ದಿನದ ಸುದ್ದಿ
ಕನ್ನಡ ಸಾಹಿತ್ಯ ಪರಿಷತ್ತಿನ “ ಸಿರಿಗನ್ನಡಂ ಗೆಲ್ಗೆ “ ಘೋಷವಾಕ್ಯ ಅನುಷ್ಠಾನಗೊಳಿಸಿದ್ದು ಬಿಎಂಶ್ರೀ : ಪ್ರೊ.ಎಚ್.ಎಸ್.ಹರಿಶಂಕರ್
ಸುದ್ದಿದಿನ,ದಾವಣಗೆರೆ : ಆಧುನಿಕ ಕನ್ನಡದ ನವಯುಗದ ಪ್ರವರ್ತಕ ರಲ್ಲಿ ಅಗ್ರಗಣ್ಯರಾಗಿದ್ದ ‘ ಶ್ರೀ ‘ ಎಂಬ ನಾಮಾಂಕಿತದಲ್ಲಿ ಪ್ರಕೀರ್ತಿತರಾದವರು ಬಿ. ಎಂ. ಶ್ರೀಕಂಠಯ್ಯನವರು. ಇವರು ಕನ್ನಡದ ಕಣ್ವ ರು, ಹೊಸಗನ್ನಡ ಕಾವ್ಯ ಕುಲಪತಿಗಳು ಎಂದು ನಾಡಿಗೆ ನಾಡೇ ಅವರನ್ನು ಗೌರವಿಸಿದೆ. ಇವರು ನವೋದಯ ಕಾವ್ಯ ಸಾಹಿತ್ಯದ ಪ್ರವರ್ತಕ,ಪಿತಾಮಹ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿಯ ವಿಶ್ರಾಂತ ಪ್ರಾಧ್ಯಾಪಕರು ಪ್ರೊ.ಎಚ್ಎಸ್ ಹರಿಶಂಕರ್ ಅವರು ನುಡಿದರು.
ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಅಂತರ್ಜಾಲ ಕನ್ನಡ ನುಡಿ ಹಬ್ಬ ಕಾರ್ಯಕ್ರಮದಲ್ಲಿ ಆಚಾರ್ಯ ಬಿಎಂಶ್ರೀ ಅವರ ಸಾಹಿತ್ಯ ವಿಷಯವನ್ನು ಕುರಿತಾಗಿ 12 ನೇ ದಿನದ ಉಪನ್ಯಾಸ ನೀಡಿದರು.
1921 ರಲ್ಲಿ ಬಿ ಎಂ ಶ್ರೀ ಅವರ ಇಂಗ್ಲಿಷ್ ಗೀತೆಗಳು ಪ್ರಕಟಗೊಂಡಿದ್ದು, ಯುವ ಕನ್ನಡಿಗರ ಹೃನ್ಮನಗಳನ್ನು ಗೆದ್ದಿತ್ತು. ಅದುವರೆಗೂ ಹಳೆಗನ್ನಡ ಸಾಹಿತ್ಯ ರಚನೆಯನ್ನು ಕೇಳಿ ಕೇಳಿ ಜಡ್ಡು ಗಟ್ಟಿದ್ದ ಕವಿಗಳಿಗೆ ಇವರ ಕವನಗಳ ದಾಟಿ ಬಹು ಅಪ್ಯಾಯಮಾನವಾಗಿ ಕಂಡಿತು.
ಹಿಡಿದು ಮಂಜು ಬೀಳುತಿತ್ತು, ಚುಕ್ಕಿ ಕಣ್ಣು ಮಿಟುಕುತಿತ್ತು, ಕುಡಿಯೋ ಕಂದ ಕುಡಿಯೋ ಎಂಬ ಮಾತು ಕಿವಿಗೆ ಬಿತ್ತು, ತಿರುಗಿ ನೋಡಲೊಬ್ಬೆ ಆಚೆ, ಒಬ್ಬಳಲ್ಲಿ ಹೆಣ್ಣುಮಗಳು, ನರೆಯ ಬಿಳುಪು ಕುರಿಯ ಮರಿಯ ತಲೆಯ ತಡಹುತ್ತಿದ್ದಳು. ಎಂಬ “ಮುದ್ದಿನ ಕುರಿ “ ಕವನದ ಈ ಸಾಲುಗಳನ್ನು ಕೇಳುತ್ತಿದ್ದಂತೆಯೇ ಒಂದು ರೀತಿ ರೋಮಾಂಚನವಾಯಿತು. ಅರೆ ಇದೇನು? ಇದ್ಯಾವ ಚಂದಸ್ಸು? ಕೇಳಲು ಹಿತವಾಗಿದೆ ಎಂದು ಕೇಳಿ ಬಂದದ್ದು ನಿಜ. ಬಿ ಎಂ ಶ್ರೀ ಅವರ ಕವನಗಳು ಜನರನ್ನು ಮೋಡಿ ಮಾಡಿ ಹಿಡಿದಿಟ್ಟಿದ್ದವು. ಮುಂದಿನ ಹೊಸಗನ್ನಡದ ಪೀಳಿಗೆಯ ಕವಿಗಳಿಗೆ ಕವಿತೆಗಳಿಗೆ ಸ್ಪೂರ್ತಿ ಕೊಟ್ಟವು ಎಂದರು.
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು ಬಿ ಎಂ ಶ್ರೀಕಂಠಯ್ಯ. ಇವರು 03:01: 1884 ರಂದು. ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಎಂಬ ಹಳ್ಳಿಯಲ್ಲಿ ಇವರ ತಾತನ ಮನೆಯಲ್ಲಿ ಮೈಲಾರಯ್ಯ ಮತ್ತು ಭಾಗೀರಥಮ್ಮನವರ ಪುತ್ರರಾಗಿ ಜನಿಸಿದರು.
ಇವರ ಬಾಲ್ಯ ಶಿಕ್ಷಣ ಶ್ರೀರಂಗಪಟ್ಟಣದಲ್ಲಿ ನಡೆದಿದ್ದು 1907 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿ ಪಡೆದು 1909 ರಲ್ಲಿ ಮದ್ರಾಸ್ ನಲ್ಲಿ ಎಂ ಎ ಪದವಿ ಪಡೆದುಕೊಂಡರು. ಮುಂದೆ 1910 ರಲ್ಲಿ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡು 1 9 2 3 ರಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸಿದರು.
ಮೊದಮೊದಲು ಬಿಎಂಶ್ರೀ ಅವರು ಕನ್ನಡದ ಬಗ್ಗೆ ಅಷ್ಟಾಗಿ ಒಲವು ತೋರುತ್ತಿರಲಿಲ್ಲ, ಕನ್ನಡದಲ್ಲಿ ಮಾತನಾಡಿ ಎಂದರೆ ಅವರಿಗೆ ಬಿಗುಮಾನ, ಅವಮಾನ ವಾಗುತ್ತಿದ್ದಂತೆ. ಕನ್ನಡ ಸಭೆಗಳಿಗೆ ಹೋಗುತ್ತಿರಲಿಲ್ಲ. ಆದರೆ ಬಹಳ ಕಾಲ ಈ ಬಿಗುಮಾನ ಉಳಿಯಲಿಲ್ಲ. ಕನ್ನಡದ ಕಂಪು ಇವರನ್ನು ಬಹುಬೇಗ ಆಕರ್ಷಿಸಿತು.
ಕನ್ನಡ ಮಾತು ತಲೆ ಎತ್ತುವ ಬಗೆ ಎಂಬ ವಿಷಯ ಕುರಿತು ತಮ್ಮ ಭಾಷಣದಲ್ಲಿ ಜನರಿಗೆ ತಿಳಿಯದ ಭಾಷೆಯಲ್ಲಿ ಬರೆಯುವುದರಲ್ಲಿ ಯಾವ ಬುದ್ಧಿವಂತಿಕೆಯು ಇಲ್ಲಾ. ಹೊಸಗನ್ನಡವನ್ನೇ ಎಲ್ಲರೂ ಹಿಡಿಯಬೇಕು ಎಂದು ಕರೆಕೊಟ್ಟರು ಅಲ್ಲಿಂದ ಮುಂದೆ ಕನ್ನಡವೇ ಅವರ ಸರ್ವಸ್ವವಾಗಿತ್ತು. ಬಿಎಂಶ್ರೀ ಅವರು ಬರೆದದ್ದು ಸ್ವಲ್ಪವಾದರೂ ನವೋದಯ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಕರುಣಾಳು ಬಾ ಬೆಳಕೆ, ಹಳೆಯ ಪಳಕೆಯ ಮುಖಗಳು, ಕನಕಾಂಗಿ, ದೇಶ ಸೇವಕ, ನನ್ನ ಪ್ರೇಮದ ಹುಡುಗಿ, ಹೀಗೆ ಬಿಎಂಶ್ರೀಯವರು ಅನೇಕ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದು ಗದಾಯುದ್ಧ ನಾಟಕಂ, ಅಶ್ವತ್ಥಾಮ, ಪಾರಸಿಕರು ಇನ್ನು ಹಲವು ಒಳ್ಳೆಯ ಸಾಹಿತ್ಯ ಕೃತಿಗಳನ್ನು ಕನ್ನಡಿಗೆ ಕನ್ನಡಿಗರಿಗೆ ನೀಡಿದ್ದಾರೆ.
ಸಿರಿಗನ್ನಡಂ, ಸಿರಿಗನ್ನಡಂ ಬಾಳ್ಗೆ, ಕನ್ನಡ ತಾಯ್ ಗೆಲ್ಗೆ , ಕನ್ನಡ ತಾಯ್ ಬಾಳ್ಗೆ ಎಂದು ಬಿಎಂಶ್ರೀ ಅವರು ಉದ್ಗರಿಸಿದ್ದಾರೆ. ಇವರಿಗೆ ಕನ್ನಡದ ಬಾವುಟ ವೆಂದರೆ ಇನ್ನಿಲ್ಲದ ಅಭಿಮಾನ ಉತ್ಸಾಹ ಕನ್ನಡದ ಹಿರಿಮೆ ಎಲ್ಲರನ್ನು ರೋಮಾಂಚನಗೊಳಿಸುತ್ತದೆ ಕೆಲವು ಸಾಲುಗಳು ಹೀಗಿವೆ..
ಏರಿಸಿ ಹಾರಿಸಿ ಕನ್ನಡದ ಭಾವುಟ
ಓಹೋ ಕನ್ನಡ ನಾಡು,
ಆಹಾ ಕನ್ನಡ ನುಡಿ,
ಹಾರಿಸಿ, ತೋರಿಸಿ ಕೆಚ್ಚೆದೆಯ ಬಾವುಟ.
ಗಾಳಿಯಲ್ಲಿ ಪಟಪಟ,
ದಾಳಿಯಲ್ಲಿ ಚಟಚಟ,
ಉರಿಯಿತೋ ಉರಿಯಿತೋ
ಹಗೆಯ ಹಠ ಮನೆ-ಮಠ
ಹಾಳ್ ಹಾಳ್ ಸುರಿಯಿತು
ಹಾಗೆಯೇ ಬೀಡ ಕಠ,
ಬಾಳ್ ಕನ್ನಡ ತಾಯ್, ಏಳ್ ಕನ್ನಡ ತಾಯ್,
ಹಾಳ್ ಕನ್ನಡ ತಾಯ್, ಕನ್ನಡಿಗರ ಒಡತಿ ಓ ರಾಜೇಶ್ವರಿ.ಎಂಬ ಬಿಎಂಶ್ರೀ ಅವರ ಕವನ ನಮ್ಮೆಲ್ಲರಿಗೂ ರೋಮಾಂಚನಗೊಳಿಸುತ್ತದೆ.
ಬಿಎಂ ಶ್ರೀಗಳು ಪ್ರಸಿದ್ಧ ವಾಗ್ಮಿಗಳು ತರುಣ ಕನ್ನಡ ಲೇಖಕರಿಗೆ ಇವರ ಪ್ರೋತ್ಸಾಹ ನಿರಂತರವಾಗಿರುತ್ತದೆ ಬಿಎಂಶ್ರೀ ಅವರು 1926 -1930 ರವರೆಗೆ ಮೂರು ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಗುಲ್ಬರ್ಗದಲ್ಲಿ ನಡೆದ ಹದಿನಾಲ್ಕನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿಕೊಂಡಿದ್ದು ಕನ್ನಡಿಗರ ಹೆಮ್ಮೆ ಎಂದು ತಮ್ಮ ಉಪನ್ಯಾಸದಲ್ಲಿ
ಅಧ್ಯಕ್ಷೀಯ ನುಡಿಗಳನ್ನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪ ನವರು ಬಿಎಂಶ್ರೀ ಅವರನ್ನು ಕುರಿತಾಗಿ ಮಾತನಾಡುತ್ತಾ ಬಿಎಂಶ್ರೀ ಅವರು ಆಧುನಿಕ ಕಣ್ಣು ಆಧುನಿಕ ಸಾಹಿತ್ಯದ ಪ್ರವರ್ತಕ ಎಂದು ಬಣ್ಣಿಸುವುದು ರೊಂದಿಗೆ ಅವರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಗಳನ್ನು ಸ್ಮರಿಸಿಕೊಳ್ಳುತ್ತಾ ಎಂದು ಕನ್ನಡ ಸಾಹಿತ್ ಪರಿಷತ್ತಿಗೆ ಮಹಾನ್ ಕಾಯಕ ಕಾಯಕಲ್ಪ ತಂದುಕೊಟ್ಟ ಮಹಾನ್ ಚೇತನ ಎಂದು ಬಣ್ಣಿಸಿದರು.
ಇವರು ಕೊಟ್ಟ ಕೊಡುಗೆಗಳನ್ನು ಕೊಡುಗೆಗಳನ್ನು ನೆನೆಯುತ್ತ ಬಿಎಂಶ್ರೀಯವರು ತಮ್ಮ ಸ್ವಂತ ದುಡಿಮೆಯ 6500 ರೂಪಾಯಿಗಳನ್ನು ವ್ಯಯಮಾಡಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಮುದ್ರಣ ಆರಂಭಿಸಿದ ಸವಿನೆನಪಿಗಾಗಿ ಆಧುನಿಕ ಗೊಂಡಿರುವ” ಬಿಎಂಶ್ರೀಯವರ ಅಚ್ಚುಕೂಟ” ವೆಂತಲೂ ನಾಮಕರಣಕ್ಕೆ ಕಾರಣೀಭೂತರಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ “ಕನ್ನಡ ನುಡಿ” ಎಂಬ ಪತ್ರಿಕೆಯನ್ನು ಪ್ರಕಟಿಸಿದ ಪ್ರಥಮರು. ಕನ್ನಡ ಸಾಹಿತ್ಯ ಪರಿಷತ್ ನಡೆಸುತ್ತಿರುವ ಕಾವ – ಜಾಣ ಪರೀಕ್ಷೆಗಳ ಸ್ಥಾಪನೆಗೂ ಕಾರಣೀಭೂತರಾದರು. ಕನ್ನಡಸಾಹಿತ್ಯಪರಿಷತ್ತಿನ ಲೋಗೋವನ್ನು, ತಮ್ಮ “ ಸಿರಿಗನ್ನಡಂ ಗೆಲ್ಗೆ “ಎಂಬ ಘೋಷವಾಕ್ಯವನ್ನು ಅನುಷ್ಠಾನಗೊಳಿಸಿದರು.
ಶ್ರೀಯುತ ಬಿಎಂಶ್ರೀ ಅವರು ನಾಡಿನ ಉದ್ದಗಲಕ್ಕೂ ಸಂಚರಿಸಿ ಪಾಂಡಿತ್ಯಪೂರ್ಣ ಮಾತುಗಳ ಮೂಲಕ ಆಂಗ್ಲಭಾಷಾ ಶ್ರೇಷ್ಠ ಕವಿಗಳಾದ ವಿಲಿಯಂ ಶೇಕ್ಸ್ಪಿಯರ್, ವಿಲಿಯಂ ವರ್ಡ್ಸ್ವರ್ತ್ ಮುಂತಾದವರ ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಕ್ರಾಂತಿಕಾರಕ ಹೋರಾಟ ಮಾಡಿದ ಧೀಮಂತ ವ್ಯಕ್ತಿ ಎಂದು ಬಣ್ಣಿಸಿದರು. ಮುಂತಾದವರು.
ಆರಂಭದಲ್ಲಿ ಶ್ರೀಮತಿ ವೀಣಾ ಕೃಷ್ಣಮೂರ್ತಿಯವರು ಸರ್ವರನ್ನು ಸ್ವಾಗತಿಸಿದರು. ಹಿಂದಿನ ಸುಗಮ ಸಂಗೀತ ಕಾರ್ಯಕ್ರಮವನ್ನು ಜಾನಪದ ಕಲಾ ತಂಡದ ಸದಸ್ಯರಾದ ಶ್ರೀಮತಿ ರುದ್ರಾಕ್ಷಿ ಬಾಯಿ ಮತ್ತು ಸಂಗಡಿಗರು ನೆರವೇರಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೆ.ಆರ್.ಐ.ಡಿ.ಎಲ್, ಮಾಯಕೊಂಡ ವ್ಯಾಪ್ತಿ ; 20 ಕೋಟಿ ಅನುದಾನ : ತನಿಖೆಗೆ ಒಳಪಡಿಸಲು ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಕೆಆರ್.ಐ.ಡಿ.ಎಲ್ ವಿಭಾಗ-2ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಿಡುಗಡೆಯಾದ ರೂ. 20 ಕೋಟಿ ಮೊತ್ತದ 51 ಕಾಮಗಾರಿಗಳನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ರೂ. 20 ಕೋಟಿ ಅನುದಾನದಲ್ಲಿ ನಡೆದಿರುವ 51 ಕಾಮಗಾರಿಗಳ ಬಗ್ಗೆ ಅನುಮಾನ ಕಂಡುಬಂದಿದ್ದು, ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಕೋರಿದಾಗ ಬಹುತೇಕ ಕಾಮಗಾರಿಗಳು ನಡೆದಿರುವುದಿಲ್ಲ ಎಂಬುದಾಗಿ ಹಿಂಬರಹ ನೀಡಿರುತ್ತಾರೆ. ಹೀಗಾಗಿ 51 ಕಾಮಗಾರಿಗೆ ಸಂಬಂಧಿಸಿದಂತೆ ನಿತೀನ್ ಎಸ್. ಜಾಧವ್, ಸಹಾಯಕ ಕಾರ್ಯಪಾಲಕ ಅಭಿಯಂತರು, ಕೆ.ಆರ್.ಐ.ಡಿ.ಎಲ್, ಮಾಯಕೊಂಡ ಇವರ ವಿರುದ್ಧ ಪ್ರಕರಣ ದಾಖಲಿಸಿ ರೂ. 20 ಕೋಟಿ ಮೊತ್ತದಲ್ಲಿ ನಡೆದಿರುವ 51 ಕಾಮಗಾರಿಗಳನ್ನು ನಿಯಮಾನುಸಾರ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್ಲೈನ್ ಕೌನ್ಸಿಲಿಂಗ್ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.
ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.
ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


