನಿವೇಶನ ಖರೀದಿ ವಕ್ರದೃಷ್ಟಿಯಿಂದ ಮುಂದೂಡುವುದು. ಯಾರೋ ಮಾಡಿರುವಂತಹ ಅಪವಾದಕ್ಕೆ ತಾವು ಬಲಿಪಶು ಆಗುವಿರಿ. ತಮ್ಮ ವಿರೋಧಿಗಳು ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿ ವಹಿಸಿ. ದೂರದ ಪ್ರಯಾಣ ಬೇಡ. ತಾವು ಮಧ್ಯಸ್ಥಿಕೆವಹಿಸಿ ಸಾಲ ಕೋಡಿಸಬಾರದು. ಉದ್ಯೋಗದಲ್ಲಿ ಕೆಲಸಗಾರರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಹಣಕಾಸಿನ ಚಿಂತೆ ಕಾಡಲಿದೆ. ತಾವು ಹಮ್ಮಿಕೊಂಡಿರುವ ಯೋಜನೆಗಳು ಯಾರಿಂದಲೂ ಸಹಕಾರ ಸಿಗಲಾರದು.

ಪಂಡಿತ್ ಗುರು ದೀಕ್ಷಿತ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9036933032

ಮಿಥುನ ರಾಶಿ

ತಮ್ಮ ಸ್ವಂತ ಪ್ರಯತ್ನದಿಂದ ಲಾಭದಾಯಕ ಯೋಜನೆಗಳನ್ನು ಪ್ರಾರಂಭ ಮಾಡುವಿರಿ. ಸಹವರ್ತಿಗಳಿಂದ ಸಹಾಯ ಸಿಗಲಿದೆ. ಪತ್ನಿಯ ಸಂಬಂಧಿಕರ ಕಡೆಯಿಂದಮನಸ್ತಾಪ ಆಗುವುದು. ವಿರೋಧಿಗಳು ತಂತ್ರಗಾರಿಕೆ ಮಾಡುವ ಸಾಧ್ಯತೆ ಇದೆ ಜಾಗ್ರತೆವಹಿಸಿ. ಅಕ್ಕಪಕ್ಕದ ಜನರಿಂದ ನಿಮ್ಮ ಕುಟುಂಬದ ಮೇಲೆ ವಕ್ರದೃಷ್ಟಿ ಬೀಳುವ ಸಾಧ್ಯತೆ ಇದೆ. ಜಮೀನು ಮಾರಾಟ ಪ್ರಕ್ರಿಯೆ ನಿಧಾನಗತಿ ಆಗುವುದು. ಹಳೆ ನಿವೇಶನ ನವೀನಕರಣ ಬಗ್ಗೆ ಚಿಂತನೆ ಮಾಡುವಿರಿ.

ಪಂಡಿತ್ ಗುರು ದೀಕ್ಷಿತ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9036933032

ಕಟಕ ರಾಶಿ

ತಮ್ಮ ಸ್ವಂತ ಉದ್ಯಮದಲ್ಲಿ ಉತ್ತಮ ಪ್ರಗತಿ ಕಾಣಲಿದೆ. ಹಣಕಾಸಿನ ಅಡಚಣೆಯಿಂದಾಗಿ ಹೊಸ ಉದ್ಯಮ ಪ್ರಾರಂಭ ವಿಳಂಬವಾಗುವುದು . ನಿಮ್ಮ ಅಲಕ್ಷ ತನದಿಂದ ಆರೋಗ್ಯದಲ್ಲಿ ತೊಂದರೆ ಸಾಧ್ಯತೆ ಇದೆ. ತಮ್ಮ ಸಂಗಾತಿಯಿಂದ ತಮ್ಮ ಸಂಬಂಧಿಕರು ವಿರೋಧಿಗಳಆಗುವರು. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆ ಮಧ್ಯಸ್ತಿಕೆ ಜನರಿಂದ ವಿಳಂಬವಾಗುವುದು. ನವದಂಪತಿಗಳು ಸಂತಾನದ ಚಿಂತನೆ ಮಾಡುವಿರಿ. ಮಕ್ಕಳ ವಿವಾಹ ನೆರವೇರುವ ಸಾಧ್ಯತೆಯಾಗಲಿದೆ. ಹೊಸ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಆಸ್ತಿ ವಿಚಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಸೃಷ್ಟಿಯಾಗುವುದು.

ಪಂಡಿತ್ ಗುರು ದೀಕ್ಷಿತ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9036933032

ಸಿಂಹರಾಶಿ

ಜಮೀನಿನ ಯಂತ್ರೋಪಕರಣಗಳು ಖರೀದಿಸುವ ಸಾಧ್ಯತೆ ಇದೆ. ಜಮೀನಿನಲ್ಲಿ ಹೊಸ ಅವಿಷ್ಕಾರ ಮಾಡುವಿರಿ. ಕೃಷಿಕರು ಉತ್ತಮ ಲಾಭಗಳಿಸುವಿರಿ. ಪ್ರೇಮ ವಿವಾಹದಲ್ಲಿ ಅಡಚಣೆ ಉಂಟಾಗಲಿದೆ. ಪತಿ-ಪತ್ನಿ ಸಣ್ಣಪುಟ್ಟ ವಿಚಾರಕ್ಕೆ ಕೋಪ ಸೃಷ್ಟಿಯಾಗುವುದು. ಸರ್ಕಾರಿ ನೌಕರರಿಗೆ ಸ್ಥಾನಪಲ್ಲಟ ಮತ್ತು ಬಡ್ತಿ ಹೊಂದುವ ಸಾಧ್ಯತೆ ಇದೆ. ಮಧ್ಯಸ್ಥಿಕೆ ಜನರಿಂದ ತುಂಬಾ ಕಿರಿಕಿರಿ ಅನುಭವಿಸುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕ ವೇದನೆ ಅನುಭವಿಸುವಿರಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಜಾಗೃತಿವಹಿಸಿ. ಹಣಕಾಸಿನ ಅಡಚಣೆ ತುಂಬಾ ಕಾಡಲಿದೆ. ಯಾರೋ ಮಾಡಿರುವಂತ ಅಪವಾದಕ್ಕೆ ತಾವು ಗುರಿಯಾಗುವ ಸಾಧ್ಯತೆ.

ಪಂಡಿತ್ ಗುರು ದೀಕ್ಷಿತ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9036933032

ಕನ್ಯಾ ರಾಶಿ

ನಿಮ್ಮ ವಿರುದ್ಧ ಪಿತೂರಿ ರೂಪುಗೊಳ್ಳುವ ಸಾಧ್ಯತೆ ಇದೆ ಜಾಗ್ರತೆವಹಿಸಿ. ಇಂದಿನ ಕೆಲಸಕಾರ್ಯಗಳು ಅನಿವಾರ್ಯವಾಗಿ ಮುಂದೂಡುವುದು. ದೂರದ ಪ್ರಯಾಣ ಕಂಟಕವಾಗುವುದು. ಮಕ್ಕಳಿಂದ ಮನಸ್ತಾಪ ವಾಗುವ ಸಾಧ್ಯತೆ. ಸಮಾಜದಲ್ಲಿ ನಿಮ್ಮ ಹೆಸರನ್ನು ದುರ್ಬಳಕೆ ಮಾಡುವ ಸಾಧ್ಯತೆ ಇದೆ. ಕುಟುಂಬ ಸದಸ್ಯರ ಆರೋಗ್ಯದ ಮೇಲೆ ಗಮನಹರಿಸಿ. ಪ್ರೀತಿ-ಪ್ರೇಮದ ವಿಚಾರ ಮನಸ್ತಾಪವಾಗುವ ಸಾಧ್ಯತೆ ಇದೆ.

ಪಂಡಿತ್ ಗುರು ದೀಕ್ಷಿತ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9036933032

ತುಲಾ ರಾಶಿ

ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುವುದು. ತಮ್ಮ ವಿವೇಚನೆಗಳು ವಿಳಂಬವಾಗುವುದು. ಗೃಹ ಕಟ್ಟಡ ,ನಿವೇಶನ ಖರೀದಿ ವಕ್ರದೃಷ್ಟಿಯಿಂದ ಮುಂದೂಡುವುದು. ಯಾರೋ ಮಾಡಿರುವಂತಹ ಅಪವಾದಕ್ಕೆ ತಾವು ಬಲಿಪಶು ಆಗುವಿರಿ. ತಮ್ಮ ವಿರೋಧಿಗಳು ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿ ವಹಿಸಿ. ದೂರದ ಪ್ರಯಾಣ ಬೇಡ. ತಾವು ಮಧ್ಯಸ್ಥಿಕೆವಹಿಸಿ ಸಾಲ ಕೋಡಿಸಬಾರದು. ಉದ್ಯೋಗದಲ್ಲಿ ಕೆಲಸಗಾರರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಹಣಕಾಸಿನ ಚಿಂತೆ ಕಾಡಲಿದೆ. ತಾವು ಹಮ್ಮಿಕೊಂಡಿರುವ ಯೋಜನೆಗಳು ಯಾರಿಂದಲೂ ಸಹಕಾರ ಸಿಗಲಾರದು.

ಪಂಡಿತ್ ಗುರು ದೀಕ್ಷಿತ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9036933032

ವೃಶ್ಚಿಕ ರಾಶಿ

ಕುಟುಂಬದ ಬಗ್ಗೆ ಚಿಂತನೆ ಮಾಡುವಿರಿ. ಮಾತಾಪಿತೃ ಆರೋಗ್ಯದ ಗಮನಹರಿಸಿ. ಪತಿ-ಪತ್ನಿ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವಾಗುವಿರಿ. ಮಕ್ಕಳ ಮದುವೆ ವಿನಾಕಾರಣ ಮುಂದಿಡಲಾಗುವುದು. ತಮ್ಮ ಕುಟುಂಬ ಸದಸ್ಯರ ಮೇಲೆ ಮಧ್ಯಸ್ಥಿಕೆ ಜನಗಳಿಂದ ಕಿರಿಕಿರಿ ಸೃಷ್ಟಿಯಾಗುವುದು. ಉದ್ಯೋಗ ಹುಡುಕುವವರು ನಿರಾಶೆ ಆಗಲಿದೆ. ಮನೆ ಕಟ್ಟುವುದು ಅರ್ಧಕ್ಕೆ ನಿಲ್ಲುವುದು. ಕೆಲಸಗಾರರು ಪದೇ ಪದೇ ಗೈರುಹಾಜರಿ ಆಗುವರು. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮನನೊಂದುವಿರಿ. ತಾವು ಏನೇ ಪ್ರಯತ್ನ ಪಟ್ಟರೂ ನಿರಾಶೆಯಾಗಲಿದೆ.
ಪಂಡಿತ್ ಗುರು ದೀಕ್ಷಿತ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9036933032

ಧನಸ್ಸು ರಾಶಿ

ಸರ್ಕಾರಿ ವ್ಯವಹಾರಗಳಲ್ಲಿ ವಿಳಂಬವಾಗುವುದು. ವ್ಯಾಪಾರ-ವ್ಯವಹಾರಗಳಲ್ಲಿ ಮಂದ ಪ್ರಗತಿ ಆಗಲಿದೆ. ತಮ್ಮ ತಿರುಗಾಟವೇ ಹೆಚ್ಚಾಗಲಿದೆ. ಯೋಚನೆ ಹೆಚ್ಚಾಗುವುದು ಸಾಧನೆ ಶೂನ್ಯ ಆಗಲಿದೆ. ಮಂಗಳ ಕಾರ್ಯಗಳು ವಿನಾ ಕಾರಣ ಮುಂದೂಡುವಿರಿ. ರೈತರು ಕೃಷಿಯಲ್ಲಿ ಉತ್ತಮ ಫಲ ನಿರೀಕ್ಷಣೆ ಮಾಡುವಿರಿ. ಹೋಟೆಲ್ ಉದ್ಯಮದಾರರು, ದಿನಿಸಿ ವ್ಯಾಪಾರಸ್ಥರಿಗೆ, ಬಟ್ಟೆ ವ್ಯಾಪಾರಸ್ಥರಿಗೆ, ಕಾಳು ಪದಾರ್ಥ ವ್ಯಾಪಾರಸ್ಥರಿಗೆ ಹಣಕಾಸಿನ ಪರಿಸ್ಥಿತಿ ಸುಧಾರಣೆಯಾಗಲಿದೆ. ಬಂಧು-ಮಿತ್ರರಿಂದ ತಮಗೆ ಸಹಾಯ ಸಿಗಲಿದೆ. ಹೊಸ ಮನೆ ಕಟ್ಟುವ ವಿಚಾರ ಯಶಸ್ವಿಯಾಗಲಿದೆ. ಹೊಸ ನಿವೇಶನ ಅಥವಾ ಜಮೀನು ಖರೀದಿ ಯಶಸ್ವಿಯಾಗಲಿದೆ.
ಪಂಡಿತ್ ಗುರು ದೀಕ್ಷಿತ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9036933032

ಮಕರ ರಾಶಿ

ಆತ್ಮೀಯರು ನಿಮ್ಮಿಂದ ದೂರ ಆಗುವರು, ಇದರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪಾಲುಗಾರಿಕೆ ವ್ಯವಹಾರದಲ್ಲಿ ಮನಸ್ತಾಪವಾಗುವ ಸಾಧ್ಯತೆ. ಮನಸ್ಸಿನಲ್ಲಿ ಹರಿವ ಪ್ರೀತಿ-ಪ್ರೇಮ ಲಗಾಮು ಹಾಕಿ. ನಿಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಿರಿ. ಮಾತಾಪಿತೃ ಆರೋಗ್ಯದ ಮೇಲೆ ಗಮನವಿರಲಿ. ಹೊಸ ನಾಲ್ಕು ಚಕ್ರದ ವಾಹನ ಖರೀದಿಸುವ ಸಾಧ್ಯತೆ. ಹಳೆ ನಿವೇಶನ ನವೀನಕರಣ ಬಗ್ಗೆ ಚಿಂತನೆ ಮಾಡುವಿರಿ.

ಪಂಡಿತ್ ಗುರು ದೀಕ್ಷಿತ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9036933032

ಕುಂಭ ರಾಶಿ

ಆತ್ಮೀಯರು ನಿಮ್ಮಿಂದ ದೂರ ಆಗುವರು, ಇದರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪಾಲುಗಾರಿಕೆ ವ್ಯವಹಾರದಲ್ಲಿ ಮನಸ್ತಾಪವಾಗುವ ಸಾಧ್ಯತೆ. ಮನಸ್ಸಿನಲ್ಲಿ ಹರಿವ ಪ್ರೀತಿ-ಪ್ರೇಮ ಲಗಾಮು ಹಾಕಿ. ನಿಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಿರಿ. ಮಾತಾಪಿತೃ ಆರೋಗ್ಯದ ಮೇಲೆ ಗಮನವಿರಲಿ. ಹೊಸ ನಾಲ್ಕು ಚಕ್ರದ ವಾಹನ ಖರೀದಿಸುವ ಸಾಧ್ಯತೆ. ಹಳೆ ನಿವೇಶನ ನವೀನಕರಣ ಬಗ್ಗೆ ಚಿಂತನೆ ಮಾಡುವಿರಿ.

ಪಂಡಿತ್ ಗುರು ದೀಕ್ಷಿತ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9036933032

ಮೀನ ರಾಶಿ

ಆತ್ಮೀಯರು ನಿಮ್ಮಿಂದ ದೂರ ಆಗುವರು, ಇದರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪಾಲುಗಾರಿಕೆ ವ್ಯವಹಾರದಲ್ಲಿ ಮನಸ್ತಾಪವಾಗುವ ಸಾಧ್ಯತೆ. ಮನಸ್ಸಿನಲ್ಲಿ ಹರಿವ ಪ್ರೀತಿ-ಪ್ರೇಮ ಲಗಾಮು ಹಾಕಿ. ನಿಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಿರಿ. ಮಾತಾಪಿತೃ ಆರೋಗ್ಯದ ಮೇಲೆ ಗಮನವಿರಲಿ. ಹೊಸ ನಾಲ್ಕು ಚಕ್ರದ ವಾಹನ ಖರೀದಿಸುವ ಸಾಧ್ಯತೆ. ಹಳೆ ನಿವೇಶನ ನವೀನಕರಣ ಬಗ್ಗೆ ಚಿಂತನೆ ಮಾಡುವಿರಿ.
ಪಂಡಿತ್ ಗುರು ದೀಕ್ಷಿತ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9036933032

ಗುರು ದೀಕ್ಷಿತ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ
ಮೊಬೈಲ್ ಸಂಖ್ಯೆ- 9036933032

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

Published

on

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.

6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ

Published

on

ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.

ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.

ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.

ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.

ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.

ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.

ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending