Connect with us

ದಿನದ ಸುದ್ದಿ

ಆತ್ಮಕತೆ | ವಿಶ್ವವಿದ್ಯಾಲಯದ ವಿರುದ್ಧ ನಡೆಸಿದ ಎರಡು ಧರಣಿಗಳು

Published

on

  • ರುದ್ರಪ್ಪ ಹನಗವಾಡಿ

ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ, ಕುವೆಂಪು ಅವರ ಮಾನಸಪುತ್ರರೆಂದೇ ಖ್ಯಾತರಾಗಿದ್ದ ಕನ್ನಡದ ಗದ್ಯ ಬರಹಗಾರ ಪ್ರೊ. ದೇ.ಜ.ಗೌ. ಅವರು ಎರಡು ಅವಧಿಗೆ ಉಪಕುಲಪತಿಗಳಾಗಿದ್ದರು. ಅವರ ಆಡಳಿತಾವಧಿಯಲ್ಲಿಯೇ ಹಲವು ಹೊಸ ಇಲಾಖೆ ಮತ್ತು ಗಂಗೋತ್ರಿಯಲ್ಲಿನ ಅನೇಕ ಹೊಸ ಕಟ್ಟಡಗಳು ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಮಾಡಿಸಿದ್ದರು. ಹೀಗಿರುವಾಗ ನಾವು ಫೈನಲ್ ಎಂ.ಎ.ನಲ್ಲಿರುವಾಗ ಪ್ರಥಮ ಎಂ.ಎ., ಎಂ.ಎಸ್ಸಿ., ಎಂ.ಕಾಂ., ಗಳಲ್ಲಿ ಸೇರಿಸಿಕೊಳ್ಳುವಾಗ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ಬಂದ ಕಾರಣ ಸಮಾಜವಾದಿ ಯುವಜನ ಸಭಾ ವತಿಯಿಂದ ಪ್ರತಿಭಟಿಸಲು ತೀರ್ಮಾನಿಸಲಾಯಿತು.

ಮೊದಲನೆಯದಾಗಿ ವಿಶ್ವವಿದ್ಯಾಲಯದ ಪಿ.ಜಿ. ಗಳಲ್ಲಿ ಪ್ರವೇಶಾವಕಾಶಗಳು, ವಿದ್ಯಾರ್ಥಿಗಳು ಆಯಾ ವಿಷಯಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅವಕಾಶವನ್ನು ಪಡೆಯುತ್ತಿದ್ದರು. ನಾನು 1972-73ನೇ ಸಾಲಿನಲ್ಲಿ ಸೇರಿದಾಗಲೂ ಹಲವು ವಿಷಯಗಳಲ್ಲಿ ಪ್ರವೇಶಾವಕಾಶದ ಕೊನೆಯ ಹಂತದಲ್ಲಿ ಮಂತ್ರಿ ಮಹೋದಯರೋ ಇಲ್ಲ ವಿಶ್ವವಿದ್ಯಾಲಯದಲ್ಲಿನ ಪ್ರೊಫೆಸರ್‌ಗಳ ಶಿಫಾರಸ್ಸಿನಿಂದ ಒಂದೋ ಎರಡೋ ಕಡಿಮೆ ಅಂಕ ಪಡೆದವರಿಗೂ ಸೀಟು ಕೊಡುತ್ತಿದ್ದರು. ಇವೆಲ್ಲ ಬಹಳ ದಿನಗಳ ನಂತರ ತಿಳಿಯುತ್ತಿದ್ದವು. ಆದರೆ 1973-74 ಆರಂಭಿಕ ಪ್ರವೇಶದಲ್ಲಿ ಅನೇಕ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಿದ್ದರೂ ಹಲವಾರು ವ್ಯಕ್ತಿಗಳ ಶಿಫಾರಸ್ಸಿನ ಹಿನ್ನೆಲೆಯಲ್ಲಿ 8-10 ವಿದ್ಯಾರ್ಥಿಗಳು ಹಲವಾರು ಸ್ನಾತಕೋತ್ತರ ಶಾಖೆಗಳಲ್ಲಿ ಸೇರ್ಪಡೆಯಾಗಿದ್ದರು.

ಅವುಗಳ ವಿರುದ್ಧ ಸಮಾಜವಾದಿ ಯುವಜನ ಸಭಾದ ವಿದ್ಯಾರ್ಥಿಗಳು ದೇವನೂರು ಮಹಾದೇವನ ನೇತೃತ್ವದಲ್ಲಿ ಕ್ರಾರ‍್ಡ್ ಹಾಲ್ ಎದುರು ಧರಣಿ ಕೂತಿದ್ದೆವು. ಸಣ್ಣದೊಂದು ಪೆಂಡಾಲ್ ಹಾಕಿಕೊಂಡು ವಿಶ್ವವಿದ್ಯಾಲಯದ ಅತ್ಯುನ್ನತ ಕಲಿಕಾ ಕೇಂದ್ರಗಳಲ್ಲಿ ಕ್ರಮಬದ್ಧವಲ್ಲದ ಪ್ರವೇಶಗಳನ್ನು ರದ್ದುಪಡಿಸಲು ಆಗ್ರಹಿಸಿ ಧರಣಿ ನಡೆಯುತ್ತಿತ್ತು. ಈ ಧರಣಿ ಪ್ರಾರಂಭವಾಗುತ್ತಿದ್ದಂತೆ ಎಲ್ಲೆಲ್ಲಿ ಎಷ್ಟೆಷ್ಟು ವಿದ್ಯಾರ್ಥಿಗಳನ್ನು ಶಿಫಾರಸ್ಸಿನ ಮೇರೆಗೆ ಪ್ರವೇಶ ಪಡೆದಿದ್ದಾರೆ ಎನ್ನುವ ಚರ್ಚೆ ಬಂದು ರಾಜ್ಯಶಾಸ್ತç ವಿಭಾಗದಲ್ಲಿ ಅತ್ಯಂತ ಹೆಚ್ಚು ಅನಧಿಕೃತ ಪ್ರವೇಶ ಆಗಿದ್ದವೆಂದು ತಿಳಿದು ಬಂದಿತ್ತು.

ಉಳಿದ ವಿಭಾಗಗಳಲ್ಲಿ ಒಂದು ಎರಡು ಹೀಗೆ ಇದ್ದರೆ, ಕೆ.ಬಿ.ವೈ. ತೋಟಪ್ಪನವರು ಮುಖ್ಯಸ್ಥರಾಗಿದ್ದ ರಾಜ್ಯಶಾಸ್ತç ವಿಭಾಗದಲ್ಲಿ ಅದು ಹೆಚ್ಚಾಗಿತ್ತು. ಹೀಗೆ ಧರಣಿ ಮಾಡುತ್ತಿದ್ದ ನಮ್ಮಲ್ಲಿಗೆ ಮಹೇಶ ರಾಜ್ಯಶಾಸ್ತç ವಿಭಾಗಕ್ಕೆ ಶಿಫಾರಸ್ಸಿನಲ್ಲೇ ಪ್ರವೇಶ ಪಡೆದವನು, ನಮಗೆಲ್ಲ ಇಡ್ಲಿ ಚಟ್ನಿ ಕಟ್ಟಿಸಿಕೊಂಡು ಬಂದು ಕೊಟ್ಟನು. ಅವನ ವಿರುದ್ಧವೇ ನಾವು ಧರಣಿ ಕೂತಿದ್ದರೂ, ಯಾವ ಭಾವಾವೇಶವೂ ಇಲ್ಲದೆ, ಅವನನ್ನು ನೋಡಿ ನಮಗೆ ಅತ್ಯಾಶ್ಚರ್ಯವಾಗಿತ್ತು. ಎಲ್ಲ ಅನಧಿಕೃತ ಪ್ರವೇಶಾರ್ಥಿಗಳನ್ನು ತೆಗೆದು ಹಾಕಿದರೆ ನನಗೇನು ಬೇಸರವಿಲ್ಲ. ನಮ್ಮಪ್ಪನಿಗೆ ಸ್ವಲ್ಪ ಬೇಜಾರಾಗಬಹುದೆಂದು ಹೇಳಿದ್ದು ಈಗ ನೆನಪಾಗುತ್ತಿದೆ. ನಮ್ಮ ಧರಣಿಯಿಂದಾಗಿ ಈಗಾಗಲೇ ಆಗಿರುವ ಪ್ರವೇಶಾರ್ಥಿಗಳನ್ನು ತೆಗೆದು ಹಾಕಲಿಲ್ಲ. ಮುಂದಿನ ವರ್ಷಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿ ಪ್ರೊಫೆಸರ್‌ಗಳು ಪ್ರವೇಶಗಳಿಗೆ ಅರ್ಹವಾದ ವಿದ್ಯಾರ್ಥಿಗಳ ಅರ್ಜಿಗಳನ್ನು ಕುಲಪತಿಗಳ ಅನುಮೋದನೆ ಪಡೆದು, ನಂತರ ಪ್ರವೇಶಾರ್ಥಿಗಳಿಗೆ ಪ್ರವೇಶ ನೀಡುವ ಪರಿಪಾಲನೆ ಜಾರಿಗೆ ಬಂದಿದ್ದೊಂದು ಎಸ್.ವೈ.ಎಸ್. ಸಂಘಟನೆಯ ಸಾಧನೆ.

ಜೊತೆಗೆ ನಾನೂ ಕೂಡ, ಕಳೆದ ವರ್ಷವಷ್ಟೇ ಪಾರ್ವತಕ್ಕನವರ ಶಿಫಾರಸ್ಸಿನಿಂದ ಮೂರನೇ ಲಿಸ್ಟ್ನಲ್ಲಿ ಸೀಟು ಪಡೆದುಕೊಂಡಿದ್ದು, ಆ ಬಗ್ಗೆ ನನ್ನೊಳಗೆ ಅಪರಾಧಿ ಭಾವ ಇದ್ದೇ ಇತ್ತು. ಆಗ ಇದೊಂದು ದೊಡ್ಡ ಮಟ್ಟದ ಅನ್ಯಾಯವೆಂದು ಯಾರೂ ಪರಿಗಣಿಸದೆ ಮುಚ್ಚಿ ಹೋಯಿತು. ಈಗ ಅಂತಹ ಶಿಫಾರಸ್ಸಿನವರ ಸಂಖ್ಯೆಯೇ ಜಾಸ್ತಿಯಾಗಿ, ಅದರ ವಿರುದ್ಧ ಹೋರಾಟ ರೂಪಿಸುವಂತೆ ಆಗಿದ್ದು, ನಾನೂ ಕೂಡ ಭಾಗವಹಿಸಿದ್ದು ಆ ಕಾಲಘಟ್ಟದ ಎಚ್ಚರಿಕೆಯಲ್ಲಿದ್ದ ಸಂಘಟನೆಯ ಶಕ್ತಿಯಾಗಿತ್ತು.

ನಮ್ಮ ಧರಣಿಯ ವಿವರ ಮತ್ತು ಅನಧಿಕೃತ ಪ್ರವೇಶಾರ್ಥಿಗಳು ಅರ್ಥಶಾಸ್ತ್ರ ವಿಭಾಗದಲ್ಲೂ ಆಗಿರುವ ಬಗ್ಗೆ ಬಂಡಾಯ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವುಗಳ ಪ್ರತಿಗಳನ್ನು ನಾನು ಸ್ವತಃ ಕ್ಲಾಸಿನಲ್ಲಿ ಹಂಚಿದ್ದೆ. ಆದರೆ ನಮ್ಮ ವಿಭಾಗದ ಮುಖ್ಯಸ್ಥರಾದ ಜಿ.ಟಿ. ಹುಚ್ಚಪ್ಪನವರು ಯಾವುದೇ ವಿಚಾರಣೆ ನಡೆಸದೆ ಸುಮ್ಮನಾಗಿದ್ದರು. ಅವರು, ಆಗ ತೋರಿದ ದೊಡ್ಡತನ ಮರೆಯಲಾಗಿಲ್ಲ. ಅವರು ಮನಸ್ಸು ಮಾಡಿದ್ದರೆ ನನಗೆ ಶೈಕ್ಷಣಿಕವಾಗಿ ತೊಂದರೆ ಕೊಡಬಹುದಾಗಿತ್ತು. ಆದರೆ ಹಿರಿಯರಾಗಿದ್ದ ಪ್ರೊ. ಜಿ.ಟಿ. ಹುಚ್ಚಪ್ಪ ಅವರು ದೊಡ್ಡತನದಿಂದಲೇ ನಡೆದುಕೊಂಡಿದ್ದರು. ಗಂಗೋತ್ರಿ ತುಂಬಾ ಎಲ್ಲ ವಿಭಾಗಗಳ ಹೊರಗೆ ಅನಧಿಕೃತ ಪ್ರವೇಶಾರ್ಥಿಗಳ ಕುರಿತು ಘೋಷವಾಕ್ಯಗಳನ್ನು ಬರೆದಿದ್ದೆವು. ವಿಜ್ಞಾನ ಮತ್ತು ರಾಜ್ಯಶಾಸ್ತç ವಿಭಾಗದಲ್ಲಿ ಆಗಿದ್ದ ಪ್ರವೇಶಾರ್ಥಿಗಳ ವಿವರಗಳನ್ನು ಬಾಟನಿ ವಿಭಾಗದಲ್ಲಿ ರೀಡರ್ ಆಗಿದ್ದ ಪ್ರೊ. ರಾಮಲಿಂಗಮ್ ಅವರೊಡನೆ ಇತರೆ ಅಧ್ಯಾಪಕರುಗಳು ಕೂಡ ನಮಗೆ ವಿವರ ನೀಡುತ್ತಿದ್ದರು. ಎಲ್ಲಾ ವಿಭಾಗಗಳ ಮತ್ತು ಕನ್ನಡ ಅಧ್ಯಯನ ಸಂಸ್ಥೆಯ ಗೋಡೆಯ ಮೇಲೂ ಕೂಡ ಬರೆದಿದ್ದೆವು. ಮಾರನೆ ದಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಹಾ.ಮಾ. ನಾಯಕ್ ಅವರು ಬಂದು ನೋಡಿ ಇದೆಲ್ಲಾ `ತಮ್ಮ ವಿದ್ಯಾರ್ಥಿ ಮಹಾದೇವನದೇ ಕೈವಾಡವೆಂದು ರೇಗಾಡಿದರೆಂತಲೂ, ಆತನಿಗೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದರೆಂದು’ ಆಲನಹಳ್ಳಿ ಕೃಷ್ಣ ಬಂದು ನನ್ನ ಬಳಿ ಹೇಳಿದರು.

ನಾನು ಮಹಾದೇವ ಬಂದಾಕ್ಷಣ ಅವನ ಕನ್ನಡ ವಿಭಾಗದಲ್ಲಿ ಆದ ಬೆಳವಣಿಗೆಯನ್ನು ತಿಳಿಸಿದೆ ಅದಕ್ಕವನು `ನಾವೆಲ್ಲ ಮಾಡುತ್ತಿರುವ ಹೋರಾಟದಲ್ಲಿ ನಿಮ್ಮಂತವರ ಬೆಂಬಲ ತಾತ್ವಿಕವಾಗಿ ಇರುವುದೆಂದು ಭಾವಿಸಿದ್ದೆವು, ಆದರೆ ನೀವು ಆಲನಹಳ್ಳಿ ಕೃಷ್ಣ ಅವರ ಬಳಿ ಆಡಿದ ಮಾತು ಕೇಳಿ ನನಗೆ ಜಿಗುಪ್ಸೆ ಮೂಡಿ ನಿಮ್ಮಂತಹವರ ಕೆಳಗೆ ವಿದ್ಯಾಭ್ಯಾಸ ಮುಂದುವರಿಸಲು ನಾಚಿಕೆಯಾಗುತ್ತದೆ’ ಎಂದು ಪತ್ರ ಬರೆದು ಹಾ.ಮಾ. ನಾಯಕ್ ಮತ್ತು ಪ್ರಜಾವಾಣಿ ಪತ್ರಿಕೆಗೂ ಕಳಿಸಿಕೊಟ್ಟುಬಿಟ್ಟ. ಇದಕ್ಕೆಲ್ಲ ಕಾರಣರಾದ ಆಲನಹಳ್ಳಿ ಅವರಿಗೆ ಪೀಕಲಾಟವಾಯಿತು. ಪೋಸ್ಟ್ ಹಾಕಿದ ಪತ್ರ ಹಾ.ಮಾ.ನಾ.ಗೆ ಮತ್ತು ಪ್ರಜಾವಾಣಿಗೆ ತಲುಪಿದರೂ ಪ್ರಕಟಿಸದಂತೆ ಪ್ರಜಾವಾಣಿಗೆ ಫೋನ್ ಮಾಡಲು ಪ್ರಯತ್ನಿಸಿದರು. ಆದರೆ ಹಾ.ಮಾ.ನಾ.ಗೆ ಬರೆದ ಪತ್ರ ತಲುಪಿ ಮಾದೇವನನ್ನು ಕರೆದು ಮಾತಾಡಿಸಿ, ಹಾ.ಮಾ.ನಾ. ನಾವುಗಳು ಮಾಡುತ್ತಿರುವ ಹೋರಾಟದ ಬಗ್ಗೆ ತಮ್ಮದೇನೂ ಅಭ್ಯಂತರವಿಲ್ಲವೆAದು ಹೇಳಿ ಕಳಿಸಿದರೆಂದು ನಂತರ ತಿಳಿಯಿತು. ಹಾಗಾಗಿ ಮಾದೇವ ಎಂ.ಎ. ಪೂರ್ತಿ ಮುಗಿಸುವ ತನಕ ಮತ್ತೇನು ತೊಂದರೆಯಾಗಲಿಲ್ಲ.

ನಮ್ಮ ಸೀನಿಯರ್ ಆಗಿದ್ದ ಬಸವಣ್ಯಪ್ಪ ಆಗಲೇ ಎಂ.ಎ. ಮುಗಿಸಿ ಪರ‍್ವತಕ್ಕನ ಸೋಷಿಯಾಲಜಿ ವಿಭಾಗದಲ್ಲಿ ಸಹಾಯಕ ನಿರ್ದೇಶಕನ ಕೆಲಸ ಮಾಡುತ್ತಿದ್ದ. ನಾನು ನನ್ನ ಎಸ್‌ವೈಎಸ್ ಚಟುವಟಿಕೆಗಳ ಬಗ್ಗೆ ಪತ್ರಿಕೆಗಳಲ್ಲಿ ವಿಶ್ವವಿದ್ಯಾಲಯದ ವಿಷಯ ಮುದ್ರಿಸಿ ತರಗತಿಯಲ್ಲಿ ಹಂಚಿದ ಬಗ್ಗೆ ತಿಳಿದು, ನನಗೆ ಎಚ್ಚರಿಕೆ ನೀಡಿ ನಿನಗೆ ಎಂ.ಎ.ನಲ್ಲಿ ಥರ್ಡ್ ಕ್ಲಾಸ್ ನೀಡಿ ಎಲ್ಲೂ ನಿನಗೆ ಕೆಲಸವಿದಲ್ಲದಂತೆ ಮಾಡುತ್ತಾರೆಂದು ತಿಳಿಸಿ ಆತಂಕ ವ್ಯಕ್ತಪಡಿಸಿದ್ದ. ಆದರೆ ಅಂತಹದ್ದೇನೂ ನಡೆಯದೆ ಫಲಿತಾಂಶ ಬಂದಾಗ ನಾನು ಎಂ.ಎ. ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿ ಹೊರಬಂದಿದ್ದೆ. ಅದಕ್ಕೆಲ್ಲ ಅಂದಿನ ಮುಖ್ಯಸ್ಥರಾಗಿದ್ದ ಪ್ರೊ. ಜಿ.ಟಿ. ಹುಚ್ಚಪ್ಪನವರ ವಿಶಾಲ ಹೃದಯದ ನಡವಳಿಕೆಯೇ ಕಾರಣವಾಗಿತ್ತು.

ಇನ್ನೊಂದು ಪ್ರಕರಣ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಸೋದರ ಸಂಬಂಧಿಯಾದ ಡಿ. ವಿಜಯರಾಜೇ ಅರಸ್ (ಡಿ.ವಿ. ಅರಸ್) ಅವರು ನೂತನ ರಿಜಿಸ್ಟಾçರ್ ಆಗಿ ಇದ್ದರು. ಅವರು ಬಿ.ಎ. (ಆರ‍್ಸ್) ಮಾಡಿ ಹಲವು ದೇಶಗಳನ್ನು ಸುತ್ತಿ ಬಂದ ಅನುಭವೀ ಆಡಳಿತಗಾರರಾಗಿದ್ದರು. ಅವರ ಆಡಳಿತ ಮತ್ತು ವೈಯಕ್ತಿಕ ಆಸಕ್ತಿಗೆ ತಕ್ಕಂತೆ ತಮ್ಮ ಛೇಂಬರ್‌ಗೆ ರೆಡ್ ಕಾರ್ಪೆಟ್ ಹಾಕಿಸಿಕೊಂಡದ್ದೊಂದು ದೊಡ್ಡ ಸುದ್ದಿಯಾಗಿತ್ತು. ಅದರ ವಿರುದ್ಧ ಎಸ್.ವೈ.ಎಸ್. ಧರಣಿ ಮಾಡಿ ಎಲ್ಲ ವಿದ್ಯಾರ್ಥಿಗಳಲ್ಲೂ ಚರ್ಚಿಸುವಂತೆ ಮತ್ತೆ ಪತ್ರಿಕೆಗಳಲ್ಲಿ ಬಂದು, ರಿಜಿಸ್ಟಾçರ್ ಅವರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕೆಂದು ಧರಣಿ ಮಾಡಿದ್ದೆವು. ಈಗ ಯೋಚಿಸಿದರೆ ಆಗ ನಾವು ಮಾಡುತ್ತಿದ್ದ ಸಣ್ಣ ಸಣ್ಣ ಭ್ರಷ್ಟಾಚಾರ ಸ್ವಜನ ಪಕ್ಷಪಾತಗಳಿಗೆ ಪ್ರತಿಕ್ರಿಯಿಸುತ್ತಿದ್ದ ವಿದ್ಯಾರ್ಥಿ ಸಮೂಹ ಈಗ ಇಂತಹ ಯಾವುದೇ ಸ್ಪಂದನವನ್ನು ಕಾಣದೆ ಎಲ್ಲರೂ ತಮ್ಮ ತಮ್ಮ ಜಾತಿ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ಸಮಾಜದ ಸಮಷ್ಟಿ ಬೆಳವಣಿಗೆಯ ಬಗ್ಗೆ ನಿರುತ್ಸಾಹ ಎದ್ದು ಕಾಣುತ್ತದೆ. ವಿಶ್ವವಿದ್ಯಾಲಯಗಳಲ್ಲಿ ವರ್ಷಗಟ್ಟಲೆ ಅಧ್ಯಾಪಕರಿಲ್ಲದೆ ಇದ್ದರೂ,ಆ ಬಗ್ಗೆ ದಿವ್ಯ ನಿರ್ಲಕ್ಷ್ಯ ದಿಂದ ಇರುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಲ್ಲಿ ಸಂಘಟಿತ ಹೋರಾಟಗಳು ಇಲ್ಲವಾಗಿವೆ.

ಈ ಮೇಲಿನ ಎರಡು ಧರಣಿಗಳು ಎಲ್ಲಾ ವಿದ್ಯಾರ್ಥಿ ದೆಸೆಯ ಸಮಾಜವಾದಿ ಯುವಜನ ಸಭಾದ ಸಂಘಟನೆಯ ಮುಖಾಂತರ ನಡೆದವುಗಳು. ವಿದ್ಯಾರ್ಥಿಗಳಾಗಿ ನಾವು ವಿಶ್ವವಿದ್ಯಾಲಯದಲ್ಲಿನ ಸಮಸ್ಯೆಗಳಿಗೆ ಏನೂ ಮಾಡಲಾರೆವು ಎಂದು ಕೈಚೆಲ್ಲಿ ಕೂರದೆ ಸಂಘಟಿತ ಪ್ರತಿಭಟನೆ ಮಾಡಿದಾಗ ಆಗುವ ಬದಲಾವಣೆಯನ್ನು ಕೂಡ ಕಣ್ಣೆದುರಿಗೆ ತೋರಿಸುವಂತಾಗಿದ್ದವು. ಮುಂದಿನ ದಿನಗಳಲ್ಲಿ ಅಧಿಕಾರಸ್ಥರಿಗೆ ಸರಿಯಾದ ಮಾರ್ಗದಲ್ಲಿ ನಡೆಯಲು ದಿಕ್ಸೂಚಿಯಾಗಿ ನಿಂತವು ಎಂಬುದರಲ್ಲಿ ಎರಡು ಮಾತಿಲ್ಲ.

ಓ ನನ್ನ ಮೈಸೂರೆ !

ನಮ್ಮೂರ ಹಾಲಿವಾಣದ ಮುಳ್ಳುಗಳು
ಓಡಾಡೋ ದಾರಿಯ ಕೊರಕಲುಗಳು
ಒಪ್ಪಾರೆ ನೆರಕೆಯ ಹೋಟೆಲುಗಳ ಕಿಲುಬು ಕಪ್ಪುಗಳು
ಒಟ್ಟಾರೆ ಒಂದೆರಡಲ್ಲ ಹೀಗೆ ನೂರಾರು ಸಿಕ್ಕುಗಳ
ಮಡಿ ಮೈಲಿಗೆ ದಾಟಿ…

ನೇರ ಹರಿಯೋ ರೈಲುಹತ್ತಿ ಮೈಸೂರು ತಲುಪಿದ್ದು
ಮಹಾರಾಜರೇ ಕಟ್ಟಿದ ಕಾಲೇಜು ಮೆಟ್ಟಿದ್ದು
ಅರಮನೆ, ಚಾಮುಂಡಿ ಬೆಟ್ಟ
ಎತ್ತೆತ್ತಲೋ ಕೊಂಡೊಯ್ಯುವ ರಸ್ತೆಗಳು
ಹೌಹಾರುವ ನೋಟಗಳು
ಎಲ್ಲ ಹೊತ್ತೊಗೆದಿತ್ತು ನನ್ನ
ಜನ್ಮ ಜನ್ಮಾಂತರದ ಹೊರೆಯ
ಕಣ್ಣಿಗಂಟಿದಾ ಪೊರೆಯ…

ದಿವ್ಯ ದೇಗುಲದಾ ಒಳಗೆ
ಬೆಳಕ ತೋರೋ ಪಂಡಿತರು
ಕಾಸಿ ಕಾಸಿ ಹಣಿಯೋ ಕುಲುಮೆಗಳು
ಬೆಳ್ಳಿ ಬಂಗಾರದ ಭಂಡಾರಗಳು
ಉAಡು ಉಡಲು ಇತ್ತ
ರಾಜನ ಹೆಸರಿನ ತಂಗುದಾಣ
ಅದುವೇ ಪಂಚಾಮೃತ…

ಇದ್ದವರೆಲ್ಲ, ಇಲ್ಲಿ ನನ್ನಂತವರಲ್ಲ
ಆಗಲೇ ಸಿಗರೇಟು ಹಚ್ಚಿ
ಕಥೆ ಬರೆಯೋ ಮಾದೇವ
ಟರ್ಲಿನ್ ಷರ್ಟನಲ್ಲಿ ಬಂಗಾರದ ಚೈನು ಹಾಕಿ
ವಿಶಾಲ ಹೃದಯ ತೋರೋ ರೆಡ್ಡಿ
ತಾಯಿಗಡುಸಿನ ತಾವು ತೋರೋ ಮಹೇಶ
ಅವಸರದಲ್ಲೂ ಉಡದಂತೆ ಹಿಡಿದು ಒಪ್ಪಿಸೋ ಅರ್ಕೇಶ
ಅಕ್ಷರಗಳನಾಡಿಸಿ ಮಣಿಸೋ ಭಕ್ತ
ಸಮತಟ್ಟಲಿ ಹರಿಯೋ ಹೊಳೆಯಂತೆ ಗೊಟ್ಟಿಗೆರೆ ಶಿವರಾಜ
ವಾರವೆಲ್ಲ ಉಣದಿದ್ದರೂ ಬಣ್ಣಗೆಡದ ರಾಕೆ…

ಇಂತವರೆಲ್ಲರ ಕೂಡಿ ಹಾಕಿ ಮಾತಾಡೋ
ನಂಜುAಡಸ್ವಾಮಿ, ವಕೀಲ ಟಿ.ಎನ್.ಎನ್., ದಾನಿ ಪಿ. ಮಲ್ಲೇಶ್
ಅನಂತರಂಗಾಚಾರ್, ರಾಮದಾಸ್
ನೆಲಮೂಲದ ನೆರವು ತೋರೋ
ನೆಲಮನೆಯ ದೇವೇಗೌಡ
ಆಂದೋಲನದಾಳಕ್ಕೂ ಮುಳುಗಿನಿಂತ
ರಾಜಶೇಖರ ಕೋಟಿ
ಅರೆಜೀವಗೊಂಡವರ
ಹೊರೆಹೊತ್ತು ಬರುವಾ ಕೃಷ್ಣಪ್ಪ
ರಿಪೇರಿಯಲ್ಲೇ ಓಡೋ ಜೀಪಲ್ಲಿ ತೇಜಸ್ವಿ
ಕ್ರಾಂತಿಕವನಗಳ ಕಟ್ಟು ಹೊತ್ತ
ಸಂಕ್ರಮಣದ ಚಂಪಾ
ಸ್ಫೋಟಕ ಸುದ್ಧಿಯ ಪ್ರೊ. ರಾಮಲಿಂಗ
ಯುವಕರ ಕಣ್ಣಲ್ಲಿ ಮಿಂಚು ಹರಿಸೋ
ಅನಂತಮೂರ್ತಿ, ಲಂಕೇಶ, ರಾಮಮೂರ್ತಿ
ವಿಚಾರವಾದಿಗಳ ರಥಕತೆಯ
ರ‍್ಮಲಿಂಗಂ, ಕೊವೂರ್, ಪೆರಿಯಾರ್
ಹೆಚ್. ನರಸಿಂಹಯ್ಯ, ಕುವೆಂಪು, ಬಸವಲಿಂಗಪ್ಪ…

ಬದುಕು ಬರಹಗಳೇ
ರಸವಾಗಿ ಕೊಸರಾಗಿ ಮೈವೆತ್ತ
ಎಲ್. ಬಸವರಾಜು, ಸುಜನಾ
ಹೀಗೆ ಹರಿಯುತ್ತದೆ
ನನ್ನರಿವಿನಾ ಹರವು…
ಬೆರಗಾಗಿ – ಬೆಳಕಾಗಿ
ಕೆನೆಮೊಸರ ಕಡೆದಂತೆ
ಸೊಗಸಾಗಿ ಬೆಳೆದಿದೆ
ಇಂದಿಗೂ ತಲೆದಿಂಬಾಗಿ
ತಲೆ ಎತ್ತಿ ತಿರುಗಾಡುವ
ಅಂಬಾಗಿ…

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

Published

on

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

“ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”

ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”

ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

Published

on

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಮೊನ್ನೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ ನಂತರ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡೀಸೆಲ್ 3.5 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 8 ಸಾವಿರದ 500 ರೂಪಾಯಿಗಳನ್ನು ವರ್ಗಾವಣೆ ಮಾಡುವ ಭರವಸೆಯನ್ನು ಈಡೇರಿಸುವ ಬದಲು, ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರವು, ರಾಜ್ಯದ ಜನರಿಗೆ ಹೊರೆಯಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ಇಂತಹ ನಿರ್ಧಾರ ಹಣದುಬ್ಬರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಬೂಟಾಟಿಕೆ ಬಹಿರಂಗಪಡಿಸುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಗಳಿಂದ 12 ರೂಪಾಯಿಗಳಷ್ಟು ಹೆಚ್ಚುವರಿ ವ್ಯಾಟ್ ಅನ್ನು ವಿಧಿಸುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ, ಹಾಲಿನ ದರ, ಅಗತ್ಯ ವಸ್ತುಗಳ ದರ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದ ವ್ಯವಸ್ಥೆ ಕುಸಿದುಹೋಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ, ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವ್ಯಾಟ್ ಹೆಚ್ಚಳ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ದರ ಕಡಿಮೆ ಇದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರಕ್ಕಿಂತಲ್ಲೂ ಹಾಗೂ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲ್ಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರ ತೆರಿಗೆ ಕಡಿಮೆ ಮಾಡಿದ್ದರೂ, ಕೇಂದ್ರ ಸರ್ಕಾರ ಪದೇ ಪದೆ ವ್ಯಾಟ್ ಹೆಚ್ಚಳ ಮಾಡಿತ್ತು ಎಂದು ಆರೋಪಿಸಿದ್ದಾರೆ. ರಾಜ್ಯದ ತೆರಿಗೆ ಹೆಚ್ಚಳದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಷಹಾರ | ಹೋಟೆಲ್, ರೆಸ್ಟೋರೆಂಟ್ ತಪಾಸಣೆಗೆ ಕ್ರಮ

Published

on

ಸುದ್ದಿದಿನಡೆಸ್ಕ್: ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಉತ್ತಮ ಗುಣಮಟ್ಟ, ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋಟೇಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ The Food Safety and Standards Act-2006 ಮತ್ತು 2011 ನಿಯಮಗಳಲ್ಲಿ ಸೂಚಿಸಿರುವ ಮಾರ್ಗಸೂಚಿಯಂತೆ ತಪಾಸಣೆ ನಡೆಸಿ ಸೂಕ್ತ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೋಟೆಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ ಸ್ವಚ್ಚತೆ ಇಲ್ಲದೆ, ಕಲುಷಿತ, ವಿಷಹಾರ ಸೇವನೆ, ಕಲಬೆರಕೆ ಪದಾರ್ಥಗಳು, ಅವಧಿ ಮೀರಿದ ಪದಾರ್ಥಗಳ ಉಪಯೋಗಿಸುತ್ತಿರುವಂತೆ ಘಟನೆಗಳು ಸಂಭವಿಸುತ್ತಿದ್ದು, ರಾಮೇಶ್ವರ ಕೆಫೆ, ಇಂದಿರಾನಗರ ಬೆಂಗಳೂರು ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಂಡದಲ್ಲಿ ವರದಿಯಾಗಿರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending