Connect with us

ದಿನದ ಸುದ್ದಿ

ದಾವಣಗೆರೆ – ಜಗಳೂರು ತಾಲ್ಲೂಕು | ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ ಪಟ್ಟಿ

Published

on

ಸುದ್ದಿದಿನ,ದಾವಣಗೆರೆ : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಬುಧವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯ್ತಿಯ ಮೊದಲನೇ 30 ತಿಂಗಳ ಅವಧಿಗೆ ದಾವಣಗೆರೆ ಹಾಗೂ ಜಗಳೂರು ತಾಲ್ಲೂಕಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ತಂತ್ರಾಂಶದ ಮೂಲಕ ಕೆಳಕಂಡ ಪಟ್ಟಿಯನ್ವಯ ವರ್ಗವಾರು ಮೀಸಲಾತಿ ನಿಗದಿಪಡಿಸಲಾಗಯಿತು.

ಜಗಳೂರು ತಾಲ್ಲೂಕು

ಒಟ್ಟು ಸ್ಥಾನಗಳು ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ ‘ಅ’ ಹಿಂದುಳಿದ ವರ್ಗ ‘ಬ’ ಸಾಮಾನ್ಯ ವರ್ಗ22(11) 7(4) 6(3) 0(0) 0(0) 9(4)


ಸಂಖ್ಯೆ | ಗ್ರಾಮ ಪಂಚಾಯಿತಿ ಹೆಸರು | ಅಧ್ಯಕ್ಷ | ಉಪಾಧ್ಯಕ್ಷ


  1. ಗುರುಸಿದ್ದಾಪುರ, ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
  2. ದಿದ್ದಿಗೆ,‌ ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
  3. ದೇವಿಕೆರೆ, ಸಾಮಾನ್ಯ, ಅನುಸೂಚಿತ ಪಂಗಡ
  4. ಗುತ್ತಿದುರ್ಗ, ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
  5. ಬಿಸ್ತುವಳ್ಳಿ, ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
  6. ಸೊಕ್ಕೆ, ಸಾಮಾನ್ಯ(ಮಹಿಳೆ), ಅನುಸೂಚಿತ ಜಾತಿ
  7. ಅಸಗೋಡು, ಸಾಮಾನ್ಯ(ಮಹಿಳೆ), ಅನುಸೂಚಿತ ಪಂಗಡ
  8. ದೊಣ್ಣೆಹಳ್ಳಿ, ಸಾಮಾನ್ಯ(ಮಹಿಳೆ), ಅನುಸೂಚಿತ ಜಾತಿ
  9. ಬಿದರಕೆರೆ, ಸಾಮಾನ್ಯ(ಮಹಿಳೆ), ಅನುಸೂಚಿತ ಜಾತಿ
  10. ಹನುಮಂತಾಪುರ, ಅನುಸೂಚಿತ ಜಾತಿ, ಸಾಮಾನ್ಯ(ಮಹಿಳೆ)
  11. ಬಿಳಿಚೋಡು, ಅನುಸೂಚಿತ ಜಾತಿ, ಸಾಮಾನ್ಯ(ಮಹಿಳೆ)
  12. ಹಾಲೆಕಲ್ಲು, ಅನುಸೂಚಿತ ಜಾತಿ, ಸಾಮಾನ್ಯ
  13. ಅಣಬೇರು, ಅನುಸೂಚಿತ ಜಾತಿ(ಮಹಿಳೆ), ಅನುಸೂಚಿತ ಪಂಗಡ(ಮಹಿಳೆ)
  14. ಕೆಚ್ಚೇನಹಳ್ಳಿ, ಅನುಸೂಚಿತ ಜಾತಿ(ಮಹಿಳೆ), ಸಾಮಾನ್ಯ
  15. ಮುಸ್ಟೂರು, ಅನುಸೂಚಿತ ಜಾತಿ(ಮಹಿಳೆ) ಸಾಮಾನ್ಯ
  16. ತೋರಣಗಟ್ಟೆ, ಅನುಸೂಚಿತ ಜಾತಿ(ಮಹಿಳೆ), ಅನುಸೂಚಿತ ಪಂಗಡ
  17. ಬಸವನಕೋಟೆ, ಅನುಸೂಚಿತ ಪಂಗಡ, ಸಾಮಾನ್ಯ(ಮಹಿಳೆ)
  18. ಕ್ಯಾಸೇನಹಳ್ಳಿ, ಅನುಸೂಚಿತ ಪಂಗಡ, ಸಾಮಾನ್ಯ
  19. ಕಲ್ಲೆದೇವಪುರ, ಅನುಸೂಚಿತ ಪಂಗಡ, ಸಾಮಾನ್ಯ(ಮಹಿಳೆ)
  20. ಹೊಸಕೆರೆ, ಅನುಸೂಚಿತ ಪಂಗಡ(ಮಹಿಳೆ), ಅನುಸೂಚಿತ ಪಂಗಡ(ಮಹಿಳೆ)
  21. ಹಿರೇಮಲ್ಲನಹೊಳೆ, ಅನುಸೂಚಿತ ಪಂಗಡ(ಮಹಿಳೆ), ಸಾಮಾನ್ಯ
  22. ಪಲ್ಲಾಗಟ್ಟೆ, ಅನುಸೂಚಿತ ಪಂಗಡ(ಮಹಿಳೆ), ಅನುಸೂಚಿತ ಪಂಗಡ(ಮಹಿಳೆ)

ದಾವಣಗೆರೆ ತಾಲ್ಲೂಕು

ಒಟ್ಟು ಸ್ಥಾನಗಳು ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ ‘ಅ’ ಹಿಂದುಳಿದ ವರ್ಗ ‘ಬ’ ಸಾಮಾನ್ಯ ವರ್ಗ42(21) 10(5) 6(3) 4(2) 1(1) 21(10)


ಸಂಖ್ಯೆ | ಗ್ರಾಮ ಪಂಚಾಯಿತಿ ಹೆಸರು | ಅಧ್ಯಕ್ಷ | ಉಪಾಧ್ಯಕ್ಷ


  1. ಬೆಳವನೂರು : ಹಿಂದುಳಿದ ‘ಅ’ ವರ್ಗ, ಅನುಸೂಚಿತ ಜಾತಿ
  2. ಆನಗೋಡು : ಹಿಂದುಳಿದ ‘ಅ’ ವರ್ಗ, ಅನುಸೂಚಿತ ಜಾತಿ
    ಆಲೂರು : ಹಿಂದುಳಿದ‘ಅ’ ವರ್ಗ(ಮಹಿಳೆ), ಸಾಮಾನ್ಯ
  3. ಗೋಪಾನಾಳು : ಹಿಂದುಳಿದ‘ಅ’ ವರ್ಗ(ಮಹಿಳೆ), ಸಾಮಾನ್ಯ
  4. ಅತ್ತಿಗೆರೆ : ಹಿಂದುಳಿದ‘ಬ’ ವರ್ಗ(ಮಹಿಳೆ), ಅನುಸೂಚಿತ ಪಂಗಡ
  5. ಆವರಗೊಳ್ಳ : ಸಾಮಾನ್ಯ, ಸಾಮಾನ್ಯ(ಮಹಿಳೆ)
  6. ಶ್ರೀರಾಮನಗರ : ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
  7. ಐಗೂರು : ಸಾಮಾನ್ಯ, ಅನುಸೂಚಿತ ಜಾತಿ
  8. ದೊಡ್ಡಬಾತಿ : ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
  9. ಹಳೇಬಾತಿ : ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
  10. ತೋಳಹುಣಸೆ : ಸಾಮಾನ್ಯ, ಅನುಸೂಚಿತ ಪಂಗಡ(ಮಹಿಳೆ)
  11. ಹೆಬ್ಬಾಳು : ಸಾಮಾನ್ಯ, ಹಿಂದುಳಿದ ‘ಅ’ ವರ್ಗ
  12. ಕುರ್ಕಿ : ಸಾಮಾನ್ಯ, ಸಾಮಾನ್ಯ(ಮಹಿಳೆ)
  13. ಹುಚ್ಚವ್ವನಹಳ್ಳಿ: ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
  14. ಬಾಡ : ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
  15. ಶ್ಯಾಗಲೆ : ಸಾಮಾನ್ಯ, ಸಾಮಾನ್ಯ(ಮಹಿಳೆ)
  16. ಕಡ್ಲೇಬಾಳು : ಸಾಮಾನ್ಯ(ಮಹಿಳೆ), ಅನುಸೂಚಿತ ಪಂಗಡ
  17. ಅಣಜಿ : ಸಾಮಾನ್ಯ(ಮಹಿಳೆ), ಸಾಮಾನ್ಯ
  18. ಹೆಮ್ಮನಬೇತೂರು : ಸಾಮಾನ್ಯ(ಮಹಿಳೆ), ಅನುಸೂಚಿತ ಪಂಗಡ
  19. ಹುಲಿಕಟ್ಟೆ : ಸಾಮಾನ್ಯ (ಮಹಿಳೆ), ಅನುಸೂಚಿತ ಪಂಗಡ(ಮಹಿಳೆ)
  20. ಗುಡಾಳು : ಸಾಮಾನ್ಯ(ಮಹಿಳೆ), ಸಾಮಾನ್ಯ
  21. ನೇರ್ಲಿಗೆ : ಸಾಮಾನ್ಯ (ಮಹಿಳೆ), ಸಾಮಾನ್ಯ
  22. ನರಗನಹಳ್ಳಿ : ಸಾಮಾನ್ಯ(ಮಹಿಳೆ), ಸಾಮಾನ್ಯ
  23. ಅಣಬೇರು : ಸಾಮಾನ್ಯ(ಮಹಿಳೆ), ಅನುಸೂಚಿತ ಜಾತಿ
  24. ಬೇತೂರು : ಸಾಮಾನ್ಯ (ಮಹಿಳೆ), ಅನುಸೂಚಿತ ಜಾತಿ
  25. ಶಿರಮಗೊಂಡನಹಳ್ಳಿ : ಸಾಮಾನ್ಯ(ಮಹಿಳೆ), ಅನುಸೂಚಿತ ಪಂಗಡ(ಮಹಿಳೆ)
  26. ಕಕ್ಕರಗೊಳ್ಳ: ಅನುಸೂಚಿತ ಜಾತಿ , ಸಾಮಾನ್ಯ (ಮಹಿಳೆ)
  27. ಬಸವನಾಳು : ಅನುಸೂಚಿತ ಜಾತಿ, ಸಾಮಾನ್ಯ(ಮಹಿಳೆ)
  28. ಮಳಲ್ಕೆರೆ : ಅನುಸೂಚಿತ ಜಾತಿ ಸಾಮಾನ್ಯ(ಮಹಿಳೆ)
  29. ಮುದಹದಡಿ : ಅನುಸೂಚಿತ ಜಾತಿ , ಸಾಮಾನ್ಯ(ಮಹಿಳೆ)
  30. ಕನಗೊಂಡನಹಳ್ಳಿ : ಅನುಸೂಚಿತ ಜಾತಿ, ಹಿಂದುಳಿದ’ಅ’ವರ್ಗ(ಮಹಿಳೆ)
  31. ಕಂದನಕೋವಿ : ಅನುಸೂಚಿತ ಜಾತಿ(ಮಹಿಳೆ), ಸಾಮಾನ್ಯ
  32. ಕೈದಾಳೆ : ಅನುಸೂಚಿತ ಜಾತಿ(ಮಹಿಳೆ), ಹಿಂದುಳಿದ’ಬ’ವರ್ಗ(ಮಹಿಳೆ)
  33. ಕಂದಗಲ್ಲು: ಅನುಸೂಚಿತ ಜಾತಿ(ಮಹಿಳೆ), ಸಾಮಾನ್ಯ
  34. ಮತ್ತಿ : ಅನುಸೂಚಿತ ಜಾತಿ(ಮಹಿಳೆ), ಸಾಮಾನ್ಯ
  35. ಮಾಯಕೊಂಡ : ಅನುಸೂಚಿತ ಜಾತಿ(ಮಹಿಳೆ), ಸಾಮಾನ್ಯ
  36. ಹೊನ್ನೂರು : ಅನುಸೂಚಿತ ಪಂಗಡ, ಸಾಮಾನ್ಯ(ಮಹಿಳೆ)
  37. ಕೊಡಗನೂರು : ಅನುಸೂಚಿತ ಪಂಗಡ, ಸಾಮಾನ್ಯ(ಮಹಿಳೆ)
  38. ಕುಕ್ಕವಾಡ : ಅನುಸೂಚಿತ ಪಂಗಡ, ಹಿಂದುಳಿದ ‘ಅ’ವರ್ಗ(ಮಹಿಳೆ)
  39. ಕೊಂಡಜ್ಜಿ : ಅನುಸೂಚಿತ ಪಂಗಡ(ಮಹಿಳೆ), ಸಾಮಾನ್ಯ(ಮಹಿಳೆ)
  40. ಹದಡಿ : ಅನುಸೂಚಿತ ಪಂಗಡ(ಮಹಿಳೆ), ಸಾಮಾನ್ಯ
  41. ಲೋಕಿಕೆರೆ : ಅನುಸೂಚಿತ ಪಂಗಡ(ಮಹಿಳೆ), ಹಿಂದುಳಿದ ‘ಅ’ ವರ್ಗ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿಡಿಯೋ | ಕೆಡಿ ಸೆಟ್ಟಲ್ಲಿ ಜೋಗಿ ಪ್ರೇಮ್‌ ಗೆ ಶಿಲ್ಪಾ ಶೆಟ್ಟಿ ಮಾಡಿದ್ದೇನು..?

Published

on

ಸುದ್ದಿದಿನ ಡೆಸ್ಕ್ : ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಶೋ ಮ್ಯಾನ್‌ ಪ್ರೇಮ್‌ ಕತ್ತು ಹಿಸುಕಿ ಕೇಕೆ ಹೊಡೆದಿರೋ ಘಟನೆ ನಡೆದಿದೆ. ಕೆಡಿ ಸಿನಿಮಾದ ಮೂಲಕ ಕನ್ನಡಕ್ಕೆ ಕಂಬ್ಯಾಕ್‌ ಮಾಡಿರೋ ಬಾಲಿವುಡ್‌ ಚೆಲುವೆ ಶಿಲ್ಪಾ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು.

ಕೊನೆಯ ದಿನ ಕಾವೇರಿ ನದಿ ತೀರದಲ್ಲಿ ಕೆಡಿ ಚಿತ್ರೀಕರಣ ನಡೆದಿದ್ದು,ಸತ್ಯವತಿ ಉರುಫ್‌ ಶಿಲ್ಪಾ ಶೆಟ್ಟಿ ಪೋರ್ಷನ್‌ ಶೂಟಿಂಗ್‌ ಕಂಪ್ಲೀಟ್‌ ಆಗಿದೆ. ತಮ್ಮ ಭಾಗದ ಚಿತ್ರೀಕರಣ ಮುಗಿದಿದ್ದೇ ತಡ ಪ್ಯಾಕಪ್‌ ಪ್ಯಾಕಪ್‌ ಅಂತ ಶಿಲ್ಪಾ ಕುಣಿದಾಡಿದ್ದಾರೆ. ಇದೇ ವೇಳೆ ತಮಾಷೆ ಮಾಡುತ್ತಾ ಶೋ ಮ್ಯಾನ್‌ ಪ್ರೇಮ್‌ ಕತ್ತು ಹಿಸುಕಿ ಇವರಿಗೆ ಹಸಿವೇ ಆಗಲ್ಲ ಅನ್ಸುತ್ತೆ. ವಿತೌಟ್‌ ಬ್ರೇಕ್‌ ಕೆಲಸ ಮಾಡ್ತಾರೆ ಅದಕ್ಕೆ ಪ್ರತಿಫಲವಾಗಿ ಸಿನಿಮಾ ಅದ್ಭುತವಾಗಿ ಬಂದಿದೆ ಎಂದಿದ್ದಾರೆ.

ಜೋಗಿ ಪ್ರೇಮ್‌ ಮಿಸ್ಟರ್‌ ಪರ್ಫೆಕ್ಷನಿಸ್ಟ್‌ ಎಂದಿರೋ ಶಿಲ್ಪಾ ಶೆಟ್ಟಿ, ಪ್ರೇಮ್‌ ಕಲ್ಪನೆಯಲ್ಲಿ ಅರಳಿರೋ ಸತ್ಯವತಿ ಪಾತ್ರ ನಂಗೆ ಬಹಳ ಹಿಡಿಸಿದೆ, ಕೆಡಿ ಮೇಲೆ ನಿರೀಕ್ಷೆ ಹೆಚ್ಚಿದೆ ಎಂತಲೂ ತಿಳಿಸಿದ್ದಾರೆ. ಇಡೀ ಕೆಡಿ ಟೀಮ್‌ ಜೊತೆ ಸಂತೋಷವಾಗಿ ಕಾಲ ಕಳೆದು ಮುಂಬೈಗೆ ವಾಪಾಸ್‌ ಆಗಿದ್ದಾರೆ. ಅಂದ್ಹಾಗೇ, ಕೊನೆಯ ದಿನ ಶೂಟಿಂಗ್‌ ಸೆಟ್‌ನಲ್ಲಿ ನಡೆದ ತರ್ಲೆ ತಮಾಷೆಯನ್ನ ವಿಡಿಯೋ ಮೂಲಕ ನಟಿ ಶಿಲ್ಪಾ ಶೆಟ್ಟಿ ತಮ್ಮ ಸೋಷಿಯಲ್‌ ಸೈಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ; ವಿಡಿಯೋ ನೋಡಿ

https://www.instagram.com/reel/C7l1UEfNIvA/?igsh=bDQ5NDVhMHpxYWc3

ಶಿಲ್ಪಾ ಶೆಟ್ಟಿ ಇತ್ತೀಚೆಗೆ ‘ಕೆಡಿ’ ಸಿನಿಮಾದ ಶೂಟಿಂಗ್ ಬಿಡುವಿನಲ್ಲಿ ನಂಜನಗೂಡಿನ ನಂಜುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರಿಗೆ ಪ್ರಾರ್ಥನೆ ಸಲ್ಲಿಸಿ, ದೇವಾಲಯದ ಆವರಣದಲ್ಲಿ ಕುಳಿತು ಅವರು ಧ್ಯಾನ ಮಾಡಿದ್ದರು. ಆ ಸಂದರ್ಭದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದವು.

ಇದೀಗ ಕೆಡಿ ಕೊನೆಯ ದಿನದ ಶೂಟಿಂಗ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ. ‘ಪ್ರೀತ್ಸೋದ್ ತಪ್ಪಾ’, ‘ಆಟೋ ಶಂಕರ್’, ‘ಒಂದಾಗೋಣ ಬಾ’ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದ ಮಂಗಳೂರು ಚೆಲುವೆ ಇದೀಗ ಕೆಡಿ ಮೂಲಕ ಮತ್ತೊಮ್ಮೆ ಸ್ಯಾಂಡಲ್‌ವುಡ್‌ಗೆ ರೀಎಂಟ್ರಿ ಕೊಟ್ಟಿದ್ದಾರೆ.

19 ವರ್ಷಗಳ ನಂತರ ಮತ್ತೊಮ್ಮೆ ಕರುನಾಡಲ್ಲಿ ದಿಬ್ಬಣ ಹೊರಡಲಿದ್ದಾರೆ. ಕೆಜಿಎಫ್‌ ನಂತರ ಅಧೀರ ಸಂಜಯ್‌ ದತ್ತ್‌ ಮತ್ತೆ ಕನ್ನಡಕ್ಕೆ ಮರಳಿದ್ದಾರೆ.ಕ್ರೇಜಿಸ್ಟಾರ್‌ ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದ ಕಲಾವಿದರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜೂನ್. 1 ರಿಂದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

Published

on

ಸುದ್ದಿದಿನ,ದಾವಣಗೆರೆ : ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕೆರಿಯರ್ ಗೈಡ್‍ನೆಸ್, ಹೈಯರ್ ಎಜುಕೇಶನ್ ಮತ್ತು ಕೆರಿಯರ್ ಅಪಾರ್ಚುನಿಟಿಸ್‍ಗಾಗಿ ಜೂನ್ 1 ಮತ್ತು 3 ರಂದು ಎರಡು ದಿನಗಳ ಕಾರ್ಯಗಾರವನ್ನು ಆನ್‍ಲೈನ್ ವೆಮಿನಾರ್ ಮೂಲಕ ಆಯೋಜಿಸಲಾಗಿದೆ.

ಜೂನ್.1 ರಂದು ವೆಮಿನಾರ್ ನಂ. 25208106583 ಅಂಡ್ ಪಾಸ್ ವಾರ್ಡ್ qsSKG4Dsh84 ಮತ್ತು ಜೂನ್ 3 ರಂದು ವೆಮಿನಾರ್ ನಂ.25259292738 ಅಂಡ್ ಪಾಸ್ ವಾರ್ಡ್ upW2Vtrxh22 ಇದರೊಂದಿಗೆ ಪದವಿ ಪೂರ್ವ ವಿದ್ಯಾರ್ಥಿಗಳು ಭಾಗವಹಿಸಿ ಉನ್ನತ ವ್ಯಾಸಂಗ ಮತ್ತು ಉತ್ತಮ ಉದ್ಯೋಗಕ್ಕೆ ವಿವರವಾದ ಮಾಹಿತಿಯನ್ನು ಪಡೆಯಬಹುದು.

ಕಾರ್ಯಾಗಾರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ನಾಲ್ಕು ವಿಜ್ಞಾನಿಗಳು ಮೂಲ ವಿಜ್ಞಾನ, ಕೃಷಿ, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವ್ಯಾಸಂಗದ ಬಗ್ಗೆ ಸಲಹೆಗಳನ್ನು ನೀಡಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಉಮೇಶ ಘಾಟಗೆ – 9743084194 & ಚಂದ್ರಶೇಖರಮೂರ್ತಿ – 9686449019 ಅಥವಾ ವೆಬ್ ಸೈಟ್; www.kstacademy.in ವೀಕ್ಷಿಸಬಹುದಾಗಿದೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ.ರಮೇಶ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ | ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ

Published

on

ಸುದ್ದಿದಿನ,ದಾವಣಗೆರೆ : ವಿಧಾನ ಪರಿಷತ್‍ನ ಆಗ್ನೆಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ಜೂನ್ 3 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾರರಾಗಿರುವ ಶಿಕ್ಷಕರಿಗೆ ಹಾಗೂ ಪದವೀಧರರಿಗೆ ಮತದಾನ ಮಾಡಲು ವಿಶೇಷ ಸಾಂದರ್ಭಿಕ ರಜೆಯನ್ನು ನೀಡಲಾಗಿರುತ್ತದೆ.

ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ಸೀಮಿತವಾದಂತೆ ಚಲಾಯಿಸಲಿರುವ ಮತದಾರರಿಗೆ ಮತದಾನದ ದಿನವಾದ ಜೂನ್ 3 ರ ಸೋಮವಾರದಂದು ವಿಶೇಷ ಸಾಂದರ್ಭಿಕ ರಜೆ ಯನ್ನು ಮಂಜೂರು ಮಾಡಲು ಆದೇಶಿಸಲಾಗಿದೆ.

ಮತದಾನ ಮಾಡುವ ಸಮಯದಲ್ಲಿ ಮತದಾರರನ್ನು ಗುರುತಿಸಲು ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ ಮುಖ್ಯ ದಾಖಲಾತಿಯಾಗಿ ಹಾಜರು ಪಡಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದವರು ಗುರುತಿನ ಚೀಟಿ ಹೊಂದಿಲ್ಲದಿದ್ದಲ್ಲಿ ಅಂತಹವರು ಭಾರತ ಚುನಾವಣಾ ಆಯೋಗವು ನಿರ್ಧರಿಸಿರುವ ಪೂರಕ ದಾಖಲಾತಿಗಳ ಪೈಕಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶವಿರುತ್ತದೆ.

ಪೂರಕ ದಾಖಲಾತಿ

ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್‍ಕಾರ್ಡ್, ಇಂಡಿಯಾನ್ ಪಾಸ್ ಪೋರ್ಟ್, ಕೇಂದ್ರ, ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳು ಅಥವಾ ಇತರ ಖಾಸಗಿ ಕೈಗಾರಿಕಾ ಮನೆಗಳಿಂದ ಅದರ ಉದ್ಯೋಗಿಗಳಿಗೆ ನೀಡಲಾದ ಸೇವಾ ಗುರುತಿನ ಕಾರ್ಡ್, ಸಂಸದರು, ಶಾಸಕರು, ಎಂಎಲ್‍ಸಿಗಳಿಗೆ ಅಧಿಕೃತ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆಗಳಿಂದ ನೀಡಲಾದ ಸೇವಾ ಗುರುತಿನ ಕಾರ್ಡ್‍ಗಳು, ಇದರಲ್ಲಿ ಶಿಕ್ಷಕರು, ಪದವೀಧರರ ಕ್ಷೇತ್ರದ ಮತದಾರರನ್ನು ನೇಮಿಸಿಕೊಳ್ಳಬಹುದು, ವಿಶ್ವವಿದ್ಯಾಲಯವು ನೀಡಿದ ಪದವಿ, ಡಿಪ್ಲೋಮಾ ಮೂಲ ಪ್ರಮಾಣ ಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡಿದ ದೈಹಿಕನ್ಯೂನತೆಯ ಪ್ರಮಾಣ ಪತ್ರ, ವಿಶಿಷ್ಟ ಅಂಗವೈಕಲ್ಯ ಕಾರ್ಡ್(UDID) ಮೂಲಕ ಮತದಾನ ಮಾಡಬಹುದು ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending