Connect with us

ದಿನದ ಸುದ್ದಿ

ಕೈ ಕಮಲ ದಳ ಮಧ್ಯೆ ಟೈಟ್​ ಫೈಟ್ : ಮೇ 13ಕ್ಕೆ ರಣಕಹಳೆ..!

Published

on

 

 

  • ಹುಲಿಗೆಪ್ಪ
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿ,
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
    ಬೆಂಗಳೂರು ವಿಶ್ವವಿದ್ಯಾಲಯ

ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೇರಾನೇರ ತುರುಸಿನ ಹಣಾಹಣಿ ನಡೆಯಲಿದೆ. ಇನ್ನು ಜಾತ್ಯತೀತ ಜನತಾದಳ ಬೆಂಬಲವೇ ಇಲ್ಲದೇ ಯಾವ ಪಕ್ಷವೂ ಅಧಿಕಾರದ ಗದ್ದು ಹಿಡಿಯೋದು ಅಸಾಧ್ಯವೆಂಬ ಸುಳಿವು ನೀಡುತ್ತಿದೆ. ಹಾಗೆಯೇ ನೋಡಿದರೆ, ರಾಜ್ಯದ ಮಟ್ಟಿಗೆ ದಳವನ್ನು ಬಗ್ಗಿಸೋಕೆ ಮೋದಿ, ಶಾ ಕೈಯಿಂದಲೂ ಸಾಧ್ಯವೇ ಇಲ್ಲ ಎಂಬ ಲಕ್ಷ್ಮಣ ರೇಖೆಯನ್ನೇ ಎಳೆದಿದೆ.

ಇತ್ತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆರವರು ಕರ್ನಾಟಕ ಕಾಂಗ್ರೆಸ್ ಕಲಿಗಳೆಲ್ಲಾ ಒಟ್ಟಾಗಿ ಸೇರಿ 2023ಗೆ ಕಾಂಗ್ರೆಸ್ ಗೆಲ್ಲಿಸೋಕೆ ರಣತಂತ್ರಗಳನ್ನ ಹೆಣೆದಿದ್ದಾರೆ. 2013-18ರಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ಸ್ಥಿರ ಸರ್ಕಾರ ಮತ್ತು ಸ್ವಚ್ಛಂದ ಆಡಳಿತ ನೀಡಿದೆ.

ಕನ್ನಡಿಗರಿಗೆ ಬಿಜೆಪಿ ತಂದಿರುವ ಸಂಕಷ್ಟವನ್ನು ಹೋಗಲಾಡಿಸಲು ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ. ನಮ್ಮ ಸಹೃದಯ ಕನ್ನಡಿಗರೊಂದಿಗೆ ಸೇರಿ ಕನಸಿನ ಕರುನಾಡನ್ನು ಕಟ್ಟಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿ ನಾವು ಜನರ ಆಶೋತ್ತರಗಳನ್ನು ಸಂಗ್ರಹಿಸುತ್ತಿದ್ದೇವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಸ್ಪಷ್ಟಪಡಿದ್ದಾರೆ.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಬಿಜೆಪಿ ಅವರಿಗೆ ಎಲ್ಲೋಂದು ಕಡೆ ಭಯ ಉಂಟಾಗಿದೆ. ಸಿದ್ದರಾಮಯ್ಯರವರು ವರುಣಾ ಕೇತ್ರದಲ್ಲಿ ಸ್ಪರ್ಧೆ ಮಾಡಿರುವ ಕಡುತ್ತಿದೆ. ಇಂತಹುದೇ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಿದ್ದರೆ ವಿಜಯೇಂದ್ರ ಶಿಕಾರಿಪುರದಲ್ಲಿ ಮಾತ್ರ ಸ್ಪರ್ಧೆ ಮಾಡಬಹುದು ಎಂಬ ಅನುಮಾನ ಇತ್ತು ಆದರೆ ಸಿದ್ದು ವರುಣಾದಲ್ಲಿ ಮಾತ್ರ ಸ್ಪರ್ಧೆ ರೆಡಿಯಾಗಿದ್ದು, ಇದೇ ಕ್ಷೇತ್ರದಿಂದ ಕ್ಲಿಯರ್ ಸಿಗುವುದು ಬಹುತೇಕ ಪಕ್ಕವಾಗಿದೆ.

ಈ ಮೊದಲು ಸಿದ್ದು ಬಗ್ಗೆ ಬರೀ ಚರ್ಚೆ ಗ್ರಾಸವಾಗಿತ್ತು. ಹಾಗಾಗಿ ಶಿಕಾರಿಪುರದ ಜತೆ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆಗಿಳಿಸುವ ಪ್ಲಾನ್ ಬದಲಾಗಿದೆ. ಅಂದಹಾಗೆ ಸಿದ್ದರಾಮಯ್ಯ ಕಟ್ಟಿ ಹಾಕಲು ವಿಜಯೇಂದ್ರ ಸ್ಪರ್ಧೆಗಿಳಿಸಲು ಬಿಜೆಪಿ ಹೈಕಮಾಂಡ್ ಪ್ಲಾನ್ ಆಗಿತ್ತು. ಕೊಚ್ಚ ಬದಲಾವಣೆಯಲ್ಲಿ ವರುಣಾದಲ್ಲಿ ವಿಜಯೇಂದ್ರ ಹವಾ ಇರುವ ಕಾರಣ ಅಲ್ಲಿ ಸಿದ್ದುಗೆ ಟಕ್ಕರ್ ಕೊಡುವ ತಂತ್ರ ಇತ್ತು.

ಆದರೆ ಯತೀಂದ್ರನ ಬಿಟ್ಟು ವರುಣಾ ದಲ್ಲಿ ತಮ್ಮ ತಂದೆಗೆ ಟಿಕೆಟ್ ಫೈನಲ್ ಮಾಡಿದೆ. ವಿಜಯೇಂದ್ರ ಸ್ಪರ್ಧೆ ಬಗ್ಗೆ ಬಿಜೆಪಿ ಹೈಕಮಾಂಡ್ ನಿರ್ಧಾರ ತಳಿಹಾಕಿದೆ.

ಸಿದ್ದರಾಮಯ್ಯ ಕೋಲಾರ ಸ್ಪರ್ಧೆಗೆ ಐದು ವರ್ಷ ಹಿಂದಿನ ಶಪಥ ಕಾರಣ ಎನ್ನಲಾಗುತ್ತಿದೆ. ಸಿದ್ದು ಟೀಮ್ ಚಾಣಕ್ಯ ಇದೀಗ ಸಿದ್ದರಾಮಯ್ಯರನ್ನ ಕೋಲಾರಕ್ಕೆ ಕರೆತರುವುದು ಅನ್ನೋ ಚರ್ಚೆಯಾಗಿದ್ದು ನಗ್ನ ಸತ್ಯ.

ಹುಲಿಗೆಪ್ಪ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಕರ್ನಾಟಕಕ್ಕೆ ಭೇಟಿ ನೀಡಿ ಅಲೆ ಎಬ್ಬಿಸಲು ಶುರು ಮಾಡಿದ್ದು. ಬಿಜೆಪಿ 140 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದೆ.

ಇಲ್ಲಿ ಯಡಿಯೂರಪ್ಪರವರನ್ನು ಮತ್ತೆ ಸಕ್ರಿಯ ರಾಜಕಾರಣಕ್ಕೆ ಕರೆತಂದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ಸಕ್ರಿಯ ಪ್ರಚಾರದಲ್ಲಿ ತೊಡಗಿಸಬೇಕೆಂದು ಹಲವು ಶಾಸಕರು ಕೇಂದ್ರ ನಾಯಕರಿಗೆ ಸಲಹೆ ನೀಡಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕವು ಯಡಿಯೂರಪ್ಪ ಇಲ್ಲದೆ ಎಂದಿಗೂ ಅಧಿಕಾರಕ್ಕೆ ಬಂದಿಲ್ಲ. ಪಕ್ಷ ಮತ್ತು ಸರ್ಕಾರದೊಳಗೆ ಕಾರ್ಯತಂತ್ರದ ಬದಲಾವಣೆಗಳ ಅಲ್ಲದೆ, ಪವಾಡವನ್ನು ನಿರೀಕ್ಷಿಸುವುದು ಕಷ್ಟವಾಗಿದೆ.

ಯಡಿಯೂರಪ್ಪ ವಿರುದ್ಧ ವಿರೋಧಿ ಗುಂಪೊಂದನ್ನು ಹಿಡಿತ ಸಾದಿಸಿತ್ತು, ಹೀಗಾಗಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು, ಹಿಂದುತ್ವ ಕಾರ್ಡ್ ಪ್ರಯೋಗ ನಿರೀಕ್ಷಿತ ಫಲಿತಾಂಶ ದೊರಕದು ಎಂಬುದನ್ನು ಅರ್ಥಮಾಡಿ ಕೊಂಡಿರುವ ಬಿಜೆಪಿ ಹೈಕಮಾಂಡ್, ಸೂಕ್ತವಾಗಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸುತ್ತಿದೆ. ಯಡಿಯೂರಪ್ಪ ಅವರ ಪುನರಾಗಮನದ ಕಾಂಗ್ರೆಸ್ ಗೆ ಒಳ್ಳೆಯ ಸುದ್ದಿಯಾಗುವುದಿಲ್ಲ.

ಏಕೆಂದರೆ ಯಡಿಯೂರಪ್ಪರವರ ನಿರಾಶೆಯನ್ನು ಕಾಂಗ್ರೆಸ್ ಲಾಭ ಮಾಡಿಕೊಳ್ಳಲು ಮುಂದಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಗೆಲ್ಲಬಹುದು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ. ವಿರೋಧ ಪಕ್ಷಗಳನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದರು. ಚುನಾವಣೆಯಲ್ಲಿ 140 ಸ್ಥಾನ ಪಡೆದು ಯಾರ ಬೆಂಬಲ ಇಲ್ಲದೇ ಸರ್ಕಾರ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಯಡಿಯೂರಪ್ಪ, ಗುರಿ ತಲುಪುವ ನಿಟ್ಟಿನಲ್ಲಿ ಎಲ್ಲರೂ ಕೂಡ ರಾಜ್ಯದಲ್ಲಿ ಪ್ರವಾಸ ಮಾಡಲು ಆರಂಭಿಸಿದ್ದೇವೆ.

ನಂತರ ಮತ್ತೆ ಎಲ್ಲಾ ಕಡೆ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸುತ್ತೇವೆ. ಹಗಲು ಕನಸು ಕಾಣುತ್ತಿರುವ ಬಗ್ಗೆ ನಾವೇನು ಚರ್ಚೆ ಮಾಡಲ್ಲ. ಎಂದು ಮಾಜಿ ಸಿಎಂ ಯಡಿಯೂರಪ್ಪ ವ್ಯಕ್ತಡಿಸಿದರು. ಬಿ.ಎಸ್ ಯಡಿಯೂರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅಲ್ಲಿಂದ ಸ್ಪರ್ಧಿಸೋದೇ ಇಲ್ಲ ಅನ್ನೋ ಮೂಲಕ ಭವಿಷ್ಯ ನುಡಿದಿದ್ದಾರೆ. ಅಷ್ಟಕ್ಕೂ ಯಡಿಯೂರಪ್ಪ ನುಡಿದ ಸಿದ್ದರಾಮಯ್ಯ ಭವಿಷ್ಯ ಏನು ಅನ್ನೋದು ರಣರೋಚಕ ಸಂಗತಿಯಾಗಿದೆ.

2023ಕ್ಕೆ ಜೆಡಿಎಸ್ ಪಕ್ಷ ಈಗ ನಿರ್ಣಾಯಕ ಘಟ್ಟದಲ್ಲಿ ಇದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಾಲಿಗೆ ಅತ್ಯಂತ ಮಹತ್ವದ್ದು. ಜೆಡಿಎಸ್ ಪಕ್ಷ ಬಹುಮತ ಸಾಧಿಸಿ ಸರ್ಕಾರ ರಚಿಸಬೇಕು, ಇಲ್ಲವೇ ಕಿಂಗ್ ಮೇಕರ್ ಆಗಬೇಕು. ಎರಡೂ ಆಗದಿದ್ದರೆ ಜೆಡಿಎಸ್ ಭವಿಷ್ಯ ಏನಾಗಬಹುದು? ರಾಜ್ಯದಲ್ಲಿ ಈ ಬರೀ ಕೂಡ ಕಳೆದ ಬಾರಿಯಂತೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಬಹುದಾ? ಒಂದು ವೇಳೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಡ್ರೈವಿಂಗ್ ಸೀಟ್‌ನಲ್ಲಿ ಬಂದು ಕೂರೋದೇ ಕುಮಾರಣ್ಣನ ರಾಜ್ಯದಲ್ಲಿ ಮತ್ತೊಮ್ಮೆ ಜಾತ್ಯತೀತ ಜನತಾ ದಳ ಪಕ್ಷ 40ಕ್ಕಿಂತ ಹೆಚ್ಚಿನ ಸ್ಥಾನ ಗಳಿಸುವ ವಾತಾವರಣ ನಿರ್ಮಾಣವಾಗಲಿದೆ.

ಬಿಜೆಪಿಯ ಒಳಗಿನ ಆ ಮೂವರು ನಾಯಕರ ಪ್ರತ್ಯಕ್ಷ ಪರೋಕ್ಷ ಬಂಡಾಯಗಳೇ ಜೆಡಿಎಸ್ ಪಕ್ಷವನ್ನು ಗೆಲ್ಲಿಸಲಿದೆಯೇ? ಮತ್ತೊಮ್ಮೆ ಎಚ್​ಡಿಕೆಗೆ ಪಟ್ಟ ಗಟ್ಟಿ ಮಾಡಿ ಕೊಡಲಿದೆಯೇ? ಅನ್ನು ಚರ್ಚೆ ಶುರುವಾಗಿದೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಸಾಕಷ್ಟು ಬಾರಿ ಅವಕಾಶ ಕೊಟ್ಟಿದ್ದಿರಿ, ನಮಗೂ ಒಮ್ಮೆ ಪೂರ್ಣ ಪ್ರಮಾಣದ ಸರ್ಕಾರ ರಚಿಸಲು ಅವಕಾಶ ಕೊಟ್ಟು ನೋಡಿ ಅನ್ನೋದು ಜೆಡಿಎಸ್ ಮನವಿ. ಇದಕ್ಕಾಗಿ ಪಂಚರತ್ನ ರಥಯಾತ್ರೆ, ಜನತಾ ಜಲಧಾರೆ ಸೇರಿದಂತೆ ಹಲವು ಅಭಿಯಾನಗಳನ್ನು ಯಾತ್ರೆಗಳನ್ನು ನಡೆಸಿದೆ. ಅದರಲ್ಲೂ ರಾಮನಗರದಲ್ಲಿ ಈ ಬಾರಿ ಅನಿತಾ ಕುಮಾರಸ್ವಾಮಿ ಬದಲಿಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.

ಗಾಲಿ ಜನಾರ್ಧನ ರೆಡ್ಡಿರವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ನಾಡಿನ ಇಬ್ಬರು ಪ್ರಭಾವಿ ಮಾಜಿ ಸಿಎಂಗಳ ಬೆಂಬಲ ಇದ್ದು ಇದರ ಬಗ್ಗೆ ಈ ಇಬ್ಬರು ಮಾಜಿ ಸಿಎಂಗಳ ಜತೆಯಲ್ಲಿ ಗಾಲಿ ಗೇಮ್ ನಡೀತಿದೆ ಅನ್ನೋ ಚರ್ಚೆ ಜೋರಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಎಚ್ಚರಿಕೆಯ ಹೆಜ್ಜೆ ಇಡದೇ ಹೋದರೆ 2023ರ ಚುನಾವಣಾ ರಿಸಲ್ಟ್ ಬಳಿಕ ಬಹುದೊಡ್ಡ ಕ್ಷಿಪ್ರಕ್ರಾಂತಿ ನಡೆಯಲಿದೆ ಅನ್ನೋ ಮುನ್ನುಡಿಯನ್ನು ಖುದ್ದು ಗಾಲಿ ರೆಡ್ಡಿ ನೀಡುತ್ತಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಪಕ್ಷ ಸೇರುವ ಪ್ರಮುಖರಿಗೆ ಬಂಪರ್ ಆಫರ್ ನೀಡುತ್ತಿದ್ದಾರೆ.

ಗಂಗಾವತಿಯನ್ನೇ ರಾಜಧಾನಿಯನ್ನಾಗಿಸುವ ಮಟ್ಟಿಗೆ ಸರ್ಕಾರ ಯಾರದ್ದೇ ಇರಲಿ ಇಲ್ಲಿಂದಲ್ಲೇ ಸರ್ಕಾರ ನಡೆಯುವಂತೆ ನೋಡಿಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಬಹುಮುಖ್ಯವಾಗಿ ಪಕ್ಷ ಸೇರುವ ಯಾವುದೇ ವ್ಯಕ್ತಿ ಗೆದ್ದರೇ ಮಿನಿಸ್ಟರ್ ಆಗಿಯೇ ಆಗುತ್ತಾರೆ ಅನ್ನು ಸುಳಿವು ನೀಡುತ್ತಿದ್ದಾರೆ. ಗಾಲಿ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸಚಿವ ಬಿ.ಶ್ರೀರಾಮುಲು ಸಹ ಸೇರಿಕೊಳ್ಳುತ್ತಾರೆ ಎಂಬ ಊಹಾಪೋಹಗಳ ಇತ್ತು ಇದರ ನಡುವೆ ಬಿ.ಶ್ರೀರಾಮುಲುರವರು ಜನಾರ್ದನ ರೆಡ್ಡಿಯವರ ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿ ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ ಪ್ರಸಂಗ ಈಗಾಗಲೇ ನಡೆದಿದೆ. ಈ ಸಂಗತಿ ಇದೀಗ ಬಿಜೆಪಿ ಪಕ್ಷಕ್ಕೂ ಎಚ್ಚರಿಕೆಯ ಸಂದೇಶವನ್ನು ಮಿತ್ರರಿಬ್ಬರೂ ರವಾನಿಸಿದ್ದಾರಾ ಎಂಬ ಚರ್ಚೆ ಹುಟ್ಟುಹಾಕಿದೆ.

ಜನಾರ್ದನ ರೆಡ್ಡಿ ಅವರ ಕನಸು ಕಲ್ಯಾಣ ರಾಜ್ಯ ಆಗಬೇಕು. ಬಳ್ಳಾರಿ ರಾಜ್ಯಮಟ್ಟದಲ್ಲಿಯೇ ಅಭಿವೃದ್ಧಿಯಾಗಬೇಕು. ರೆಡ್ಡಿಗೆ ಜಿಲ್ಲೆಯಲ್ಲಿ ಪ್ರವೇಶ ನಿರ್ಬಂಧವಿದೆ. ಅದಕ್ಕಾಗಿ ಅವರ ಬದಲಿಗೆ ನಾನು ಬಳ್ಳಾರಿಯಿಂದ ಪ್ರಚಾರ ಆರಂಭಿಸುತ್ತಿರುವೆ. ಜನಾರ್ದನ ರೆಡ್ಡಿಯವರು ಎನೇ ಕೆಲಸ ಮಾಡಿದ್ದರೂ ಕುರುಬ ಸಮಾಜದ ಮನೆಯವರಿಂದ ಆರಂಭ ಮಾಡಿದ್ದಾರೆ.

ಹಾಗಾಗಿ ಅವರು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಸ್ಥಾಪಿಸಿ ಕೊಪ್ಪಳ ಕ್ಷೇತ್ರದಲ್ಲಿ ರಾಜಕೀಯವಾಗಿ ತೊಡಗಿಕೊಂಡಿದ್ದಾರೆ. ಇತ್ತ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ತನ್ನ ಪತ್ನಿ ಅರುಣಾ ಲಕ್ಷ್ಮೀ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ.

ಚುನಾವಣೆಯ ಹೊತ್ತಲ್ಲೇ ಬಿಜೆಪಿ-ಕಾಂಗ್ರೆಸ್ ಜೆಡಿಎಸ್ ನಾಯಕರುಗಳ ಭಾರೀ ವಾಕ್ಸಮರ ನಡೆಯುತ್ತಿದೆ. ರಾಜಕೀಯ ವಿಚಾರ ಬಂದಾಗ ಒಂದು ಪಕ್ಷದ ನಾಯಕರು ಇನ್ನೊಂದು ಪಕ್ಷದ ನಾಯಕರನ್ನು ಬೈಯುವುದು, ದೂಷಿಸುವುದು, ಆರೋಪಿಸುವುದು ಸಾಮಾನ್ಯ. ಕೆಲವೊಮ್ಮೆ ಅದು ಮಿತಿ ಮೀರುತ್ತದೆ. ಇದು ಕೂಡ ರಾಜಕೀಯ ಬದಿಗಿಟ್ಟು ಹಲವು ಬಾರಿ ರಾಜಕೀಯ ನಾಯಕರು ಒಟ್ಟಿಗೆ ಇರುವುದು ಮಾತನಾಡುವುದು, ಬಾಂಧವ್ಯ ಹೊಂದಿರುವುದನ್ನು ನೋಡುತ್ತೇವೆ. ರಾಜಕೀಯ ವಿಚಾರ ಬಂದಾಗ ಕಾಂಗ್ರೆಸ್-ಬಿಜೆಪಿ ಬದ್ಧ ವೈರಿಗಳು. ಈ ಪಕ್ಷಗಳ ನಾಯಕರು ಒಬ್ಬರಿಗೊಬ್ಬರು ವೇದಿಕೆಗಳಲ್ಲಿ, ಸಾರ್ವಜನಿಕ ಭಾಷಣಗಳಲ್ಲಿ, ಮಾಧ್ಯಮಗಳ ಮುಂದೆ ಸಾಕಷ್ಟು ಟೀಕೆ ಮಾಡುತ್ತಾ, ಒಬ್ಬರಿಗೊಬ್ಬರು ಬೈಯುತ್ತಿರುವುದು ಪ್ರಚಲಿತದಲ್ಲಿರುವ ವಿಷಯವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ

Published

on

ಸುದ್ದಿದಿನಡೆಸ್ಕ್:ಗ್ರಾಮೀಣ ಪ್ರದೇಶದಲ್ಲಿ 500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ಹಾಗೂ ನಗರ ಪ್ರದೇಶಗಳಲ್ಲಿ 800 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮುಂದಿನ ಮೂರು ತಿಂಗಳಲ್ಲಿ 10 ಸಾವಿರ ನಿವೇಶನ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 2 ಸಾವಿರದ 500 ಮನೆಗಳು ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕೂಡ ಅರ್ಹ ಫಲಾನುಭವಿಗಳಿಗೆ ಹಂಚಲಾಗುತ್ತದೆ ಎಂದು ಮಾಹಿತಿ ನೀಡಿದರು.

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ಸರಿಪಡಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಗಿತ್ತೆ ಮಾಧವ್ ವಿಠ್ಠಲ್ ರಾವ್ ರವರಿಗೆ ಕರವೇ(ಪ್ರವೀಣ ಶಟ್ಟಿ ಬಣ) ಮನವಿ ಸಲ್ಲಿಸಿತು.

ಜಲ್ಲಾಧ್ಯಕ್ಷ ಜಮ್ನಳ್ಳಿ ನಾಗರಾಜ್ ಮಾತನಾಡಿ, ದಾವಣಗೆರೆ ಜಿಲ್ಲೆಯ ಮೊರಾರ್ಜಿ ವಸತಿ ಶಾಲೆಗಳಲ್ಲಿ ಬಡ ಕುಟುಂಬಗಳ ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸದರಿ ಮಕ್ಕಳಿಗೆ ವಸತಿ ಶಾಲೆಯಲ್ಲಿ ಸರಿಯಾದ ಮೂಲಭೂತ ಸೌಲಭ್ಯ ಕಲ್ಪಿಸದೇ ಇರುವುದರಿಂದ ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.

ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರು ಇರುವುದಿಲ್ಲ. ಅಲ್ಲದೇ ಮಕ್ಕಳಿಗೆ ಸರಿಯಾಗಿ ಊಟದ ವ್ಯವಸ್ಥೆ ಸಮರ್ಪಕವಾಗಿರುವುದಿಲ್ಲ, ಶೌಚಾಲಯ ಸೌಕರ್ಯಗಳಿರುವುದಿಲ್ಲ, ಮಕ್ಕಳ ಮೇಲ್ವಿಚಾರಣೆಗೆ ವಾರ್ಡನ್‌ಗಳು ರಾತ್ರಿ ಸಮಯದಲ್ಲಿ ಸ್ಥಳದಲ್ಲಿರುವುದಿಲ್ಲ, ಅಲ್ಲದೇ ವಿದ್ಯುತ್ ತೊಂದರೆಯಾದರೆ ಮಕ್ಕಳಿಗೆ ಯು.ಪಿ.ಎಸ್. ಸೌಲಭ್ಯವಿಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಮನವಿ ಸ್ವೀಕರಿಸಿದ ಸಿ.ಇ.ಒ ಮಾತನಾಡಿ, ಸಧ್ಯದಲ್ಲೇ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಈ ವಿಷಯದ ಬಗ್ಗೆ ಚರ್ಚೆ ನಡಿಸಿ ಸೂಕ್ತ ತೀರ್ಮಾನ ಕೈಗೂಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಜಮ್ನಳ್ಳಿ ನಾಗರಾಜ್, ಜಿಲ್ಲಾ ಕಾರ್ಯಧ್ಯಕ್ಷ ಸೈಯದ್ ನಜೀರ್, ನಾಗರಾಜ್ ಆದಾಪುರ್, ಸಂಘಟನಾ ಕಾರ್ಯದರ್ಶಿ ಸಂತೋಷ್ ಕುಮಾರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ಎಂ, ನಗರ ಘಟಕ ಅಧ್ಯಕ್ಷ ಅನೂಪ್ ಇಜಾರಿ, ಮಹಿಳಾ ಗೌರವಾಧ್ಯಕ್ಷೆ ವನಜ ಕರಿಯಪ್ಪ, ಉತ್ತರ ವಲಯದ ಯುವ ಘಟಕದ ಅಧ್ಯಕ್ಷ ಶಿವಕುಮಾರ ಬಿ ಬಿ, ನಾಗರಾಜ ಆಥಪುರ್, ಶಬ್ರಿನ್ ತಾಜ್, ಬಸವರಾಜ ಎಸ್, ಬಸವರಾಜ್ ಪಿ, ಮಂಜುಳಾ ಆರ್, ನಾಗರಾಜ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ದತ್ತಾಂಶ ನಿರ್ವಾಹಕ ಗ್ರೇಡ್ ‘ಎ’ ಪರೀಕ್ಷೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವೆಬೆಸೈಟ್ https://ssc.nic.in ಅಥವಾ https://ssckkr.kar.nic.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 18 ಕೊನೆಯದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ – 080-2527342, 25502520 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಲು ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending