Connect with us

ನಿತ್ಯ ಭವಿಷ್ಯ

ನೀವು ಆರ್ಥಿಕವಾಗಿ ಸಂಕಷ್ಟ ಏಕೆ? ಎದುರಿಸುತ್ತಿದ್ದೀರಿ.. ಹಾಗಾದರೆ ಇಂದೇ ನಿಮ್ಮ ಜಾತಕ ಬರೆದು ಪರೀಕ್ಷಿಸೋಣ

Published

on

ಜನ್ಮ ಕುಂಡಲಿಯಲ್ಲಿ ಈ ಗ್ರಹಗಳು ಇದ್ದರೆ ಆಗರ್ಭ ಶ್ರೀಮಂತರು..ಧನ ಯೋಗ ಪ್ರಾಪ್ತಿ..

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ,
ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಪ್ರತಿಯೊಬ್ಬರೂ ಹಣಕ್ಕಾಗಿ ಶ್ರಮ ಪಟ್ಟು ದುಡಿಯುತ್ತಾರೆ. ತಮ್ಮ ಜಾತಕವನ್ನು ತೋರಿಸಿದಾಗಲೂ ಹಣದ ಬಗ್ಗೆ ಕೇಳುತ್ತಾರೆ. ಆಯಾ ರಾಶಿಗೆ ಅನುಗುಣವಾಗಿ ಯಾವ ಗ್ರಹವಿದ್ದರೆ ಧನ ಲಾಭವಾಗುವುದು ಎಂಬ ಮಾಹಿತಿ ಇಲ್ಲಿದೆ.

ಮೇಷ ಲಗ್ನ: ಸಿಂಹರಾಶಿಯಲ್ಲಿ ರವಿ, ಕುಂಭ ರಾಶಿಯಲ್ಲಿ ಗುರು ಚಂದ್ರರಿದ್ದರೆ ಧನವಂತನಾಗುವನು ಅಥವಾ ಜನ್ಮ ಲಗ್ನವಾದ ಮೇಷದಲ್ಲಿ ಕುಜ ಶುಕ್ರನಿಂದ ಕೂಡಿದ್ದರೆ ಧನವಂತನಾಗುವನು.

ವೃಷಭಲಗ್ನ:ಶುಕ್ರನುಬುಧ-ಶನಿಗಳಿಂದ ಕೂಡಿದ್ದರೆ ಧನವಂತನಾಗುವನು ಅಥವಾ ಲಗ್ನವನ್ನು ನೋಡಿದರೂ ಧನವಂತನಾಗುವನು.

ಮಿಥುನ ಲಗ್ನ: ಬುಧನು ಶನಿ-ಶುಕ್ರನಿಂದ ಕೂಡಿದ್ದರೆ ಬಹು ಧನವಂತನಾಗುವನು ಅಥವಾ ಈ ಲಗ್ನವನ್ನು ಬುಧ-ಶನಿ-ಶುಕ್ರರು ನೋಡಿದರೂ ಬಹು ಧನವಂತನಾಗುವನು.

ಕಟಕ ಲಗ್ನ: ಗುರು-ಕುಜರು ಇದ್ದು ಚಂದ್ರನಿಂದ ನೋಡಿದರೂ ಅಥವಾ ಈ ಲಗ್ನವನ್ನು ಕುಜ, ಗುರು, ಚಂದ್ರರು ನೋಡಿದರೂ ಬಹು ಧನವಂತನಾಗುವನು.

ಸಿಂಹ ಲಗ್ನ: ಧನಸ್ಸಿನಲ್ಲಿ ಗುರುವು ಮಿಥುನದಲ್ಲಿ ಚಂದ್ರರಿದ್ದರೆ ಧನವಂತನಾಗುವನು. ಅಲ್ಲದೆ ಲಗ್ನದಲ್ಲಿ ಸೂರ್ಯನು, ಕುಜನು ಬೃಹಸ್ಪತಿಗಳು ಕೂಡಿದ್ದರೂ, ನೋಡಿದರೂ ಧನವಂತನಾಗುವನು.

ಕನ್ಯಾ ಲಗ್ನ: ಮಕರದಲ್ಲಿ ಶನಿ, ಕರ್ಕಾಟಕದಲ್ಲಿ ಕುಜನಿದ್ದರೆ ಬಹು ಧನವಂತನಾಗುವನು. ಈ ಲಗ್ನಕ್ಕೆ ಶನಿ-ಕುಜರ ದೃಷ್ಟಿ ಇದ್ದರೂ ಧನವಂತನಾಗುವನು.

ತುಲಾ ಲಗ್ನ: ಲಗ್ನದಲ್ಲಿ ಶುಕ್ರನಿದ್ದು ಶನಿ-ಬುಧರಿಂದ ಕೂಡಿದ್ದರೆ ಅಥವಾ ಶನಿ-ಬುಧರಿಂದ ನೋಡಿದರೆ ಧನವಂತನಾಗುವನು.

ವೃಶ್ಚಿಕ ಲಗ್ನ: ಕುಜನಿದ್ದು ಚಂದ್ರ, ಶುಕ್ರ, ಶನಿ ಈ ಮೂರು ಗ್ರಹಗಳಿಂದ ಕೂಡಿದ್ದರೂ ಅಥವಾ ನೋಡಿದರೂ ಬಹು ಧನವಂತನಾಗುವನು.

ಧನಸ್ಸು ಲಗ್ನ: ಬೃಹಸ್ಪತಿಯಿದ್ದು ಬುಧ-ಅಂಗಾರಕರಿಂದ ಕೂಡಿದ್ದರೂ ಅಥವಾ ನೋಡಿದರೂ ಜಾತಕದವನು ಧನವಂತನಾಗುವನು.

ಮಕರ ಲಗ್ನ: ಶನಿಯಿದ್ದು ಶುಕ್ರನಿಂದ ಕೂಡಿದ್ದರೂ ಅಥವಾ ನೋಡಿದರೂ ಧನವಂತನಾಗುವನು.

ಕುಂಭ ಲಗ್ನ: ಶನಿಯು ಬುಧರಿಂದ ಕೂಡಿದ್ದರೂ ಧನವಂತನಾಗುವನು.

ಮೀನ ಲಗ್ನ: ಬೃಹಸ್ಪತಿಯಿದ್ದು ಬುಧ-ಅಂಗಾರಕರಿಂದ ಕೂಡಿದ್ದರೂ ಧನವಂತನಾಗುತ್ತಾನೆ.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ನಿತ್ಯ ಭವಿಷ್ಯ

ಇಂದಿನ ರಾಶಿಫಲ: 12 ರಾಶಿಗಳ ಭವಿಷ್ಯ ಹೇಗಿದೆ? ಉದ್ಯೋಗ, ಹಣಕಾಸು, ಪ್ರೀತಿ–ಆರೋಗ್ಯದ ಸಂಪೂರ್ಣ ಫಲ

Published

on

august-29-2026-daily-horoscope-kannada-rashi-bhavishya
ಇಂದು ಯಾರಿಗೆ ಶುಭ? ಯಾವ ರಾಶಿಯವರು ಎಚ್ಚರಿಕೆ ವಹಿಸಬೇಕು? ಇಲ್ಲಿದೆ ಆ.29ರ ದಿನ ಭವಿಷ್ಯ

ಸುದ್ದಿದಿನ,ರಾಶಿಫಲ: ಶನಿವಾರ, ಆಗಸ್ಟ್ 29, 2026. ಇಂದಿನ ದಿನವು 12 ರಾಶಿಗಳಿಗೂ ವಿಭಿನ್ನ ಅನುಭವಗಳನ್ನು ತರಲಿದೆ. ಕೆಲವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಎದುರಾಗುವ ಸಾಧ್ಯತೆ ಇದ್ದರೆ, ಇನ್ನೂ ಕೆಲವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಕುಟುಂಬದ ವಿಚಾರಗಳು, ಸಂಬಂಧಗಳು, ಆರೋಗ್ಯ ಮತ್ತು ವೈಯಕ್ತಿಕ ನಿರ್ಧಾರಗಳಲ್ಲಿಯೂ ದಿನದ ಗ್ರಹಗತಿಗಳ ಪ್ರಭಾವ ಕಂಡುಬರಬಹುದು. ನಿಮ್ಮ ರಾಶಿಗೆ ಇಂದು ಏನು ಫಲ? ಇಲ್ಲಿದೆ ಮೇಷದಿಂದ ಮೀನದವರೆಗೆ ಇಂದಿನ ಕನ್ನಡ ರಾಶಿಫಲ.

http://Visit : www.suddidina.com

ಮೇಷ ರಾಶಿ

ಇಂದು ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ಹಣಕಾಸಿನ ವಿಚಾರದಲ್ಲಿ ಉತ್ತಮ ಬೆಳವಣಿಗೆ ಕಂಡುಬರುವ ಸಾಧ್ಯತೆ ಇದೆ. ಕುಟುಂಬದವರೊಂದಿಗೆ ಸಂತಸದ ಸಮಯ ಕಳೆಯುವಿರಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ವೃಷಭ ರಾಶಿ

ಕೆಲಸದ ಒತ್ತಡ ಹೆಚ್ಚಾಗಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಿರಿಯರ ಸಲಹೆ ಪಡೆಯುವುದು ಉತ್ತಮ. ಅನಿರೀಕ್ಷಿತ ಖರ್ಚು ಎದುರಾಗುವ ಸಾಧ್ಯತೆ ಇದೆ. ಸಂಗಾತಿ ಅಥವಾ ಆಪ್ತರೊಂದಿಗೆ ಮನಬಿಚ್ಚಿ ಮಾತನಾಡುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ.

ಮಿಥುನ ರಾಶಿ

ಹೊಸ ಅವಕಾಶಗಳು ನಿಮ್ಮ ಗಮನ ಸೆಳೆಯಲಿವೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ಬಹುದಿನಗಳಿಂದ ಬಾಕಿ ಉಳಿದಿದ್ದ ಕೆಲಸವೊಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪ್ರಯಾಣ ಮಾಡುವವರಿಗೆ ಅನುಕೂಲಕರ ದಿನ.

ಕಟಕ ರಾಶಿ

ಕುಟುಂಬದ ವಿಚಾರಗಳು ಇಂದು ಪ್ರಮುಖವಾಗಬಹುದು. ಕೆಲಸದಲ್ಲಿ ತಾಳ್ಮೆಯಿಂದ ಮುಂದುವರಿಯಿರಿ. ಹಣಕಾಸಿನ ವ್ಯವಹಾರಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಸಿಂಹ ರಾಶಿ

ನಿಮ್ಮ ನಾಯಕತ್ವ ಗುಣ ಇಂದು ಗಮನ ಸೆಳೆಯಲಿದೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಆತುರದ ನಿರ್ಧಾರಗಳನ್ನು ತಪ್ಪಿಸಿ.

ಕನ್ಯಾ ರಾಶಿ

ಇಂದು ಯೋಜಿತ ಕಾರ್ಯಗಳು ಯಶಸ್ಸಿನತ್ತ ಸಾಗಲಿವೆ. ಹಣದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕೆಲಸದ ನಡುವೆ ವಿಶ್ರಾಂತಿಗೂ ಸಮಯ ನೀಡಿ. ಸ್ನೇಹಿತರೊಂದಿಗೆ ನಡೆಯುವ ಚರ್ಚೆ ಹೊಸ ಆಲೋಚನೆಗೆ ಕಾರಣವಾಗಬಹುದು.

ತುಲಾ ರಾಶಿ

ಸಂಬಂಧಗಳಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ಉದ್ಯೋಗದಲ್ಲಿ ಉತ್ತಮ ಅವಕಾಶ ಎದುರಾಗಬಹುದು. ವ್ಯವಹಾರಸ್ಥರಿಗೆ ಲಾಭದಾಯಕ ದಿನವಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಉತ್ತಮ.

ವೃಶ್ಚಿಕ ರಾಶಿ

ಇಂದು ಕೆಲವು ಸವಾಲುಗಳು ಎದುರಾಗಬಹುದು. ಆದರೆ ನಿಮ್ಮ ಪರಿಶ್ರಮದಿಂದ ಅವುಗಳನ್ನು ಎದುರಿಸಲು ಸಾಧ್ಯವಾಗಲಿದೆ. ಹಣಕಾಸಿನ ವಿಚಾರದಲ್ಲಿ ಯಾರಿಗೂ ಆತುರವಾಗಿ ಭರವಸೆ ನೀಡಬೇಡಿ. ಆರೋಗ್ಯದ ಕಡೆ ಗಮನ ಹರಿಸಿ.

ಧನು ರಾಶಿ

ಹೊಸ ಯೋಜನೆಗಳನ್ನು ಆರಂಭಿಸಲು ಅನುಕೂಲಕರ ದಿನ. ಉದ್ಯೋಗದಲ್ಲಿ ಪ್ರಗತಿಯ ಸೂಚನೆಗಳಿವೆ. ದೂರದ ಪ್ರಯಾಣದ ಯೋಗವಿದೆ. ಕುಟುಂಬದವರ ಬೆಂಬಲ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲಿದೆ.

ಮಕರ ರಾಶಿ

ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿ ಬರಬಹುದು. ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಸುಧಾರಿಸಬಹುದು. ಹಿರಿಯರ ಸಲಹೆ ಉಪಯುಕ್ತವಾಗಲಿದೆ.

ಕುಂಭ ರಾಶಿ

ಇಂದು ಹೊಸ ಸಂಪರ್ಕಗಳು ಭವಿಷ್ಯದಲ್ಲಿ ಸಹಕಾರಿಯಾಗಬಹುದು. ಉದ್ಯೋಗದಲ್ಲಿ ಬದಲಾವಣೆ ಕುರಿತು ಯೋಚಿಸುತ್ತಿದ್ದರೆ ಎಚ್ಚರಿಕೆಯಿಂದ ನಿರ್ಧರಿಸಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ.

ಮೀನ ರಾಶಿ

ಮನಸ್ಸಿನಲ್ಲಿ ಹೊಸ ಉತ್ಸಾಹ ಮೂಡಲಿದೆ. ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಬಹುದು. ಹಣಕಾಸಿನಲ್ಲಿ ಸ್ಥಿರತೆ ಕಂಡುಬರಲಿದೆ. ಪ್ರೀತಿ ಮತ್ತು ಕುಟುಂಬದ ವಿಚಾರಗಳಲ್ಲಿ ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ.

Continue Reading

ನಿತ್ಯ ಭವಿಷ್ಯ

ಆಗಸ್ಟ್ 27ರ ರಾಶಿಭವಿಷ್ಯ: ವೃತ್ತಿಯಿಂದ ಪ್ರೇಮದವರೆಗೆ ಇಂದು ನಿಮ್ಮ ದಿನ ಹೇಗಿರಲಿದೆ?

Published

on

august-29-2026-daily-horoscope-kannada-rashi-bhavishya

ಮೇಷದಿಂದ ಮೀನದವರೆಗೆ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆ. ಉದ್ಯೋಗ, ವ್ಯವಹಾರ, ಶಿಕ್ಷಣ, ಕುಟುಂಬ, ಆರೋಗ್ಯ ಮತ್ತು ಪ್ರೇಮ ಜೀವನದಲ್ಲಿ ಇಂದು ಯಾವ ರಾಶಿಗೆ ಶುಭ? ಯಾರು ಎಚ್ಚರಿಕೆ ವಹಿಸಬೇಕು?

ಸುದ್ದಿದಿನ, ರಾಶಿಭವಿಷ್ಯ: 2026ರ ಆಗಸ್ಟ್ 27, ಗುರುವಾರದಂದು ಶ್ರಾವಣ ಮಾಸದ ಶುಕ್ಲ ಪಕ್ಷದ ದಶಮಿ ತಿಥಿ, ಜ್ಯೇಷ್ಠಾ ನಕ್ಷತ್ರದ ಪ್ರಭಾವವಿರುವ ಇಂದು ಚಂದ್ರನ ಸ್ಥಾನ ಮತ್ತು ಗ್ರಹಗಳ ಚಲನೆ ಹಲವು ರಾಶಿಗಳ ದಿನಚರಿಯಲ್ಲಿ ಬದಲಾವಣೆ ತರಬಹುದು. ಕೆಲವರಿಗೆ ವೃತ್ತಿ ಮತ್ತು ಹಣಕಾಸಿನ ವಿಚಾರದಲ್ಲಿ ಹೊಸ ಅವಕಾಶಗಳು ಎದುರಾಗುವ ಸಾಧ್ಯತೆಯಿದ್ದರೆ, ಇನ್ನು ಕೆಲವರು ಮಾತುಕತೆ ಹಾಗೂ ನಿರ್ಧಾರಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಒಳಿತು.

ಪಂಚಾಂಗ: ಶ್ರೀ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಗುರುವಾರ, ಶುಕ್ಲ ದಶಮಿ, ಜ್ಯೇಷ್ಠಾ ನಕ್ಷತ್ರ. ರಾಹುಕಾಲ ಮಧ್ಯಾಹ್ನ 1.58ರಿಂದ 3.31ರವರೆಗೆ, ಗುಳಿಕಕಾಲ ಬೆಳಿಗ್ಗೆ 9.15ರಿಂದ 10.48ರವರೆಗೆ ಹಾಗೂ ಯಮಗಂಡಕಾಲ ಬೆಳಿಗ್ಗೆ 6.08ರಿಂದ 7.41ರವರೆಗೆ.

http://Visit : www.suddidina.com

ಮೇಷ ರಾಶಿ

ಇಂದು ಕೆಲಸದಲ್ಲಿ ಚುರುಕು ಹೆಚ್ಚಾಗಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ವ್ಯವಹಾರದಲ್ಲಿ ನಿರ್ಧಾರ ಕೈಗೊಳ್ಳುವಾಗ ಆತುರ ಬೇಡ. ಕುಟುಂಬದಲ್ಲಿ ಸಣ್ಣ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಬಹುದು. ಪ್ರೇಮ ಜೀವನದಲ್ಲಿ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ. ಆರೋಗ್ಯದಲ್ಲಿ ದಣಿವು ಕಾಣಿಸಿಕೊಳ್ಳಬಹುದು.

ವೃಷಭ ರಾಶಿ

ಹಣಕಾಸಿನ ವಿಚಾರದಲ್ಲಿ ಇಂದು ಅನುಕೂಲಕರ ದಿನ. ಬಾಕಿ ಹಣ ಮರಳಿ ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ದೊರೆಯಬಹುದು. ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಲಿದೆ. ಕುಟುಂಬದ ಹಿರಿಯರಿಂದ ಉತ್ತಮ ಸಲಹೆ ಸಿಗಲಿದೆ. ಅನಗತ್ಯ ಖರ್ಚಿಗೆ ಕಡಿವಾಣ ಹಾಕುವುದು ಒಳಿತು.

ಮಿಥುನ ರಾಶಿ

ಹೊಸ ಯೋಜನೆ ಆರಂಭಿಸಲು ದಿನ ಉತ್ತಮ. ವೃತ್ತಿಯಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ದೊರೆಯಬಹುದು. ವ್ಯಾಪಾರಿಗಳಿಗೆ ಹೊಸ ಸಂಪರ್ಕಗಳು ಲಾಭ ತರಬಹುದು. ಪ್ರೇಮ ಸಂಬಂಧದಲ್ಲಿ ತಪ್ಪು ತಿಳುವಳಿಕೆ ಉಂಟಾಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಕಟಕ ರಾಶಿ

ಕುಟುಂಬಕ್ಕೆ ಇಂದು ಹೆಚ್ಚಿನ ಸಮಯ ನೀಡುವಿರಿ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಹಣಕಾಸಿನಲ್ಲಿ ಸ್ಥಿರತೆ ಕಂಡುಬರಲಿದೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಉತ್ತಮ ಫಲ ಪಡೆಯಬಹುದು. ಪ್ರೇಮ ಜೀವನದಲ್ಲಿ ಸಂತಸದ ಕ್ಷಣಗಳು ಸಿಗಲಿವೆ. ಆಹಾರ ಪದ್ಧತಿಯ ಬಗ್ಗೆ ಗಮನ ಕೊಡಿ.

ಸಿಂಹ ರಾಶಿ

ವೃತ್ತಿಜೀವನದಲ್ಲಿ ಮಹತ್ವದ ಬೆಳವಣಿಗೆ ಸಾಧ್ಯ. ನಿಮ್ಮ ಮಾತಿಗೆ ಗೌರವ ಸಿಗಲಿದೆ. ವ್ಯವಹಾರದಲ್ಲಿ ಹೊಸ ಅವಕಾಶ ಎದುರಾಗಬಹುದು. ಹಣದ ವಿಚಾರದಲ್ಲಿ ಲಾಭದ ಸೂಚನೆಗಳಿವೆ. ಕುಟುಂಬದಲ್ಲಿ ಶುಭ ಸುದ್ದಿ ಕೇಳಿಬರಬಹುದು. ಪ್ರೇಮ ಸಂಬಂಧದಲ್ಲಿ ಆತ್ಮೀಯತೆ ಹೆಚ್ಚಾಗಲಿದೆ.

ಕನ್ಯಾ ರಾಶಿ

ಕೆಲಸದ ವಿಚಾರದಲ್ಲಿ ಇಂದು ಯೋಜನೆ ರೂಪಿಸಿಕೊಂಡು ಮುಂದುವರಿಯಿರಿ. ಸಣ್ಣ ತಪ್ಪುಗಳು ಗೊಂದಲಕ್ಕೆ ಕಾರಣವಾಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದವರೊಂದಿಗೆ ಮನಸ್ತಾಪವಾದರೆ ಮಾತಿನ ಮೂಲಕ ಪರಿಹರಿಸಿಕೊಳ್ಳಿ. ಆರೋಗ್ಯದಲ್ಲಿ ವಿಶ್ರಾಂತಿಗೆ ಆದ್ಯತೆ ನೀಡಿ.

ತುಲಾ ರಾಶಿ

ಇಂದು ಅದೃಷ್ಟ ನಿಮ್ಮ ಪರವಾಗಿರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಬಹುದು. ವ್ಯವಹಾರದಲ್ಲಿ ಹೊಸ ಒಪ್ಪಂದದ ಅವಕಾಶ ಸಿಗಬಹುದು. ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಪ್ರೇಮ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಕುಟುಂಬದವರಿಂದ ಬೆಂಬಲ ದೊರೆಯಲಿದೆ.

ವೃಶ್ಚಿಕ ರಾಶಿ

ಭಾವನಾತ್ಮಕ ನಿರ್ಧಾರಗಳನ್ನು ತಪ್ಪಿಸುವುದು ಉತ್ತಮ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿ ಬರಬಹುದು. ಹಣಕಾಸಿನಲ್ಲಿ ಅನಿರೀಕ್ಷಿತ ಖರ್ಚು ಎದುರಾಗಬಹುದು. ವ್ಯವಹಾರಿಗಳು ದಾಖಲೆಗಳನ್ನು ಪರಿಶೀಲಿಸಿ ಮುಂದುವರಿಯಿರಿ. ಸಂಬಂಧಗಳಲ್ಲಿ ಅನುಮಾನಕ್ಕೆ ಅವಕಾಶ ಕೊಡಬೇಡಿ. ಆರೋಗ್ಯದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಿ.

ಧನು ರಾಶಿ

ಹೊಸ ಅವಕಾಶಗಳು ನಿಮ್ಮ ಗಮನ ಸೆಳೆಯಲಿವೆ. ಉದ್ಯೋಗ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ ವಿಚಾರಿಸಿ ಮುಂದುವರಿಯಿರಿ. ವ್ಯಾಪಾರದಲ್ಲಿ ಪ್ರಗತಿ ಸಾಧ್ಯ. ವಿದ್ಯಾರ್ಥಿಗಳಿಗೆ ಶುಭ ಫಲಿತಾಂಶ ಸಿಗಬಹುದು. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಪ್ರೇಮ ಜೀವನದಲ್ಲಿ ಉತ್ತಮ ಸಂವಹನ ಮೂಡಲಿದೆ.

ಮಕರ ರಾಶಿ

ಕೆಲಸದಲ್ಲಿ ನಿಧಾನಗತಿಯ ಅನುಭವವಾಗಬಹುದು, ಆದರೆ ಪರಿಶ್ರಮ ವ್ಯರ್ಥವಾಗುವುದಿಲ್ಲ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಹೊಸ ಹೂಡಿಕೆ ಮಾಡುವ ಮೊದಲು ಪರಿಶೀಲಿಸಿ. ಕುಟುಂಬದವರ ಸಲಹೆ ಉಪಯುಕ್ತವಾಗಲಿದೆ. ಪ್ರೇಮ ವಿಚಾರದಲ್ಲಿ ತಾಳ್ಮೆ ಮುಖ್ಯ. ಆರೋಗ್ಯಕ್ಕೆ ವಿಶ್ರಾಂತಿ ನೀಡಿ.

ಕುಂಭ ರಾಶಿ

ಇಂದು ಸೃಜನಶೀಲತೆ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಹೊಸ ಆಲೋಚನೆಗಳನ್ನು ಮೆಚ್ಚುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಸಂಪರ್ಕಗಳು ಲಾಭ ತರಬಹುದು. ಹಣಕಾಸಿನಲ್ಲಿ ಉತ್ತಮ ಬೆಳವಣಿಗೆ ಕಂಡುಬರಬಹುದು. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಸಂಗಾತಿಯೊಂದಿಗೆ ಸಂತಸದ ಸಮಯ ಕಳೆಯುವಿರಿ.

ಮೀನ ರಾಶಿ

ಇಂದು ಮನಸ್ಸಿನಲ್ಲಿ ಗೊಂದಲವಿದ್ದರೂ ದಿನ ಮುಂದುವರಿದಂತೆ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಹಣದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಕುಟುಂಬದಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ಪ್ರೇಮ ಜೀವನದಲ್ಲಿ ಹಳೆಯ ಸಮಸ್ಯೆ ಪರಿಹಾರವಾಗಬಹುದು. ಆರೋಗ್ಯದ ಕಡೆ ಗಮನ ಅಗತ್ಯ.

ಒಟ್ಟಾರೆಯಾಗಿ ಇಂದು ಕೆಲವು ರಾಶಿಗಳಿಗೆ ವೃತ್ತಿ ಮತ್ತು ಹಣಕಾಸಿನಲ್ಲಿ ಪ್ರಗತಿಯ ಸೂಚನೆಗಳಿದ್ದರೆ, ಇನ್ನೂ ಕೆಲವು ರಾಶಿಗಳಿಗೆ ತಾಳ್ಮೆ ಮತ್ತು ಎಚ್ಚರಿಕೆ ಮುಖ್ಯವಾಗಲಿದೆ. ಜ್ಯೋತಿಷ್ಯ ಫಲಗಳು ಸಾಮಾನ್ಯ ನಂಬಿಕೆಗಳ ಆಧಾರಿತವಾಗಿದ್ದು, ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು.

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending